Author: kannadanewsnow09

ಬೆಂಗಳೂರು: ಸರ್ಕಾರಿ ಜಮೀನಿಗೆ ನಿಯಮ ಬಾಹಿರವಾಗಿ ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ಐಎಎಸ್ ಅಧಿಕಾರಿ ವಾಸಂತಿ ಅಮರ್ ವಿರುದ್ಧ ಸರ್ಕಾರ ನೀಡಿದಂತ ದೂರಿನ ಹಿನ್ನಲೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಹಿಂದೆ ಶ್ರೀಮತಿ ವಾಸಂತಿ ಅಮರ್ (ಭಾ.ಆ.ಸೇ) ಹಿಂದಿನ ವಿಶೇಷ ಜಿಲ್ಲಾಧಿಕಾರಿ-3 ಬೆಂಗಳೂರು ಉತ್ತರ ಉಪ ವಿಭಾಗ ರವರು ಬೆಂಗಳೂರು ಉತ್ತರ ತಾಲೂಕು, ದಾಸನಪುರ ಹೋಬಳಿ, ಹುಚ್ಚನಪಾಳ್ಯ ಗ್ರಾಮದ ಸರ್ವೇ ನಂ.8 ರಲ್ಲಿ, 10 ಎಕರೆ 20 ಗುಂಟೆ ಸರ್ಕಾರಿ ಜಮೀನಿಗೆ ನಿಯಮ ಬಾಹಿರವಾಗಿ ಆದೇಶ ಹೊರಡಿಸಿರುತ್ತಾರೆ. ಈ ಪ್ರಕರಣ ಕಾನೂನು ಬಾಹೀರವಾಗಿದ್ದು ಇದೀಗ ಅವರ ವಿರುದ್ಧ FIR ದಾಖಲಾಗಿದೆ. ಇಂದು ಬೆಂಗಳೂರಿನ 48ನೇ ಎಸಿಎಂಎಂ ನ್ಯಾಯಾಲಯದಲ್ಲಿ ದಾಖಲಾಗಿದ್ದಂತ ಎನ್ ಸಿ ಆರ್ ನಂ 112/2025ರ ಅನುಸಾರ ತನಿಖೆ ಕೈಗೊಳ್ಳಲು ಕೋರಿದ್ದು, ಅದರಂತೆ ನ್ಯಾಯಾಲಯವು ತನಿಖೆ ಕೈಗೊಳ್ಳಲು ಆದೇಶಿಸಿದೆ. ಹೀಗಾಗಿ ಕೆಎಎಸ್ ಅಧಿಕಾರಿ ಪ್ರಶಾಂತ್ ಖಾನಗೌಡ ಪಾಟೀಲ್ ಹಲಸೂರು ಗೇಟ್ ಪೊಲೀಸ್ ಠಾಣೆಗೆ ತೆರಳಿ ಐಎಎಸ್ ಅಧಿಕಾರಿ ವಾಸಂತಿ ಅಮರ್ ವಿರುದ್ಧ ದೂರು ನೀಡಿದ್ದಾರೆ.…

Read More

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ದಂಪತಿಗಳಿಗೆ ಹೆಣ್ಣು ಮಗು ಜನಿಸಿದೆ.  ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಫೆಬ್ರವರಿಯಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಗರ್ಭಧಾರಣೆಯ ಸುದ್ದಿಯನ್ನು ಹಂಚಿಕೊಂಡರು. ಈ ಸುದ್ದಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಮುದ್ದಾದ ಮಗುವಿನ ಸಾಕ್ಸ್‌ಗಳ ಫೋಟೋದೊಂದಿಗೆ ಹಂಚಿಕೊಳ್ಳಲಾಗಿದೆ. ಕಿಯಾರಾ ಅಡ್ವಾಣಿ ನಮ್ಮ ಜೀವನದ ಶ್ರೇಷ್ಠ ಉಡುಗೊರೆ. ಶೀಘ್ರದಲ್ಲೇ ಬರಲಿದೆ ಎಂದು ಬರೆದಿದ್ದರು. ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೆಬ್ರವರಿ, 2023 ರಲ್ಲಿ ರಾಜಸ್ಥಾನದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಕಿಯಾರಾ ಅಡ್ವಾಣಿ ‘ವಾರ್ 2’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಬಿಡುಗಡೆಯಾಗಲಿದೆ. ಏತನ್ಮಧ್ಯೆ, ಜಾನ್ವಿ ಕಪೂರ್ ಎದುರು ಸಿದ್ಧಾರ್ಥ್ ಮಲ್ಹೋತ್ರಾ ಅವರ ‘ಪರಮ್ ಸುಂದರಿ’ ಜುಲೈ 25 ರಂದು ಚಿತ್ರಮಂದಿರಗಳಿಗೆ ಬರಲಿದೆ. ಅವರು ಏಕ್ತಾ ಕಪೂರ್ ಅವರ ‘ವಿವಿಎಎನ್: ಫೋರ್ಸ್ ಆಫ್ ದಿ ಫಾರೆಸ್ಟ್’ ಅನ್ನು ಸಹ ಪೈಪ್‌ಲೈನ್‌ನಲ್ಲಿ ಹೊಂದಿದ್ದಾರೆ.

Read More

ಶಿವಮೊಗ್ಗ : ಜಿಲ್ಲೆಯ ಸಾಗರ ತಾಲ್ಲೂಕಿನ ಉಳ್ಳೂರು ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಯನ್ನು ವರ್ಗಾಯಿಸುವಂತೆ ಒತ್ತಾಯಿಸಿ ಮಂಗಳವಾರ ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆಯಿಂದ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಗುರುಕೃಷ್ಣ ಶೆಣೈಗೆ ಮನವಿ ಮಾಡಲಾಯಿತು. ಈ ಮನವಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆ ತಾಲ್ಲೂಕು ಅಧ್ಯಕ್ಷ ವಸೀಮ್ ಉಳ್ಳೂರು, ಗ್ರಾಮಾಡಳಿತ ದೇಶದ ಅಭಿವೃದ್ದಿಗೆ ಸಂಕೇತವಾಗಿರುತ್ತದೆ. ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಉತ್ತಮವಾಗಿ ಕೆಲಸ ಮಾಡಿದರೆ ಗ್ರಾಮಗಳು ಅಭಿವೃದ್ದಿಯಾಗತ್ತದೆ. ಆದರೆ ಉಳ್ಳೂರು ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಕರ್ತವ್ಯಲೋಪದಿಂದಾಗಿ ಪಂಚಾಯ್ತಿ ಆಡಳಿತ ವ್ಯವಸ್ಥೆಯೆ ತಲೆಕೆಳಗಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಪಂಚಾಯ್ತಿಯಲ್ಲಿ ಕಸವಿಲೇವಾರಿ ವಾಹನ ಇದ್ದರೂ ಅದರ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ಮಳೆಯಲ್ಲಿ ವಾಹನ ನಿಲ್ಲಿಸುತ್ತಿರುವುದರಿಂದ ವಾಹನ ತುಕ್ಕು ಹಿಡಿಯುತ್ತಿದೆ. ಊರಿನ ಸ್ವಚ್ಚತೆಗೆ ಆದ್ಯತೆ ನೀಡುತ್ತಿಲ್ಲ. ಆಸ್ಪತ್ರೆ ರಸ್ತೆಯಲ್ಲಿ ಹೊಂಡಗುAಡಿಗಳು ಹೆಚ್ಚಿದ್ದು ಓಡಾಟಕ್ಕೆ ತೀವೃ ಅಡಚಣೆ ಉಂಟಾಗುತ್ತಿದೆ. ಈ-ಸ್ವತ್ತು ಸರಿಯಾದ ಸಮಯಕ್ಕೆ ಮಾಡಿಕೊಡದೆ ಗ್ರಾಮಸ್ಥರು ಪಂಚಾಯ್ತಿಗೆ ಹತ್ತಾರು ಬಾರಿ…

Read More

ನವದೆಹಲಿ” ಭಾರತೀಯ ಕಂಪನಿ ಕಾರ್ಯದರ್ಶಿಗಳ ಸಂಸ್ಥೆ (ICSI) ಜುಲೈ 2025 ರ ICSI ಕಂಪನಿ ಕಾರ್ಯದರ್ಶಿ ಕಾರ್ಯನಿರ್ವಾಹಕ ಪ್ರವೇಶ ಪರೀಕ್ಷೆಯ (CSEET) ಅಂಕಪಟ್ಟಿಗಳನ್ನು ಪ್ರಕಟಿಸುವ ದಿನಾಂಕವನ್ನು ಬಿಡುಗಡೆ ಮಾಡಿದೆ. ಅಧಿಕೃತ ಪ್ರಕಟಣೆಯ ಪ್ರಕಾರ, ಜುಲೈ 16 (ಬುಧವಾರ) ಮಧ್ಯಾಹ್ನ 2 ಗಂಟೆಗೆ CSEET ಜುಲೈ 2025 ಫಲಿತಾಂಶಗಳನ್ನು ಪ್ರಕಟಿಸಲಾಗುವುದು. ಜುಲೈ 05, 2025 ಮತ್ತು ಜುಲೈ 07, 2025 ರಂದು ನಡೆದ ಕಂಪನಿ ಕಾರ್ಯದರ್ಶಿ ಕಾರ್ಯನಿರ್ವಾಹಕ ಪ್ರವೇಶ ಪರೀಕ್ಷೆಯ (CSEET) ಫಲಿತಾಂಶವನ್ನು ಬುಧವಾರ, ಜುಲೈ 16, 2025 ರಂದು ಮಧ್ಯಾಹ್ನ 02:00 ಗಂಟೆಗೆ ಘೋಷಿಸಲಾಗುವುದು. ವೈಯಕ್ತಿಕ ಅಭ್ಯರ್ಥಿಗಳ ವಿಷಯವಾರು ಅಂಕಗಳ ವಿವರಗಳೊಂದಿಗೆ ಫಲಿತಾಂಶವನ್ನು ಸಂಸ್ಥೆಯ ವೆಬ್‌ಸೈಟ್: www.icsi.edu ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ” ಎಂದು ಅಧಿಕೃತ ಅಧಿಸೂಚನೆ ತಿಳಿಸಿದೆ. CSEET ಜುಲೈ 2025 ರ ಅವಧಿಯ ಔಪಚಾರಿಕ ಇ-ಫಲಿತಾಂಶ-ಕಮ್-ಅಂಕಗಳ ಹೇಳಿಕೆಯನ್ನು ICSI – icsi.edu ವೆಬ್‌ಸೈಟ್‌ನಲ್ಲಿಯೂ ಅಪ್‌ಲೋಡ್ ಮಾಡಲಾಗುತ್ತದೆ ಎಂಬುದನ್ನು ವಿದ್ಯಾರ್ಥಿಗಳು ನೆನಪಿನಲ್ಲಿಡಬೇಕು. ಜುಲೈ, 2025 ರ ಕಂಪನಿ ಕಾರ್ಯದರ್ಶಿ ಕಾರ್ಯನಿರ್ವಾಹಕ ಪ್ರವೇಶ…

Read More

ಬೆಂಗಳೂರು: ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಮಂಗಳವಾರ ನಡೆದ ಎಐಸಿಸಿಯ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಸಭೆ ಬಳಿಕ ನಡೆದ ಮಾಧ್ಯಮಗೋಷ್ಠಿಯ ಮುಖ್ಯಾಂಶಗಳನ್ನು ಮುಂದೆ ಓದಿ. ಎಐಸಿಸಿ ಒಬಿಸಿ ಅಧ್ಯಕ್ಷರಾದ ಅನಿಲ್ ಜೈಹಿಂದ್: ಇಂದು ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಆರಂಭಿಕ ಸಭೆಯನ್ನು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯಿತು. ಈ ಸಮಿತಿಯನ್ನು ಇತ್ತೀಚೆಗೆ ಆಯೋಜಿಸಲಾಗಿದ್ದು, ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷನಾಗಿರುವ ನಾನು ಈ ಸಮಿತಿಯ ಸಂಚಾಲಕನಾಗಿದ್ದೇನೆ. ಇಂದಿನ ಸಭೆಯಲ್ಲಿ ಕೆಲ ವಿಚಾರಗಳನ್ನು ಚರ್ಚೆ ಮಾಡಲಾಗಿದ್ದು, ಪಕ್ಷದ ಎಲ್ಲಾ ಹಿಂದುಳಿದ ವರ್ಗಗಳ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆ ಬುಧವಾರವೂ ಮುಂದುವರಿಯುವುದರಿಂದ ಇಂದಿನ ಸಭೆಯಲ್ಲಿ ಚರ್ಚೆಯಾದ ವಿಚಾರಗಳ ಬಗ್ಗೆ ನಾನು ಯಾವುದೇ ಅಂಶ ಬಹಿರಂಗಪಡಿಸುವುದಿಲ್ಲ. ಬುಧವಾರ ಸಭೆ ಬಳಿಕ ಈ ಸಭೆಯಲ್ಲಿ ಚರ್ಚಿಸಲಾದ ಅಂಶಗಳು ಹಾಗೂ ಕೈಗೊಂಡ ನಿರ್ಣಯಗಳ ಬಗ್ಗೆ ಮಾಹಿತಿ ನೀಡಲಾಗುವುದು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ…

Read More

ಬೆಂಗಳೂರು: ನಗರದಲ್ಲಿ ರೌಡಿ ಶೀಟರ್ ಶಿವಕುಮಾರ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಬೆಂಗಳೂರಿನ ಹಲಸೂರು ಕೆರೆ ಬಳಿಯ ಮನೆಯ ಮುಂದೆ ರೌಡಿ ಶೀಟರ್ ಶಿವಕುಮಾರ್ ಆಲಿಯಾಸ್ ಬಿಕ್ಲು ಶಿವ ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಗೈದಿದ್ದಾರೆ. ಮನೆ ಮುಂದೆ ನಿಂತಿದ್ದಾಗಲೇ ನಾಲ್ಕೈದು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಬರ್ಬರವಾಗಿ ಕೊಚ್ಚಿ ಕೊಲೆ ಗೈದಿದ್ದಾರೆ. ಬಿಕ್ಲು ಶಿವನನ್ನು ಕೊಚ್ಚಿ ಕೊಲೆಗೈದು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಡಿಸಿಪಿ ಡಿ.ದೇವರಾಜ, ಜಂಟಿ ಪೊಲೀಸ್ ಆಯುಕ್ತ ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. https://kannadanewsnow.com/kannada/good-news-for-those-waiting-for-mds-admission-opportunity-to-pay-fees-until-july-17/ https://kannadanewsnow.com/kannada/illegal-order-for-government-land-fir-registered-against-ias-officer-vasanti-amar/

Read More

ಬೆಂಗಳೂರು: 2025ನೇ ಸಾಲಿನ ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದಂತೆ ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದ್ದು, ಆಸಕ್ತರಿಗೆ ತಮಗೆ ಸೂಕ್ತ ಎನಿಸುವ ಛಾಯ್ಸ್ ದಾಖಲಿಸಿ, ಶುಲ್ಕ ಪಾವತಿಸಲು ಜುಲೈ 17 ಕೊನೆ ದಿನವಾಗಿದೆ. ಛಾಯ್ಸ್-1 ಮತ್ತು 2 ಆಯ್ಕೆ ಮಾಡಿದ ಅಭ್ಯರ್ಥಿಗಳು ಮಾತ್ರ ಶುಲ್ಕ ಪಾವತಿಸಬೇಕು. ಛಾಯ್ಸ್- 1 ಆಯ್ಕೆ ಮಾಡಿದವರು ಜು.16 ಮತ್ತು 17 ರಂದು ಮೂಲ ದಾಖಲೆಗಳ ಸಮೇತ ಕೆಇಎ ಕಚೆರಿಗೆ ಬಂದು ಸಲ್ಲಿಸಿ, ಪ್ರವೇಶ ಪತ್ರಗಳನ್ನು ಪಡೆಯಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. ಅಭ್ಯರ್ಥಿಗಳು ಜು.18ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದೂ ಅವರು ವಿವರಿಸಿದ್ದಾರೆ. ಎನ್ ಆರ್ ಐ ವಾರ್ಡ್ ಕ್ಯಾಟಗರಿಯಡಿ ಸೀಟು ಪಡೆದವರ ಶುಲ್ಕವನ್ನು ಪ್ರಾಯೋಜಿಸಿದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದಲೇ ಕೆಇಎ ಖಾತೆಗೆ ಹಣ ಸಂದಾಯ‌ ಮಾಡಬೇಕು. ಒಂದು ವೇಳೆ ಸದ್ಯಕ್ಕೆ ಆ ರೀತಿ ಹಣ ವರ್ಗಾವಣೆ ಮಾಡಿಸಲು ಸಾಧ್ಯವಾಗದಿದ್ದರೆ ಕೆಇಎಗೆ ಡಿ.ಡಿ ಸಲ್ಲಿಸಿ, ಪ್ರವೇಶ…

Read More

ಉಕ್ರೇನ್: ಉಕ್ರೇನಿಯನ್ ಪ್ರಧಾನಿ ಡೆನಿಸ್ ಶ್ಮಿಹಾಲ್ ಮಂಗಳವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದು ಈ ವಾರದ ಕೊನೆಯಲ್ಲಿ ನಡೆಯಲಿರುವ ಪ್ರಮುಖ ಸರ್ಕಾರಿ ಪುನರ್ರಚನೆಗೆ ನಾಂದಿ ಹಾಡಿದೆ. ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಉಕ್ರೇನ್‌ನ ನಾಯಕತ್ವ ತಂಡದಲ್ಲಿ ವ್ಯಾಪಕವಾದ ಕೂಲಂಕಷ ಪರೀಕ್ಷೆಯನ್ನು ಪ್ರಸ್ತಾಪಿಸಿದ ಒಂದು ದಿನದ ನಂತರ ಈ ಘೋಷಣೆ ಹೊರಬಿದ್ದಿದ್ದು, ಶ್ಮಿಹಾಲ್ ಅವರ ನಂತರ ಪ್ರಧಾನಿಯಾಗಿ ಮೊದಲ ಉಪ ಪ್ರಧಾನ ಮಂತ್ರಿ ಮತ್ತು ಆರ್ಥಿಕ ಸಚಿವೆ ಯೂಲಿಯಾ ಸ್ವೈರಿಡೆಂಕೊ ಅವರನ್ನು ನಾಮನಿರ್ದೇಶನ ಮಾಡಿದ್ದಾರೆ. ಮಾರ್ಚ್ 2020 ರಿಂದ ಈ ಹುದ್ದೆಯನ್ನು ಅಲಂಕರಿಸಿರುವ ಶ್ಮಿಹಾಲ್, 1991 ರಲ್ಲಿ ದೇಶದ ಸ್ವಾತಂತ್ರ್ಯದ ನಂತರ ಉಕ್ರೇನ್‌ನಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ಅವರು ಈಗ ರಕ್ಷಣಾ ಸಚಿವ ರುಸ್ಟೆಮ್ ಉಮೆರೋವ್ ಅವರನ್ನು ಬದಲಿಸುವ ನಿರೀಕ್ಷೆಯಿದೆ. ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು “ಬಹಳ ಮುಖ್ಯವಾದ ಕೆಲಸ” ಕ್ಕೆ ಸರಿಯಾದ ಅರ್ಹತೆಗಳನ್ನು ಹೊಂದಿದ್ದಾರೆ ಎಂದು ಬಣ್ಣಿಸಿದ್ದಾರೆ. ಶ್ಮಿಹಾಲ್ ಅವರ “ಅಗಾಧ ಅನುಭವ” ವನ್ನು ಝೆಲೆನ್ಸ್ಕಿ…

Read More

ವಿಜಯಪುರ: ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಮಲಗಿದ್ದಲ್ಲೇ ಹೃದಯಾಘಾತದಿಂದ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ವಿಜಯಪುರ ತಾಲ್ಲೂಕಿನ ಶಿವಣಗಿ ಗ್ರಾಮದಲ್ಲಿ ಹೃದಯಾಘಾತಕ್ಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿ ಬಲಿಯಾಗಿದ್ದಾನೆ. ಹೃದಯಾಘಾತದಿಂದ ಸಿದ್ಧಾರ್ಥ ಬಡಿಗೇರ(18) ಸಾವನ್ನಪ್ಪಿದ್ದಾನೆ. ಮನೆಯಲ್ಲಿ ಮಲಗಿದ್ದಾಗಲೇ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಿದ್ಧಾರ್ಥಗೆ ಹೃದಯಾಘಾತ ಉಂಟಾಗಿದೆ. ಹೀಗಾಗಿ ಮಲಗಿದ್ದಲ್ಲೇ ಸಾವನ್ನಪ್ಪಿದ್ದಾನೆ. https://kannadanewsnow.com/kannada/extend-the-media-sanjeevini-scheme-to-all-journalists-kuwj-president-shivananda-tagadurs-plea-to-the-cm/ https://kannadanewsnow.com/kannada/special-digi-locker-technology-for-registration-of-healthcare-providers-in-the-state-cm-siddaramaiah-inaugurates/

Read More

ಮಂಡ್ಯ : ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಗಬೋರನದೊಡ್ಡಿ ಗ್ರಾಮದ ತೆಂಗಿನ ಕಾಯಿ ವ್ಯಾಪಾರಿಯಾದ ರಾಜಣ್ಣ (ಲಿಂಗರಾಜು) ಅವರು ಸೋಮವಾರದಂದು ವೇಳೆಯಲ್ಲಿ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಅವರನ್ನು ಸ್ಥಳೀಯ ಶ್ರೀ ಚಾಮುಂಡೇಶ್ವರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾದಂತೆ ಆಗಿದೆ. https://kannadanewsnow.com/kannada/reliance-logo-brand-cannot-be-used-for-online-products-delhi-high-court-order/ https://kannadanewsnow.com/kannada/the-government-has-ordered-the-implementation-of-uniform-rates-in-all-multiplexes-and-cinema-halls-in-the-state/

Read More