Subscribe to Updates
Get the latest creative news from FooBar about art, design and business.
Author: kannadanewsnow09
ಏರ್ ಫ್ರೈಯರ್ ಗಳು ಆಧುನಿಕ ದಿನದ ಅಡುಗೆಯಲ್ಲಿ ಬಳಸುವ ಅತ್ಯಂತ ಅನುಕೂಲಕರ ಗ್ಯಾಜೆಟ್ ಗಳಲ್ಲಿ ಒಂದಾಗಿದೆ. ಇದು ಹೆಚ್ಚು ಎಣ್ಣೆ, ಕೊಬ್ಬು ಮತ್ತು ಕ್ಯಾಲೊರಿಗಳಿಲ್ಲದೆ ಆರೋಗ್ಯಕರ ಆಹಾರವನ್ನು ತಯಾರಿಸಲು ನಿಮಗೆ ಸಹಾಯ ಮಾಡುತ್ತದೆ. ಆದಾಗ್ಯೂ, ಹೆಚ್ಚಿನ ತಾಪಮಾನದಲ್ಲಿ ಏರ್ ಫ್ರೈಯರ್ ಗಳನ್ನು ಬಳಸುವುದು ಅತ್ಯಂತ ವಿಷಕಾರಿ ಮತ್ತು ಕ್ಯಾನ್ಸರ್ ಅಪಾಯವನ್ನುಂಟು ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಏರ್ ಫ್ರೈಯರ್ ಗಳು ಸ್ವತಃ ಕ್ಯಾನ್ಸರ್ ಗೆ ಕಾರಣವಾಗದಿದ್ದರೂ, ಏರ್ ಫ್ರೈಯರ್ ಗಳು ಅಕ್ರಿಲಾಮೈಡ್ ಗಳು ಎಂದು ಕರೆಯಲ್ಪಡುವ ಸಂಯುಕ್ತಗಳನ್ನು ಉತ್ಪಾದಿಸುತ್ತವೆ. ಅವು “ಸಂಭವನೀಯ” ಕ್ಯಾನ್ಸರ್ ಕಾರಕಗಳಾಗಿವೆ. ಕರುಳಿನ ಆರೋಗ್ಯ ತಜ್ಞೆ ಡಾ.ಡಿಂಪಲ್ ಜಂಗ್ಡಾ ಅವರ ಪ್ರಕಾರ, ನಾನ್-ಸ್ಟಿಕ್ ಲೇಪನವು ಅದನ್ನು ವಿಷಕಾರಿಯನ್ನಾಗಿ ಮಾಡುತ್ತದೆ. ಭಾರವಾದ ಲೋಹಗಳನ್ನು ನಿಮ್ಮ ಆಹಾರಕ್ಕೆ ಬಿಡುಗಡೆ ಮಾಡುತ್ತದೆ. “ಏರ್ ಫ್ರೈಯರ್ಗಳನ್ನು ಹೆಚ್ಚಾಗಿ ಈ ನಾನ್-ಸ್ಟಿಕ್ ಲೇಪನದಿಂದ ಲೇಪಿಸಲಾಗುತ್ತದೆ. ಅದು ಬಿಸಿ ಮಾಡಿದಾಗ ವಿಷಕಾರಿ ಹೊಗೆಯನ್ನು ಬಿಡುಗಡೆ ಮಾಡುತ್ತದೆ. ಇದು ಈ ತಂತಿ ಲೇಪನಗಳನ್ನು ಸಹ ಹೊಂದಿದೆ – ಇವು…
ಬೆಂಗಳೂರು: ರಾಜ್ಯ ಸರ್ಕಾರದಿಂದ ಯುಪಿಎಸ್ಸಿ ಹಾಗೂ ಎಸ್ ಎಸ್ ಸಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಂತ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ. ಅದೇ ಪರೀಕ್ಷೆಗಾಗಿ ಅರ್ಜಿ ಸಲ್ಲಿಸಲು ಬೇಕಿರುವಂತ ಓಬಿಸಿ ಪ್ರಮಾಣಪತ್ರಕ್ಕಾಗಿ 2ನೇ ಸಲ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಈ ಸಂಬಂಧ ಅಟಲ್ ಜೀ ಜನಸ್ನೇಹಿ ನಿರ್ದೇಶನಾಲಯದ ನಿರ್ದೇಶಕರು ಮಾಹಿತಿ ನೀಡಿದ್ದು, UPSC ಸಿವಿಲ್ ಸರ್ವೀಸಸ್ ಪರೀಕ್ಷ ಆಕಾಂಕ್ಷಿಗಳಿಗೆ ಮತ್ತು SSC ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವ OBC ಅಭ್ಯರ್ಥಿಗಳು ದಿನಾಂಕ: 01.04.2024 ರಂದು/ನಂತರ ದಿಂದ 11.02.2025ರ ರೂಳಗೆ ಅನುಮೋದನೆಗೊಂಡ ಕೇಂದ್ರ ಓಬಿಸಿ ಪ್ರಮಾಣ ಪತ್ರವನ್ನು ಪಡೆಯಲು ಅವಕಾಶವನ್ನು ಕಲ್ಪಿಸಿಕೊಡಬೇಕೆಂದು ಹೋರಿರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಕೋರಿರುತ್ತಾರೆ ಎಂದು ತಿಳಿಸಿದ್ದಾರೆ. ಪರಿಶೀಲಿಸಲಾಗಿ, ಕೇಂದ್ರ ಸರ್ಕಾರವು ಹೊರಡಿಸಿದ ಅಧಿಸೂಚನೆಯ ಪ್ರಕಾರ CSE-2025 ಗೆ ಅರ್ಜಿ ಸಲ್ಲಿಸುವ OBC ಅಭ್ಯರ್ಥಿಗಳು ದಿನಾಂಕ: 01.04.2024 ರಂದು/ನಂತರ ದಿಂದ 11.02.2025ರ ರೂrf ಅನುಮೋದನೆಗೊಂಡ ಕೇಂದ್ರ ಓಬಿಸಿ ಪ್ರಮಾಣ ನೀಡಲು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕಂದಾಯ ಇಲಾಖೆ ರವರ…
ಉತ್ತರ ಪ್ರದೇಶ: ಪ್ರಯಾಗ್ ರಾಜ್ ಕಾಲ್ತುಳಿತದಲ್ಲಿ 30 ಭಕ್ತರು ಮೃತಪಟ್ಟಿದ್ದಾರೆ. ಅಲ್ಲದೇ 60 ಭಕ್ತರು ಗಾಯಗೊಂಡಿದ್ದಾರೆ ಎಂಬುದಾಗಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಡಿಐಜಿ ವೈಭವ್ ಕೃಷ್ಣ ಖಚಿತ ಮಾಹಿತಿಯನ್ನು ನೀಡಿದ್ದಾರೆ. ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಸಂದರ್ಭದಲ್ಲಿ ಸಂಗಮದಲ್ಲಿ ಕಾಲ್ತುಳಿತದಂತಹ ಘಟನೆ ಸಂಭವಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸಿದ್ದಾರೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ ಪ್ರಧಾನಿ ಮೋದಿ, ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಸಹಾಯ ಮಾಡುವಲ್ಲಿ ತೊಡಗಿದೆ ಎಂದು ಹೇಳಿದರು. ಇಂದು ಮುಂಜಾನೆ ಸಂಭವಿಸಿದ ಮಹಾಕುಂಭ ಕಾಲ್ತುಳಿತದಲ್ಲಿ ಮೂವತ್ತು ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. 25 ಜನರನ್ನು ಗುರುತಿಸಲಾಗಿದ್ದು, ಐವರನ್ನು ಗುರುತಿಸಲಾಗುತ್ತಿದೆ ಎಂದು ಮಹಾಕುಂಭದ ಡಿಐಜಿ ವೈಭವ್ ಕೃಷ್ಣ ಖಚಿತಪಡಿಸಿದ್ದಾರೆ. https://kannadanewsnow.com/kannada/for-the-attention-of-passengers-extension-of-unreserved-special-trains-between-belagavi-miraj/ https://kannadanewsnow.com/kannada/aap-congress-post-poll-alliance-likely-in-delhi-pm-modi/
ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ, ಬೆಳಗಾವಿ ಮತ್ತು ಮೀರಜ್ ನಿಲ್ದಾಣಗಳ ನಡುವಿನ ಕಾಯ್ದಿರಿಸದ ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ಮಾರ್ಚ್ 31, 2025 ರವರೆಗೆ ವಿಸ್ತರಿಸಲಾಗಿದೆ. ರೈಲುಗಳ ಸಂಖ್ಯೆ 07301/07302 ಬೆಳಗಾವಿ-ಮೀರಜ್-ಬೆಳಗಾವಿ ಮತ್ತು 07303/07304 ಬೆಳಗಾವಿ-ಮಿರಜ್-ಬೆಳಗಾವಿ ಕಾಯ್ದಿರಿಸದ ವಿಶೇಷ ರೈಲುಗಳ ಸಂಚಾರವನ್ನು ಮಾರ್ಚ್ 31, 2025 ರವರೆಗೆ ವಿಸ್ತರಿಸಲಾಗಿದೆ. ಇದಕ್ಕೂ ಮೊದಲು ಈ ರೈಲುಗಳ ಸಂಚಾರವನ್ನು ಜನವರಿ 31, 2025 ರವರೆಗೆ ಓಡಿಸಲು ಸೂಚಿಸಲಾಗಿತ್ತು. ಈ ರೈಲುಗಳು ಅಸ್ತಿತ್ವದಲ್ಲಿರುವ ಸಮಯ ಮತ್ತು ನಿಲುಗಡೆಗಳೊಂದಿಗೆ ಚಲಿಸುತ್ತವೆ. ರೈಲು ಸಂಚಾರ ಭಾಗಶಃ ರದ್ದು ಮುಂದುವರಿಕೆ ಕ್ಯಾಸಲ್ ರಾಕ್-ಲೋಂಡಾ ನಿಲ್ದಾಣಗಳ ನಡುವೆ ನಡೆಯುತ್ತಿರುವ ರೈಲ್ವೆ ವಿದ್ಯುದ್ದೀಕರಣ ಮತ್ತು ಎಂಜಿನಿಯರಿಂಗ್ ಕಾಮಗಾರಿ ಸಲುವಾಗಿ ಲೋಂಡಾ ಮತ್ತು ಕ್ಯಾಸಲ್ ರಾಕ್ ನಿಲ್ದಾಣಗಳ ನಡುವೆ ರೈಲು ಸಂಖ್ಯೆ 17333/17334 ರ ಭಾಗಶಃ ರದ್ದತಿಯನ್ನು ವಿಸ್ತರಿಸಲಾಗುತ್ತಿದೆ. ಫೆಬ್ರವರಿ 28, 2025 ರವರೆಗೆ, ರೈಲು ಸಂಖ್ಯೆ 17333 ಮೀರಜ್-ಕ್ಯಾಸಲ್ ರಾಕ್ ಡೈಲಿ ಕಾಯ್ದಿರಿಸದ ಎಕ್ಸ್ಪ್ರೆಸ್ ರೈಲು ಲೋಂಡಾವರೆಗೂ ಮಾತ್ರ ಸಂಚರಿಸಲಿದೆ. ಲೋಂಡಾ ಮತ್ತು ಕ್ಯಾಸಲ್ ರಾಕ್ ನಿಲ್ದಾಣಗಳ…
ಬೆಂಗಳೂರು : ಪ್ರಯಾಗ್ರಾಜ್ ಕುಂಭಮೇಳ ಕಾಲ್ತುಳಿತ ದುರಂತದಲ್ಲಿ ರಾಜ್ಯದ ನಾಲ್ಕು ಜನ ಮೃತಪಟ್ಟಿರುವ ಬಗ್ಗೆ ಶಂಕೆ ಇದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು. ವಿಕಾಸಸೌಧದ ಕಚೇರಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, “ಬೆಳಗಾವಿ ತಾಲೂಕು ಯಲ್ಲೂರು ರಸ್ತೆ ವಡಗಾಂವ್ ಭಾಗದ ಮೇಘಾ ದೀಪಕ್ ಹತ್ತರವರ್ (24), ಜ್ಯೋತಿ ದೀಪಕ್ ಹತ್ತರವರ್ (44) ಹಾಗೂ ಬೆಳಗಾವಿ ತಾಲೂಕಿನ ಶೆಟ್ಟಿಗಲ್ಲಿ ಭಾಗದ ಅರುಣಾ ಖೋರ್ಪಡೆ (61), ಮಹಾದೇವಿ ಹಣಮಂತ ಬಾವಣೂರ (48) ಮೃತಪಟ್ಟಿರುವ ಸಾಧ್ಯತೆ ಇದೆ ಎಂದರು. ರಾಜ್ಯದ ವಿಪತ್ತು ನಿರ್ವಹಣಾ ತಂಡ ಉತ್ತರಪ್ರದೇಶ ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದೆ. ಆದರೆ, ಉತ್ತರಪ್ರದೇಶ ಸರ್ಕಾರ ಪ್ರಯಾಗ್ರಾಜ್ ಕುಂಭಮೇಳ ದುರುಂತದಲ್ಲಿ ರಾಜ್ಯದ ಎಷ್ಟು ಜನ ಮೃತಪಟ್ಟಿದ್ದಾರೆ, ಎಷ್ಟು ಜನ ಗಾಯಾಳುಗಳಾಗಿದ್ದಾರೆ ಎಂಬ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ. ಬೆಳಗಾವಿ ಜಿಲ್ಲಾಧಿಕಾರಿ ಸ್ವತಃ ಕುಂಭಮೇಳಕ್ಕೆ ತೆರಳಿದವರ ಕುಟುಂಬದವರನ್ನು ಸಂಪರ್ಕಿಸಿ ನಾಲ್ಕು ಜನ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು. ಬಿಜೆಪಿ ನಾಯಕರ ಸಹಾಯದಿಂದ…
ಬೆಂಗಳೂರು: ಬೆಸ್ಕಾಂನ ಗ್ರಾಮಾಂತರ ಪ್ರದೇಶಗಳಲ್ಲಿ (ನಾನ್ ಆರ್ಎಪಿಡಿಆರ್ ಪಿ) ಸಮಗ್ರ ಕಂದಾಯ ನಿರ್ವಹಣಾ ಹೊಸ ತಂತ್ರಾಂಶ ಅಳವಡಿಕೆ ಕಾರ್ಯ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ದಿನಾಂಕ 30.01.2025 ರಿಂದ 01.02.2025 (3 ದಿನ)ರ ವರೆಗೆ ಬಿಲ್ಲಿಂಗ್, ಹೊಸ ಸಂಪರ್ಕ ಹಾಗೂ ತಂತ್ರಾಂಶ ಆಧಾರಿತ ಸೇವೆಗಳು ಲಭ್ಯವಿರುವುದಿಲ್ಲ. ಗ್ರಾಹಕರು ಸಹಕರಿಸಬೇಕಾಗಿ ಬೆಸ್ಕಾಂ ಪ್ರಕಟಣೆ ತಿಳಿಸಿದೆ. ಬೆಂಗಳೂರು ನಗರ ಜಿಲ್ಲೆ ಹೊರತು ಪಡಿಸಿ, ಬೆಸ್ಕಾಂ ವ್ಯಾಪ್ತಿಯ ಉಳಿದ 7 ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳಲ್ಲಿ ಕಂದಾಯ ಸಂಗ್ರಹ ಹೊರತು ಪಡಿಸಿ ತಂತ್ರಾಂಶ ಆಧಾರಿತ ಸೇವೆಗಳಲ್ಲಿ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. https://kannadanewsnow.com/kannada/i-condemn-the-arrogance-and-attitude-of-state-president-b-y-vijayendra-mp-dr-k-sudhakar/ https://kannadanewsnow.com/kannada/aap-congress-post-poll-alliance-likely-in-delhi-pm-modi/
ಚಿಕ್ಕಬಳ್ಳಾಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಯಾವುದೇ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಅವರು ಪಕ್ಷವನ್ನು ಅವನತಿಗೆ ಕೊಂಡೊಯ್ಯುವ ಜೊತೆಗೆ ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ. ಅವರನ್ನು ಬದಲಿಸಲು ವರಿಷ್ಠರಿಗೆ ಮನವಿ ಮಾಡುತ್ತೇನೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಕಿಡಿಕಾರಿದರು. ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ ಎಂಬ ಕಾರಣಕ್ಕೆ ನಾನು 2019 ರಲ್ಲಿ ಕಾಂಗ್ರೆಸ್ನಿಂದ ಬಿಜೆಪಿಗೆ ಬಂದೆ. ಎಷ್ಟೇ ಅಪಮಾನವಾದರೂ, ರಾಜಕೀಯವಾಗಿ ತುಳಿಯಲು ಯತ್ನಿಸಿದರೂ ಪಕ್ಷವನ್ನು ಬಿಡಲಿಲ್ಲ. ನಂತರ ನಾನು ಸೋತರೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಸಹಕಾರದಿಂದ ಪಕ್ಷ ಸಂಘಟನೆಗೆ ಶ್ರಮಿಸಿದ್ದೇನೆ. ಬಿಜೆಪಿ ಪಾಲಿಗೆ ಮರಳುಭೂಮಿಯಾಗಿರುವ ಈ ಪ್ರದೇಶದಲ್ಲಿ ಪಕ್ಷವನ್ನು ಬೆಳೆಸಲು ಶ್ರಮಿಸಿದ್ದೇನೆ ಎಂದರು. ಪಕ್ಷದ ಪದಾಧಿಕಾರಿಗಳ ಆಯ್ಕೆ ನಡೆಯುವಾಗ ಎಲ್ಲರ ಅಭಿಪ್ರಾಯ ಕೇಳಬೇಕು. ಆದರೆ ಏಕಚಕ್ರಾಧಿಪತ್ಯ ಎನ್ನುವಂತೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನನ್ನ ಮಾತೇ ನಡೆಯಬೇಕೆಂಬಂತೆ ವರ್ತಿಸಿದ್ದಾರೆ. ಜೀ ಹುಜೂರ್, ಯೆಸ್ ಬಾಸ್ ಎನ್ನುವವರನ್ನು ಪದಾಧಿಕಾರಿಗಳಿಗೆ ನೇಮಕ ಮಾಡಲಾಗಿದೆ. ಈ…
ಯಾದಗಿರಿ: ಇಂದು ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರು ರೈಲು ಸಂಖ್ಯೆ 22692 ಹಜರತ್ ನಿಜಾಮುದ್ದೀನ್ – ಕೆಎಸ್ಆರ್ ಬೆಂಗಳೂರು ರಾಜಧಾನಿ ಎಕ್ಸ್ಪ್ರೆಸ್ ರೈಲಿಗೆ ಇಂದು ಜನವರಿ 28, 2025 ರಂದು ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಗೆ ರಿಮೋಟ್ ವಿಡಿಯೋ ಲಿಂಕ್ ಮೂಲಕ ಹಸಿರು ನಿಶಾನೆ ತೋರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ವಿ.ಸೋಮಣ್ಣ ಅವರು, ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕರ್ನಾಟಕ ರಾಜ್ಯವು ಎಲ್ಲಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಅಭಿವೃದ್ಧಿಯನ್ನು ಕಾಣುತ್ತಿದೆ. 2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯಕ್ಕೆ ರೈಲ್ವೆ ಬಜೆಟ್ ಅನುದಾನ 7,560 ಕೋಟಿ ರೂ ಆಗಿದ್ದು. ಕಳೆದ ಕೆಲವು ವರ್ಷಗಳಲ್ಲಿ, ಕರ್ನಾಟಕದ ರೈಲ್ವೆ ಜಾಲವು ಹೊಸ ಮಾರ್ಗಗಳು, ವಿದ್ಯುದ್ದೀಕರಣ, ಸಾಮರ್ಥ್ಯ ವರ್ಧನೆ ಇತ್ಯಾದಿಗಳ ವಿಷಯದಲ್ಲಿ ಭಾರಿ ಅಭಿವೃದ್ಧಿಯನ್ನು ಕಂಡಿದೆ ಎಂದು ಹೇಳಿದರು. ಯಾದಗಿರಿ ರೈಲು ನಿಲ್ದಾಣದಲ್ಲಿ ರಾಜಧಾನಿ ಎಕ್ಸ್ಪ್ರೆಸ್ ನಿಲುಗಡೆಯಿಂದ ಜನರ ಬಹುಕಾಲದ ಆಕಾಂಕ್ಷೆ ನನಸಾಗಿದೆ ಎಂದು ಹೇಳಿದರು. ಯಾದಗಿರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ…
ಬೆಂಗಳೂರು: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವಂತ ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ಉಂಟಾಗಿ, ಕರ್ನಾಟಕದ ನಾಲ್ವರು ಸಾವನ್ನಪ್ಪಿದ್ದಾರೆ. ಈ ಹಿನ್ನಲೆಯಲ್ಲಿ ಕನ್ನಡಿಗರಿಗೆ ನೆರವಾಗಲು ರಾಜ್ಯ ಸರ್ಕಾರದಿದಂ ಸಹಾಯವಾಣಿ ಸಂಖ್ಯೆಯನ್ನು ಆರಂಭಿಸಲಾಗಿದೆ. ಈ ಕುರಿತಂತೆ ಕಂದಾಯ ಸಚಿವ ಕೃಷ್ಣಭೈರೇಗೌಡ ಮಾಹಿತಿ ನೀಡಿದ್ದು, ಉತ್ತರ ಪ್ರದೇಶದ ಸರ್ಕಾರದ ಪ್ರಕೃತಿ ವಿಕೋಪ ನಿರ್ವಹಣಾ ವಿಭಾಗದ ಜೊತೆ ಸಂಪರ್ಕದಲ್ಲಿ ಇದ್ದೇವೆ. ಕಂದಾಯ ಇಲಾಖೆಯ ಎಸಿಎಸ್ ರಶ್ಮಿಯವರು ಈಗಾಗಲೇ ಯುಪಿ ಸರ್ಕಾರದ ಜೊತೆ ಮಾತನಾಡಿದ್ದಾರೆ. ಒಂದಿಬ್ಬರಿಗೆ ಗಾಯ ಆಗಿದೆ ಎಂಬ ಮಾಹಿತಿ ಇದೆ. ಯುಪಿ ಸರ್ಕಾರದಿಂದ ಇಲ್ಲಿಯ ತನಕ ಸಾವು ನೋವಿನ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನೂ ಕುಂಭಮೇಳದಲ್ಲಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೇ, ಕಾಲ್ತುಳಿತದಲ್ಲಿ ಸಿಕ್ಕಿ ಗಾಯಗೊಂಡಿದ್ದರೇ ಅವರ ನೆರವಿಗೆ ಸರ್ಕಾರ ಧಾವಿಸಲಿದೆ. ಇದಕ್ಕಾಗಿ ಸಹಾಯವಾಣಿ ಸಂಖ್ಯೆನ್ನು ಆರಂಭಿಸಲಾಗಿದ್ದು, ಸಂತ್ರಸ್ತರು ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ಹೀಗಿದೆ ಕುಂಭಮೇಳದ ಸಂತ್ರಸ್ತರ ನೆರವಿಗಾಗಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿದಂತ ಸಹಾಯವಾಣಿ…
ನವದೆಹಲಿ: ಸರ್ಕಾರವು ಸರ್ಕಾರಿ ಅಥವಾ ಖಾಸಗಿ ವಲಯದ ಉದ್ಯೋಗಿಗಳ ಪಿಂಚಣಿಯನ್ನು ನಿರ್ವಹಿಸಲು ಮೀಸಲಾಗಿರುವ ನಿರ್ದಿಷ್ಟ ವ್ಯವಸ್ಥೆಯನ್ನು ಹೊಂದಿದೆ. ಸ್ವಲ್ಪ ಸಮಯದ ಮೊದಲು, ಸರ್ಕಾರವು ಏಕೀಕೃತ ಪಿಂಚಣಿ ಯೋಜನೆಯನ್ನು ಘೋಷಿಸಿತು. ಇದು ಅದರ ಪ್ರಯೋಜನ ಪಡೆಯಬೇಕಿದ್ದ ಜನರಲ್ಲಿ ಸಾಕಷ್ಟು ಕೋಲಾಹಲವನ್ನು ಉಂಟುಮಾಡಿತು. ಭಾರತ ಸರ್ಕಾರವು ಇತ್ತೀಚೆಗೆ 8 ನೇ ವೇತನ ಆಯೋಗವನ್ನು ಅನುಮೋದಿಸಿದೆ ಮತ್ತು ಘೋಷಿಸಿದೆ. ಇದು ಏಕೀಕೃತ ಪಿಂಚಣಿ ಯೋಜನೆಯ (Unified Pension Scheme -UPS) ಪ್ರಮುಖ ನಿಬಂಧನೆಯನ್ನು ಹೊಂದಿದೆ. ಇದು ಪ್ರಸ್ತುತ ಈ ಪಿಂಚಣಿ ಯೋಜನೆಯಲ್ಲಿ ದಾಖಲಾದ ಎಲ್ಲಾ ಜನರಿಗೆ ಸಹಾಯ ಮಾಡುತ್ತದೆ. ಅದರೊಂದಿಗೆ ಅವರು ಹೊಂದಿರುವ ಯಾವುದೇ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ಆಶಿಸುತ್ತೇವೆ. 8ನೇ ವೇತನ ಆಯೋಗದ ಮೂಲಕ ಘೋಷಿಸಲಾದ ಯುಪಿಎಸ್ ನ ಪ್ರಮುಖ ನಿಬಂಧನೆಗಳ ಬಗ್ಗೆ ಇನ್ನಷ್ಟು ತಿಳಿಯಲು ಸುದ್ದಿ ಲೇಖನವನ್ನು ಓದಿ. 8ನೇ ವೇತನ ಆಯೋಗದ ಬಗ್ಗೆ ಭಾರತ ಸರ್ಕಾರವು ಇತ್ತೀಚೆಗೆ 8 ನೇ ವೇತನ ಆಯೋಗವನ್ನು ಅನುಮೋದಿಸಿದೆ. ಇದು ವಿವಿಧ ವ್ಯವಸ್ಥೆಗಳಿಗೆ ವಿವಿಧ ನಿಬಂಧನೆಗಳನ್ನು…