Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗಳಲ್ಲಿ ಬರುವ ಕೊಳವೆ ಬಾವಿಗಳನ್ನು ಪಾಲಿಕೆಯಿಂದ ಜಲಮಂಡಳಿಗೆ ಹಸ್ತಾಂತರಿಸಲು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಯಲಹಂಕ ವಲಯ ವ್ಯಾಪ್ತಿಯಲ್ಲಿ “ಮುಖ್ಯ ಆಯುಕ್ತರ ನಡೆ ವಲಯದ ಕಡೆ”ಯಲ್ಲಿ ಇಂದು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ವೇಳೆ, ಸಾರ್ವಜನಿಕರೊಬ್ಬರು ಮಾತನಾಡಿ 110 ಹಳ್ಳಿಗಳ ಪೈಕಿ ಥಣಿಸಂದ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಮನವಿ ಮಾಡಿದರು. ಅದಕ್ಕೆ ಮುಖ್ಯ ಆಯುಕ್ತರು ಪ್ರತಿಕ್ರಿಯಿಸಿ, ನಗರದಲ್ಲಿ ಜಲಮಂಡಳಿ ವತಿಯಿಂದ ಕಾವೇರಿ 5ನೇ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಬಹುತೇಕ ಕಡೆ ಕಾವೇರಿ ನೀರಿನ ಸಂಪರ್ಕವನ್ನು ನೀಡಲಾಗಿದೆ. ಈ ಸಂಬಂಧ ಪಾಲಿಕೆ ಸುಪರ್ದಿಯಲ್ಲಿರುವ ಕೊಳವೆ ಬಾವಿಗಳನ್ನು ಜಲಮಂಡಳಿಗೆ ಹಸ್ತಾಂತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಫೆಬ್ರವರಿ ಅಂತ್ಯದೊಳಗಾಗಿ ನೀರು ಒದಗಿಸಿ: ಥಣಿಸಂದ್ರ ಹಾಗೂ ಹೆಗ್ಡೆ ನಗರಕ್ಕೆ ಕಾವೇರಿ ನೀರು ಸಂಪರ್ಕ ಕಲ್ಪಿಸಲು ಕೇಳಿದ್ದಕ್ಕೆ ಪ್ರತಿಕ್ರಿಯಿಸಿ, ಕಾವೇರಿ ನೀರು ಎಲ್ಲಾ ಕಡೆ ಸಿಗುವಂತೆ ಮಾಡಬೇಕು. ಈ ಸಂಬಂಧ ಕಮಿಷನ್ ಮಾಡಿ ಟೆಸ್ಟಿಂಗ್ ಮಾಡಬೇಕು.…
ಒಬ್ಬ ವ್ಯಕ್ತಿಯು ಒಳ್ಳೆಯವನಾಗಿದ್ದರೆ, ಅವನ ಸುತ್ತಲಿನ ಜನರು ಅದನ್ನು ಅಸೂಯೆ ಮತ್ತು ಕೋಪದಿಂದ ಹೇಳುತ್ತಾರೆ, ಆದರೆ ಅವನು ತನ್ನ ಕಾರ್ಯ ಮತ್ತು ಮನಸ್ಸಿನಿಂದ ಏನನ್ನಾದರೂ ಯೋಚಿಸಿದರೆ ಅದು ಕೆಟ್ಟ ವಿಷಯವಾಗುತ್ತದೆ. ಪಟ್ಟಣವು ಕೆಟ್ಟ ಕಣ್ಣು ಹೊಂದಿದೆ ಎಂದು ಅವರು ಹೇಳುತ್ತಾರೆ. ಒಬ್ಬರ ಕಣ್ಣು ಇನ್ನೊಬ್ಬರ ಕಣ್ಣು ಒಂದೇ ಅಲ್ಲ ಎಂದು ಹೇಳಲಾಗುತ್ತದೆ. ಎಲ್ಲರೂ ನಮ್ಮ ಬಗ್ಗೆ ಒಂದೇ ರೀತಿ ಯೋಚಿಸಲು ಸಾಧ್ಯವಿಲ್ಲ. ಈ ದೃಷ್ಟಿಗಳು ಒಬ್ಬರ ಸ್ಥಿತಿಯಲ್ಲಿ ಅಡೆತಡೆಗಳು, ಅಪಘಾತಗಳು, ರೋಗಗಳು ಮತ್ತು ನಷ್ಟಗಳನ್ನು ಉಂಟುಮಾಡುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ. ಇದನ್ನು ಹೋಗಲಾಡಿಸಲು ನಮ್ಮ ಪೂರ್ವಜರು ಸಾಂಪ್ರದಾಯಿಕವಾಗಿ ಕೆಲವು ಸರಳ ಪರಿಹಾರಗಳನ್ನು ಮಾಡಿದ್ದಾರೆ. ಲವಂಗದೊಂದಿಗೆ ದುಷ್ಟ ಕಣ್ಣುಗಳನ್ನು ತೊಡೆದುಹಾಕಲು ಹೇಗೆ? ನಾವು ಈ ಪೋಸ್ಟ್ನಲ್ಲಿ ಆಧ್ಯಾತ್ಮಿಕ ಮಾಹಿತಿಯನ್ನು ನೋಡುವುದನ್ನು ಮುಂದುವರಿಸಲಿದ್ದೇವೆ . ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ…
ಚಿತ್ರದುರ್ಗ : ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆಯಾಗಿರುವ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು “Cyber Security and Internet Safety” ವಿಷಯದ ಮೇಲೆ 2025ರ ಫೆಬ್ರವರಿ 05 ರಿಂದ 7 ರವರೆಗೆ ಮೂರು ದಿನಗಳ ತರಬೇತಿ ಕಾರ್ಯಾಗಾರವನ್ನು ಅಕಾಡೆಮಿ ಕಚೇರಿಯಲ್ಲಿ ಆಯೋಜಿಸಲಾಗುತ್ತಿದೆ. ಈ ಕಾರ್ಯಾಗಾರದಲ್ಲಿ “Cyber Security and Internet Safety , ನಡೆಯುತ್ತಿರುವ ಆನ್ಲೈನ್ ವಂಚನೆಗಳನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳು ಮತ್ತು ಅಂತರ್ಜಾಲ ಸುರಕ್ಷತೆ ಉಪಯೋಗದ ಬಗ್ಗೆ ವಿವಿಧ ನುರಿತ ತಜ್ಞರಿಂದ ಉಪನ್ಯಾಸಗಳನ್ನು ಏರ್ಪಡಿಸಲಾಗಿದ್ದು, ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಪೆÇೀಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಆಸಕ್ತ ಜನ ಸಾಮಾನ್ಯರು ಭಾಗವಹಿಸಬಹುದಾಗಿದೆ. ಆಸಕ್ತ ಪ್ರತಿನಿಧಿಗಳು ಫೆ.03ರೊಳಗಾಗಿ (Google form-https://forms.gle/9Fds6N5vjzLpjNGX7) ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗೆ ವೈಜ್ಞಾನಿಕಾಧಿಕಾರಿ ಶ್ರೀನಿವಾಸು, (ಮೊ 9620767819) ಹಾಗೂ ಚಂದ್ರಶೇಖರಮೂರ್ತಿ (ಮೊ. 9686449019) ಇವರನ್ನು ಸಂಪರ್ಕಿಸಬಹುದಾಗಿದೆ ಅಥವಾ ಅಕಾಡೆಮಿ ವೆಬ್ಸೈಟ್- http://kstacademy.in ವೀಕ್ಷಿಸಬಹುದಾಗಿದೆ ಎಂದು ಕರ್ನಾಟಕ ವಿಜ್ಞಾನ…
ಬಳ್ಳಾರಿ : ಪ್ರಸ್ತಕ ಸಾಲಿನ ಹಿಂಗಾರು ಹಂಗಾಮಿನ ಎಫ್ಎಕ್ಯೂ ಗುಣಮಟ್ಟದ ಕಡಲೇಕಾಳು ಉತ್ಪನ್ನವನ್ನು ಬೆಂಬಲ ಬೆಲೆ ಯೋಜನೆಯಡಿ ಬೆಂಗಳೂರಿನ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿಯಮಿತ, ಬಳ್ಳಾರಿ ಶಾಖೆ ವತಿಯಿಂದ ಖರೀದಿಸಲಾಗುತ್ತಿದೆ ಎಂದು ಕೃಷಿ ಮಾರಾಟ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. ಕೇಂದ್ರ ಸರ್ಕಾರವು ನಿಗಧಿಪಡಿಸಿದ ಬೆಂಬಲ ಬೆಲೆಯಂತೆ ಪ್ರತಿ ಕ್ವಿಂಟಾಲ್ಗೆ ರೂ.5,650 ರಂತೆ ರೈತರಿಂದ ಖರೀದಿಸಲಾಗುತ್ತದೆ. ಖರೀದಿ ಕೇಂದ್ರಗಳು: ಬಳ್ಳಾರಿ ನಗರದ ಎಸ್ಪಿ ವೃತ್ತದ ಹತ್ತಿರದ ಮಾರುತಿ ನಗರದ 2ನೇ ಕ್ರಾಸ್ನ ರೈತರ ಸೇವಾ ಸಹಕಾರ ಸಂಘ ನಿಯಮಿತ (ಮೊ.9900559927). ಸಿರುಗುಪ್ಪ ಪಟ್ಟಣದ ಪಿಎಲ್ಡಿ ಬ್ಯಾಂಕ್ ಕಟ್ಟಡದ ಪಶು ಆಸ್ಪತ್ರೆ ಪಕ್ಕದಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಮೊ.9845166601). ಬೇಕಾದ ದಾಖಲೆ: ಆಧಾರ್ಕಾರ್ಡ್, ಪ್ರಸ್ತಕ ಸಾಲಿನ ಪಹಣಿ ಪತ್ರ, ಎಫ್ಐಡಿ ಕಡ್ಡಾಯ, ರೈತರು ತಮ್ಮ ಹೆಸರನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಾಯಿಸಿರಬೇಕು. ಬ್ಯಾಂಕ್ ಖಾತೆ ಪುಸ್ತಕದ ನಕಲು ಪ್ರತಿ. ರೈತರಲ್ಲಿ ಫ್ರೂಟ್ಸ್ ಐಡಿ ಇಲ್ಲದೇ ಇದ್ದಲ್ಲಿ ಅಥವಾ ಫ್ರೂಟ್ಸ್ ನಲ್ಲಿ ಯಾವುದಾದರೂ…
ಬಳ್ಳಾರಿ : ಏಳುಬೆಂಚಿಯ ಆರ್ಒ ಪ್ಲಾಂಟ್ ನ ಪೂರ್ಣಿಮ ಎಂಟರ್ ಪ್ರೈಸಸ್ ನ ಮಾಲೀಕರಾದ ಅಮರೇಶ್ವರ ಶಾಸ್ತ್ರಿ ಇವರಿಗೆ ಮಂಜೂರಾದ ಹಾಲಿ ವಿದ್ಯುತ್ ಮಾಪಕವನ್ನು ಬೈಪಾಸ್ ಮಾಡಿಕೊಂಡು ಅನಧಿಕೃತವಾಗಿ ತಮ್ಮ ಇಂಡಸ್ಟ್ರಿಯ ವಿದ್ಯುತ್ ಉಪಕರಣಗಳಿಗೆ ಕಳ್ಳತನದಿಂದ ವಿದ್ಯುತ್ ಉಪಯೋಗಿಸಿ ಅನಧೀಕೃತ ಲಾಭ ಪಡೆದು ಜೆಸ್ಕಾಂ ಕಂಪನಿಗೆ ಹಾನಿ ಮಾಡಿರುವುದರಿಂದ ರೂ.18,02,951/- ದಂಡ ಮತ್ತು ದಂಡ ಪಾವತಿಸಲು ತಪ್ಪಿದಲ್ಲಿ 3 ತಿಂಗಳ ಸಾದಾ ಶಿಕ್ಷೆ ವಿಧಿಸಿ ಇಲ್ಲಿನ 1 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ವಿದ್ಯಾಧರ ಶಿರಹಟ್ಟಿ ಅವರು ಆದೇಶಿಸಿದ್ದಾರೆ. 2022ರ ಆ.18 ರಂದು ಬೆಳಿಗ್ಗೆ 10.39 ಗಂಟೆಗೆ ಜೆಸ್ಕಾಂ ಜಾಗೃತ ದಳದ ಎಇ ಕೆ.ಗಾದಿಲಿಂಗಪ್ಪ ತಮ್ಮ ಸಿಬ್ಬಂದಿಯವರೊಂದಿಗೆ ವಿವಿಧೆಡೆ ವಿದ್ಯುತ್ ಕಳ್ಳತನ ಪ್ರಕರಣ ಪತ್ತೆಗಾಗಿ ಹೋದಾಗ ಕಂಡುಬAದಿದ್ದು, ಇವರ ಮೇಲೆ ಕ್ರಮ ಕೈಗೊಳ್ಳಲು ಮುದ್ದೆ ಮಾಲುನೊಂದಿಗೆ ಜೆಸ್ಕಾಂ ಇಲಾಖೆಯವರು ಲಿಖಿತ ದೂರು ನೀಡಿದ್ದರು. ಪ್ರಕರಣದ ಸಾಕ್ಷಿದಾರರ ವಿಚಾರಣೆಯಿಂದ ಹಾಗೂ ತನಿಖೆಯಿಂದ ಆರೋಪಿತರ ವಿರುದ್ಧ ಆರೋಪ ಸಾಬಿತಾಗಿದ್ದರಿಂದ ಕಲಂ: 135(1)…
ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಒದಗಿಸುವಂತ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಇದೀಗ ಅರ್ಹ ಪತ್ರಕರ್ತರಿಂದ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಮಾಧ್ಯಮ ಮಾನ್ಯತಾ ಪತ್ರ ಹೊಂದಿರುವ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ಪಾಸ್ ಸೌಲಭ್ಯವನ್ನು ರಾಜ್ಯ ಸರ್ಕಾರ ಕಲ್ಪಿಸಿದೆ. ಈ ಮೂಲಕ ಬಜೆಟ್ನಲ್ಲಿ ಘೋಷಣೆ ಮಾಡಿ ಅದನ್ನು ಯಥಾವತ್ತಾಗಿ ಜಾರಿಗೆ ಕೊಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ನುಡಿದಂತೆ ನಡೆದಿದೆ. ಉಚಿತ ಬಸ್ಪಾಸ್ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ವಿದ್ಯುನ್ಮಾನ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಪೂರ್ಣಾವಧಿಗೆ ನೇಮಕಗೊಂಡು 4 ವರ್ಷಗಳ ಸೇವಾನುಭವ ಹೊಂದಿರುವ ಪತ್ರಕರ್ತರು ಅರ್ಜಿ ಸಲ್ಲಿಸಬಹುದು. ನೇಮಕಾತಿ ಆದೇಶ/ ವೇತನ ಪತ್ರ/ ಬ್ಯಾಂಕ್ ಸ್ಟೇಟ್ಮೆಂಟ್ ಇವುಗಳಲ್ಲಿ ಯಾವುದಾದರೂ ಒಂದು ದಾಖಲೆಯನ್ನು ಸೇವಾನುಭವಕ್ಕಾಗಿ ಒದಗಿಸಬೇಕು. ಅರ್ಹ ಪತ್ರಕರ್ತರು ಉಚಿತ ಬಸ್ಪಾಸ್ ಅಡಿ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವ ಕರ್ನಾಟಕ ಸಾರಿಗೆ ಸಂಸ್ಥೆ…
ಬೆಂಗಳೂರು: ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ ಗುಡ್ ನ್ಯೂಸ್ ಎನ್ನುವಂತೆ ಸರ್ಕಾರವು 1 ಕೋಟಿ ಅಪಘಾತ ವಿಮಾ ಪರಿಹಾರಕ್ಕೆ ಬ್ಯಾಂಕ್ ಜೊತೆಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ. ಇಂದು ಸಾರಿಗೆ ಮತ್ತು ಮುಜರಾಯಿ ಖಾತೆಯ ಸಚಿವರಾದ ರಾಮಲಿಂಗರೆಡ್ಡಿರವರ ಅಧ್ಯಕ್ಷತೆಯಲ್ಲಿ ಕ.ಕ.ರ.ಸಾ.ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಎಂ.ರಾಚಪ್ಪ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಡಿವಿಜನಲ್ ಜನರಲ್ ಮ್ಯಾನೇಜರ್ ಮನೋಜಕುಮಾರ ಟೋಪೋ ಅವರ ಉಪಸ್ಥಿತಿಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ನೌಕರರಿಗೆ ಪ್ರೀಮಿಯಂ ರಹಿತ ವಿಮೆ ರೂ.1.00 ಕೋಟಿಗಳ ಅಪಘಾತ ವಿಮಾ ಹಾಗೂ ಇತರೇ ಸೌಲಭ್ಯಗಳ ಒಡಂಬಡಿಕೆ ಮಾಡಿಕೊಳ್ಳಲಾಯಿತು. ಸದರಿ ಯೋಜನೆಯಲ್ಲಿ ನಿಗಮದ ನೌಕರರ ವೇತನ ಖಾತೆಗಳನ್ನು Corporate Salary Package” ಅಡಿಯಲ್ಲಿ ಪ್ರೀಮಿಯಂ ರಹಿತ ಅಪಘಾತ ವಿಮೆ ವೈಯಕ್ತಿಕ ಅಥವಾ ಕರ್ತವ್ಯದ ಮೇಲೆ ಅಪಘಾತದಲ್ಲಿ ನಿಧನರಾದಲ್ಲಿ ರೂ.1.00 ಕೋಟಿ ಹಾಗೂ ಸಹಜ ನಿಧನಕ್ಕೆ ರೂ.6.00 ಲಕ್ಷಗಳ “Term Insurance” ಪಾಲಿಸಿಯೊಂದಿಗೆ ಇತರೇ…
ತುಮಕೂರು: ಆಯಿ್ಲ ಟ್ಯಾಂಗ್ ಬ್ಲಾಸ್ಟ್ ಆದ ಪರಿಣಾಮ ಇಬ್ಬರು ಕಾರ್ಮಿಕರು ದುರ್ಮರಣಹೊಂದಿರುವಂತ ಘಟನೆ ತುಮಕೂರಿನ ಅಂತಸರನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ತುಮಕೂರಿನ ಅಂತಸರಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವಂತ ಪರಿಮಳ ಆಗ್ರೋ ಪುಡ್ ಇಂಡಸ್ಟ್ರೀಸ್ ನಲ್ಲಿ ಆಯಿಲ್ ಟ್ಯಾಂಕ್ ಸ್ಪೋಟಗೊಂಡ ಪರಿಣಾಮ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/are-there-cockroaches-lizards-and-ants-in-your-house-just-do-this-elimination-is-guaranteed/ https://kannadanewsnow.com/kannada/absence-of-kannadigas-in-banks-is-a-matter-of-concern-dr-purushothama-bilimale/
ಬೆಂಗಳೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕುಗಳ ಆಡಳಿತದಲ್ಲಿ ಕನ್ನಡಿಗರ ಸಂಖ್ಯೆ ಕ್ಷೀಣಿಸುತ್ತಿದ್ದು, ಇದು ಮುಂದಿನ ದಿನಗಳಲ್ಲಿ ತೀವ್ರವಾದ ಸಾಮಾಜಿಕ ಸಂಘರ್ಷವನ್ನು ಸೃಷ್ಟಿಸಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯಮಟ್ಟದ ಬ್ಯಾಂಕರುಗಳ ಸಮಿತಿ (ಎಸ್ ಎಲ್ ಬಿ ಸಿ) ಯ ಅಧಿಕಾರಿಗಳೊಂದಿಗೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿಗೆ ತಾವು ಕೇಂದ್ರ ಸಚಿವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ಪಡೆದ ಭರವಸೆಯಂತೆ ಬ್ಯಾಂಕುಗಳು ಸಾರ್ವಜನಿಕ ಸಂಪರ್ಕ ವಿಭಾಗಗಳಲ್ಲಿ ಸ್ಥಳೀಯ ಭಾಷೆ ಬಲ್ಲವರನ್ನು ನೇಮಿಸುವುದು ಬಹಳ ಮುಖ್ಯವಾಗಿದ್ದು, ಇದು ವಿಳಂಬವಾದಲ್ಲಿ ನಾಡಿನೆಲ್ಲೆಡೆ ಸಾಮಾಜಿಕ ಸಂಘರ್ಷ ಏರ್ಪಡಲಿದೆ. ಎಸ್ ಎಲ್ ಬಿ ಸಿ ಈ ನಿಟ್ಟಿನಲ್ಲಿ ಕೂಡಲೇ ತನ್ನ ಅಧೀನದ ಬ್ಯಾಂಕುಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದಿದ್ದಾರೆ. ಶೀಘ್ರದಲ್ಲಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ಆಡಳಿತದಲ್ಲಿ ಕನ್ನಡ ಭಾಷೆಗೆ ಆದ್ಯತೆಯನ್ನು ಒದಗಿಸುವ ಮೂಲಕ ಬ್ಯಾಂಕುಗಳನ್ನು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಬ್ಯಾಂಕುಗಳ ಪ್ರತಿನಿಧಿಗಳೊಂದಿಗೆ ಶೀಘ್ರದಲ್ಲೆ ಸಭೆ ನಡೆಸಿ ವಿವರವಾದ ಸೂಚನೆಗಳನ್ನು ನೀಡಲಾಗುತ್ತದೆ ಎಂದ ಡಾ.ಬಿಳಿಮಲೆ…
ನವದೆಹಲಿ: ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನಕ್ಕೆ ದೊಡ್ಡ ಹೊಡೆತವಾಗಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ ಕಾರ್ಯನಿರ್ವಾಹಕ ಆದೇಶದ ಮೂಲಕ ಯುನೈಟೆಡ್ ಸ್ಟೇಟ್ಸ್ ಸಹಾಯವನ್ನು ಸ್ಥಗಿತಗೊಳಿಸಿದೆ ಎಂದು ಕರಾಚಿಯಲ್ಲಿರುವ ಯುಎಸ್ ದೂತಾವಾಸದ ಅಧಿಕಾರಿಯನ್ನು ಉಲ್ಲೇಖಿಸಿ ಪಾಕಿಸ್ತಾನದ ಮಾಧ್ಯಮ ಜಿಯೋ ನ್ಯೂಸ್ ವರದಿ ಮಾಡಿದೆ. ಯಾವುದೇ ದೇಶವನ್ನು ಉಲ್ಲೇಖಿಸದೆ, ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ನ ವಕ್ತಾರ ಟಮ್ಮಿ ಬ್ರೂಸ್ ಕೂಡ ಈ ನಿಟ್ಟಿನಲ್ಲಿ ಹೇಳಿಕೆ ನೀಡಿದ್ದಾರೆ. ಯಾವುದೇ ದೇಶವನ್ನು ಉಲ್ಲೇಖಿಸದೆ, ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ನ ವಕ್ತಾರ ಟಮ್ಮಿ ಬ್ರೂಸ್ ಕೂಡ ಈ ನಿಟ್ಟಿನಲ್ಲಿ ಹೇಳಿಕೆ ನೀಡಿದ್ದಾರೆ. ಕಳೆದ 3-4 ವರ್ಷಗಳಿಂದ ಪಾಕಿಸ್ತಾನವು ಅಭೂತಪೂರ್ವ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವುದರಿಂದ ದೊಡ್ಡ ಹೊಡೆತ ಬಿದ್ದಿದೆ. ಹಣದುಬ್ಬರವು ಶೇಕಡಾ 37 ಕ್ಕಿಂತ ಹೆಚ್ಚಾಗಿರುವುದರಿಂದ ನಾಗರಿಕರು ಮೂಲಭೂತ ಅಗತ್ಯಗಳಿಗಾಗಿ ಹೆಣಗಾಡುತ್ತಿದ್ದಾರೆ. “ಯುನೈಟೆಡ್ ಸ್ಟೇಟ್ಸ್ ವಿದೇಶಿ ನೆರವನ್ನು ಮರುಮೌಲ್ಯಮಾಪನ ಮಾಡುವ ಮತ್ತು ಮರುಹೊಂದಿಸುವ ಅಧ್ಯಕ್ಷ ಟ್ರಂಪ್ ಅವರ ಕಾರ್ಯನಿರ್ವಾಹಕ ಆದೇಶಕ್ಕೆ ಅನುಗುಣವಾಗಿ, ಕಾರ್ಯದರ್ಶಿ ರುಬಿಯೊ ಅವರು ಸ್ಟೇಟ್ ಡಿಪಾರ್ಟ್ಮೆಂಟ್ ಮತ್ತು ಯುಎಸ್ ಏಜೆನ್ಸಿ…