Author: kannadanewsnow09

ಬೆಂಗಳೂರು: ಇಂದು ವಿಧಾನಸಭೆಯಲ್ಲಿ ಕೇಂದ್ರದ ಅನುದಾನ ತಾರತಮ್ಯ ಖಂಡಿಸುವಂತ ಹಾಗೂ ಅನುದಾನದ ಬಗ್ಗೆ ಕೇಂದ್ರಕ್ಕೆ ಒತ್ತಾಯಿಸುವಂತ ನಿರ್ಣಯವನ್ನು ಮಂಡಿಸಿ, ರಾಜ್ಯ ಸರ್ಕಾರ ಅಂಗೀಕಾರ ಪಡೆದಿದೆ.  ಇಂದು ವಿಧಾನಸಭೆಯಲ್ಲಿ ಅನುದಾನ ತಾರತಮ್ಯ ಆರೋಪ ಕುರಿತು ನಿರ್ಣಯವನ್ನು ರಾಜ್ಯ ಸರ್ಕಾರದಿಂದ ಮಂಡಿಸಲಾಯಿತು. ಈ ನಿರ್ಣಯ ಮಂಡಿಸಿ ಮಾತನಾಡಿದಂತ ಸಚಿವ ಹೆಚ್ ಕೆ ಪಾಟೀಲ್ ಅವರು ಕೇಂದ್ರದಿಂದ ರಾಜ್ಯಕ್ಕೆ 68,200 ಕೋಟಿ ರೂ ತೆರಿಗೆ ನಷ್ಟವಾಗಿದೆ ಎಂಬುದಾಗಿ ಅಂಕಿ ಅಂಶಗಳನ್ನು ಓದಿ ಹೇಳಿದರು. ಅನುದಾನ, ತೆರಿಗೆ ಪಾಲು, ಬರದ ಬಗ್ಗೆ ವಿವರಿಸಿದಂತ ಅವರು, ಅನುದಾನದ ಬಗ್ಗೆ ಕೇಂದ್ರಕ್ಕೆ ಒತ್ತಾಯಿಸುವ ನಿರ್ಣಯವನ್ನು ಮಂಡಿಸಿ ಅಂಗೀಕಾರವನ್ನು ಪಡೆದುಕೊಂಡರು. ಅನುದಾನ ಬಗ್ಗೆ ಕೇಂದ್ರಕ್ಕೆ ಒತ್ತಾಯಿಸುವ ನಿರ್ಣಯವನ್ನು ಮಂಡಿಸಿದಾಗ, ವಿಧಾನಸಭೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತ ಪಡಿಸಿದರು. ಅಲ್ಲದೇ ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ, ಘೋಷಣೆ ಕೂಗಲಾಯಿತು. ಇದರ ನಡುವೆ ನಿರ್ಣಯವನ್ನು ಮಂಡಿಸಿ, ಅಂಗೀಕಾರ ಪಡೆಯಲಾಯಿತು. ರಾಜ್ಯ ಸರ್ಕಾರ ಮಂಡಿಸಿ ಅಂಗೀಕಾರ ಪಡೆದ ನಿರ್ಣಯದಲ್ಲಿ ಏನಿದೆ.?…

Read More

ಬೆಂಗಳೂರು: ಲೋಕಸಭಾ ಚುನಾವಣೆಯ ಸಂದರ್ಭದಲ್ಲೇ ಬಿಜೆಪಿಗೆ ಬಿಗ್ ಶಾಕ್ ಎನ್ನುವಂತೆ ಕಮಲ ತೊರೆದು, ಮಾಜಿ ಸಂಸದ ಮುದ್ದಹನುಮೇಗೌಡ ಅವರು ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಇಂದು ಬೆಂಗಳೂರಿನ ಕೆಪಿಸಿಸಿಯ ಭಾರತ್ ಜೋಡೋ ಯಾತ್ರೆ ಭವನದಲ್ಲಿ ನಡೆದಂತ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡ ಅವರು, ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು. ಸಿಎಂ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು. ಅವರಿಗೆ ಕಾಂಗ್ರೆಸ್ ಶಾಲು, ಬಾವುಟವನ್ನು ನೀಡಿ, ಡಿಸಿಎಂ ಡಿಕೆ ಶಿವಕುಮಾರ್ ಪಕ್ಷಕ್ಕೆ ಸ್ವಾಗತಿಸಿದರು. https://kannadanewsnow.com/kannada/parents-are-you-giving-bombay-mithai-to-your-children-heres-the-shocking-news/ https://kannadanewsnow.com/kannada/aleart-union-health-ministry-issues-warning-against-antibiotic-tablets/

Read More

ಚಿತ್ರದುರ್ಗ: ಅಕ್ರಮ ಮದ್ಯ ಮಾರಾಟ ತಡೆಗೆ ಅಬಕಾರಿ ಇಲಾಖೆಯಿಂದ ಮಹತ್ವದ ಕ್ರಮ ವಹಿಸಲಾಗಿದೆ. ಬಾರ್, ರೆಸ್ಟೋರೆಂಟ್ ಸೇರಿ ಇತರೆ ಅನುಮತಿ ಪಡೆದ ಮದ್ಯದಂಗಡಿ ಹೊರತಾಗಿ ಬೇರೆಡೆ ಮದ್ಯ ಮಾರಾಟ ಕಾನೂನು ಬಾಹಿರ, ನಿಷೇಧ ಕೂಡ ಆಗಿದೆ. ಇದರ ನಡುವೆ ಇಲ್ಲೊಬ್ಬ ಭೂಪ ಚಿಲ್ಲರೆ ಅಂಗಡಿಯಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಕೋರಿದ್ದಾನೆ. ಆ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ. ಹೌದು.. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹೊಸನಾಯಕರಹಟ್ಟಿಯ ಹೆಚ್.ಸಿ ಚಂದ್ರಶೇಖರ್ ಎಂಬುವರು ಹಿರಿಯೂರು ತಾಲೂಕು ಅಬಕಾರಿ ನಿರೀಕ್ಷಿಕರಿಗೆ ಬರೆದಿರುವಂತ ಪತ್ರವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವಂತ ಪತ್ರದಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಹೋಬಳಿಯ, ಬುರುಜನರೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಹೊಸನಾಯಕರಹಟ್ಟಿ ಗ್ರಾಮದಲ್ಲಿ ನಾನು ವಾಸಿಸುತ್ತಿದ್ದೇನೆ. ನಮ್ಮ ಮನೆಯಲ್ಲಿ ಒಂದು ಚಿಲ್ಲರೆ ಅಂಗಿಡಯನ್ನು ತೆರೆಯುತ್ತಿರೋದಾಗಿ ತಿಳಿಸಿದ್ದಾರೆ. ಇನ್ನೂ ಹೀಗೆ ತೆರೆಯುತ್ತಿರುವಂತ ಚಿಲ್ಲರೆ ಅಂಗಡಿಯಲ್ಲಿ ಮದ್ಯ ಮಾರಾಟ…

Read More

ಹಣದ ಸಮಸ್ಯೆ ಎಷ್ಟೇ ದೊಡ್ಡದಾದರೂ ಸಾಲದ ಸಮಸ್ಯೆ ಇದ್ದರೂ ಅದರಿಂದ ಹೊರಬರಬಹುದು. ಆದರೆ ಅದಕ್ಕೆ ಸಂಪೂರ್ಣ ನಂಬಿಕೆ ಬೇಕು. ನಂಬಿಕೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು. ಈ ನಂಬಿಕೆಯ ಜೊತೆಗೆ ನಾವು ನಮ್ಮ ಕಾಲಾವಧಿಯನ್ನು ನೋಡಬೇಕಾಗಿದೆ. ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿರುವವರು ನಿಮ್ಮ ವೈಯಕ್ತಿಕ ಜಾತಕವನ್ನು ತೆಗೆದುಕೊಂಡು ಜ್ಯೋತಿಷಿಗೆ ತೋರಿಸಿ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು…

Read More

ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಝಡ್ ಪ್ಲಸ್ ಭದ್ರತೆಯನ್ನು ಒದಗಿಸಿ, ಕೇಂದ್ರ ಸರ್ಕಾಆದೇಶ ಮಾಡಿದೆ. ಕೇಂದ್ರ ಗುಪ್ತಚರ ಸಂಸ್ಥೆಗಳ ಬೆದರಿಕೆ ಗ್ರಹಿಕೆ ವರದಿಯ ನಂತರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಝಡ್ ಪ್ಲಸ್ ಭದ್ರತೆ ನೀಡಲಾಗಿದೆ. ಸಿಆರ್ಪಿಎಫ್ ಅವರಿಗೆ ಭದ್ರತೆ ಒದಗಿಸಲಿದೆ ಎಂಬುದಾಗಿ ಮೂಲಗಳಿಂದ ತಿಳಿದು ಬಂದಿದೆ. https://twitter.com/ANI/status/1760641264062550249 https://kannadanewsnow.com/kannada/parents-are-you-giving-bombay-mithai-to-your-children-heres-the-shocking-news/ https://kannadanewsnow.com/kannada/former-footballer-dani-alves-sentenced-to-4-5-years-in-prison-in-sexual-assault-case/

Read More

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2023-24 ನೇ ಸಾಲಿಗೆ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ (ವೃತ್ತಿಪರ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪ.ಜಾ/ಪ.ವರ್ಗ ಮತ್ತು ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.    https://kannadanewsnow.com/kannada/aicc-president-mallikarjun-kharge-gets-z-plus-security/ https://kannadanewsnow.com/kannada/aleart-union-health-ministry-issues-warning-against-antibiotic-tablets/ https://kannadanewsnow.com/kannada/good-news-for-property-taxpayers-in-bengaluru-interest-waiver-on-dues-above-5-years/ ಪ್ರವರ್ಗ-1, ಎಸ್‍ಸಿ ಮತ್ತು ಎಸ್‍ಟಿ ಆದಾಯ ಮಿತಿ ರೂ.2.50 ಲಕ್ಷ ಹಾಗೂ ಪ್ರವರ್ಗ-2ಎ, 2ಬಿ, 3ಎ, 3ಬಿ ಇತರೆ ಹಿಂದುಳಿದ ವರ್ಗಗಳ ಆದಾಯ ಮಿತಿ ರೂ.1.00 ಲಕ್ಷ ಗಳು ಇರುತ್ತದೆ. ಆಸಕ್ತ ವಿದ್ಯಾರ್ಥಿಗಳಿಂದ ಪ್ರವೇಶಾತಿ ಕಲ್ಪಿಸಲು ತಾಲೂಕು ಕಲ್ಯಾಣಾಧಿಕಾರಿಗಳು SHP ಲಾಗಿನ್‍ನಲ್ಲಿ ಫೆ.29 ರೊಳಗಾಗಿ ಅರ್ಜಿ ಸಲ್ಲಿಸುವುದು. ಅರ್ಜಿ ಸಲ್ಲಿಸಲು ಹಾಗೂ ತಾಲ್ಲೂಕುವಾರು ವಿದ್ಯಾರ್ಥಿನಿಲಯಗಳ ವಿವರ ಹಾಗೂ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳ ವಿವರ ಮತ್ತು ಸರ್ಕಾರದ ಆದೇಶಕ್ಕಾಗಿ ಇಲಾಖೆಯ ವೆಬ್‍ಸೈಟ್…

Read More

ಬೆಳಗಾವಿ: ಜಿಲ್ಲೆಯಲ್ಲಿ ಇಂದು ಭೀಕರ ಅಪಘಾತವೊಂದು ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಸ್ವಿಫ್ಟ್ ಕಾರು ಡಿಕ್ಕಿಯಾದ ಪರಿಣಾಮ 6 ಜನರು ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಸಮೀಪದಲ್ಲಿ ಈ ಅಪಘಾತ ಸಂಭವಿಸಿದೆ. ಮದುವೆ ಮುಗಿಸಿ ಒಂದೇ ಕಾರಿನಲ್ಲಿ 6 ಜನರು ವಾಪಾಸ್ ಆಗುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರು ಮರಕ್ಕೆ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ 6 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ್ ಗುಳೇದ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಶೀಲನೆ ನಡೆಸಿ ಮಾಹಿತಿ ಪಡೆದು, ಪ್ರಕರಣ ದಾಖಲಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಅಂದಹಾಗೇ ಮದುವೆ ಮುಗಿಸಿ ಒಂದೇ ಕಾರಿನಲ್ಲಿ ಮಹಾರಾಷ್ಟ್ರ ಮೂಲದ ಜನರು ತೆರಳುತ್ತಿದ್ದರು. ಈ ವೇಳೆಯಲ್ಲಿ ಅಪಘಾತ ಸಂಭವಿಸಿ 6 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. https://kannadanewsnow.com/kannada/parents-are-you-giving-bombay-mithai-to-your-children-heres-the-shocking-news/ https://kannadanewsnow.com/kannada/former-footballer-dani-alves-sentenced-to-4-5-years-in-prison-in-sexual-assault-case/

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಬೆಂಗಳೂರಿನ ಆಸ್ತಿ ತೆರಿಗೆದಾರರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಅದೇ ವಸತಿ ಮತ್ತು ವಾಣಿಜ್ಯ ಆಸ್ತಿದಾರರ 5 ವರ್ಷಕ್ಕಿಂತ ಹಿಂದಿನ ಬಾಕಿಯ ಬಡ್ಡಿ ಮನ್ನಾಗೆ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಬೆಂಗಳೂರಿನ ಆಸ್ತಿ ತೆರಿಗೆದಾರರಿಗೆ ಸಂತಸದ ಸುದ್ದಿ ಎನ್ನುವಂತೆ ಆಸ್ತಿ ತೆರಿಗೆದಾರರ ಸ್ನೇಹಿ ಬಿಬಿಎಂಪಿ ತಿದ್ದುಪಡಿ ವಿಧೇಯಕ-2024 ಜಾರಿಯಾಗಿದೆ ಎಂದಿದ್ದಾರೆ. ಈ ಬಿಬಿಎಂಪಿ ತಿದ್ದುಪಡಿ ವಿಧೇಯಕದಂತೆ 1000 ಚದುರ ಅಡಿಯವರೆಗಿನ ಸ್ವಯಂ ಬಳಕೆ ಅಸ್ತಿದಾರರಿಗೆ ಸಂಪೂರ್ಣ ದಂಡ ವಿನಾಯಿತಿ ನೀಡಲಾಗುತ್ತಿದೆ. ಬಾಕಿ ಇರುವ ಆಸ್ತಿ ತೆರಿಗೆ ಮೇಲಿನ ದಂಡದ ಪ್ರಮಾಣ ಶೇ.50ರಷ್ಟು ಕಡಿತ ಮಾಡಲಾಗುತ್ತಿದೆ. ಬೆಂಗಳೂರಿಗರಿಗೆ 2700 ಕೋಟಿ ಉಳಿತಾಯವಾಗಲಿದೆ ಎಂದಿದ್ದಾರೆ. ಇನ್ನೂ ಸರ್ಕಾರದ ವಸತಿ ಯೋಜನೆಯ ಆಸ್ತಿಗಳು ಹಾಗೂ ಕೊಳಗೇರಿ ಪ್ರದೇಶದ ಕಟ್ಟಡಗಳಿಗೆ ಬಡ್ಡಿ ಮೇಲಿನ ದಂಡ ಇಲ್ಲ. ಇದರಿಂದ ಬೆಂಗಳೂರಿನ 5.51 ಲಕ್ಷ ತೆರಿಗೆ ಬಾಕಿದಾರರು, ಸುಮಾರು 5 ರಿಂದ 7 ಲಕ್ಷ ತೆರಿಗೆ ವ್ಯಾಪ್ತಿಗೆ…

Read More

ಕಲಬುರಗಿ: ಜಿಲ್ಲೆಯಲ್ಲಿ ಜನರ ಮೇಲೆ ತೋಳವೊಂದು ಅಟ್ಟಹಾಸ ಮೆರೆದಿದೆ. ದಾಳಿಯ ಪರಿಣಾಮ 8 ಜನರು ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಇವರಲ್ಲಿ ಓರ್ವನ ಸ್ಥಿತಿ ಗಂಭೀರಗೊಂಡಿರೋದಾಗಿ ಹೇಳಲಾಗುತ್ತಿದೆ. ಕಲಬುರ್ಗಿ ಜಿಲ್ಲೆಯ ಅಳಂದ ತಾಲೂಕಿನ ಚಲಗೇರಿ ಗ್ರಾಮದಲ್ಲಿ 8 ಜನರ ಮೇಲೆ ತೋಳವೊಂದು ದಾಳಿಯನ್ನು ಮಾಡಿದೆ. ಈ ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿರೋದಾಗಿ ತಿಳಿದು ಬಂದಿದೆ. ತೋಳದ ದಾಳಿಯಲ್ಲಿ ಶರಣಪ್ಪ ಶಿವ ಗುಂಡ ಜಮಾದಾರ, ಶರಣಪ್ಪ ಜಟ್ಟೆಪ್ಪ ಜಮಾದಾರ ಹಾಗೂ ಅನಸುಬಾಯಿ ಮಾರುತಿ ಮುಗಳಿ, ನೀಲಪ್ಪ ಹಾಲೋಳ್ಳಿ, ಮಲ್ಲಪ್ಪ ದತ್ತಣ್ಣ ಜಮಾದಾರ ಮತ್ತು ಸುನೀಲ್ ಮುಲಗೆ, ಶರಣಪ್ಪ ಹಣಮಂತರಾವ ದಿಂಡುರೆ ಎಂಬುವರು ಗಾಯಗೊಂಡಿದ್ದಾರೆ. ಇವರಲ್ಲಿ ಶರಣಪ್ಪ ಗುರಣ್ಣ ಧಲ್ಲು ಎಂಬುವರ ಸ್ಥಿತಿ ಗಂಭೀರವಾಗಿರೋದಾಗಿ ಹೇಳಲಾಗುತ್ತಿದೆ. ತೋಳದ ದಾಳಿಗೆ ಒಳಗಾಗಿರುವಂತ ನಾಲ್ವರಿಗೆ ಅಳಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೇ, ತೀವ್ರವಾಗಿ ಗಾಯಗೊಂಡಿರುವಂತ ಶರಣಪ್ಪ ಅವರನ್ನು ಸೊಲ್ಲಾಪುರದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ವಿಷಯ ತಿಳಿದು ಚಲಗೇರಿ ಗ್ರಾಮಕ್ಕೆ ಪಶು ವೈದ್ಯರು, ಅಧಿಕಾರಿಳು,…

Read More

ಬೆಂಗಳೂರು: ವಿಧಾನಸಭೆಯಲ್ಲಿ ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕ ಅಂಗೀಕಾರಗೊಂಡಿದೆ. ಇದರೊಂದಿಗೆ ವರ್ಗಾವಣೆ ನಿರೀಕ್ಷೆಯಲ್ಲಿದ್ದಂತ ಪೊಲೀಸರಿದೆ ಗುಡ್ ನ್ಯೂಸ್ ಸಿಕ್ಕಿದೆ. ಅದೇ ಇನ್ಮುಂದೆ ಕನಿಷ್ಠ 2 ವರ್ಷಕ್ಕೊಮ್ಮೆ ಪೊಲೀಸರ ವರ್ಗಾವಣೆಯಾಗಲಿದೆ. ಈ ಕುರಿತಂತೆ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿಯವರು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರಿಗೆ ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕ ಬದಲಾವಣೆಗೆ ಮನವಿ ಮಾಡಿದ್ದರು. ಈ ಮನವಿಗೆ ಒಪ್ಪಿಗೆ ಸೂಚಿಸಿದ್ದಂತ ಅವರು, ವಿಧಾನಸಭೆಯಲ್ಲಿ ತಿದ್ದುಪಡಿ ವಿಧೇಯಕವನ್ನು ಮಂಡಿಸಿದ್ದರು. ಇಂತಹ ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕ ಅಂಗೀಕಾರಗೊಂಡಿದೆ. ಇನ್ನೂ ಈ ಬೆನ್ನಲ್ಲೇ ವಿಧಾನ ಪರಿಷತ್ತಿನಲ್ಲಿಯೂ ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕವನ್ನು ಗೃಹ ಸಚಿವ ಡಾ.ಜಿ ಪರಮೇಶ್ವರ್ ಮಂಡಿಸಿದ್ದಾರೆ. ಇಲ್ಲಿಯೂ ಅಂಗೀಕಾರ ದೊರೆತರೇ, ಪೊಲೀಸರ ವರ್ಗಾವಣೆ ಮತ್ತಷ್ಟು ಸುಲಭವಾಗಲಿದೆ. ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕ ಅಂಗೀಕರಾದಿಂದಾಗಿ ಕನಿಷ್ಠ 2 ವರ್ಷಕ್ಕೊಮ್ಮೆ ಪೊಲೀಸರ ವರ್ಗಾವಣೆಗೆ ಅಧಿಸೂಚನೆ ಹೊರ ಬೀಳಲಿದೆ. ಈ ಮೂಲಕ ವರ್ಗಾವಣೆ ನಿರೀಕ್ಷೆಯಲ್ಲಿದ್ದಂತ ಪೊಲೀಸರಿಗೆ ಗುಡ್ ನ್ಯೂಸ್ ದೊರೆತಂತೆ ಆಗಲಿದೆ. https://kannadanewsnow.com/kannada/parents-are-you-giving-bombay-mithai-to-your-children-heres-the-shocking-news/ https://kannadanewsnow.com/kannada/former-footballer-dani-alves-sentenced-to-4-5-years-in-prison-in-sexual-assault-case/

Read More