Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಜನರಿಗೆ ನೀಡುವ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತಾಡುವ ಮೋದಿಯವರು, ಜನರ ಹಣವನ್ನು ಕಿತ್ತು ತಿಂದಿರುವ ಕೋವಿಡ್ ಹಗರಣದ ಬಗ್ಗೆ ಮಾತಾಡುವುದಿಲ್ಲವೇಕೆ? ಎಂಬುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು ಕೋವಿಡ್ ವಿನಾಶದಿಂದ ಜನರು ಬಳಲುತ್ತಿರುವಾಗಲೂ ಬಿಜೆಪಿ ಸರ್ಕಾರ ತನ್ನ ಭ್ರಷ್ಟಾಚಾರದ ಬುದ್ದಿ ಬಿಡಲಿಲ್ಲ ಎಂದಿದ್ದಾರೆ. ಬಿಜೆಪಿಯ ಮಾಜಿ ಸಿಎಂ ಯಡಿಯೂರಪ್ಪನವರು ಹಾಗೂ ಮಾಜಿ ಆರೋಗ್ಯ ಸಚಿವ ಶ್ರೀರಾಮುಲು ಅವರು ನಾಡಿನ ದುರ್ದಿನಗಳ ಕಾಲದಲ್ಲಿ ಸಹಾಯದ ಅಗತ್ಯವಿರುವವರಿಗೆ ಸಹಾಯ ಮಾಡುವ ಬದಲು ವೈಯಕ್ತಿಕ ಲಾಭಕ್ಕೆ ಆದ್ಯತೆ ನೀಡಿದರು. ಅಧಿಕಾರಿಗಳ ಮೇಲೆ ಪ್ರಭಾವ ಬೀರಲು ಮತ್ತು ವೈಯಕ್ತಿಕ ಲಾಭಕ್ಕಾಗಿ ಕಂಪನಿಗಳಿಗೆ ಲಾಭದಾಯಕವಾಗಿ ಸಹಾಯ ಮಾಡುವ ಮೂಲಕ ತಮ್ಮ ಅಧಿಕಾರ ಮತ್ತು ಸ್ಥಾನಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ತನಿಖಾ ಆಯೋಗವು ಸಾಬೀತುಪಡಿಸಿದೆ. ಆಯೋಗದ ವರದಿ ಏನು ಹೇಳುತ್ತದೆ ಎಂಬುದು ಇಲ್ಲಿದೆ: “ತನಿಖೆಯ ಸಮಯದಲ್ಲಿ ಹೊರಬಿದ್ದ ಸತ್ಯಾಂಶಗಳು ಭ್ರಷ್ಟಾಚಾರ ತಡೆ ಕಾಯಿದೆ 1988 ರ ಸೆ.7 ಮತ್ತು ಸೆ.11…
ಬೆಂಗಳೂರು: ಕೋವಿಡ್ ಅಕ್ರಮಗಳ ಕುರಿತಂತೆ ಜಸ್ಟೀಸ್ ಮೈಕಲ್ ಕುನ್ಹಾ ಅವರ ಆಯೋಗದ ವರದಿ ಅನುಷ್ಠಾನಕ್ಕೆ ಐಎಎಸ್ ಅಧಿಕಾರಿ ನೇತೃತ್ವದ ಅಧಿಕಾರಿಗಳ ಪ್ರತ್ಯೇಕ ತಂಡ ರಚಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಕೋವಿಡ್ ಭ್ರಷ್ಟಾಚಾರದಲ್ಲಿ ಮಾಜಿ ಸಿಎಂ ಬಿಎಸ್ ವೈ, ಮತ್ತು ಶ್ರೀರಾಮುಲು ಪಾತ್ರವಿದ್ದು, ಇಬ್ಬರ ವಿರುದ್ಧ ಪ್ರಾಸಿಕ್ಯೂಷನ್ ಗೆ ವರದಿಯಲ್ಲಿ ಶಿಫಾರಸ್ಸು ಮಾಡಿರುವ ಬಗ್ಗೆ ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ವರದಿಯನುಸಾರ ಕ್ರಮ ಕೈಗೊಳ್ಳುವ ಬಗ್ಗೆ ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು. PPE ಕಿಟ್ ಖರೀಧಿ ವಿಚಾರದಲ್ಲಿ ಬಿಎಸ್ ವೈ ಹಾಗೂ ಅಂದಿನ ಆರೋಗ್ಯ ಸಚಿವ ಶ್ರೀರಾಮುಲು ಅವರು ಭ್ರಷ್ಟಾಚಾರ ಎಸಗಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. 330 ರೂ ಗೆ ದೇಶದಲ್ಲಿ ಪಿಪಿಇ ಕಿಟ್ ನ ಮಾರುಕಟ್ಟೆ ಬೆಲೆ ಇದ್ದರೂ, ಚೀನಾ ಕಂಪನಿಯಿಂದ 2104 ರೂಪಾಯಿ ದುಬಾರಿ ಬೆಲೆಗೆ ಖರೀಧಿಸಿದ್ದಾರೆ. ಇದರಿಂದ 14 ಕೋಟಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. https://twitter.com/dineshgrao/status/1855206443995344916 ಕೋವಿಡ್…
ತಾರಾನುಕೂಲ(ತಾರಾಬಲ) ಪ್ರಪಂಚ ನಿಂತಿರುವುದು ನಂಬಿಕೆಯ ಮೇಲೆ ಹಾಗೆ ಭಾರತೀಯರ ನಂಬಿಕೆಗೆ ಪಾತ್ರವಾಗಿರುವ ಶಾಸ್ತ್ರವೇ ಜ್ಯೋತಿಷ್ಯ ಶಾಸ್ತ್ರ. ಪುರಾತನ ಕಾಲದಿಂದಲೂ ಭವಿಷ್ಯವನ್ನು ತಿಳಿಯಲು ಈ ಶಾಸ್ತ್ರವನ್ನು ನಂಬಿಕೊಂಡು ಬಂದಿದ್ದಾರೆ. ನಮ್ಮ ಹಿರಿಯರು ಕೆಲವು ದೈನಂದಿನ ಮತ್ತು ಧಾರ್ಮಿಕ ಚಟುವಟಿಕೆಗಳ ಸಫಲತೆಗೆ ತಾರಾಬಲ ನೋಡುತ್ತಾರೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ತಾರಾಬಲ ಏಕೆ ನೋಡಬೇಕು? ನಮ್ಮ ನಕ್ಷತ್ರಕ್ಕೂ ದಿನದ ನಕ್ಷತ್ರಕ್ಕೂ ಯಾವ ವಿಚಾರದಲ್ಲಿ ಸಂಬಂಧವಿರುತ್ತದೆ ಎಂಬುದನ್ನು ಅರಿಯಬೇಕು. ನಕ್ಷತ್ರ ಕಿರಣಗಳಲ್ಲಿ ಸಕಾರಾತ್ಮಕ ಹಾಗೂ ನಕಾರಾತ್ಮಕ ಎಂಬ ಎರಡು ವಿಧಗಳಿವೆ. ಯಾವುದೇ ನಕ್ಷತ್ರದವರಿಗೆ ಸಕಾರಾತ್ಮಕ ಕಿರಣಗಳು ಅನುಕೂಲ. ನಕಾರಾತ್ಮಕ ಕಿರಣಗಳು ಪ್ರತಿಕೂಲ. ಈ ಕಿರಣಗಳು ಮನಸು, ಆರೋಗ್ಯ, ಹಣ, ಕಷ್ಟ-ನಷ್ಟ, ವೈರತ್ವ, ಸಾಧನೆ, ವ್ಯಾಪಾರ-ವ್ಯವಹಾರ, ಮೈತ್ರಿ ಮೊದಲಾದವುಗಳ ಮೇಲೆ…
ಶಿವಮೊಗ್ಗ: ನವೆಂಬರ್.12, 2024ರಂದು ಸಾಗರದಲ್ಲಿ ಉಡುಪಿಯ ಕಾಪುವಿನಲ್ಲಿರುವಂತ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ವತಿಯಿಂದ ನವದುರ್ಗಾ ಲೇಖನ ಯಜ್ಞ ಸಮಿತಿಯಿಂದ ನವದುರ್ಗಾ ಲೇಖನ ಯಜ್ಞ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಅಂತ ಸಾಗರ ಭಂಟರ ಸಂಘದ ಅಧ್ಯಕ್ಷ ಸುಧೀರ್ ಶೆಟ್ಟಿ ತಿಳಿಸಿದ್ದಾರೆ. ಇಂದು ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಹಳೆಯ ಮಾರಿಗುಡಿಯನ್ನು ಕೆಡವಿ, ಹೊಸ ಮಾರಿಗುಡಿ ದೇವಸ್ಥಾವನ್ನು ಕಟ್ಟಲಾಗುತ್ತಿದೆ. ಸುಮಾರು 30 ಕೋಟಿ ವೆಚ್ಚದಲ್ಲಿ ಹೊಸ ಮಾರಿಗುಡಿ ದೇವಸ್ಥಾನವನ್ನು ನಿರ್ಮಿಸಲಾಗುತ್ತಿದೆ. ಮುಂದಿನ ಫೆಬ್ರವರಿ ವೇಳೆಗೆ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ. ಕಾಪು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕಾಪು ವಾಸುದೇವ ಶೆಟ್ಟಿಯವರು ಕೆಲಸ ಮಾಡುತ್ತಿದ್ದಾರೆ ಎಂದರು. ಸಾಕಷ್ಟು ದಾನಿಗಳಿಂದ ನೆರವಿನಿಂದ ನಿರ್ಮಾಣವಾಗುತ್ತಿದೆ. ಸುಮಾರು 100 ಕೋಟಿಯ ವೆಚ್ಚದಲ್ಲಿ ಹೊಸ ಮಾರಿಗುಡಿ ದೇವಸ್ಥಾನ ನಿರ್ಮಣ ಮಾಡಲಾಗುತ್ತಿದೆ. ಈ ದೇವಸ್ಥಾನದ ನವದುರ್ಗಾ ಲೇಖನ ಯಜ್ಞ ಸಮಿತಿ ರಚಿಸಲಾಗಿದೆ. ಇದರ ಅಧ್ಯಕ್ಷರಾಗಿ ಭೂಪತಿ…
ಬೆಂಗಳೂರು: ಉಪ ಚುನಾವಣೆಯ ಬಳಿಕ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆನ್ನುವುದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೂ ಗೊತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು. ಸಂಡೂರು ಉಪಚುನಾವಣೆ ಪ್ರಚಾರಕ್ಕೆ ಹೊರಡುವ ಮುನ್ನ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಂಡೂರಿನಲ್ಲಿ ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ಸಿನವರು 500 ರೂ. ಕೊಟ್ಟು ಜನರನ್ನು ಕರೆಸುತ್ತಿದ್ದಾರೆ ಎಂದು ಆರೋಪಿಸಿದರು. ಇದು ಟಿ.ವಿಗಳಲ್ಲಿ ಬಿತ್ತರವಾದ ಕುರಿತು ಗಮನ ಸೆಳೆದರು. 2 ದಿನಗಳ ಕಾಲ ಸಿಎಂ ಸಂಡೂರು ಪ್ರವಾಸ ನಿಗದಿಯಾಗಿತ್ತು. ಮತ್ತೆ 3 ದಿನಗಳ ಕಾಲ ವಿಸ್ತರಿಸಿದ್ದಾರೆ. ಮುಖ್ಯಮಂತ್ರಿಗಳನ್ನು ನೋಡಬೇಕು; ಅವರ ಮಾತು ಕೇಳಬೇಕು; ಅಪರಾಧಿಗಳ ಮಾತು ಕೇಳಬೇಕೆಂಬ ಆಸಕ್ತಿಯೂ ಜನರಲ್ಲಿ ಹೊರಟುಹೋಗಿದೆ ಎಂದು ವಿಶ್ಲೇಷಿಸಿದರು. ಸಿಎಂ, ಹತಾಶರಾಗಿ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದರು. ಎಸಿಬಿ, ಲೋಕಾಯುಕ್ತ ವಿಚಾರದಲ್ಲಿ ಸಿದ್ದರಾಮಯ್ಯರಿಗೆ ಹೈಕೋರ್ಟ್ ಮಂಗಳಾರತಿ ಎತ್ತಿತ್ತು. ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಲೋಕಾಯುಕ್ತ ಬಾಗಿಲು ಹಾಕಿ ಎಸಿಬಿ ರಚಿಸಿದಾಗ ಹೈಕೋರ್ಟ್ ಮಂಗಳಾರತಿ ಎತ್ತಿತ್ತು. ಇವೆಲ್ಲ ರಾಜ್ಯದ ಜನರಿಗೆ ಗೊತ್ತಿದೆ. ಇವರ…
ಬೆಳಿಗ್ಗೆ ಅರಿಶಿನ ನೀರನ್ನು ಕುಡಿಯುವುದು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸರಳ ಮತ್ತು ನೈಸರ್ಗಿಕ ಮಾರ್ಗವಾಗಿದೆ. ಅರಿಶಿನ, ಸಾಮಾನ್ಯವಾಗಿ ಅರಿಶಿನ ಎಂದು ಕರೆಯಲ್ಪಡುತ್ತದೆ. ಇದು ಔಷಧೀಯ ಮೌಲ್ಯವನ್ನು ಹೊಂದಿರುವ ಭಾರತೀಯ ಮಸಾಲೆಯಾಗಿದೆ. ಶತಮಾನಗಳಿಂದ, ಇದನ್ನು ತರಕಾರಿಯ ರುಚಿಯನ್ನು ಹೆಚ್ಚಿಸಲು ಅಡುಗೆಮನೆಯಲ್ಲಿ ಮಾತ್ರವಲ್ಲದೆ ಅದರ ಗುಣಪಡಿಸುವ ಗುಣಲಕ್ಷಣಗಳಿಂದಾಗಿ ಮನೆಮದ್ದಾಗಿಯೂ ಬಳಸಲಾಗುತ್ತದೆ. ಅರಿಶಿನವು ಕರ್ಕ್ಯುಮಿನ್ ಅನ್ನು ಹೊಂದಿದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಆದ್ದರಿಂದ ನಿಮ್ಮ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಲು ನೈಸರ್ಗಿಕ ಪರಿಹಾರವನ್ನು ನೀವು ಬಯಸಿದರೆ ನೀವು ಬೆಳಿಗ್ಗೆ ಅರಿಶಿನ ನೀರನ್ನು ಸೇವಿಸಬೇಕು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಮುಂದಿದೆ ಓದಿ. 1. ಉರಿಯೂತ ನಿವಾರಕ ಗುಣಗಳು ಬೆಳಿಗ್ಗೆ ಅರಿಶಿನ ನೀರನ್ನು ಕುಡಿಯುವುದರಿಂದ ಉರಿಯೂತದ ಪರಿಣಾಮಗಳಿವೆ. ಉರಿಯೂತವು ಗಾಯ ಮತ್ತು ಸೋಂಕಿಗೆ ದೇಹದ ನೈಸರ್ಗಿಕ ಪ್ರತಿಕ್ರಿಯೆಯಾಗಿದೆ, ಆದರೆ ದೀರ್ಘಕಾಲದ ಉರಿಯೂತವು ಸಂಧಿವಾತ, ಹೃದ್ರೋಗ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ಕಾರಣವಾಗಬಹುದು. ಅರಿಶಿನದಲ್ಲಿರುವ ಕರ್ಕ್ಯುಮಿನ್ ಪ್ರಬಲ ಉರಿಯೂತ ನಿವಾರಕವಾಗಿದ್ದು, ಇದು…
ಅನೇಕ ಮಾಂಸಾಹಾರಿಗಳು ಮಾಂಸ ಮತ್ತು ಮೊಟ್ಟೆಗಳನ್ನು ಮಾತ್ರ ತಿನ್ನುವುದನ್ನು ಆನಂದಿಸುತ್ತಾರೆ. ಇತರರು ಸಮುದ್ರಾಹಾರವನ್ನು, ವಿಶೇಷವಾಗಿ ಮೀನುಗಳನ್ನು ಇಷ್ಟಪಡುತ್ತಾರೆ. ನೀವು ಮೀನು ಪ್ರಿಯರಾಗಿದ್ದರೆ, ಅದನ್ನು ತಾಜಾವಾಗಿ ಖರೀದಿಸುವ ಮಹತ್ವವನ್ನು ನೀವು ತಿಳಿದಿರುತ್ತೀರಿ. ಮಾರಾಟಗಾರರು ಹೆಚ್ಚಾಗಿ ಹಳಸಿದ ಮೀನುಗಳನ್ನು ಮಾರಾಟ ಮಾಡುವ ಮೂಲಕ ಮೋಸ ಮಾಡಲು ಪ್ರಯತ್ನಿಸುತ್ತಾರೆ. ತಮಿಳುನಾಡಿನ ರಾಮನಾಥಪುರಂನ ಕರಾವಳಿ ಪ್ರದೇಶಗಳು ವೈವಿಧ್ಯಮಯ ಮೀನುಗಳನ್ನು ನೀಡುತ್ತವೆ. ಮೀನುಗಳಿಗೆ ಹೆಚ್ಚಿನ ಬೇಡಿಕೆ ಮತ್ತು ಅದರ ವ್ಯಾಪಕ ಪೂರೈಕೆಯಿಂದಾಗಿ ಇಲ್ಲಿನ ಮೀನುಗಾರಿಕೆ ಉದ್ಯಮವು ಪ್ರವರ್ಧಮಾನಕ್ಕೆ ಬರುತ್ತಿದೆ. ಪ್ರತಿಯೊಬ್ಬರೂ ಹೊಸದಾಗಿ ಹಿಡಿದ ಮೀನುಗಳನ್ನು ಖರೀದಿಸಲು ಬಯಸುತ್ತಾರೆ. ಅನೇಕ ವ್ಯಾಪಾರಿಗಳು ಮತ್ತು ಮಾರಾಟಗಾರರು ಮೀನುಗಳನ್ನು ಮಂಜುಗಡ್ಡೆಯ ಮೇಲೆ ಹಾಕುವ ಮೂಲಕ ಸಾರ್ವಜನಿಕರಿಗೆ ಮೋಸ ಮಾಡಲು ಪ್ರಯತ್ನಿಸುತ್ತಾರೆ. ಇದರಿಂದಾಗಿ ಮೀನು ತಾಜಾವಾಗಿದೆಯೇ ಅಥವಾ ಎರಡು ದಿನಗಳ ಹಿಂದೆ ಹಿಡಿಯಲಾಗಿದೆಯೇ ಎಂದು ನಿರ್ಣಯಿಸುವುದು ಕಷ್ಟವಾಗುತ್ತದೆ. ಇದು ಅನೇಕರನ್ನು ನಿರಾಶೆಗೊಳಿಸುತ್ತದೆ. ಚಿಂತಿಸಬೇಡಿ, ನಾವು ನಿಮಗೆ ರಕ್ಷಣೆ ನೀಡಿದ್ದೇವೆ. ಮೀನು ತಾಜಾವಾಗಿದೆಯೇ ಅಥವಾ ಇಲ್ಲವೇ ಎಂದು ತಿಳಿಯಲು ನೀವು ಕೆಲವು ತಂತ್ರಗಳನ್ನು ತಿಳಿದುಕೊಳ್ಳಲು ಬಯಸಿದರೆ,…
ಬೆಂಗಳೂರು: ಊಟ ಪ್ರಿಯರಿಗೆ ಸುವರ್ಣಾವಕಾಶ ಎನ್ನುವಂತೆ ನಾಟಿ ಕೋಳಿ ಸಾರು, ರಾಗಿ ಮುದ್ದೆ ತಿನ್ನುವಂತ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಟಗರು, ಕುರಿ ಪಟ್ಲಿ, ಕೋಳಿ, ಟಿವಿ ಸೇರಿದಂತೆ ಇತರೆ ಬಹುಮಾನ ಕೂಡ ಸಿಗಲಿದೆ. ಈ ಬಗ್ಗೆ ಆಯೋಜಕರು, ವಕೀಲರಾದಂತ ಅನಿಲ್ ರೆಡ್ಡಿ ಮಾಹಿತಿಯನ್ನು ಹಂಚಿಕೊಂಡಿದ್ದು, ಕರ್ನಾಟಕ ಸುವರ್ಣ ಸಂಭ್ರಮ -50ರ ಪ್ರಯುಕ್ತ ಬೆಂಗಳೂರಿನ ಹೆಚ್ ಎಸ್ ಆರ್ ಬಡಾವಣೆಯಲ್ಲಿ ಇದೇ ಮೊದಲ ಬಾರಿಗೆ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ರಾಜ್ಯ ಮಟ್ಟದ ನಾಟಿ ಕೋಳಿ ಸಾರು ಮತ್ತು ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. 125 ಜನರಿಗೆ ಮಾತ್ರವೇ ಸ್ಪರ್ಧೆಯಲ್ಲಿ ಭಾಗಿಯಾಗಲು ಅವಕಾಶ ರಾಜ್ಯಾಧ್ಯಂತ ಸ್ಪರ್ಧಿಗಳು ಇದರಲ್ಲಿ ಭಾಗಿಯಾಗಬಹುದಾಗಿದೆ. ಈ ಸ್ಪರ್ಧೆಯಲ್ಲಿ 125 ಸ್ಪರ್ಧಾಳುಗಳಿಗೆ ಮಾತ್ರವೇ ಅವಕಾಶ ನೀಡಲಾಗುತ್ತಿದೆ. ಮೊದಲು ಹೆಸರು ನೋಂದಾಯಿಸಿದವರಿಗೆ ಮಾತ್ರ ಅವಕಾಶವಿದೆ. ಎಲ್ಲಾ ವಯೋಮಾನದವರು ಈ ಸ್ಪರ್ಧೆಯಲ್ಲಿ ಭಾಗಿಯಾಗಬಹುದಾಗಿದೆ. ಸ್ಪರ್ಧಾರ್ಥಿಗಳಿಗೆ 45 ನಿಮಿಷಗಳ ಕಾಲಮಿತಿಯನ್ನು ರಾಗಿಮುದ್ದೆ, ನಾಟಿ ಕೋಳಿ ಸಾರು ಉಣ್ಣಲು…
2014 ರಿಂದ ಚೀನೀ ಬೆಳ್ಳುಳ್ಳಿಯನ್ನು ನಿಷೇಧಿಸಿದ್ದರೂ, ಇದನ್ನು ಭಾರತೀಯ ಮಾರುಕಟ್ಟೆಗಳಲ್ಲಿ ಬಹಿರಂಗವಾಗಿ ಮಾರಾಟ ಮಾಡಲಾಗುತ್ತಿದೆ ಮತ್ತು ಹೆಚ್ಚಿನ ಬೇಡಿಕೆಯಿದೆ. ಸ್ಥಳೀಯ ಅಡುಗೆಮನೆಗಳಲ್ಲಿ, ವಿಶೇಷವಾಗಿ ಉತ್ತರ ಭಾರತದಲ್ಲಿ, ಬೆಳ್ಳುಳ್ಳಿ ಸಾಮಾನ್ಯವಾಗಿ ಬಳಸುವ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುತ್ತದೆ, ಇದನ್ನು ಹೆಚ್ಚಿನ ರೀತಿಯ ಪಾಕಪದ್ಧತಿಗಳಲ್ಲಿ ಬಳಸಲಾಗುತ್ತದೆ. ಇದು ವಿಶಿಷ್ಟ ಪರಿಮಳ ಮತ್ತು ಶಕ್ತಿಯುತ ವಾಸನೆಯನ್ನು ಹೊಂದಿದೆ, ಇದು ಜನಪ್ರಿಯ ಸೇರ್ಪಡೆಯಾಗಿದೆ. ರುಚಿಯನ್ನು ಹೆಚ್ಚಿಸುವುದರ ಹೊರತಾಗಿ, ಬೆಳ್ಳುಳ್ಳಿ ವಿವಿಧ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ – ಇದರಲ್ಲಿ ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ಪರಾವಲಂಬಿಗಳನ್ನು ಪ್ರತಿಬಂಧಿಸುವುದು ಮತ್ತು ನಾಶಪಡಿಸುವುದು, ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು ಮತ್ತು ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುವುದು ಮತ್ತು ಯಕೃತ್ತನ್ನು ರಕ್ಷಿಸುವುದು ಸೇರಿವೆ. ತಜ್ಞರ ಪ್ರಕಾರ, ಬೆಳ್ಳುಳ್ಳಿ ಕ್ಯಾನ್ಸರ್ ವಿರೋಧಿ ಪರಿಣಾಮಗಳನ್ನು ಹೊಂದಿದೆ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು, ಅನಾರೋಗ್ಯವನ್ನು ತಡೆಗಟ್ಟಲು ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ನೀವು ಆರೋಗ್ಯಕರ ಬೆಳ್ಳುಳ್ಳಿಯನ್ನು ಸೇವಿಸುವುದು ಮುಖ್ಯ. ಚೈನೀಸ್…
ಮುಂಬೈ : “ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಯಶಸ್ಸಿನ ಬಗ್ಗೆ ಖುದ್ದು ಜನರಿಂದ ಮಾಹಿತಿ ಪಡೆಯಲು ಮಹಾರಾಷ್ಟ್ರದ ಮಹಾಯುತಿ (ಬಿಜೆಪಿ ಮಿತ್ರ ಪಕ್ಷಗಳು) ನಾಯಕರು ಭೇಟಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ವಿಶೇಷ ಬಸ್ ಹಾಗೂ ವಿಮಾನದ ವ್ಯವಸ್ಥೆ ಮಾಡುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಹಿರಂಗ ಸವಾಲು ಹಾಕಿದರು. ಮುಂಬೈನ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಜಂಟಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಶಿವಕುಮಾರ್ ಅವರು ಶನಿವಾರ ಮಾತನಾಡಿದರು. “ಬಿಜೆಪಿಯು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ವಿಚಾರವಾಗಿ ಪತ್ರಿಕೆಗಳಿಗೆ ಸುಳ್ಳು ಜಾಹೀರಾತು ನೀಡಿತ್ತು. ಈ ಸುಳ್ಳನ್ನು ಬಯಲು ಮಾಡಲು ನಾವು ಮಹಾರಾಷ್ಟ್ರಕ್ಕೆ ಬಂದಿದ್ದೇವೆ. ಯಾವುದೇ ಸಮಯದಲ್ಲಿ ಮಹಾಯುತಿ ನಾಯಕರು ರಾಜ್ಯಕ್ಕೆ ಭೇಟಿ ನೀಡಬಹುದು. ನೇರವಾಗಿ ಜನರ ಬಳಿಗೆ ಬಂದು ಚರ್ಚೆ ಮಾಡಬಹುದು. ನಾನೇ ಖುದ್ದಾಗಿ ನಿಂತು ಈ ವ್ಯವಸ್ಥೆ ಮಾಡಿಕೊಡುತ್ತೇನೆ.” ಎಂದು ಸವಾಲು ಹಾಕಿದರು. ರಾಜ್ಯದ ಜಿಡಿಪಿ ಏರಿಕೆ “ಗ್ಯಾರಂಟಿ ಯೋಜನೆಗಳು ಜಾರಿಗೂ ಮುನ್ನ…