Subscribe to Updates
Get the latest creative news from FooBar about art, design and business.
Author: kannadanewsnow09
ಉತ್ತರ ಪ್ರದೇಶ: ಅಯೋಧ್ಯೆಯ ರಾಮ ಮಂದಿರ ಟ್ರಸ್ಟ್ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಪೊಲೀಸರು ತಕ್ಷಣ ತನಿಖೆ ನಡೆಸುವಂತೆ ಪ್ರೇರೇಪಿಸಿದ್ದಾರೆ. “ಬಧಾ ಲೋ ಮಂದಿರ್ ಕಿ ಸುರಕ್ಷಾ” (ದೇವಾಲಯದ ಭದ್ರತೆಯನ್ನು ಹೆಚ್ಚಿಸಿ) ಎಂದು ಕಳುಹಿಸುವವರು ಇಮೇಲ್ನಲ್ಲಿ ಬರೆದಿದ್ದಾರೆ. ರಾಮ ಜನ್ಮಭೂಮಿ ಟ್ರಸ್ಟ್ಗೆ ಸೋಮವಾರ ರಾತ್ರಿ ಬೆದರಿಕೆ ಮೇಲ್ ಬಂದಿದೆ. ಸೈಬರ್ ಸೆಲ್ ಪ್ರಸ್ತುತ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದೆ. ಏತನ್ಮಧ್ಯೆ, ಅಯೋಧ್ಯೆಯ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಅಯೋಧ್ಯೆ ಹಾಗೂ ಬಾರಾಬಂಕಿ ಮತ್ತು ಉತ್ತರ ಪ್ರದೇಶದ ಇತರ ನೆರೆಯ ಜಿಲ್ಲೆಗಳಲ್ಲಿ ಜಾಗರೂಕತೆಯನ್ನು ಹೆಚ್ಚಿಸಲಾಗಿದೆ. ರಾಮ ಜನ್ಮಭೂಮಿ ಟ್ರಸ್ಟ್ ಕಚೇರಿಯ ಲೆಕ್ಕಪತ್ರ ಅಧಿಕಾರಿ ಮಹೇಶ್ ಕುಮಾರ್ ಪ್ರಕರಣ ದಾಖಲಿಸಿದ್ದಾರೆ. https://kannadanewsnow.com/kannada/first-of-its-kind-in-the-state-a-massive-metal-copy-of-the-preamble-of-the-constitution-weighing-1-5-tonnes-in-dharwad/ https://kannadanewsnow.com/kannada/indias-retail-inflation-eased-to-3-34-per-cent-in-march-from-3-61-per-cent-in-february/
ಧಾರವಾಡ : ಭಾರತದ ಸಂವಿಧಾನ ರಚಿಸಿರುವ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ ಅವರ 134 ನೇ ಜಯಂತಿ ಅಂಗವಾಗಿ ಧಾರವಾಡ ಜಿಲ್ಲಾಡಳಿತ ಮತ್ತು ಮಹಾನಗರಪಾಲಿಕೆ ಸಹಯೋಗದಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಭಾರತ ಸಂವಿಧಾನದ ಪೀಠಿಕೆಯ ಬೃಹತ್ ಲೋಹದ ಪ್ರತಿಯನ್ನು ಸಂವಿಧಾನ ಪುಸ್ತಕ ರೀತಿಯಲ್ಲಿ ನಿರ್ಮಿಸಿ, ನಗರದ ಪ್ರಸಿದ್ದ ರಾಣಿ ಕಿತ್ತೂರು ಚನ್ನಮ್ಮ ಉದ್ಯಾನವನದಲ್ಲಿ ಇಂದು ಬೆಳಿಗ್ಗೆ ಸಚಿವ ಸಂತೋಷ ಲಾಡ್ ಅವರಿಂದ ಲೋಕಾರ್ಪಣೆ ಮಾಡಲಾಯಿತು. ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಲೋಹದಲ್ಲಿ ರಚಿತ ಪೀಠಿಕೆಯನ್ನು ಲೋಕಾರ್ಪಣೆ ಮಾಡಿ, ಗೌರವ ಸಲ್ಲಿಸಿ, ಸಂತಸ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಮಹಾನಗರಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ ಅವರು ಲೋಹದಿಂದ ರಚಿತ ಸಂವಿಧಾನ ಪೀಠಿಕೆಯ ವಿಶೇಷತೆಗಳನ್ನು ಹಾಗೂ ಅನುಕೂಲತೆಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಮಹಾಪೌರರಾದ ರಾಮಣ್ಣ ಬಡಿಗೇರ, ಉಪಮಹಾಪೌರರಾದ ದುರ್ಗಮ್ಮ ಬಿಜವಾಡ, ಜಿಲ್ಲಾ ಪೊಲೀಸ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ.,…
ನವದೆಹಲಿ: ಏಪ್ರಿಲ್ 11 ರಂದು ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ, ಆಹಾರ ಹಣದುಬ್ಬರವು ನಿಯಂತ್ರಣದಲ್ಲಿದ್ದರಿಂದ ಮಾರ್ಚ್ನಲ್ಲಿ ಭಾರತದ ಹಣದುಬ್ಬರವು 67 ತಿಂಗಳ ಕನಿಷ್ಠ ಮಟ್ಟವಾದ 3.34 ಪ್ರತಿಶತಕ್ಕೆ ಇಳಿದಿದೆ. ಫೆಬ್ರವರಿಯಲ್ಲಿ ಇದು 3.61 ಪ್ರತಿಶತವಾಗಿತ್ತು. ಚಿಲ್ಲರೆ ಹಣದುಬ್ಬರವು ಆರ್ಬಿಐನ ಗುರಿ ದರವಾದ 4 ಪ್ರತಿಶತಕ್ಕಿಂತ ಕಡಿಮೆ ಉಳಿದಿರುವುದು ಮಾರ್ಚ್ನಲ್ಲಿ ಸತತ ಎರಡನೇ ತಿಂಗಳು. ಆಹಾರ ಹಣದುಬ್ಬರವು ಫೆಬ್ರವರಿಯಲ್ಲಿ 3.75 ಪ್ರತಿಶತಕ್ಕೆ ಹೋಲಿಸಿದರೆ ಮಾರ್ಚ್ನಲ್ಲಿ 2.69 ಪ್ರತಿಶತಕ್ಕೆ ಇಳಿದಿದೆ. ಆರ್ಥಿಕ ವರ್ಷವು 24 ನೇ ಹಣಕಾಸು ವರ್ಷದಲ್ಲಿ 5.4 ಪ್ರತಿಶತಕ್ಕೆ ಹೋಲಿಸಿದರೆ 25 ನೇ ಹಣಕಾಸು ವರ್ಷದಲ್ಲಿ 4.6 ಪ್ರತಿಶತದಷ್ಟು ಹಣದುಬ್ಬರದೊಂದಿಗೆ ಕೊನೆಗೊಂಡಿತು. ಭಾರತೀಯ ರಿಸರ್ವ್ ಬ್ಯಾಂಕ್ ಮುಂಬರುವ ವರ್ಷದಲ್ಲಿ ಹಣದುಬ್ಬರವು 4 ಪ್ರತಿಶತಕ್ಕೆ ಇಳಿಯುವ ನಿರೀಕ್ಷೆಯಿದೆ. ತನ್ನ ಇತ್ತೀಚಿನ ಸಭೆಯಲ್ಲಿ, ಕೇಂದ್ರ ಬ್ಯಾಂಕಿನ ಹಣಕಾಸು ನೀತಿ ಸಮಿತಿಯು ಹಣದುಬ್ಬರ ಮುನ್ಸೂಚನೆಯನ್ನು ಈ ಹಿಂದೆ ನಿರೀಕ್ಷಿಸಿದ್ದ 4.2 ಪ್ರತಿಶತದಿಂದ 4 ಪ್ರತಿಶತಕ್ಕೆ ಇಳಿಸಿದೆ. ಕೇಂದ್ರ ಬ್ಯಾಂಕ್ ತನ್ನ ತ್ರೈಮಾಸಿಕದ ಮೊದಲ ಭಾಗದ ಮುನ್ಸೂಚನೆಯನ್ನು 4.5 ಪ್ರತಿಶತದಿಂದ…
ನವದೆಹಲಿ: ಈ ವರ್ಷ ಭಾರತದಲ್ಲಿ ಸರಾಸರಿಗಿಂತ ಶೇ.105 ರಷ್ಟು ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಂಗಳವಾರ ಭವಿಷ್ಯ ನುಡಿದಿದೆ. ಭಾರತೀಯ ಉಪಖಂಡದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಎಲ್ ನಿನೊ ಪರಿಸ್ಥಿತಿಗಳು ಈ ಮಾನ್ಸೂನ್ನಲ್ಲಿ ಅಭಿವೃದ್ಧಿ ಹೊಂದುವ ಸಾಧ್ಯತೆಯಿಲ್ಲ ಎಂದು ಐಎಂಡಿ ಹೇಳಿದೆ. ಆದ್ದರಿಂದ, ಈ ಋತುವಿನಲ್ಲಿ ಹವಾಮಾನವು ಸರಾಸರಿಗಿಂತ ಹೆಚ್ಚಿನ ಮಳೆಗೆ ಅನುಕೂಲಕರವಾಗಿರುತ್ತದೆ. ಮಾನ್ಸೂನ್ ಆಗಮನಕ್ಕೆ ಇನ್ನೂ ಎರಡು ತಿಂಗಳ ಸಮಯವಿದ್ದರೂ, ದಕ್ಷಿಣದ ಅನೇಕ ಪ್ರದೇಶಗಳು ಈಗಾಗಲೇ ಪೂರ್ವ ಮಾನ್ಸೂನ್ ಮಳೆಯನ್ನು ಪಡೆಯಲು ಪ್ರಾರಂಭಿಸಿವೆ. ಉತ್ತರದಲ್ಲಿ, ದೆಹಲಿ-ಎನ್ಸಿಆರ್, ಹರಿಯಾಣ, ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಅನೇಕ ರಾಜ್ಯಗಳು ಕಳೆದ ವಾರ ಸತತ ಎರಡು ದಿನಗಳ ಕಾಲ ಪ್ರತ್ಯೇಕ ಸ್ಥಳಗಳಲ್ಲಿ ಮಳೆಯೊಂದಿಗೆ ಬಲವಾದ ಧೂಳಿನ ಬಿರುಗಾಳಿಯನ್ನು ಕಂಡವು. ಶುಕ್ರವಾರ ದೆಹಲಿ-ಎನ್ಸಿಆರ್ನಲ್ಲಿ ಪ್ರಮುಖ ಧೂಳಿನ ಬಿರುಗಾಳಿ ಬೀಸಿತು. ಅದು ಗಂಟೆಗಳ ಕಾಲ ಮುಂದುವರೆಯಿತು ಮತ್ತು ನಂತರ ಮಳೆಯಾಯಿತು. ಏಪ್ರಿಲ್ನಲ್ಲಿ ಈ ಆರಂಭಿಕ ಸಮಯಕ್ಕೆ ಹೋಲಿಸಿದರೆ ಇದು ಸರಾಸರಿ ತಾಪಮಾನಕ್ಕಿಂತ ಹೆಚ್ಚಿನ…
ನವದೆಹಲಿ: ಭಾರತ ಹವಾಮಾನ ಇಲಾಖೆ (India Meteorological Department -IMD) 2025 ರಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಾನ್ಸೂನ್ ಮಳೆಯಾಗಲಿದೆ ( monsoon 2025 ) ಅಂತ ಮುನ್ಸೂಚನೆ ನೀಡಿದೆ. ದೇಶಾದ್ಯಂತ ಮಾನ್ಸೂನ್ ಮಳೆ (ಜೂನ್-ಸೆಪ್ಟೆಂಬರ್) ದೀರ್ಘಾವಧಿಯ ಸರಾಸರಿಯ (ಎಲ್ಪಿಎ) 105% ಆಗುವ ಸಾಧ್ಯತೆಯಿದೆ. ಇದು 87 ಸೆಂ.ಮೀ, +/-5% ಮಾದರಿ ದೋಷದೊಂದಿಗೆ, +/-5% ಮಾದರಿ ದೋಷವಿದೆ ಎಂದು ಹವಾಮಾನ ಇಲಾಖೆ ನೈಋತ್ಯ ಮಾನ್ಸೂನ್ಗಾಗಿ ತನ್ನ ಮೊದಲ ಅಂದಾಜಿನಲ್ಲಿ ತಿಳಿಸಿದೆ. ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯದಿಂದ ಸಾಮಾನ್ಯಕ್ಕಿಂತ ಹೆಚ್ಚಿನ ಮಾನ್ಸೂನ್ ಮಳೆಯಾಗುತ್ತದೆ ಎಂದು ಐಎಂಡಿ ಹೇಳಿದೆ. ಇದು ದೀರ್ಘಾವಧಿಯ ಸರಾಸರಿಯ 96-105% ವ್ಯಾಪ್ತಿಯಲ್ಲಿ ಬರುತ್ತದೆ. ಮಾನ್ಸೂನ್ ಋತುವಿನಲ್ಲಿ ತಟಸ್ಥ ಎಲ್ ನಿನೊ-ಸದರ್ನ್ ಆಸಿಲೇಶನ್ (ಇಎನ್ಎಸ್ಒ) ಪರಿಸ್ಥಿತಿಗಳು ಮುಂದುವರಿಯುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ಸೂಚಿಸುತ್ತದೆ ಎಂದು ಐಎಂಡಿ ಡಿಜಿಎಂ ಎಂ ಎಂ ಮೊಹಾಪಾತ್ರ ಹೇಳಿದ್ದಾರೆ. ಒಟ್ಟಾರೆಯಾಗಿ ಭಾರತದಲ್ಲಿ ಈ ವರ್ಷ ಸರಾಸರಿಗಿಂತ ಹೆಚ್ಚಿನ ಮುಂಗಾರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಂಗಳವಾರ ಮುನ್ಸೂಚನೆ ನೀಡಿದೆ.…
ಬೆಂಗಳೂರು: ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಲಾರಿ ಮಾಲೀಕರು ರಾಜ್ಯದಲ್ಲಿ ಮುಷ್ಕರ ನಡೆಸುತ್ತಿದ್ದಾರೆ. ಬೇಡಿಕೆ ಈಡೇರಿಕೆ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನಡೆದಂತ ಸಭೆಯು ವಿಫಲವಾಗಿದೆ. ಇಂದು ಲಾರಿ ಮಾಲೀಕರ ಸಂಘದೊಂದಿಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಲಾರಿ ಮಾಲೀಕರ ಬೇಡಿಕೆ ಈಡೇರಿಸೋ ಸಂಬಂಧ ಸರ್ಕಾರದಿಂದ ಸರಿಯಾದ ನಿರ್ಧಾರ ವ್ಯಕ್ತವಾಗಿಲ್ಲ ಎನ್ನಲಾಗುತ್ತಿದೆ. ಬೆಂಗಳೂರಿನ ಶಾಂತಿನಗರದಲ್ಲಿರುವಂತ ಕೆ ಎಸ್ ಆರ್ ಟಿ ಸಿ ಕಚೇರಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನಡೆದಂತ ಸಭೆಯು ವಿಫಲವಾಗಿದೆ. ಹೀಗಾಗಿ ಎರಡನೇ ಸುತ್ತಿನ ಸಭೆಯನ್ನು ಸಂಜೆ 5.30ರ ವೇಳೆಗೆ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಸಭೆಯ ಬಳಿಕ ಲಾರಿ ಮಾಲೀಕರ ಮುಷ್ಕರ ಅಂತ್ಯವೋ, ಮುಂದುವರಿಕೆಯೋ ಎನ್ನುವುದು ನಿರ್ಧಾರವಾಗಲಿದೆ. https://kannadanewsnow.com/kannada/temporary-relief-to-cm-siddaramaiah-in-muda-case-court-says-no-order-on-b-report-as-of-now/ https://kannadanewsnow.com/kannada/davanagere-stone-inscription-of-badami-chalukya-period-found-in-lake/
ದಾವಣಗೆರೆ: ಜಿಲ್ಲೆ ನ್ಯಾಮತಿ ತಾಲ್ಲೂಕಿನ ಮಾದಾಪುರ ಗ್ರಾಮದ ಕೆರೆಯಲ್ಲಿ ಸ್ಥಳೀಯರು ಜೆಸಿಬಿ ಯಂತ್ರದ ಮೂಲಕ ಮಣ್ಣನ್ನು ತೆಗೆಯುವಾಗ ಶಾಸನ ಕಂಡು ಬಂದಿತ್ತು. ಈ ಸ್ಥಳಕ್ಕೆ ಭೇಟಿ ಕೊಟ್ಟು ಕ್ಷೇತ್ರ ಕಾರ್ಯ ಕೈಗೊಂಡ ಪುರಾತತ್ವ ಇಲಾಖೆಯು ಇದು ಬಾದಾಮಿ ಚಲುಕ್ಯರ ಶಿಲಾ ಶಾಸನ ಎಂದು ತಿಳಿಸಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಕಮಲಾಪುರ ಹಂಪಿ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ನಿರ್ದೇಶಕ ಡಾ.ಆರ್ ಶೇಜೇಶ್ವರ ಅವರು, ಮಾದಾಪುರ ಗ್ರಾಮದ ಕೆರೆಯಲ್ಲಿ ಪತ್ತೆಯಾಗಿರುವಂತ ಶಿಲಾ ಶಾಸನವು, ಐದು ಆಡಿ ಉದ್ದವಿದ್ದು ಹಳೆಗನ್ನಡದ 17 ಸಾಲು ಶಾಸನವನ್ನು ಒಳಗೊಂಡಿದೆ. ಇದು ಕ್ರಿಶ. 7ನೇ ಶತಮಾನದ ಬಾದಾಮಿ ಚಲುಕ್ಯರ ಒಂದನೇ ವಿಕ್ರಮಾದಿತ್ಯನ (ಕ್ರಿ.ಶ.654-681) ಕಾಲದ ಶಾಸನವಾಗಿದೆ ಎಂದಿದ್ದಾರೆ. ಒಂದನೇ ವಿಕ್ರಮಾದಿತ್ಯನು ರಾಜ್ಯವಾಳುತ್ತಿದ್ದಾಗ ಅವನ ಅಧಿಕಾರಿ ಸಿಂಘವೆಣ್ಣನು ಬಳ್ಳಾವಿ ನಾಡನ್ನು ಆಳುತ್ತಿದ್ದಾಗ ಪೂರ್ವ ಮರ್ಯಾದೆಯಿಂದ ಪ್ರಜೆಗಳಿಗಾಗಿ ಊರ ಮೇಲಿನ ಕೆಲವು ತೆರಿಗೆಗಳನ್ನು ಮನ್ನಾ ಮಾಡಿರುವುದನ್ನು ಶಿಲಾ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಕೆರೆಯನ್ನು ನಿರ್ಮಿಸಿದ ಓಜರಿಗೆ ಆರು ಮತ್ತರು ಭೂಮಿಯನ್ನು ದಾನ ನೀಡಿರುವುದನ್ನು…
ಬೆಂಗಳೂರು: ಬಿಜೆಪಿ, ಆರ್ ಎಸ್ ಎಸ್ ಅಂಬೇಡ್ಕರ್ ಶತ್ರುಗಳು ಎಂಬುದಾಗಿ ಹೇಳಿದ್ದಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಮಾಜಿ ಸಚಿವ ಎಸ್ ಸುರೇಶ್ ಕುಮಾರ್ ಬೇಸರ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ನೀವೊಬ್ಬ ಗೊಬೆಲ್ಸ್ ಆಗಬೇಡಿ ಅಂತ ಕಿವಿಮಾತು ಹೇಳಿದ್ದಾರೆ. ಈ ಬಗ್ಗೆ ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ಪೋಸ್ಟ್ ಮಾಡಿರುವಂತ ಅವರು.. “ಬಿಜೆಪಿ, ಆರ್ ಎಸ್ ಎಸ್ ಅಂಬೇಡ್ಕರ್ ಶತ್ರುಗಳು” ಎಂಬುದಾಗಿ ಕಾಂಗ್ರೆಸ್ ಪಕ್ಷದ ಘನತೆವೆತ್ತ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಯಾವುದೇ ಆಧಾರವಿಲ್ಲದ ದಿವ್ಯ ತೀರ್ಪು ನೀಡಿದ್ದಾರೆ. ಖರ್ಗೆ ಅವರಿಗೆ 5 ಪ್ರಶ್ನೆ ಗಳು. 1 *ಬಾಬಾ ಸಾಹೇಬ್ ಅಂಬೇಡ್ಕರ್ ರಿಗೆ ಅವರು ಬದುಕಿದ್ದಾಗ ಮತ್ತು ಅವರು ತೀರಿ ಹೋದ ನಂತರ ತೀವ್ರ ಅವಮಾನ ಮಾಡಿದ ಕೀರ್ತಿ ಯಾರಿಗೆ ಸಲ್ಲಬೇಕು? 2 * ಬಾಬಾಸಾಹೇಬ ಅಂಬೇಡ್ಕರ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಅವರನ್ನು ಸೋಲಿಸಲೇಬೇಕೆಂದು ಎಲ್ಲಾ ತಂತ್ರ ಉಪಯೋಗಿಸಿ ಶತಾಯಗತಾಯ ಪ್ರಯತ್ನಿಸಿ ಯಶಸ್ವಿಯಾಗಿದ್ದು ಯಾವ ರಾಜಕೀಯ ಪಕ್ಷ? 3…
ಬೆಂಗಳೂರು: ಮುಡಾ ಹಗರಣ ಸಂಬಂಧ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದಂತ ಬಿ-ರಿಪೋರ್ಟ್ ಪ್ರಶ್ನಿಸಿದಂತ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ವಾದ-ಪ್ರತಿವಾದ ಆಲಿಸಿದಂತ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು ಲೋಕಾಯುಕ್ತದಿಂದ ಸಲ್ಲಿಸಿರುವಂತ ಬಿ-ರಿಪೋರ್ಟ್ ಬಗ್ಗೆ ಆದೇಶವನ್ನು ಸದ್ಯಕ್ಕೆ ನೀಡುವುದಿಲ್ಲ. ತನಿಖೆ ಮುಂದುವರೆಯಲಿ ಎಂಬುದಾಗಿ ಆದೇಶದಲ್ಲಿ ತಿಳಿಸಿದ್ದಾರೆ. ಈ ಮೂಲಕ ಸಿಎಂ ಸಿದ್ಧರಾಮಯ್ಯಗೆ ಮುಡಾ ಕೇಸಲ್ಲಿ ತಾತ್ಕಾಲಿಕ ರಿಲೀಫ್ ನೀಡಿದ್ದಾರೆ. ಮುಡಾ ಹಗರಣ ಸಂಬಂಧ ಲೋಕಾಯುಕ್ತದಿಂದ ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಲಾಗಿತ್ತು. ಲೋಕಾಯುಕ್ತದ ಬಿ-ರಿಪೋರ್ಟ್ ವಿರುದ್ಧ ದೂರುದಾರ ಸ್ನೇಹಮಯಿ ಕೃಷ್ಣ ಅವರು ತಕರಾರು ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಸಲಾಯಿತು. ತನ್ನ ಅರ್ಜಿಯ ಪರವಾಗಿ ದೂರುದಾರ ಸ್ನೇಹಮಯಿ ಕೃಷ್ಣ ಅವರು ತಾನೇ ವಾದಿಸಿದ್ದರು. ವಾದ-ಪ್ರತಿವಾದವನ್ನು ಆಲಿಸಿದಂತ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು, ಲೋಕಾಯುಕ್ತ ಪೊಲೀಸರ ಬಿ ರಿಪೋರ್ಟ್ ಬಗ್ಗೆ ಆದೇಶ ಸದ್ಯಕ್ಕೆ ಇಲ್ಲ. ತನಿಖೆ ಮುಂದುವರೆಸುವಂತೆ ಸೂಚಿಸಿ ಆದೇಶಿಸಿದ್ದಾರೆ.…
ಬೀದರ್: ಜಿಲ್ಲೆಯಲ್ಲಿ ನ್ಯಾಯಾಧೀಶರೊಬ್ಬರ ಮನೆಗೆ ಕನ್ನ ಹಾಕಿ 8 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಂತ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್.3ರಂದು ಬೀದರ್ ನಗರದ ಜನವಾಡ ರಸ್ತೆಯಲ್ಲಿನ 2ನೇ ಜೆಎಂಎಫ್ ಸಿ ನ್ಯಾಯಾಧೀಶರಾದಂತ ಎಂ.ಡಿ ಶೇಜ್ ಚೌಟಾಯಿ ಅವರಿದ್ದಂತ ವಸತಿ ಗೃಹದಲ್ಲಿ ಕಳ್ಳತನವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿದ್ದಂತ ಬೀದರ್ ನ ನ್ಯೂ ಟೌನ್ ಠಾಣೆಯ ಪೊಲೀಸರು ತನಿಖೆಗೆ ಇಳಿದಿದ್ದರು. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದಂತ ಪೊಲೀಸರು, ಸಿಸಿಟಿವಿಯಲ್ಲಿ ದಾಖಲಾಗಿದ್ದಂತ ದೃಶ್ಯಾವಳಿ ಆಧರಿಸಿ ಬಂಧನಕ್ಕೆ ಬಲೆ ಬೀಸಿದ್ದರು. ಮಹಾರಾಷ್ಟ್ರದಿಂದ ರೈಲಿನಲ್ಲಿ ಬೀದರ್ ಗೆ ಬಂದು ನ್ಯಾಯಾಧೀಶರ ಮನೆಯಲ್ಲಿ ಕಳ್ಳತನ ಮಾಡಿದ್ದಂತ ಆರೋಪಿಯನ್ನು ಕೊನೆಗೂ ಬಂಧಿಸಿದ್ದಾರೆ. ಬೀದರ್ ನ್ಯೂ ಠಾಣೆಯ ಪೊಲೀಸರು ಮಹಾರಾಷ್ಟ್ರದ ಲಾತೂರು ರೈಲ್ವೆ ನಿಲ್ದಾಣದಲ್ಲಿ ಕಳ್ಳತನ ಮಾಡಿದ್ದ ತಂದೆ, ಮಗ ಸೇರಿದಂತೆ ಮೂವರು ಖದೀಮರನ್ನು ಬಂಧಿಸಿದ್ದಾರೆ. https://kannadanewsnow.com/kannada/veteran-journalist-sk-shyamsundar-passes-away-karnataka-working-journalists-association-condoles-condolences/ https://kannadanewsnow.com/kannada/is-this-a-caste-census-hate-speech-hd-kumaraswamys-question/














