Author: kannadanewsnow09

ಬೆಂಗಳೂರು: ಲೋಕಸಭಾ ಚುನಾವಣೆ ಹೊತ್ತಿನಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಾಡಿನ ಮಹಿಳೆಯರಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. ಹಾಗಾದ್ರೇ ಏನು ಬರೆದಿದ್ದಾರೆ ಅಂತ ಮುಂದೆ ಓದಿ. ನನ್ನ ಪ್ರೀತಿಯ ತಾಯಂದಿರೇ ಮತ್ತು ಅಕ್ಕ-ತಂಗಿಯರೇ, ಹದಿನೆಂಟನೇ ಲೋಕಸಭಾ ಚುನಾವಣೆಯಲ್ಲಿ ನಿರ್ಧಾರವಾಗಲಿರುವುದು ರಾಜಕೀಯ ಪಕ್ಷಗಳ ಸೋಲು-ಗೆಲುವುಗಳು ಮಾತ್ರ ಅಲ್ಲ, ಈ ಚುನಾವಣೆ ಮಹಿಳೆಯರ ಪರವಾದ ಸರ್ಕಾರದ ಕಾರ್ಯಕ್ರಮಗಳ ಸೋಲು-ಗೆಲುವನ್ನು ಕೂಡಾ ನಿರ್ಧರಿಸಲಿದೆ. ‘‘ಮಹಿಳೆಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ’’ ಎಂದು ಖಡಾಖಂಡಿತವಾಗಿ ಸಾರಿದ ಮನುಶಾಸ್ತ್ರವನ್ನು ನಂಬಿರುವ ಭಾರತೀಯ ಜನತಾ ಪಕ್ಷ ಮತ್ತು ಮಹಿಳೆಯರಿಗೆ ಸಮಾನ ಅವಕಾಶ ಮತ್ತು ಸ್ಥಾನಮಾನ ನೀಡಬೇಕೆಂದು ಸಾರಿದ ಸಂವಿಧಾನಕ್ಕೆ ಬದ್ಧವಾಗಿರುವ ಕಾಂಗ್ರೆಸ್ ಪಕ್ಷಗಳ ನಡುವೆ ಇಂದಿನ ಮಹಿಳೆಯರು ಆಯ್ಕೆ ಮಾಡಬೇಕಾಗಿದೆ ಎಂದಿದ್ದಾರೆ. ಭಾರತೀಯ ಜನತಾ ಪಕ್ಷ ಮತ್ತು ಅದರ ಮಾತೃಸಂಸ್ಥೆಯಾದ ಆರ್ ಎಸ್ ಎಸ್ ನ ಸಿದ್ಧಾಂತ ಮತ್ತು ನಡವಳಿಕೆ ಸ್ಪಷ್ಟವಾಗಿ ಮಹಿಳಾ ವಿರೋಧಿಯಾದುದು. ಗುಜರಾತ್ ನಿಂದ ಮಣಿಪುರದ ವರೆಗೆ ಇದಕ್ಕೆ ನಿದರ್ಶನಗಳನ್ನು ಕಾಣಬಹುದು. ಕರ್ನಾಟಕದಲ್ಲಿ ಸ್ತ್ರೀಪೀಡಕರ ಜೊತೆಗೆ ಬಿಜೆಪಿ ಕೈಜೋಡಿಸಿರುವುದು ಇತ್ತೀಚಿನ ಉದಾಹರಣೆ.…

Read More

ನವದೆಹಲಿ: ಜೀ ಮೀಡಿಯಾ ಕಾರ್ಪೊರೇಷನ್ ಲಿಮಿಟೆಡ್ ತನ್ನ ಸಿಇಒ ಅಭಯ್ ಓಜಾ ಅವರನ್ನು ಮೇ 4, 2024 ರಿಂದ ಜಾರಿಗೆ ಬರುವಂತೆ ವಜಾಗೊಳಿಸಿದೆ ಎಂದು ಸೋಮವಾರ ತಿಳಿಸಿದೆ. ಸೋಮವಾರ ನಡೆದ ನಿರ್ದೇಶಕರ ಮಂಡಳಿಯು ಓಜಾ ಅವರನ್ನು ಸಂಸ್ಥೆಯಿಂದ ಉದ್ಯೋಗವನ್ನು ನಿಲ್ಲಿಸಲು ಮತ್ತು ಅದರ ಪರಿಣಾಮವಾಗಿ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅವರನ್ನು ಮೇ 4, 2024 ರಿಂದ ನಿಲ್ಲಿಸಲು ಅನುಮೋದನೆ ನೀಡಿದೆ ಮತ್ತು ದೃಢಪಡಿಸಿದೆ ಎಂದು ಕಂಪನಿಯು ನಿಯಂತ್ರಕ ಫೈಲಿಂಗ್ನಲ್ಲಿ ತಿಳಿಸಿದೆ. “ಉದ್ಯೋಗವನ್ನು ಕೊನೆಗೊಳಿಸಿದ ಕಾರಣ, ಅಭಯ್ ಓಜಾ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯನ್ನು ಕಳೆದುಕೊಂಡಿದ್ದಾರೆ” ಎಂದು ಫೈಲಿಂಗ್ನಲ್ಲಿ ತಿಳಿಸಲಾಗಿದೆ. ಆದಾಗ್ಯೂ, ಕಂಪನಿಯು ಅವರನ್ನು ವಜಾಗೊಳಿಸಲು ಕಾರಣಗಳನ್ನು ವಿವರಿಸಿಲ್ಲ. ಓಜಾ ಅವರನ್ನು ಕಳೆದ ವರ್ಷ ಕಂಪನಿಯ ಸಿಇಒ ಆಗಿ ಬಡ್ತಿ ನೀಡಲಾಯಿತು. ಅವರು 2022 ರಲ್ಲಿ ವಿಯಾನ್ ಮತ್ತು ಜೀ ಬಿಸಿನೆಸ್ ಹೊರತುಪಡಿಸಿ ಜೀ ಮೀಡಿಯಾಕ್ಕೆ ಮುಖ್ಯ ವ್ಯವಹಾರ ಅಧಿಕಾರಿ ಮತ್ತು ಲೀನಿಯರ್ ಚಾನೆಲ್ಗಳ ಪಿ &ಎಲ್ ಮುಖ್ಯಸ್ಥರಾಗಿ ಸೇರಿದ್ದರು.…

Read More

ಬೆಂಗಳೂರು: ರಾಜ್ಯದಲ್ಲಿ ಶೈಕ್ಷಣಿ ದಾಖಲಾತಿ ಪ್ರಕ್ರಿಯೆ ಪ್ರಾರಂಭಗೊಂಡಿದೆ. ತಮ್ಮ ಮಕ್ಕಳನ್ನು ಉತ್ತಮ ಶಾಲೆಗೆ ಸೇರಿಸೋದಕ್ಕೆ ಪೋಷಕರು ಹುಡುಕಾಡುತ್ತಿದ್ದಾರೆ. ಯಾವ ಶಾಲೆಗಳು ಅನಧಿಕೃತ, ಯಾವುವು ಅಧಿಕೃತ ಎನ್ನುವ ಮಾಹಿತಿಯನ್ನು ಪ್ರಕಟಿಸುವಂತೆ ಬಿಇಓಗಳಿಗೆ ಸೂಚಿಸಿದ್ದರೂ ಈವರೆಗೆ ಪ್ರಕಟಿಸಿಲ್ಲ. ಈ ಕೂಡಲೇ ರಾಜ್ಯದಲ್ಲಿರುವ ಅನಧಿಕೃತ ಶಾಲೆಗಳ ಪಟ್ಟಿಯನ್ನು ಪ್ರಕಟಿಸುವಂತೆ ಶಿಕ್ಷಣ ಇಲಾಖೆಗೆ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಪತ್ರದಲ್ಲಿ ಆಗ್ರಹಿಸಿದ್ದಾರೆ. ಇಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವಂತ ಅವರು, ರಾಜ್ಯದಲ್ಲಿರುವ 17,329 ಖಾಸಗಿ ಶಾಲೆಗಳ ಪೈಕಿ 1,695 ಅನಧಿಕೃತ ಶಾಲೆಗಳಿವೆ ಎಂದು ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ. ಅನೇಕ ಪಾಲಕರಿಗೆ ತಮ್ಮ ಮಕ್ಕಳು ಕಲಿಯುತ್ತಿರುವ ಶಾಲೆ ಅಧಿಕೃತವೇ ಅಥವಾ ಅನಧಿಕೃತವೇ ಎಂಬುದರ ಬಗ್ಗೆ ಖಚಿತ ಮಾಹಿತಿಯೇ ಇರುವುದಿಲ್ಲ ಎಂದಿದ್ದಾರೆ. ಈಗಾಗಲೇ 2024-25ನೇ ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಸಹಜವಾಗಿ ಪಾಲಕರಿಗೆ ತಮ್ಮ ಮಕ್ಕಳನ್ನು ಉತ್ತಮ ಶಾಲೆಗಳಿಗೆ ಸೇರಿಸುವ ಧಾವಂತ. ಆದರೆ, ಈ ಪಾಲಕರ ನಂಬಿಕೆಗೆ ಅನುಗುಣವಾಗಿ ಇರುವ ಶಾಲೆಗಳೆಷ್ಟು? ಎಂದು ಪ್ರಶ್ನಿಸಿದ್ದಾರೆ. ಶಾಲಾ ನೋಂದಣಿ…

Read More

ಬೆಂಗಳೂರು: ಸಿನಿಮಾದಲ್ಲಿ ಅವಕಾಶ ಕೊಡಿಸೋದಾಗಿ ಹೇಳಿ, ಮಂಚಕ್ಕೆ ಕರೆದಂತ ಆರೋಪದಲ್ಲಿ ನಿರ್ದೇಶಕ ಸೂರ್ಯ ವಿರುದ್ಧ ನಟಿ ಅಮೂಲ್ಯಗೌಡ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಹಿನ್ನಲೆಯಲ್ಲಿ ನಿರ್ದೇಶಕ ಸೂರ್ಯ ಅವರನ್ನು ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. ನಟಿ ಅಮೂಲ್ಯಗೌಡ ಅವರಿಗೆ ಸಿನಿಮಾದಲ್ಲಿ ಅವಕಾಶ ಸಿಗಬೇಕು ಅಂದ್ರೆ ಮಂಚಕ್ಕೆ ಬಾ ಎಂಬುದಾಗಿ ನಿರ್ದೇಶಕ ಸೂರ್ಯ ವಾಟ್ಸಾಪ್ ನಲ್ಲಿ ಅಶ್ಲೀಲ ಮೆಸೇಜ್ ಕಳಿಸಿದ್ದರಂತೆ. ಇದಕ್ಕೆ ಸಿಟ್ಟಾದಂತ ನಟಿ ಅಮೂಲ್ಯಗೌಡ ಆಕ್ಷೇಪಿಸಿದಾಗ, ನೀನು ಯಾರಿಗೆ ಹೇಳಿಕೊಳ್ತೀಯೋ ಹೇಳಿಕೋ ಹೋಗು, ಯಾರಿಗೆ ದೂರು ಕೊಡ್ತೀಯೋ ಕೊಡು ಹೋಗು ಎಂಬುದಾಗಿ ಅವಾಜ್ ಹಾಕಿದ್ದರಂತೆ. ಈ ಹಿನ್ನಲೆಯಲ್ಲಿ ಏಪ್ರಿಲ್.30ರಂದು ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ರಾತ್ರಿ ತೆರಳಿದ್ದಂತ ನಟಿ ಅಮೂಲ್ಯಗೌಡ ಅವರು, ನಿರ್ದೇಶಕ ಸೂರ್ಯ ವಿರುದ್ಧ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಇಂದು ನಿರ್ದೇಶಕ ಸೂರ್ಯ ಅವರನ್ನು ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿರೋದಾಗಿ ತಿಳಿದು ಬಂದಿದೆ. ಅಂದಹಾಗೇ ನಿರ್ದೇಶಕ ಸೂರ್ಯ ಅವರು ನಟಿ ಅಮೂಲ್ಯಗೌಡ ಅವರಿಗೆ…

Read More

ಬೆಂಗಳೂರು: ಯೆಮೆನ್‌ ದೇಶದಲ್ಲಿ ಸಂಭವಿಸಿದ್ದ ಬಾಂಬ್‌ ಬ್ಲಾಸ್ಟ್‌ನಿಂದ ತನ್ನ ಬಲಗಾಲನ್ನು ಸಂಪೂರ್ಣ ಕಳೆದುಕೊಂಡರೂ, ಆ ಕಾಲಿನಲ್ಲಿ ಉಂಟಾಗುತ್ತಿದ್ದ “ಫ್ಯಾಂಟಮ್ ಲಿಂಬ್” ಎಂಬ ನೋವಿನಿಂದ ಬಳಲುತ್ತಿದ್ದ 22 ವರ್ಷದ ಯುವಕನಿಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ದೇಶದಲ್ಲೇ ಮೊದಲ ನ್ಯೂರೋಮಾಡ್ಯುಲೇಷನ್ ಕಾರ್ಯ ವಿಧಾನದ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. ಫೋರ್ಟಿಸ್‌ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ. ರಘುರಾಮ್ ಜಿ. ಅವರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ. ಈ ಕುರಿತು ಮಾತನಾಡಿದ ಅವರು, ೨ ವರ್ಷದ ಹಿಂದೆ ಯೆಮೆನ್‌ ದೇಶದಲ್ಲಿ ಸಂಭವಿಸಿದ್ದ ಬಾಂಬ್‌ ಬ್ಲಾಸ್ಟ್‌ನಿಂದ 22 ವರ್ಷದ ಯಾಸೀರ್ (ಹೆಸರು ಬದಲಾಯಿಸಲಾಗಿದೆ) ಎಂಬ ಯುವಕ ತನ್ನ ಬಲಗಾಲನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದರು. ಆದರೆ, ಆ ಬಲಗಾಲು ಹೋದ ಬಳಿಕವೂ ತುಂಡಾದ ಭಾಗದಲ್ಲಿ ಫ್ಯಾಂಟಮ್ ಲಿಂಬ್ ಎಂಬ ನೋವು ಆ ಯುವನನ್ನು ಕಾಡುತ್ತಿತ್ತು. ಫ್ಯಾಂಟಮ್‌ ಲಿಂಬ್‌ ಎಂದರೆ ಅನುಭವಿಸಲು ಅಸಾಧ್ಯವಾದ ನೋವನ್ನೇ ಫ್ಯಾಂಟಮ್‌ ಲಿಂಬ್‌ ಎನ್ನಲಾಗುತ್ತದೆ. ಸಂಪೂರ್ಣವಾಗಿ ಕಾಲಿನ ಗಾಯ ವಾಸಿಯಾಗಿದ್ದರೂ ಸಹ ಕಟ್ಟಾದ…

Read More

ಬೆಂಗಳೂರು: ಸರ್ಕಾರಿ ಕೋಟಾದಡಿಯಲ್ಲಿ D.El.Ed, D.P.Ed ಹಾಗೂ D.P.S.E ಕೋರ್ಸ್ ದಾಖಲಾತಿಗೆ ಅರ್ಜಿ ಆಹ್ವಾನಯನ್ನು ಆಹ್ವಾನಿಸಲಾಗಿದೆ. ಇಂದು ಪತ್ರಿಕಾ ಪ್ರಕಟಣೆಯಲ್ಲಿ ಕೇಂದ್ರೀಕೃತ ದಾಖಲಾತಿ ಘಟಕದ ವಿಶೇಷಾಧಿಕಾರಿ ಮಾಹಿತಿ ನೀಡಿದ್ದು,2024-25ನೇ ಸಾಲಿನ D.El.Ed, D.P.Ed & D.P.S.E ಕೋರ್ಸುಗಳ ವ್ಯಾಸಂಗಕ್ಕಾಗಿ ರಾಜ್ಯದ ಸರ್ಕಾರಿ, ಮಾನ್ಯತೆ ಪಡೆದ ಅನುದಾನಿತ ಹಾಗೂ ಅನುದಾನರಹಿತ ಸಂಸ್ಥೆಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗಾಗಿ ಆಫ್‌ಲೈನ್ ಮೂಲಕ ಅರ್ಜಿಗಳನ್ನ ದಿನಾಂಕ:06/05/2024 ರಿಂದ 05/06/2024ರ ವರೆಗೆ ಆಹ್ವಾನಿಸಲಾಗಿದೆ ಎಂದಿದೆ. ಇಲಾಖಾ ವೆಬ್ ಸೈಟ್ www.schooleducation.karnataka.gov.in ನಲ್ಲಿ ಪ್ರಕಟಿಸಲಾದ ಮಾರ್ಗಸೂಚಿಯಲ್ಲಿ ಅರ್ಹತೆ, ಮೀಸಲಾತಿ, ಶುಲ್ಕ ಇತ್ಯಾದಿ ವಿವರ ಮತ್ತು ಇದರೊಂದಿಗೆ ಜಿಲ್ಲಾವಾರು D.EL.Ed, D.P.Ed & D.P.S.E ಶಿಕ್ಷಣ ಸಂಸ್ಥೆಗಳ ಪಟ್ಟಿಯನ್ನು ನೀಡಲಾಗಿದೆ. ಅಭ್ಯರ್ಥಿಗಳು ಕಡ್ಡಾಯವಾಗಿ ಮಾರ್ಗಸೂಚಿಯನ್ನು ಓದಿ ಅರ್ಥೈಸಿಕೊಂಡು ಅರ್ಜಿಯನ್ನು ಕ್ರಮಬದ್ಧವಾಗಿ ಭರ್ತಿಮಾಡಿ ಸಂಬಂಧಪಟ್ಟ ಜಿಲ್ಲಾ ವ್ಯವಸ್ಥಾಪಕ ಕೇಂದ್ರ (ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ-DIET) ಗಳಲ್ಲಿ ಸಲ್ಲಿಸುವಂತೆ ಮನವಿ ಮಾಡಿದೆ. https://kannadanewsnow.com/kannada/teachers-aspirants-should-note-applications-invited-for-recruitment-to-these-posts/ https://kannadanewsnow.com/kannada/mlc-mtb-nagaraj-alleges-illegal-voting-in-chikkaballapur-constituency/

Read More

ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಪ್ರಸಿದ್ಧ ಶಿಕ್ಷಣ ಸಂಸ್ಥೆಯೊಂದರಲ್ಲಿ ಕೆಲಸ ಮಾಡಲು, ಶಿಕ್ಷಕರ ಹುದ್ದೆಗೆ ( Teacher Jobs ) ಹಾಗೂ ಅಡುಗೆ ಸಹಾಯಕರ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.  ಈ ಕುರಿತಂತೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬರಗೂರಿನಲ್ಲಿರುವಂತ ದಿ ಪ್ಲೋರೆನ್ಸ್ ಪಬ್ಲಿಕ್ ಶಾಲೆ ( The Florence Public School – CBSE ಶಾಲೆ) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಪ್ರೌಢ ಶಾಲಾ ವಿಭಾಗದಲ್ಲಿ ಖಾಲಿ ಇರುವಂತ ಈ ಕೆಳಕಂಡ ಹುದ್ದೆಗಳಿಗೆ ಕೂಡಲೇ ಶಿಕ್ಷಕರು ಅರ್ಜಿ ( Teacher Recuritment Application ) ಸಲ್ಲಿಸುವಂತೆ ತಿಳಿಸಿದೆ. ಹುದ್ದೆಯ ವಿವರ ಗಣಿತ ಶಿಕ್ಷಕರು – ಬಿಎಸ್ಸಿ, ಬಿಎಡ್ ಅಥವಾ ಎಂ.ಎಸ್ಸಿ ಬಿಎಡ್ ಅನುಭವಿ ಅಡುಗೆ ಸಹಾಯಕರ ಹುದ್ದೆ ಅರ್ಜಿ ಆಹ್ವಾನ ಊಟ ಮತ್ತು ವಸತಿ ಸೌಲಭ್ಯವಿದೆ ದಿ ಪ್ಲೋರೆನ್ಸ್ ಪಬ್ಲಿಕ್ ಶಾಲೆಯಲ್ಲಿ (The Florence Public School )ಕರ್ತವ್ಯ ನಿರ್ವಹಿಸುವಂತ ಶಿಕ್ಷಕರಿಗೆ, ಶಾಲೆಯ ಕ್ಯಾಂಪಸ್ ನಲ್ಲಿಯೇ ಊಟ ಹಾಗೂ ವಸತಿ ವ್ಯವಸ್ಥೆಯನ್ನು…

Read More

ಬೆಂಗಳೂರು: ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಎಂ. ಆರ್. ಅಂಬೇಡ್ಕರ್ ಡೆಂಟಲ್ ಕಾಲೇಜುಗಳ MBBS ಹಾಗೂ BDS ಪದವಿ ತರಗತಿಗಳ Admission ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆಸಿರುವ ಬೃಹತ್ ಹಗರಣ ಬಯಲಾಗಿದೆ. AICC ಅಧ್ಯಕ್ಷ  ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ಮತ್ತು ಗುಲ್ಬರ್ಗಾ ಲೋಕಸಭಾ ಕ್ಷೇತ್ರದ ಕಾಂಗ್ರಸ್(ಐ) ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಆಡಳಿತ ಮಂಡಳಿಯ ಮುಖ್ಯಸ್ಥರಾಗಿರುವ ಸದರಿ ಕಾಲೇಜುಗಳಲ್ಲಿ ನಡೆದಿರುವ ಬೃಹತ್ ಹಗರಣ ಎಂಬುದಾಗಿ ಎನ್ ಆರ್ ರಮೇಶ್ ದೂರು ದಾಖಲಿಸಿದ್ದಾರೆ. ರಾಧಾಕೃಷ್ಣ ದೊಡ್ಡಮನಿ, ಗುರಪ್ಪಾಜಿ,  ಹೆಚ್. ಎಸ್. ಮಹದೇವ ಪ್ರಸಾದ್, ಡಾ|| ಎನ್. ಟಿ. ಮುರಳಿ ಮೋಹನ್, ವಿ. ಎಸ್. ಕುಬೇರ್ ಮತ್ತು ಅಮಾನುಲ್ಲಾ ಖಾನ್ ಅವರುಗಳ ವಿರುದ್ಧ CBI ಮತ್ತು ಲೋಕಾಯುಕ್ತ ತನಿಖಾ ಸಂಸ್ಥೆಗಳಲ್ಲಿ ದೂರುಗಳು ದಾಖಲು. ಭ್ರಷ್ಟಾಚಾರ, ವಂಚನೆ, ನಕಲಿ ದಾಖಲೆ ತಯಾರಿಕೆ ಮತ್ತು ಅಧಿಕಾರ ದುರುಪಯೋಗ ಪ್ರಕರಣಗಳು ದಾಖಿಸಲಾಗಿದೆ. ರಾಜ್ಯದ ಮೆಡಿಕಲ್ ಕಾಲೇಜುಗಳು ಮತ್ತು ಡೆಂಟಲ್ ಕಾಲೇಜುಗಳ…

Read More

ನವದೆಹಲಿ: ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರಿಗೆ ಬಾಂಬೆ ಹೈಕೋರ್ಟ್ ಸೋಮವಾರ ವೈದ್ಯಕೀಯ ಆಧಾರದ ಮೇಲೆ ಎರಡು ತಿಂಗಳ ಮಧ್ಯಂತರ ಜಾಮೀನು ನೀಡಿದೆ. ಮನಿ ಲಾಂಡರಿಂಗ್ ಪ್ರಕರಣದಲ್ಲಿ ಗೋಯಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು. ನ್ಯಾಯಮೂರ್ತಿ ಎನ್.ಜೆ.ಜಮಾದಾರ್ ಅವರ ಏಕಸದಸ್ಯ ಪೀಠವು ಗೋಯಲ್ ಅವರಿಗೆ 1 ಲಕ್ಷ ರೂ.ಗಳ ಜಾಮೀನು ಪಾವತಿಸಬೇಕು ಮತ್ತು ವಿಚಾರಣಾ ನ್ಯಾಯಾಲಯದ ಪೂರ್ವಾನುಮತಿಯಿಲ್ಲದೆ ಮುಂಬೈಯನ್ನು ತೊರೆಯಬಾರದು ಎಂದು ಆದೇಶಿಸಿದೆ. ಒಟ್ಟಾರೆಯಾಗಿ ವೈದ್ಯಕೀಯ ಕಾರಣಗಳಿಂದಾಗಿ ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ಗೆ 2 ತಿಂಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಗೆ ತಾತ್ಕಾಲಿಕ ರಿಲೀಫ್ ನೀಡಿದೆ. https://kannadanewsnow.com/kannada/good-news-for-wonderla-lovers-summer-la-fiesta-2024-to-be-held/ https://kannadanewsnow.com/kannada/mlc-mtb-nagaraj-alleges-illegal-voting-in-chikkaballapur-constituency/

Read More

ಬೆಂಗಳೂರು: ಈ ಬೇಸಿಗೆಯ ಮಜವನ್ನು ಇನ್ನಷ್ಟು ಹೆಚ್ಚಿಸಲು ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್‌ಲಾ ಬೆಂಗಳೂರು ಪಾರ್ಕ್‌ನಲ್ಲಿ ‘ಸಮ್ಮರ್‌ಲಾ ಫಿಯೆಸ್ಟಾ’ ನಡೆಸುತ್ತಿದ್ದು, ಮೇ 31 ರವರೆಗೂ ಇರಲಿದೆ. ಸಮ್ಮರ್‌ಲಾ ಫಿಯೆಸ್ಟಾದಲ್ಲಿ ಸಾಕಷ್ಟು ಕೊಡುಗೆಗಳು ನಿಮ್ಮನ್ನು ಕೈ ಬೀಸಿ ಕರೆಯುತ್ತಿದೆ, ಸಾಕಷ್ಟು ಮೋಜಿನ ಡ್ರೈ ಹಾಗೂ ವಾಟರ್‌ ಗೇಮ್‌ಗಳು, ಫೂಡ್‌-ಫೆಸ್ಟಿವಲ್‌, ಡಿಜೆ ಮ್ಯೂಸಿಕ್‌ ಸೇರಿದಂತ ಅನೇಕ ವಿಶೇಷತೆಗಳು ಈ ಸಮ್ಮರ್‌ಲಾದಲ್ಲಿ ಇರಲಿದೆ. ಇದಲ್ಲದೆ, ಡೊಳ್ಳು ಕುಣಿತ, ಚಿಂಗಾರಿ ಮೇಳಗಳಂತಹ ವಿಶೇಷ ಸಾಂಸ್ಕೃತಿಕ ಪ್ರದರ್ಶನ ಹಾಗೂ ಮೆರವಣಿಗೆ ಇರಲಿವೆ. ವಾರಾಂತ್ಯದಲ್ಲಿ ನಿಮ್ಮನ್ನು ಇನ್ನಷ್ಟು ಉತ್ಸಾಹಿಗಳನ್ನಾಗಿ ಮಾಡಲು ಡಿಜೆ ಮ್ಯೂಸಿಕ್‌ ಸಹ ಆಯೋಜಿಸಲಾಗುತ್ತಿದೆ. ಇನ್ನು, ಭಾನುವಾರದಂದು ವಂಡರ್‌ಲಾ ರೆಸಾರ್ಟ್‌ನಲ್ಲಿ ಬೇಸಿಗೆಯ ಬ್ರಂಚ್‌ ಸಹ ಇರಲಿದೆ. ಈ ಎಲ್ಲಾ ಮನರಂಜನೆಗಳ ಮೇಲೂ ಸಾಕಷ್ಟು ರಿಯಾಯಿತಿ ಹಾಗೂ ಕೊಡುಗೆಗಳು ಇದ್ದು, ಆಸಕ್ತರು ಭಾಗಿಯಾಗಿ ಈ ಬೇಸಿಗೆ ರಜೆಯನ್ನು ಇನ್ನಷ್ಟು ಸಂತಸದಿಂದ ಕಳೆಯಬಹುದು. ಈ ಎಲ್ಲಾ ಇತರ ಕೊಡುಗೆಗಳು ಆನ್‌ಲೈನ್ ಮತ್ತು ಆಫ್‌ಲೈನ್ ಬುಕಿಂಗ್‌ಗಳಿಲ್ಲಿ ಲಭ್ಯವಿರಲಿದೆ. ಪಾರ್ಕ್‌ನಲ್ಲಿ ಈಗ ಲಭ್ಯವಿರುವ…

Read More