Author: kannadanewsnow09

ಧನುಸ್ಸು ರಾಶಿಯವರಿಗೆ ಈ ಒಂದು ತಾಂತ್ರಿಕ ಅನುಷ್ಠಾನ ಮಾಡಿ ನೋಡಿ ಜೀವನ ಅದೃಷ್ಟದ ರೀತಿಯಲ್ಲಿ ಬದಲಾವಣೆಯಾಗುತ್ತದೆ.. ಮೂಲ ನಕ್ಷತ್ರದವರಿಗೆ ಯೆ,ಯೊ,ಬ,ಬಿ ಇವರಿಗೆ ನೀಮ್ಮಗೆ ಎಷ್ಟೇ ಸಮಸ್ಯೆಗಳು ಇದರು ಬಗ್ಗೆ ಆರಿಯುತ್ತದೆ. ಇದು ಹರಿ ವಾಕ್ ಸತ್ಯ ನೀವು ತಾಮ್ರದ ರ್ಸಪಗಳನು ತೆಗೆದುಕೊಂಡು ಪ್ರತಿ ಮಂಗಳವಾರ ಒಂದು ಶುಕ್ರವಾರ ಒಂದು ಹೀಗೆ 5 ಮಂಗಳವಾರ 5 ಶುಕ್ರವಾರ ಒಂದು ಕೆಂಪು ವಸ್ತ್ರದಲ್ಲಿ ಪೂಜೆ ಮಾಡಿ ಗಂಟು ಕಟ್ಟಿ ಇಡಿ5 ಮಂಗಳವಾರ 5 ಶುಕ್ರವಾರವಾದ ಮೇಲೆ ಯಾವುದಾದರೂ ಪುಣೆಯ ಕ್ಷೇತ್ರ ಶಿವನ ದೇವಾಲಯವೆ ಆಗಬೇಕು ಅಲ್ಲಿ ಹುಂಡಿಗೆ ಹಾಕಿ ಇಲ್ಲವೆಂದರೆ ಎಲ್ಲಾದರೂ ಹೋಮ ಮಾಡುತ್ತಿದರೆ ಹೋಮಕ್ಕೆ ಹಾಕಿ ಮನೆಗೆ ಬಂದು ಬಿಡಿ ನಂತರ ನೋಡಿ ಬದಲಾವಣೆ ನಂತರ ನನಗೆ ತಿಳಿಸಿ. ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ…

Read More

ನವದೆಹಲಿ: ಏಪ್ರಿಲ್ 12 ರ UPI ಸ್ಥಗಿತ ವರದಿಗೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮದ ಮೂಲ ಕಾರಣ ವಿಶ್ಲೇಷಣೆಯು ವ್ಯಾಪಾರಿಗಳು ಮತ್ತು ಬ್ಯಾಂಕುಗಳಿಂದ ವಹಿವಾಟು ಯಶಸ್ಸಿನ ವಿನಂತಿಗಳ ಭಾರೀ ಹೊರೆಯು ಅನುಮತಿಸಲಾದಕ್ಕಿಂತ ಹೆಚ್ಚಿನ ಹೊರೆ ವ್ಯವಸ್ಥೆಯನ್ನು ಹೊಡೆದಿದೆ ಎಂದು ಹೇಳಿದೆ. ಇದರಿಂದಾಗಿ ವೇದಿಕೆಯು ಸ್ಥಗಿತಗೊಳ್ಳಬೇಕಾಯಿತು. NPCI ಯುಪಿಐ ಘಟಕದ ಪಾಲುದಾರರಿಗೆ ಕಳುಹಿಸಿರುವ ವರದಿಯನ್ನು ಮನಿ ಕಂಟ್ರೋಲ್ ಪ್ರವೇಶಿಸಿದೆ. ದೇಶದ ಅತ್ಯಂತ ಜನಪ್ರಿಯ ಡಿಜಿಟಲ್ ಪಾವತಿ ವ್ಯವಸ್ಥೆಯಾದ UPI ಅನ್ನು NPCI ನಡೆಸುತ್ತದೆ. ಈ ಸಮಸ್ಯೆಯು ‘ಚೆಕ್ ವಹಿವಾಟು’ AΡΙ ನ ಪ್ರವಾಹದಿಂದ ಉಂಟಾಗಿದೆ ಎಂದು ಗುರುತಿಸಲಾಗಿದೆ. ಇದಲ್ಲದೆ, ಕೆಲವು PSP ಬ್ಯಾಂಕ್‌ಗಳು ಹಳೆಯ ವಹಿವಾಟುಗಳಿಗೂ ಸಹ ‘ಚೆಕ್ ವಹಿವಾಟು’ಗಳಿಗೆ ವಿನಂತಿಗಳನ್ನು ಹಲವು ಬಾರಿ ಕಳುಹಿಸುತ್ತಿವೆ ಎಂದು ಗಮನಿಸಲಾಗಿದೆ ಎಂದು NPCI ವರದಿ ತಿಳಿಸಿದೆ. ಕಳೆದ ಮೂರು ವಾರಗಳಲ್ಲಿ UPI ನಾಲ್ಕು ಸ್ಥಗಿತಗಳನ್ನು ಎದುರಿಸಿತು. ಇದು ಲಕ್ಷಾಂತರ ಜನರಿಗೆ ದೊಡ್ಡ ಅನಾನುಕೂಲತೆಯನ್ನುಂಟುಮಾಡಿತು. ಗ್ರಾಹಕರ ಫಲಾನುಭವಿ ಬ್ಯಾಂಕಿನಿಂದ ಪ್ರತಿಕ್ರಿಯೆ ಸಿಗದಿದ್ದಾಗ ಬ್ಯಾಂಕುಗಳು ವಹಿವಾಟು ಯಶಸ್ವಿಯಾಗಿದೆಯೇ…

Read More

ಬೆಂಗಳೂರು: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಜೊತೆಗಿನ ಲಾರಿ ಮಾಲೀಕರ ಸಂಘದ ಜೊತೆಗಿನ ಸಭೆ ವಿಫಲವಾಗಿತ್ತು. ಆ ಬಳಿಕ ಎರಡನೇ ಸುತ್ತಿನಲ್ಲಿ ಸಿಎಂ ಸಿದ್ಧರಾಮಯ್ಯ ಜೊತೆಗೆ ಸಭೆ ನಡೆಸಲಾಗಿತ್ತು. ಆದರೇ ಸಿಎಂ ಸಿದ್ಧರಾಮಯ್ಯ ಜೊತೆಗಿನ ಎರಡನೇ ಸಂಧಾನ ಸಭೆಯೂ ವಿಫಲವಾಗಿದ್ದು, ರಾಜ್ಯದಲ್ಲಿ ಲಾರಿ ಮುಷ್ಕರ ಮುಂದುವರೆಯಲಿದೆ. ಮುಖ್ಯಮಂತ್ರಿ ಅವರು ಇಂದು ಕಾವೇರಿಯಲ್ಲಿ ಮುಷ್ಕರ ನಿರತ ಲಾರಿ ಮಾಲಿಕರ ಸಂಘದ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯ ಮುಖ್ಯಾಂಶಗಳು: • ಈ ಬಾರಿ ಬಜೆಟ್ನಲ್ಲಿ ಡಿಸೇಲ್ ಮೇಲಿನ ಸುಂಕ ರೂ.2 ಹೆಚ್ಚಳ ಮಾಡಲಾಗಿದೆ. ಆದರೆ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಡಿಸೇಲ್ ದರ ನಮ್ಮ ರಾಜ್ಯದಲ್ಲಿ ಕಡಿಮೆಯಿದೆ. ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಮುಷ್ಕರವನ್ನು ಕೈಬಿಡುವಂತೆ ಮುಖ್ಯಮಂತ್ರಿ ಅವರು ಮನವಿ ಮಾಡಿದರು. • ಲಾರಿ ಮಾಲಿಕರ ಸಂಘದ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಸರ್ಕಾರ ಬಡವರ ಪರವಾಗಿದ್ದು ಸರ್ಕಾರದೊಂದಿಗೆ ಲಾರಿ ಮಾಲಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು. • ರಸ್ತೆಗಳ ಸುಧಾರಣೆಗೆ ರಾಜ್ಯ ಸರ್ಕಾರ ಪ್ರತಿ ವರ್ಷ ಸುಮಾರು 14…

Read More

ನವದೆಹಲಿ: ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಅವರನ್ನು ಮಂಗಳವಾರ ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಶನ್‌ನ ಅಥ್ಲೀಟ್‌ಗಳ ಆಯೋಗದ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿದೆ. 49 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಚಾನು, ಈ ಬೆಳವಣಿಗೆಯನ್ನು ಸಹ ವೇಟ್‌ಲಿಫ್ಟರ್‌ಗಳ ಧ್ವನಿಯನ್ನು ಎತ್ತಿಹಿಡಿಯುವ ಅವಕಾಶ ಎಂದು ವ್ಯಾಖ್ಯಾನಿಸಿದ್ದಾರೆ. ಫೆಡರೇಶನ್ನ ಅಥ್ಲೀಟ್ಗಳ ಆಯೋಗದ ಅಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಿದ ಭಾರತೀಯ ವೇಟ್ಲಿಫ್ಟಿಂಗ್ ಫೆಡರೇಶನ್ಗೆ ನನ್ನ ಅಪಾರ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಸಹ ವೇಟ್ ಲಿಫ್ಟರ್ ಗಳ ಧ್ವನಿಯನ್ನು ಪ್ರತಿನಿಧಿಸುವ ಮತ್ತು ಎತ್ತಿಹಿಡಿಯುವ ಅವಕಾಶವು ನನಗೆ ಬಹಳ ಹೆಮ್ಮೆಯ ವಿಷಯವಾಗಿದೆ ಎಂದು ಟೋಕಿಯೊ ಪದಕ ವಿಜೇತೆ ಮೀರಾಬಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನನ್ನ ಪಾತ್ರದೊಂದಿಗೆ ಬರುವ ಜವಾಬ್ದಾರಿಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡುತ್ತೇನೆ. ಬಾಹ್ಯ ಅಂಶಗಳಿಂದ ವಿಚಲಿತರಾಗದೆ ನಾವು ಕ್ರೀಡೆಯತ್ತ ಗಮನ ಹರಿಸುವುದನ್ನು ಮುಂದುವರಿಸಬಹುದು ಎಂದು ಖಚಿತಪಡಿಸಿಕೊಳ್ಳಲು ಕ್ರೀಡಾಪಟುಗಳ ಧ್ವನಿ ಮತ್ತು ದೃಷ್ಟಿಕೋನಗಳನ್ನು ಎಲ್ಲಾ ಪ್ರಮುಖ ಚಾನೆಲ್ಗಳಲ್ಲಿ ಹರಡುವ ನಿಟ್ಟಿನಲ್ಲಿ ನಾನು ಕೆಲಸ…

Read More

ಬೆಂಗಳೂರು: ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳೊಂದಿಗೆ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಇಂದು ಕಾವೇರಿಯಲ್ಲಿ ನಡೆದ ಸಭೆಯ ಮುಖ್ಯಾಂಶಗಳು: • ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಬೇಡಿಕೆ ಕುರಿತು ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಯಾವತ್ತೂ ದುಡಿಯುವ ವರ್ಗದ ಪರವಾಗಿದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು. • ಹಿಂದಿನ ಸರ್ಕಾರ ಸುಮಾರು 40 ಸಾವಿರ ಕೋಟಿ ರೂ. ಬಾಕಿ ಬಿಲ್ಲುಗಳನ್ನು ಉಳಿಸಿ ಹೋಗಿದೆ. ಇದು ಸರ್ಕಾರದ ಮೇಲೆ ಆರ್ಥಿಕ ಹೊರೆ ಉಂಟು ಮಾಡಿದೆ. ಸರ್ಕಾರದ ಇತಿಮಿತಿಯ ಒಳಗಾಗಿ ಬೇಡಿಕೆಗಳನ್ನು ಪರಿಶೀಲಿಸಲಾಗುವುದು. • ಸಾರಿಗೆ ನೌಕರರಿಗೆ ಸಮಾನ ವೇತನ ಜಾರಿ ಸೇರಿದಂತೆ ಎಲ್ಲಾ ಬೇಡಿಕೆಗಳ ಕುರಿತು ಪರಿಶೀಲನೆ ನಡೆಸಲಾಗುವುದು. ಬೇಡಿಕೆಗಳ ಈಡೇರಿಕೆ ಕುರಿತಾಗಿ ಇನ್ನೊಮ್ಮೆ ಕಾರ್ಮಿಕ ಸಂಘಟನೆಗಳೊಂದಿಗೆ ಸಭೆಯನ್ನು ಆದಷ್ಟು ಬೇಗನೆ ಕರೆಯಲಾಗುವುದು ಎಂದರು. • ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸಂಸ್ಥೆಗೆ ರೂ. 4ಸಾವಿರ ಕೋಟಿಯಷ್ಟು ಮೊತ್ತವನ್ನು ಹಿಂದಿನ…

Read More

ಬೆಂಗಳೂರು: ಬಿಜೆಪಿ ಯುವಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಚಾರ್ಜ್ಶೀಟ್ ಸಲ್ಲಿಸಿದೆ. ನಾಲ್ವರು ಆರೋಪಿಗಳಲ್ಲಿ ಮೂವರು ಪರಾರಿಯಾಗಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಎರಡನೇ ಪೂರಕ ಚಾರ್ಜ್ಶೀಟ್ನಲ್ಲಿ, ಎನ್ಐಎ ಅಬ್ದುಲ್ ನಾಸಿರ್, ನೌಶಾದ್, ಅಬ್ದುಲ್ ರಹಮಾನ್ ಮತ್ತು ಅತೀಕ್ ಅಹ್ಮದ್ ವಿರುದ್ಧ ಐಪಿಸಿ ಮತ್ತು ಯುಎಪಿಎಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಆರೋಪ ಹೊರಿಸಿದೆ. ಇಂದು ಆರೋಪಪಟ್ಟಿ ಸಲ್ಲಿಸಲಾದ ನಾಲ್ವರಲ್ಲಿ ಮೂವರು ತಲೆಮರೆಸಿಕೊಂಡಿರುವ ಆರೋಪಿಗಳಲ್ಲಿ ಸೇರಿದ್ದಾರೆ. ಅವರನ್ನು ಅಬ್ದುಲ್ ನಾಸಿರ್, ನೌಶಾದ್ ಮತ್ತು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ ಎಂದು NIA ತಿಳಿಸಿದೆ. NIA ಪ್ರಕಾರ, ಈ ಮೂವರು ಪ್ರಮುಖ ದಾಳಿಕೋರರಿಗೆ ಕರ್ನಾಟಕದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳು ಹಾಗೂ ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ “ಆಶ್ರಯ” ನೀಡಿದ್ದರು. ಅಬ್ದುಲ್ ನಾಸಿರ್ ಮತ್ತು ಅಬ್ದುಲ್ ರೆಹಮಾನ್ ಕೂಡ ಬೆಂಗಳೂರಿನಲ್ಲಿ ಆರೋಪಿ ತುಫೈಲ್‌ಗೆ “ಆಶ್ರಯ” ನೀಡಿದ್ದರು. “ಪ್ರವೀಣ್ ನೆಟ್ಟರ್ ಮೇಲೆ ಮಾರಣಾಂತಿಕ ದಾಳಿಯ ನಂತರ,…

Read More

ಬೆಂಗಳೂರು: ಕರ್ನಾಟಕದಲ್ಲಿ ಮುಸ್ಲಿಮರಿಗೆ ನೀಡಲಾಗಿರುವ ಮೀಸಲಾತಿ ಖಂಡಿತ ಧರ್ಮಾಧಾರಿತವಾದುದ್ದಲ್ಲ ಎನ್ನುವ ಸರಳವಾದ ಸತ್ಯವನ್ನು ನರೇಂದ್ರ ಮೋದಿ ಅವರು ಅರ್ಥಮಾಡಿಕೊಳ್ಳದೆ ಹೋಗಿರುವುದು ದುರಂತವೇ ಸರಿ. ಮುಸ್ಲಿಮರಿಗೆ ಅವರೊಳಗಿನ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿಯುವಿಕೆಯನ್ನು ಆಧಾರವಾಗಿಟ್ಟುಕೊಂಡು ಮೀಸಲಾತಿ ನೀಡಲಾಗಿದೆಯೇ ಹೊರತು ಅದು ಧರ್ಮಾಧರಿತವಾದುದ್ದಲ್ಲ. ಇದನ್ನು ನಾನು ಹಲವು ಬಾರಿ ವಿಧಾನಮಂಡಲದ ಒಳಗೆ ಮತ್ತು ಹೊರಗೆ ಹೇಳಿದ್ದೇನೆ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವಂತ ಅವರು, ‘’ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಬಾರದು’’ ಎಂದು ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ ಎನ್ನುವ ಹಸಿ ಹಸಿ ಸುಳ್ಳನ್ನು ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಹೇಳಿರುವುದು ಅತ್ಯಂತ ವಿಷಾದನೀಯವಾದುದು. ಮತೀಯ ದ್ವೇಷ ಹುಟ್ಟಿಸಬೇಕೆಂಬ ಏಕೈಕ ದುರುದ್ದೇಶದಿಂದ ಈ ರೀತಿಯ ಸುಳ್ಳುಗಳನ್ನು ಹೇಳುವ ಮಟ್ಟಕ್ಕೆ ದೇಶದ ಪ್ರಧಾನಿ ಇಳಿಯಬಾರದಿತ್ತು ಎಂಬುದಾಗಿ ತಿಳಿಸಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾಷಣ ಮತ್ತು ಬರವಣಿಗೆಗಳ ಹನ್ನೆರಡು ಸಂಪುಟಗಳನ್ನು ಮಹಾರಾಷ್ಟ್ರ ಸರ್ಕಾರ ವರ್ಷಗಳ ಹಿಂದೆಯೇ ಪ್ರಕಟಮಾಡಿದೆ. ಅವುಗಳ ಕನ್ನಡ…

Read More

ಪುಟಾಣಿ ಮಕ್ಕಳು ಇವತ್ತಿನ ದಿನಗಳಲ್ಲಿ ನಡೆದಾಡಲು ಕಷ್ಟಪಡುವ ಬೊಚ್ಚಿನಿಂದ ಬಳಲುತ್ತಿದ್ದಾರೆ. ಸಣ್ಣ ವಯಸ್ಸಿನ ಮಕ್ಕಳು ಹೃದಯಾಘಾದಿಂದ ಸಾವಿಗೀಡಾದ ಅನೇಕ ಘಟನೆಗಳು ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿವೆ. ಇದು ಮಕ್ಕಳ ಸ್ಥಿತಿಯಾದ್ರೆ, ಇನ್ನೂ ದೊಡ್ಡವರದ್ದು ದೊಡ್ಡ ಕಥೆಯೇ ಇದೆ. ಮಧ್ಯ ವಯಸ್ಸಿನಲ್ಲಿ ಹೃದಯಾಘಾತ, ಸ್ಟ್ರೋಕ್‌ ನಂತಹ ಗಂಭೀರ ಅನಾರೋಗ್ಯ ಸಮಸ್ಯೆಗಳಿಗೆ ಒಳಗಾಗಿ ಅರ್ಧಕ್ಕೆ ಜೀವನ ಪಯಣ ಮುಗಿಸುತ್ತಿದ್ದಾರೆ. ಏನಿದರ ಇಂದಿನ ಸತ್ಯಗಳು. ಇದಕ್ಕೆ ಯಾರ ಹೊಣೆ ? ನಾವೇ ಮಾಡಿಕೊಂಡ ಸ್ವಯಂ ಕೃತ ಅಪರಾಧಗಳು. ಹೌದು. ಇವತ್ತಿನ ದಿನಗಳಲ್ಲಿ ಎಲ್ಲದಕ್ಕೂ ಬೇರೆಯದ್ದನ್ನೇ ಅವಲಂಬಿಸಿದ್ದೇವೆ. ಓಡಾಡಲಿಕ್ಕೆ ಬೈಕ್‌ ಕಾರು. ತಿನ್ನಲಿಕ್ಕೆ ಹೋಟೆಲ್‌ಗಳು. ಅದರಲ್ಲೂ ಬಾಯಿ ರುಚಿ ತೀರಿಸುವ ಬೇಕರಿ ತಿಂಡಿಗಳಿಗೆ ಮೊದಲ ಆದ್ಯತೆ. ಇವನ್ನು ನೋಡುತ್ತಿದ್ದರೆ ಆರೋಗ್ಯವಂತ ಬದುಕು ಬಿಟ್ಟು ಅನಾರೋಗ್ಯ ಜೀವನದತ್ತ ವಾಲುತ್ತಿದ್ದೇವೆ ಎನ್ನುವ ಆತಂಕ. ಈ ಪೀಠಿಕೆ ಹಿಂದಿನ ಸತ್ಯ ಇಷ್ಟೇ. ಪ್ಯಾಕಿಂಗ್‌ ತಿಂಡಿ ಹಾಗೂ ಬೇಕರಿ ತಿನಿಸು, ಕರಿದ ತಿಂಡಿಗಳಲ್ಲಿ ಕೈಗಾರಿಕೆಗಳಲ್ಲಿ ಉತ್ಪಾದಿಸುವ ಟ್ರಾನ್ಸ್‌ ಫ್ಯಾಟ್‌ ಬಳಸುತ್ತಾರೆ. ಫ್ರೆಂಚ್‌ ಫ್ರೈ, ಚಿಕನ್‌…

Read More

ಶಿವಮೊಗ್ಗ: ಸಾಗರ ತಾಲ್ಲೂಕು ಹಿರಿಯ ಶ್ರೇಣಿಯ ನ್ಯಾಯಾಲಯದ ಅಪರ ಸರ್ಕಾರಿ ವಕೀಲರನ್ನಾಗಿ ಹಿರಿಯ ಪತ್ರಕರ್ತ, ವಕೀಲ ವಿ.ಶಂಕರ್ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತಂತೆ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯಿಂದ ಅಧಿಸೂಚನೆ ಹೊರಡಿಸಲಾಗಿದೆ. ಅದರಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹಿರಿಯ ಶ್ರೇಣಿಯ ನ್ಯಾಯಾಲಯದ ಅಪರ ಸರ್ಕಾರಿ ವಕೀಲರ ಹುದ್ದೆಗೆ ವಿ.ಶಂಕರ್ ಅವರನ್ನು ನೇಮಕ ಮಾಡಲಾಗಿದೆ ಎಂದಿದೆ. ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 1977ರ ನಿಯಮ 26(2)ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಹುದ್ದೆಯ ಪ್ರಭಾರವನ್ನು ವಹಿಸಿಕೊಳ್ಳುವ ದಿನಾಂಕದಿಂದ ಜಾರಿಗೆ ಬರುವಂತೆ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವರೆಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ವಿ.ಶಂಕರ್ ಅವರನ್ನು ಸಾಗರ ತಾಲ್ಲೂಕು ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರನ್ನಾಗಿ ನೇಮಕ ಮಾಡಿರುವುದಾಗಿ ತಿಳಿಸಿದೆ. ವರದಿ: ವಸಂತ ಬಿ ಈಶ್ವರಗೆರೆ https://kannadanewsnow.com/kannada/a-mega-job-fair-will-be-held-in-kalaburagi-on-april-16/ https://kannadanewsnow.com/kannada/bomb-threat-e-mail-to-ram-mandir-trust-fir-lodged/

Read More

ಕಲಬುರಗಿ : ಕಲಬುರಗಿಯಲ್ಲಿ ಕೆ.ಸಿ.ಟಿ. ಇಂಜಿನೀಯರಿಂಗ್ ಕಾಲೇಜಿನಲ್ಲಿ ಇದೇ ಏಪ್ರಿಲ್ 16 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ಕಲಬುರಗಿ ವಿಭಾಗ ಮಟ್ಟದ ಉದ್ಯೋಗ ಮೇಳ ಆಯೋಜಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ರಾಜ್ಯಸಭೆ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಇದಕ್ಕೆ ಚಾಲನೆ ನೀಡಲದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ಬಾರಿ ಬೆಂಗಳೂರಿನಲ್ಲಿ ಉದ್ಯೋಗ ಮೇಳ ಆಯೋಜಿಸಿದ್ದಾಗ ಸುಮಾರು 45 ಸಾವಿರ ಜನ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ನಿರುದ್ಯೋಗ ಸಮಸ್ಯೆ ಚೆನ್ನಾಗಿ ಅರಿತಿರುವ ರಾಜ್ಯ ಸರ್ಕಾರ ವಿಭಾಗವಾರು ಉದ್ಯೋಗ ಮೇಳ ಆಯೋಜಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆಯಂತೆ ಇದೀಗ ಕಲಬುರಗಿಯಲ್ಲಿ ಮೇಳ ಆಯೋಜಿಸಿದೆ. ಇದಾದ ನಂತರ ಹುಬ್ಬಳ್ಳಿ ಅಥವಾ ಬೆಳಗಾವಿ ಮತ್ತು ಮೈಸೂರಿನಲ್ಲಿ ಇದೇ ರೀತಿಯ ಉದ್ಯೋಗ ಮೇಳ ಆಯೋಜಿಸಲು ನಿರ್ಧರಿಸಿದೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾಹಿತಿ ನೀಡಿದರು. ಕಲಬುರಗಿ ಉದ್ಯೋಗ ಮೇಳದಳ್ಳಿ ವಿವಿಧ ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತೀರ್ಣರಾಗುವರಿಗೆ…

Read More