Author: kannadanewsnow09

ಬೆಂಗಳೂರು : ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಯಸಳೂರು ವಲಯದ ಶನಿವಾರ ಸಂತೆ ಬಳಿ ಹೇರೂರು ಗ್ರಾಮದ ಗವಿಬೆಟ್ಟ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಚಿತ್ರೀಕರಣ ನಡೆಸುತ್ತಿರುವ ಕಾಂತಾರಾ ಚಾಪ್ಟರ್ 1 ಚಿತ್ರ ತಂಡ ಷರತ್ತು ಉಲ್ಲಂಘಿಸಿದ್ದರೆ ಚಿತ್ರೀಕರಣ ನಿರ್ಬಂಧಿಸಿ, ಕ್ರಮ ಜರುಗಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಗವಿಬೆಟ್ಟ ಮತ್ತು ಸುತ್ತಮುತ್ತಲ ಪರಿಭಾವಿತ ಅರಣ್ಯದ ಅಂಚಿನ ಗೋಮಾಳದಲ್ಲಿ 23 ದಿನ ಕಾಂತಾರಾ ಚಾಪ್ಟರ್ 1 ಚಿತ್ರೀಕರಣ ನಡೆಸಲು ಹೊಂಬಾಳೆ ಫಿಲಂಸ್ ಚಿತ್ರತಂಡ ಅನುಮತಿ ಕೋರಿತ್ತು. ಇದಕ್ಕೆ ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಷರತ್ತುಬದ್ಧ ಅನುಮತಿ ನೀಡಿದ್ದಾರೆ ಎಂದರು. ಆದರೆ ಕಾಂತಾರಾ ತಂಡ ಚಿತ್ರೀಕರಣದ ವೇಳೆ ಸ್ಫೋಟಕ ಬಳಸುತ್ತಿದ್ದು, ಇದರಿಂದ ವನ್ಯಜೀವಿಗಳು ವಿಚಲಿತವಾಗುತ್ತಿವೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿರುತ್ತದೆ. ವಿಷಯ ತಿಳಿಯುತ್ತಿದ್ದಂತೆ ನಾನು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಇಂದೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ತಿಳಿಸಿದ್ದೇನೆ. ಚಿತ್ರತಂಡದಿಂದ…

Read More

ಬೆಂಗಳೂರು: ಕಡೂರು ಮತ್ತು ಬೀರೂರು ನಿಲ್ದಾಣದ ಯಾರ್ಡ್ ಗಳಲ್ಲಿ ಸುರಕ್ಷತೆಗೆ ಸಂಬಂಧಿಸಿದ ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ, ಈ ಕೆಳಗಿನ ರೈಲುಗಳನ್ನು ಭಾಗಶಃ ರದ್ದು, ಮರು ವೇಳಾಪಟ್ಟಿ ನಿಗದಿ/ನಿಯಂತ್ರಿಸಲಾಗುತ್ತಿದೆ. ಅವುಗಳ ಮಾಹಿತಿ ಈ ಕೆಳಗಿನಂತಿವೆ: ರೈಲುಗಳ ಭಾಗಶಃ ರದ್ದು: 1. ಜನವರಿ 25 ಮತ್ತು ಫೆಬ್ರವರಿ 1, 2025 ರಂದು ರೈಲು ಸಂಖ್ಯೆ 56271 ಶಿವಮೊಗ್ಗ ಟೌನ್-ಚಿಕ್ಕಮಗಳೂರು ಡೈಲಿ ಪ್ಯಾಸೆಂಜರ್ ರೈಲು ಬೀರೂರು ಮತ್ತು ಚಿಕ್ಕಮಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ಈ ರೈಲಿನ ಸೇವೆ ಬೀರೂರಿನಲ್ಲಿ ಕೊನೆಗೊಳ್ಳಲಿದೆ. ರೈಲುಗಳ ಮರು ವೇಳಾಪಟ್ಟಿ/ನಿಯಂತ್ರಣ: 1. ಜನವರಿ 21 ಮತ್ತು ಫೆಬ್ರವರಿ 4 ರಂದು ಪ್ರಾರಂಭವಾಗುವ ರೈಲು ಸಂಖ್ಯೆ 16213 ಅರಸೀಕೆರೆ-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ ಪ್ರೆಸ್ ರೈಲು ಅರಸೀಕೆರೆಯಿಂದ 75 ನಿಮಿಷ ತಡವಾಗಿ ಹೊರಡಲಿದೆ. 2. ಜನವರಿ 21 ಮತ್ತು ಫೆಬ್ರವರಿ 4 ರಂದು ಪ್ರಾರಂಭವಾಗುವ ರೈಲು ಸಂಖ್ಯೆ 56906 ಎಸ್ಎಸ್ಎಸ್ ಹುಬ್ಬಳ್ಳಿ-ಸೋಲಾಪುರ ಡೈಲಿ ಪ್ಯಾಸೆಂಜರ್ ರೈಲು ಹುಬ್ಬಳ್ಳಿಯಿಂದ 75 ನಿಮಿಷ ತಡವಾಗಿ ಹೊರಡಲಿದೆ.…

Read More

ಬೆಳಗಾವಿ : “ಪ್ರಭಾಕರ್ ಕೋರೆ ಅವರನ್ನು ನಾವು ಕಾಂಗ್ರೆಸ್ ಪಕ್ಷಕ್ಕೆ ಕರೆದೂ ಇಲ್ಲ, ಅವರು ಬರುವುದೂ ಇಲ್ಲ. ಇದೊಂದು ಸೌಹರ್ದಯುತ ಭೇಟಿ ಅಷ್ಟೇ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ್ ಕೋರೆ ಅವರ ಮನೆಗೆ ಸೋಮವಾರ ಭೇಟಿ ನೀಡಿದ ನಂತರ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, “ಪ್ರಭಾಕರ್ ಕೋರೆ ಅವರು ನಮಗೆ ಶಾಶ್ವತ ಗೆಳೆಯರು. ಯಾವುದೇ ಸರ್ಕಾರವಿದ್ದರೂ ಅವರ ಸಂಸ್ಥೆಗಳಿಂದ ಸಹಕಾರ ನೀಡುತ್ತಾರೆ. ಗಾಂಧಿ ಭಾರತ ಕಾರ್ಯಕ್ರಮವಿರುವ ಕಾರಣ ಗಣ್ಯರು ಉಳಿದುಕೊಳ್ಳಲು ಅವರ ಶಿಕ್ಷಣ ಸಂಸ್ಥೆಗಳಿಂದ 170 ಕ್ಕೂ ಹೆಚ್ಚು ಕೊಠಡಿಗಳನ್ನು ನೀಡಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಂಸ್ಥೆಯಿಂದ ಬೇಕಾದ ಸಹಾಯ ಮಾಡುತ್ತಿದ್ದಾರೆ” ಎಂದು ಹೇಳಿದರು. “ಈ ಕಾರಣಕ್ಕೆ ಅವರ ಮನೆಗೆ ಬಂದು ಸೌಹಾರ್ದಯುತ ಭೇಟಿ ನೀಡಿ, ಊಟ ಮಾಡಿದೆ. ಒಳ್ಳೆಯ ಜೋಳದ ರೊಟ್ಟಿ ಊಟ ನೀಡಿದ್ದಾರೆ. ಜೋಳವನ್ನು ತಿನ್ನುವವನು ಜಟ್ಟಿಯಂತೆ ಆಗುವನು ಎನ್ನುವ ಮಾತಿದೆ” ಎಂದರು. “ಈ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಕೋರೆ ಅವರ ಕುಟುಂಬ…

Read More

ಬೆಂಗಳೂರು: ಬಿಎಂಟಿಸಿಯ ನಿರ್ವಾಹಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದವರಿಗೆ ಮಹತ್ವದ ಮಾಹಿತಿ ಎನ್ನುವಂತೆ, ಸಂಭವನೀಯ ಆಯ್ಕೆ ಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ. ಈ ಕುರಿತಂತೆ ಬಿಎಂಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು,  ನಿರ್ವಾಹಕ (ಉಳಿಕೆ ಮೂಲ ವೃಂದದ) ಹುದ್ದೆಗೆ ಅಭ್ಯರ್ಥಿಗಳಿಗೆ ದಿನಾಂಕ:01/09/2024 ರಂದು ನಡೆದ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಸರಾಸರಿ ಶೇ.30 ಹಾಗೂ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿರುವ ಅಂಕಗಳ ಆಧಾರದ ಮೇಲೆ ಮೂಲದಾಖಲಾತಿಗಳ ಮತ್ತು ದೇಹದಾರ್ಢ್ಯತೆ ಪರಿಶೀಲನೆಗಾಗಿ ಅರ್ಹತಾ ಪಟ್ಟಿಯನ್ನು ಉಲ್ಲೇಖ-2ರಂತೆ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗಿತ್ತು ಎಂದಿದೆ. ಅದರಂತೆ ಮೂಲ ದಾಖಲೆ / ದೇಹದಾರ್ಢ್ಯತೆ ಪರಿಶೀಲನೆಗೆ ಹಾಜರಾಗಿ ಅರ್ಹತೆ ಹೊಂದಿದ ಅಭ್ಯರ್ಥಿಗಳ ಪೈಕಿ ಅಧಿಸೂಚನೆಯಲ್ಲಿ ಪ್ರಕಟಿಸಲಾದ ಹುದ್ದೆಗಳಿಗೆ ಅನುಗುಣವಾಗಿ ನಿರ್ವಾಹಕ, ದರ್ಜೆ-೩ (ಮೇಲ್ವಿಚಾರಕೇತರ) ಹುದ್ದೆಯ ಸಂಭವನೀಯ ಆಯ್ಕೆ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಮೀಸಲಾತಿವಾರು ಕೊನೆಯ ಅಭ್ಯರ್ಥಿಯ ಶೇಕಡವಾರು (Cut-Off) ಅಂಕಗಳು ಈ ಕೆಳಕಂಡಂತಿದೆ. ಮೀಸಲಾತಿ ಶೇಕಡವಾರು ಮಹಿಳಾ ಗ್ರಾಮೀಣ ಕನ್ನಡ ಮಾಧ್ಯಮ ಯೋಜನಾ ನಿರಾಶ್ರಿತ ಸಾಮಾನ್ಯ ವರ್ಗ ಪರಿಶಿಷ್ಟ ಜಾತಿ ಶೇಕಡ…

Read More

ಬೆಂಗಳೂರು: ಕಾಂತಾರಾ-2 ಚಿತ್ರತಂಡಕ್ಕೆ ಬಿಗ್ ಶಾಕ್ ಎನ್ನುವಂತೆ ಚಿತ್ರತಂಡ ಷರತ್ತು ಉಲ್ಲಂಘನೆಯ ಬಗ್ಗೆ ಪರಿಶೀಲಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೇ ಒಂದು ವೇಳೆ ವನ್ಯಜೀವಿಗಳಿಗೆ ಅಥವಾ ಸಸ್ಯ ಸಂಕುಲಕ್ಕೆ ಯಾವುದೇ ಹಾನಿಯಾಗಿದ್ದಲ್ಲಿ ಕೂಡಲೇ ಚಿತ್ರೀಕರಣ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುವಂತೆಯೂ ಖಡಕ್ ಆದೇಶ ಮಾಡಿದ್ದಾರೆ. ಈ ಸಂಬಂಧ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪತ್ರ ಬರೆದಿದ್ದಾರೆ. ಅದರಲ್ಲಿ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಯಸಳೂರು ವಲಯದ ಶನಿವಾರ ಸಂತ ಬಳಿ ಇರುವ ಹೇರೂರು ಗ್ರಾಮದ ಗವಿಬೆಟ್ಟ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ದಿ.03.01.2025 ರಿಂದ 15.01.2025 ರವರೆಗೆ ತಾತ್ಕಾಲಿಕ ಸೆಟ್ ನಿರ್ಮಾಣ ಮಾಡಿಕೊಳ್ಳಲು ಹಾಗೂ ದಿ.15.01.2025 ರಿಂದ 25.01.2025 ರವರೆಗೆ ಒಟ್ಟು 23 ದಿನ ಕಾಂತಾರಾ ಚಾಪ್ಟರ್ 1 ಚಿತ್ರೀಕರಣಕ್ಕೆ ಷರತ್ತುಬದ್ಧ ಅವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ಕಾಂತಾರಾ ತಂಡ ಕಾಡಿನಂಚಿನ ಪರಿಭಾವಿತ ಅರಣ್ಯ ಪ್ರದೇಶದ ಬಳಿ…

Read More

ಬಳ್ಳಾರಿ: ಜಿಲ್ಲೆಯ ಕರ್ನಾಟಕ ಹಾಲು ಉತ್ಪಾದ ಮಹಾಮಂಡಳದ ಕಚೇರಿಯ ಮುಂದೆಯೇ ವಾಮಾಚಾರ ಮಾಡಿರುವಂತ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ. ಬಳ್ಳಾರಿ ನಗರದಲ್ಲಿರುವಂತ ಕೆಎಂಎಫ್ ಕಚೇರಿಯ ಮುಂದೆಯೇ ವಾಮಾಚಾರ ಮಾಡಲಾಗಿದೆ. ನಿಂಬೆಹಣ್ಣು, ಕುಡಿಕೆ, ಮಡಿಕೆ, ಕುಂಕುಮ ಇರಿಸಿ ವಾಮಾಚಾರವನ್ನು ಮಾಡಿರೋದಾಗಿ ಹೇಳಲಾಗುತ್ತಿದೆ. ಈಗಾಗಲೇ ನಷ್ಟದಲ್ಲಿರುವಂತ ಕೆಎಂಎಫ್ ಮುಂದೆಯೇ ವಾಮಾಚಾರದಿಂದಾಗಿ ಕಚೇರಿಯ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ. ಬಳ್ಳಾರಿಯ ಕೆಎಂಎಫ್ ನಲ್ಲಿನ ಆಂತರಿಕ ವೈಮನಸ್ಸಿನಿಂದಲೇ ಈ ಕೃತ್ಯ ಎಸಗಿರೋದಾಗಿ ಹೇಳಲಾಗುತ್ತಿದೆ. ಮಡಿಕೆ, ತಾಯತ, 8 ನಿಂಬೆಹಣ್ಣು, ಕುಂಬಳಕಾಯಿಗೆ ಬಣ್ಣದ ದಾರ ಕಟ್ಟಿರುವಂತ ದುಷ್ಕರ್ಮಿಗಳು ವಾಮಾಚಾರ ಮಾಡಿರೋದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/eds-press-release-on-muda-politically-motivated-cm-siddaramaiah/ https://kannadanewsnow.com/kannada/now-melania-has-a-meme-coin-out-after-trumps-new-cryptocurrency/

Read More

ಬೆಂಗಳೂರು: ಮುಡಾ ಕುರಿತು ಇಡಿಯವರ ಪತ್ರಿಕಾ ಪ್ರಕಟಣೆ ರಾಜಕೀಯ ಪ್ರೇರಿತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮುಡಾ ಹಗರಣದ ಬಗ್ಗೆ ಇಡಿಯವರು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ, ಇಡಿಯವರ ಪತ್ರಿಕಾ ಪ್ರಕಟಣೆಗೂ ನನಗೂ ಸಂಬಂಧವಿಲ್ಲ. ಬಿಜೆಪಿಯವರು ಈ ಪತ್ರಿಕಾ ಪ್ರಕಟಣೆಯನ್ನು ಅನಗತ್ಯವಾಗಿ ಇಡಿಯವರ ಮೂಲಕ ಬಿಡುಗಡೆ ಮಾಡಿಸಿದ್ದಾರೆ ಎಂದರು. ಹಣ ದುರುಪಯೋಗದ ಪ್ರಶ್ನೆ ಇಲ್ಲ ಮುಡಾ ಮತ್ತು ವಾಲ್ಮೀಕಿ ನಿಗಮದ ಹಗರಣದ ಪ್ರತಿಪಕ್ಷಗಳ ಆರೋಪ ಹಾಗೂ ರಾಜ್ಯದ ತೆರಿಗೆ ಹಣದಲ್ಲಿ ನಾಳಿನ ಸಮಾರಂಭ ನಡೆಸುತ್ತಿರುವ ಬಗ್ಗೆ ಆರೋಪಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಹಣ ದುರುಪಯೋಗ ಆಗಿರುವ ಪ್ರಶ್ನೆಯೇ ಇಲ್ಲ ಎಂದರು. ತಪ್ಪಿತಸ್ಥರ ವಿರುದ್ಧ ಕ್ರಮ ವಿಜಯಪುರದಲ್ಲಿ ಕಾರ್ಮಿಕರ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ‍್ಳಲಾಗುವುದು ಎಂದರು. ಮೈಕ್ರೋ ಫೈನಾನ್ಸ್ ದಂಧೆ- ಕಾನೂನು ರೀತ್ಯ ಕ್ರಮ ಮೈಸೂರು ಚಾಮರಾಜನಗರ ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ಮೈಕ್ರೋ ಫೈನಾನ್ಸ್…

Read More

ಬೆಂಗಳೂರು: ಇದೇ ಜನವರಿ.30ರಂದು ರಾಜ್ಯ ಸಚಿವ ಸಂಪುಟದ ಮಹತ್ವದ ಸಭೆಯನ್ನು ನಿಗದಿ ಪಡಿಸಲಾಗಿದೆ. ಈ ಸಂಪುಟ ಸಭೆಯಲ್ಲೇ ಜಾತಿಗಣತಿ ವರದಿಯನ್ನು ಮಂಡನೆ ಮಾಡಲಾಗುತ್ತಿದ್ದು, ಆ ಬಳಿಕ ಜಾರಿಯ ನಿರ್ಧಾರವನ್ನು ಸರ್ಕಾರ ಪ್ರಕಟಿಸಲಿದೆ. ಕಳೆದ ರಾಜ್ಯ ಸಚಿವ ಸಂಪುಟ ಸಭೆಯ ನಂತ್ರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿಯ ಕುರಿತಂತೆ ಚರ್ಚಿಸುವುದಾಗಿ ತಿಳಿಸಿದ್ದರು. ಆ ಕಾಲ ಕೂಡಿ ಬಂದಿದೆ. ಜನವರಿ 30, 2025ರಂದು ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಿಗದಿಯಾಗಿದೆ. ದಿನಾಂಕ 30-01-2025ರ ಗುರುವಾರ ಬೆಳಿಗ್ಗೆ 11 ಗಂಟೆಗೆ ಸಚಿವ ಸಂಪುಟದ 2025ನೇ ಸಾಲಿನ 3ನೇ ಸಭೆಯನ್ನು ವಿಧಾನಸೌಧದ ಸಚಿವ ಸಂಪುಟ ಸಭಾಮಂದಿರದಲ್ಲಿ ಕರೆಯಲಾಗಿದೆ. ಈ ಸಚಿವ ಸಂಪುಟ ಸಭೆ ಮಹತ್ವದ್ದಾಗಿದ್ದು, ಹಲವು ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರ ಅನುಮೋದನೆ ನೀಡುವ ಸಾಧ್ಯತೆ ಇದೆ. https://kannadanewsnow.com/kannada/caste-census-to-hide-corruption-ex-mla-rajkumar-patil/ https://kannadanewsnow.com/kannada/now-melania-has-a-meme-coin-out-after-trumps-new-cryptocurrency/ https://kannadanewsnow.com/kannada/are-you-suffering-from-stuttering-participate-in-this-free-workshop-tondre-clear/

Read More

ಕಲಬುರಗಿ : ಇಡಿ 300 ಕೋಟಿ ಮೌಲ್ಯದ ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಇದರರ್ಥ ಸಿಎಂ ಅವರು ಕುಟುಂಬಕ್ಕೆ14 ಸೈಟು ಪಡೆದುಕೊಂಡಿದ್ದಾರೆ, ಮುಡಾಗೆ ಕೋಟಿ ಕೋಟಿ ನಷ್ಟ ಆಗಿದೆ ಅಕ್ರಮವಾಗಿ ಮುಡಾ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ, ಇದರಿಂದಲೂ ಭಾರೀ ನಷ್ಟ ಆಗಿದೆ ಅಂತ ಮಾಜಿ ಶಾಸಕ ರಾಜಕುಮಾರ ಪಾಟೀಲ್ ಹೇಳಿದರು. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಆರ್ ಟಿ ಐ ಕಾರ್ಯಕರ್ತ ಹಾಗು ಮೂಡ ಅಕ್ರಮದ ವಿರುದ್ದ ಹೋರಾಟ ಮಾಡುತ್ತಿರುವ ಸ್ನೇಹಮಹಿ ಕೃಷ್ಣ ಅವರಿಗೆ ಅಭಿನಂದನೆ ಸಲ್ಲಿಸಿದ ಅವರು ಸ್ನೇಹಮಯಿ ಕೃಷ್ಣಾ ಅವರ ಮೇಲೆಯೇ ಸರ್ಕಾರ ಆರೋಪ ಮಾಡಿ ಅವರನ್ನು ಬಂಧಿಸಲು ಹೋಗಿತ್ತು ಇಡಿ ಮುಟ್ಟುಗೋಲು ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಆರೋಪಿ ಸ್ಥಾನದಲ್ಲಿ ಮತ್ತೆ ನಿಲ್ಲುವಂತಾಗಿದೆ ತತಕ್ಷಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಅಂತ ಹೇಳಿದರು . ಬಿಜೆಪಿಯವ್ರು ಅನುದಾನ ವಾಪಸ್ ಕೊಡಲಿ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ, ರಾಜ್ಯ ಸರ್ಕಾರ ನಮಗೇನು ಉಪಕಾರ ಮಾಡ್ತಿದ್ದಾರಾ? ಅಂತ ಪ್ರಶ್ನೆ…

Read More

ಬೆಳಗಾವಿ : “ಪಕ್ಷವನ್ನು ಉಳಿಸುವುದು, ಸರ್ಕಾರವನ್ನು ಭದ್ರವಾಗಿಡುವುದೇ ನನ್ನ ಕರ್ತವ್ಯ. ಇದರ ಹೊರತಾಗಿ ನನಗೆ ಬೇರೆ ಯಾವುದೇ ಕರ್ತವ್ಯಗಳಿಲ್ಲ. ಬೇರೆ ಯಾವುದಕ್ಕೂ ನನ್ನ ಹೆಸರನ್ನು ಉಪಯೋಗಿಸಿಕೊಳ್ಳಬೇಡಿ. ನನಗೆ ಯಾರ ಜೊತೆಯೂ ಭಿನ್ನಾಭಿಪ್ರಾಯವಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಬೆಳಗಾವಿಯ ಸರ್ಕಿಟ್ ಹೌಸ್ ಬಳಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದರು. “ಕಾರ್ಯಕರ್ತರ ರಕ್ಷಣೆ ಮಾಡುವುದು ನನ್ನ ಮೊದಲ ಕರ್ತವ್ಯ. ನಾನು ನನ್ನ ಕೆಲಸವನ್ನು ಮಾಡುತ್ತಿದ್ದೇನೆ. ನಾನು, ಪಕ್ಷ, ಹೈಕಮಾಂಡ್ ಉಂಟು. ಮಾಧ್ಯಮದವರು ಯಾರೋ ಹೇಳಿದ ಸುಳ್ಳನ್ನು ನಂಬಬೇಡಿ. ಶಿವಕುಮಾರ್ ಅವರಿವರನ್ನು ಭೇಟಿ ಮಾಡಿದರು, ಪಕ್ಷದಲ್ಲಿ ಬಂಡಾಯವಿದೆ ಎಂದೆಲ್ಲಾ ಹೇಳಬೇಡಿ” ಎಂದು ಕಿಡಿಯಾದರು. ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯ, ಆಂತರಿಕ ಬೇಗುದಿ ಇಲ್ಲವೇ ಎಂದು ಕೇಳಿದಾಗ, “ಯಾವ ಬಂಡಾಯವೂ ಇಲ್ಲ. ಯಾರ ಜೊತೆಯೂ ವೈಯಕ್ತಿಕ ಭಿನ್ನಾಭಿಪ್ರಾಯವಿಲ್ಲ. ನಾನು ಎಲ್ಲರನ್ನು ಸಮಾನವಾಗಿ ಕಾಣುವ ಅಧ್ಯಕ್ಷ ಸ್ಥಾನದಲ್ಲಿದ್ದು, ನನಗೆ ಎಲ್ಲರೂ ಒಂದೇ. ಎಲ್ಲರನ್ನು ಸರಿ ಸಮಾನವಾಗಿ ತೆಗೆದುಕೊಂಡು ಹೋಗುವುದು ನನ್ನ ಕರ್ತವ್ಯ” ಎಂದರು. ಯಾರದ್ದೋ ಸುಳ್ಳನ್ನು…

Read More