Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ನಗರದ ಕೆಂಗೇರಿ ಬಳಿಯಲ್ಲಿ ಇರುವಂತ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ನೂತನ ಉತ್ತರಾಧಿಕಾರಿಯಾಗಿ ಕೆಎಎಸ್ ಅಧಿಕಾರಿ ಡಾ.ಹೆಚ್.ಎಲ್ ನಾಗರಾಜು ಅವರು ಸನ್ಯಾಸತ್ವ ಸ್ವೀಕರಿಸುವ ಮೂಲಕ, ಪಟ್ಟಾಭಿಷೇಕಕ್ಕೇರಿದ್ದಾರೆ. ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠಕ್ಕೆ ಶ್ರೀ ಕುಮಾರ ಚಂದ್ರಶೇಖರ ಸ್ವಾಮೀಜಿ ನಂತ್ರ, ಕೆಎಎಸ್ ಅಧಿಕಾರಿ ಡಾ.ಹೆಚ್.ಎಲ್ ನಾಗರಾಜು ಪೀಠಾಧಿಪತಿಯಾಗಿ ಆಯ್ಕೆ ಮಾಡಲಾಗಿತ್ತು. ಇವರು ಪಟ್ಟಾಧಿಕಾರದ ವೇಳೆಯಲ್ಲಿ ಸನ್ಯಾಸತ್ವ ಸ್ವೀಕರಿಸಬೇಕಿತ್ತು. ಅದರಂತೆ ಇಂದು ನೂರಾರು ಶ್ರೀಗಳ ಸಮ್ಮುಖದಲ್ಲಿ ಸನ್ಯಾಸತ್ವ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದಂತ ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಶ್ರೀಗಳು, ಎರಡು ಮಠಗಳ ನಡುವೆ ಒಂದು ಸಮಸ್ಯೆ ಇದೆ ಎಂದು ನಿಡುಮಾಮಿಡಿ ಶ್ರೀಗಳು ಹೇಳಿದಾಗ ಎಲ್ಲರಿಗೂ ಅನ್ನಿಸಿತ್ತು. ಆದರೇ ಮಠಗಳ ನಡುವೆ ಯಾವುದೇ ಸಮಸ್ಯೆ ಇಲ್ಲ. ಒಂದೇ ಗುರು, ಒಂದೇ ಸಮುದಾಯ, ಒಂದೇ ತಾಯಿ ಎಂದು ಪೂಜ್ಯರು ಹೇಳಿದ್ದಾರೆ ಎಂದರು. ನಾಗರಾಜ್ ಅವರು ನಿಶ್ಚಲಾನಂದನಾಥರಾಗಿ ಬದಲಾಗುವ ಸಂದರ್ಭದಲ್ಲಿ ಇಷ್ಟು ಜನ ಸೇರಿರುವುದು ಖುಷಿಯ ವಿಚಾರವಾಗಿದೆ. ನಾವೆಲ್ಲರೂ ಒಂದೇ ಗುರು ಪರಂಪರೆಯವರು. ಇಂದು ನಾಗರಾಜ್…
ರಾಮನಗರ: ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮತ್ತೋರ್ವ ರೈತ ಬಲಿಯಾಗಿದ್ದಾನೆ. ಕನಕಪುರದ ಹೆಗ್ಗನೂರು ದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಹೆಗ್ಗನೂರು ದೊಡ್ಡಿ ಗ್ರಾಮದಲ್ಲಿ ಇಂದು ಮುಂಜಾನೆ 4 ಗಂಟೆಗೆ ಜಮೀನಿನಲ್ಲಿ ಹಾಕಿದ್ದಂತ ಮೆದೆ ನೋಡಲು ತೆರಳುತ್ತಿದ್ದಂತ ವೇಳೆಯಲ್ಲಿ ರೈತ ಕರಿಯಪ್ಪ(65) ಎಂಬುವರ ಮೇಲೆ ಕಾಡಾನೆ ದಾಳಿ ನಡೆಸಿದೆ. ಕಾಡಾನೆ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಂತ ಕರಿಯಪ್ಪ ಅವರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುತ್ತಿದ್ದಂತ ಸಂದರ್ಭದಲ್ಲಿ ಕೊನೆಯುಸಿರು ಎಳೆದಿದ್ದಾರೆ. ಈ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/over-15-injured-as-tourist-bus-overturns-in-shivamogga/ https://kannadanewsnow.com/kannada/digital-arrest-elderly-woman-loses-rs-80-lakh-due-to-digital-arrest/ https://kannadanewsnow.com/kannada/breaking-bengaluru-mobile-thieves-on-the-rise-ex-corporator-chases/
ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಬಳಿಯಲ್ಲಿ ಮಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದಂತ ಖಾಸಗಿ ಬಸ್ ವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಪರಿಣಾಮ ಬಸ್ಸಿನಲ್ಲಿದ್ದಂತ 15ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಂಗಳೂರಿನಿಂದ ಖಾಸಗಿ ಬಸ್ ನಲ್ಲಿ ಸಾಗರದ ಜೋಗದ ಜಲಪಾತ ವೀಕ್ಷಣೆಗಾಗಿ 55 ಜನರು ಆಗಮಿಸುತ್ತಿದ್ದರು. ಈ ಬಸ್ ಅರಳಗೋಡು ಗ್ರಾಮ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಅಪಘಾತದಲ್ಲಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ಬಸ್ ಪಲ್ಟಿಯಾಗಿ ಉಂಟಾಗದಂತ ಅಪಘಾತದಲ್ಲಿ ಗಾಯಗೊಂಡಿರುವಂತ ಗಾಯಾಳುಗಳನ್ನು ಕಾರ್ಗಲ್ ಹಾಗೂ ಸಾಗರ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕಾರ್ಯಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ ಸಾಥ್ ನೀಡಿದ್ದಾರೆ. ಅಪಘಾತದ ಸಂದರ್ಭದಲ್ಲಿ 55 ಪ್ರಯಾಣಿಕರು ಬಸ್ಸಿನಲ್ಲಿ ಇದ್ದರು ಎಂಬುದಾಗಿ ತಿಳಿದು ಬಂದಿದೆ. ಈ ವಿಷಯ ತಿಳಿದು ಕಾರ್ಗಲ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ,…
ಶಿವಮೊಗ್ಗ: ಜಿಲ್ಲೆಯಲ್ಲಿ ಮಂಗಳೂರಿನಿಂದ ಶಿವಮೊಗ್ಗದ ಜೋಗದ ಜಲಪಾತಕ್ಕೆ ಪ್ರವಾಸಕ್ಕೆ ಬಂದಿದ್ದಂತ ಪ್ರವಾಸಿಗರ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಪರಿಣಾಮ ಹಲವರು ಗಂಭೀರವಾಗಿ ಗಾಯಗೊಂಡಿರುವಂತ ಘಟನೆ ನಡೆದಿದೆ. ಮಂಗಳೂರಿನಿಂದ ಶಿವಮೊಗ್ಗದ ಸಾಗರ ಬಳಿಯ ಜೋಗದ ಜಲಪಾತ ವೀಕ್ಷಣೆಗಾಗಿ ಖಾಸಗಿ ಬಸ್ ನಲ್ಲಿ ಪ್ರವಾಸಕ್ಕೆ ಮಂಗಳೂರಿನ 55 ಮಂದಿ ತೆರಳಿದ್ದರು. ಈ ಬಸ್ ಅರಳಗೋಡು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಪಲ್ಟಿ ಹೊಡೆದಿದೆ. ಈ ಸಂದರ್ಭದಲ್ಲಿ ಪ್ರವಾಸಿ ಬಸ್ಸಿನಲ್ಲಿ 55 ಜನರು ಇದ್ದರು ಎಂಬುದಾಗಿ ತಿಳಿದು ಬಂದಿದೆ. ಇವರಲ್ಲಿ 15 ಮಂದಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಕಾರ್ಗಲ್ ಹಾಗೂ ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/national-energy-conservation-2024-karnataka-ranks-second-energy-development-corporations-achievement-award/ https://kannadanewsnow.com/kannada/digital-arrest-elderly-woman-loses-rs-80-lakh-due-to-digital-arrest/
ಬೆಂಗಳೂರು: ಇಂಧನ ಸಂರಕ್ಷಣೆಯಲ್ಲಿ ಕರ್ನಾಟಕವು ರಾಷ್ಟ್ರಮಟ್ಟದಲ್ಲಿ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನದ ಅಂಗವಾಗಿ ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ ದೆಹಲಿಯ ವಿಜ್ಞಾನ ಭವನದಲ್ಲಿ ಡಿಸೆಂಬರ್ 14ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕ್ರೆಡಲ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ ಈ ಪ್ರಶಸ್ತಿ ಸ್ವೀಕರಿಸಿದರು. ವಿವಿಧ ರಾಜ್ಯಗಳಲ್ಲಿ ಇಂಧನ ದಕ್ಷತೆಗೆ ರಾಜ್ಯಗಳಲ್ಲಿ ಜಾರಿಗೊಳಿಸಿರುವ ಕಾರ್ಯಕ್ರಮಗಳ ಕುರಿತಂತೆ ಆಯಾ ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಈ ಪ್ರಶಸ್ತಿ ನೀಡಲಾಗುತ್ತದೆ. ಇಂಧನ ದಕ್ಷತೆಯಲ್ಲಿ ಉತ್ತಮ ಸಾಧನೆ ಮಾಡಿರುವ ಕರ್ನಾಟಕಕ್ಕೆ ಈ ಬಾರಿ ಎರಡನೇ ಸ್ಥಾನ ದೊರೆತಿದೆ. ರಾಜ್ಯಾದ್ಯಂತ ಸುಸ್ಥಿರ ಇಂಧನ ಪದ್ಧತಿಗಳನ್ನು ಉತ್ತೇಜಿಸುವ ಕ್ರೆಡಲ್, ಈ ನಿಟ್ಟಿನಲ್ಲಿ ಅನುಷ್ಠಾನಗೊಳಿಸಿರುವ ಇಂಧನ ದಕ್ಷತೆ ಯೋಜನೆಗಳನ್ನು ಗುರುತಿಸಿ ಕೇಂದ್ರ ಇಂಧನ ಸಚಿವಾಲಯ ಈ ಪ್ರಶಸ್ತಿ ನೀಡಿದೆ. ಸಂತಸ ವ್ಯಕ್ತಪಡಿಸಿದ ಇಂಧನ ಸಚಿವ ಕೆ.ಜೆ. ಜಾರ್ಜ್ ಇಂಧನ ಸಂರಕ್ಷಣೆಯಲ್ಲಿ ರಾಜ್ಯಕ್ಕೆ ರಾಷ್ಟ್ರಮಟ್ಟದಲ್ಲಿ ಎರಡನೇ ಪ್ರಶಸ್ತಿ ಸಂದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಇಂಧನ ಸಚಿವ ಕೆ.ಜೆ. ಜಾರ್ಜ್,…
ಬೆಂಗಳೂರು: ಕೃಷಿ ಹೊಂಡದಲ್ಲಿ ಸೋಡಿಯಂ ಬಳಸಿ ಸ್ಪೋಟಗೊಳಿಸಿದಂತ ಪ್ರಕರಣ ಸಂಬಂಧ ಈಗಾಗಲೇ ಪೊಲೀಸರು ಡ್ರೋನ್ ಪ್ರತಾಪ್ ನನ್ನು ಬಂಧಿಸಿದ್ದರು. ಡ್ರೋನ್ ಪ್ರತಾಪ್ ಗೆ ಸಹಾಯ ಮಾಡಿದಂತ ಆತನ ಇಬ್ಬರು ಸ್ನೇಹಿತರನ್ನು ಪೊಲೀಸರು ಈಗ ಬಂಧಿಸಿದ್ದಾರೆ. ಕೃಷಿ ಹೊಂಡ ಒಂದರದಲ್ಲಿ ಸೋಡಿಯಂ ಬಳಸಿ ಡ್ರೋನ್ ಪ್ರತಾಪ್ ಸ್ಪೋಟಗೊಳಿಸಿದ್ದನು. ಈ ಸಂಬಂಧ ಕೇಸ್ ದಾಖಲಾಗಿತ್ತು. ಆನಂತ್ರ ಆತನನ್ನು ಮಿಡಿಗೇಶಿ ಪೊಲೀಸರು ಬಂಧಿಸಿದ್ದರು. ಇದೀಗ ಈ ಪ್ರಕರಣದಲ್ಲಿ ಡ್ರೋನ್ ಪ್ರತಾಪ್ ವೀಡಿಯೋ ಮಾಡಿದ್ದಂತ ಕ್ಯಾಮೆರಾಮ್ಯಾನ್ ವಿನಯ್ ಹಾಗೂ ಆತನಿಗೆ ಸ್ಟೂಡಿಯೋ ಕೊಡಿಸಿದ್ದಂತ ಗೆಳೆಯ ಪ್ರಜ್ವಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇದಲ್ಲದೇ ಡ್ರೋನ್ ಪ್ರತಾಪ್ ಕರೆದೊಯ್ದು ಪೊಲೀಸರು ಸ್ಥಳ ಮಹಜರು ನಡೆಸಿದರು. ಅವೆನ್ಯೂ ರಸ್ತೆಯಲ್ಲಿ ಸೋಡಿಯಂ ಖರೀದಿಸಿದಂತ ಮಾಹಿತಿ ಪಡೆದು ಅಂಗಡಿಗೂ ಕರೆದೊಯ್ದು ಸ್ಥಳ ಮಹಜರು ಮಾಡಿದರು. ಅಲ್ಲದೇ ಡ್ರೋನ್ ಪ್ರತಾಪ್ ಮನೆ, ಕಚೇರಿಗೂ ಕರೆದೊಯ್ದು ಸ್ಥಳ ಮಹಜರು ಮಾಡಿದರು.
ಹುಬ್ಬಳ್ಳಿ: “ಉತ್ತರ ಕರ್ನಾಟಕದ ಯಾವುದೇ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಬಿಜೆಪಿಯವರಿಗೆ ಆಸಕ್ತಿ ಇಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಭಾನುವಾರ ಪ್ರತಿಕ್ರಿಯಿಸಿದರು. ಅಧಿವೇಶನದಲ್ಲಿ ನಾಲ್ಕು ದಿನ ಬಾಕಿ ಇದ್ದು, ಉತ್ತರ ಕರ್ನಾಟಕದ ವಿಚಾರ ಚರ್ಚೆ ಬಗ್ಗೆ ಕೇಳಿದಾಗ, “ಅವರಿಗೆ ರಾಜಕಾರಣ ಹೊರತಾಗಿ ಬೇರೆ ವಿಚಾರ ಬೇಕಿಲ್ಲ. ಅವರ ಪಕ್ಷದಲ್ಲಿ ಒಗ್ಗಟ್ಟಿಲ್ಲ” ಎಂದು ತಿಳಿಸಿದರು. ಉತ್ತರ ಕರ್ನಾಟಕದ ಉತ್ತರ ಕರ್ನಾಟಕದ ನೀರಾವರಿ ವಿಚಾರವಾಗಿ ಚರ್ಚೆಯಾಗಬೇಕು ಎಂಬ ಪ್ರಶ್ನೆಗೆ, “ನೀರಾವರಿ ವಿಚಾರವಾಗಿ ಚರ್ಚೆ ಮಾಡಲು ನಾನು ಸಿದ್ಧ. ನೀರಾವರಿ ಜತೆಗೆ ಬೇರೆ ವಿಚಾರಗಳೂ ಚರ್ಚೆಯಾಗಲಿ” ಎಂದು ಉತ್ತರಿಸಿದರು. ಶೆಟ್ಟರ್- ಜೋಷಿ ನೇತೃತ್ವ ವಹಿಸಿ ಅನುಮತಿ ಕೊಡಿಸಲಿ ಮಹದಾಯಿ ಯೋಜನೆಗೆ ತಾರ್ಕಿಕ ಅಂತ್ಯ ಯಾವಾಗ ಎಂದು ಕೇಳಿದಾಗ, “ಇತ್ತೀಚೆಗಷ್ಟೇ ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡಿದ್ದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರನ್ನೂ ಭೇಟಿ ಮಾಡಿ ಚರ್ಚೆ ಮಾಡಿದೆ. ಅವರು ಕೂಡ ಅರಣ್ಯ ಸಚಿವರ ಜತೆ ಚರ್ಚೆ…
ಬೆಂಗಳೂರು: ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖಾನೆಯ 52.25 ಕೋಟಿ ರೂ. ವಿದ್ಯುತ್ ಬಿಲ್ ಬಾಕಿಯಲ್ಲಿ 37.74 ಕೋಟಿ ರೂ. ವಿದ್ಯುತ್ ಬಾಕಿಯನ್ನು ಸರಕಾರದ ವತಿಯಿಂದಲೇ ಪಾವತಿಸುವುದು ಹಾಗೂ 15.71 ಕೋಟಿ ಬಾಕಿ ಬಡ್ಡಿ ಮನ್ನಾ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ತಮ್ಮ ಮನವಿಗೆ ಸಚಿವ ಸಂಪುಟ ಸ್ಪಂದಿಸಿರುವುದಕ್ಕೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸಂತಸ ವ್ಯಕ್ತಪಡಿಸಿದ್ದಾರೆ. ಸುವರ್ಣಸೌಧದಲ್ಲಿ ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಮೈಶುಗರ್ ಕಾರ್ಖಾನೆ ಪಾವತಿಸಿಬೇಕಿದ್ದ 37.74 ಕೋಟಿ ವಿದ್ಯುತ್ ಶುಲ್ಕ ಬಾಕಿಯನ್ನು ಸರಕಾರದ ವತಿಯಿಂದಲೇ ಪಾವತಿಸಲು ಹಾಗೂ 15.71 ಕೋಟಿ ಬಾಕಿ ಬಡ್ಡಿ ಮನ್ನಾ ಮಾಡಲು ನಿರ್ಣಯಿಸಿದೆ. ಹೀಗಾಗಿ 52.25 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಸಮಸ್ಯೆ ನಿವಾರಣೆ ಆಗಿದೆ. ಆರ್ಥಿಕವಾಗಿ ತೊಂದರೆಯಲ್ಲಿದ್ದ ಸರಕಾರಿ ಸ್ವಾಮ್ಯದ ಈ ಕಾರ್ಖಾನೆಯನ್ನು ಉಳಿಸಿ, ರೈತರು ಬೆಳೆದಿರುವ ಕಬ್ಬು ನುರಿಸುವ ಕಾರ್ಯ ಆರಂಭಿಸಲು ಸಾಧ್ಯವಾಗುವಂತೆ ಚಾಮುಂಡೇಶ್ವರಿ ವಿದ್ಯುತ್ ಕಂಪನಿಗೆ ವಿದ್ಯುತ್ ಬಾಕಿ ಪಾವತಿಸಲು ನೆರವಾಗುವಂತೆ ಕಳೆದ…
ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕು ಹಲವೆಡೆ ತುರ್ತು ವಿದ್ಯುತ್ ನಿರ್ವಹಣಾ ಕಾಮಗಾರಿಯನ್ನು ನಾಳೆ ಕೈಗೊಳ್ಳಲಾಗುತ್ತಿದೆ. ಈ ಕಾರಣದಿಂದಾಗಿ ನಾಳೆ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಈ ಕುರಿತಂತೆ ಮೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ: 15.12.2024 ರ ಭಾನುವಾರದಂದು 110/33/11 ಕೆವಿ ಸಾಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದಿದೆ. ನಾಳೆ ಸಾಗರದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ದಿನಾಂಕ 15.12.2024 ರಂದು ಸಾಗರ ಪಟ್ಟಣ ವ್ಯಾಪ್ತಿಯ ಎಫ್-1 ಸಾಗರ ಟೌನ್, ಎಫ್-7 ಮಂಗಳಬೀಸು ಇಂಡಸ್ಟ್ರಿಯಲ್ ಏರಿಯಾ, ಎಫ್-8 ಮಾರಿಕಾಂಬ, ಎಫ್-15 ಆರ್.ಎಂ.ಸಿ, ಎಫ್-II ಎಸ್.ಎನ್.ನಗರ ಮತ್ತು ಗ್ರಾಮೀಣ ವ್ಯಾಪ್ತಿಯ ಎಫ್-2 ಮಾಲ್ವೆ, ಎಫ್-3 ಹೆಗ್ಗೋಡು, ಎಫ್-4 ಆವಿನಹಳ್ಳಿ, ಎಫ್-5 ವರದಹಳ್ಳಿ, ಎಫ್-6 ಬೊಮ್ಮತ್ತಿ, ಎಫ್-9 ಮಾಸೂರು, ಎಫ್-14 ಹಿರೇನೆಲ್ಲೂರು ಹಾಗೂ ಎಫ್-16 ಲಿಂಗದಹಳ್ಳಿ…
ಬೆಂಗಳೂರು: ಗೃಹಲಕ್ಷ್ಮೀ ಹಣದಿಂದ ಈಗಾಗಲೇ ಟಿವಿ, ಫ್ರಿಡ್ಜ್, ಬೈಕ್ ಖರೀದಿಸಿಸಲಾಗಿತ್ತು. ಈಗ ಮುಂದುವರೆದು ಬೋರ್ ವೆಲ್ ಅನ್ನೇ ಗೃಹ ಲಕ್ಷ್ಮೀ ಹಣದಿಂದ ಅತ್ತೆ-ಸೊಸೆ ಕೊರೆಸಿದ್ದಾರೆ. ಈ ಮಾಹಿತಿಯನ್ನು ಹಂಚಿಕೊಂಡಿರುವಂತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ ಅನುಷ್ಠಾನಗೊಂಡಾಗಿನಿಂದ ರಾಜ್ಯದಲ್ಲಿ ತನ್ನದೇ ಆದ ಸದ್ದನ್ನು ಮಾಡುತ್ತಿದ್ದು, ಲಕ್ಷಾಂತರ ಕೆಲಸ ಕಾರ್ಯಗಳಿಗೆ ಗೃಹಲಕ್ಷ್ಮಿಯ ಹಣ ವರದಾನವಾಗಿದೆ. ಯೋಜನೆಯಡಿ ಪ್ರತಿ ತಿಂಗಳು ನೀಡುತ್ತಿರುವ 2,000/- ರೂ, ಹಣ ಕೂಡಿಟ್ಟು ಗದಗ ಜಿಲ್ಲೆಯ ಗಜೇಂದ್ರಗಡ್ ಪಟ್ಟಣದ ಮಾಲದಾರ ಓಣಿಯ ಅತ್ತೆ ಹಾಗೂ ಸೊಸೆ ಬೊರವೆಲ್ ಹಾಕಿಸಿದ್ದು, ಬೊರವೆಲ್ ನಿಂದ ಒಳ್ಳೆಯ ನೀರನ್ನು ಪಡೆದಿದ್ದಾರೆ ಎಂದಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಅತ್ತೆ ಮಾಬುಬೀ ಹಾಗೂ ಸೊಸೆ ರೋಷನ್ ಬೇಗಂ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಬೊರವೆಲ್ ಹಾಕಿಸಲು ಒಟ್ಟು 60 ಸಾವಿರ ರೂ,ಗಳು ಖರ್ಚಾಗಿದ್ದು, ಗೃಹಲಕ್ಷ್ಮಿ ಯೋಜನೆಯ 44 ಸಾವಿರ ಬಳಕೆ…