Author: kannadanewsnow09

ಮಂಡ್ಯ : ಶಿಂಷಾ ನದಿ ಪಾತ್ರದಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದರು ಸಹ ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡುತ್ತಿದ್ದ ವೇಳೆ ದಾಳಿ ಮಾಡಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು 15 ಟನ್ ಮರಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮದ್ದೂರು ತಾಲ್ಲೂಕಿನ ಅಜ್ಜಹಳ್ಳಿ ಗ್ರಾಮದ ಶಿಂಷಾ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಬುಧವಾರ ದಾಳಿ ಮಾಡಿದ ಅಧಿಕಾರಿಗಳು ಅಂದಾಜು 15 ಟನ್ ಮರಳು ಹಾಗೂ ಕೊಪ್ಪರಿಕೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಧಿಕಾರಿಗಳ ದಾಳಿಗೆ ಬೆಚ್ಚಿದ ಮರಳು ದಂಧೆಕೋರರು ತುಂಬಿ ಹರಿಯುತ್ತಿರುವ ನದಿಯಲ್ಲೆ ಪರಾರಿಯಾಗಿದ್ದಾರೆ. ಈಗಾಗಲೇ ಇದೇ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಸಂಬಂಧ 2 ಪ್ರಕರಣಗಳನ್ನು ದಾಖಲಿಸಿದ್ದರೂ ಸಹ ಅಕ್ರಮ ಮರಳು ಗಣಿಗಾರಿಕೆ ದಂಧೆ ಮುಂದುವರಿಯುತ್ತಿದ್ದು, ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಮದ್ದೂರು ನ್ಯಾಯಾಲಯದಲ್ಲಿ ದೂರು ದಾಖಲಿಸುವುದಾಗಿ ಭೂ ವಿಜ್ಞಾನಿ ಮಹೇಶ್ ರವರು ಎಚ್ಚರಿಕೆ ನೀಡಿದರು. ಇನ್ನು ಕಳೆದ ತಿಂಗಳು ಅಜ್ಜಹಳ್ಳಿ ಗ್ರಾಮದ ಸ್ಥಳೀಯರು ರಾತ್ರಿ ವೇಳೆ ಅಕ್ರಮವಾಗಿ…

Read More

ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು, ನೈಋತ್ಯ ರೈಲ್ವೆಯು ಕೆಎಸ್ಆರ್ ಬೆಂಗಳೂರು – ವಾಸ್ಕೊ-ಡ-ಗಾಮ – ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. * ರೈಲು ಸಂಖ್ಯೆ 07317/07318 ಕೆಎಸ್ಆರ್ ಬೆಂಗಳೂರು – ವಾಸ್ಕೊ-ಡ-ಗಾಮ – ಬೆಂಗಳೂರು ಕಂಟೋನ್ಮೆಂಟ್ ಎಕ್ಸ್ ಪ್ರೆಸ್ ವಿಶೇಷ (ಒಂದು ಟ್ರಿಪ್): ರೈಲು ಸಂಖ್ಯೆ 07317 ಕೆಎಸ್ಆರ್ ಬೆಂಗಳೂರು – ವಾಸ್ಕೊ-ಡ-ಗಾಮ ವಿಶೇಷ ಎಕ್ಸ್ ಪ್ರೆಸ್ ರೈಲು 17.10.2025 ರಂದು ರಾತ್ರಿ 11:25ಕ್ಕೆ ಕೆಎಸ್ಆರ್ ಬೆಂಗಳೂರಿನಿಂದ ಹೊರಟು, ಮರುದಿನ ಮಧ್ಯಾಹ್ನ 02:55ಕ್ಕೆ ವಾಸ್ಕೊ-ಡ-ಗಾಮ ತಲುಪಲಿದೆ. ಮರಳಿ ಪ್ರಯಾಣದಲ್ಲಿ, ರೈಲು ಸಂಖ್ಯೆ 07318 ವಾಸ್ಕೊ-ಡ-ಗಾಮ – ಕೆಎಸ್ಆರ್ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ ರೈಲು 18.10.2025 ರಂದು ಸಂಜೆ 05:00ಕ್ಕೆ ವಾಸ್ಕೊ-ಡ-ಗಾಮದಿಂದ ಹೊರಟು, ಮರುದಿನ ಬೆಳಿಗ್ಗೆ 08:30ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ. ರೈಲು ಸಂಖ್ಯೆ 07317 ಮಾರ್ಗಮಧ್ಯೆ ಬೆಂಗಳೂರು ಕಂಟೋನ್ಮೆಂಟ್, ಎಸ್ಎಂವಿಟಿ ಬೆಂಗಳೂರು, ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ದಾವಣಗೆರೆ,…

Read More

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಬಹುಶಃ ಸುಳ್ಳಿನ ಕಟ್ಟು ಕಥೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆಶಿ ಅವರು ಮುಖ್ಯಮಂತ್ರಿ ಆಗಬೇಕೆಂಬ ಕನಸು ಕಾಣುತ್ತಿದ್ದರೆ ನಮ್ಮದೇನೂ ಅಭ್ಯಂತರ ಇಲ್ಲ; ಆದರೆ, ಬಿಜೆಪಿಯಿಂದ ಬೆದರಿಕೆ ಕರೆ ಬಂದಿತ್ತು ಎಂದಿದ್ದಾರೆ. ಬೆದರಿಕೆ ಕರೆ ಆಗಿದ್ದರೆ ಅವರು ದೂರು ಕೊಡಬೇಕಿತ್ತು. ಸತ್ಯ ಹೊರಕ್ಕೆ ಬರುತ್ತಿತ್ತು ಎಂದು ನುಡಿದರು. ಅವರ ಹೇಳಿಕೆ ಒಂದು ರೀತಿಯ ಅಭಾಸ ಎಂದು ಟೀಕಿಸಿದರು. ಈ ಮೂಲಕ ಅವರು ಕಾಂಗ್ರೆಸ್ ಪಕ್ಷವನ್ನು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಾರೆ ಎಂದು ನನ್ನ ಅನಿಸಿಕೆ ಎಂದು ನುಡಿದರು. ಮುಖ್ಯಮಂತ್ರಿ ಹುದ್ದೆ ಬಯಸುವವರು ಹಲವು ತಂತ್ರಗಳನ್ನು ಹೂಡುವುದು ಸಹಜ. ಬಿಜೆಪಿ ವಿರುದ್ಧ ಆಪಾದನೆ ಮಾಡಿ, ಕಾಂಗ್ರೆಸ್ ಪಕ್ಷ ಅಥವಾ ಹೈಕಮಾಂಡಿಗೆ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಾರೆ ಎಂದು ನನ್ನ ಅನಿಸಿಕೆ ಎಂದರು. ಕನ್ನೇರಿ ಸ್ವಾಮೀಜಿಯವರಿಗೆ ವಿಜಯಪುರ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹೇರಿದ…

Read More

ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಪೂರ್ವಾನುಮತಿ ಕಡ್ಡಾಯಗೊಳಿಸುವುದು ಸೇರಿದಂತೆ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಆ ಸಚಿವ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ. ಇಂದಿನ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಪೆರಿಪರಲ್ ರೋಡ್ ಅಂತ ಕರೆಯಲಾಗಿತ್ತು. ತುಮಕೂರು ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ, ಎಲೆಕ್ಟ್ರಾನಿಕ್ ಸಿಟಿಯಿಂದ ಮೈಸೂರು ರಸ್ತೆವತೆಗೆ ಇತ್ತು. ಹಿಂದೆ ಸರ್ಕಾರ ಡ್ರಾಪ್ ಮಾಡೋಕೆ ಹೊರಟಿತ್ತು. ತೊಂದರೆಯಾಗುತ್ತೆ ಅಂತ ಹೊರಡಿತ್ತು. ಈಗ ಪರ್ಯಾಯ ರಸ್ತೆ ಅಗತ್ಯವಿದೆ. ಡಿನೊಟಿಫೈ ಮಾಡಬಾರದು. ಟ್ರಾಫಿಕ್ ತಡೆಯಬೇಕು ಅಂತ ನಾವು ಪರಿಗಣಿಸಿದ್ದೇವೆ. ನೈಸ್ ಪಕ್ಕ ಬಿಡಿಎ ಯಿಂದ ಹೊಸ ರಸ್ತೆ ನಿರ್ಮಾಣ. 117 ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ ಕಾರ್ಯಯೋಜನೆ ನಡೆದಿದೆ. ಭೂಸ್ವಾಧೀನಕ್ಕೆ‌ಹೊಸ ಪರಿಹಾರಕ್ಕೆ ಅವಕಾಶ ಇರಲಿಲ್ಲ. ರೈತರಿಗೆ ಸಹಾಯ ಮಾಡಲು ನಿರ್ಧರಿಸಿದ್ದೇವೆ. 100 ಮೀಟರ್ ಗೆ ನೊಟಿಫಿಕೇಶನ್ ಆಗಿತ್ತು. ಬೆಂ,ಮೈಸೂರು ರಸ್ತೆ 60 ಮೀಟರ್ ಇದೆ. ಈಗ ಈರಸ್ತೆಯನ್ನೂ ಅಷ್ಟಕ್ಕೇ ನಿಲ್ಲಿಸ್ತೇವೆ. ಉಳಿದ ಜಾಗ ರೈತರಿಗೆ…

Read More

ಅಷ್ಟ ದಿಕ್ಪಾಲಕರು ಎಂದರೆ ಯಾರು? ಪ್ರತಿಯೊಂದು ದಿಕ್ಕಿಗೂ ಒಬ್ಬೊಬ್ಬರು ಅಧಿ ದೇವತೆಗಳಿಂದ ಆಗುವ ಪ್ರಯೋಜನು ಗೊತ್ತಾ? ಎಂಟು ದಿಕ್ಕುಗಳನ್ನು ಕಾಯುವ ದೇವತೆಗಳೇ ಅಷ್ಟ ದಿಕ್ಪಾಲಕರು. ದಿಕ್ಪಾಲಕ ಅಂದರೆ ರಕ್ಷಣೆ ನೀಡುವವ ಎಂದರ್ಥ. ಬ್ರಹ್ಮಾಂಡ ಅನಂತವಾದುದು. ಮಾಪನಕ್ಕೇ ನಿಲುಕದ ಬ್ರಹ್ಮಾಂಡವನ್ನು ಎಂಟು ದಿಕ್ಕುಗಳಿಂದ ಗುರುತಿಸುತ್ತಾರೆ. ಸನಾತನ ಪರಂಪರೆಯ ಪ್ರಕಾರ ಬ್ರಹ್ಮಾಂಡವನ್ನು ಪೊರೆಯುವಾತನೇ ಭಗವಂತ. ಅಂತೆಯೇ ಪ್ರತಿಯೊಂದು ದಿಕ್ಕಿಗೂ ಒಬ್ಬೊಬ್ಬರು ಅಧಿ ದೇವತೆಗಳಿದ್ದಾರೆ. ವಾಸ್ತುಶಾಸ್ತ್ರದ ಪ್ರಕಾರ ಅಷ್ಟದಿಕ್ಪಾಲಕರು: ಇಂದ್ರ-ಪೂರ್ವ, ಕುಬೇರ-ಉತ್ತರ, ಯಮ-ದಕ್ಷಿಣ, ವರುಣ-ಪಶ್ಚಿಮ, ಈಶಾನ (ಶಿವ)- ಈಶಾನ್ಯ, ಅಗ್ನಿ-ಆಗ್ನೇಯ, ವಾಯು-ವಾಯುವ್ಯ, ನಿರುಋುತಿ(ರಾಕ್ಷಸ)- ನೈಋುತ್ಯ. ಇಂದ್ರ: ಇಂದ್ರನು ದೇವತೆಗಳ ರಾಜ. ಸ್ವರ್ಗಲೋಕದ ಒಡೆಯ. ಮಳೆ ಮತ್ತು ಮಿಂಚುಗಳ ಅಧಿಧಿದೇವತೆ. ಐರಾವತ ಇವನ ವಾಹನ. ವಜ್ರಾಯುಧ ಇವನ ಆಯುಧ. ಅಧಿತಿಯ ಇಬ್ಬರು ಮಕ್ಕಳಲ್ಲಿ ಒಬ್ಬನಾದ ಇವನನ್ನು ಆದಿತ್ಯ ಎಂತಲೂ ಕರೆಯುತ್ತಾರೆ. ಅಗ್ನಿ: ಬೆಂಕಿಯ ದೇವತೆ. ಅವನೇ ಯಜ್ಞ ಪುರುಷ. ಹೋಮ, ಹವನಗಳಲ್ಲಿ ಅರ್ಪಣೆಯಾಗುವ ಹವಿಸ್ಸನ್ನು ಸಂಬಧಿಂಧಿತ ದೇವತೆಗಳಿಗೆ ಮುಟ್ಟಿಸುತ್ತಾನೆ. ದೇವತೆಗಳ ಸಂದೇಶವಾಹಕನಾಗಿ ಕೆಲಸ ನಿರ್ವಹಿಸುತ್ತಾನೆ. ಅಗ್ನಿಯು ಪೃಥ್ವಿಗೆ ಅಧಿಧಿಪತಿಯಾದ…

Read More

ಗುಜರಾತ್: ಸಚಿವ ಸಂಪುಟ ಪುನರ್ರಚನೆಗೂ ಮುನ್ನ ಗುಜರಾತ್ ಸರ್ಕಾರದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೊರತುಪಡಿಸಿ ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಅವರ ರಾಜೀನಾಮೆಗಳನ್ನು ಅಂಗೀಕರಿಸಿದ್ದು, ಇಂದು ತಡವಾಗಿ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರನ್ನು ಭೇಟಿ ಮಾಡಿ ಹೊಸ ಸಚಿವ ಸಂಪುಟ ರಚನೆಗೆ ಹಕ್ಕು ಮಂಡಿಸುವ ನಿರೀಕ್ಷೆಯಿದೆ. ರಾಜ್ಯದಲ್ಲಿನ ಪ್ರಮುಖ ರಾಜಕೀಯ ಬೆಳವಣಿಗೆಗಳ ಮುನ್ನ ಆಡಳಿತಾತ್ಮಕ ಕೂಲಂಕುಷ ಪರೀಕ್ಷೆಯ ಭಾಗವಾಗಿ ಈ ಕ್ರಮವನ್ನು ನೋಡಲಾಗುತ್ತಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನೇತೃತ್ವದ ಗುಜರಾತ್ ಸಚಿವ ಸಂಪುಟ ನಾಳೆ ವಿಸ್ತರಣೆಯಾಗಲಿದೆ. ಬಿಜೆಪಿಯ ಹಿರಿಯ ನಾಯಕರೊಬ್ಬರ ಪ್ರಕಾರ, ಸುಮಾರು 10 ಹೊಸ ಸಚಿವರು ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ, ಆದರೆ ಪುನರ್ರಚನೆಯಲ್ಲಿ ಪ್ರಸ್ತುತ ಸಚಿವರಲ್ಲಿ ಅರ್ಧದಷ್ಟು ಜನರನ್ನು ಬದಲಾಯಿಸಬಹುದು. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಸಚಿವ ಸಂಪುಟ ಶುಕ್ರವಾರ ಬೆಳಿಗ್ಗೆ 11:30 ಕ್ಕೆ ವಿಸ್ತರಣೆಯಾಗಲಿದೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ. ಪ್ರಸ್ತುತ ಗುಜರಾತ್ ಸಚಿವ ಸಂಪುಟವು ಮುಖ್ಯಮಂತ್ರಿ ಸೇರಿದಂತೆ 17 ಸಚಿವರನ್ನು ಒಳಗೊಂಡಿದೆ, ಎಂಟು ಮಂದಿ…

Read More

ಬೆಂಗಳೂರು: ನಗರದಲ್ಲಿ ಹಾಡಹಗಲೇ ವಿದ್ಯಾರ್ಥಿನಿಯನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವಂತ ಘಟನೆ ನಡೆದಿದೆ. ಬೆಂಗಳೂರಿನ ಶ್ರೀರಾಮಪುರ ರೈಲ್ವೆ ಟ್ರ್ಯಾಕ್ ಬಳಿಯಲ್ಲಿ ವಿದ್ಯಾರ್ಥಿನಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕತ್ತುಕೊಯ್ದು ಕೊಲೆ ಮಾಡಿರುವಂತ ದುಷ್ಕರ್ಮಿಗಳು ರೈಲ್ವೆ ಟ್ರ್ಯಾಕ್ ಬಳಿಯಲ್ಲಿ ವಿದ್ಯಾರ್ಥಿನಿಯ ಶವ ಎಸೆದು ಹೋಗಿದ್ದಾರೆ ಎನ್ನಲಾಗಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

Read More

ಬೆಂಗಳೂರು: ರಾಜ್ಯದ ಸರ್ಕಾರಿ ಜಾಗಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳಿಗೆ ಬ್ರೇಕ್ ಹಾಕುವಂತ ಮಹತ್ವದ ತೀರ್ಮಾನವನ್ನು ಇಂದು ನಡೆದಂತ ಸಿಎಂ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತಡತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಸರ್ಕಾರಿ ಜಾಗಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳಿಗೆ ಬ್ರೇಕ್ ಹಾಕುವಂತ ತೀರ್ಮಾನವನ್ನು ಕೈಗೊಂಡಿದೆ. ರಾಜ್ಯದ ಸರ್ಕಾರಿ ಜಾಗಗಳಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರುವಂತ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಖಾಸಗಿ ಸಂಘ-ಸಂಸ್ಥೆಗಳಿಗೆ ಪೂರ್ವಾನುಮತಿ ಕಡ್ಡಾಯಗೊಳಿಸಲಾಗಿದೆ. ಆರ್ ಎಸ್ ಎಸ್ ಕಾರ್ಯಚಟುವಟಿಕೆಗಳಿಗೆ ಬ್ರೇಕ್ ರಾಜ್ಯದಲ್ಲಿ ಆರ್ ಎಸ್ ಎಸ್ ಕಾರ್ಯಚಟುವಟಿಕೆಗೆ ಬ್ರೇಕ್ ಹಾಕಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಡಲು ನಿರ್ಭಂದ ವಿಧಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಒಂದು ವೇಳೆ ಮಾಡಲು ಪೂರ್ವಾನುಮತಿ ಕಡ್ಡಾಯಗೊಳಿಸಲಾಗಿದೆ. ಸಾರ್ವಜನಿಕ ಆಸ್ತಿ, ಸಾಂಸ್ಥಿಕ ಆಸ್ತಿ ಸರಿಯಾಗಿ ನಿರ್ವಹಣೆ ಮಾಡಬೇಕು. ಯಾವುದೇ ರೀತಿ ಟ್ರಸ್ ಪಾಸ್ ಆಗೋಕೆ ಬಿಡುವಂತಿಲ್ಲ. ಅನುಮತಿ ಪಡೆದು ಕಾರ್ಯಕ್ರಮ ಮಾಡಲು ಅವಕಾಶ. ಅವಕಾಶ ಇಲ್ಲದೆ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಕಾನೂನು ಸಚಿವ ಹೆಚ್.ಕೆ.ಪಾಟೀಲ್…

Read More

ಮಂಡ್ಯ: ಜಿಲ್ಲೆಯ ಹೆಗ್ಗುರುತುಗಳಲ್ಲಿ ಒಂದಾಗಿರುವ ಮೈಶುಗರ್ ಶಾಲೆಯನ್ನು ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಮಹತ್ವದ ಘೋಷಣೆ ಮಾಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ಶೀಘ್ರವೇ 10 ಕೋಟಿ ರೂ. ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಮಂಡ್ಯದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಈ ಶಾಲೆಯನ್ನು ಕೊಡುವುದು ಬೇಡ ಎಂದು ಹೇಳಿದ್ದೇನೆ. ಅಲ್ಲದೆ, ಶಾಲೆಯ ಅಭಿವೃದ್ಧಿಗೆ ನೆರವು ನೀಡುವ ಭರವಸೆ ನೀಡಿದ್ದೆ. ಅದರ ವಿಚಾರದಲ್ಲಿ ನಮ್ಮ ತಂಡವೊಂದು ಮಂಡ್ಯದಲ್ಲಿ ಕೆಲಸ ಮಾಡುತ್ತಿದೆ. ಯಾರು ಅದರ ಬಗ್ಗೆ ಲಘುವಾಗಿ ಮಾತನಾಡುವ ಅವಶ್ಯಕತೆ ಇಲ್ಲ. ಮೈಷುಗರ್ ಶಾಲೆಯಿಂದ ಈಗಾಗಲೇ 10 ಕೋಟಿ ರೂ. ಅನುದಾನಕ್ಕೆ ಅರ್ಜಿ ಕೊಟ್ಟಿದ್ದಾರೆ. ಸದ್ಯದಲ್ಲೆ ಆ ಹಣ ಬಿಡುಗಡೆಯಾಗಲಿದೆ. ಯಾವುದೇ ಅನುಮಾನ ಬೇಡ ಎಂದು ಕೇಂದ್ರ ಸಚಿವರು ಹೇಳಿದರು. ಕೆಲ ದಿನಗಳಿಂದ ಕಾರಣಾಂತರಗಳಿಂದ ಮಂಡ್ಯಕ್ಕೆ ಭೇಟಿ ಕೊಡಲು ಆಗಿರಲಿಲ್ಲ. ಆದರೂ ನಾನು ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು ಪ್ರತಿನಿತ್ಯ ಜಿಲ್ಲೆಯ ಮಾಹಿತಿ ಪಡೆಯುತ್ತಿದ್ದೆ. ಜಯಚಾಮರಾಜೇಂದ್ರ ಮಾರುಕಟ್ಟೆ ಮಳಿಗೆ ಉದ್ಘಾಟನೆಗೆ ಬಂದಿದ್ದೇನೆ.…

Read More

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಯಿಂದಲೇ ಬೆಂಗಳೂರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡಲು ನಕಾರ ವ್ಯಕ್ತಪಡಿಸಿರುವುದಾಗಿ ತಿಳಿದು ಬಂದಿದೆ. ಹೌದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಯಿಂದಲೇ ಸರ್ವೆಗೆ ನಕಾರ ಕೇಳಿ ಬಂದಿದೆ. ಸಮೀಕ್ಷೆಗೆ ಹೋದ್ರೆ ಮನೆ ಬಾಗಿಲನ್ನೇ ತೆಗೆಯದೇ ಮೌದ್ಗಿಲ್ ನಕಾರ ವ್ಯಕ್ತ ಪಡಿಸಿರೋದಾಗಿ ಹೇಳಲಾಗುತ್ತಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗದ ವಿಶೇಷ ಆಯುಕ್ತ ಮೌನೀಶ್ ಮೌದ್ಗಿಲ್ ಗಣತಿದಾರರು ಸಮೀಕ್ಷೆಗಾಗಿ ಮನೆಗೆ ತೆರಳಿದರೂ ಭಾಗಿಲು ತೆಗೆದಿಲ್ಲ. ಮೂರು ಬಾರಿ ಬೆಲ್ ಮಾಡಿ, ಕಾಲ್ ಮಾಡಿದ್ರೂ ಮೌದ್ಗಿಲ್ ಹೊರಗೆ ಬಂದಿಲ್ಲ. ಮನೆ ಬಳಇ ಮೂರು ಬಾರಿ ಹೋದರೂ ಮಾಹಿತಿ ನೀಡಲು ಮೌದ್ಗಿಲ್ ನಕಾರ ವ್ಯಕ್ತಪಡಿಸಿದ್ದಾರೆ. ಮೆಸೇಜ್ ಮಾಡಿದ್ರೂ ಪ್ರತಿಕ್ರಿಯಿಸುತ್ತಿಲ್ಲ ಅಂತ ಅಪ್ ಡೇಟ್ ಮಾಡಲು ಉತ್ತರಿಸಿದ್ದಾರೆ ಎನ್ನಲಾಗಿದೆ. https://kannadanewsnow.com/kannada/accused-arrested-for-threatening-minister-priyank-kharge/ https://kannadanewsnow.com/kannada/ban-on-private-events-in-government-school-premises-in-the-state-order-issued-in-2013-letter-goes-viral/

Read More