Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ರಾಜ್ಯದ ಜನತೆಗೆ ಶೀಘ್ರವೇ ಕರೆಂಟ್ ಶಾಕ್ ಸಿಗಲಿದೆ. ವಿದ್ಯುತ್ ದರ ಹೆಚ್ಚಳಕ್ಕಾಗಿ ಕೆ ಇ ಆರ್ ಸಿಗೆ ಎಸ್ಕಾಂಗಳು ಪ್ರಸ್ತಾವನೆಯನ್ನು ಸಲ್ಲಿಸಿವೆ ಎಂಬುದಾಗಿ ತಿಳಿದು ಬಂದಿದೆ. ಹೌದು. ಹಾಲು, ಬಸ್, ಮೆಟ್ರೋ ಟಿಕೆಟ್ ದರ ಏರಿಕೆ ಬೆನ್ನಲ್ಲೇ, ಈಗ ವಿದ್ಯುತ್ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಎಸ್ಕಾಂಗಳು ಪ್ರಸ್ತಾವನೆಯನ್ನು ಸಲ್ಲಿಸಿದ್ದಾವೆ. ವಿದ್ಯುತ್ ಖರೀದಿಗೆ ತಗಲುವ ವೆಚ್ಚ ಹಾಗೂ ಪೂರೈಕೆ, ಕಲ್ಲಿದ್ದಲು ಸಂಗ್ರಹಣೆಗೆ ತಗಲುವ ವೆಚ್ಚ ಸೇರಿದಂತೆ ಇತರೆ ಖರ್ಚುಗಳು ಹೆಚ್ಚಾಗಿದ್ದು, ಆರ್ಥಿಕ ಒತ್ತಡವನ್ನು ಸರಿ ದೂಗಿಸಲು ವಿದ್ಯುತ್ ದರ ಹೆಚ್ಚಳ ಎಂಬುದು ಎಸ್ಕಾಂಗಳ ನಿಲುವಾಗಿದೆ. ಈ ಹಿನ್ನಲೆಯಲ್ಲಿ ಪ್ರತಿ ಯೂನಿಟ್ ಗೆ 1 ರೂಪಾಯಿ 50 ಪೈಸೆ ಏರಿಕೆ ಮಾಡುವಂತೆ ಕೆ ಇ ಆರ್ ಸಿಗೆ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಲಾಗಿದೆ. ಒಂದು ವೇಳೆ ಸರ್ಕಾರ ಒಪ್ಪಿಗೆ ಸೂಚಿಸಿದ್ದೇ ಆದಲ್ಲಿ ಶೀಘ್ರವೇ ವಿದ್ಯುತ್ ದರ ಹೆಚ್ಚಳ ಆಗಲಿದೆ. ಅಂದಹಾಗೇ 2009ರಲ್ಲಿ ಪ್ರತಿ ಯೂನಿಟ್ ಗೆ…
ಬೆಂಗಳೂರು: ಕುಂಭ ಮೇಳದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು ರೈಲ್ವೆ ಮಂಡಳಿಯು ಶಿವಮೊಗ್ಗ ಟೌನ್ ಮತ್ತು ಬನಾರಸ್ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ರೈಲು ಸಂಖ್ಯೆ 06223 ಶಿವಮೊಗ್ಗ ಟೌನ್ – ಬನಾರಸ್ ವಿಶೇಷ ಎಕ್ಸ್ ಪ್ರೆಸ್ ರೈಲು ಶಿವಮೊಗ್ಗ ಟೌನ್ ನಿಂದ ಫೆಬ್ರವರಿ 22, 2025 ರಂದು ಸಂಜೆ 4:40 ಕ್ಕೆ ಹೊರಟು, ಫೆಬ್ರವರಿ 24, 2025 ರಂದು ಮಧ್ಯಾಹ್ನ 3:00 ಗಂಟೆಗೆ ಬನಾರಸ್ ತಲುಪಲಿದೆ. ಹಿಂತಿರುಗುವ ಪ್ರಯಾಣ, ರೈಲು ಸಂಖ್ಯೆ 06224 ಬನಾರಸ್ – ಶಿವಮೊಗ್ಗ ಟೌನ್ ವಿಶೇಷ ಎಕ್ಸ್ ಪ್ರೆಸ್ ರೈಲು ಬನಾರಸ್ ನಿಂದ ಫೆಬ್ರವರಿ 25, 2025 ರಂದು ಬೆಳಗಿನ ಜಾವ 1:30 ಕ್ಕೆ ಹೊರಟು, ಫೆಬ್ರವರಿ 27, 2025 ರಂದು ಬೆಳಿಗ್ಗೆ 6:45 ಕ್ಕೆ ಶಿವಮೊಗ್ಗ ಟೌನ್ ನಿಲ್ದಾಣಕ್ಕೆ ಆಗಮಿಸಲಿದೆ. ಈ ರೈಲು ಎರಡೂ ಮಾರ್ಗಗಳಲ್ಲಿ ಭದ್ರಾವತಿ, ಬಿರೂರು, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕ್ಯಾಂಟ್, ಹೊಸಪೇಟೆ,…
ಹುಬ್ಬಳ್ಳಿ: ದಕ್ಷಿಣ ರೈಲ್ವೆ ವಲಯದಲ್ಲಿ ಕಾರ್ಯಾಚರಣೆಯ ಕಾರಣಗಳಿಂದಾಗಿ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ-ತಮಿಳುನಾಡಿನ ರಾಮೇಶ್ವರಂ ನಿಲ್ದಾಣಗಳ ಮಧ್ಯೆ ವಾರಕ್ಕೆ ಒಂದು ಬಾರಿ ಸಂಚರಿಸುವ ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಆರು ಟ್ರಿಪ್ ಸಂಚಾರವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ. ಹುಬ್ಬಳ್ಳಿಯಿಂದ ಪ್ರತಿ ಶನಿವಾರ ಹೊರಡುವ ಹುಬ್ಬಳ್ಳಿ-ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು (ರೈಲು ಸಂಖ್ಯೆ 07355) ಮಾರ್ಚ್ 22, 29, ಏಪ್ರಿಲ್ 5, 12, 19 ಮತ್ತು 26 ರಂದು ರದ್ದಾಗಿರುತ್ತದೆ. ರಾಮೇಶ್ವರಂನಿಂದ ಪ್ರತಿ ಭಾನುವಾರ ಹೊರಡುವ ರಾಮೇಶ್ವರಂ-ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು (ರೈಲು ಸಂಖ್ಯೆ 07356) ಮಾರ್ಚ್ 23, 30, ಏಪ್ರಿಲ್ 6, 13, 20 ಮತ್ತು 27 ರಂದು ರದ್ದಾಗಿರುತ್ತದೆ. https://kannadanewsnow.com/kannada/hyderabad-three-injured-as-car-collides-with-car/ https://kannadanewsnow.com/kannada/lorry-driver-protests-against-bribery-by-rto-officials-heres-how-the-protest-is/
ತೆಲಂಗಾಣ: ಸಾರಿಗೆ ಅಧಿಕಾರಿಗಳು ಲಂಚಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಲಾರಿ ಮಾಲೀಕ ಅನಿಲ್ ಗೌಡ್ ಪೆದ್ದಪಲ್ಲಿ ಆರ್ ಟಿಒ ಕಚೇರಿ ಮುಂದೆ ನಾಟಕೀಯ ಪ್ರತಿಭಟನೆ ನಡೆಸಿದರು. ಅವರು ತಮ್ಮ ಲಾರಿಯ ಮೇಲೆ ಹತ್ತಿ ಆರ್ ಟಿಒ ಕಚೇರಿಯ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ಜೀವಂತ ವಿದ್ಯುತ್ ತಂತಿಗಳನ್ನು ಕಸಿದುಕೊಳ್ಳುವುದಾಗಿ ಬೆದರಿಕೆ ಹಾಕಿದರು. ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಲಾರಿ ಚಾಲಕ ತನ್ನ ಲಾರಿಯ ಮೇಲೆ ಲೈವ್ ವೈರ್ ಗಳನ್ನು ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಅವನು ತನ್ನ ಲಾರಿಯ ಮೇಲಿನಿಂದ ಕೋಪದಿಂದ ಹಣವನ್ನು ಎಸೆಯುವುದನ್ನು ಸಹ ಕಾಣಬಹುದು. https://twitter.com/TeluguScribe/status/1890966524929708354 ಆರ್ ಟಿಒ ಅಧಿಕಾರಿಗಳ ವಿರುದ್ಧ ದೂರು ಆರ್ಟಿಒ ಅಧಿಕಾರಿಗಳು ಪ್ರತಿ ಲಾರಿ ಮಾಲೀಕರಿಂದ ಮಾಸಿಕ 8,000 ರೂ.ಗಳ ಲಂಚವನ್ನು ಕೇಳುತ್ತಿದ್ದಾರೆ ಎಂದು ಅನಿಲ್ ಗೌಡ್ ಹೇಳಿದ್ದಾರೆ. ಅವರು ಪಾವತಿಸಲು ನಿರಾಕರಿಸಿದ್ದರಿಂದ, ಅಧಿಕಾರಿಗಳು ತಮ್ಮ ವಾಹನದ ವಿರುದ್ಧ ಸುಳ್ಳು ಪ್ರಕರಣ…
ಹೈದರಾಬಾದ್: ಜನಗಾಂವ್ನ ಸೂರ್ಯಪೇಟ್ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ನಿಲ್ಲಿಸಿದ್ದ ಎಂಟು ಬೈಕ್ಗಳಿಗೆ ಡಿಕ್ಕಿ ಹೊಡೆದು ಮೂವರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಓರ್ವ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಿಸಿಟಿವಿಯಲ್ಲಿ ಸೆರೆಯಾದ ಆಘಾತಕಾರಿ ಘಟನೆ ಫೆಬ್ರವರಿ 17 ರಂದು ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ, ಆರಂಭಿಕ ವರದಿಗಳ ಪ್ರಕಾರ, ಅಪಘಾತದ ಸಮಯದಲ್ಲಿ ಚಾಲಕ ಮದ್ಯದ ಅಮಲಿನಲ್ಲಿದ್ದನು ಎಂದು ಆರೋಪಿಸಲಾಗಿದೆ. ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಘಟನೆಯ ನಂತರ ಕುಡಿದು ವಾಹನ ಚಲಾಯಿಸುವುದರ ವಿರುದ್ಧ ಕಠಿಣ ಕ್ರಮಗಳ ಕರೆಗಳು ತೀವ್ರಗೊಂಡಿವೆ. ಸೂರ್ಯಪೇಟ್ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರು 8 ಬೈಕ್ ಗಳಿಗೆ ಡಿಕ್ಕಿ ಹೊಡೆದಿದೆ. https://twitter.com/jsuryareddy/status/1891352646768050432 https://kannadanewsnow.com/kannada/no-more-chikki-distribution-to-school-children-only-eggs-bananas-to-be-distributed-state-govt/ https://kannadanewsnow.com/kannada/if-you-make-rd-under-this-scheme-of-sbi-a-maturity-amount-of-rs-2-5-lakh-will-be-fixed/
ಬೆಂಗಳೂರು: ರಾಜ್ಯ ಸರ್ಕಾರದಿಂದ ಮಧ್ಯಾಹ್ನದ ಬಿಸಿಯೂಟ ಯೋಡನೆಯಾದಂತ ಮಧ್ಯಾಹ್ನದ ಉಪಹಾರ ಯೋಜನೆಯ ಅಡಿಯಲ್ಲಿ ಪೂರಕ ಪೌಷ್ಠಿಕ ಆಹಾರವಾಗಿ ಚಿಕ್ಕಿ, ಮೊಟ್ಟೆ, ಇಲ್ಲವೇ ಬಾಳೆಹಣ್ಣು ವಿತರಣೆಯನ್ನು ಶಾಲೆಗಳಲ್ಲಿ ಮಾಡಲಾಗುತ್ತಿತ್ತು. ಇದೀಗ ಈ ಯೋಜನೆಯ ಅಡಿಯಲ್ಲಿ ಚಿಕ್ಕಿ ವಿತರಣೆಗೆ ಬ್ರೇಕ್ ಹಾಕಿದೆ. ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ 2022-23ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆ (ಮಧ್ಯಾಹ್ನ ಉಪಹಾರ ಯೋಜನೆ) ರಡಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 1 ರಿಂದ 8ನೇ ತರಗತಿಗಳವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 46 ದಿನಗಳಿಗೆ ಪೂರಕ ಪೌಷ್ಠಿಕಾಂಶದ ರೂಪದಲ್ಲಿ ಮೊಟ್ಟೆ ಅಥವಾ ಬಾಳೆಹಣ್ಣು/ಚಿಕ್ಕಿಯನ್ನು ವಿತರಿಸಲು ಆದೇಶಿಸಲಾಗಿರುತ್ತದೆ. ಮೇಲೆ ಓದಲಾದ ಕ್ರಮಾಂಕ (2)ರ ಸರ್ಕಾರದ ಆದೇಶದಲ್ಲಿ 2023-24ನೇ ಸಾಲಿನ ಜುಲೈ ಆಯವ್ಯಯ ಭಾಷಣದ ಕಂಡಿಕೆ-91ರಲ್ಲಿನ ಘೋಷಣೆಯಂತೆ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1 ರಿಂದ 10ನೇ ತರಗತಿಗಳವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ, (ಪ್ರತಿ ವಿದ್ಯಾರ್ಥಿಯ ಒಂದು ದಿನದ…
ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ವ್ಯವಸ್ಥಿತವಾಗಿ ಉಳಿತಾಯ ಮಾಡಲು ಜನರನ್ನು ಉತ್ತೇಜಿಸಲು ‘ಹರ್ ಘರ್ ಲಖ್ಪತಿ’ ಆರ್ಡಿ ಯೋಜನೆಯನ್ನು ಪ್ರಾರಂಭಿಸಿದೆ. ಹೂಡಿಕೆದಾರರು ಈ ಯೋಜನೆಯಡಿ ನಿಗದಿತ ಮಾಸಿಕ ಕೊಡುಗೆಯನ್ನು ನೀಡುತ್ತಾರೆ ಮತ್ತು ಅದು ಪಕ್ವಗೊಳ್ಳುವ ಹೊತ್ತಿಗೆ, ಅವರು 1 ಲಕ್ಷದಿಂದ 5 ಲಕ್ಷ ರೂ.ಗಳವರೆಗೆ ಸಂಗ್ರಹಿಸುತ್ತಾರೆ. ಈ ಯೋಜನೆಯು ಖಾತರಿಯ ಆದಾಯ ಮತ್ತು ಆರ್ಥಿಕ ರಕ್ಷಣೆಯನ್ನು ನೀಡುತ್ತದೆ. ಈ ಯೋಜನೆಯೊಂದಿಗೆ ನೀವು 3, 5 ಮತ್ತು 7 ವರ್ಷಗಳಲ್ಲಿ ಅಂದಾಜು 2 ಲಕ್ಷ ಮತ್ತು 5 ಲಕ್ಷ ರೂ.ಗಳ ಮೆಚ್ಯೂರಿಟಿ ಮೊತ್ತವನ್ನು ಹೇಗೆ ಗಳಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಮುಂದೆ ಓದಿ. ಗ್ರಾಹಕರಿಗೆ ವೈಯಕ್ತಿಕಗೊಳಿಸಿದ ರಿಕರಿಂಗ್ ಡಿಪಾಸಿಟ್ ಪರಿಹಾರವನ್ನು ಒದಗಿಸಲು ಎಸ್ಬಿಐ “ಹರ್ ಘರ್ ಲಖ್ಪತಿ” ಯೋಜನೆಯನ್ನು ಪ್ರಾರಂಭಿಸಿದೆ. ಸಣ್ಣ ಮೊತ್ತದ ಮಾಸಿಕ ಠೇವಣಿಗಳನ್ನು ಮಾಡುವ ಮೂಲಕ, ಗ್ರಾಹಕರು ತಮ್ಮ ಖಾತೆಗಳಲ್ಲಿ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಪಡೆಯಬಹುದು. ಠೇವಣಿ ಪಕ್ವವಾದಾಗ “ಲಕ್ಷಪತಿ” ಆಗಬಹುದು. ಯಾವುದೇ ನಿವಾಸಿಯು…
ಬೆಂಗಳೂರು: ರಾಜ್ಯ ಸರ್ಕಾರದಿಂದ ಮಧ್ಯಾಹ್ನದ ಬಿಸಿಯೂಟ ಯೋಡನೆಯಾದಂತ ಮಧ್ಯಾಹ್ನದ ಉಪಹಾರ ಯೋಜನೆಯ ಅಡಿಯಲ್ಲಿ ಪೂರಕ ಪೌಷ್ಠಿಕ ಆಹಾರವಾಗಿ ಚಿಕ್ಕಿ, ಮೊಟ್ಟೆ, ಇಲ್ಲವೇ ಬಾಳೆಹಣ್ಣು ವಿತರಣೆಯನ್ನು ಶಾಲೆಗಳಲ್ಲಿ ಮಾಡಲಾಗುತ್ತಿತ್ತು. ಇದೀಗ ಈ ಯೋಜನೆಯ ಅಡಿಯಲ್ಲಿ ಚಿಕ್ಕಿ ವಿತರಣೆಗೆ ಬ್ರೇಕ್ ಹಾಕಿದೆ. ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ 2022-23ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆ (ಮಧ್ಯಾಹ್ನ ಉಪಹಾರ ಯೋಜನೆ) ರಡಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 1 ರಿಂದ 8ನೇ ತರಗತಿಗಳವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 46 ದಿನಗಳಿಗೆ ಪೂರಕ ಪೌಷ್ಠಿಕಾಂಶದ ರೂಪದಲ್ಲಿ ಮೊಟ್ಟೆ ಅಥವಾ ಬಾಳೆಹಣ್ಣು/ಚಿಕ್ಕಿಯನ್ನು ವಿತರಿಸಲು ಆದೇಶಿಸಲಾಗಿರುತ್ತದೆ. ಮೇಲೆ ಓದಲಾದ ಕ್ರಮಾಂಕ (2)ರ ಸರ್ಕಾರದ ಆದೇಶದಲ್ಲಿ 2023-24ನೇ ಸಾಲಿನ ಜುಲೈ ಆಯವ್ಯಯ ಭಾಷಣದ ಕಂಡಿಕೆ-91ರಲ್ಲಿನ ಘೋಷಣೆಯಂತೆ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1 ರಿಂದ 10ನೇ ತರಗತಿಗಳವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ, (ಪ್ರತಿ ವಿದ್ಯಾರ್ಥಿಯ ಒಂದು ದಿನದ…
ಬೆಂಗಳೂರು: ರಾಜ್ಯ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್ ಆಗಿದೆ. ಮಾರ್ಚ್ 7ರಂದು ರಾಜ್ಯ ಬಜೆಟ್ ಮಂಡಿಸುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದಂತ ಅವರು ಮಾರ್ಚ್ 7ರಂದು ಬಜೆಟ್ ಮಂಡಿಸಲಿದ್ದೇನೆ. ಮಾರ್ಚ್.3ರಿಂದ ವಿಧಾನ ಮಂಡಲದ ಬಜೆಟ್ ಅಧಿವೇಶನ ಆರಂಭವಾಗಲಿದೆ ಎಂದರು. ಮಾರ್ಚ್.3ರಂದು ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಆ ಬಳಿಕ ಮಾರ್ಚ್.7ರಂದು ರಾಜ್ಯ ಬಜೆಟ್ ಮಂಡಿಸುವುದಾಗಿ ತಿಳಿಸಿದರು.
ಮಂಡ್ಯ: ಮುಖ್ಯಮಂತ್ರಿ ಸಿದ್ಧರಾಮಯ್ಯ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಸಹಿಯನ್ನೇ ನಕಲು ಮಾಡಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ಪೀಕಿದ್ದಂತ ವಂಚಕ ವೆಂಕಟೇಶನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ವೆಂಕಟೇಶ ಸರ್ಕಾರಿ ಕೆಲಸ ಕೊಡಿಸುವುದಾಗಿ ಹಲವರಿಗೆ ನಂಬಿಸಿದ್ದನು. ಅಲ್ಲದೇ ಅವರಿಂದ ಲಕ್ಷಾಂತರ ರೂ ಹಣವನ್ನು ಪಡೆದು, ನಕಲಿ ಸಹಿ ಮಾಡಿದಂತ ನೇಮಕಾತಿ ಆದೇಶ ಪತ್ರ ನೀಡಿ ವಂಚಿಸಿದ್ದನು. ವಂಚನೆಗೆ ಒಳಗಾದಂತ ಅಭ್ಯರ್ಥಿಗಳು ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದಂತ ಪೊಲೀಸರು ಸಿಎಂ ಸಿದ್ಧರಾಮಯ್ಯ ಹಾಗೂ ರಾಜ್ಯಪಾಲರ ಹೆಸರಿನಲ್ಲಿ ನೀಡಿರುವಂತ ನಕಲಿ ಆದೇಶ ಪತ್ರವನ್ನು ಕಂಡು ಶಾಕ್ ಆಗಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದಂತ ಮಂಡ್ಯದ ಪೂರ್ವ ಠಾಣೆಯ ಪೊಲೀಸರು, ಸತತ ಮೂರು ನಾಲ್ಕು ದಿನಗಳಿಂದ ಕಾರ್ಯಾಚರಣೆ ನಡೆಸಿ, ಕೊನೆಗೂ ವಂಚಕ ವೆಂಕಟೇಶನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಮಂಡ್ಯದ ಜೆಎಂಎಫ್ ಸಿ ಕೋರ್ಟ್ ಗೆ ಹಾಜರುಪಡಿಸಲಾಗಿದೆ. https://kannadanewsnow.com/kannada/delhis-new-cm-likely-to-take-oath-at-ramlila-maidan-on-feb-20/ https://kannadanewsnow.com/kannada/breaking-gold-prices-rise-to-rs-550-per-10-grams-today-rise-gold-price-hike/ https://kannadanewsnow.com/kannada/centre-to-take-major-steps-for-crowd-control-at-railway-stations-ai-technology-to-be-used-report/











