Subscribe to Updates
Get the latest creative news from FooBar about art, design and business.
Author: kannadanewsnow09
ಹಾವೇರಿ: ನಮ್ಮ ದೇಶದಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗಲು ಈ ದೇಶದ ಕಾನೂನು ಕಾರಣವಾಗಿದೆ. ದೇಶದಲ್ಲಿ ಕಾನೂನು ಸುವಸ್ಥೆ ಸರಿಯಾಗಿದ್ದರೆ ಬಂಡವಾಳ ಹೂಡಿಕೆ ಹೆಚ್ಚಳವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾವೇರಿ ಜಿಲ್ಲಾ ವಕೀಲರ ಸಂಘದ ಸಭೆಯಲ್ಲಿ ಭಾಗಿ ಮಾತನಾಡಿದ ಅವರು, ವಕೀಲವವೃತ್ತಿ ಬಹಳ ವಿಶಿಷ್ಟ ವೃತ್ತಿ, ನ್ಯಾಯದಾನ ಶ್ರೇಷ್ಠ ವಾಗಿರುವ ದಾನ. ಪ್ರಜಾಪ್ರಭುತ್ವ ದಲ್ಲಿ ಮುಕ್ತವಾದ ಅವಕಾಶ ಸ್ವಾತಂತ್ರ್ಯ ಎಷ್ಟಿದೆಯೋ ಅಷ್ಡೇ ಕರ್ತವ್ಯಗಳೂ ಇವೆ. ನಮ್ಮ ಹಕ್ಕುಗಳಿಗೆ ಎಷ್ಟು ಗೌರವಿಸುತ್ತೇವೊ, ಕರ್ತವ್ಯಗಳೂ ಅಷ್ಟೇ ಗೌರವಿಸಬೇಕು ಎಂದರು. ನಾನು ವಕೀಲರ ಕುಟುಂಬದಿಂದ ಬಂದವನು. ನಮ್ಮ ಅಜ್ಜ ಹಾಗೂ ತಂದೆ ವಕೀಲರಾಗಿದ್ದರು. ನಾನು ಹತ್ತಿರದಿಂದ ವಕೀಲರ ವೃತ್ತಿಯನ್ನು ನೋಡಿದ್ದೇನೆ. ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ ಫಾಲಿ ನಾರಿಮನ್, ಸೋಲಿಸೊರಾಬ್ಜಿ ಅವರಂತಹ ಹಿರಿಯ ವಕೀಲರ ಸಂಪರ್ಕ ಪಡೆಯಲು ಅನುಕೂಲವಾಯಿತು ಎಂದರು. ದೇಶದ ಸಂವಿಧಾನ ರಚನೆಯಲ್ಲಿ ನ್ಯಾಯವಾದಿಗಳ ಪಾಲು ದೊಡ್ಡದಿದೆ. ಅಂಬೇಡ್ಕರ್ ಅವರೇ ಸ್ವತ…
ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವಂತ ವಿಲ್ಸನ್ ಗಾರ್ಡನ್ ವಿದ್ಯುತ್ ಚಿತಾಗಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಕ್ಷಿಣ ವಲಯ ವ್ಯಾಪ್ತಿಯ ವಿಲ್ಸನ್ ಗಾರ್ಡನ್ ವಿದ್ಯುತ್ ಚಿತಾಗಾರದ ಎರಡು ಪರ್ನೆಸ್ ಗಳ ಕಾಯಿಲ್ ಗಳು ಹಾಗೂ ಬ್ರಿಕ್ಸ್ ಗಳು ಹಾಳಾಗಿರುವುದರಿಂದ ತುರ್ತು ನಿರ್ವಹಣೆ ಕೆಲಸದ ಪ್ರಯುಕ್ತ ಸದರಿ ಚಿತಾಗಾರವನ್ನು ದಿನಾಂಕ: 18-04-2024 ರಿಂದ 27-04-2024 ರವರೆಗೆ 9 ದಿನಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳುತ್ತಿದ್ದು, ಈ ಸಂಬಂಧ ಸಾರ್ವಜನಿಕರು ಸಹಕರಿಸಬೇಕೆಂದು ದಕ್ಷಿಣ ವಲಯ ವಿದ್ಯುತ್ ವಿಭಾಗದ ಕಾರ್ಯಪಾಲಕ ಅಭಿಯಂತರರು ಸಾರ್ವಜನಿಕ ಪ್ರಕಟಣೆ ಮೂಲಕ ಕೋರಿರುತ್ತಾರೆ. https://kannadanewsnow.com/kannada/kichcha-sudeep-condoles-the-death-of-actor-dwarakish/ https://kannadanewsnow.com/kannada/aamir-khan-files-complaint-against-fake-political-advertisement-fir-filed/
ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ಸ್ಥಾಪನೆ ಮಾಡಿ, ಅಲ್ಲಿ ರಾಮಲಲ್ಲಾ ಮೂರ್ತಿಯನ್ನು ಸ್ಥಾಪನೆ ಮಾಡಲಾಗಿತ್ತು. ಈಗ ಇದೇ ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿಯ ಜೊತೆಗೆ ಮೊದಲ ರಾಮ ನವಮಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಆಚರಣೆ ಮಾಡಲಿದ್ದಾರೆ. ಅಯೋಧ್ಯೆಯ ಭವ್ಯ ದೇವಾಲಯದಲ್ಲಿ ರಾಮ್ ಲಲ್ಲಾ ಸಿಂಹಾಸನಾರೋಹಣ ಮಾಡಿದ ಮೊದಲ ರಾಮ ನವಮಿ ಇದಾಗಿದೆ. ಟಿಎಂಸಿ ಎಂದಿನಂತೆ ಇಲ್ಲಿ ರಾಮನವಮಿ ಆಚರಣೆಯನ್ನು ತಡೆಯಲು ತನ್ನ ಅತ್ಯುತ್ತಮ ಪ್ರಯತ್ನ ಮಾಡಿದೆ ಮತ್ತು ಹಲವಾರು ಪಿತೂರಿಗಳನ್ನು ನಡೆಸಿದೆ ಎಂದು ನನಗೆ ತಿಳಿದಿದೆ. ಆದರೆ ಸತ್ಯ ಮಾತ್ರ ಗೆಲ್ಲುತ್ತದೆ. ಆದ್ದರಿಂದ, ನ್ಯಾಯಾಲಯವು ಅನುಮತಿ ನೀಡಿದೆ ಮತ್ತು ನಾಳೆ ರಾಮನವಮಿ ಮೆರವಣಿಗೆಗಳನ್ನು ಪೂರ್ಣ ಗೌರವ ಮತ್ತು ಭಕ್ತಿಯಿಂದ ನಡೆಸಲಾಗುವುದು. ಈ ಸಂದರ್ಭದಲ್ಲಿ ನಾನು ಬಂಗಾಳದ ನನ್ನ ಎಲ್ಲಾ ಸಹೋದರ ಸಹೋದರಿಯರನ್ನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. https://kannadanewsnow.com/kannada/kichcha-sudeep-condoles-the-death-of-actor-dwarakish/ https://kannadanewsnow.com/kannada/aamir-khan-files-complaint-against-fake-political-advertisement-fir-filed/
ಹಾವೇರಿ: ರಾಜಕಾರಣದಲ್ಲಿ ರೌಡಿಸಂ ಮಾಡುವುದನ್ನು ಕನ್ನಡಿಗರು ಸಹಿಸುವುದಿಲ್ಲ. ಮಾಜಿ ಪ್ರಧಾನಿ ದೇವೇಗೌಡರಿಗೆ ಸಲಹೆ ಕೊಡುವಷ್ಟು ಸಿಎಂ ಸಿದ್ದರಾಮಯ್ಯ ದೊಡ್ಡವರಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ. ಬೊಮ್ಮಾಯಿ ಹೇಳಿದ್ದಾರೆ. ಇಂದು ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತುಮಕೂರಿನಲ್ಲಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಮಾಜಿ ಪ್ರಧಾನಿ ದೇವೇಗೌಡರು ನಡೆಸುತ್ತಿರುವ ಸಭೆಗೆ ನುಗ್ಗಿ ದಾಂಧಲೆ ನಡೆಸಿರುವುದು ಖಂಡನೀಯ. ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ವ್ಯಕ್ತ ಮಾಡಲು ನಮಗೆ ಅವಕಾಶ ಇದೆ. ಅದನ್ನು ಬಿಟ್ಟು ಮಾಜಿ ಪ್ರಧಾನಿ ಕನ್ನಡಿಗರ ಹೆಮ್ಮೆಯ ದೇವೇಗೌಡರ ಸಭೆಯಲ್ಲಿ ಆ ರೀತಿ ದಾಂಧಲೆ ಮಾಡುವುದು ನಮ್ಮ ಸಂಸ್ಕೃತಿ ಅಲ್ಲ. ಜನರು ಎಲ್ಲವನ್ನೂ ನೋಡುತ್ತಾರೆ. ವಿಶೇಷವಾಗಿ ದೇವೇಗೌಡರು ಕನ್ನಡದ ಸಲುವಾಗಿ ಕನ್ನಡಿಗರಿಗಾಗಿ ಪಕ್ಷ ಬೇಧ ಮರೆತು ಹೋರಾಟ ಮಾಡಿದ್ದಾರೆ ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ. ಕಾಂಗ್ರೆಸ್ ನ ಅನೇಕ ನಾಯಕರು ಮಹಿಳೆಯರ ಬಗ್ಗೆ ಸಾಕಷ್ಟು ಅವಮಾನಕಾರಕ ಹೇಳಿಕೆಗಳನ್ನು…
ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) 2023 ರ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶಗಳನ್ನು ಏಪ್ರಿಲ್ 16 ರಂದು ಬಿಡುಗಡೆ ಮಾಡಿದೆ. ಆಯೋಗದ ಅಧಿಕೃತ ವೆಬ್ಸೈಟ್ upsc.gov.in ನಲ್ಲಿ ಲಭ್ಯವಿದೆ. ಬಹಿರಂಗಗೊಳಿಸಲಾದ ಪಟ್ಟಿಯಲ್ಲಿ ಒಟ್ಟು 1016 ಪ್ರಸ್ತಾವಿತ ನೇಮಕಾತಿಗಳು ಸೇರಿವೆ. ಯುಪಿಎಸ್ಸಿ ಸಿಎಸ್ಇ 2023 ಅಭ್ಯರ್ಥಿಗಳಲ್ಲಿ, ಆದಿತ್ಯ ಶ್ರೀವಾಸ್ತವ ಅಖಿಲ ಭಾರತ 1 ನೇ ರ್ಯಾಂಕ್ ಗಳಿಸಿದ್ದಾರೆ. ಲಕ್ನೋ ಮೂಲದ ಆದಿತ್ಯ ಶ್ರೀವಾಸ್ತವ ಅವರು ಸಿವಿಲ್ ಪರೀಕ್ಷೆಗೆ ಸಿದ್ಧರಾಗುವತ್ತ ಗಮನ ಹರಿಸಿ ಅಕ್ಟೋಬರ್ 2017 ರಲ್ಲಿ ತಮ್ಮ ಪರೀಕ್ಷಾ ಸಿದ್ಧತೆಯನ್ನು ಪ್ರಾರಂಭಿಸಿದರು. 2022 ರ ಯುಪಿಎಸ್ಸಿ ಸಿಎಸ್ಇ ಪರೀಕ್ಷೆಯಲ್ಲಿ ಭಾರತೀಯ ಪೊಲೀಸ್ ಸೇವೆಗೆ (ಐಪಿಎಸ್) ಆಯ್ಕೆಯಾಗುವ ಮೂಲಕ ಅವರ ಮೊದಲ ಗಮನಾರ್ಹ ಸಾಧನೆ ಕಂಡುಬಂದಿದೆ. ಆ ವರ್ಷ ಅವರು ರಾಷ್ಟ್ರದಲ್ಲಿ 216 ನೇ ಸ್ಥಾನದಲ್ಲಿದ್ದರು. ಪ್ರಸ್ತುತ, ಶ್ರೀವಾಸ್ತವ ಬಂಗಾಳ ಕೇಡರ್ಗೆ ಸೇರಿದ ಐಪಿಎಸ್ ಅಧಿಕಾರಿಯಾಗಲು ತರಬೇತಿ ಪಡೆಯುತ್ತಿದ್ದಾರೆ. ಆದಿತ್ಯ ಶ್ರೀವಾಸ್ತವ ಅವರು ತಮ್ಮ ಐಪಿಎಸ್ ತರಬೇತಿಯ ಜೊತೆಗೆ ಯುಪಿಎಸ್ಸಿ ಸಿಎಸ್ಇ 2023…
ಬೆಂಗಳೂರು: ರಾಜ್ಯದಲ್ಲಿ ನರೇಂದ್ರ ಮೋದಿಯವರ ಅಲೆ ಕಿಂಚಿತ್ತೂ ಇಲ್ಲ. ಈ ಸಲದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಕನಿಷ್ಠ ಪಕ್ಷ 20 ಸ್ಥಾನಗಳನ್ನಾದರೂ ಗೆಲ್ಲಲಿದೆ. 400 ಸ್ಥಾನ ಗೆಲ್ಲುತ್ತೇವೆ ಎಂದು ಬೀಗುತ್ತಿರುವ ಬಿಜೆಪಿ ದೇಶದಲ್ಲಿ 200 ಕ್ಷೇತ್ರಗಳನ್ನೂ ಗೆಲ್ಲುವುದಿಲ್ಲ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮಂಗಳವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಮ್ಮ ನಿವಾಸದಲ್ಲಿ ತಮ್ಮ ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ನಾನು ವಿಜಯಪುರ, ಬಳ್ಳಾರಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಕಡೆ ಓಡಾಡಿದ್ದೇನೆ. ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡುವುದು ನಮ್ಮ ಕರ್ತವ್ಯ. ಜನರು ಬಿಸಿಲನ್ನೂ ಲೆಕ್ಕಿಸದೆ ಕಾಂಗ್ರೆಸ್ ಪರವಾಗಿ ಸ್ಪಂದಿಸುತ್ತಿದ್ದಾರೆ. ಬೆಳಗಾವಿ, ಬೀದರ್, ಕಲಬುರಗಿ, ಹಾವೇರಿ ಮುಂತಾದ ಕಡೆಗಳಲ್ಲೆಲ್ಲ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ. ಮೋದಿಯವರ 10 ವರ್ಷಗಳ ಆಡಳಿತ ಜನರಿಗೆ ಸಾಕಾಗಿ ಹೋಗಿದೆ’ ಎಂದರು. ಮೋದಿ ಅಚ್ಛೇ ದಿನ್ ಬಗ್ಗೆ ಮಾತನಾಡಿದರು. ಆದರೆ ಅದು ಯಾವತ್ತೂ ಬರಲಿಲ್ಲ. ರಾಜ್ಯದ ಕಾಂಗ್ರೆಸ್…
ಬೆಂಗಳೂರು: ಹಣ, ಅಧಿಕಾರದ ಬಲದಿಂದ ಚುನಾವಣೆಯಲ್ಲಿ ಗೆಲ್ಲುವ ಭ್ರಮೆಯಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಜನತೆ ಈಗ ತಕ್ಕ ಉತ್ತರ ನೀಡಲು ಸಜ್ಜಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದರು. ಮಳವಳ್ಳಿಯಲ್ಲಿ ಇಂದು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಎನ್ಡಿಎ ಅಭ್ಯರ್ಥಿ ಮಾನ್ಯ ಎಚ್.ಡಿ.ಕುಮಾರಸ್ವಾಮಿ ಅವರು ಜನಬಲದಿಂದ ಗೆಲ್ಲಲಿದ್ದಾರೆ. ಜನರ ಆಶೀರ್ವಾದ, ತಾಯಂದಿರ ಆಶೀರ್ವಾದದಿಂದ ಎನ್ಡಿಎ ಅಭ್ಯರ್ಥಿಗಳಿಗೆ ಗೆಲುವಾಗಲಿದೆ ಎಂದು ಇಲ್ಲಿ ಸೇರಿದ ಜನರು ಸಂದೇಶ ನೀಡಿದ್ದಾರೆ ಎಂದು ವಿಶ್ಲೇಷಿಸಿದರು. ಲೋಕಸಭಾ ಚುನಾವಣೆಯಲ್ಲಿ ದೇಶದ ಸುರಕ್ಷತೆ, ಅಭಿವೃದ್ಧಿ ಕಾರ್ಯಕ್ಕಾಗಿ ಮೋದಿಜೀ ಮತ್ತೊಮ್ಮೆ ಎಂದು ದೇಶ- ರಾಜ್ಯದ ಜನರು ತೀರ್ಮಾನ ಮಾಡಿದ್ದಾರೆ ಎಂದು ಅವರು ತಿಳಿಸಿದರು. ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಮಣ್ಣು ಹಾಕುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿದೆ ಎಂದು ಅವರು ಟೀಕಿಸಿದರು. ಪ್ರಧಾನಿ ಮೋದಿಜೀ ಅವರ ನೇತೃತ್ವದ ಎನ್ಡಿಎ ಕೂಟದಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ ಆಗುತ್ತಿದೆ ಎಂದ ಅವರು, ಸಿದ್ದರಾಮಯ್ಯನವರು ಅಧಿಕಾರಕ್ಕೆ ಬರಲು 10 ಕೆಜಿ ಅಕ್ಕಿ…
ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ಬಿಸಿಲ ಜೊತೆಗೆ ಕಾಲರಾ ಆರ್ಭಟಿಸುತ್ತಿದೆ. ಇಂದು ಬೆಂಗಳೂರು ನಗರದಲ್ಲಿ ಮತ್ತೊಬ್ಬರಿಗೆ ಕಾಲರಾ ದೃಢಪಟ್ಟಿದ್ದು, ರೋಗಿಗಳ ಸಂಖ್ಯೆ ರಾಜ್ಯಾಧ್ಯಂತ 27ಕ್ಕೆ ಏರಿಕೆಯಾಗಿದೆ. ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಜನವರಿಯಿಂದ ಮಾರ್ಚ್ ವರೆಗೆ ಬೆಂಗಳೂರು ನಗರದಲ್ಲಿ ಇಬ್ಬರಿಗೆ ಕಾಲರಾ ದೃಢಪಟ್ಟಿದೆ. ಏಪ್ರಿಲ್ 2024ರವರೆಗೆ 7 ಕೇಸ್ ಜೊತೆಗೆ ಇಂದು ಒಬ್ಬರಿಗೆ ಕಾಲರಾ ದೃಢಪಟ್ಟ ಕಾರಣ, 10 ಮಂದಿಗೆ ಕಾಲರಾ ದೃಢಪಟ್ಟಂತೆ ಆಗಿದೆ ಎಂದಿದೆ. ಈವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 13 ಜನರಿಗೆ ಕಾಲರಾ ದೃಢಪಟ್ಟಿದ್ದರೇ, ಮೈಸೂರಲ್ಲಿ ಮೂವರಿಗೆ, ರಾಮನಗರದಲ್ಲಿ ಒಬ್ಬರು ಸೇರಿದಂತೆ ಒಟ್ಟು 27 ಜನರಿಗೆ ರಾಜ್ಯಾಧ್ಯಂತ ಕಾಲರಾ ದೃಢಪಟ್ಟಿದೆ ಎಂದು ತಿಳಿಸಿದೆ. https://kannadanewsnow.com/kannada/breaking-7-killed-as-auto-collides-with-jcb-in-road-accident-in-patna/ https://kannadanewsnow.com/kannada/kichcha-sudeep-condoles-the-death-of-actor-dwarakish/
ಬೆಂಗಳೂರು: ಇಂದು ನಟ ದ್ವಾರಕೀಶ್ ಅವರು ವಯೋ ಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಕಿಚ್ಚ ಸುದೀಪ್ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಇಂದು ಟ್ವಿಟ್ ಮಾಡಿರುವಂತ ಅವರು, ಕನ್ನಡ ಚಿತ್ರರಂಗದ ಮತ್ತೊಂದು ಅಮೂಲ್ಯ ಜೀವ ದ್ವಾರಕೀಶ್ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ಕನ್ನಡ ಚಲನಚಿತ್ರ ರಂಗವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವರ ಮಹಾನ್ ಕೊಡುಗೆಗಳನ್ನು ಮರೆಯಲಾಗದು-ಮರೆಯಕೂಡದು ಎಂದು ಹೇಳಿದ್ದಾರೆ. ನಟ ದ್ವಾರಕೀಶ್ ಅವರ ಕುಟುಂಬಕ್ಕೆ ತೀವ್ರವಾದ ಸಂತಾಪಗಳು. ಹಿರಿಯ ಚೇತನದ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ತಿಳಿಸಿದ್ದಾರೆ. https://twitter.com/KicchaSudeep/status/1780146449713664246 https://kannadanewsnow.com/kannada/kannada-film-industry-to-shut-down-tomorrow-after-actor-dwarakishs-death/ https://kannadanewsnow.com/kannada/lok-sabha-elections-rahul-gandhi-to-campaign-in-mandya-kolar-tomorrow/
ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಪ್ರಚಾರದಲ್ಲಿ ತೊಡಗಿದೆ. ನಾಳೆ ಮಂಡ್ಯ, ಕೋಲಾರದಲ್ಲಿ ಲೋಕಸಭಾ ಚುನಾವಣೆ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣಾ ಪ್ರಚಾರದ ರಣಕಹಳೆಯನ್ನು ಮೊಳಗಿಸಲಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡಿರುವಂತ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ರಾಹುಲ್ ಗಾಂಧಿ ಅವರ ರಾಜ್ಯ ಭೇಟಿ ವಿಚಾರವಾಗಿ ಕೇಳಿದಾಗ, “ರಾಹುಲ್ ಗಾಂಧಿ ಅವರು ನಾಳೆ ಮಂಡ್ಯ ಹಾಗೂ ಕೋಲಾರಕ್ಕೆ ಭೇಟಿ ನೀಡುತ್ತಿದ್ದಾರೆ ಎಂದರು. ಮಧ್ಯಾಹ್ನ 12.30ಕ್ಕೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಮಧ್ಯಾಹ್ನ ಮಂಡ್ಯಕ್ಕೆ ತೆರಳಿ, ನಂತರ ಕೋಲಾರಕ್ಕೆ ಹೋಗಿ ಅಲ್ಲಿಂದ ದೆಹಲಿಗೆ ಹೋಗುತ್ತಾರೆ. ಪ್ರಿಯಾಂಕಾ ಗಾಂಧಿ ಅವರು ಕೆಲವು ದಿನಾಂಕ ಕೊಟ್ಟಿದ್ದು ಅವರಿಗೆ ಬೇರೆ ರಾಜ್ಯಗಳಲ್ಲಿ ಪ್ರಚಾರದ ಒತ್ತಡವಿದೆ. ಅಅವರ ಕೊಟ್ಟಿರುವ ದಿನಾಂಕಗಳ ಸಮಯವನ್ನು ಹೊಂದಾಣಿಕೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು. https://kannadanewsnow.com/kannada/kannada-film-industry-to-shut-down-tomorrow-after-actor-dwarakishs-death/ https://kannadanewsnow.com/kannada/breaking-7-killed-as-auto-collides-with-jcb-in-road-accident-in-patna/