Author: kannadanewsnow09

ಪ್ಯಾರಿಸ್: ಕ್ರಿಸ್ಮಸ್ ಮುನ್ನಾದಿನದಂದು ಪ್ಯಾರಿಸ್ನ ಐಫೆಲ್ ಟವರ್ನ ಮೊದಲ ಮತ್ತು ಎರಡನೇ ಮಹಡಿಗಳ ನಡುವೆ ಬೆಂಕಿ ಕಾಣಿಸಿಕೊಂಡ ನಂತರ ಅದನ್ನು ಸ್ಥಳಾಂತರಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಅಗ್ನಿಶಾಮಕ ದಳದವರು ಪರಿಸ್ಥಿತಿಗೆ ಸ್ಪಂದಿಸಿದ್ದರಿಂದ ಸುಮಾರು 1,200 ಪ್ರವಾಸಿಗರನ್ನು ಐಫೆಲ್ ಟವರ್ ನಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಏತನ್ಮಧ್ಯೆ, ಬೆಂಕಿಯನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತುರ್ತು ಸೇವೆಗಳನ್ನು ತ್ವರಿತವಾಗಿ ನಿಯೋಜಿಸಲಾಯಿತು. ವಿಶೇಷವೆಂದರೆ, ಐಫೆಲ್ ಟವರ್ ಪ್ಯಾರಿಸ್ನ ಅತ್ಯಂತ ಅಪ್ರತಿಮ ಹೆಗ್ಗುರುತುಗಳಲ್ಲಿ ಒಂದಾಗಿದೆ ಮತ್ತು ಪ್ರವಾಸಿಗರಿಗೆ ವಿಶ್ವದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ. https://kannadanewsnow.com/kannada/army-vehicle-falls-into-gorge-near-poonch-several-jawans-injured/ https://kannadanewsnow.com/kannada/december-26-to-be-observed-as-gram-panchayat-data-operators-day-every-year-priyank-kharge/

Read More

ಶ್ರೀನಗರ: 18 ಕ್ಕೂ ಹೆಚ್ಚು ಸೈನಿಕರನ್ನು ಹೊತ್ತ ಸೇನಾ ವಾಹನವು 150 ಅಡಿ ಆಳದ ಕಮರಿಗೆ ಬಿದ್ದಿದೆ. ವಾಹನವು ಪೂಂಚ್ ಜಿಲ್ಲೆಯ ಬಲ್ನೋಯ್ನ ಫಾರ್ವರ್ಡ್ ಪ್ರದೇಶದಲ್ಲಿದ್ದಾಗ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಅನೇಕ ಸೈನಿಕರು ಗಾಯಗೊಂಡಿದ್ದಾರೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ. https://kannadanewsnow.com/kannada/opposition-leader-r-ashoka-urges-governor-to-grant-protection-to-ct-ravi-demands-judicial-probe/ https://kannadanewsnow.com/kannada/december-26-to-be-observed-as-gram-panchayat-data-operators-day-every-year-priyank-kharge/

Read More

ಬೆಂಗಳೂರು: ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಅವರಿಗೆ ರಕ್ಷಣೆ ನೀಡುವಂತೆ ಕೋರಿ ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್‌ ಅವರಿಗೆ ಮನವಿ ಸಲ್ಲಿಸಲಾಗಿದೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕೆಂಬುದು ನಮ್ಮ ಆಗ್ರಹ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು. ರಾಜ್ಯಪಾಲರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್‌ ಅವರನ್ನು ಭೇಟಿ ಮಾಡಿ ಶಾಸಕ ಸಿ.ಟಿ.ರವಿ ಅವರಿಗೆ ಮಾಡಿದ ಅಪಮಾನದ ಬಗ್ಗೆ ತಿಳಿಸಲಾಗಿದೆ. ಸಿ.ಟಿ.ರವಿ ಅವರಿಗೆ ಮುಸ್ಲಿಂ ಉಗ್ರವಾದಿ ಹಾಗೂ ನಕ್ಸಲರಿಂದ ಬೆದರಿಕೆ ಇದೆ. ಹೀಗಿದ್ದರೂ ಅವರನ್ನು ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿರುವುದು ಅನುಮಾನ ತಂದಿದೆ. ಒಬ್ಬ ಪೊಲೀಸ್‌ ಅಧಿಕಾರಿ ಸುರಕ್ಷತೆ ದೃಷ್ಟಿಯಿಂದ ಅವರನ್ನು ಗದ್ದೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದ್ದಾರೆ. ಅಂದರೆ ಪೊಲೀಸ್‌ ಠಾಣೆ ಸುರಕ್ಷಿತವಲ್ಲ ಎಂದರ್ಥ. ಪೊಲೀಸ್‌ ಠಾಣೆ ಸುರಕ್ಷಿತವಲ್ಲ ಎಂದು ಈ ಸರ್ಕಾರ ಜನರಿಗೆ ತಿಳಿಸಿದೆ ಎಂದರು. ಸಿ.ಟಿ.ರವಿ ಅವರಿಗೆ ಹೀಗಾದರೆ ಇನ್ನು ಸಾರ್ವಜನಿಕರ ಪಾಡೇನು ಎಂಬ ಪ್ರಶ್ನೆ ಮೂಡುತ್ತದೆ. ಇದು ರಾಜ್ಯ ಸರ್ಕಾರಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ. ಅದಕ್ಕಾಗಿ…

Read More

ಶಿವಮೊಗ್ಗ: ಕೈಮಗ್ಗ ಮತ್ತು ಜವಳಿ ಇಲಾಖೆಯು ನೇಕಾರರ ವಿಶೇಷ ಪ್ಯಾಕೇಜ್ ಯೋಜನೆ ಎಸ್‌ಸಿಎಸ್‌ಪಿ/ಟಿಎಎಸ್‌ಪಿ ಯೋಜನೆಯಡಿ ಜವಳಿ ಕ್ಷೇತ್ರಕ್ಕೆ ಸಂಬಂಸಿದಂತೆ ಸಣ್ಣ ಮತ್ತು ಅತಿಸಣ್ಣ (ಎಸ್‌ಎಂಇ) ಘಟಕಗಳ ಸ್ಥಾಪನೆಗೆ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಉದ್ದಿಮೆದಾರರು ಹೊಸದಾಗಿ ಜವಳಿ ಘಟಕ ಸ್ಥಾಪಿಸಲು ಅರ್ಜಿ ಅಹ್ವಾನಿಸಿದೆ. ಆಸಕ್ತ ಜವಳಿ ಉತ್ಪಾದನಾ ಉದ್ದಿಮೆದಾರರು ನಿಗದಿತ ನಮೂನೆ ಅರ್ಜಿಯನ್ನು ಉಪನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಮಂಜುನಾಥ ಟವರ‍್ಸ್, 2ನೇ ಮಹಡಿ, ಗಾಂಧಿನಗರ, 1ನೇ ಮುಖ್ಯರಸ್ತೆ, ಶಿವಮೊಗ್ಗ ಇಲ್ಲಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಅವಶ್ಯ ದಾಖಲೆಗಳನ್ನು ಲಗತ್ತಿಸಿ ಡಿ. 31 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ.:08182-223405 ನ್ನು ಸಂಪರ್ಕಿಸುವುದು. https://kannadanewsnow.com/kannada/actor-shivarajkumar-undergoes-surgery-in-us/ https://kannadanewsnow.com/kannada/december-26-to-be-observed-as-gram-panchayat-data-operators-day-every-year-priyank-kharge/

Read More

ಹೊನ್ನಾವರದಿಂದ ಕೇವಲ 15 ಕಿಲೋ ಮೀಟರ್ ಹಾಗೂ ಮುರ್ಡೇಶ್ವರದಿಂದ 23 ಕಿಲೋ ಮೀಟರ್ ದೂರದಲ್ಲಿರುವ ಈ ಪವಿತ್ರ ಪುಣ್ಯಧಾಮಕ್ಕೆ ಇಡಗುಂಜಿ ಎಂದು ಹೆಸರು ಹೇಗೆ ಬಂತು ಗೊತ್ತೆ. ಇಡಾ ಎಂದರೆ ಎಡ, ಕುಂಜು ಎಂದರೆ ಗಿಡಗಂಟೆಗಳಿಂದ ತುಂಬಿರುವ ಅರಣ್ಯಪ್ರದೇಶ. ಶರಾವತಿಯ ಎಡ ಭಾಗದಲ್ಲಿರುವ ಅರಣ್ಯದ ರಮಣೀಯತೆಗೆ ಮನಸೋತು ನಾರದ ಮರ್ಷಿಗಳು ಈ ಹೆಸರು ಇಟ್ಟರೆಂದು ಸ್ಥಳ ಪುರಾಣ ಹೇಳುತ್ತದೆ. ದೈವಜ್ಞ ಪಂಡಿತ್ ಶ್ರೀ ವಿದ್ಯಾಧರ್ ನಕ್ಷತ್ರಿ ಪ್ರಧಾನ್ ತಾಂತ್ರಿಕ್ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ವಿದ್ಯಾಧರ್ ನಕ್ಷತ್ರಿ ಪ್ರಧಾನ ತಾಂತ್ರಿಕ ತಪ್ಪದೆ ಕರೆ ಮಾಡಿ 9686268564 ಇತಿಹ್ಯ: ಪ್ರಾಚೀನ ಕಾಲದಲ್ಲಿ ಇಲ್ಲಿ ವಾಲಖಿಲ್ಯಾದಿ ಋಷಿಗಳೂ…

Read More

ಬೆಂಗಳೂರು: ನಟ ಶಿವರಾಜ್ ಕುಮಾರ್ ಅನಾರೋಗ್ಯದ ಕಾರಣ ಅಮೇರಿಕಾದಲ್ಲಿನ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದಾರೆ. ಇಂತಹ ಅವರಿಗೆ ಕೆಲವೇ ಕ್ಷಣಗಳಲ್ಲಿ ಶಸ್ತ್ರ ಚಿಕಿತ್ಸೆಯನ್ನು ವೈದ್ಯರು ಆರಂಭಿಸುತ್ತಿರುವುದಾಗಿ ತಿಳಿದು ಬಂದಿದೆ. ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ಅವರು ಅನಾರೋಗ್ಯದ ಕಾರಣ ಅಮೇರಿಕಾದ ಪ್ಲೋರಿಡಾದಲ್ಲಿರುವಂತ ಮಿಯಾಮಿ ಕ್ಯಾನ್ಸರ್ ಇನ್ಟಿಟ್ಯೂಟ್ ಗೆ ಶಸ್ತ್ರ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಅವರಿಗೆ ಭಾರತೀಯ ಕಾಲಮಾನ ಸಂಜೆ 6 ಗಂಟೆಯಿಂದ ಶಸ್ತ್ರ ಚಿಕಿತ್ಸೆಯನ್ನು ವೈದ್ಯರು ಆರಂಭಿಸಲಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ನಟ ಶಿವರಾಜ್ ಕುಮಾರ್ ಅವರಿಗೆ ವೈದ್ಯರು ಶಸ್ತ್ರ ಚಿಕಿತ್ಸೆಯನ್ನು ಆರಂಭಿಸಲಿದ್ದಾರೆ. ಆ ಬಳಿಕ ಅವರು ಆಸ್ಪತ್ರೆಯಲ್ಲೇ ಒಂದು ತಿಂಗಳ ಕಾಲ ವಿಶ್ರಾಂತಿಯನ್ನು ಪಡೆಯಲಿದ್ದಾರೆ. ನಟ ಶಿವರಾಜ್ ಕುಮಾರ್ ಅವರು ಶಸ್ತ್ರಚಿಕಿತ್ಸೆ ಪಡೆದು ಗುಣಮುಖರಾಗಿ ಬರಲಿ ಅಂತ ದೂರವಾಣಿ ಕರೆ ಮಾಡಿದಂತ ಸಿಎಂ ಸಿದ್ಧರಾಮಯ್ಯ ಅವರು ಶುಭ ಹಾರೈಸಿದ್ದಾರೆ. ಶಿವಣ್ಣ ಅಭಿಮಾನಿಗಳು ಕೂಡ ದೇವಸ್ಥಾನದಲ್ಲಿ ಪೂಜೆ, ಪುರಸ್ಕಾರದಲ್ಲಿ ತೊಡಗಿದ್ದು, ಬೇಗ ಗುಣಮುಖರಾಗಿ ಬರಲಿ ಅಂತ ಬೇಡಿಕೊಳ್ಳುತ್ತಿದ್ದಾರೆ. https://kannadanewsnow.com/kannada/champions-trophy-india-vs-pakistan-on-february-23-as-icc-announces-full-schedule/ https://kannadanewsnow.com/kannada/https-kannadanewsnow-com-kannada-people-in-bengaluru-note-permission-to-hold-event-at-cubbon-park-is-mandatory-from-now-on/ https://kannadanewsnow.com/kannada/december-26-to-be-observed-as-gram-panchayat-data-operators-day-every-year-priyank-kharge/

Read More

ಕೆಎನ್ಎನ್ ಸ್ಪೋಟ್ಸ್ ಡೆಸ್ಕ್: ಇಂದು ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಗ್ರೂಪ್ ಹಂತದ ಪಂದ್ಯ ಫೆಬ್ರವರಿ 23 ರಂದು ನಡೆಯಲಿದೆ. ಒಂದು ವೇಳೆ ಭಾರತ ಫೈನಲ್ಗೆ ಅರ್ಹತೆ ಪಡೆದರೆ ದುಬೈನಲ್ಲಿ ಪಂದ್ಯ ನಡೆಯಲಿದೆ. ಹೀಗಿದೆ ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ 2025 ವೇಳಾಪಟ್ಟಿ ಫೆ.19: ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್, ನ್ಯಾಷನಲ್ ಸ್ಟೇಡಿಯಂ, ಕರಾಚಿ ಫೆ.20: ಬಾಂಗ್ಲಾದೇಶ ವಿರುದ್ಧ ಭಾರತ, ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ, ದುಬೈ ಫೆ.21: ಅಫ್ಘಾನಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ, ನ್ಯಾಷನಲ್ ಸ್ಟೇಡಿಯಂ, ಕರಾಚಿ ಫೆ.22: ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್, ಗಡಾಫಿ ಕ್ರೀಡಾಂಗಣ, ಲಾಹೋರ್ ಫೆ.23: ಪಾಕಿಸ್ತಾನ ವಿರುದ್ಧ ಭಾರತ, ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದುಬೈ ಫೆ.24: ಬಾಂಗ್ಲಾದೇಶ ವಿರುದ್ಧ ನ್ಯೂಜಿಲೆಂಡ್, ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ, ರಾವಲ್ಪಿಂಡಿ ಫೆ.25: ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ, ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ, ರಾವಲ್ಪಿಂಡಿ ಫೆ.26: ಅಫ್ಘಾನಿಸ್ತಾನ ವಿರುದ್ಧ ಇಂಗ್ಲೆಂಡ್, ಗಡಾಫಿ ಕ್ರೀಡಾಂಗಣ,…

Read More

ತುಮಕೂರು: ಸೋಡಿಯಂ ಬಳಸಿ ಕೃಷಿ ಹೊಂಡದಲ್ಲಿ ಸ್ಪೋಟಿಸಿದ್ದಂತ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಂತ ಡ್ರೋನ್ ಪ್ರತಾಪ್ ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ಉಪಕಾರಾಗೃಹದಲ್ಲಿ ಡ್ರೋನ್ ಪ್ರತಾಪ್ ಅವರನ್ನು ಇರಿಸಲಾಗಿತ್ತು. ನಿನ್ನೆ ಅವರಿಗೆ ಕೋರ್ಟ್ ಜಾಮೀನು ನೀಡಿತ್ತು. ಕೋರ್ಟ್ ಜಾಮೀನಿನ ನಂತ್ರ ಜಾಮೀನು ಷರತ್ತುಗಳನ್ನು ಪೂರೈಸಿದ ನಂತ್ರ, ಇದೀಗ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿರುವುದಾಗಿ ತಿಳಿದು ಬಂದಿದೆ. ಕೃಷಿ ಹೊಂಡದಲ್ಲಿ ರಾಸಾಯನಿಕ ಬಳಸಿ ಸ್ಪೋಟಿಸಿದ್ದಂತ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಡ್ರೋನ್ ಪ್ರತಾಪ್ ಹಂಚಿಕೊಂಡಿದ್ದರು. ಸೋಡಿಯಂ ಮೆಟಲ್ ಬಳಸಿ ಸ್ಪೋಟಗೊಳಿಸಿದ್ದಂತ ವೀಡಿಯೋ ವೈರಲ್ ಆಗಿತ್ತು. ಜೊತೆಗೆ ಕೃಷಿ ಹೊಂಡದಲ್ಲಿ ರಾಸಾಯನಿಕ ಬಳಸಿ ಸ್ಪೋಟಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿ, ಡ್ರೋನ್ ಪ್ರತಾಪ್ ಬಂಧಿಸಿ ಜೈಲಿಗಟ್ಟಿದ್ದರು. https://kannadanewsnow.com/kannada/cm-siddaramaiah-telephones-shivarajkumar-wishes-him/ https://kannadanewsnow.com/kannada/december-26-to-be-observed-as-gram-panchayat-data-operators-day-every-year-priyank-kharge/

Read More

ಬೆಂಗಳೂರು: ಅನಾರೋಗ್ಯದ ನಿಮಿತ್ತ ಇಂದು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ ಅವರಿಗೆ ಕರೆಮಾಡಿ ಮಾತನಾಡಿ, ಶೀಘ್ರ ಗುಣಮುಖರಾಗುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹಾರೈಸಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಅವರು, ನನಗೆ ತಿಳಿದಂತೆ ಶಿವರಾಜ್ ಕುಮಾರ್ ಅವರ ಆತ್ಮವಿಶ್ವಾಸ, ಧೈರ್ಯ ಮತ್ತು ಸಹೃದಯತೆ ಅವರನ್ನು ಈ ಹೋರಾಟದಲ್ಲಿ ಗೆಲ್ಲಿಸಿಕೊಂಡು ಬರಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ. ಬದುಕಿನ ದಾರಿಯಲ್ಲಿ ಎದುರಾಗಿರುವ ಈ ಸಣ್ಣ ಸಂಕಷ್ಟವನ್ನು ನಿವಾರಿಸಿಕೊಂಡು ಆರೋಗ್ಯವಂತರಾಗಿ ಬರಲಿರುವ ಶಿವರಾಜಕುಮಾರ್ ಅವರ ಆಗಮನವನ್ನು ಎದುರು ನೋಡುತ್ತಿರುವ ಅವರ ಹಿತೈಷಿಗಳಲ್ಲಿ ನಾನೂ ಒಬ್ಬ ಎಂದು ತಿಳಿಸಿದ್ದಾರೆ. ನಾಡಿನ ಹಿರಿಯರ ಆಶೀರ್ವಾದ ಮತ್ತು ಕಿರಿಯರ ಶುಭಹಾರೈಕೆ ಶಿವರಾಜಕುಮಾರ್ ಅವರ ಜೊತೆಗಿದ್ದು ಅವರನ್ನು‌ ಕಾಪಾಡಲಿದೆ ಎಂದು ಹೇಳಿದ್ದಾರೆ. https://twitter.com/siddaramaiah/status/1871521739068604831 https://kannadanewsnow.com/kannada/good-news-for-passengers-special-train-from-hubballi-to-prayagraj/ https://kannadanewsnow.com/kannada/december-26-to-be-observed-as-gram-panchayat-data-operators-day-every-year-priyank-kharge/

Read More

ಬೆಂಗಳೂರು: ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆ ಹುಬ್ಬಳ್ಳಿಯಿಂದ ಪ್ರಯಾಗ್‌ರಾಜ್‌ಗೆ ಏಕಮಾರ್ಗ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲಿದೆ. ವಿವರಗಳು ಈ ಕೆಳಗಿನಂತಿವೆ: ಡಿಸೆಂಬರ್ 26, 2024 (ಗುರುವಾರ) ರಂದು ಎಸ್ಎಸ್ಎಸ್ ಹುಬ್ಬಳ್ಳಿ-ಪ್ರಯಾಗ್‌ರಾಜ್ ಏಕಮಾರ್ಗ ವಿಶೇಷ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 07369) ರೈಲು ಹುಬ್ಬಳ್ಳಿಯಿಂದ 11:00 ಗಂಟೆಗೆ ಹೊರಟು, ಶನಿವಾರ 03:00 ಗಂಟೆಗೆ ಪ್ರಯಾಗ್‌ರಾಜ್ ತಲುಪಲಿದೆ. ಈ ರೈಲು ಧಾರವಾಡ, ಬೆಳಗಾವಿ, ಘಟಪ್ರಭಾ, ಮಿರಜ್, ಸಾಂಗ್ಲಿ, ಕರಾಡ್, ಪುಣೆ, ದೌಂಡ್ ಚೋರ್ಡ್ ಲೈನ್, ಅಹ್ಮದ್ನಗರ, ಮನ್ಮಡ, ಭುಸಾವಲ್, ಖಾಂಡ್ವಾ, ತಲ್ವಾಡಿಯಾ, ಛಾನೆರಾ, ಖಿರ್ಕಿಯಾ, ಹರ್ದಾ, ಬಾನಾಪುರ, ಇಟಾರ್ಸಿ, ಪಿಪರಿಯಾ, ನರಸಿಂಗಪುರ, ಜಬಲ್ಪುರ, ಕಟ್ನಿ, ಮೈಹಾರ್, ಸತ್ನಾ ಮತ್ತು ಮಾಣಿಕ್ಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಈ ರೈಲು ಹನ್ನೊಂದು ಸ್ಲೀಪರ್ ಕ್ಲಾಸ್, ಏಳು ಜನರಲ್ ಸೆಕೆಂಡ್ ಕ್ಲಾಸ್ ಮತ್ತು ಎಸ್ಎಲ್ಆರ್ ಡಿ ಸೇರಿದಂತೆ ಒಟ್ಟು 20 ಬೋಗಿಗಳನ್ನು ಹೊಂದಿರುತ್ತದೆ. ಈ ರೈಲಿನ ಆಗಮನ/ನಿರ್ಗಮನ ಸಮಯ ತಿಳಿಯಲು ಪ್ರಯಾಣಿಕರು ಭಾರತೀಯ ರೈಲ್ವೆಯ ವೆಬ್ ಸೈಟ್ www.enquiry.indianrail.gov.in ಭೇಟಿ…

Read More