Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು ಗ್ರಾಮಾಂತರ: ಜಮೀನು ಖಾತೆ ಸಂಬಂಧ ರೈತನಿಂದ 20,000 ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬೇಗೂರು ಗ್ರಾಮ ಪಂಚಾಯ್ತಿ ಪಿಡಿಓ ಬಿದ್ದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಬೇಗೂರು ಗ್ರಾಮ ಪಂಚಾಯ್ತಿ ಪಿಡಿಓ ಶೋಭಾರಾಣಿ ಎಂಬುವರು ಜಮೀನು ಖಾತೆ ಮಾಡಿಕೊಡಲು ರಮೇಶ್ ಎಂಬುವರಿಂದ 20,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ರಮೇಶ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇಂದು 20,000 ಲಂಚದ ಹಣವನ್ನು ಬ್ರೋಕರ್ ರುದ್ರಪ್ಪ ಮೂಲಕ ಪಿಡಿಓ ಶೋಭಾರಾಣಿ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿಯೇ ಹಿಡಿದಿದ್ದಾರೆ. ಇದೀಗ ವಶಕ್ಕೆ ಪಡೆದಿರುವಂತ ಲೋಕಾಯುಕ್ತ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ. https://kannadanewsnow.com/kannada/central-board-of-secondary-education-cbse-approves-cbse-accreditation-for-mount-carmel-school-in-shivamogga/ https://kannadanewsnow.com/kannada/more-than-500-illegal-immigrants-detained-since-trump-took-office/
ಶಿವಮೊಗ್ಗ: ಜಿಲ್ಲೆಯ ಜ್ಞಾನ ವಿಹಾರ್ ಎಕ್ಟೆನ್ಷನ್ ನಲ್ಲಿರುವಂತ ಮೌಂಟ್ ಕಾರ್ಮೆಲ್ ಶಾಲೆಗೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯಿಂದ ಸಿಬಿಎಸ್ಸಿ ಮಾನ್ಯತೆ ದೊರೆತಿದೆ. ಶಿವಮೊಗ್ಗದ ಜ್ಞಾನ ವೈಭವ ಎಕ್ಸಸ್ಟೆನ್ಷನ್ ನಲ್ಲಿ ಇರುವಂತ ಮೌಂಟ್ ಕಾರ್ಮಲ್ ಶಾಲೆಗೆ ಸಿಬಿಎಸ್ಸಿ ಮಾನ್ಯತೆಗಾಗಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಗೆ ಅರ್ಜಿ ಸಲ್ಲಿಸಲಾಗಿತ್ತು. ಕಾರ್ಮೆಲ್ ಜ್ಞಾನ ಎಜುಕೇಷನಲ್ ಟ್ರಸ್ಟ್ ನಿಂದ ಸಲ್ಲಿಸಲಾಗಿದ್ದಂತ ಸಿಬಿಎಸ್ಸಿ ಮಾನ್ಯತೆಯ ಅರ್ಜಿಯನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ( Central Board of Secondary Education – CBSE )ಅನುಮತಿಸಿದೆ. https://kannadanewsnow.com/kannada/namma-metro-to-start-from-6-am-on-january-26/ https://kannadanewsnow.com/kannada/cnn-to-lay-off-200-jobs-cnn-layoffs/
ಬೆಂಗಳೂರು: ರಾಜ್ಯದಲ್ಲೇ ಮೊದಲು ಎನ್ನುವಂತೆ ಫೆಬ್ರವರಿ 1 ಮತ್ತು 2ರಂದು 50 ತಂಡಗಳಿಂದ ಅರಣ್ಯ ಪಕ್ಷಿಗಣತಿಯನ್ನು ಅರಣ್ಯ ಇಲಾಖೆಯಿಂದ ನಡೆಸಲಾಗುತ್ತಿದೆ. ಈ ಮೂಲಕ ಅರಣ್ಯದಲ್ಲಿರುವಂತ ಪಕ್ಷಿಗಳ ಗಣತಿಯನ್ನು ನಡೆಸಲಾಗುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಮಾಹಿತಿ ನೀಡಲಾಗಿದ್ದು, ರಾಜ್ಯದಲ್ಲೇ ಮೊದಲ ಬಾರಿಗೆ ಪಕ್ಷಿಗಳ ಸಮೀಕ್ಷೆ ನಡೆಸಲು ಅರಣ್ಯ ಇಲಾಖೆ ನಿರ್ಧರಿಸಿದ್ದು, ಫೆಬ್ರವರಿ 1 ಮತ್ತು 2 ರಂದು ಮಲೆ ಮಹದೇಶ್ವರ ಬೆಟ್ಟ ವನ್ಯ ಜೀವಿಧಾಮದಲ್ಲಿ ಸಮೀಕ್ಷೆ ನಡೆಯಲಿದೆ. 2 ದಿನ ನಡೆಯುವ ಸಮೀಕ್ಷೆಗಾಗಿ 50 ತಂಡಗಳನ್ನು ರಚಿಸಲಾಗುತ್ತಿದೆ. ಈ ತಂಡಗಳು 2 ದಿನವೂ ಬೆಳಗಿನ ಜಾವ 3 ರಿಂದ 4 ಗಂಟೆಯವರೆಗೆ ಹಾಗೂ ಸಂಜೆ ವೇಳೆ ಕಾಡಿನಲ್ಲಿ ಸಂಚರಿಸಿ ಪಕ್ಷಿಗಳ ಇರುವಿಕೆಯನ್ನು ದಾಖಲಿಸಲಿವೆ ಎಂಬುದಾಗಿ ತಿಳಿಸಿದೆ. https://twitter.com/KarnatakaVarthe/status/1882673539834425850 https://kannadanewsnow.com/kannada/namma-metro-to-start-from-6-am-on-january-26/ https://kannadanewsnow.com/kannada/more-than-500-illegal-immigrants-detained-since-trump-took-office/
ಬೆಂಗಳೂರು: ನಗರದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಜನವರಿ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ನಮ್ಮ ಮೆಟ್ರೋ ( Namma Metro ) ಸಂಚಾರವನ್ನು ಬೆಳಿಗ್ಗೆ 6 ಗಂಟೆಯಿಂದಲೇ ಆರಂಭಿಸಲಾಗುತ್ತಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬಿಎಂಆರ್ ಸಿಎಲ್ ತಿಳಿಸಿದ್ದು,ಗಣರಾಜ್ಯೋತ್ಸವದ ಅಂಗವಾಗಿ, ಜನವರಿ 26, 2025ರ ಭಾನುವಾರದಂದು, ಮೆಟ್ರೋ ರೈಲು ಸೇವೆಗಳು ಬೆಳಿಗ್ಗೆ 07:00 ಗಂಟೆಯ ಬದಲಿಗೆ 06:00 ಗಂಟೆಗೆ ಎಲ್ಲಾ ನಾಲ್ಕು ಟರ್ಮಿನಲ್ಗಳಿಂದ ಮತ್ತು ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ನನಿಂದ ಪ್ರಾರಂಭವಾಗಲಿದೆ ಎಂಬುದಾಗಿ ತಿಳಿಸಿದೆ. ಲಾಲ್ಬಾಗ್ ಪುಷ್ಪ ಪ್ರದರ್ಶನ ಮತ್ತು ಮಾದಾವರದ ಬಿಐಇಸಿನಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಕ್ಕೆ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಮಟೋ ನಿಗಮವು ಈ ದಿನ ಹಸಿರು ಮತ್ತು ನೇರಳೆ ಮಾರ್ಗಗಳಲ್ಲಿ 20 ಹೆಚ್ಚುವರಿ ಟ್ರಿಪ್ಗಳನ್ನು ನಡೆಸಲಾಗುತ್ತದೆ ಎಂದಿದೆ. ಸಾರ್ವಜನಿಕರು ಲಾಲ್ಬಾಗ್ ಮೆಟ್ರೋ ನಿಲ್ದಾಣಕ್ಕೆ ಟೋಕನ್ಗಳು, ಸ್ಮಾರ್ಟ್ ಕಾರ್ಡ್ (ಸಿಎಸ್ಸಿ), ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (ಎನ್ಸಿಎಂಸಿ) ಮತ್ತು ಕ್ಯೂಆರ್ ಟಿಕೆಟ್ಗಳನ್ನು ಬಳಸಿ ಹಿಂತಿರುಗಬಹುದು. ಲಾಲ್ಬಾಗ್ ಮೆಟ್ರೋ ನಿಲ್ದಾಣದಲ್ಲಿ, ನಿಗಮವು ಟೋಕನ್ಗಳ ಬದಲಿಗೆ…
ಬೆಂಗಳೂರು: ಸಿಎಂ ಸಿದ್ಧರಾಮಯ್ಯ ಅವರು 2025ರ ಪುರುಷರ ಹಾಗೂ ಮಹಿಳಾ ಖೋಖೋ ವಿಶ್ವಕಪ್ ಗೆದ್ದಂತ ಇಬ್ಬರು ಕನ್ನಡಿಗರಿಗೆ ತಲಾ 5 ಲಕ್ಷ ಬಹುಮಾನವನ್ನು ಘೋಷಿಸಿದ್ದಾರೆ. 2025ರ ಪುರುಷರ ಹಾಗೂ ಮಹಿಳಾ ಖೋ ಖೋ ವಿಶ್ವಕಪ್ನಲ್ಲಿ ಅತ್ಯುತ್ತಮ ಆಟವಾಡಿ ಭಾರತ ತಂಡವು ಎರಡೂ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಲು ಅತ್ಯುತ್ತಮ ಪ್ರದರ್ಶನ ನೀಡಿದ ಮಂಡ್ಯ ಜಿಲ್ಲೆಯ ಡಿ.ಮಲ್ಲಿಗೆರೆ ಗ್ರಾಮದ ಎಂ.ಕೆ ಗೌತಮ್ ಹಾಗೂ ಮೈಸೂರು ನರಸೀಪುರದ ಕುರಬೂರಿನ ಚೈತ್ರಾ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು. ಇಬ್ಬರೂ ಪಟುಗಳಿಗೆ ತಲಾ 5 ಲಕ್ಷ ರೂಪಾಯಿಯ ಬಹುಮಾನ ಘೋಷಿಸಿದರು. ಸಚಿವರಾದ ಚಲುವರಾಯಸ್ವಾಮಿ ಮತ್ತು ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಉಪಸ್ಥಿತರಿದ್ದರು. https://kannadanewsnow.com/kannada/five-injured-in-ksrt-car-collision/ https://kannadanewsnow.com/kannada/more-than-500-illegal-immigrants-detained-since-trump-took-office/
ಚಾಮರಾಜನಗರ: ಜಿಲ್ಲೆಯಲ್ಲಿ ಕೆ ಎಸ್ ಆರ್ ಟಿ ಸಿ ಹಾಗೂ ಕಾರಿನ ನಡುವೆ ಭೀಕರ ಅವಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಐವರಿಗೆ ಗಂಭೀರ ಗಾಯವಾಗಿರೋದಾಗಿ ತಿಳಿದು ಬಂದಿದೆ. ಚಾಮರಾಜನಗರದಲ್ಲಿ ಕಾರು ಹಾಗೂ ಕೆ ಎಸ್ ಆರ್ ಟಿಸಿ ಬಸ್ಸಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದಂತ ಐವರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಆಗಮಿಸಿದಂತ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. https://kannadanewsnow.com/kannada/amul-cuts-milk-prices-by-rs-1-per-litre-across-india/ https://kannadanewsnow.com/kannada/more-than-500-illegal-immigrants-detained-since-trump-took-office/
ನವದೆಹಲಿ: ಅಮುಲ್ ಹಾಲಿನ ಬೆಲೆಯನ್ನು ಲೀಟರ್ಗೆ 1 ರೂಪಾಯಿ ಕಡಿಮೆ ಮಾಡಲಾಗಿದೆ. ಅಮುಲ್ ಗೋಲ್ಡ್, ಅಮುಲ್ ಶಕ್ತಿ ಮತ್ತು ಅಮುಲ್ ಫ್ರೆಶ್ ಬೆಲೆಗಳನ್ನು ಕಡಿಮೆ ಮಾಡಲಾಗಿದೆ ಎಂದು ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ (ಜಿಸಿಎಂಎಂಎಫ್) ತಿಳಿಸಿದೆ. ಹೊಸ ದರಗಳು ಇಂದಿನಿಂದ ಜನವರಿ 24 ರಿಂದ ಜಾರಿಗೆ ಬರಲಿವೆ. ಬೆಲೆ ಬದಲಾವಣೆಯ ನಂತರ, ಅಮುಲ್ ಗೋಲ್ಡ್ನ ಒಂದು ಲೀಟರ್ ಪ್ಯಾಕೆಟ್ನ ಬೆಲೆ ಈಗ 65 ರೂ.ಗೆ ಮತ್ತು ಒಂದು ಲೀಟರ್ ತಾಜಾ ಹಾಲಿನ ಪ್ಯಾಕೆಟ್ ಪ್ರತಿ ಲೀಟರ್ಗೆ 53 ರೂ.ಗೆ ಲಭ್ಯವಿದೆ. ಅಮುಲ್ ಗೋಲ್ಡ್, ಅಮುಲ್ ಫ್ರೆಶ್ ಮತ್ತು ಟಿ-ಸ್ಪೆಷಲ್ ಬೆಲೆಗಳನ್ನು ಕಡಿತಗೊಳಿಸಲಾಗಿದೆ. ಕಳೆದ ವರ್ಷ ಸಾರ್ವತ್ರಿಕ ಚುನಾವಣೆಯ ನಂತರ ಕಂಪನಿಯು ಪ್ರತಿ ಲೀಟರ್ಗೆ 2 ರೂಪಾಯಿಗಳಷ್ಟು ಬೆಲೆಯನ್ನು ಹೆಚ್ಚಿಸಿತ್ತು. ಕಳೆದ ವರ್ಷ ಜೂನ್ 4 ರಂದು ಘೋಷಿಸಲಾದ ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳಿಗೆ ಸ್ವಲ್ಪ ಮೊದಲು ಬೆಲೆಗಳನ್ನು ಹೆಚ್ಚಿಸಲಾಯಿತು. ಮೂರು ದಿನಗಳ ಹಿಂದೆ ಅಮುಲ್ ಹಾಲಿನ ಬೆಲೆಯನ್ನು ಹೆಚ್ಚಿಸಲಾಗಿದ್ದು, ಅಮುಲ್ ಗೋಲ್ಡ್…
ನವದೆಹಲಿ: ಅಮುಲ್ ಹಾಲಿನ ಉತ್ಪನ್ನಗಳ ಬೆಲೆಯನ್ನು ಇಳಿಕೆ ಮಾಡಲು ಅಮುಲ್ ನಿರ್ಧರಿಸಿದೆ. ಈ ಮೂಲಕ ಅಮುಲ್ ಹಾಲು ಬಳಕೆದಾರರಿಗೆ ಗುಡ್ ನ್ಯೂಸ್ ಅನ್ನು ನೀಡಿದೆ. ಈ ಕುರಿತಂತೆ ಮಾಹಿತಿ ನೀಡಲಾಗಿದ್ದು, ಅಮುಲ್ ತನ್ನ 3 ಪ್ರಮುಖ ರೂಪಾಂತರಗಳಲ್ಲಿ ಪ್ರತಿ ಲೀಟರ್ ಗೆ 1 ರೂಪಾಯಿ ಬೆಲೆ ಕಡಿತವನ್ನು ಘೋಷಿಸಿದೆ. ಪ್ರಮುಖ ಡೈರಿ ಬ್ರಾಂಡ್ ಅಮುಲ್ ತನ್ನ ಮೂರು ಪ್ರಮುಖ ಉತ್ಪನ್ನಗಳಾದ ಅಮುಲ್ ಗೋಲ್ಡ್, ಅಮುಲ್ ತಾಜಾ ಮತ್ತು ಅಮುಲ್ ಟೀ ಸ್ಪೆಷಲ್ ಮೇಲೆ ಪ್ರತಿ ಲೀಟರ್ಗೆ 1 ರೂ.ಗಳ ಬೆಲೆ ಕಡಿತವನ್ನು ಘೋಷಿಸಿದೆ. https://kannadanewsnow.com/kannada/governments-permission-mandatory-for-shooting-in-forests-minister-ishwar-khandre/ https://kannadanewsnow.com/kannada/more-than-500-illegal-immigrants-detained-since-trump-took-office/
ಬೆಂಗಳೂರು : ಅರಣ್ಯ ಪ್ರದೇಶದಲ್ಲಿ ಇನ್ನು ಮುಂದೆ ಸಿನಿಮಾ, ಸಾಕ್ಷ್ಯಚಿತ್ರ, ಧಾರಾವಾಹಿ ಸೇರಿದಂತೆ ಯಾವುದೇ ಚಿತ್ರೀಕರಣಕ್ಕೆ ಸರ್ಕಾರದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ. ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಸ್ಪಷ್ಟ ಸೂಚನೆ ನೀಡಿರುವ ಸಚಿವರು, ಚಲನಚಿತ್ರ, ದೂರದರ್ಶನ ಸಾಕ್ಷ್ಯಚಿತ್ರ, ಧಾರಾವಾಹಿ ಇತ್ಯಾದಿ ಚಿತ್ರೀಕರಣಕ್ಕೆ ಸಂಬಂಧಿತ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ನಿಗದಿತ ಶುಲ್ಕ ಕಟ್ಟಿಸಿಕೊಂಡು ಅನುಮತಿ ನೀಡುತ್ತಿದ್ದಾರೆ. ಇದಲ್ಲದೆ ಸ್ಥಳೀಯ ಮಟ್ಟದಲ್ಲೂ ಅಧಿಕಾರಿಗಳು ಅನುಮತಿ ನೀಡುತ್ತಿರುವುದರಿಂದ ಅರಣ್ಯ ಪ್ರದೇಶದ ಗೌಪ್ಯ ಮಾಹಿತಿ ಹೊರ ಜಗತ್ತಿಗೆ ಲಭಿಸುವ ಸಂಭವ ಇರುತ್ತದೆ. ಇದು ಪರಿಸರ ಹಾಗೂ ಜೀವವೈವಿಧ್ಯಕ್ಕೂ ಧಕ್ಕೆ ತರುತ್ತದೆ ಎಂದು ತಿಳಿಸಿದ್ದಾರೆ. ಅರಣ್ಯ ಹಾಗೂ ವನ್ಯ ಜೀವಿಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ, ಪ್ರಕೃತಿ ಹಸ್ತಾಂತರಿಸುವ ನಿಟ್ಟಿನಲ್ಲಿ ರಾಜ್ಯದ ಯಾವುದೇ ಅರಣ್ಯ ಪ್ರದೇಶದಲ್ಲಿ ಯಾವುದೇ ಬಗೆಯ ಚಿತ್ರೀಕರಣಕ್ಕೆ ಕಡ್ಡಾಯವಾಗಿ ಸರ್ಕಾರದ ವತಿಯಿಂದ ಅನುಮತಿ ಪಡೆಯಲು ಸೂಕ್ತ ಆದೇಶ ಹೊರಡಿಸುವಂತೆ…
ಹಾಸನ: ಮನೆಯಲ್ಲಿ ಯಾರು ಇಲ್ಲದ ವಿಷಯ ತಿಳಿದಂತ ಕಳ್ಳರು ಬಾಗಿಲು ಮುರಿದು ಕನ್ನ ಹಾಕಿದ್ದಾರೆ. ಮನೆಯಲ್ಲಿ ಸಿಕ್ಕಂತ ಚಿನ್ನ, ಬೆಳ್ಳಿ, ನಗದು ದೋಚಿದಂತ ಕಳ್ಳರು, ಅವೆಲ್ಲವನ್ನು ಮನೆಯ ಮುಂದೆ ನಿಲ್ಲಿಸಿದ್ದಂತ ಮಾಲೀಕರ ಕಾರಿನಲ್ಲಿಯೇ ತುಂಬಿಕೊಂಡು ಪರಾರಿಯಾಗಿರುವಂತ ಘಟನೆ ಹಾಸನದಲ್ಲಿ ನಡೆದಿದೆ. ಹಾಸನದ ವಿದ್ಯಾನಗರದ ನಿವಾಸಿ ವನಜಾಕ್ಷಿ ಎಂಬುವರು ಬೆಂಗಳೂರಿನಲ್ಲಿರುವ ಮಗನ ಮನೆಗೆ ತೆರಳಿದ್ದರು. ಕಳೆದ ಹತ್ತು ದಿನಗಳ ಹಿಂದೆ ಹೋಗಿದ್ದಂತ ಅವರು, ಮರಳಿ ಮನೆಗೆ ಬಂದಾಗ ಬಾಗಿಲು ಮುರಿದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾರು ಇಲ್ಲದ ವಿಚಾರ ತಿಳಿದಂತ ಕಳ್ಳರು ಒಡವೆ, ಬೆಳ್ಳಿ, ನಗದು ದೋಚಿದ್ದಾರೆ. ಆ ಬಳಿಕ ಮನೆಯಲ್ಲಿಯೇ ಇದ್ದಂತ ಕಾರಿನ ಕೀ ತೆಗೆದುಕೊಂಡು, ಇನ್ನೊಂದು ಗೇಟ್ ನ ಬೀಗ ಒಡೆದು ಕಾರಿನಲ್ಲಿ ಕಳ್ಳತನ ಮಾಡಿದ್ದಂತ ಎಲ್ಲಾ ವಸ್ತುಗಳನ್ನು ತುಂಬಿಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವಂತ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ. https://kannadanewsnow.com/kannada/cnn-to-lay-off-200-jobs-cnn-layoffs/ https://kannadanewsnow.com/kannada/more-than-500-illegal-immigrants-detained-since-trump-took-office/