Author: kannadanewsnow09

ಮಂಡ್ಯ : ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗಿದೆ. ಬಹುತೇಕ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯಭೇರಿ ಬಾರಿಸಿದ್ದು, ಮನ್ ಮುಲ್ ಆಡಳಿತ ಮಂಡಳಿಯನ್ನುಕೈ ತೆಕ್ಕೆಗೆ ತೆಗೆದುಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕರು ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತ ನೂತನ ನಿರ್ದೇಶಕರನ್ನು ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ಗಣಿಗ ರವಿಕುಮಾರ್ ಅಭಿನಂದಿಸಿ ಸಿಹಿ ತಿನ್ನುಸುವ ಮೂಲಕ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಸಂಭ್ರಮಾಚರಣೆ ಆಚರಿಸಿದರು. ಮಂಡ್ಯದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಮಾಜಿ ಅಧ್ಯಕ್ಷ ಬಿ.ಎಸ್.ರಾಮಚಂದ್ರ, ಮಾಜಿ ಉಪಾಧ್ಯಕ್ಷ ಎಂ.ಎಸ್.ರಘುನಂದನ್ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹಾಲಿ ನಿರ್ದೇಶಕ ಶಿವಕುಮಾರ್ (ಶಿವಪ್ಪ) ಭರ್ಜರಿ ಜಯಭೇರಿ ಬಾರಿಸಿದರು. ನಾಗಮಂಗಲದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಎನ್.ಅಪ್ಪಾಜಿಗೌಡ ಹಾಗೂ ಲಕ್ಷ್ಮಿ ನಾರಾಯಣ್ ಗೆಲುವು ಸಾಧಿಸಿದರು. ಪಾಂಡವಪುರದಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಶಿವಕುಮಾರ್ ಗೆಲುವಿನ ನಗೆ ಬೀರಿದರು. ಶ್ರೀರಂಗಪಟ್ಟಣದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬೋರೆಗೌಡ…

Read More

ದಾವಣಗೆರೆ: ನ್ಯಾಕ್ ರೇಟಿಂಗ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟು, ಲಂಚದ ಹಣ ಪಡೆಯುತ್ತಿದ್ದಾಗಲೇ ಸಿಬಿಐ ಬಲೆಗೆ ದಾವಣಗೆರೆ ವಿವಿ ಪ್ರೊ.ಗಾಯತ್ರಿ ದೇವರಾಜ್ ಬಿದ್ದಿದ್ದಾರೆ. ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ದಾವಣಗೆರೆ ವಿವಿಯ ಮೈಕ್ರೋ ಬಯಾಲಜಿ ಪ್ರಾಧ್ಯಾಪಕಿಯಾಗಿದ್ದಂತ ಪ್ರೊ.ಗಾಯತ್ರಿ ದೇವರಾಜ್ ಅವರು, ನ್ಯಾಕ್ ಸಮಿತಿಯ ಸದಸ್ಯೆ ಕೂಡ ಆಗಿದ್ದಾರೆ. ಆಂಧ್ರಪ್ರದೇಶದ ಗುಂಟೂರಿನ ಕೆ ಎಲ್ ಇ ಎಫ್ ವಿವಿಯ ನ್ಯಾಯ್ ಕಮಿಟಿ ಪರಿಶೀಲನೆ ವೇಳೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಆಂಧ್ರದ ಕೆ ಎಲ್ ಇ ಎಫ್ ವಿವಿಯು ಸಿಬಿಐಗೆ ದೂರು ನೀಡಿತ್ತು. ಇಂದು ಲಂಚದ ಹಣವನ್ನು ಪಡೆಯುತ್ತಿದ್ದಂತ ಸಂದರ್ಭದಲ್ಲಿ ದಾವಣಗೆರೆ ವಿವಿಯ ಮೈಕ್ರೋ ಬಯಾಲಜಿ ವಿಭಾಗದ ಪ್ರಾಧ್ಯಾಪಕಿ ಪ್ರೊ.ಗಾಯತ್ರಿ ದೇವರಾಜ್ ಅವರನ್ನು ಸಿಬಿಐ ಅಧಿಕಾರಿಗಳು ಬಂದಿಸಿದ್ದಾರೆ. ಬಂಧಿತ ದಾವಣಗೆರೆ ವಿವಿಯ ಪ್ರೊ.ಗಾಯತ್ರಿ ದೇವರಾಜ್ ಅವರಿಂದ ಸಿಬಿಐ 37 ಲಕ್ಷ ನಗದು, 6 ಲ್ಯಾಪ್ ಟಾಪ್, ಐಪೋನ್ ವಶಕ್ಕೆ ಪಡೆದಿದೆ. ಈ ಸಂಬಂಧ ಭ್ರಷ್ಟಾಚಾರ, ಲಂಚ ಪ್ರಕರಣ ದಾಖಲಿಸಿಕೊಂಡಿರುವಂತ ಸಿಬಿಐ, ತನಿಖೆ…

Read More

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನಲ್ಲಿ ಹಿಂದಿನ ಕಣಬ್ಬಕ್ಕೂ ಈಗಿನ ಕಣಬ್ಬಕ್ಕೂ ತುಂಬಾ ವ್ಯತ್ಯಾಸವಿದೆ. ಆದರೂ ಈ ಸಂಸ್ಕೃತಿಯನ್ನು ಉಳಿಸುವ ಮತ್ತು ಮುಂದಿನ ತಲೆಮಾರಿನವರಿಗೆ ನೆನಪು ಬಿತ್ತುವ ಕೆಲಸವನ್ನು ಸೊರಬ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿರುವುದು ನಾಡಿಗೇ ಮಾದರಿಯಾಗಿದೆ. ಅದೇ ಕಸಾಪದಿಂದ ಅಧ್ದೂರಿಯಾಗಿ ಸುಗ್ಗಿ ಸಂಭ್ರಮ ಅಂದರೆ ಕಣಬ್ಬ ಕಾರ್ಯಕ್ರಮವನ್ನು ನಡೆಸಲಾಯಿತು. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಗಣಪತಿ ಹಿರೇಶಕುನ ಇವರ ಜಮೀನಿನ ಕಣದಲ್ಲಿ ನಡೆದ ಸುಗ್ಗಿ ಸಂಭ್ರಮ (ಕಣಬ್ಬ) ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಂತ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದಂತ ಚಂದ್ರಶೇಖರ ಸಿರಿವಂತೆ ಅವರು,  ಮಾದ್ಯಮಗಳು ಇಂಥಾ ಕಾಯ೯ಕ್ರಮಗಳಿಗೆ ಒತ್ತು ನೀಡಬೇಕು. ಎಲ್ಲಾ ಕಡೆಗೂ ಪ್ರಚಾರ ಮಾಡಬೇಕು. ಈ ನಿಟ್ಟಿನಲ್ಲಿ ಇಂಥಾ ಒಳ್ಳೆಯ ಬೆಳವಣಿಗೆಗೆ ಕಾರಣರಾದ ಅಧ್ಯಕ್ಷರಾದ ಷಣ್ಮುಖಾಚಾರ್ ಮತ್ತು ಅವರ ತಂಡದವರನ್ನು ಅಭಿನಂದಿಸುತ್ತೇನೆ ಎಂದರು. ದೇಶೀ ಸಂಸ್ಕೃತಿಯನ್ನು ಯಾರೂ ಮರಯಬಾರದು. ಈ ನಿಟ್ಟಿನಲ್ಲಿ ಪರಿಷತ್ತಿನ ಉದ್ದೇಶ ಅತ್ಯಂತ ಯಶಸ್ವಿಯಾಗಿದೆ ಎಂದು ಹೇಳಿದರಲ್ಲದೇ, ಪರಿಷತ್ತಿನ ಇಂಥಾ ನೂತನ ಕಾಯ೯ಕ್ರಮಗಳು…

Read More

ಗುಂಟೂರು: ನ್ಯಾಕ್ ರೇಟಿಂಗ್ ಪಡೆಯಲು ಲಂಚ ನೀಡಿದ ಆರೋಪದ ಮೇಲೆ ಗುಂಟೂರಿನ ಕೊನೇರು ಲಕ್ಷ್ಮಯ್ಯ ಎಜುಕೇಶನ್ ಫೌಂಡೇಶನ್ (ಕೆಎಲ್ಇಎಫ್) ಮತ್ತು ಹೈದರಾಬಾದ್ ಕ್ಯಾಂಪಸ್ನ ಕೆಎಲ್ ವಿಶ್ವವಿದ್ಯಾಲಯದ ಎನ್ಎಎಸಿ ತಂಡದ ಸದಸ್ಯರು ಮತ್ತು ಪದಾಧಿಕಾರಿಗಳು ಸೇರಿದಂತೆ 10 ಆರೋಪಿಗಳನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಎ++ ಮಾನ್ಯತೆಗಾಗಿ ಅನುಕೂಲಕರ ನ್ಯಾಕ್ ರೇಟಿಂಗ್ಗಳಿಗಾಗಿ ಆರೋಪಿ ಸರ್ಕಾರಿ ನೌಕರರಿಗೆ ಅನಗತ್ಯ ಲಾಭ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಟೂರಿನ ವಡ್ಡೇಶ್ವರಂ, (ಆಂಧ್ರಪ್ರದೇಶ) ಮೂಲದ ಶಿಕ್ಷಣ ಪ್ರತಿಷ್ಠಾನದ ಪದಾಧಿಕಾರಿಗಳು ಮತ್ತು ನ್ಯಾಕ್ ಪರಿಶೀಲನಾ ತಂಡದ ಸದಸ್ಯರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಕೆಎಲ್ಇಎಫ್ ಉಪಕುಲಪತಿ ಜಿ.ಪಿ.ಸಾರಥಿ ವರ್ಮಾ, ಉಪಾಧ್ಯಕ್ಷ ಕೊನೇರು ರಾಜಾ ಹರೀನ್, ಕೆಎಲ್ ವಿಶ್ವವಿದ್ಯಾಲಯದ ನಿರ್ದೇಶಕ ಎ.ರಾಮಕೃಷ್ಣ, ನ್ಯಾಕ್ ಪರಿಶೀಲನಾ ಸಮಿತಿ ಅಧ್ಯಕ್ಷ ಮತ್ತು ರಾಮಚಂದ್ರ ಚಂದ್ರವಂಶಿ ವಿಶ್ವವಿದ್ಯಾಲಯದ ಉಪಕುಲಪತಿ ಸಮರೇಂದ್ರ ನಾಥ್ ಸಹಾ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಸದಸ್ಯ ಸಂಯೋಜಕ ಮತ್ತು ಪ್ರಾಧ್ಯಾಪಕ ರಾಜೀವ್ ಸಿಜಾರಿಯಾ, ನ್ಯಾಕ್ ಪರಿಶೀಲನಾ ಸಮಿತಿ ಸದಸ್ಯ ಮತ್ತು ಭಾರತ್ ಇನ್ಸ್ಟಿಟ್ಯೂಟ್ ಆಫ್…

Read More

ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಈಗಾಗಲೇ ಕಾವೇರಿ ನೀರಿನದ ದರ ಏರಿಕೆ ಅನಿವಾರ್ಯ ಅಂತ ಹೇಳಿದ್ದರು. ಈ ಬೆನ್ನಲ್ಲೇ ಶೀಘ್ರವೇ ಬಂಗಳೂರು ಜನರಿಗೆ ಕಾವೇರಿ ನೀರಿನ ದರ ಏರಿಕೆ ಫಿಕ್ಸ್ ಆದಂತೆ ಆಗಿದೆ. ಕಾರಣ ಸರ್ಕಾರಕ್ಕೆ ಜಲಮಂಡಳಿಯಿಂದ ನೀರಿನ ದರ ಏರಿಕೆಯ ಬಗ್ಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಹೌದು ಬೆಂಗಳೂರು ಜಲಮಂಡಳಿಯಿಂದ ಕಾವೇರಿ ನೀರಿನ ದರ ಏರಿಕೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ನಾಲ್ಕು ಮಾದರಿಯ ಆಯ್ಕೆಗಳನ್ನು ಜಲಮಂಡಳಿ ಸರ್ಕಾರದ ಮುಂದೆ ಇಟ್ಟಿದೆ. ರಾಜ್ಯ ಸರ್ಕಾರ ಈ ಪ್ರಸ್ತಾವನೆ ಸಂಬಂಧ ಯಾವ ನಿರ್ಧಾರವನ್ನು ಹೊರ ಹಾಕಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇತ್ತೀಚೆಗಷ್ಟೇ ಡಿಸಿಎಂ ಡಿಕೆ ಶಿವಕುಮಾರ್ ಜಲಮಂಡಳಿ ಸಭೆಯಲ್ಲಿ ಮಾತನಾಡಿ ಎಲ್ಲಾ ಪ್ರೀಯಾಗಿ ಕೊಟ್ಟರೇ ಸರ್ಕಾರ ನಡೆಸೋದು ಹೇಗೆ ಅಂತ ಪ್ರಶ್ನಿಸಿದ್ದರು. ಅಲ್ಲದೇ ಇನ್ಮೇಲೆ ಕಾವೇರಿ ನೀರನ್ನು ಫ್ರೀಯಾಗಿ ಕೊಡೋಕೆ ಆಗಲ್ಲ. ಒಂದು ಪೈಸೆಯಾದರೂ ಬಿಲ್ ಕಟ್ಟಬೇಕು ಅಂತ ತಿಳಿಸಿದ್ದರು. https://kannadanewsnow.com/kannada/hdk-accuses-state-govt-of-conspiring-to-shut-down-kudremukhs-mangalore-factory/ https://kannadanewsnow.com/kannada/shocking-consuming-this-oil-increases-the-risk-of-diabetes-cancer-heart-attack/

Read More

ಹಾಸನ: ನನ್ನ ಮೇಲಿನ ರಾಜಕೀಯ ಹಗೆತನದಿಂದ ಕರ್ನಾಟಕದ ಪ್ರತಿಷ್ಠಿತ ಕೈಗಾರಿಕೆ, ಅಸಂಖ್ಯಾತರಿಗೆ ಉದ್ಯೋಗ ಕಲ್ಪಿಸಿದ್ದ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ (KIOCL) ಮಂಗಳೂರು ಕಾರ್ಖಾನೆಯನ್ನು ಮುಚ್ಚಿಸಲು ರಾಜ್ಯ ಕಾಂಗ್ರೆಸ್ ಸರಕಾರ ಷಡ್ಯಂತ್ರ ನಡೆಸಿದೆ ಎಂದು ಕೇಂದ್ರದ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು; ನಾನು ಕೇಂದ್ರ ಮಂತ್ರಿಯಾಗಿ ಏಳು ತಿಂಗಳಾಯಿತು. ನನ್ನ ಎರಡೂ ಇಲಾಖೆಗಳ ಎಲ್ಲಾ ಕಾರ್ಖಾನೆ, ಕಂಪನಿಗಳಿಗೆ ಭೇಟಿ ನೀಡಿದ್ದೇನೆ. ನನ್ನ ಮನವಿಗಳನ್ನು ಪ್ರಧಾನಿ ಮೋದಿ ಅವರು ದೊಡ್ಡ ಮನಸ್ಸಿನಿಂದ ಪುರಸ್ಕರಿದ್ದಾರೆ. ಆದರೆ, ಕರ್ನಾಟಕಕ್ಕೆ ಇಂತಹದ್ದು ಬೇಕು ಎಂದು ರಾಜ್ಯದಿಂದ ಯಾರೊಬ್ಬರೂ ನನ್ನ ಮುಂದೆ ಬಂದು ಚರ್ಚೆ ಮಾಡಿಲ್ಲ ಎಂದರು. ಸಚಿವನಾಗಿ ಅಧಿಕಾರ ವಹಿಸಿಕೊಂಡ ಮೇಲೆ ನಾನು ಮೊದಲ ಸಹಿ ಹಾಕಿದ್ದೇ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ ಉಳಿಸಲು. 2011ರಲ್ಲಿ ಸಿದ್ದರಾಮಯ್ಯ ಅವರ ಸರಕಾರವೇ ಒಪ್ಪಿಗೆ ನೀಡಿದ್ದ ಸಂಡೂರಿನ ದೇವದಾರಿ ಗಣಿ ಯೋಜನೆ ಅನುಷ್ಠಾನಕ್ಕೆ ಹಣಕಾಸು ನೆರವು…

Read More

ಮಂಡ್ಯ: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ನವರ ಉಪಟಳ ಜಾಸ್ತಿಯಾಗಿದ್ದು, ಅವರಲ್ಲಿ ಯಾರೇ ಆಗಲಿ ನಿಮ್ಮ ಮನೆ ಬಳಿಗೆ ಬಂದು ಕಿರುಕುಳ ನೀಡಿದರೆ ತಕ್ಷಣವೇ ನನಗೆ ದೂರವಾಣಿ ಕರೆ ಮಾಡಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಧೈರ್ಯ ತುಂಬಿದರು. ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರದ ಸಂತೆಕಸಲಗೆರೆ ಗ್ರಾಮದಲ್ಲಿ ಶ್ರೀ ಭೂಮಿ ಸಿದ್ದೇಶ್ವರಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನತೆಯನ್ನು ಉದ್ದೇಶಿಸಿ ಮಾತನಾಡಿದರು ಸಚಿವರು. ನಿಮಗೆ ಯಾರೇ ಮೈಕ್ರೋ ಫೈನಾನ್ಸ್ ನವರು ಬಂದು ನಿನಗೆ ಕಿರುಕುಳ ನೀಡಿದರೆ ಹೆದರಬೇಡಿ. ರೌಡಿಗಳನ್ನು ಕರೆದುಕೊಂಡು ಬಂದು ಗಲಾಟೆ ಮಾಡಿದರೆ ತಕ್ಷಣ ನನಗೆ ಕರೆ ಮಾಡಿ, ನಾನಿದ್ದೇನೆ. ನಿಮ್ಮ ಜೀವ ಬಹಳ ಮುಖ್ಯ. ಯಾವುದೇ ಕಾರಣಕ್ಕೂ ಜೀವ ತೆಗೆದುಕೊಳ್ಳುವ ಕೆಲಸ ಮಾಡಬೇಡಿ ಎಂದು ಅವರು ಹೇಳಿದರು. ಬಡ್ಡಿ, ಚಕ್ರಬಡ್ಡಿ ವಿಧಿಸಿ ಜನರಿಗೆ ಹಿಂಸೆ ಕೊಡುತ್ತಿದ್ದಾರೆ. ಇದು ಅಮಾನವೀಯ. ಅಸಲು ತೀರುವುದೇ ಇಲ್ಲ ಎಂದ ಸಚಿವರು; ಹಳ್ಳಿಗಳ ಯುವಕರು ಆನ್ಲೈನ್ ಗೇಮ್ ಗಳ ಚಟಕ್ಕೆ ಸಿಕ್ಕಿಕೊಳ್ಳುತ್ತಿದ್ದಾರೆ. ಅಲ್ಲಿಯೂ ಸಾಲಕ್ಕೆ ಅವರು…

Read More

ಮುಂಬೈ: ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮರ್ಸಿಡಿಸ್ ಬೆಂಝ್ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರ ಪಾರ್ಕಿಂಗ್ ಸ್ಥಳದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರು ಚಾಲಕನನ್ನು ಪರಶುರಾಮ್ ದಾದನವ್ರೆ (34) ಎಂದು ಗುರುತಿಸಲಾಗಿದ್ದು, ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಬ್ಬರು ವಿದೇಶಿ ಪ್ರಜೆಗಳನ್ನು ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರು ವಿಮಾನ ನಿಲ್ದಾಣದ ಸಿಬ್ಬಂದಿ ಕೂಪರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಲಕ ಮದ್ಯದ ಅಮಲಿನಲ್ಲಿದ್ದಂತೆ ತೋರದಿದ್ದರೂ, ದಾದಾನವ್ರೆ ಆಕಸ್ಮಿಕವಾಗಿ ಬ್ರೇಕ್ ಬದಲು ಆಕ್ಸಿಲರೇಟರ್ ಒತ್ತಿದ ಪರಿಣಾಮ ವಿಮಾನ ನಿಲ್ದಾಣದ ಗೇಟ್ ಸಂಖ್ಯೆ 1 ರಲ್ಲಿ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. https://kannadanewsnow.com/kannada/puttamma-mother-of-former-minister-goolihatti-sekhar-passes-away/ https://kannadanewsnow.com/kannada/shocking-consuming-this-oil-increases-the-risk-of-diabetes-cancer-heart-attack/

Read More

ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ಕ್ಷೇತ್ರದ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರ ತಾಯಿ ಪುಟ್ಟಮ್ಮ(79) ಅವರು ನಿಧನರಾಗಿದ್ದಾರೆ.  ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದಂತ ಹೊಸದುರ್ಗದ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರ ತಾಯಿ ಬೋವಿಹಟ್ಟಿಯ ಪುಟ್ಟಮ್ಮ ಅವರು ಇಂದು ನಿಧನರಾಗಿದ್ದಾರೆ. ಅಂದಹಾಗೇ ಗೂಳಿಹಟ್ಟಿ ಶೇಖರ್ ಅವರ ತಾಯಿ ಪುಟ್ಟಮ್ಮ ಈ ಹಿಂದೆ ಹಿಂದೂ ಧರ್ಮದಿಂಕ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಆದರೇ ಕೆಲ ತಿಂಗಳ ಬಳಿಕ ಗೂಳಿಹಟ್ಟಿ ಶೇಖರ್ ಒತ್ತಾಯದ ಮೇರೆಗೆ ಹಿಂದೂ ಧರ್ಮಕ್ಕೆ ಮರಳಿದ್ದರು. ಇಂದು ಮುಂಜಾನೆ ನಿಧರಾದಂತ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರ ತಾಯಿ ಪುಟ್ಟಮ್ಮ ಅವರನ್ನು ಬೋವಿ ಸಮುದಾಯದ ಸಂಪ್ರದಾಯದಂತೆ ಅಂತ್ಯಕ್ರಿಯೆಯನ್ನು ಸ್ವಗ್ರಾಮ ಗೂಳಿಹಟ್ಟಿಯಲ್ಲಿ ನೆರವೇರಿಸಲಾಗಿದೆ. https://kannadanewsnow.com/kannada/big-shock-to-those-who-had-applied-under-the-forest-rights-act-despite-having-patta-land-in-the-state/ https://kannadanewsnow.com/kannada/shocking-consuming-this-oil-increases-the-risk-of-diabetes-cancer-heart-attack/

Read More

ಬೆಂಗಳೂರು: ಅರಣ್ಯ ಹಕ್ಕು ಕಾಯಿದೆ ಅಡಿ ಸೌಲಭ್ಯಕ್ಕಾಗಿ ಪಟ್ಟಾ ಜಮೀನು ಹೊಂದಿರುವವರೂ ಅರ್ಜಿ ಹಾಕಿದ್ದರೆ ಪರಿಶೀಲಿಸಿ ಕೈಬಿಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ. ಈ ಸಂಬಂಧ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿರುವ ಸಚಿವರು, ಅರಣ್ಯ ಹಕ್ಕು ಕಾಯಿದೆ ಅಡಿ ಅರ್ಹ ಫಲಾನುಭವಿಗಳಿಗೆ ಅಂದರೆ 2005ರ ಡಿಸೆಂಬರ್ 13ಕ್ಕೆ ಮೊದಲು ಜೀವನೋಪಾಯಕ್ಕಾಗಿ ಅರಣ್ಯ ಭೂಮಿ ಬಳಸುತ್ತಿರುವ ಮತ್ತು ಅರಣ್ಯದಲ್ಲಿ ವಾಸಿಸುತ್ತಿರುವವರಿಗೆ ಅನ್ಯಾಯವಾಗದಂತೆ ರಾಜ್ಯ ಸರ್ಕಾರ ಕ್ರಮ ವಹಿಸಿದೆ ಎಂದು ತಿಳಿಸಿದ್ದಾರೆ. ಅರಣ್ಯ ಹಕ್ಕು ಕಾಯಿದೆ ಅಡಿ ಇನ್ನೂ ಸಾವಿರಾರು ಅರ್ಜಿಗಳು ಇತ್ಯರ್ಥವಾಗದೆ ಬಾಕಿ ಉಳಿದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ತಿಳಿಸಿರುವ ಸಚಿವರು, ಕಂದಾಯ ಭೂಮಿ (ಪಟ್ಟಾ ಜಮೀನು) ಮಾಲಿಕತ್ವ ಹೊಂದಿರುವವರೂ ಅರಣ್ಯ ಹಕ್ಕು ಕಾಯಿದೆ ಅಡಿ ಅರ್ಜಿ ಸಲ್ಲಿಸಿದ್ದರೆ ಪರಿಶೀಲಿಸಿ ಕ್ರಮ ವಹಿಸಲು ಸೂಚಿಸಿದ್ದಾರೆ. ಅರಣ್ಯ ಹಕ್ಕು ಕಾಯಿದೆ ಅಡಿ ಅರ್ಜಿ ಸಲ್ಲಿಸಿರುವವರಿಂದ ತಮಗಾಗಲೀ, ತಮ್ಮ ಕುಟುಂಬದ ಸದಸ್ಯರಿಗಾಗಲೀ 2005ರ ಡಿಸೆಂಬರ್ 13ಕ್ಕೆ ಮೊದಲು…

Read More