Author: kannadanewsnow09

ಬೆಂಗಳೂರು: ದಿನೇ ದಿನೇ ಕರ್ನಾಟಕ ಕ್ರೈಂ ರಾಜ್ಯವಾಗುತ್ತಿದೆ. ಗೃಹ ಸಚಿವರ ಆಣತಿಯಂತೆ ಏನೂ ನಡೆಯುತ್ತಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರವನ್ನೇ ಗಲ್ಲಿಗೇರಿಸಬೇಕು ಎಂಬುದಾಗಿ ವಿಪಕ್ಷ ನಾಯಕ ಆರ್.ಅಶೋಕ್ ವಾದ್ಧಾಳಿ ನಡೆಸಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಹುಬ್ಬಳ್ಳಿ ನೇಹಾ ಹಿರೇಮಠ್ ಹತ್ಯೆ ಮಾಸೋ ಮುನ್ನವೇವ ಮತ್ತೊಂದು ಹತ್ಯೆ ಆಗಿದೆ. ಕಾಂಗ್ರೆಸ್ ಬಂದ್ರೆ ಕೊಲೆಗಡುಕರಿಗೆ ಹಬ್ಬ. ಈ ರಾಜ್ಯ ಸರ್ಕಾರವನ್ನೇ ಗಲ್ಲಿಗೇರಿಸಬೇಕು ಎಂದರು. ಭಯೋತ್ಪಾದಕರು, ಕೊಲೆಗಡುಕರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಾಗಿ ರಾಜ್ಯ ಸರ್ಕಾರ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ಧಾಳಿ ನಡೆಸಿದರು. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಿ. ನಮ್ಮ ಅಭ್ಯಂತರವೇನು ಇಲ್ಲ. ಆದ್ರೇ ಪೆನ್ ಡ್ರೈವ್ ಹಂಚಿದವರ ಬಗ್ಗೆಯೂ ತನಿಖೆ ಆಗಬೇಕು. ಎಸ್ಐಟಿ ಅಧಿಕಾರಿಗಳ ತನಿಖೆಯಲ್ಲಿ ಸತ್ಯ ಹೊರ ಬರೋದು ಡೌಟ್. ನ್ಯಾಯಾಂಗ ತನಿಖೆ ಆದ್ರೆ ಮಾತ್ರ ಸತ್ಯ ಹೊರಬರುತ್ತದೆ. ಇಲ್ಲದಿದ್ದರೇ ಸತ್ಯ ಮುಚ್ಚಿ ಹಾಕೋ ಕೆಲಸ ಆಗುತ್ತದೆ ಎಂಬುದಾಗಿ ಹೇಳಿದರು.…

Read More

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ಕೋರ್ಟ್ ನಿಂದ ಅರೆಸ್ಟ್ ವಾರೆಂಟ್ ಪಡೆದಿದ್ದಾರೆ. ಹಾಗಾದ್ರೇ ಅರೆಸ್ಟ್ ವಾರೆಂಟ್ ಪಡೆದ ತಕ್ಷಣ ವಿದೇಶದಲ್ಲಿರೋ ಅವರನ್ನು ಬಂಧಿಸಬಹುದಾ.? ಆ ಬಗ್ಗೆ ಮುಂದೆ ಓದಿ. ವಿದೇಶದಲ್ಲಿ ತಲೆಮರೆಸಿಕೊಂಡು ಕಣ್ಣಾಮುಚ್ಚಾಲೆ ಆಟ ಆಡ್ತಿರೋ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ. ಏಪ್ರಿಲ್.26ರಿಂದ ನಾಪತ್ತೆಯಾಗಿರುವಂತ ಅವರನ್ನು ಕೋರ್ಟ್ ಜಾರಿಗೊಳಿಸಿರೋ ಅರೆಸ್ಟ್ ವಾರೆಂಟ್ ನಿಂದ ವಿದೇಶದಲ್ಲಿ ಬಂಧಿಸೋದಕ್ಕೆ ಸಾಧ್ಯವಿಲ್ಲ. ಕೋರ್ಟ್ ಜಾರಿಗೊಳಿಸಿರುವಂತ ಅರೆಸ್ಟ್ ವಾರೆಂಟ್ ಕೇವಲ ಭಾರತಕ್ಕೆ ಸಂಸದ ಪ್ರಜ್ವಲ್ ರೇವಣ್ಣ ವಾಪಾಸ್ ಆದಾಗ ಮಾತ್ರವೇ ಬಂಧಿಸೋದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಇದರ ಹೊರತಾಗಿ ವಿದೇಶಕ್ಕೆ ಎಸ್ಐಟಿ ಅಧಿಕಾರಿಗಳೇ ತೆರಳಿ, ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸೋದಕ್ಕೆ ಸಾಧ್ಯವಿಲ್ಲ. ಇನ್ನೂ ಅರೆಸ್ಟ್ ವಾರೆಂಟ್ ಆದೇಶದಿಂದಲೂ ಏಕಾಏಕಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಕೂಡ ಹೊರಡಿಸೋದಕ್ಕೆ ಸಾಧ್ಯವಿಲ್ಲ. ಯಾಕೆಂದ್ರೆ ರೆಡ್ ಕಾರ್ನರ್ ನೋಟಿಸ್ ಹೊರಡಿಸೋದಕ್ಕಿಂತ ಮೊದಲು ಕೋರ್ಟ್…

Read More

ಮೈಸೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ತವರು ಕ್ಷೇತ್ರದ ಒಂದೇ ಗ್ರಾಮದ ಮೂವರಲ್ಲಿ ಕಾಲರಾ ದೃಢಪಟ್ಟಿದೆ. ಕಾಲರಾ ದೃಢಪಟ್ಟ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಿದ್ದಾರೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸಿಎಂ ಸಿದ್ಧರಾಮಯ್ಯ ಅವರ ವರುಣಾ ಕ್ಷೇತ್ರದ ತಗಡೂರು ಗ್ರಾಮದಲ್ಲಿ ಕೆಲ ದಿನಗಳಿಂದ ಕೆಲವರಿಗೆ ವಾಂತಿ, ಬೇಧಿ ಕಾಣಿಸಿಕೊಂಡಿತ್ತು. ಹೀಗಾಗಿ ತಗಡೂರು ಗ್ರಾಮಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಜನರನ್ನು ಕಾಲರಾ ಪತ್ತೆ ಪರೀಕ್ಷೆಗೆ ಒಳಪಡಿಸಿದ್ದರು. ಕಳೆದ ಒಂದು ವಾರದಿಂದ ಸತತ 114 ಜನರನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಪರೀಕ್ಷೆಗೆ ಒಳಪಡಿಸಿದ್ದಾರೆ. ಇವರಲ್ಲಿ ಮೂವರಿಗೆ ಕಾಲರಾ ದೃಢಪಟ್ಟಿದೆ. ಸಿಎಂ ಸಿದ್ಧರಾಮಯ್ಯ ತವರು ಕ್ಷೇತ್ರದ ಗ್ರಾಮದಲ್ಲೇ ಕಾಲರಾ ಪತ್ತೆಯಾಗುತ್ತಿದ್ದಂತೆ, ಗ್ರಾಮಕ್ಕೆ ಡಿಹೆಚ್ಓ ಶಿವಕುಮಾರಸ್ವಾಮಿ ಸೇರಿದಂತೆ ಹಿರಿಯ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ತಗಡೂರು ಗ್ರಾಮದಲ್ಲಿ ಮೇಲ್ನೋಟಕ್ಕೆ ಬೋರ್ ವೆಲ್ ನೀರು ಕುಡಿದ್ದರಿಂದಾಗಿ ಕಾಲರಾ ಪತ್ತೆಯಾಗಿರುವಂತ ಶಂಕೆಯನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ವ್ಯಕ್ತ ಪಡಿಸಿದ್ದಾರೆ. ಮುಂಜಾಗ್ರತಾ…

Read More

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಪೋನ್ ಪೇ ಮೂಲಕ 5000 ಸಾವಿರ ಲಂಚ ಪಡೆದಿದ್ದಂತ ಭ್ರಷ್ಟ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದಗ್ದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮೈಲನಹಳ್ಳಿಯ ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್ ಎಂಬ ಭ್ರಷ್ಟ ಅಧಿಕಾರಿಯೇ ಪೋನ್ ಪೇ ಮೂಲಕ 5000 ಲಂಚ ಪಡೆದು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿರುವಂತವರಾಗಿದ್ದಾರೆ. ಜಮೀನಿನ ಖಾತಾ ಬದಲಾವಣೆಗಾಗಿ ಮಂಜುನಾಥ್ ಎಂಬುವರಿಗೆ 25,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಣದಲ್ಲಿ ಮುಂಗಡವಾಗಿ ರೂ.5,000 ಲಂಚದ ಹಣವನ್ನು ಪೋನ್ ಪೇ ಮೂಲಕ ಗ್ರಾಮ ಲೆಕ್ಕಿಗ ಶಿವಕುಮಾರ್ ಪಡೆದಿದ್ದರು. ಭ್ರಷ್ಟ ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್ ವಿರುದ್ಧ ಮಂಜುನಾಥ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಪೋನ್ ಪೇ ಮೂಲಕ ಲಂಚದ ಹಣವನ್ನು ಪಡೆದಿದ್ದಂತ ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್ ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. https://kannadanewsnow.com/kannada/arrest-warrant-issued-against-jds-mp-prajwal-revanna-in-karnataka-sex-video-scandal/ https://kannadanewsnow.com/kannada/the-sale-of-liquor-will-be-banned-from-6-am-on-may-22-to-6-pm-on-may-23-in-this-police-station-limits-in-bengaluru/

Read More

ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೋರ್ಟ್ ಅರೆಸ್ಟ್ ವಾರೆಂಟ್ ಹೊರಡಿಸಿದೆ. ಎಸ್ಐಟಿ ಕೋರಿಕೆಯ ಮೇರೆಗೆ ನ್ಯಾಯಾಲಯವು ಹಾಸನದ ಜೆಡಿಎಸ್ ಸಂಸದನ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ. ನೋಟಿಸ್ ನೀಡಿದ್ದರೂ ಪ್ರಜ್ವಲ್ ರೇವಣ್ಣ ಎಸ್ಐಟಿ ಮುಂದೆ ಹಾಜರಾಗಿರಲಿಲ್ಲ. ರೇವಣ್ಣ ಅವರು ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನದಲ್ಲಿ ಏಪ್ರಿಲ್ 26 ರಂದು ಪ್ರಜ್ವಲ್ ರೇವಣ್ಣ ಮತ ಚಲಾಯಿಸಿದ ಸ್ವಲ್ಪ ಸಮಯದ ನಂತರ ಈ ವೀಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದವು. ಸಂಸದ ಪ್ರಜ್ವಲ್ ರೇವಣ್ಮಗೆ ಸಂಬಂಧಿಸಿದ ಅಶ್ಲೀಲ ವೀಡಿಯೊಗಳ ತನಿಖೆ ನಡೆಸುತ್ತಿರುವ ತಂಡಕ್ಕೆ ಶರಣಾಗಲು ಕರ್ನಾಟಕ ಪೊಲೀಸರ ಎಸ್ಐಟಿ ಬೆಂಗಳೂರಿಗೆ ಮರಳಲು ಕಾಯುತ್ತಿದೆ. 33 ವರ್ಷದ ಸಂಸದ ರಾಜತಾಂತ್ರಿಕ ಪಾಸ್ಪೋರ್ಟ್ ಬಳಸಿ ಏಪ್ರಿಲ್ 27 ರಂದು ದೇಶವನ್ನು ತೊರೆದಿದ್ದಾರೆ ಮತ್ತು ಜರ್ಮನಿಯಲ್ಲಿದ್ದಾರೆ ಎಂದು ಶಂಕಿಸಲಾಗಿದೆ. ಏತನ್ಮಧ್ಯೆ, ಕರ್ನಾಟಕ ಸರ್ಕಾರವು…

Read More

ಧಾರವಾಡ : ಸರಕಾರವು ಯಾವುದೇ ಪ್ರೋತ್ಸಾಹ ಧನ ಅಥವಾ ಸಹಾಯ ಧನವನ್ನು ರೈತರ ಹಾಗೂ ಸಾರ್ವಜನಿಕರ ಜೀವನೋಪಾಯಕ್ಕಾಗಿ ಬಿಡುಗಡೆ ಮಾಡುತ್ತದೆ. ಆದ್ದರಿಂದ ಬರ ಪರಿಹಾರದ ಹಣ ಸೇರಿದಂತೆ ವೃದ್ಯಾಪ್ಯ ವೇತನ, ಅಂಗವಿಕಲರ ಮಾಶಾಸನ, ನರೆಗಾ ಕೂಲಿ ಹಾಗೂ ಇತರೆ ಸರಕಾರದಿಂದ ಬಿಡುಗಡೆ ಆಗಿರುವಂತಹ ಪ್ರೋತ್ಸಾಹ ಧನ ನೇರವಾಗಿ ಫಲಾನುಭವಿಗಳ ಖಾತೆಗೆ (ಡಿಬಿಟಿ ಮೂಲಕ) ಸಂದಾಯವಾಗಿರುವಂತಹ ಹಣವನ್ನು ಯಾವುದೇ ಕಾರಣಕ್ಕೆ ಸಾಲದ ಖಾತೆಗೆ ಜಮಾ ಮಾಡಬಾರದೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. ಅವರು ನಿನ್ನೆ ಸಂಜೆ (ಮೇ.17) ಸರಕಾರದಿಂದ ಬಿಡುಗಡೆ ಮಾಡಿರುವ ಬರ ಪರಿಹಾರದ ಹಣವು ಬ್ಯಾಂಕಿನಲ್ಲಿ ಸಾಲದ ಖಾತೆಗೆ ಜಮಾ ಆಗಿತ್ತಿರುವ ಕುರಿತು ರೈತರಿಂದ ದೂರುಗಳ ಕಾರಣ ಧಾರವಾಡ ರೂಡ್ ಸೆಟ್ ಆವರಣದ ಸಭಾಂಗಣದಲ್ಲಿ (RUDSETI) ಆವರಣದಲ್ಲಿ ಆರ್.ಬಿ.ಐ ಅಧಿಕಾರಿ ಮೋನಿ ರಾಜ ಬ್ರಹ್ಮ, ಜಿಲ್ಲಾ ಲೀಡ ಬ್ಯಾಂಕ ವ್ಯವಸ್ಥಾಪಕರ ಶ್ರೀ ಪ್ರಭುದೇವ ಎನ್ ಜಿ ಅವರ ಉಪಸ್ಥಿತಿಯಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕಿನ ವ್ಯವಸ್ಥಾಪಕರುಗಳ ಜೊತೆ ತುರ್ತು ಸಭೆಯನ್ನು ಜರುಗಿಸಿ,…

Read More

ಬೆಂಗಳೂರು: ಕಳೆದ ವರ್ಷ ಜುಲೈನಲ್ಲಿ ನಡೆದ ವನಮಹೋತ್ಸವದ ಸಂದರ್ಭದಲ್ಲಿ ಅರಣ್ಯ ಇಲಾಖೆಯಿಂದ ನಡೆಲಾದ 5 ಕೋಟಿ ಸಸಿಗಳ ಪೈಕಿ ಎಷ್ಟು ಬದುಕುಳಿದಿವೆ ಎಂಬ ಬಗ್ಗೆ ಆಡಿಟ್ ವರದಿಯನ್ನು 3 ತಿಂಗಳೊಳಗಾಗಿ ಸಲ್ಲಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಆದೇಶ ನೀಡಿದ್ದಾರೆ. ಬೆಂಗಳೂರಿನ ಅರಣ್ಯ ಭವನದಲ್ಲಿಂದು ನಡೆದ ಅರಣ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಎಷ್ಟು ಸಸಿಗಳನ್ನು ನೆಡಲು ಯೋಜನೆ ರೂಪಿಸಲಾಗಿದೆ. ಇಲಾಖೆಯ ನರ್ಸರಿಗಳಲ್ಲಿ ಎಷ್ಟು ಎತ್ತರದ ಸಸಿ ಬೆಳೆಸಲಾಗಿದೆ ಎಂಬ ಬಗ್ಗೆ 7 ದಿನಗಳೊಳಗಾಗಿ ಮಾಹಿತಿ ನೀಡುವಂತೆಯೂ ತಿಳಿಸಿದರು. ವನ್ಯಜೀವಿಗಳ ಅಂಗಾಂಗಗಳಿಂದ ತಯಾರಿಸಿದ ಉತ್ಪನ್ನಗಳನ್ನು, ಟ್ರೋಫಿ, ಫಲಕಗಳನ್ನು ಸರ್ಕಾರಕ್ಕೆ ಮರಳಿಸಲು ನೀಡಲಾಗದ್ದ ಗಡುವು ಏಪ್ರಿಲ್ 9ರಂದು ಮುಕ್ತಾಯವಾಗಿದ್ದು, ಕೆಲವರು ಹೈಕೋರ್ಟ್ ನಲ್ಲಿ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ಉಂಟಾಗಿರುವ ಗೊಂದಲದಿಂದಾಗಿ ಮತ್ತೆ 2-3 ತಿಂಗಳುಗಳ ಕಾಲ ಹೆಚ್ಚಿನ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ನ್ಯಾಯಾಲಯದ ತೀರ್ಪು ಬಂದ ಬಳಿಕ ಈ ಬಗ್ಗೆ…

Read More

ಮಡಿಕೇರಿ : ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ನೈರುತ್ಯ ಪದವೀಧರರ ಕ್ಷೇತ್ರಗಳಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆ ಸಂಬಂಧ ಭಾರತ ಚುನಾವಣಾ ಆಯೋಗವು ಹಿರಿಯ ಐಎಎಸ್ ಅಧಿಕಾರಿಗಳನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಕ ಮಾಡಿ ಆದೇಶಿಸಿದೆ. ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರಕ್ಕೆ (ಕೊಡಗು ಜಿಲ್ಲೆ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆ) ಚುನಾವಣಾ ವೀಕ್ಷಕರಾಗಿ ಅನಿಲ್ ಕುಮಾರ್ ಟಿ.ಕೆ, ಸಹಾಯಕ ಅಧಿಕಾರಿಯಾಗಿ ಮೈಸೂರು ಜಿಲ್ಲೆ ತೋಟಗಾರಿಕೆ ಇಲಾಖೆಯ ವಿಭಾಗೀಯ ಜಂಟಿ ನಿರ್ದೇಶಕರ ಕಚೇರಿಯ ಉಪ ನಿರ್ದೇಶಕರಾದ ರುದ್ರೇಶ್ ಕೆ. ದೂ. ಸಂ.9964174107, 7204064565. ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರ(ಕೊಡಗು ಜಿಲ್ಲೆ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆ) ಕ್ಕೆ ಹರ್ಷ್ ಗುಪ್ತ ಅವರನ್ನು ಚುನಾವಣಾ ವೀಕ್ಷಕರಾಗಿ ಹಾಗೂ ಸಹಾಯಕ ಅಧಿಕಾರಿಯಾಗಿ ಮೈಸೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಎಂ.ಡಿ.ಸುದರ್ಶನ್ ಅವರನ್ನು ನೇಮಕ ಮಾಡಿದೆ. ದೂ.ಸಂ.9448244340,…

Read More

ಮಡಿಕೇರಿ : ಕರ್ನಾಟಕ ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರಗಳ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಸ್ವೀಕೃತವಾದ ನಾಮಪತ್ರಗಳ ಪರಿಶೀಲನಾ ಕಾರ್ಯವು ಶುಕ್ರವಾರ(ಮೇ,17) ನಡೆಯಿತು. ನಾಮಪತ್ರಗಳ ಪರಿಶೀಲನೆಯಲ್ಲಿ ಕ್ಷೇತ್ರವಾರು ನಾಮಪತ್ರಗಳು ಅಂಗೀಕಾರ ಮತ್ತು ತಿರಸ್ಕøತವಾಗಿರುವ ವಿವರ ಇಂತಿದೆ. ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ 13 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 13 ನಾಮಪತ್ರಗಳು ಅಂಗೀಕೃತವಾಗಿವೆ. ನೈರುತ್ಯ ಪದವೀಧರರ ಕ್ಷೇತ್ರಕ್ಕೆ 11 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 11 ನಾಮಪತ್ರಗಳು ಅಂಗೀಕೃತವಾಗಿವೆ. ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ 10 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 9 ನಾಮಪತ್ರಗಳು ಅಂಗೀಕೃತವಾಗಿವೆ. 01 ನಾಮಪತ್ರ ತಿರಸ್ಕೃತಗೊಂಡಿದೆ. ಎಂ.ಸತೀಶ್ ಕಾರಂತ್, ಪಕ್ಷೇತ್ರ ಅಭ್ಯರ್ಥಿ ಅವರು ನಮೂನೆ-26 ನೋಟರಿ ಅಫಿಡವಿಟ್ ಹಾಗೂ ವಿಧಾನಸಭಾ ಮತದಾರರ ಪಟ್ಟಿಯ ದೃಢೀಕೃತ ಪ್ರತಿಯನ್ನು ಸಲ್ಲಿಸದಿರುವುದರಿಂದ ತಿರಸ್ಕøತಗೊಂಡಿರುತ್ತದೆ. ಮೇ, 20 ರ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರಗಳನ್ನು ಹಿಂಪಡೆಯಲು ಅವಕಾಶವಿರುತ್ತದೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ…

Read More

ಬಳ್ಳಾರಿ : ಜಿಲ್ಲೆಯನ್ನು ಬರಗಾಲ ಬರಪೀಡಿತ ಎಂದು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯ 36,944 ರೈತರ ಖಾತೆಗೆ ಎರಡು ಹಂತಗಳಲ್ಲಿ ಡಿಬಿಟಿ ಮೂಲಕ ಒಟ್ಟು 41.40 ಕೋಟಿ ರೂ. ಗಳನ್ನು ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ. 2023-24 ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಎಲ್ಲಾ 05 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಸರ್ಕಾವು ಘೋಷಣೆ ಮಾಡಿದೆ. ಮುಂಗಾರು ಹಂಗಾಮಿನಲ್ಲಿ ಹಾನಿಯಾಗಿರುವ ಬೆಳೆಗಳಿಗೆ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರದ ಮೇರೆಗೆ ಫ್ರೂಟ್ಸ್ ಐಡಿ ಹೊಂದಿರುವ, ಪಹಣಿ ಜೋಡಣೆಯಾಗಿರುವ ರೈತರಿಗೆ ಡಿಬಿಟಿ ಮೂಲಕ ಎಸ್‍ಡಿಆರ್‍ಎಫ್ ಮಾರ್ಗಸೂಚಿಯಂತೆ ಈಗಾಗಲೇ 9 ಕಂತುಗಳಲ್ಲಿ ಮೊದಲನೆ ಕಂತಾಗಿ ಗರಿಷ್ಠ ರೂ.2000 ರವರೆಗೆ ಒಟ್ಟು 36,944 ರೈತರಿಗೆ ರೂ.7.26 ಕೊಟಿ ಪರಿಹಾರ ಬೆಳೆ ಹಾನಿ ಪರಿಹಾರವನ್ನು ವಿತರಿಸಲಾಗಿದೆ. ಎರಡನೇ ಹಂತದಲ್ಲಿ ಜಿಲ್ಲೆಯ ಅರ್ಹ 31351 ರೈತರುಗಳಿಗೆ ಎನ್‍ಡಿಆರ್‍ಎಫ್ ಮಾರ್ಗಸೂಚಿನ್ವಯ ರೂ.34.03 ಕೋಟಿ ಪರಿಹಾರವನ್ನು (ಇನ್ ಪುಟ್ ಸಬ್ಸಿಡಿ) ವಿತರಣೆ ಮಾಡಲು ಅನುಮೋದನೆ ನೀಡಿ, ಡಿಬಿಟಿ ಮೂಲಕ…

Read More