Author: kannadanewsnow09

ಬೆಂಗಳೂರು: ರಾಜ್ಯ ಸರ್ಕಾರದಿಂದ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರಾಣರಾದಂತ ಶಿಕ್ಷಣ ಇಲಾಖೆಯ ನೌಕರರಿಗೆ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಿದೆ. ಈ ಮೂಲಕ ಶಿಕ್ಷಣ ಇಲಾಖೆಯ ನೌಕರರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಈ ಕುರಿತಂತೆ ಶಆಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಕರ್ನಾಟಕ ಸಿವಿಲ್ ಸೇವಾ(ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012 ಜಾರಿಗೆ ಬಂದ ದಿ:22.03.2012 ರಂದು ಸೇವೆಯಲ್ಲಿದ್ದು, ದಿ:17.04.2021 ರೊಳಗೆ ಸದರಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸೇವಾನಿರತ ಅರ್ಹ ಸರ್ಕಾರಿ ನೌಕರರಿಗೆ ರೂ.5000/-ಗಳ ಪ್ರೋತ್ಸಾಹ ಧನವನ್ನು ಮಂಜೂರು ಮಾಡಲು ಸದರಿ ನಿಯಮಗಳ ನಿಯಮ-3(3)ರಲ್ಲಿ ಅವಕಾಶ ಕಲ್ಪಿಸಲಾಗಿದೆ. ಸದರಿ ಪ್ರೋತ್ಸಾಹ ಧನವನ್ನು ಸದರಿ “ಸರ್ಕಾರಿ ನೌಕರನು ವೇತನ ಪಡೆಯುವ ಲೆಕ್ಕಶೀರ್ಷಿಕೆಯಡಿ “Subsidiary Suspenses” ಉಪಶೀರ್ಷಿಕೆಯಡಿಯಲ್ಲಿ ಭರಿಸುವುದು” ಎಂದು ಆದೇಶಿಸಲಾಗಿದೆ. ಸದರಿ ಸರ್ಕಾರಿ ಆದೇಶದನ್ವಯ ಪ್ರೋತ್ಸಾಹ ಧನವನ್ನು ನೀಡಲು ಖಜಾನೆ ಆಯುಕ್ತರಿಂದ ಖಜಾನೆ ಇಲಾಖೆಯ ಸಿಬ್ಬಂದಿಗಳಿಗೆ ಪ್ರೋತ್ಸಾಹ ಧನ ಪಾವತಿಸುವ ಬಗ್ಗೆ ಉಲ್ಲೇಖ(2)ರಂತೆ ಪ್ರತ್ಯೇಕವಾಗಿ ಸೂಚಿಸಲಾಗಿರುತ್ತದೆ ಎಂದಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯಲ್ಲಿ…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಐದು ಗ್ಯಾರಂಟಿ ಯೋಜನೆ ಜಾರಿಯ ಬಳಿಕ, ಮತ್ತೊಂದು ಗುಡ್ ನ್ಯೂಸ್ ನೀಡಲಾಗಿದೆ. ಅದೇ ರಾಜ್ಯದ ಜನತೆಯ ಅನಾರೋಗ್ಯ ಸಮಸ್ಯೆ ನಿವಾರಣೆಗಾಗಿ ದಿನಕ್ಕೆ 2 ಬಾರಿ ಉಚಿತ ಯೋಗ ತರಬೇತಿ ನೀಡುವುದಾಗಿದೆ. ಈ ಕುರಿತಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಆಯುಷ್ ಚಿಕಿತ್ಸಾಲಯಗಳಲ್ಲಿ ಆಯುಷ್ಮಾನ್ ಮಂದಿರಗಳ ಮೂಲಕ ನುರಿತ ಯೋಗ ತರಬೇತುದಾರರಿಂದ ದಿನಕ್ಕೆ ಎರಡು ಬಾರಿ ಉಚಿತ ಯೋಗ ತರಬೇತಿ ಕಾರ್ಯಕ್ರಮ ಜಾರಿಗೆ ತರಲಾಗಿದೆ ಎಂದಿದ್ದಾರ. ಒಟ್ಟಾರೆಯಾಗಿ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರ, ಆಯುಷ್ಮಾನ್ ಚಿಕಿತ್ಸಾಲಯಗಳ ಮೂಲಕ ಜನರಿಗೆ ಯೋಗ ತರಬೇತಿಯನ್ನು ದಿನಕ್ಕೆ 2 ದಿನ ನೀಡಲಾಗುತ್ತದೆ. ಈ ಮೂಲಕ ಅನಾರೋಗ್ಯ ಪೀಡಿತರ ಆರೋಗ್ಯ ಸುಧಾರಣೆಯ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಕ್ರಮ ವಹಿಸಿದೆ.

Read More

ನವದೆಹಲಿ: ಸಾರಥಿ ಪೋರ್ಟಲ್ನಲ್ಲಿನ ಮೂಲಸೌಕರ್ಯ ಸಂಬಂಧಿತ ಸಮಸ್ಯೆಗಳಿಂದಾಗಿ ಕಲಿಕಾ ಪರವಾನಗಿ, ಚಾಲನಾ ಪರವಾನಗಿ ಮತ್ತು ಕಂಡಕ್ಟರ್ ಪರವಾನಗಿಯ ಮಾನ್ಯತೆಯನ್ನು 2024ರ ಫೆಬ್ರವರಿ 29ರವರೆಗೆ ವಿಸ್ತರಿಸಿ ಕೇಂದ್ರ ರಸ್ತೆ ಸಚಿವಾಲಯ ಮಂಗಳವಾರ ಆದೇಶ ಹೊರಡಿಸಿದೆ. ಫೆ.25ರೊಳಗೆ LL, DL, ಕಂಡಕ್ಟರ್ ಲೈಸೆನ್ಸ್ ಮುಗಿಯೋರಿಗೆ ಗುಡ್ ನ್ಯೂಸ್: ಫೆ.29ರವರೆಗೆ ಮಾನ್ಯತೆ ವಿಸ್ತರಣೆ ಜನವರಿ 31, 2024 ರಿಂದ ಫೆಬ್ರವರಿ 12, 2024 ರವರೆಗೆ ಸಾರಥಿ ಪೋರ್ಟಲ್ನಲ್ಲಿ ಮೂಲಸೌಕರ್ಯ ಸಂಬಂಧಿತ ಸಮಸ್ಯೆಗಳಿಂದಾಗಿ, ಅರ್ಜಿದಾರರು ಪರವಾನಗಿ ಸಂಬಂಧಿತ ಸೇವೆಗಳನ್ನು ಪಡೆಯುವಲ್ಲಿ ಅಡೆತಡೆಗಳನ್ನು ಎದುರಿಸಿದ್ದಾರೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸುತ್ತೋಲೆಯಲ್ಲಿ ತಿಳಿಸಿದೆ. ಅದರಂತೆ, ಜನವರಿ 31, 2024 ಮತ್ತು ಫೆಬ್ರವರಿ 15, 2024 ರ ನಡುವೆ ಮುಕ್ತಾಯಗೊಂಡ ಕಲಿಕಾ ಪರವಾನಗಿ, ಚಾಲನಾ ಪರವಾನಗಿ ಮತ್ತು ಕಂಡಕ್ಟರ್ ಪರವಾನಗಿಯ ಸಿಂಧುತ್ವವನ್ನು ಫೆಬ್ರವರಿ 29, 2024 ರವರೆಗೆ ಯಾವುದೇ ದಂಡ ವಿಧಿಸದೆ ಮಾನ್ಯವೆಂದು ಪರಿಗಣಿಸಲಾಗುವುದು ಎಂದು ರಸ್ತೆ ಸಾರಿಗೆ ಸಚಿವಾಲಯ ತಿಳಿಸಿದೆ. ಆನ್ಲೈನ್ ಸೇವೆಗಳ ಭಾಗಶಃ ಸ್ಥಗಿತ…

Read More

ಬೆಂಗಳೂರು : ಕೋಲಾರದ ಕೆರೆಗಳಿಗೆ ನೀರುಣಿಸುತ್ತಿರುವ ಕೆಸಿ ವ್ಯಾಲಿ (ಕೋರಮಂಗಲ – ಚಲ್ಲಘಟ್ಟ) ಯೋಜನೆಯ ಬಗ್ಗೆ ಸದನದ ಮೂಲಕ ಜನರಿಗೆ ತಪ್ಪು ಸಂದೇಶ ನೀಡಬೇಡಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮನವಿ ಮಾಡಿದರು. ಮಂಗಳವಾರದ ವಿಧಾನಸಭೆ ಅಧಿವೇಶದ ಪ್ರಶ್ನೋತ್ತರ ಅವಧಿಯಲ್ಲಿ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜ್ ಅವರು ಕೆಸಿ ವ್ಯಾಲಿ ಯೋಜನೆಯಡಿ ನೀರಿನ ಗುಣಮಟ್ಟದ ಬಗ್ಗೆ ಪ್ರಶ್ನಿಸಿದ್ದರು. ಬೆಂಗಳೂರಿನ ಕೊಳಚೆ ನೀರನ್ನು ಸರಿಯಾಗಿ ಶುದ್ದೀಕರಣ ಮಾಡದ ಕಾರಣ ಕೋಲಾರದ ಕೆರೆ ಹಾಗೂ ಅಂತರ್ಜಲದ ಗುಣಮಟ್ಟ ಕುಗ್ಗಿದೆ. ಪಶುಗಳೂ ಸಹ ಕೆರೆಯ ನೀರನ್ನು ಸೇವಿಸುತ್ತಿಲ್ಲ. ಹೀಗಾಗಿ ಕೆಸಿ ವ್ಯಾಲಿ ನೀರಿಗೆ ಮೂರನೇ ಹಂತದ ಶುದ್ದೀಕರಣದ ಅಗತ್ಯ ಇದೆ ಎಂದರು. ಈ ವೇಳೆ ಸದನದಲ್ಲಿ ಎದ್ದು ನಿಂತು ಶಾಸಕರ ಪ್ರಶ್ನೆಗೆ ಅಸಮಾಧಾನ ಸೂಚಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ಕೆಸಿ ವ್ಯಾಲಿ ನೀರಿಗೆ ಮೂರನೇ ಹಂತದ ಶುದ್ದೀಕರಣ ಅಗತ್ಯವಿದೆ ಎಂಬ ಬಗ್ಗೆ ನಮ್ಮ ಯಾವುದೇ ತಕರಾರು ಇಲ್ಲ. ಆದರೆ, ಕೋಲಾರದ ಜೀವನಾಡಿಯಾಗಿರುವ ಈ ಯೋಜನೆಯ…

Read More

ಶಿವಮೊಗ್ಗ: ಶಿವಮೊಗ್ಗ ನಗರ ಗಾಂಧಿಬಜಾರ್, ಭರಮಪ್ಪನಗರ, ಎಂ.ಕೆ.ಕೆ.ರಸ್ತೆಗಳಲ್ಲಿ ಕಂಬಗಳನ್ನು ಬದಲಿಸುವ ಕಾಮಗಾರಿ ಹಮ್ಮಿಕೊಳ್ಳುವುದರಿಂದ ಫೆ. 22 ರಂದು ಬೆಳಗ್ಗೆ 9.00 ರಿಂದ ಸಂಜೆ 6.00 ರವರೆಗೆ ಗಾಂಧಿಬಜಾರ್, ಸೊಪ್ಪಿನ ಮಾರ್ಕೆಟ್, ಕೆ.ಆರ್.ಪುರಂ, ಭರಮಪ್ಪ ನಗರ, ಎಂ.ಕೆ.ಕೆ. ರಸ್ತೆ, ಬಿ.ಹೆಚ್.ರಸ್ತೆ, ನಾಗಪ್ಪ ಕೇರಿ, ತಿರುಪಳ್ಳಯ್ಯನಕೇರಿ, ಸಾವರ್ಕರ್ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಈ ಪ್ರದೇಶಗಳ ಗ್ರಾಹಕರು ಮೆಸ್ಕಾಂನೊಂದಿಗೆ ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ. https://kannadanewsnow.com/kannada/breaking-rishabh-pant-ready-to-return-to-cricket-participate-in-ipl-2024-report/ https://kannadanewsnow.com/kannada/bbmp-bill-amendment-will-allow-builders-to-commit-irregularities-bommai/

Read More

ಬೆಂಗಳೂರು: ಇಂದು ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದ (IGNOU) 37ನೇ ಘಟಿಕೋತ್ಸವವು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಶ್ರೀ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್ನಲ್ಲಿ ನಡೆಯಿತು. ಭಾರತದ ಗೌರವಾನ್ವಿತ ಉಪಾಧ್ಯಕ್ಷರಾದ ಶ್ರೀ ಜಗದೀಪ್ ಧಂಖರ್ ಅವರು ಹೊಸ ದೆಹಲಿಯ ಮೈದಾನ್ ಗರ್ಹಿಯಲ್ಲಿ ನಡೆದ Hqrs, ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿದ್ದರು. ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಗೌರವಾನ್ವಿತ ಉಪಕುಲಪತಿ ಪ್ರೊ.ಲಿಂಗರಾಜ ಗಾಂಧಿ ಅವರು ಗೌರವ ಅತಿಥಿಯಾಗಿ ಆಗಮಿಸಿ ಘಟಿಕೋತ್ಸವ ಭಾಷಣ ಮಾಡಿದರು. ಎಲ್ಲಾ ಪದವೀಧರರನ್ನು ಅಭಿನಂದಿಸಿ, ಅವರ ಮುಂದಿನ ಪ್ರಯತ್ನಗಳಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು. ಯಾವುದೇ ಮಾರ್ಗವನ್ನು ಆರಿಸಿಕೊಂಡರೂ ಅದನ್ನು ಸಮರ್ಪಣಾ ಮನೋಭಾವ, ಶಿಸ್ತು ಮತ್ತು ಉತ್ಸಾಹದಿಂದ ಮುಂದುವರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು. ಸಮಾಜದ ಎಲ್ಲ ವರ್ಗದವರಿಗೂ ಕೈಗೆಟಕುವ ದರದಲ್ಲಿ ಉನ್ನತ ಶಿಕ್ಷಣವನ್ನು ಒದಗಿಸುವ ಮೂಲಕ ಇಗ್ನೋ ಮತ್ತು ಅದರ ಶ್ರೇಷ್ಠ ಸೇವೆಯ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. ವ್ಯಕ್ತಿತ್ವದ ಸಮಗ್ರ ಅಭಿವೃದ್ಧಿಗಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಸಂಯೋಜಿಸಲು ಕೌಶಲ್ಯ, ಜ್ಞಾನ, ವರ್ತನೆ ಮತ್ತು ಮೌಲ್ಯಗಳನ್ನು ಸುಧಾರಿಸುವಲ್ಲಿ ಎನ್ಇಪಿ…

Read More

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿಯಾಗಿರುವಂತ ಪ್ರತಾಪ್ ರೆಡ್ಡಿ ಅವರು, ಸ್ವಯಂ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ. ಅವರನ್ನು ಏಪ್ರಿಲ್.30ರಂದು ಸೇವೆಯಿಂದ ನಿವೃತ್ತಿಗೊಳಿಸುವಂತೆ ರಾಜ್ಯ ಸರ್ಕಾರ ಆದೇಶ ಮಾಡಿದೆ. ಈ ಕುರಿತಂತೆ ರಾಜ್ಯ ಸರ್ಕಾರಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ಅವರು ಸ್ವಯಂ ನಿವೃತ್ತಿ ಕೋರಿ ಪತ್ರವನ್ನು ಬರೆದಿದ್ದರು. ಅವರ ಪತ್ರವನ್ನು ಅಂಗೀಕರಿಸಿರುವಂತ ರಾಜ್ಯ ಸರ್ಕಾರವು, ಏಪ್ರಿಲ್.30ಕ್ಕೆ ಇಲಾಖೆಯಿಂದ ಬಿಡುಗಡೆಗೆ ಆದೇಶಿಸಿದೆ. ಅಂದಹಾಗೇ ಪ್ರತಾಪ್ ರೆಡ್ಡಿ ಅವರು ಸದ್ಯ ಆಂತರಿಕ ಭದ್ರತಾ ವಿಭಾಗದ ಡಿಜಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಅವರು ನಿವೃತ್ತಿಗೆ 2 ತಿಂಗಳು ಬಾಕಿ ಇರುವಾಗಲೇ ಇಲಾಖೆಯಿಂದ ಬಿಡುಗಡೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿ ಪುರಸ್ಕರಿಸಿರುವಂತ ರಾಜ್ಯ ಸರ್ಕಾರ ಏಪ್ರಿಲ್.30ಕ್ಕೆ ಬಿಡುಗಡೆಗೊಳಿಸುವಂತೆ ಸೂಚಿಸಿ ಆದೇಶಿಸಿದೆ. https://kannadanewsnow.com/kannada/govt-extends-validity-of-lerners-licence-driving-license-conductor-lincense-till-feb-29/ https://kannadanewsnow.com/kannada/breaking-rishabh-pant-ready-to-return-to-cricket-participate-in-ipl-2024-report/

Read More

ಬೆಂಗಳೂರು : “ರಾಮನಗರದಲ್ಲಿ ಬಿಜೆಪಿಯವರು ವಕೀಲರನ್ನು ತಪ್ಪು ದಾರಿಗೆಳೆದು ರಾಜಕಾರಣ ಮಾಡುತ್ತಿದ್ದಾರೆ. ಈ ಪ್ರತಿಭಟನೆ ರಾಜಕೀಯ ಪ್ರೇರಿತ. ರಾಜಕಾರಣ ಬಿಟ್ಟು ವಕೀಲರು ಚರ್ಚೆಗೆ ಬಂದರೆ ಕಾನೂನು ವ್ಯಾಪ್ತಿಯಲ್ಲಿ ಪರಿಹಾರ ನೀಡುವ ಪ್ರಯತ್ನ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ರಾಮನಗರದ ವಕೀಲರ ಮೇಲಿನ ಪ್ರಕರಣ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಶಿವಕುಮಾರ್ ಅವರು ವಿಧಾನಸೌಧದ ಆವರಣದಲ್ಲಿ ಮಂಗಳವಾರ ಉತ್ತರಿಸಿದ ಅವರು, ರಾಮನಗರದಲ್ಲಿ ರಾಜಕಾರಣ ನಡೆಯುತ್ತಿದೆ. ಬಿಜೆಪಿಯವರು ವಕೀಲರನ್ನು ದಾರಿ ತಪ್ಪಿಸಿದ್ದಾರೆ. ರಾಜಕಾರಣ ಮಾಡುವವರನ್ನು ನಾನು ಬೇಡ ಎನ್ನುವುದಿಲ್ಲ. ಈ ವಿಚಾರವಾಗಿ ಚರ್ಚೆ ಮಾಡಲು ಕುಮಾರಸ್ವಾಮಿ ಅವರು ಸದನದಲ್ಲಿ ಸಮಯ ಕೇಳಿದ್ದಾರಂತೆ. ಅದಕ್ಕೆ ಗೃಹ ಸಚಿವರು ಉತ್ತರ ನೀಡುತ್ತಾರೆ. ಕಾನೂನು ಬದ್ಧವಾಗಿ ಅಧಿಕಾರಿಗಳು ಎಲ್ಲರಿಗೂ ರಕ್ಷಣೆ, ಗೌರವ ನೀಡಬೇಕು. ನಮ್ಮ ಬಳಿ ಬಂದು ಕೂತು ಮಾತನಾಡಿದರೆ ಚರ್ಚೆಗೆ ಸಿದ್ಧ. ರಾಜಕಾರಣವನ್ನೇ ಮಾಡುತ್ತೀವಿ ಎಂದರೆ ರಾಜಕಾರಣ ಮಾಡಿಕೊಳ್ಳಲಿ, ನಮ್ಮ ಅಭ್ಯಂತರವೇನೂ ಇಲ್ಲ ಎಂದರು. ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ನಿಂದಿಸಿದ್ದಾರೆ ಎಂಬ…

Read More

ಬೆಂಗಳೂರು : ಬಿಬಿಎಂಪಿ ವಿಧೇಯಕ ತಿದ್ದುಪಡಿಯಿಂದ ದೊಡ್ಡ ಬಿಲ್ಡರ್ ಗಳು ಅಕ್ರಮ ಮಾಡಲು ಅವಕಾಶ ಕೊಟ್ಟಂತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು. 2024 ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ವಿಧೇಯಕ 2020 ದ ಮೇಲೆ ಮಾತನಾಡಿದ ಅವರು, ಈ ಕಾಯ್ದೆ ತಿದ್ದುಪಡಿಯಿಂದ ಈಗಿರುವ ಬಿಲ್ಡರ್ ಗಳಿಗೆ ಅಕ್ರಮ ಮಾಡಲು ಅವಕಾಶ ಕೊಟ್ಟಂತಾಗುತ್ತದೆ. ಇದು ಶ್ರೀಮಂತ ಬಿಲ್ಡರ್ ಪರವಾಗಿದೆ. ಇದರಲ್ಲಿ ಬಹಳ ದೊಡ್ಡ ಅವ್ಯವಹಾರ ನಡೆಯುತ್ತದೆ. ಇದನ್ನು ನಾವು ವಿರೋಧ ಮಾಡುತ್ತೇವೆ. ಇದನ್ನು ಉಪ ಮುಖ್ಯಮಂತ್ರಿಗಳು ಪುನರ್ ಪರಿಶೀಲನೆ ಮಾಡಬೇಕು. ಇದರಿಂದ ರೈತರಿಗೂ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಹೇಳಿದರು. ನಮ್ಮ ಅವಧಿಯಲ್ಲಿಯೂ ಈ ಪ್ರಸ್ತಾವನೆ ಬಂದಿತ್ತು. ನಾವು ಅದನ್ನು ತಿರಸ್ಕರಿಸಿದ್ದೇವು. ಈಗಾಗಲೇ ಬೆಂಗಳೂರು ಯೋಜನಾರಹಿತ ನಗರ ಇದೆ. ಇನ್ನಷ್ಟು ಯೋಜನಾ ರಹಿತವಾಗಿ ಬೆಳೆಯುತ್ತದೆ. ಇದರಿಂದ ಮತ್ತಷ್ಟು ಸಮಸ್ಯೆ ಎದುರಾಗುತ್ತದೆ. ಹೀಗಾಗಿ ತಿದ್ದುಪಡಿ ವಿಧೇಯಕವನ್ನು ವಿರೋಧಿಸುವುದಾಗಿ ಹೇಳಿದರು. https://kannadanewsnow.com/kannada/congress-candidate-puttanna-wins-by-election-in-bengaluru-teachers-constituency/ https://kannadanewsnow.com/kannada/breaking-rishabh-pant-ready-to-return-to-cricket-participate-in-ipl-2024-report/

Read More

ಬೆಂಗಳೂರು: ರಾಜ್ಯದಲ್ಲಿ ಮೂಲ ಸೌಕರ್ಯವಿಲ್ಲದ ಖಾಸಗಿ ಶಾಲೆಗಳ ಮಾನ್ಯತೆಯನ್ನು ರದ್ದುಗೊಳಿಸಲಾಗುತ್ತದೆ ಎಂಬುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಅವರು, ರಾಜ್ಯದಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದಿನ ಒಂದು ವರ್ಷದೊಳಗೆ ಮೂಲ ಸೌಕರ್ಯ ಕಲ್ಪಿಸಿಕೊಳ್ಳದೇ ಇದ್ದಲ್ಲೇ, ಅವುಗಳ ಮಾನ್ಯತೆ ರದ್ದುಪಡಿಸಲಾಗುವುದು ಎಂಬುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳನ್ನು ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅಭಿವೃದ್ದಿ ಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಮನೆ ಒಡತಿಗೆ 2000 ರೂ.ಗಳ ಸಹಾಯಧನ ನೀಡುವ ಗೃಹಲಕ್ಷ್ಮಿ, ರಾಜ್ಯದ ಪ್ರತಿ ಮನೆ ಮನೆಗೆ ಉಚಿತ ವಿದ್ಯುತ್ ಒದಗಿಸುವ ಗೃಹಜ್ಯೋತಿ, ಮುಂತಾದ ಗ್ಯಾರಂಟಿ ಯೋಜನೆಗಳಿಂದ ಜನಸಾಮಾನ್ಯರ ನೆಮ್ಮದಿಯ ಬದುಕಿಗೆ ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ. https://kannadanewsnow.com/kannada/non-bailable-warrants-issued-against-former-cm-veerappa-moily-mohammed-nalapad/ https://kannadanewsnow.com/kannada/congress-candidate-puttanna-wins-by-election-in-bengaluru-teachers-constituency/

Read More