Subscribe to Updates
Get the latest creative news from FooBar about art, design and business.
Author: kannadanewsnow09
ಶಿವಮೊಗ್ಗ: ನಗರದಲ್ಲಿ ಇಂದು ಲೋಕಸಭಾ ಚುನಾವಣೆಗೆ 2ನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಬೆಳಿಗ್ಗೆಯಿಂದ ಹುಮ್ಮಸ್ಸಿನಿಂದಲೇ ಜಿಲ್ಲೆಯಲ್ಲಿ ಮತದಾರರು ಮತವನ್ನು ಚಲಾಯಿಸುತ್ತಿದ್ದಾರೆ. ಮಧ್ಯಾಹ್ನ 3 ಗಂಟೆಯವರೆಗೆ ದಾಖಲೆಯ ಶೇ.58.04% ಮತದಾನವಾಗಿದೆ. ಈ ಬಗ್ಗೆ ಜಿಲ್ಲಾ ಚುನಾವಣಾ ಆಯೋಗದಿಂದ ಮಾಹಿತಿ ನೀಡಲಾಗಿದ್ದು, ಜಿಲ್ಲೆಯಲ್ಲಿ ಯಾವುದೇ ಅಡೆತಡೆಯಿಲ್ಲದೇ ಲೋಕಸಭಾ ಚುನಾವಣೆಗೆ 2ನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಕೆಲವೆಡೆ ಅಷ್ಟೇ ತಾಂತ್ರಿಕ ಸಮಸ್ಯಯಿಂದ ಇವಿಎಂ ಸ್ಥಗಿತಗೊಂಡಿತ್ತು. ಅದನ್ನು ಬದಲಾಯಿಸಿ, ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದಿದೆ. ಮಧ್ಯಾಹ್ನ 3:00 ಗಂಟೆ ವರೆಗೆ ಚಲಾವಣೆಯಾದ ಮತದಾನದ ಶೇಕಡವಾರು ವಿವರ ಶಿವಮೊಗ್ಗ ಲೋಕಸಭಾ ಕ್ಷೇತ್ರ: 58.04% ಒಟ್ಟು ಮತಗಳು: 1752885 ಚಲಾವಣೆ ಮತಗಳು:1014226 https://kannadanewsnow.com/kannada/patiraya-casts-his-vote-for-bjp-candidate-do-you-know-where/ https://kannadanewsnow.com/kannada/yogesh-gowda-murder-case-hc-allows-mla-vinay-kulkarni-to-cast-his-vote/
ದಾವಣಗೆರೆ: ಚುನಾವಣಾ ಮಾರ್ಗಸೂಚಿಯಂತೆ ಒಬ್ಬರ ಮತವನ್ನು ಮತ್ತೊಬ್ಬರು ಹಾಕುವಂತಿಲ್ಲ. ಒಂದು ವೇಳೆ ಹಾಕಿದ್ರೆ ಅದು ಚುನಾವಣಾ ಮಾರ್ಗಸೂಚಿ ಉಲ್ಲಂಘನೆಯೇ ಆಗಲಿದೆ. ಹೀಗಿದ್ದರೂ ಬಿಜೆಪಿ ಅಭ್ಯರ್ಥಿಯ ಪರವಾಗಿ ಪತಿರಾಯನೊಬ್ಬ ಮತ ಚಲಾಯಿಸಿದ್ದಾರೆ. ಅದು ಎಲ್ಲಿ ಅಂತ ಮುಂದೆ ಓದಿ. ದಾವಣಗೆರೆಯಲ್ಲಿ ಸಂಸದ ಜಿಎಂ ಸಿದ್ದೇಶ್ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ ಕೇಳಿ ಬಂದಿದೆ. ದಾವಣಗೆರೆಯ ಮಾಗನೂರು ಬಸಪ್ಪ ಶಾಲೆಯ ಮತಗಟ್ಟೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರೋದಾಗಿ ಹೇಳಲಾಗುತ್ತಿದೆ. ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತಗಟ್ಟೆಗೆ ಪತ್ನಿ ಹಾಗೂ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಜೊತೆಗೆ ಸಂಸದ ಜಿ.ಎಂ ಸಿದ್ದೇಶ್ವರ್ ಆಗಮಿಸಿದ್ದರು. ಮತಗಟ್ಟೆಯ ಬಳಿಗೆ ಬಂದಾಗ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಮತ ಚಲಾಯಿಸೋದಕ್ಕೂ ಗೊಂದಲಕ್ಕೆ ಒಳಗಾದರು ಎನ್ನಲಾಗಿದೆ. ಮತ ಹಾಕುವಾಗ ಗೊಂದಲಕ್ಕೆ ಒಳಗಾದಂತ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರ ಬದಲಾಗಿ, ಸಂಸದ ಜಿಎಂ ಸಿದ್ದೇಶ್ವರ್ ಅವರೇ ಪತ್ನಿಗೆ ಸಹಾಯ ಮಾಡಲು ತಾನೇ ಮತದಾ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ತನ್ನ ಮತವನ್ನು…
ಬೆಂಗಳೂರು: ನಗರದಲ್ಲಿ ಮಳೆಗಾಲದ ವೇಳೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಂಬಂಧ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಯಾ ವಲಯ ವ್ಯಾಪ್ತಿಯ ಅಧಿಕಾರಿಗಳು ಮಳೆಗಾಲದ ವೇಳೆ ಎಲ್ಲಿಯೂ ಸಮಸ್ಯೆಯಾಗದಂತೆ ಕ್ರಮವಹಿಸಬೇಕೆಂದು ಸೂಚಿಸಿದರು. ಮೆಟ್ರೋ ಕಾಮಗಾರಿ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಮಳೆ ನೀರಿನ ಸರಾಗ ಹರಿವಿಗೆ ಸಮಸ್ಯೆ ಆಗಲಿದೆಯೇ ಎಂಬುದನ್ನು ಪರಿಶೀಲಿಸಬೇಕು. ಏನಾದರು ಸಮಸ್ಯೆ ಇದ್ದಲ್ಲಿ ಮೆಟ್ರೋ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ತಿಳಿಸಿದರು. ರಾಜಕಾಲುವೆ ಹಾಗೂ ರಸ್ತೆ ಬದಿ ಚರಂಡಿಗಳಲ್ಲಿ ಹೂಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸಬೇಕು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮವಹಿಸಬೇಕು. ನಗರದಲ್ಲಿ ಜೋರು ಮಳೆಯಾಗುವ ಸಮಯದಲ್ಲಿ ರಸ್ತೆಗಳ ಮೇಲೆ ಹೆಚ್ಚು ನೀರು ನಿಂತು ವಾಹನಗಳ ಸಂಚಾರಕ್ಕೆ ಹೆಚ್ಚು ಸಮಸ್ಯೆಯಾಗುತ್ತದೆ. ಈ ನಿಟ್ಟಿನಲ್ಲಿ ರಸ್ತೆ ಮೇಲೆ ಬೀಳುವ ನೀರು…
ಬೆಂಗಳೂರು: ಬಿರು ಬಿಸಿಲಿನಿಂದ ರಾಜ್ಯದ ಜನರು ಕಂಗೆಟ್ಟಿದ್ದಾರೆ. ಅಬ್ಬಾ ಮಳೆ ಬಂದ್ರೆ ಸಾಕಪ್ಪ ಅಂತ ಕಾಯುತ್ತಿದ್ದಾರೆ. ಈಗ ಬೇಸಿಗೆಯಿಂದ ಬಳಲಿರುವಂತ ಜನರಿಗೆ ಸಂತರಸದ ಸುದ್ದಿ ಎನ್ನುವಂತೆ ಇಂದು ರಾಜ್ಯದ ವಿವಿಧೆಡೆ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಮಳೆಯಾಗಲಿದೆ ಅಂತ ಮುಂದೆ ಓದಿ. ಈ ಕುರಿತಂತೆ ಹವಾಮಾನ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ಮೇ.11ರವರೆಗೆ ರಾಜ್ಯದ ಹಲವೆಡೆ ಇಂದಿನಿಂದ ಮಳೆಯಾಗಲಿದೆ. ಗುಡುಗು, ಸಡಿಲು ಸಮೇತ ಮಳೆಯಾಗೋ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆಯನ್ನು ವಹಿಸುವಂತೆ ಸೂಚಿಸಿದೆ. ಚಿಕ್ಕಬಳ್ಳಾಪುರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಾಮರಾಜನಗರ ಮತ್ತು ಕೋಲಾರದಲ್ಲಿ ಮಳೆಯಾಗೋ ನಿರೀಕ್ಷೆಯಿದೆ ಎಂದಿದೆ. ಸಿಲಿಕಾನ್ ಸಿಟಿ ಜನತೆಗೂ ಸಂತಸ ಸುದ್ದಿ ಎನ್ನುವಂತೆ ನಾಳೆ, ನಾಡಿದ್ದು ಬೆಂಗಳೂರಲ್ಲಿ ಮಳೆಯಾಗಲಿದೆ. ವಾಹನ ಸವಾರರು, ಜನರು ಮುಂಜಾಗ್ರತಾ ಕ್ರಮವಹಿಸಿದ್ರೆ ಒಳ್ಳೇದು ಎಂಬುದಾಗಿ ಹೇಳಿದೆ. ಇನ್ನೂ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗೋ ಮುನ್ಸೂಚನೆಯನ್ನು ನೀಡಲಾಗಿದೆ. ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಗುಡುಗು, ಸಿಡಿಲ ಜೊತೆಗೆ ವರುಣ…
ಬೆಂಗಳೂರು: ಬಿಡಿಎ ಕಾಂಪ್ಲೆಕ್ಸ್ಗಳನ್ನು ಲೀಸ್ಗೆ ಕೊಡುವ ಮೂಲಕ ಪರೋಕ್ಷ ಮಾರಾಟಕ್ಕೆ ದಿವಾಳಿಯತ್ತ ಮುನ್ನಡೆಯುತ್ತಿರುವ ರಾಜ್ಯದ ಕಾಂಗ್ರೆಸ್ ಸರಕಾರ ಮುಂದಾಗಿದೆ. ಇದರ ವಿರುದ್ಧ ಬಿಜೆಪಿಯು ಜನರ ಜೊತೆಗೂಡಿ ಹೋರಾಟವನ್ನು ಹಮ್ಮಿಕೊಳ್ಳಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಎಚ್ಚರಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್ಎಸ್ಆರ್ ಲೇ ಔಟ್, ಆಸ್ಟಿನ್ ಟೌನ್, ಕೋರಮಂಗಲ, ವಿಜಯನಗರ, ಆರ್.ಟಿ.ನಗರ, ಸದಾಶಿವನಗರದ ಬಿಡಿಎ ಸ್ವತ್ತುಗಳನ್ನು ನುಂಗಣ್ಣಗಳು ನುಂಗಲು ಹೊರಟಿದ್ದಾರೆ. 2013-18ರಲ್ಲಿ ಇದೇ ಮಾದರಿಯ ಯೋಜನೆ ಜಾರಿಗೊಳಿಸಲು ಕಾಂಗ್ರೆಸ್ ಸರಕಾರ ಮುಂದಾಗಿತ್ತು. ಇದರ ವಿರುದ್ಧ ಬೆಂಗಳೂರಿನ ಜನರು ಪ್ರತಿಭಟನೆ ಮಾಡಿದ್ದರು ಎಂದು ನೆನಪಿಸಿದರು. ಆಗ ಅದು ನಿಂತು ಹೋಗಿತ್ತು. ಮಡಿವಾಳದ ಆಸ್ತಿ ಕಾಂಗ್ರೆಸ್ ನಾಯಕರ ಪಾಲಾದಂತೆ ಇದು ಕೂಡ ಆಗಬಾರದೆಂದು ಜನರು ಹೋರಾಟ ಆರಂಭಿಸಿದ್ದಾರೆ. 3 ಸಾವಿರ ಕೋಟಿ ಬೆಲೆಬಾಳುವ ಆಸ್ತಿ ಇದು. ಇದರ ಹಿಂದೆ 200 ಕೋಟಿಗೂ ಮೇಲ್ಪಟ್ಟು ಕಿಕ್ ಬ್ಯಾಕ್ ಇದೆ ಎಂದು ಆರೋಪಿಸಿದರು.…
ಭಾಲ್ಕಿ : ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಂಡ್ರೆ ಕುಟುಂಬದಿಂದ ತಾತ, ಮಗ, ಮೊಮ್ಮಗ ಬೀದರ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಭಾಲ್ಕಿಯಲ್ಲಿ ಮತ ಚಲಾಯಿಸಿದ್ದು, ಈ ಅಪರೂಪದ ಘಟನೆಗೆ ಹಲವರು ಸಾಕ್ಷಿಯಾದರು. ಮಾಜಿ ಸಾರಿಗೆ ಸಚಿವರು, ಸ್ವಾತಂತ್ರ್ಯ ಹೋರಾಟಗಾರರು, ಏಕೀಕರಣ ಚಳವಳಿಯ ನೇತಾರರು ಹಾಗೂ ಲೋಕನಾಯಕ ಶತಾಯುಷಿ ಡಾ. ಭೀಮಣ್ಣ ಖಂಡ್ರೆ ಅವರು ವಾರ್ಧಕ್ಯದ ನಡುವೆಯೂ ಉತ್ಸಾಹದಿಂದ ಗಾಲಿ ಕುರ್ಚಿಯಲ್ಲಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರೆ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹಾಗೂ ಅವರ ಪುತ್ರ ಮತ್ತು ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಈಶ್ವರ್ ಖಂಡ್ರೆ ಅವರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ನೂತನ ಕಚೇರಿಯ ಸಭಾ ಭವನದ ಮತಗಟ್ಟೆ ಸಂಖ್ಯೆ 118ರಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಖಂಡ್ರೆ ಕುಟುಂಬದ ಇತರ ಸದಸ್ಯರೂ ಇದೇ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಮತಗಟ್ಟೆಯಿಂದ ಹೊರ ಬಂದ ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮತದಾನ…
ಶಿವಮೊಗ್ಗ: ನಗರದಲ್ಲಿ ಇಂದು ಲೋಕಸಭಾ ಚುನಾವಣೆಗೆ 2ನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಬೆಳಿಗ್ಗೆಯಿಂದ ಹುಮ್ಮಸ್ಸಿನಿಂದಲೇ ಜಿಲ್ಲೆಯಲ್ಲಿ ಮತದಾರರು ಮತವನ್ನು ಚಲಾಯಿಸುತ್ತಿದ್ದಾರೆ. ಮಧ್ಯಾಹ್ನ 1 ಗಂಟೆಯವರೆಗೆ ಶೇ.45.19ರಷ್ಟು ಮತದಾನವಾಗಿದೆ. ಈ ಬಗ್ಗೆ ಜಿಲ್ಲಾ ಚುನಾವಣಾ ಆಯೋಗದಿಂದ ಮಾಹಿತಿ ನೀಡಲಾಗಿದ್ದು, ಜಿಲ್ಲೆಯಲ್ಲಿ ಯಾವುದೇ ಅಡೆತಡೆಯಿಲ್ಲದೇ ಲೋಕಸಭಾ ಚುನಾವಣೆಗೆ 2ನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಕೆಲವೆಡೆ ಅಷ್ಟೇ ತಾಂತ್ರಿಕ ಸಮಸ್ಯಯಿಂದ ಇವಿಎಂ ಸ್ಥಗಿತಗೊಂಡಿತ್ತು. ಅದನ್ನು ಬದಲಾಯಿಸಿ, ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದಿದೆ. ಮಧ್ಯಾಹ್ನ 1:00 ಗಂಟೆ ವರೆಗೆ ಚಲಾವಣೆಯಾದ ಮತದಾನದ ಶೇಕಡವಾರು ವಿವರ ಶಿವಮೊಗ್ಗ ಲೋಕಸಭಾ ಕ್ಷೇತ್ರ: 45.19% ಒಟ್ಟು ಮತಗಳು: 1752885 ಚಲಾವಣೆ ಮತಗಳು:788545 https://kannadanewsnow.com/kannada/three-terrorists-killed-in-encounter-with-indian-army-in-jammu-and-kashmirs-kulgam/ https://kannadanewsnow.com/kannada/though-the-police-distributed-pen-drives-the-election-commission-did-not-take-any-action-said-former-cm-h-d-kumaraswamy-d-kumaraswamy/
ಬೆಂಗಳೂರು: ಇಂದು ರಾಜ್ಯಾಧ್ಯಂತ ಲೋಕಸಭಾ ಚುನಾವಣೆಗಾಗಿ 14 ಕ್ಷೇತ್ರಗಳಲ್ಲಿ 2ನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿ, ಬಿಸಿಲಲ್ಲಿ ಬಸವಳಿದಿದ್ದಂತ ಸಿಎಂ ಸಿದ್ಧರಾಮಯ್ಯ, ಇಂದು ರಿಲ್ಯಾಕ್ಸ್ ಗಾಗಿ ಊಟಿಗೆ ಪ್ರಯಾಣ ಬೆಳೆಸಿದ್ದಾರೆ. ಸಿಎಂ ಸಿದ್ಧರಾಮಯ್ಯ ಅವರು ಲೋಕಾ ಸಮರದಲ್ಲಿ ಪ್ರಚಾರ ನಡೆಸಿ, ಬಸವಳಿದಿದ್ದರು. ಈಗ ಲೋಕಸಭಾ ಚುನಾವಣೆ ಮತ ಸಮರ ಮುಗಿದ ನಂತ್ರ, ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ. ಇಂದು ಅವರು ಹೆಚ್.ಎಎಲ್ ನಿಂದ ಮೈಸೂರಿಗೆ ಪ್ರಯಾಣ ಬೆಳೆಸಿ, ಅಲ್ಲಿಂದ ಊಟಿಗೆ ತೆರಳಿ, ಮೂರು ದಿನಗಳ ಕಾಲ ಊಟಿಯಲ್ಲೇ ವಿಶ್ರಾಂತಿಯನ್ನು ಪಡೆಯಲಿದ್ದಾರೆ. ಸಿಎಂ ಸಿದ್ಧರಾಮಯ್ಯ ಊಟಿಗೆ ತೆರಳೋ ಮುನ್ನ ಅವರನ್ನು ಸಚಿವರಾದಂತ ರಾಮಲಿಂಗಾರೆಡ್ಡಿ, ಮಹದೇವಪ್ಪ, ರಾಜಣ್ಣ ಭೇಟಿ ಮಾಡಿ ಕೆಲ ಕಾಲ ಅನೌಪಚಾರಿಕ ಚರ್ಚೆ ನಡೆಸಿದರು. ಅಲ್ಲದೇ 2ನೇ ಹಂತದ ಚುನಾವಣಾ ಮತದಾನ ಮತ್ತು ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಚರ್ಚೆ ನಡೆಸಿದರು. https://kannadanewsnow.com/kannada/three-terrorists-killed-in-encounter-with-indian-army-in-jammu-and-kashmirs-kulgam/ https://kannadanewsnow.com/kannada/though-the-police-distributed-pen-drives-the-election-commission-did-not-take-any-action-said-former-cm-h-d-kumaraswamy-d-kumaraswamy/
ಬೆಂಗಳೂರು: ವೈರಲ್ ಆಗಿರುವಂತ ಹಾಸನ ಅಶ್ಲೀಲ ವೀಡಿಯೋದಲ್ಲಿ ಯಾರೇ ಇದ್ರೂ ಕ್ರಮ ಕೈಗೊಳ್ಳಲಿ. ನಾನು ನಮ್ಮ ಕುಟುಂಬದವರು ಇದ್ದರೂ ರಕ್ಷಣೆ ಮಾಡುವುದಿಲ್ಲ ಎಂಬುದಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟ ಪಡಿಸಿದ್ದಾರೆ. ಇಂದು ನಗರದಲ್ಲಿ ತುರ್ತು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಇತ್ತೀಚೆಗೆ ರಾಜ್ಯದಲ್ಲಿ ಅತ್ಯಂತ ಕೆಟ್ಟ ರೀತಿಯ ಬೆಳವಣಿಗೆಗಳು ನಡೆಯುತ್ತಿವೆ. ಸಮಾಜದಲ್ಲಿ ಉತ್ತಮ ಬದುಕು ಕಾಣಬೇಕು. ಆ ರೀತಿಯ ಬದುಕಿಗೆ ಧಕ್ಕೆಯಾಗಬಾರದು. ಇದು ನೋವಿನ ಸಂಗತಿಯಾಗಿದೆ ಎಂದರು. ಏಪ್ರಿಲ್.21ರಂದು ಹಾಸನ ಪೆನ್ ಡ್ರೈವ್ ಅಶ್ಲೀಲ ವೀಡಿಯೋಗಳನ್ನು ಇಡೀ ರಾಜ್ಯಾಧ್ಯಂತ ಬಿಡುಗಡೆ ಮಾಡಿದ್ರು. ಪೊಲೀಸ್ ಅಧಿಕಾರಿಗಳನ್ನ ಇಟ್ಟುಕೊಂಡು ವೀಡಿಯೋ ಹಂಚಿದ್ದಾರೆ. ಬೆಂಗಳೂರು ಗ್ರಾಮಾಂತರ, ಮಂಡ್ಯ ಸೇರಿದಂತೆ ಹಲವು ಕಡೆಗಳಲ್ಲಿ ವೀಡಿಯೋ ಬಿಡುಗಡೆ ಮಾಡಲಾಗಿದೆ ಎಂಬುದಾಗಿ ಗಂಭೀರ ಆರೋಪ ಮಾಡಿದರು. ಅಶ್ಲೀಲ ವೀಡಿಯೋ ಸಂಬಂಧ ಏಪ್ರಿಲ್.22ರಂದು ಪ್ರಜ್ವಲ್ ಏಜೆಂಟ್ ಪೂರ್ಣ ಚಂದ್ರ ಹಾಸನ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಚುನಾವಣೆ ಅಧಿಕಾರಿಗಳಿಗೂ ದೂರು ಕೊಟ್ಟಿದ್ದಾರೆ. ಏಪ್ರಿಲ್.21ರ ರಾತ್ರಿ ಪ್ರಜ್ವಲ್ ವೀಡಿಯೋ ಬಿಡುಗಡೆ ಕ್ಷಣಗಣನೆ ಅಂತ…
ಶಿವಮೊಗ್ಗ: ಜಿಲ್ಲೆಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಅತಿ ಹೆಚ್ಚು ಮತಗಳಿಂದ ಗೆಲ್ಲುತ್ತಾರೆ. ಕಾಂಗ್ರೆಸ್ ಅಭಿವೃದ್ಧಿ ಕಾರ್ಯಗಳೇ ಅವರನ್ನು ಕೈ ಹಿಡಿಯಲಿದೆ. ಮತದಾರರು ಅವರ ಪರವಾಗಿ ಒಲವು ತೋರಿದ್ದಾರೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಗೆಲುವು ಖಚಿತ ಎಂಬುದಾಗಿ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಇಂದು ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಗೋಪಾಲಕೃಷ್ಣ ಬೇಳೂರುರವರು ತಮ್ಮ ಸ್ವಗ್ರಾಮವಾದ ಬೇಳೂರಿನ ಮತಗಟ್ಟೆ ಸಂಖ್ಯೆ-24ರಲ್ಲಿ ಕುಟುಂಬ ಸಮೇತರಾಗಿ ಮತ ಚಲಾಯಿಸಿದರು. ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಂಗಾರಪ್ಪನವರ ಕುಟುಂಬ, ಶಿವರಾಜ್ ಕುಮಾರ್ ಅವರ ಹೆಂಡತಿ. ಮಹಿಳೆಯರ ಬಗ್ಗೆ ಸಾಗರದಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಈ ಬಾರಿಯೂ ಸಾಗರದಲ್ಲಿ 16,000ಕ್ಕೂ ಹೆಚ್ಚು ವೋಟ್ ಬರಲಿದೆ. ಯಾರು ಇಲ್ಲ ಅನ್ನೋ ಪದ ಹೇಳುತ್ತಿಲ್ಲ ಎಂದರು. ಹೌದು ಸಂಸದ ಬಿ.ವೈ ರಾಘವೇಂದ್ರ ಅಭಿೃಮಾಡಿದ್ದಾರೆ. ಅವರ ಮನೆ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಬೇಕಾದಷ್ಟು ಆಸ್ತಿ ಮಾಡಿಕೊಂಡಿದ್ದಾರೆ.…