Author: kannadanewsnow09

ಬೆಳಗಾವಿ: ರಾಜ್ಯದ ಎಲ್ಲಾ ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರ ವೇತನ ಹೆಚ್ಚಳಕ್ಕೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಇಲಾಖೆಯ ಈ ಒಂದು ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು. ಈ ಮೂಲಕ ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದಂತ ಅತಿಥಿ ಶಾಲಾ ಶಿಕ್ಷಕರಿಗೆ ಬಿಗ್ ಶಾಕ್ ಅನ್ನು ರಾಜ್ಯ ಸರ್ಕಾರ ನೀಡಿದೆ. ಮೆಲ್ಮನೆಯಲ್ಲಿ ಬಿಜೆಪಿಯ ಡಾ. ಧನಂಜಯ ಸರ್ಜೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಪ್ರಸ್ತುತ ನೀಡಲಾಗುತ್ತಿರುವ ಮಾಸಿಕ ಗೌರವ ಧನ ಮೊತ್ತವನ್ನು 2022ರಲ್ಲಿ ಆರ್ಥಿಕ ಇಲಾಖೆಯು ಪರಿಷ್ಕರಿಸಲು ಅನುಮತಿ ನೀಡಿತ್ತು. ಈಗ ಮತ್ತೆ ಪರಿಷ್ಕರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಆದರೆ ಈಗ ಮರು ಪರಿಶೀಲನೆಗಾಗಿ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದಾಗ, 48 ಸಾವಿರ ಅತಿಥಿ ಶಿಕ್ಷಕರಿದ್ದಾರೆ. ಕನಿಷ್ಠ ವೇತನಕ್ಕೆ ಅನುಗುಣವಾಗಿಯೂ ವೇತನ ನೀಡುತ್ತಿಲ್ಲ ಹೀಗಿರುವಾಗ ಗುಣಮಟ್ಟದ ಶಿಕ್ಷಣ ಹೇಗೆ ಸಾಧ್ಯ ಎಂದು…

Read More

ಬೆಂಗಳೂರು: ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್​ಎಂ ಕೃಷ್ಣ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ನಿನ್ನೆ ತಡರಾತ್ರಿ ನಿಧನರಾಗಿದ್ದರು. ಈ ಹಿನ್ನಲೆಯಲ್ಲಿ ಇಂದು ರಾಜ್ಯಾದ್ಯಂತ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ? ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿದ್ದ ಎಸ್.ಎಂ.ಕೃಷ್ಣ ರವರು ದಿನಾಂಕ: 10.12.2024ರ ಮಂಗಳವಾರ ಬೆಳಗಿನ ಜಾವ 02:30ಕ್ಕೆ ನಿಧನರಾದ ವಿಷಯವನ್ನು ಕರ್ನಾಟಕ ರಾಜ್ಯ ಸರ್ಕಾರವು ತೀವ್ರ ಸಂತಾಪದಿಂದ ಈ ಮೂಲಕ ಪ್ರಕಟಿಸಿದೆ. ಮುಂದುವರೆದು ದಿವಂಗತರ ಅಂತ್ಯಕ್ರಿಯೆಯನ್ನು 2:11.12.20240 ಬುಧವಾರದಂದು ಹುಟ್ಟೂರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದಿದೆ. ದಿವಂಗತರ ಗೌರವಾರ್ಥವಾಗಿ ದಿನಾಂಕ:11.12.2024ರ ಬುಧವಾರದಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ (ಎಲ್ಲಾ ಅನುದಾನಿತ ವಿದ್ಯಾ ಸಂಸ್ಥೆಗಳು ಸೇರಿದಂತೆ) ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ. ದಿನಾಂಕ:10.12.2024 ರಿಂದ ದಿನಾಂಕ:12.12.2024 ರವರೆಗೆ (ಉಭಯ ದಿನಗಳು…

Read More

ಬೆಂಗಳೂರು: ನಿನ್ನೆ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಂತ್ಯಸಂಸ್ಕಾರವನ್ನು ಇಂದು ಮಂಡ್ಯದ ಹುಟ್ಟೂರಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುತ್ತದೆ. ಅವರ ಇಂದಿನ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಈ ಕಳಗಿನಂತಿದೆ. ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಅಂತಿಮ ಸಂಸ್ಕಾರದ ಮಾಹಿತಿ * ಸೋಮವಾರ ತಡರಾತ್ರಿ ನಿಧನರಾದ ಮಾಜಿ ಮುಖ್ಯಮಂತ್ರಿ, ಹಿರಿಯ ಮುತ್ಸದ್ದಿ ಎಸ್‌.ಎಂ.ಕೃಷ್ಣ ಅವರ ಅಂತಿಮ ಸಂಸ್ಕಾರ ವಿಧಿಗಳು ಡಿಸೆಂಬರ್‌ 11ರ ಬುಧವಾರದ ಇಂದು ಜರುಗಲಿವೆ. * ಇಂದು ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಸದಾಶಿವನಗರ ಸ್ವಗೃಹದಿಂದ ಹೊರಟು ವಾಹನದಲ್ಲಿ ದಿವಂಗತ ಕೃಷ್ಣ ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುವುದು. * ಬೆಂಗಳೂರಿನ ಟೌನ್‌ ಹಾಲ್‌, ಮೈಸೂರು ಸರ್ಕಲ್‌, ರಾಜರಾಜೇಶ್ವರಿ ಆರ್ಚ್ ಮುಖಾಂತರ, ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ ಮೂಲಕ ಸಾಗಲಿದೆ. *ಇಂದು ಬೆಳಗ್ಗೆ 10.30 ಮದ್ದೂರಿಗೆ ಪಾರ್ಥಿವ ಶರೀರ ತಲುಪಲಿದೆ. ಮೃತರ ಸ್ವಗ್ರಾಮ ಸೋಮನಹಳ್ಳಿಯಲ್ಲಿ ಅಂತಿಮ ದರ್ಶನಕ್ಕೆ ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗುತ್ತದೆ. * ಮಧ್ಯಾಹ್ನ 3 ಗಂಟೆಯ ನಂತರ…

Read More

ಬೆಂಗಳೂರು: ಇಂದು ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಂತ್ಯಸಂಸ್ಕಾರವನ್ನು ನಾಳೆ ಮಂಡ್ಯದಲ್ಲಿ ನೆರವೇರಿಸಲಾಗುತ್ತದೆ. ನಾಳೆಯ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಈ ಕಳಿಗಿದೆ. ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಅಂತಿಮ ಸಂಸ್ಕಾರದ ಮಾಹಿತಿ * ಸೋಮವಾರ ತಡರಾತ್ರಿ ನಿಧನರಾದ ಮಾಜಿ ಮುಖ್ಯಮಂತ್ರಿ, ಹಿರಿಯ ಮುತ್ಸದ್ದಿ ಎಸ್‌.ಎಂ.ಕೃಷ್ಣ ಅವರ ಅಂತಿಮ ಸಂಸ್ಕಾರ ವಿಧಿಗಳು ಡಿಸೆಂಬರ್‌ 11 ರಂದು ಬುಧವಾರ ಜರುಗಲಿವೆ. * ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಸದಾಶಿವನಗರ ಸ್ವಗೃಹದಿಂದ ಹೊರಟು ವಾಹನದಲ್ಲಿ ದಿವಂಗತ ಕೃಷ್ಣ ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುವುದು. * ಬೆಂಗಳೂರಿನ ಟೌನ್‌ ಹಾಲ್‌, ಮೈಸೂರು ಸರ್ಕಲ್‌, ರಾಜರಾಜೇಶ್ವರಿ ಆರ್ಚ್ ಮುಖಾಂತರ, ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ ಮೂಲಕ ಸಾಗಲಿದೆ. * ಬೆಳಗ್ಗೆ 10.30 ಮದ್ದೂರಿಗೆ ಪಾರ್ಥಿವ ಶರೀರ ತಲುಪಲಿದೆ. ಮೃತರ ಸ್ವಗ್ರಾಮ ಸೋಮನಹಳ್ಳಿಯಲ್ಲಿ ಅಂತಿಮ ದರ್ಶನಕ್ಕೆ ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗುತ್ತದೆ. * ಮಧ್ಯಾಹ್ನ 3 ಗಂಟೆಯ ನಂತರ ಶ್ರೀರಂಗಪಟ್ಟಣದ ಪುರೋಹಿತರಾದ ಭಾನುಪ್ರಕಾಶ್ ಶರ್ಮ…

Read More

ಬೆಂಗಳೂರು: ಕೆಪಿಎಸ್ಸಿಯಿಂದ ವಿವಿಧ ನೇಮಕಾತಿಗಳಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇಂದು ಕರ್ನಾಟಕ ಲೋಕಸೇವಾ ಆಯೋಗದಿಂದ ಪತ್ರಿಕ ಪ್ರಕಟಣೆ ಹೊರಡಿಸಲಾಗಿದೆ. ಅದರಲ್ಲಿ ಅಧಿಸೂಚಿಸಲಾದ ವಿವಿಧ ನೇಮಕಾತಿಗೆ ಸಂಬಂಧಿಸಿದಂತೆ ಈಕೆಳಕಂಡಂತೆ ತಾತ್ಕಾಲಿಕ ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿಸುವುದಾಗಿ ತಿಳಿಸಿದೆ. ಹೀಗಿದೆ ಕೆಪಿಎಸ್ಸಿ ವಿವಿಧ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ

Read More

ಬೆಂಗಳೂರು: ಪಂಚಮಸಾಲಿ ಹೋರಾಟಗಾರರ ಮೇಲೆ ಬೆಳಗಾವಿಯಲ್ಲಿ ಪೊಲೀಸರು ಅಮಾನುಷವಾಗಿ ಲಾಠಿ ಚಾರ್ಜ್‌ ಮಾಡಿರುವುದು ಅತ್ಯಂತ ಖಂಡನೀಯವಾಗಿದ್ದು, ಕಾಂಗ್ರೆಸ್ ಸರ್ಕಾರ ತನ್ನ ಹಿಟ್ಲರ್ ಧೋರಣೆ ಮೂಲಕ ಪಂಚಮಸಾಲಿಗಳ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ವಿಪ್ಷ  ನಾಯಕ ಆರ್ ಅಶೋಕ್ ವಾಗ್ಧಾಳಿ ನಡೆಸಿದ್ದಾರೆ. ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸಿಎಂ ಸಿದ್ದರಾಮಯ್ಯನವರೇ, ತಮ್ಮ ಹಿಟ್ಲರ್ ಆಡಳಿತದಲ್ಲಿ ರಾಜ್ಯದ ಜನತೆ ತಮ್ಮ ಹಕ್ಕುಗಳಿಗಾಗಿ ಶಾಂತಿಯುತ ಪ್ರತಿಭಟನೆ ಮಾಡಲೂ ಅವಕಾಶವಿಲ್ಲವೇ? ಬಾಯಲ್ಲಿ ಬಸವಣ್ಣನ ವಚನ ಹೇಳಿ ಕೈಯಲ್ಲಿ ಲಾಠಿ ಪ್ರಹಾರ ಮಾಡುವ ತಮ್ಮದು ಯಾವ ಸೀಮೆ ಸಿದ್ಧಾಂತ ಸ್ವಾಮಿ? ಎಂದು ಪ್ರಶ್ನಿಸಿದ್ದಾರೆ. ಪ್ರತಿಭಟನಾಕಾರರಿಗೆ ರಕ್ತ ಬರುವಂತೆ ಪೊಲೀಸರು ಲಾಠಿಯಿಂದ ಹೊಡೆದಿದ್ದಾರಲ್ಲ, ಪೊಲೀಸರು ಯಾರ ಅಣತಿಯಂತೆ ಈ ದುಸ್ಸಾಹಸ ಮಾಡಿದ್ದಾರೆ? ಎಂದು ಕೇಳಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವುದು ಜನರ ಹಕ್ಕು. ಜನರ ಸಮಸ್ಯೆ ಆಲಿಸಿ ಅವರಿಗೆ ಸಮಾಧಾನ ಹೇಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿರುವುದು ಸರ್ಕಾರದ ಕರ್ತವ್ಯ. ಈ ರೀತಿ ಮುತ್ಸದ್ಧಿತನ ತೋರುವುದು ಬಿಟ್ಟು, ಏಕಾಏಕಿ ಲಾಠಿ ಚಾರ್ಚ್…

Read More

ಉತ್ತರ ಕನ್ನಡ: ಜಿಲ್ಲೆಯಲ್ಲಿ ಅರಬ್ಬಿ ಸಮುದ್ರದ ನೀರಿಗೆ ಇಳಿದಿದ್ದಂತ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಕೊಚ್ಚಿ ಹೋಗಿರುವಂತ ಘಟನೆ ನಡೆದಿದೆ. ಇವರಲ್ಲಿ ಓರ್ವ ಶವವಾಗಿ ಪತ್ತೆಯಾಗಿದ್ದರೇ, ಇನ್ನೂ ಮೂವರ ಪತ್ತೆಗಾಗಿ ಶೋಧಕಾರ್ಯ ಮುಂದುವರೆದಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕೊತ್ತೂರು ಮುರಾರ್ಜಿ ದೇಸಾಯಿ ವಸತಿ ಶಾಲೆಯ 54 ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದ್ದರು. ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ ಅರಬ್ಬಿ ಸಮುದ್ರದಲ್ಲಿ ಆಟವಾಡಲು ಶಾಲಾ ಮಕ್ಕಳು ಇಳಿದಿದ್ದರು. ಈ ಸಂದರ್ಭದಲ್ಲಿ ಅರಬ್ಬಿ ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಅಲೆಗೆ ನಾಲ್ವರು ಕೊಚ್ಚಿ ಹೋಗಿದ್ದಾರೆ. ಕೊಚ್ಚಿ ಹೋಗಿರುವಂತ ನಾಲ್ವರಲ್ಲಿ ಓರ್ವ ಶಾಲಾ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ಇನ್ನೂ ಮೂವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಅವರ ಪತ್ತೆಗಾಗಿ ಈಜುಗಾರರು ಹುಡುಕಾಟ ನಡೆಸುತ್ತಿದ್ದಾರೆ. ಕರ್ನಾಟಕದ ‘ಸೂಟ್-ಬೂಟ್’ ಸಿಎಂ ಎಸ್.ಎಂ ಕೃಷ್ಣ: ಇದು ಅವರ ಪ್ರಯಾಣದ ಏರಿಳಿತಗಳ ಹಾದಿ | SM Krishna Biography – Kannada News | India News | Breaking news | Live news |…

Read More

ಬೆಂಗಳೂರು: ಮಾಜಿ ಸಿಎಂ ಎಸ್ ಎಂ ಕೃಷ್ಣ ನಿಧನರಾದ ಹಿನ್ನಲೆಯಲ್ಲಿ ನಾಳೆ ಸರ್ಕಾರಿ ರಜೆಯನ್ನು ಘೋಷಿಸಲಾಗಿದೆ. ಹೀಗಾಗಿ ಸಾರ್ವತ್ರಿಕ ರಜೆ ಇರುವ ಕಾರಣ ನಾಳೆ ನಡೆಯಬೇಕಿದ್ದಂತ ಕೆಇಎ ನೇಮಕಾತಿ ಪರೀಕ್ಷೆಗಳನ್ನು ಡಿಸೆಂಬರ್.12ಕ್ಕೆ ಮುಂದೂಡಿಕೆ ಮಾಡಲಾಗಿದೆ. ಈ ಕುರಿತಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ 10-12-2024ರಂದು ಮಾಜಿ ಸಿಎಂ ಮತ್ತು ಕೇಂದ್ರ ಸಚಿವರಾಗಿದ್ದಂತ ಎಸ್ ಎಂ ಕೃಷ್ಣ ಅವರು ನಿಧನರಾಗಿರುವ ಕಾರಣ ದಿನಾಂಕ 11-12-2024ರಂದು ಸರ್ಕಾರಿ ಕಚೇರಿಗಳಿಗೆ ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ ಸಾರ್ವಜನಿಕ ರಜೆ ಘೋಷಿಸಲಾಗಿರುತ್ತದೆ ಎಂದಿದ್ದಾರೆ. ಆದುದ್ದರಿಂದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿನ ಖಾಲಿ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ದಿನಾಂಕ 11-12-2024ರಂದು ನಿಗದಿಪಡಿಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಯನ್ನು ದಿನಾಂಕ 12-12-2024ಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದೆ. https://kannadanewsnow.com/kannada/namma-metro-rail-services-in-bengaluru-to-resume-as-usual-tomorrow-bmrcl/ https://kannadanewsnow.com/kannada/karnatakas-suit-boot-cm-sm-krishna-its-a-journey-of-ups-and-downs/

Read More

ಮುತೈದೆಯರು ಈ ಕೆಲಸವನ್ನು ಮಾಡಿದರೆ ಸಾಕು ಮನೆಯಲ್ಲಿ ನೆಮ್ಮದಿಯ ಸುಖ ಸಂಸಾರದ ಜೀವನ ನಡೆಸಲು..!!! ೧] ಸುಮಂಗಲಿಯರು ಬೈತಲೆಯಲ್ಲಿ ಯಾವಾಗಲೂ ಕುಂಕುಮ ಇರದೇ ಇರಬಾರದು. ೨] ಎರಡು ಕೈಗಳಿಂದಲೂ ತಲೆಯನ್ನು ಕೆರೆದುಕೊಳ್ಳಬಾರದು, ೩] ಯಾವುದೇ ಕಾರಣಕ್ಕೂ ಸಂಧ್ಯಾ ಕಾಲದಲ್ಲಿ ಕಣ್ಣಲ್ಲಿ ನೀರು ಹಾಕಬಾರದು. ೪] ಮನೆಗೆ ಬಂದ ಹೆಂಗಸರಿಗೆ ಹರಿಶಿನ, ಕುಂಕುಮ, ಹೂಗಳನ್ನು ಕೊಟ್ಟೆ ಕಳಿಸಬೇಕು. ದೈವಜ್ಞ ಪಂಡಿತ್ ಶ್ರೀ ವಿದ್ಯಾಧರ್ ನಕ್ಷತ್ರಿ ಪ್ರಧಾನ್ ತಾಂತ್ರಿಕ್ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ವಿದ್ಯಾಧರ್ ನಕ್ಷತ್ರಿ ಪ್ರಧಾನ ತಾಂತ್ರಿಕ ತಪ್ಪದೆ ಕರೆ ಮಾಡಿ 9686268564 ೫] ಗರ್ಭಿಣಿ ಸ್ತ್ರೀಯರು ತೆಂಗಿನ ಕಾಯಿ ಮತ್ತು ಕುಂಬಳ ಕಾಯಿ…

Read More

ಬೆಂಗಳೂರು: ಮಾಜಿ ಸಿಎಂ ಎಸ್ ಎಂ ಕೃಷ್ಣ ನಿಧನದ ಹಿನ್ನಲೆಯಲ್ಲಿ ನಾಳೆ ರಾಜ್ಯ ಸರ್ಕಾರದಿಂದ ಸರ್ಕಾರಿ ರಜೆಯನ್ನು ಘೋಷಿಸಲಾಗಿದೆ. ಹೀಗಾಗಿ ನಮ್ಮ ಮೆಟ್ರೋದ ಅಧಿಕಾರಿ, ಸಿಬ್ಬಂದಿಗಳಿಗೆ ಮಾತ್ರವೇ ರಜೆಯನ್ನು ಘೋಷಿಸಲಾಗಿದೆ. ಅದರ ಹೊರತಾಗಿ ನಮ್ಮ ಮೆಟ್ರೋ ರೈಲು ಸಂಚಾರ ಸೇವೆ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂಬುದಾಗಿ ಬಿಎಂಆರ್ ಸಿಎಲ್ ಸ್ಪಷ್ಟ ಪಡಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಬೆಂಗಳೂರು ಮೆಟ್ರೋ ರೈಲ್ ನಿಗಮ ನಿಯಮಿತ(BMRCL), ಮೆಟ್ರೋ ಕಾರ್ಯಾಚರಣೆಗಳು ಅತ್ಯಗತ್ಯ ಸೇವೆಯಾಗಿದೆ. ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ನಾಳೆ ಸಾಮಾನ್ಯ ವೇಳಾಪಟ್ಟಿಯ ಪ್ರಕಾರ ಮೆಟ್ರೋ ಚಲಿಸುತ್ತದೆ ಎಂಬುದಾಗಿ ತಿಳಿಸಿದೆ. ಮಾಜಿ ಸಿಎಂ ಎಸ್.ಎಂ ಕೃಷ್ಣ ನಿಧನ ಹಿನ್ನಲೆ: ನಾಳೆ ನಮ್ಮ ಮೆಟ್ರೋ ಅಧಿಕಾರಿ, ಸಿಬ್ಬಂದಿಗಳಿಗೆ ರಜೆ ಘೋಷಣೆ ರಾಜ್ಯ ಸರ್ಕಾರದಿಂದ ಮಾಜಿ ಸಿಎಂ ಎಸ್.ಎಂ ಕೃಷ್ಣ ನಿಧನದ ಹಿನ್ನಲೆಯಲ್ಲಿ ನಾಳೆ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಈ ಕಾರಣದಿಂದ ಬೆಂಗಳೂರಿನ ನಮ್ಮ ಮೆಟ್ರೋ ಅಧಿಕಾರಿ, ಸಿಬ್ಬಂದಿಗಳಿಗೂ ಬಿಎಂಆರ್ ಸಿಎಲ್ ರಜೆ ಘೋಷಿಸಿ ಆದೇಶಿಸಿದೆ. ಈ…

Read More