Author: kannadanewsnow09

ಹರಿಹರ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಮೋದಿ ವಿರೋಧಿ ಅಲೆ ಜೋರಾಗಿದ ಎನ್ನುವುದನ್ನು ಸ್ವತಃ ಬಿಜೆಪಿಯವರೇ ಗುರುತಿಸಿದ್ದಾರೆ. ಆದ್ದರಿಂದ ಈ ಬಾರಿ ಮೋದಿ ಮತ್ತೆ ಪ್ರಧಾನಿಯಾಗಲು ಸಾಧ್ಯವಿಲ್ಲ ಹಾಗೂ ಬಿಜೆಪಿಗೆ ಸೋಲು ಖಂಡಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು. ಇಂದು ದಾವಣಗೆರೆ ಲೋಕಸಭಾ ಚುನಾವಣೆಯ ಪ್ರಜಾಧ್ವನಿ-02 ಕಾರ್ಯಕ್ರಮದಲ್ಲಿ ಭಾಗವಹಿಸಿ ಪಕ್ಷದ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ಪರವಾಗಿ ಮತದಾರರಲ್ಲಿ ಮತ ಯಾಚಿಸಿ ಮಾತನಾಡಿದರು. ಬಿಜೆಪಿಯ 25 ಸಂಸದರು ರಾಜ್ಯಕ್ಕಾಗಿರುವ ಅನ್ಯಾಯವನ್ನು ಎಂದೂ ಪ್ರಶ್ನಿಸಲಿಲ್ಲ. ಅವರಲ್ಲಿ ಹಲವರನ್ನು ಈ ಬಾರಿ ಬಿಜೆಪಿಯವರೇ ಕೈಬಿಟ್ಟಿದ್ದಾರೆ. ಈ ಹಿಂದೆ ಇದ್ದ ಬಿಜೆಪಿ ಸಂಸದರು ಗೆಲ್ಲಲು ಸಾಧ್ಯವಿಲ್ಲ ಎಂದು ತಿಳಿದೇ , ಬಿಜೆಪಿಯವರೇ ಈ ಬಾರಿ ಹಲವರನ್ನು ಕೈಬಿಟ್ಟಿದ್ದಾರೆ ಎಂದರು. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ ಹರಿಹರ ಪ್ರದೇಶದಲ್ಲಿ ಕುಡಿಯುವ ನೀರಿನ ಯೋಜನೆ ಹಾಗೂ ಸುಮಾರು 5 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರನ್ನು ಒದಗಿಸುವ ಏತ ನೀರಾವರಿ ಯೋಜನೆಗೆ ಚುನಾವಣೆ ನಂತರ ಚಾಲನೆ…

Read More

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಭಾನುವಾರ (ಮೇ 05) 150 ಕ್ಯಾಚ್ ಗಳನ್ನು ಪೂರೈಸಿದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಎಂಎಸ್ ಧೋನಿ ಪಾತ್ರರಾಗಿದ್ದಾರೆ. ಧರ್ಮಶಾಲಾದ ಎಚ್ಪಿಸಿಎ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ವೇಳೆ ಜಿತೇಶ್ ಶರ್ಮಾ ಅವರ ಕ್ಯಾಚ್ ಪಡೆದ ನಂತರ ಧೋನಿ ಈ ಸಾಧನೆ ಮಾಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ವಿಕೆಟ್ ಕೀಪರ್ ಆಗಿ ಅತಿ ಹೆಚ್ಚು ಕ್ಯಾಚ್ಗಳನ್ನು ಪಡೆದ ದಾಖಲೆ ಧೋನಿ ಈಗಾಗಲೇ ಹೆಸರಿನಲ್ಲಿದೆ. ಸಿಎಸ್ಕೆ ಮಾಜಿ ನಾಯಕ ವಿಕೆಟ್ ಕೀಪರ್ ಆಗಿ 150 ಕ್ಯಾಚ್ಗಳು ಮತ್ತು 192 ಔಟ್ಗಳನ್ನು ಹೊಂದಿದ್ದಾರೆ. ಐಪಿಎಲ್ನಲ್ಲಿ ಅತ್ಯಂತ ಯಶಸ್ವಿ ವಿಕೆಟ್ ಕೀಪರ್ ಆಗಿರುವ ದಿನೇಶ್ ಕಾರ್ತಿಕ್ 177 ಡಿಸ್ಮಿಸಲ್ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಐಪಿಎಲ್ನಲ್ಲಿ ಅತಿ ಹೆಚ್ಚು ಕ್ಯಾಚ್ಗಳನ್ನು ಪಡೆದ ವಿಕೆಟ್ ಕೀಪರ್ಗಳು: ಎಂಎಸ್ ಧೋನಿ – 150 ದಿನೇಶ್ ಕಾರ್ತಿಕ್ – 141 ವೃದ್ಧಿಮಾನ್ ಸಹಾ – 119 ಐಪಿಎಲ್ನಲ್ಲಿ ಸಿಎಸ್ಕೆ…

Read More

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ, ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವಂತ ಸಂತ್ರಸ್ತೆಯರ ನೆರವಿಗಾಗಿ, ಎಸ್ಐಟಿಯಿಂದ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಇಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಎಸ್ಐಟಿ ಮುಖ್ಯಸ್ಥ ಬಿ.ಕೆ ಸಿಂಗ್ ಅವರು, ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ಕುರಿತ ತನಿಖೆಗಾಗಿ ಎಸ್ಐಟಿ ತಂಡವನ್ನು ಈಗಾಗಲೇ ಸರ್ಕಾರದ ನಿರ್ದೇಶದಂತೆ ರಚಿಸಲಾಗಿದೆ. ಸಂತ್ರಸ್ತೆಯರ ನೆರವಿಗಾಗಿ 6360938947 ಸಹಾಯವಾಣಿ ಸಂಖ್ಯೆ ಆರಂಭಿಸಿರೋದಾಗಿ ತಿಳಿಸಿದ್ದಾರೆ. ಇನ್ನೂ ಸಂತ್ರಸ್ತೆಯರು ಹಾಗೂ ಅವರಿಗೆ ಸಂಬಂಧಪಟ್ಟಂತ ವ್ಯಕ್ತಿಗಳು 6360938947ಗ ಸಹಾಯವಾಣಿಗೆ ಕರೆ ಮಾಡಿ, ದೂರು ನೀಡಬಹುದಾಗಿದೆ. ಸಂತ್ರಸ್ತೆಯರಿಗೆ ಅಗತ್ಯವಿರುವಂತ ಕಾನೂನು ನೆರವು, ರಕ್ಷಣೆ ಹಾಗೂ ಇತರೆ ಸಹಾಯ ಮಾಡಲು ನಾವು ಸಿದ್ಧರಿದ್ದೇವೆ. ಕೃತ್ಯದ ಬಗ್ಗೆ ದೂರು ನೀಡುವವರ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ. https://kannadanewsnow.com/kannada/congress-mla-ravi-ganiga-reacts-to-hd-revannas-arrest/ https://kannadanewsnow.com/kannada/congress-insulted-ambedkar-by-defeating-him-basavaraj-bommai/

Read More

ಹಾವೇರಿ: ಸ್ವಾತಂತ್ರ್ಯ ಹೋರಾಟದಲ್ಲಿ ದಲಿತರ ಪಾತ್ರ ಬಹಳ ದೊಡ್ಡದಿದೆ. ಯಾವಾಗ ದಲಿತರು ಹಿಂದುಳಿದವರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರೋ ಬ್ರಿಟೀಷರು ತಮಗೆ ಉಳಿಗಾಲವಿಲ್ಲ ಎಂದು ತೀರ್ಮಾನಿಸಿದರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರು ಇಂದು ಹಾವೇರಿಯಲ್ಲಿ ಛಲವಾದಿ ಸಮುದಾಯದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮೊದಲಿನಿಂದಲೂ ಅವಮಾನ ಮಾಡುತ್ತ ಬಂದಿದೆ. ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದರು. ಮಹಾತ್ಮಾ ಗಾಂಧಿಜಿ ಪಕ್ಕ ಅಂಬೇಡ್ಕರ್ ಇರಬಾರದು ಅಂತ ಅವರ ಅಂತ್ಯ ಸಂಸ್ಕಾರಕ್ಕೆ ದೆಹಲಿಯಲ್ಲಿ ಜಾಗ ನೀಡದೇ ಅವಮಾನ ಮಾಡಿದವರು ಕಾಂಗ್ರೆಸ್ ನವರು ಎಂದು ಹೇಳಿದರು. ಭಾರತ ರತ್ನ ಕೊಟ್ಟಿರಲಿಲ್ಲ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ 90 ರ ದಶಕದವರೆಗೂ ಭಾರತ ರತ್ನ ಕೊಟ್ಟಿರಲಿಲ್ಲ. ಇಂದಿರಾಗಾಂಧಿ, ರಾಜೀವ್ ಗಾಂಧಿಗೆ ಭಾರತ ರತ್ನ ಕೊಟ್ಟದ್ದರು. ಆದರೆ, ಅಂಬೇಡ್ಕರ್ ಅವರಿಗೆ ಕೊಟ್ಟಿರಲಿಲ್ಲ. ವಿ.ಪಿ. ಸಿಂಗ್ ಸರ್ಕಾರ ಅಂಬೇಡ್ಕರ್…

Read More

ಬೆಂಗಳೂರು: ಮಹಿಳೆ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದರು. ಬಂಧನದ ಬಳಿಕ ಸುದ್ದಿಗಾರರೊಂದಿಗೆ ಮೊದಲ ಬಾರಿಗೆ ಮಾತನಾಡಿದಂತ ಅವರು, ಏನು ಹೇಳಿದ್ರು ಅಂತ ಮುಂದೆ ಓದಿ. ಇಂದು ನ್ಯಾಯಾಧೀಶರ ಎದುರು ಹಾಜರುಪಡಿಸೋ ಮೊದಲು ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸೋದಕ್ಕಾಗಿ ಬೌರಿಂಗ್ ಆಸ್ಪತ್ರೆಗೆ ಎಸ್ಐಟಿ ಅಧಿಕಾರಿಗಳು ಕರೆದೊಯ್ದಿದ್ದರು. ಈ ವೇಳೆ ಮೊದಲಿಗೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು,  ನನ್ನ ಮೇಲೆ ಕಿಡ್ನ್ಯಾಪ್ ಕೇಸ್ ಹಾಕಿದ್ದಾರೆ. 40 ವರ್ಷ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಯಾವುದೇ ರೀತಿಯ ಪುರಾವೆಗಳು ಇಲ್ಲದಿದ್ದರೂ ಅನಾವಶ್ಯಕವಾಗಿ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ನನ್ನ ವಿರುದ್ಧದ ಆರೋಪಗಳೆಲ್ಲವೂ ಸುಳ್ಳು. ಇದೊಂದು ದುರದ್ದೇಶಪೂರ್ವಕ ಬಂಧನವಾಗಿದೆ. ಯಾವುದೇ ಸಾಕ್ಷಿಗಳು ಸಹ ಇವರ ಬಳಿ ಇಲ್ಲ ಎಂದರು. ಏಪ್ರಿಲ್‌.28ರಂದು ನಮ್ಮ ವಿರುದ್ಧ ಕೇಸ್‌ ದಾಖಲಿಸಿದರು. ಆಗ ನಮ್ಮ ಮೇಲೆ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲವೆಂದು ಪುನಃ ಮೇ.2ರಂದು ನನ್ನ ಮೇಲೆ ಸಾಕ್ಷಿಗಳನ್ನು…

Read More

ಬೆಂಗಳೂರು: ನನ್ನ ಬಂಧನ ರಾಜಕೀಯ ಷಡ್ಯಂತ್ರವಾಗಿದೆ. ಇದರ ಹೊರತಾಗಿ ಅಪಹರಣ ಪ್ರಕರಣದಲ್ಲಿ ಬೇರೆ ಏನೂ ಇಲ್ಲ ಎಂಬುದಾಗಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಆಕ್ರೋಶ ಹೊರ ಹಾಕಿದ್ದಾರೆ. ಮಹಿಳೆ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರನ್ನು ಬಂಧಿಸಲಾಗಿತ್ತು. ನಿನ್ನೆ ಬಂಧನದ ಬಳಿಕ ಅವರನ್ನು ವೈದ್ಯಕೀಯ ಪರೀಕ್ಷೆಗೂ ಒಳಪಡಿಸಲಾಗಿತ್ತು. ಇಂದು ಮತ್ತೆ ನ್ಯಾಯಾಧೀಶರ ಮುಂದೆ ಹಾಜರುಪಡಿಸೋ ಮುನ್ನ ಅವರನ್ನು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸೋ ಸಲುವಾಗಿ ಎಸ್ಐಟಿ ಅಧಿಕಾರಿಗಳು ಕರೆತಂದಿದ್ದರು. ಬೌರಿಂಗ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗಾಗಿ ಹೆಚ್.ಡಿ ರೇವಣ್ಣ ಅವರನ್ನು ಕರೆತಂದ ನಂತ್ರ, ಸುದ್ದಿಗಾರರೊಂದಿಗೆ ಮಾತನಾಡಿ ಮೊದಲ ಪ್ರತಿಕ್ರಿಯೆ ನೀಡಿದಂತ ಅವರು, ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸಿದ್ದಾರೆ. ಯಾವುದೇ ಪುರಾವೆಗಳು ಇಲ್ಲ, ದುರುದ್ದೇಶದಿಂದ ಅರೆಸ್ಟ್ ಮಾಡಿದ್ದಾರೆ ಎಂಬುದಾಗಿ ಆಕ್ರೋಶವನ್ನು ಹೊರಹಾಕಿದ್ದಾರೆ ಎಂಬುದಾಗಿ ಹೇಳಿದ್ದಾರೆ ಎನ್ನಲಾಗಿದೆ. https://kannadanewsnow.com/kannada/kidnapping-case-what-hd-revanna-said-during-sit-interrogation/ https://kannadanewsnow.com/kannada/breakingicse-isc-class-10-12-results-to-be-declared-tomorrow/

Read More

ಬೆಂಗಳೂರು: ಮಹಿಳೆ ಕಿಡ್ನ್ಯಾಪ್ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳಿಂದ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರನ್ನು ಬಂಧಿಸಲಾಗಿದೆ. ಈ ಬಳಿಕ ಅವರನ್ನು ವಿಚಾರಣೆಗೆ ಇಂದು ಒಳಪಡಿಸಿದಾಗ ಏನು ಹೇಳಿದ್ರು ಅಂತ ಮುಂದೆ ಓದಿ. ನಿನ್ನೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು ನಿನ್ನೆ ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಬಂಧಿಸಿದ ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತ್ರ, ಇಂದು ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಎಸ್ಐಟಿ ಅಧಿಕಾರಿಗಳು ಕೇಳಿದಂತ ಪ್ರಶ್ನೆಗಳಿಗೆ ಸೂಕ್ತ ರೀತಿಯಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಉತ್ತರಿಸಿಲ್ಲ ಎನ್ನಲಾಗುತ್ತಿದೆ. ಎಸ್ಐಟಿ ಅಧಿಕಾರಿಗಳು ಸಂತ್ರಸ್ತೆಯ ಬಗ್ಗೆ ಕೇಳಿದಂತ ಪ್ರಶ್ನೆಗಳಿಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು, ಸಂತ್ರಸ್ತೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಮ್ಮ ಮನೆಯಲ್ಲಿ ಸಾಕಷ್ಟು ಜನ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ ಎನ್ನಲಾಗುತ್ತಿದೆ. ಸಂತ್ರಸ್ತೆಯ ಮಗನ ಹೇಳಿಕೆಯನ್ನು ಹೇಗೆ ನಂಬಲು ಸಾಧ್ಯ? ನಾನೇ ಕರೆದುಕೊಂಡು ಬರಲು ಹೇಳಿದ್ದೇನೆಂದು ಸಾಕ್ಷಿ ಏನಿದೆ ಎಂಬುದಾಗಿ ಮಾಜಿ ಸಚಿವ ಹೆಚ್.ಡಿ…

Read More

ಶಿವಮೊಗ್ಗ: ಮಹಿಳೆ ಅಪಹರಣ ಪ್ರಕರಣದಲ್ಲಿ ಶಾಸಕ ಹೆಚ್.ಡಿ ರೇವಣ್ಣ ಬಂಧನವಾಗಿದೆ. ಈ ಬಂಧನದ ಬಗ್ಗೆ ಕಾಂಗ್ರೆಸ್ ಶಾಸಕ ರವಿ ಗಣಿಗ ಅವರು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಅದೇನು ಅಂತ ಮುಂದೆ ಓದಿ. ಈ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಶಾಸಕ ರವಿ ಗಣಿಗ ಅವರು, ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಬಂಧನದ ಹಿಂದೆ ಬಿಜೆಪಿಯ ಷಡ್ಯಂತ್ರವಿದೆ ಎಂಬುದಾಗಿ ಗಂಭೀರ ಆರೋಪ ಮಾಡಿದ್ದಾರೆ. ಈ ಹಿಂದೆ ಜನಾರ್ಧನರೆಡ್ಡಿಯನ್ನು ನಿಯಂತ್ರಿಸೋ ಹುನ್ನಾರ ನಡೆಸಿದ್ದರು. ಅದರಂತೆ ಸಣ್ಣಪುಟ್ಟ ಪಕ್ಷಗಳನ್ನು ಮುಗಿಸೋದಕ್ಕೆ ಬಿಜೆಪಿ ಪಕ್ಷದವರು ಹೊರಟಿದ್ದಾರೆ ಎಂದರು. ಇದೇ ವೇಳೆಯಲ್ಲಿ ಬಿಜೆಪಿ ಮುಖಂಡ ದೇವರಾಜೇಗೌಡ ಅವರ ಬಗ್ಗೆ ಮಾತನಾಡಿದಂತ ಅವರು, ಹಳೇ ಮೈಸೂರು ಭಾಗದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ನೆಲೆಯಿಲ್ಲ. ಹೀಗಾಗಿ ಜೆಡಿಎಸ್ ಮೂಲಕ ಕಾಂಗ್ರೆಸ್ ಅನ್ನು ಟಾರ್ಗೆಟ್ ಮಾಡಿಕೊಂಡಿದೆ. ಈ ಹಿಂದೆ ಜನಾರ್ಧನರೆಡ್ಡಿ ಮೂಲಕ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರನ್ನು ಬೈಯ್ಯಿಸಿದ್ದರು. ಈಗ ದೇವರಾಜೇಗೌಡ ಮೂಲಕ ಕಾಂಗ್ರೆಸ್ ಪಕ್ಷದ ವಿರುದ್ಧ ಆರೋಪಿಸಲಾಗುತ್ತಿದೆ ಎಂದು ಕಿಡಿಕಾರಿದರು.…

Read More

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಆ ಬಳಿಕ ಅವರು ವಿದೇಶಕ್ಕೆ ಪರಾರಿಯಾಗಿದ್ದರು. ಇಂತಹ ಅವರು ಇಂದು ಸಂಜೆ 6.30ಕ್ಕೆ ದುಬೈನಿಂದ ಬೆಂಗಳೂರಿಗೆ ಬರಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಂಸದ ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಹಾರಿದ್ದರು. ಬೆಂಗಳೂರಿನಿಂದ ದುಬೈಗೆ ತೆರಳಿದ್ದರು. ಅವರು ಸಲ್ಲಿಸಿದ್ದಂತ ನಿರೀಕ್ಷಣಾ ಜಾಮೀನು ವಜಾಗೊಂಡ ನಂತ್ರ, ಅವರಿಗೆ ಸಂಕಷ್ಟ ಎದುರಾಗಿತ್ತು. ಅಲ್ಲದೇ ಕುಟುಂಬಸ್ಥರು ಬೇಲ್ ಸಿಗೋದು ಬಿಡೋದು ನೋಡೋಣ, ಮೊದಲು ನೀನು ಬೆಂಗಳೂರಿಗೆ ಬಾ ಎಂಬುದಾಗಿ ಸೂಚಿಸಿದ್ದರು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರು ದುಬೈನಿಂದ ಬೆಂಗಳೂರಿಗೆ ಸಂಜೆ 6.30ಕ್ಕೆ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಅವರು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ, ಅವರನ್ನು ಬಂಧಿಸೋದಕ್ಕೆ ಪೊಲೀಸರು ಕಾಯುತ್ತಿದ್ದಾರೆ. ಪೊಲೀಸರು ಪ್ರಜ್ವಲ್ ರೇವಣ್ಣ ಅವರನ್ನು ವಶಕ್ಕೆ ಪಡೆದ ನಂತ್ರ, ಎಸ್ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.…

Read More

ನವದೆಹಲಿ: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್ಸಿಇ) ತನ್ನ ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್ (ಐಸಿಎಸ್ಇ ಅಥವಾ 10 ನೇ ತರಗತಿ) ಮತ್ತು ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ (ಐಎಸ್ಸಿ ಅಥವಾ 12 ನೇ ತರಗತಿ) ಅಂತಿಮ ಪರೀಕ್ಷೆಗಳ ಫಲಿತಾಂಶಗಳನ್ನು ಮೇ 6 ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಪ್ರಕಟಿಸಲಾಗುವುದು ಎಂದು ಭಾನುವಾರ ತಿಳಿಸಿದೆ. ವಿದ್ಯಾರ್ಥಿಗಳು ಐಸಿಎಸ್ಇ ಮತ್ತು ಐಎಸ್ಸಿ ವರ್ಷ 2024 ಪರೀಕ್ಷೆಯ ಫಲಿತಾಂಶಗಳನ್ನು ಕೌನ್ಸಿಲ್ನ ವೆಬ್ಸೈಟ್ಗಳು, cisce.org ಮತ್ತು results.cisce.org ಈ ಕೆಳಗಿನ ಮಾಹಿತಿಯನ್ನು ಒದಗಿಸುವ ಮೂಲಕ ಪರಿಶೀಲಿಸಬಹುದು: ಯೂನಿಕ್ಯೂ ID ಇಂಡೆಕ್ಸ್ ನಂಬರ್ ಕ್ಯಾಪ್ಚಾ (ಪರದೆಯ ಮೇಲೆ ತೋರಿಸಿರುವಂತೆ). ಮಂಡಳಿಯ ವೆಬ್ಸೈಟ್ಗಳ ಜೊತೆಗೆ, ಐಸಿಎಸ್ಇ ಮತ್ತು ಐಎಸ್ಸಿಯ ಫಲಿತಾಂಶಗಳು ಡಿಜಿಲಾಕರ್ ಅಪ್ಲಿಕೇಶನ್ ಮತ್ತು ವೆಬ್ಸೈಟ್ನಲ್ಲಿ ಲಭ್ಯವಿರುತ್ತವೆ ಎಂದು ಕೌನ್ಸಿಲ್ ತಿಳಿಸಿದೆ. https://kannadanewsnow.com/kannada/us-warns-uk-of-covid-19-leak-from-wuhan-lab/ https://kannadanewsnow.com/kannada/dk-shivakumar-slaps-congress-worker-for-keeping-hand-on-his-shoulder/

Read More