Author: kannadanewsnow09

ಪಟಿಯಾಲ: ಶನಿವಾರ ರಾತ್ರಿ ಅಮೃತಸರ ವಿಮಾನ ನಿಲ್ದಾಣದಲ್ಲಿ ಇಳಿದ ಸಿ -17 ವಿಮಾನದಲ್ಲಿ ಯುಎಸ್ ಗಡೀಪಾರು ಮಾಡಿದ 116 ಜನರಲ್ಲಿ ಪಟಿಯಾಲ ಜಿಲ್ಲೆಯ ರಾಜ್ಪುರದ ಇಬ್ಬರು ಯುವಕರನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಆರೋಪಿಗಳಾದ ಸಂದೀಪ್ ಸಿಂಗ್ ಅಲಿಯಾಸ್ ಸನ್ನಿ ಮತ್ತು ಪ್ರದೀಪ್ ಸಿಂಗ್ 2023 ರಲ್ಲಿ ದಾಖಲಾದ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದರು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ನಾನಕ್ ಸಿಂಗ್ ಅಮೃತಸರ ವಿಮಾನ ನಿಲ್ದಾಣದಲ್ಲಿ ಬಂಧನವನ್ನು ದೃಢಪಡಿಸಿದರು. ಸಂದೀಪ್ ಮತ್ತು ಇತರ ನಾಲ್ವರ ವಿರುದ್ಧ 2023 ರ ಜೂನ್ನಲ್ಲಿ ರಾಜ್ಪುರದಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯ ಸಮಯದಲ್ಲಿ, ಸಂದೀಪ್ ಅವರ ಇನ್ನೊಬ್ಬ ಸಹಚರ ಪ್ರದೀಪ್ ಹೆಸರನ್ನು ಎಫ್ಐಆರ್ಗೆ ಸೇರಿಸಲಾಗಿದೆ. ಇವರಿಬ್ಬರನ್ನು ಬಂಧಿಸಲು ರಾಜ್ಪುರ ಪೊಲೀಸ್ ಠಾಣೆಯ ಎಸ್ಎಚ್ಒ ನೇತೃತ್ವದ ತಂಡವನ್ನು ಶನಿವಾರ ಅಮೃತಸರ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಗಿದೆ. ಪಂಜಾಬ್ನ 65 ಮಂದಿ ಸೇರಿದಂತೆ 116 ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಯುಎಸ್ ಮಿಲಿಟರಿ ವಿಮಾನ…

Read More

ನವದೆಹಲಿ: ಭಾರತದ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ಪಾದದ ಗಾಯದಿಂದಾಗಿ ಮುಂಬರುವ ವಿದರ್ಭ ವಿರುದ್ಧದ ರಣಜಿ ಟ್ರೋಫಿ ಸೆಮಿಫೈನಲ್ನಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ. ಭಾರತದ ಚಾಂಪಿಯನ್ಸ್ ಟ್ರೋಫಿ ತಂಡದಿಂದ ಅವರನ್ನು ಕೈಬಿಟ್ಟ ಕೆಲವೇ ದಿನಗಳಲ್ಲಿ ಈ ಹಿನ್ನಡೆಯಾಗಿದ್ದು, ಇದು ಯುವ ಕ್ರಿಕೆಟಿಗನಿಗೆ ಡಬಲ್ ಹೊಡೆತವಾಗಿದೆ. ವರದಿಗಳ ಪ್ರಕಾರ, ವಾರಾಂತ್ಯದಲ್ಲಿ ತರಬೇತಿ ಅವಧಿಯಲ್ಲಿ ಜೈಸ್ವಾಲ್ ಅವರ ಬಲ ಪಾದಕ್ಕೆ ಗಾಯವಾಗಿದ್ದು, ಫೆಬ್ರವರಿ 16 ರಂದು ನಿಗದಿಯಾಗಿರುವ ನಿರ್ಣಾಯಕ ನಾಕೌಟ್ ಪಂದ್ಯಕ್ಕೆ ಅವರು ಅನರ್ಹರಾಗಿದ್ದಾರೆ. ಗಾಯವು ಅವರನ್ನು ಮುಂಬೈನ ಉನ್ನತ ಮಟ್ಟದ ಪಂದ್ಯದಿಂದ ಹೊರಗಿಡುವುದಲ್ಲದೆ, ಚಾಂಪಿಯನ್ಸ್ ಟ್ರೋಫಿ ತಂಡದಿಂದ ಹೊರಗುಳಿದ ನಂತರ ತ್ವರಿತ ಪುನರಾಗಮನದ ಅವಕಾಶವನ್ನು ನಿರಾಕರಿಸುತ್ತದೆ. ಭಾರತದ ಚಾಂಪಿಯನ್ಸ್ ಟ್ರೋಫಿ ತಂಡದಿಂದ ಜೈಸ್ವಾಲ್ ಅವರನ್ನು ಕೈಬಿಟ್ಟಿರುವುದು ಕೊನೆಯ ಕ್ಷಣದ ನಿರ್ಧಾರವಾಗಿದ್ದು, ಅವರ ಬದಲಿಗೆ ಸ್ಪಿನ್ ತಜ್ಞ ವರುಣ್ ಚಕ್ರವರ್ತಿ ಅವರನ್ನು ಕರೆತರಲು ಆಯ್ಕೆದಾರರು ನಿರ್ಧರಿಸಿದ್ದಾರೆ. ನಾಗ್ಪುರದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯ ಆರಂಭಿಕ ಪಂದ್ಯದಲ್ಲಿ ಜೈಸ್ವಾಲ್ ಅವರ ಏಕದಿನ ಚೊಚ್ಚಲ ಪಂದ್ಯವನ್ನು ಅನುಸರಿಸಿ ಈ…

Read More

ಹುಬ್ಬಳ್ಳಿ: ನಗರದಲ್ಲಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವಂತ ಘಟನ ನಡೆದಿದೆ. ಹುಬ್ಬಳ್ಳಿಯ ವಿದ್ಯಾನಗರದ ಬಳಿಯ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಸುಜಿತ್(21) ಹಾಗೂ ವಿಕಾಸ್(17) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ಅಪಘಾತದ ದೃಶ್ಯ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ರಸ್ತೆ ಬದಿಯ ಕಂಬಕ್ಕೆ ಬೈಕ್ ಡಿಕ್ಕಿಯಾಗಿ 100 ಮೀಟರ್ ದೂರದವರೆಗೆ ಬೈಕ್ ಗಿರಕಿ ಹೊಡೆದಿರೋದು ಕಂಡು ಬಂದಿದೆ. ಅಂದಹಾಗೇ ಸುಜಿತ್ ಹಾಗೂ ವಿಕಾಸ್ ಅಜ್ಜಿಯ ತಿಥಿ ಕಾರ್ಯ ಮುಗಿಸಿ ವಾಪಾಸ್ ಆಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. https://kannadanewsnow.com/kannada/state-govt-has-recommended-metro-fare-hike-basavaraj-bommai/ https://kannadanewsnow.com/kannada/shocking-young-girls-fight-for-a-young-man-by-tearing-their-clothes-in-the-middle-of-the-road-video-viral/

Read More

ಹುಬ್ಬಳ್ಳಿ: ಮೆಟ್ರೊ ದರ ಏರಿಕೆಗೆ ರಾಜ್ಯ ಸರ್ಕಾರವೇ ಶಿಫಾರಸ್ಸು ಮಾಡಿದೆ. ಮುಖ್ಯ ಮಂತ್ರಿಗಳು ದರ ಏರಿಕೆ ವಿಚಾರವಾಗಿ‌ ನಿರ್ದೇಶನ‌ ಕೊಟ್ಟಿರುವುದೇ ಅದಕ್ಕೆ ಸಾಕ್ಷಿ. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿರುವುದರಿಂದ ಎಲ್ಲದರ ಏರಿಕೆ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಅದಕ್ಕೆ ಎಲ್ಲ ದರಗಳನ್ನೂ ಏರಿಸುತ್ತಿದೆ. ಮೆಟ್ರೋ‌ ದರ ಏರಿಕೆ ಮಾಡಿದ್ದು ನಾವಲ್ಲ. ದರ ನಿಗದಿ ಮಾಡುವ ಒಂದು ಸಮಿತಿ ಇದೆ. ಮೆಟ್ರೋ ದರ ವಿಚಾರದಲ್ಲಿ ಎಲ್ಲವೂ ಅಧಿಕಾರ ರಾಜ್ಯ ಸರ್ಕಾರಕ್ಕೆ ಇರುತ್ತದೆ. ಅದರಲ್ಲಿ ರಾಜ್ಯದ ಅಧಿಕಾರಿಗಳಿರುತ್ತಾರೆ. ಅದಕ್ಕೆ ರಾಜ್ಯ ಸರ್ಕಾರವೇ ಶಿಫಾರಸ್ಸು ಮಾಡಿದೆ. ಮುಖ್ಯ ಮಂತ್ರಿಗಳು ದರ ಏರಿಕೆ ವಿಚಾರವಾಗಿ‌ ನಿರ್ದೇಶನ‌ ಕೊಟ್ಟಿರುವುದೇ ಅದಕ್ಕೆ ಸಾಕ್ಷಿ ಎಂದು ಹೇಳಿದರು. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿರುವುದರಿಂದ ಎಲ್ಲದರ ಏರಿಕೆ ಮಾಡುತ್ತಿದೆ. ವಿದ್ಯುತ್, ನೀರು, ಹಾಲಿನ‌ ದರ ಸೇರಿದಂತೆ ಎಲ್ಲ ದರ ಏರಿಸಿದೆ. ಸರ್ಕಾರ ಹಣಕಾಸಿನ‌‌ ನಿರ್ವಹಣೆಯಲ್ಲಿ…

Read More

ಬೆಂಗಳೂರು: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕಾಮಗಾರಿಯನ್ನು ಹಂತಹಂತವಾಗಿ ಅನುಷ್ಠಾನಗೊಳಿಸಿ, ಭಕ್ತಾಧಿಗಳಿಗೆ ಸಮಗ್ರ ಸೌಲಭ್ಯ ಒದಗಿಸುವ ಹಾಗೂ ಶ್ರೀ ಕ್ಷೇತ್ರವನ್ನು ಮತ್ತಷ್ಟು ಸಾರ್ವಜನಿಕ ಸ್ನೇಹಿಯಾಗಿಸಲು ಮಾಸ್ಟರ್ ಪ್ಲಾನ್ ರೂಪಿಸಲು ಸಭೆ ಹಾಗೂ ಹೊಸದಾಗಿ ಸಮಿತಿ ರಚನೆ ಸಂಬಂಧ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಸಭೆ ನಡೆಸಿದರು. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಕಲಂ 77 ರನ್ವಯ 15 ಜನ ಅಧಿಕಾರಿ/ಅಧಿಕಾರೇತರ ಸದಸ್ಯರನ್ನು ಮತ್ತು ಹೆಚ್ಚುವರಿಯಾಗಿ 3 ಜನ ಸದಸ್ಯರುಗಳನ್ನು ಒಳಗೊಂಡಂತೆ ಮೇಲ್ವಿಚಾರಣಾ ಸಮಿತಿ ರಚಸಿ ಆದೇಶಿಸಲಾಗಿದೆ. ದಿನಾಂಕ:15.02.2025 ರಂದು ನಡೆದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಮಾಸ್ಟರ್ ಪ್ಲಾನ್ ಯೋಜನೆಯ ಮೇಲ್ವಿಚಾರಣೆ ಸಮಿತಿ ಸಭೆಯಲ್ಲಿ ಈ‌ ಕೆಳಕಂಡ ತೀರ್ಮಾನಗಳನ್ನು‌ ತೆಗೆದುಕೊಳ್ಳಲಾಗಿದೆ. ಆಯುಕ್ತರು, ಮುಜರಾಯಿ ಇಲಾಖೆ ಅವರು ಅಧ್ಯಕ್ಷರಾಗಿರುತ್ತಾರೆ‌ 1.ದೇವಳದ ಸುತ್ತು ಗೋಪುರ (ಸುತ್ತುಪೌಳಿ) ನಿರ್ಮಾಣ. ಇದನ್ನು ಸ್ಥಳೀಯ ಸಂಸ್ಕೃತಿ ಮತ್ತು ದೇವಾಲಯದ ಕಟ್ಟಡದ ವಿನ್ಯಾಸಕ್ಕೆ ಸರಿ…

Read More

ಬೆಂಗಳೂರು : ಪಂಜಾಬಿನ ಪಟಿಯಾಲ ಬಳಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರನ್ನು ಏರ್ ಆಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕರೆತರಲು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಅಧಿಕಾರಿಗಳು ಏರ್ ಆಂಬುಲೆನ್ಸ್ ಸಜ್ಜುಗೊಳಿಸಿದ್ದು ಶಾಂತಕುಮಾರ್ ಅವರನ್ನು ಚಂಡೀಗಡದಿಂದ ಬೆಂಗಳೂರಿಗೆ ಕರೆತಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗುವುದು. ರಸ್ತೆ ಅಪಘಾತದಲ್ಲಿ ಶಾಂತಕುಮಾರ್ ಅವರ ಬೆನ್ನು ಮೂಳೆಗೆ ಗಂಭೀರ ಗಾಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಸ್ತುತ ಶಾಂತಕುಮಾರ್ ಅವರಿಗೆ ಪಟಿಯಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. https://kannadanewsnow.com/kannada/alert-state-workers-beware-if-you-receive-fraudulent-calls-bring-them-to-the-notice-of-the-authorities-immediately/ https://kannadanewsnow.com/kannada/hdk-objects-to-renaming-bengaluru-south-district-dk-shivakumar/

Read More

ನವದೆಹಲಿ: ಸೆಕ್ಯುರಿಟೀಸ್ ಹೂಡಿಕೆಯ ಹೆಸರಿನಲ್ಲಿ ಹಲವಾರು ಠೇವಣಿದಾರರನ್ನು ವಂಚಿಸಿದ ವಂಚನೆ ಹೂಡಿಕೆ ಯೋಜನೆಯ “ಮೆಗಾ” ಮನಿ ಲಾಂಡರಿಂಗ್ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇಡಿ) 1,646 ಕೋಟಿ ರೂ.ಗಳ ಅತಿದೊಡ್ಡ ಕ್ರಿಪ್ಟೋಕರೆನ್ಸಿಯನ್ನು ವಶಪಡಿಸಿಕೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ‘ಬಿಟ್ ಕನೆಕ್ಟ್ ಲೆಂಡಿಂಗ್ ಪ್ರೋಗ್ರಾಂ’ ಮೂಲಕ ಹೂಡಿಕೆಗಳ ರೂಪದಲ್ಲಿ ಸೆಕ್ಯುರಿಟಿಗಳ “ಮೋಸದ” ಮತ್ತು ನೋಂದಾಯಿಸದ ಕೊಡುಗೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಶನಿವಾರ ಹೊಸ ಸುತ್ತಿನ ಶೋಧಗಳನ್ನು ಮುಕ್ತಾಯಗೊಳಿಸಿದ ನಂತರ ಫೆಡರಲ್ ತನಿಖಾ ಸಂಸ್ಥೆಯ ಅಹಮದಾಬಾದ್ ಕಚೇರಿ 13.50 ಲಕ್ಷ ರೂ ನಗದು, ಎಸ್ ಯುವಿ ಮತ್ತು ಹಲವಾರು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡಿದೆ. ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ದಾಖಲಾದ ಇಡಿ ಪ್ರಕರಣವು ಸೂರತ್ ಪೊಲೀಸ್ ಅಪರಾಧ ವಿಭಾಗದ ಎಫ್ಐಆರ್ನಿಂದ ಹುಟ್ಟಿಕೊಂಡಿದೆ, ಇದು ನವೆಂಬರ್ 2016 ರಿಂದ ಜನವರಿ 2018 ರ ನಡುವೆ (ಅಪನಗದೀಕರಣದ ನಂತರ) ನಡೆದಿದೆ ಎಂದು ಹೇಳಿದೆ. ಈ ಕ್ರಿಪ್ಟೋ ವ್ಯಾಲೆಟ್ಗಳ ಮೂಲ ಮತ್ತು ನಿಯಂತ್ರಕಗಳನ್ನು…

Read More

ಬೆಂಗಳೂರು: ರಾಜ್ಯದಲ್ಲಿ ಕೆ ಎಫ್ ಡಿ ಬಾಧಿತ ಎಪಿಎಲ್ ಕುಟುಂಬಕ್ಕೂ ಉಚಿತ ಚಿಕಿತ್ಸೆ ನೀಡುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಮಲೆನಾಡು ಭಾಗಗಳಲ್ಲಿ ಹೆಚ್ಚು ಕಾಡುತ್ತಿರುವ ಕ್ಯಾಸನೂರು ಫಾರೆಸ್ಟ್‌ ಡಿಸೀಸ್ (ಕೆಎಫ್‌ಡಿ) ನಿಯಂತ್ರಣಕ್ಕೆ ನಮ್ಮ ಸರ್ಕಾರ ಸರ್ವ ಪ್ರಯತ್ನಗಳನ್ನು ನಡೆಸುತ್ತಿದೆ. ರೋಗದಿಂದ ಬಾಧಿತರಾದವರಿಗೆ ಚಿಕಿತ್ಸೆ ಉಚಿತವಾಗಿದ್ದು, ಈ ಯೋಜನೆಯನ್ನು ಎಪಿಎಲ್‌ ಕುಟುಂಬಗಳಿಗೂ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಅಡಿ ನೋಂದಾಯಿಸಿಕೊಂಡಿರುವ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರೆಯಲಿದೆ. ಇದರಿಂದ ನೂರಾರು ಕುಟುಂಬಗಳಿಗೆ ಸಹಾಯವಾಗಲಿದೆ ಎಂದು ಆರೋಗ್ಯ ಸಚಿವರಾದ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ. https://twitter.com/KarnatakaVarthe/status/1890756994757538028 https://kannadanewsnow.com/kannada/ordinance-to-prevent-microfinance-harassment-should-not-fail-siddaramaiah/ https://kannadanewsnow.com/kannada/alert-state-workers-beware-if-you-receive-fraudulent-calls-bring-them-to-the-notice-of-the-authorities-immediately/

Read More

ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ತಡೆಗಾಗಿ ಸುಗ್ರೀವಾಜ್ಞೆ ಜಾರಿಗೊಳಿಸಲಾಗಿದೆ. ಈ ಸುಗ್ರೀವಾಜ್ಞೆಯ ಉದ್ದೇಶ ವಿಫಲವಾಗಬಾರದು. ಸಾಲ ವಸೂಲಿಗೆ ರೌಡಿಗಳ ಬಳಕೆ, ಬಲವಂತದ ವಸೂಲಿಗೆ ತಕ್ಷಣ ಬ್ರೇಕ್ ಹಾಕಿ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಇಂದು ಮೈಕ್ರೋ ಫೈನಾನ್ಸ್‌ ಕುರಿತು ಸಿಎಂ ಸಿದ್ಧರಾಮಯ್ಯ ಅವರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ನಡೆಸಿದರು. ಈ ಸಭೆಯಲ್ಲಿ ಈ ಕೆಳಕಂಡ ಮಹತ್ವದ ಸೂಚನೆ ನೀಡಿದ್ದಾರೆ. • ಸಾಲ ವಸೂಲಾತಿ ಸಂದರ್ಭದಲ್ಲಿ ಸಾಲ ಪಡೆದವರಿಗೆ ಯಾವುದೇ ಕಿರುಕುಳ ಉಂಟಾಗಬಾರದು ಎಂಬ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಕಾಯ್ದೆಯ ಎಲ್ಲಾ ಅಂಶಗಳನ್ನು ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕು. • ಪರವಾನಿಗೆ ಪಡೆಯದ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳ ಮೇಲೆ ನಿರಂತರ ನಿಗಾ ಇರಿಸಬೇಕು. ಪರವಾನಿಗೆ ಪಡೆದಿರುವ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳು ಆರ್‌ಬಿಐ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವುದನ್ನು ಖಾತ್ರಿಪಡಿಸಬೇಕು. ಬಲವಂತದ ವಸೂಲಾತಿ ಮಾಡುವವರ ವಿರುದ್ದ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು.…

Read More

ಹಾಸನ: ನಾನು ಸಿನಿಮಾ ಹಂಚಿಕೆದಾರರು 1985ರಲ್ಲಿ ಕಷ್ಟಪಟ್ಟು ಬಿಡದಿಯ ಬಳಿ ಖರೀದಿಸಿದ 45 ಎಕರೆ ಜಮೀನನ್ನು ಲಪಟಾಯಿಸಲು ರಾಜ್ಯ ಕಾಂಗ್ರೆಸ್ ಸರಕಾರ ಹೊಂಚು ಹಾಕುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು. ಹಾಸನದಲ್ಲಿ ಅರೆಸೇನಾ ಪಡೆಯ ನಿವೃತ್ತ ಯೋಧರ ಭವನದ ಉದ್ಘಾಟನೆ ಮಾಡಿದ ನಂತರ ಮಾಧ್ಯಮಗಳ ಜತೆ ಅವರು ಮಾತನಾಡಿದರು. ಆ ಭೂಮಿಯನ್ನು ನಾನು ಕಷ್ಟಪಟ್ಟು ಸಂಪಾದಿಸಿದ್ದೇನೆ. ಅದರಲ್ಲಿ ಒತ್ತುವರಿ ಆಗಿದೆ ಎಂದು ಸಿದ್ದರಾಮಯ್ಯ ಸರಕಾರ ಐದು ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಮಾಡಿ ನನ್ನ ಮೇಲೆ ದಾಳಿಗೆ ಬಿಟ್ಟಿದೆ ಎಂದು ಅವರು ನೇರ ಆರೋಪ ಮಾಡಿದರು. ನಿನ್ನೆಯ ದಿನ (ಶುಕ್ರವಾರ) ನನಗೆ ನೋಟಿಸ್ ಅನ್ನೇ ನೀಡದೆ ದಾಳಿ ನಡೆಸಲು ಹೊರಟಿದ್ದರು. ಸಂಬಂಧಪಟ್ಟ ಪ್ರಧಾನ ಕಾರ್ಯದರ್ಶಿಗೆ ನಾನು ಹೇಳಿದೆ. “ನೋಡಿ, ಇದು ಸರ್ಕಾರಿ ಜಾಮೀನು ಅಲ್ಲ. ನನ್ನ ಸ್ವಂತ ಜಮೀನು. ನನಗೆ ನೋಟಿಸನ್ನೇ ನೀಡದೇ ಹೇಗೆ ಬರುತ್ತೀರಿ? ನಲವತ್ತು ವರ್ಷಗಳ ಹಿಂದೆ ಭೂಮಿಯನ್ನು ಖರೀದಿ…

Read More