Subscribe to Updates
Get the latest creative news from FooBar about art, design and business.
Author: kannadanewsnow09
ಹುಬ್ಬಳ್ಳಿ: ನೈಋತ್ಯ ರೈಲ್ವೆಯ ನೂತನ ಪ್ರಧಾನ ವ್ಯವಸ್ಥಾಪಕರಾಗಿ ಆಗಮಿಸಿದ ಮುಕುಲ್ ಸರನ್ ಮಾಥುರ್ ಅವರಿಗೆ ಅಖಿಲ ಭಾರತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ನೈರುತ್ಯ ರೈಲ್ವೆ ನೌಕರರ ಸಂಘವು ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಲಾಯಿತು. ಅಖಿಲ ಭಾರತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ನೈರುತ್ಯ ರೈಲ್ವೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಮೋಹನ್, ಅಧ್ಯಕ್ಷ ಕೆ.ಎಸ್.ದ್ಯಾಮಣ್ಣವರ್ ಹಾಗೂ ಹುಬ್ಬಳ್ಳಿ, ಮೈಸೂರು ವಿಭಾಗಗಳ ಮತ್ತು ಹುಬ್ಬಳ್ಳಿ ಕಾರ್ಯಾಗಾರದ ಪದಾಧಿಕಾರಿಗಳು ಮಾಥುರ್ ಅವರನ್ನು ಭೇಟಿ ಮಾಡಿ ಪುಷ್ಪಗುಚ್ಛ ನೀಡಿ ಸನ್ಮಾನಿಸಿದರು. ನೂತನವಾಗಿ ಆಯ್ಕೆಯಾಗಿ ಬಂದಿದ್ದಕ್ಕೆ ಶುಭ ಕೋರಲಾಯಿತು. ಈ ಸಂದರ್ಭದಲ್ಲಿ, ಅಖಿಲ ಭಾರತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ರೈಲ್ವೆ ನೌಕರರ ಕಲ್ಯಾಣ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿ, ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್, ಆತ್ಮೀಯ ಸ್ವಾಗತಕ್ಕೆ ಕೃತಜ್ಞತೆ ಸಲ್ಲಿಸಿ, ಎಲ್ಲಾ ಉದ್ಯೋಗಿಗಳಿಗೆ ಸಮಾನ ಮತ್ತು ಅಂತರ್ಗತ ಕೆಲಸದ ವಾತಾವರಣವನ್ನು…
ಬೆಂಗಳೂರು: KPSC ಸದಸ್ಯರ ಸಂಖ್ಯೆ ಕಡಿಮೆ ಮಾಡುವುದು, ಸದಸ್ಯರ ಆಯ್ಕೆಗೆ ಸರ್ಚ್ ಕಮಿಟಿ ರಚಿಸುವುದು, ಮುಂದೆ ಆದಷ್ಟು ಪ್ರಾಮಾಣಿಕವಾಗಿ ಇರುವವರನ್ನು ನೇಮಕ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡೋಣ. ಮರು ಪರೀಕ್ಷೆ ಮಾಡಿ ಎಂದು ಸೂಚನೆ ಕೊಡಲು ಈಗ ಸಾಧ್ಯವಿಲ್ಲ, ಪ್ರಕರಣ ನ್ಯಾಯಾಲಯದಲ್ಲಿದೆ. ಮರು ಪರೀಕ್ಷೆಗೆ ನ್ಯಾಯಾಲಯ ಸೂಚನೆ ಕೊಟ್ಟರೆ ಮರು ಪರೀಕ್ಷೆ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ. KPSC ಪರೀಕ್ಷೆಯಲ್ಲಿ ಭಾಷಾಂತರದಲ್ಲಿ ಆದ ಲೋಪದ ಕಾರಣಕ್ಕೆ ಅಭ್ಯರ್ಥಿಗಳಿಗೆ ಆಗಿರುವ ಸಮಸ್ಯೆ ಬಗ್ಗೆ ವಿರೋಧ ಪಕ್ಷದ ನಿಲುವಳಿ ಸೂಚನೆ ಮೇಲೆ ಕೆಪಿಎಸ್ಸಿ ಕುರಿತ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ನೀಡಿದ ಉತ್ತರ… KPSC ನಲ್ಲಿ ಹಲವು ಬಾರಿ ನಾನಾ ಗೊಂದಲಗಳಾಗಿ, ನ್ಯಾಯಾಲಯಗಳ ಮೆಟ್ಟಿಲು ಏರಿರುವ ಚರಿತ್ರೆ ಇದೆ. ಭ್ರಷ್ಟಾಚಾರ KPSC ಯಿಂದ ಹೊರಗೆ ಹೋಗಬೇಕು. ಇದರ ಬಗ್ಗೆ ಎರಡು ಮಾತಿಲ್ಲ ಎಂದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಉತ್ತರದ ಇತರೆ ಹೈಲೈಟ್ಸ್ ಹೀಗಿದೆ.. 1. ದಿನಾಂಕ 4/3/2025 ರಂದು ವಿರೋಧ ಪಕ್ಷದ ಸದಸ್ಯರು ನಿಲುವಳಿ ಸೂಚನೆಯನ್ನು…
ಆಂಧ್ರಪ್ರದೇಶ: ‘ಸೂರ್ಯವಂಶಂ’ ಖ್ಯಾತಿಯ ನಟಿ ಸೌಂದರ್ಯ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಎರಡು ದಶಕಗಳ ನಂತರ, ಹಿರಿಯ ತೆಲುಗು ನಟ ಮೋಹನ್ ಬಾಬು ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ನಟನ ಅಕಾಲಿಕ ಸಾವು ಆಕಸ್ಮಿಕವಲ್ಲ, ಆದರೆ ಮೋಹನ್ ಬಾಬುಗೆ ಸಂಬಂಧಿಸಿದ ಆಸ್ತಿ ವಿವಾದಕ್ಕೆ ಸಂಬಂಧಿಸಿದ ಕೊಲೆ ಎಂದು ಆರೋಪಿಸಿ ಆಂಧ್ರಪ್ರದೇಶದ ಖಮ್ಮಮ್ ಜಿಲ್ಲೆಯಲ್ಲಿ ಪೊಲೀಸ್ ದೂರು ದಾಖಲಿಸಲಾಗಿದೆ. ಶಂಶಾಬಾದ್ ನ ಗ್ರಾಮವೊಂದರಲ್ಲಿ ಆರು ಎಕರೆ ಭೂಮಿಯನ್ನು ಮಾರಾಟ ಮಾಡುವಂತೆ ಮೋಹನ್ ಬಾಬು ಸೌಂದರ್ಯ ಮತ್ತು ಆಕೆಯ ಸಹೋದರನ ಮೇಲೆ ಒತ್ತಡ ಹೇರಿದ್ದಾರೆ ಎಂದು ದೂರುದಾರ ಚಿಟ್ಟಿಮಲ್ಲು ಆರೋಪಿಸಿದ್ದಾರೆ. ಆದರೆ ಒಡಹುಟ್ಟಿದವರು ಒಪ್ಪಲು ನಿರಾಕರಿಸಿದ್ದರು, ಇದು ಇಬ್ಬರು ನಟರ ನಡುವೆ ದೊಡ್ಡ ಸಂಘರ್ಷಕ್ಕೆ ಕಾರಣವಾಯಿತು. ಸೌಂದರ್ಯ ಅವರ ಸಾವಿನ ನಂತರ ಮೋಹನ್ ಬಾಬು ಅವರು ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ವಿಷಯದಲ್ಲಿ ಇನ್ನೂ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ದೂರುದಾರರು ಇಬ್ಬರು ನಟರಿಗೆ ಸಂಬಂಧ ಹೊಂದಿದ್ದಾರೆಯೇ ಮತ್ತು ಹೇಗೆ ಎಂಬುದು ತಿಳಿದಿಲ್ಲ.…
ಬೆಂಗಳೂರು : ಗ್ರಾಮ ಹಾಗೂ ತಾಲ್ಲೂಕು ಮಟ್ಟದ ಭೂದಾಖಲೆಗಳನ್ನು ತಾಳೆ ಮಾಡಿ ಕ್ರಮಬದ್ಧಗೊಳಿಸುವ ವಿಧಾನವಾದ ಜಮಾಬಂದಿ ಪ್ರಕ್ರಿಯೆಯನ್ನು ವೇಗವಾಗಿ ನಿರ್ವಹಿಸಲು ಇ-ಜಮಾಬಂದಿ ತಂತ್ರಾಂಶವನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ವಿಧಾನಪರಿಷತ್ನಲ್ಲಿ ತಿಳಿಸಿದ್ದಾರೆ. ಸದಸ್ಯ ಜವರಾಯಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚೆಗೆ ಮಂಡಿಸಿದ ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ. ಇದರಿಂದ ಗ್ರಾಮ ಲೆಕ್ಕಿಗರ ಮೇಲಿನ ಕಾರ್ಯದ ಒತ್ತಡ ಕಡಿಮೆ ಆಗಲಿದ್ದು, ಜಮಾಬಂದಿ ಪ್ರಕ್ರಿಯೆಗೆ ವೇಗ ದೊರೆಯಲಿದೆ. ಸದ್ಯಕ್ಕೆ ಇದು ಅರ್ಧ ಪೂರ್ಣಗೊಂಡಿದ್ದು, ಒಂದು ವರ್ಷದೊಳಗೆ ಸಂಪೂರ್ಣವಾಗಲಿದೆ ಎಂದು ತಿಳಿಸಿದರು. ಜಮಾಬಂದಿ ಒಂದು ಸರಕಾರಿ ಪ್ರಕ್ರಿಯೆಯಾಗಿದ್ದು, ಇದನ್ನು ಪ್ರತಿ ವರ್ಷ ಭೂಮಿಯ ದಾಖಲೆಗಳ ಪರಿಶೀಲನೆಗಾಗಿ ಹಮ್ಮಿಕೊಳ್ಳಲಾಗುತ್ತದೆ. ಇದನ್ನು ಸಾಮಾನ್ಯವಾಗಿ ತಹಶೀಲ್ದಾರ್ ಮೇಲ್ವಿಚಾರಣೆಯಡಿ ಗ್ರಾಮ ಲೆಕ್ಕಿಗರು ಮತ್ತು ಇತರ ಅಧಿಕಾರಿಗಳು ನಡೆಸುತ್ತಾರೆ. ಇದು ಜನರಿಂದ ನಡೆಯುವ ಗ್ರಾಮ ಪಂಚಾಯತಿಯ ವಾರ್ಷಿಕ ಆದಾಯ ಮತ್ತು ವೆಚ್ಚಗಳ ಭೌತಿಕ ಮತ್ತು ಆರ್ಥಿಕ ಲೆಕ್ಕ ಪರಿಶೀಲನೆಯಾಗಿದೆ. ಗ್ರಾಮ ಪಂಚಾಯತಿಯು ನಿರ್ವಹಿಸುವ ಲೆಕ್ಕಗಳು, ಲೆಕ್ಕಗಳು, ರಿಜಿಸ್ಟರ್ಗಳು,…
ಬೆಂಗಳೂರು: ನಟಿ ರನ್ಯಾ ರಾವ್ ಅವರನ್ನು ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿದೆ. ಇಂತಹ ಅವರು ಜಾಮೀನು ಕೋರಿ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆಯನ್ನು ಆರ್ಥಿಕ ಅಪರಾಧಗಳ ನ್ಯಾಯಾಲಯ ನಡೆಸಿತು. ವಾದ, ಪ್ರತಿವಾದವನ್ನು ಆಲಿಸಿದಂತ ಕೋರ್ಟ್ ಮಾರ್ಚ್.14ಕ್ಕೆ ಜಾಮೀನು ಅರ್ಜಿಯ ಆದೇಶದ ತೀರ್ಪು ಕಾಯ್ದಿರಿಸಿದೆ. ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಬಂಧಿಸಲಾಗಿದೆ. ಅವರಿಗೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪ್ರಕರಣದಲ್ಲಿ ಜಾಮೀನು ನೀಡುವಂತೆ ಬೆಂಗಳೂರಿನ ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ವೇಳೆ ಡಿ ಆರ್ ಐ ಪರ ವಕೀಲ ಮಧು ರಾವ್ ವಾದ ಮಂಡಿಸಿದರು. ಕಸ್ಟಡಿ ಅವಧಿಯಲ್ಲಿ ನಟಿ ರನ್ಯಾ ರಾವ್ ಅವರು ತನಿಖೆಗೆ ಯಾವುದೇ ರೀತಿಯಲ್ಲಿ ಸಹಕರಿಸಿಲ್ಲ. ಅಪರಾಧದ ಮನಸ್ಥಿತಿಯ ಬಗ್ಗೆ ಪರಿಶೀಲಿಸಬೇಕು. ಜಾಮೀನು ನೀಡಿದರೇ ಸಮಸ್ಯೆ ಆಗಲಿದೆ. ಮಹಿಳೆಯಾಗಿದ್ದರೂ ಕೂಡ ಬೇಲ್ ನೀಡಬಾರದು. ದೊಡ್ಡ ಮಟ್ಟದ ಸ್ಮಗ್ಲಿಂಗ್ ಆಗಿರುವುದು ಪರಿಗಣಿಸಬೇಕು ಎಂಬುದಾಗಿ ವಾದಿಸಿದರು. ವಾದ ಪ್ರತಿವಾದವನ್ನು ಆಲಿಸಿದಂತ…
ಬೆಂಗಳೂರು: ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬದಲು ನಿಮ್ಮ ಕಾಂಗ್ರೆಸ್ ಪಕ್ಷವನ್ನೇ ಮುಚ್ಚಿಬಿಡಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ. ಬೆಂಗಳೂರಿನ ವಿಧಾನ ಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಇಂದು ಬಿಜೆಪಿ-ಜೆಡಿಎಸ್ ಪಕ್ಷಗಳ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಚ್ಚಿಬಿಟ್ಟರೆ ದೇಶಕ್ಕೇನೂ ಆಗುವುದಿಲ್ಲ; ಕಾಂಗ್ರೆಸ್ ಇರುವವರೆಗೆ ಈ ದೇಶಕ್ಕೆ ಅಭಿವೃದ್ಧಿ, ನೆಮ್ಮದಿ ಇಲ್ಲ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷ ದೇಶಕ್ಕೆ ಗಂಡಾಂತರ ತರುವ ಕೆಲಸ ಮಾಡುತ್ತಿದೆ. ಕಾರ್ಯಕರ್ತರಿಗೆ ಖಜಾನೆ ಹಣವನ್ನು ಕೊಡಲು ನಾವು ಬಿಡುವುದಿಲ್ಲ; ಇದನ್ನು ಸಂವಿಧಾನದ ಅಡಿಯಲ್ಲಿ ಕೊಡುತ್ತ ಇದ್ದೀರಾ? ಇದನ್ನು ಕೂಡಲೇ ನಿಲ್ಲಿಸಿ ಎಂದು ಆಗ್ರಹಿಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿಗಳು ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು. ಸಂವಿಧಾನದಂತೆ ಕೆಲಸ ಮಾಡುವುದು ಸರಕಾರದ ಕರ್ತವ್ಯ ಎಂದು ತಿಳಿಸಿದರು. ಅವು ಸಾಂವಿಧಾನಿಕ ಹುದ್ದೆಗಳಲ್ಲ; ಆದ್ದರಿಂದ ಕೈಬಿಡಲೇಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ಸಿನವರು ಖಜಾನೆಗೆ ಕನ್ನ ಹಾಕುತ್ತಿದ್ದಾರೆ ಎಂದು ತಿಳಿಸಿದರು.…
ಬೆಂಗಳೂರು: ತಾಯಿ-ಮಗನ ಸಂಬಂಧದಲ್ಲಿ ಅನಗತ್ಯವಾದ ವಿವಾದಗಳನ್ನು ಸೃಷ್ಟಿಸಬೇಡಿ ಎಂದು ಎಲ್ಲರಲ್ಲಿ ಮನವಿ ಮಾಡುತ್ತೇನೆ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು, ನಟ ದರ್ಶನ್ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ನನ್ನ ಹಿಂದಿನ ಒಂದು ಪೋಸ್ಟ್ ಕುರಿತು ಅನಗತ್ಯವಾದ ವಿವಾದ ಸೃಷ್ಟಿಯಾಗಿರುವುದರಿಂದ ಈ ಸ್ಪಷ್ಟನೆ ನೀಡಲು ನಾನು ಇಚ್ಛಿಸುತ್ತೇನೆ. ನನ್ನ ಪೋಸ್ಟ್ ಯಾರನ್ನಾದರೂ ಗುರಿಯಾಗಿಸಿ ಮಾಡಲಾದದ್ದಲ್ಲ; ಅದು ಸರಳವಾಗಿ ಹಂಚಿಕೊಂಡ ವಿಷಯ ಮಾತ್ರ ಎಂದಿದ್ದಾರೆ. ಯಾರು ನನ್ನನ್ನು ಫಾಲೋ ಮಾಡುತ್ತಾರೆ ಅಥವಾ ಅನ್ಫಾಲೋ ಮಾಡುತ್ತಾರೆ ಎಂಬುದನ್ನು ಗಮನಿಸುವ ಅಭ್ಯಾಸ ಹೊಂದಿಲ್ಲ. ಮಾಧ್ಯಮಗಳಲ್ಲಿ ಈ ವಿಷಯದ ಬಗ್ಗೆ ಸುದ್ದಿಗಳು ಬಂದ ಬಳಿಕವೇ ನನಗೂ ಈ ಬೆಳವಣಿಗೆ ತಿಳಿಯಿತು ಎಂಬುದಾಗಿ ಹೇಳಿದ್ದಾರೆ. ನಿಜಕ್ಕೂ, ದರ್ಶನ್ ಅವರು ಇನ್ಸ್ಟಾಗ್ರಾಂ ಮತ್ತು ಟ್ವಿಟರ್ನಲ್ಲಿ ಯಾರನ್ನೂ ಫಾಲೋ ಮಾಡುತ್ತಿಲ್ಲ. ಇದು ಅವರ ವೈಯಕ್ತಿಕ ಆಯ್ಕೆ, ಮತ್ತು ಅದನ್ನು ಎಲ್ಲರೂ ಗೌರವಿಸಬೇಕು. ಇದನ್ನು ಬೇರೆ ರೀತಿಯಲ್ಲಿ ಅರ್ಥೈಸುವುದು ಅಗತ್ಯವಿಲ್ಲ ಎಂಬುದಾಗಿ…
ಬೆಂಗಳೂರು: ನಗರದಲ್ಲಿ ಅಂತಾರಾಷ್ಟ್ರೀಯ ಪುಷ್ಪ ಮಾರುಕಟ್ಟೆ ನಿರ್ಮಾಣ ಮಾಡುವುದಾಗಿ ಕೃಷಿ, ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಘೋಷಿಸಿದ್ದಾರೆ. ರಾಜ್ಯದಲ್ಲಿ ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಪುಷ್ಪೋದ್ಯಮವಿದ್ದು, ಮಾರಾಟ ಮತ್ತು ರಫ್ತು ಉತ್ತೇಜಿಸಲು ಬೆಂಗಳೂರಿನಲ್ಲಿ ಸುಸಜ್ಜಿತವಾದ ಅಂತಾರಾಷ್ಟ್ರೀಯ ಮಟ್ಟದ ವಾಣಿಜ್ಯ ಪುಷ್ಪ ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ್ ಅವರು ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ತಿಳಿಸಿದರು. https://twitter.com/KarnatakaVarthe/status/1899725923064361229 https://kannadanewsnow.com/kannada/safety-and-security-of-tourists-in-the-state-is-a-special-priority-guidelines-issued-for-resorts-homestays/ https://kannadanewsnow.com/kannada/breaking-soujanya-rape-and-murder-case-hc-stays-fir-against-youtuber-sameer/
ಬೆಂಗಳೂರು: ರಾಜ್ಯಾದ್ಯಂತ ಪ್ರವಾಸಿ ತಾಣಗಳಲ್ಲಿನ ರೆಸಾರ್ಟ್, ಹೋಂಸ್ಟೇಗಳಲ್ಲಿ ಪ್ರವಾಸಿಗರಿಗೆ ಭದ್ರತೆ ಮತ್ತು ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಈ ಸಂಬಂಧ ಒಳಾಡಳಿತ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರು ಸುತ್ತೋಲೆ ಹೊರಡಿಸಿದ್ದಾರೆ. ಅದರಲ್ಲಿ ದಿನಾಂಕ 06.03.2025 ರಂದು ಗಂಗಾವತಿ ತಾಲ್ಲೂಕಿನ ಆನೆಗುಂದಿ ಗ್ರಾಮದಲ್ಲಿ ಹಾರ್ಟ್ ಲ್ಯಾಂಡ್ ಹೋಂ ಸ್ಟೇನಲ್ಲಿ ವಾಸವಿದ್ದ ಎರಡು ವಿದೇಶಿಯರು, ಎರಡು ಭಾರತೀಯರನ್ನು ಹೋಮ್ ಮಾಲೀಕರು ರಾತ್ರಿ ಭೋಜನದ ನಂತರ ನಿರ್ಜನ ಪ್ರದೇಶದಲ್ಲಿ ನಕ್ಷತ್ರ ವೀಕ್ಷಣೆಗೆಂದು ಕರೆದುಕೊಂಡು ಹೋದ ಸಂದರ್ಭದಲ್ಲಿ ಮೂರು ದುಷ್ಕರ್ಮಿಗಳು ಪುರುಷ ಪವಾಸಿಗರೊಂದಿಗೆ ವಾಗ್ವಾದ ಮಾಡಿ ಅವರುಗಳನ್ನು ಸಮೀಪದಲ್ಲಿಯೇ ತುಂಗಾಭದ್ರ ಎಡದಂಡೆ ಕಾಲುವೆಗೆ ನೂಕಿರುತ್ತಾರೆಂದು ವರದಿ ಮಾಡಿರುತ್ತಾರೆ. ಮುಂದುವರೆದು, ಹೋಮ್ಸ್ಯೆ ಮಾಲೀಕಳು ಹಾಗೂ ಮತ್ತೊಬ್ಬ ಇಸ್ರೇಲ್ ಪ್ರಜೆಯ ಮೇಲೆ ಹಲ್ಲೆ ಮಾಡಿ ಅತ್ಯಾಚಾರ ಎಸಗಿರುವುದಾಗಿ ತಿಳಿಸಿರುತ್ತಾರೆ. ಕಾಲುವೆಯ ನೀರಿನಲ್ಲಿ ಕೊಚ್ಚಿ ಹೋಗಿದ್ದವರ ಪೈಕಿ ಒರಿಸ್ಸಾ ಮೂಲದ ವ್ಯಕ್ತಿ ಮೃತರಾಗಿರುವ ಘಟನೆ ಉಲ್ಲೇಖದ ಪತ್ರದಲ್ಲಿ ವರದಿಯಾಗಿರುತ್ತದೆ. ಮೇಲಿನ ಘಟನೆಯು ಅತ್ಯಂತ ದು:ಖಕರ ಹಾಗೂ ವಿಷಾದನೀಯವಾದುದಾಗಿದೆ.…
ನವದೆಹಲಿ: ಫೆಬ್ರವರಿಯಲ್ಲಿ ಭಾರತದ ಚಿಲ್ಲರೆ ಹಣದುಬ್ಬರವು 7 ತಿಂಗಳ ಕನಿಷ್ಠ ಮಟ್ಟವಾದ 3.61% ಕ್ಕೆ ಇಳಿದಿದ್ದು, ಗ್ರಾಹಕರಿಗೆ ಭಾರಿ ನಿರಾಳತೆ ತಂದಿದೆ. ಜನವರಿಯಲ್ಲಿ, ಚಿಲ್ಲರೆ ಹಣದುಬ್ಬರವು 4.26% ರಷ್ಟಿತ್ತು. ಸರ್ಕಾರ ಹಂಚಿಕೊಂಡ ಅಧಿಕೃತ ಅಂಕಿ ಅಂಶವು ಅರ್ಥಶಾಸ್ತ್ರಜ್ಞರ ಸಮೀಕ್ಷೆಯಿಂದ ಸೂಚಿಸಲ್ಪಟ್ಟಿದ್ದಕ್ಕಿಂತ ಉತ್ತಮವಾಗಿದೆ. “ಜನವರಿ 2025 ಕ್ಕೆ ಹೋಲಿಸಿದರೆ ಫೆಬ್ರವರಿ 2025 ರ ಮುಖ್ಯ ಹಣದುಬ್ಬರದಲ್ಲಿ 65 ಬೇಸಿಸ್ ಪಾಯಿಂಟ್ಗಳ ಇಳಿಕೆ ಕಂಡುಬಂದಿದೆ. ಇದು ಜುಲೈ 2024 ರ ನಂತರ ವರ್ಷದಿಂದ ವರ್ಷಕ್ಕೆ ಅತ್ಯಂತ ಕಡಿಮೆ ಹಣದುಬ್ಬರವಾಗಿದೆ” ಎಂದು ಅದು ಹೇಳಿದೆ. ಚಿಲ್ಲರೆ ಹಣದುಬ್ಬರದಲ್ಲಿನ ತೀವ್ರ ಕುಸಿತದ ಹಿಂದಿನ ದೊಡ್ಡ ಕಾರಣವೆಂದರೆ ಆಹಾರ ಬೆಲೆಗಳಲ್ಲಿನ ಇಳಿಕೆ. “2024 ರ ಫೆಬ್ರವರಿ ತಿಂಗಳಿಗೆ ಅಖಿಲ ಭಾರತ ಗ್ರಾಹಕ ಆಹಾರ ಬೆಲೆ ಸೂಚ್ಯಂಕ (CFPI) ಆಧರಿಸಿದ ವರ್ಷದಿಂದ ವರ್ಷಕ್ಕೆ ಹಣದುಬ್ಬರ ದರವು ಫೆಬ್ರವರಿ 2024 ಕ್ಕಿಂತ 3.75% (ತಾತ್ಕಾಲಿಕ)” ಎಂದು ದತ್ತಾಂಶವು ತೋರಿಸಿದೆ. ಜನವರಿ 2025 ಕ್ಕೆ ಹೋಲಿಸಿದರೆ ಫೆಬ್ರವರಿ 2025 ರಲ್ಲಿ ಆಹಾರ ಹಣದುಬ್ಬರದಲ್ಲಿ…













