Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಬೆಂಬಲಿಗರ ವಿರುದ್ಧದ 12 ಕೇಸ್ ಸೇರಿದಂತೆ ಒಟ್ಟು 62 ಕ್ರಿಮಿನಲ್ ಪ್ರಕರಣಗಳನ್ನು ರಾಜ್ಯ ಸಂಪುಟ ಸಭೆಯಲ್ಲಿ ಹಿಂಪಡೆಯಲು ಒಪ್ಪಿಗೆ ಸೂಚಿಸಲಾಗಿದೆ. ಇಡಿ ಅಧಿಕಾರಿಗಳು 2019ರಲ್ಲಿ ಡಿ.ಕೆ ಶಿವಕುಮಾರ್ ಅವರನ್ನು ಬಂಧಿಸಿದಾಗ ದಾಂಧಲೆಯನ್ನು ಅವರ ಬೆಂಬಲಿಗರು ನಡೆಸಿದ್ದರು. ಈ ಹಿನ್ನಲೆಯಲ್ಲಿ ಅವರ ವಿರುದ್ಧ ಸಾತನೂರು, ಕೋಡಿಹಳ್ಳಿ ಸೇರಿದಂತೆ ರಾಮನಗರ ಜಿಲ್ಲೆಯ ನಾನಾ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣ, ರೈತ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರ ವಿರುದ್ಧದ ಮೊಕದ್ದಮ್ಮೆಗಳನ್ನು ಕೈಬಿಡಲು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದಂತ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಆವನಿ ಮಾಸದ ತಿರುಓಣಂ ನಕ್ಷತ್ರದಂದು, ಭಗವಾನ್ ಪೆರುಮಾಳ್ ವಾಮನ ಅವತಾರವನ್ನು ತೆಗೆದುಕೊಂಡು ಕೇವಲ ಮೂರು ಹೆಜ್ಜೆಗಳಲ್ಲಿ ಮೂರು ಲೋಕಗಳನ್ನು ಅಳೆದರು ಎಂದು ಹೇಳಲಾಗುತ್ತದೆ. ಅಂತಹ ವಾಮನ ಅವತಾರವನ್ನು ಲೋಕಗಳ ಅಧಿಪತಿ ಎಂದೂ ಕರೆಯುತ್ತಾರೆ. ಆವನಿ ಮಾಸದ ತಿರುಓಣಂ ನಕ್ಷತ್ರವು ಶುಕ್ರವಾರದೊಂದಿಗೆ ಹೊಂದಿಕೆಯಾಗುವುದು ಇನ್ನೂ ವಿಶೇಷವೆಂದು ಪರಿಗಣಿಸಲಾಗಿದೆ. ತಿರುಓಣಂ ನಕ್ಷತ್ರವು ಭಗವಾನ್ ಪೆರುಮಾಳಿಗೆ ಶುಭವಾಗಿದ್ದರೆ, ಶುಕ್ರವಾರ ಮಹಾಲಕ್ಷ್ಮಿ ದೇವಿಗೆ ಶುಭವಾಗಿದೆ. ಆ ದಿನ ನಾವು ಮಾಡಬೇಕಾದ ಸರಳ ಪೂಜೆ, ಇದು ಭಗವಾನ್ ಪೆರುಮಾಳ್ ಮತ್ತು ಮಹಾಲಕ್ಷ್ಮಿ ಇಬ್ಬರಿಗೂ ಶುಭ ದಿನವಾಗಿದ್ದು, ನಮ್ಮ ಜೀವನದಲ್ಲಿ ಸಂಪತ್ತಿಗೆ ಇರುವ ಎಲ್ಲಾ ರೀತಿಯ ಅಡೆತಡೆಗಳನ್ನು ತೆಗೆದುಹಾಕುತ್ತದೆ. ಈ ಆಧ್ಯಾತ್ಮಿಕ ಪೋಸ್ಟ್‌ನಲ್ಲಿ ನಾವು ಆ ಪೂಜೆಯ ಬಗ್ಗೆ ನೋಡಲಿದ್ದೇವೆ . ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು…
ಬೆಂಗಳೂರು: ಪ್ರಥಮ ಬಾರಿಗೆ ರಾಜ್ಯದ ಮುಜರಾಯಿ ಇಲಾಖೆಗೆ ಪ್ರತಿಷ್ಠಿತ ಕಟ್ಟಡ ನಿರ್ಮಾಣಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವರ ದೂರ ದೃಷ್ಟಿಯಿಂದ ನಿರ್ಮಾಣವಾಗಲಿದೆ. ಹೌದು.. ಮುಜರಾಯಿ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡಂತಹ ನಂತರ ರಾಮಲಿಂಗಾರೆಡ್ಡಿ ಅವರು ಈ ಇಲಾಖೆಗೆ ಹೊಸ ರೀತಿಯ ಆಯಾಮವನ್ನು ನೀಡುತ್ತಾ ಬಂದಿದ್ದಾರೆ. ಭಕ್ತರು ಮತ್ತು ಅರ್ಚಕ ಸಿಬ್ಬಂದಿ ಇವರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನ ದೇಶದಲ್ಲಿಯೇ ಪ್ರಥಮ ಬಾರಿಗೆ ಅನುಷ್ಠಾನಗೊಳಿಸಿ ಈ ಇಲಾಖೆಯಲ್ಲಿ ದುಡಿಯುವ ಮಂದಿಗೆ ಹೆಚ್ಚಿನ ನೆರವನ್ನು ಒದಗಿಸಿ ಕೊಡಿಸಿದ್ದಾರೆ. ಮುಜರಾಯಿ ಇಲಾಖೆಗೆ ತನ್ನದೇ ಆದಂತಹ ಕಟ್ಟಡ ಇರಲಿಲ್ಲ. ಇಲ್ಲಿಯ ತನಕ ಇದು ಚಾಮರಾಜಪೇಟೆಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಿತ್ತು. ಸಚಿವ ರಾಮಲಿಂಗಾರೆಡ್ಡಿ ಅವರ ಆಸಕ್ತಿಯ ಕಾರಣದಿಂದಾಗಿ ಬೆಂಗಳೂರಿನ ಕೆ ಆರ್ ವೃತ್ತದಲ್ಲಿರುವ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಸುಮಾರು ಹತ್ತು ಸಾವಿರ ಚದುರ ಅಡಿ ಜಾಗದಲ್ಲಿ 27 ಕೋಟಿ ರೂಪಾಯಿಗಳ ವೆಚ್ಚದಲ್ಲಿ 5 ಅಂತಸ್ತಿನ ಧಾರ್ಮಿಕ ಸೌಧ ಕಟ್ಟಡವನ್ನು ನಿರ್ಮಾಣ ಮಾಡಲು ಬೇಕಾದಂತಹ ಸಿದ್ಧತೆಗಳನ್ನ ಮಾಡಿಕೊಂಡು ಸಂಪುಟದ ಅನುಮತಿಯನ್ನು ಪಡೆದುಕೊಂಡಿರೋದು ಸಂತಸದ ಸಂಗತಿಯಾಗಿದೆ.…
ಅಫ್ಘಾನಿಸ್ತಾನ: ಗುರುವಾರ ಆಗ್ನೇಯ ಅಫ್ಘಾನಿಸ್ತಾನದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜರ್ಮನ್ ಭೂವಿಜ್ಞಾನ ಸಂಶೋಧನಾ ಕೇಂದ್ರ (GFZ) ತಿಳಿಸಿದೆ. ಭೂಕಂಪವು 10 ಕಿಮೀ (6.21 ಮೈಲುಗಳು) ಆಳದಲ್ಲಿ ಸಂಭವಿಸಿದೆ ಎಂದು GFZ ತಿಳಿಸಿದೆ. ಕುನಾರ್ ಮತ್ತು ನಂಗರ್ಹಾರ್ ಪ್ರಾಂತ್ಯಗಳಲ್ಲಿ 10 ಕಿಮೀ (6 ಮೈಲುಗಳು) ಆಳವಿಲ್ಲದ ಆಳದಲ್ಲಿ ಸಂಭವಿಸಿದ 6 ತೀವ್ರತೆಯ ಮತ್ತೊಂದು ಭೂಕಂಪದ ನಾಲ್ಕು ದಿನಗಳ ನಂತರ ಇದು ಸಂಭವಿಸಿದೆ. ಭಾನುವಾರ ತಡರಾತ್ರಿ (ಸ್ಥಳೀಯ ಸಮಯ ರಾತ್ರಿ 11:40) ಅಫ್ಘಾನಿಸ್ತಾನವನ್ನು ಅಪ್ಪಳಿಸಿದ ಹಿಂದಿನ ಭೂಕಂಪದಲ್ಲಿ ಕನಿಷ್ಠ 2,200 ಜನರು ಸಾವನ್ನಪ್ಪಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯ ಸರ್ಕಾರಿ ಪ್ರೌಢಶಾಲೆಯ ಬಾಲಕರು ತಾಲ್ಲೂಕು ಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯ ಸರ್ಕಾರಿ ಪ್ರೌಢಶಾಲೆಯ 17 ವರ್ಷದ ಒಳಗಿನ ತಾಲ್ಲೂಕು ಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಈ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇದಲ್ಲದೇ ಉಳವಿಯ ಸರ್ಕಾರಿ ಪ್ರೌಢಶಾಲೆಯ ಬಾಲಕಿಯರು ಕೂಡ ಕಬ್ಬಡಿ ಪಂದ್ಯದಲ್ಲಿ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಉಳವಿಯ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಈ ಕ್ರೀಢಾ ಸಾಧನೆಗೆ ಶಾಲೆಯ ಪ್ರಾಂಶುಪಾಲರು, ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು, ಶಾಲಾ ಶಿಕ್ಷಕರು ಹರ್ಷ ವ್ಯಕ್ತ ಪಡಿಸಿದ್ದಾರೆ. ಜೊತೆಗೆ ಶಾಲಾ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಾಧನೆ ಮಾಡಲು ಪ್ರೋತ್ಸಾಹ ನೀಡಿದ ಪೋಷಕರಿಗೆ ವಂದನೆ ತಿಳಿಸಿದ್ದಾರೆ. ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
ಮಂಡ್ಯ : ಮದ್ದೂರು ತಾಲೂಕಿನ ಗೆಜ್ಜಲಗೆರೆ, ಸೋಮನಹಳ್ಳಿ, ಚಾಮನಹಳ್ಳಿ, ಹಾಗೂ ಗೊರವನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಮದ್ದೂರು ನಗರಸಭಾ ವ್ಯಾಪ್ತಿಗೆ ವಿಲೀನಗೊಳಿಸಿರುವ ಶಾಸಕ ಕೆ.ಎಂ.ಉದಯ್ ಕ್ರಮ ವಿರೋಧಿಸಿ ಗ್ರಾಪಂಗಳ ವ್ಯಾಪ್ತಿಯ ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ರೈತ ಸಂಘದ ಬೆಂಬಲದೊಂದಿಗೆ ತಾಲೂಕು ಕಛೇರಿ ಎದುರು ಕಪ್ಪು ಬಾವುಟ ಪ್ರದರ್ಶನ ಮಾಡಿ ಗುರುವಾರ ಪ್ರತಿಭಟನೆ ನಡೆಸಿದರು. ರೈತ ನಾಯಕಿ ಸುನಂದಾ ಜಯರಾಂ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನೂರಾರು ಗ್ರಾಮಸ್ಥರು ಪುರಸಭೆ ಆವರಣದಲ್ಲಿ ನಡೆಯಲಿದ್ದ ನಗರಸಭಾ ನಾಮಫಲಕ ಅನಾವರಣ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ವಿಫಲಯತ್ನ ನಡೆಸಿದರು. ಪುರಸಭೆ ಕಛೇರಿ ಸಮೀಪದ ಅನತಿ ದೂರದಲ್ಲಿ ಪ್ರತಿಭಟನೆಗಿಳಿದ ವಿವಿಧ ಗ್ರಾಮಗಳ ಗ್ರಾಮಸ್ಥರು ಪುರಸಭೆ ಕಛೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಪೋಲೀಸರು ಪ್ರತಿಭಟನಾಕಾರರು ಪುರಸಭೆ ಕಛೇರಿಗೆ ಬಳಿ ಬರದಂತೆ ತಾಲೂಕು ಕಛೇರಿ ಬಳಿಯೇ ದಿಗ್ಬಂಧನ ವಿಧಿಸಿದರು. ಈಗಾಗಲೇ ನಾಲ್ಕು ಗ್ರಾಮ ಪಂಚಾಯಿತಿಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿದರೇ ಹಲವಾರು ಸೌಲಭ್ಯಗಳು ಮತ್ತು ಯೋಜನೆಗಳಿಂದ ವಂಚಿತವಾಗುತ್ತವೆ ಗ್ರಾಮ ಪಂಚಾಯಿತಿಗಳನ್ನು…
ಮಂಡ್ಯ :- ಯಾವುದಾದರೂ ಒಂದು ಒಳ್ಳೆಯ ಕೆಲಸ ಮಾಡೋಕೆ ಮುಂದಾದರೇ ಅದನ್ನು ವಿರೋಧ ಮಾಡೋದು ಕ್ಷೇತ್ರದಲ್ಲಿ ಕಾಯಕವಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಪ್ರತಿಭಟನಾಕಾರರ ವಿರುದ್ಧ ಪರೋಕ್ಷವಾಗಿ ವಾಗ್ಧಾಳಿ ನಡೆಸಿದರು. ಮದ್ದೂರು ಪಟ್ಟಣದ ಪುರಸಭೆ ಕಟ್ಟಡದಲ್ಲಿ ಅಳವಡಿಸಿರುವ ನಗರಸಭಾ ಕಾರ್ಯಾಲಯ ನಾಮ ಫಲಕವನ್ನು ಅನಾವರಣಗೊಳಿಸಿ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಮದ್ದೂರು ನಗರಸಭಾ ಕಾರ್ಯಾಲಯ ನಾಮ ಫಲಕವನ್ನು ಶಾಸಕರು ಅನಾವರಣಗೊಳಿಸಬಾರದು ಹಾಗೂ ನಗರಸಭಾ ವ್ಯಾಪ್ತಿಗೆ ನಾಲ್ಕು ಗ್ರಾಮ ಪಂಚಾಯಿತಿಗಳನ್ನು ಸೇರಿಸಬಾರದೆಂದು ರೈತ ಮುಖಂಡರು ಹಾಗೂ ಸಾರ್ವಜನಿಕರು ಕಪ್ಪು ಬಾವುಟ ಪ್ರದರ್ಶನ ಮಾಡಿದ ಹಿನ್ನೆಲೆಯಲ್ಲಿ ಶಾಸಕ ಉದಯ್ ಕೆಂಡಾಮಂಡಲರಾದರು. ಮದ್ದೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಮೂಲ ಗುರಿಯಾಗಿದೆ. ಯಾವುದಾದರೂ ಒಂದು ಒಳ್ಳೆಯ ಕೆಲಸ ಮಾಡೋಕೆ ಮುಂದಾದರೇ ಅದನ್ನು ವಿರೋಧ ಮಾಡೋದು ಕ್ಷೇತ್ರದಲ್ಲಿ ಕೆಲವರ ಕಾಯಕವಾಗಿದೆ. ಅಭಿವೃದ್ಧಿ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸಿದರೇ ಯಾವುದೇ ಕಾರಣಕ್ಕೂ ರಾಜಿಯಾಗುವ ಮಾತೆ ಇಲ್ಲ ಎಂದು ಗುಡುಗಿದರು. ಮದ್ದೂರು ಪುರಸಭೆ ವ್ಯಾಪ್ತಿಯ ಗೆಜ್ಜಲಗೆರೆ, ಸೋಮನಹಳ್ಳಿ, ಚಾಮನಹಳ್ಳಿ ಹಾಗೂ ಗೊರವನಹಳ್ಳಿ ಪಂಚಾಯಿತಿಗಳಿಂದ…
ಇಟಾಲಿಯನ್ ಫ್ಯಾಷನ್ ಡಿಸೈನರ್ ಜಾರ್ಜಿಯೊ ಅರ್ಮಾನಿ 91 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಅವರ ಕಂಪನಿ ಗುರುವಾರ ದೃಢಪಡಿಸಿದೆ. ‘ಅನಂತ ದುಃಖದೊಂದಿಗೆ, ಅರ್ಮಾನಿ ಗ್ರೂಪ್ ತನ್ನ ಸೃಷ್ಟಿಕರ್ತ, ಸ್ಥಾಪಕ ಮತ್ತು ದಣಿವರಿಯದ ಪ್ರೇರಕ ಶಕ್ತಿ: ಜಾರ್ಜಿಯೊ ಅರ್ಮಾನಿ ಅವರ ನಿಧನವನ್ನು ಘೋಷಿಸುತ್ತದೆ’ ಎಂದು ಫ್ಯಾಷನ್ ಹೌಸ್ ಹೇಳಿಕೆಯಲ್ಲಿ ತಿಳಿಸಿದೆ. ಜಾರ್ಜಿಯೊ ಅರ್ಮಾನಿ: ಇಟಾಲಿಯನ್ ಸೊಬಗಿನ ಜಾಗತಿಕ ಸಂಕೇತ ಆಧುನಿಕ ಇಟಾಲಿಯನ್ ಶೈಲಿಯನ್ನು ಮರು ವ್ಯಾಖ್ಯಾನಿಸುವುದಕ್ಕೆ ಅರ್ಮಾನಿ ವಿಶ್ವಾದ್ಯಂತ ಹೆಸರುವಾಸಿಯಾಗಿದ್ದರು. ಅವರು ವಿನ್ಯಾಸಕರ ಸೃಜನಶೀಲತೆಯನ್ನು ಉದ್ಯಮಿಯ ತೀಕ್ಷ್ಣ ಕೌಶಲ್ಯಗಳೊಂದಿಗೆ ಸಂಯೋಜಿಸಿದರು. ಅವರ ನಾಯಕತ್ವದಲ್ಲಿ, ಅರ್ಮಾನಿ ಬ್ರ್ಯಾಂಡ್ ಸುಮಾರು €2.3 ಬಿಲಿಯನ್ ($2.7 ಬಿಲಿಯನ್) ವಾರ್ಷಿಕ ವಹಿವಾಟಿನೊಂದಿಗೆ ಜಾಗತಿಕ ಸಾಮ್ರಾಜ್ಯವಾಗಿ ಬೆಳೆಯಿತು. ಅನಾರೋಗ್ಯ ಮತ್ತು ಕೊನೆಯ ದಿನಗಳು ಫ್ಯಾಷನ್ ದಂತಕಥೆಯು ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಜೂನ್‌ನಲ್ಲಿ, ಅವರು ಮಿಲನ್‌ನ ಪುರುಷರ ಫ್ಯಾಷನ್ ವೀಕ್‌ನಲ್ಲಿ ತಮ್ಮ ಗುಂಪಿನ ಪ್ರದರ್ಶನಗಳನ್ನು ತಪ್ಪಿಸಿಕೊಂಡರು, ಅವರ ದೀರ್ಘ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಅವರು ತಮ್ಮ ಕ್ಯಾಟ್‌ವಾಕ್ ಕಾರ್ಯಕ್ರಮಗಳಲ್ಲಿ ಒಂದಕ್ಕೆ…
ಸೆಪ್ಟೆಂಬರ್ ತಿಂಗಳು ಖಗೋಳ ದೃಷ್ಟಿಕೋನದಿಂದ ಬಹಳ ವಿಶೇಷವಾಗಿರಲಿದೆ. ಏಕೆಂದರೆ ಈ ಬಾರಿ ಎರಡು ದೊಡ್ಡ ಗ್ರಹಣಗಳು ಒಂದೇ ತಿಂಗಳಿನಲ್ಲಿ ಸಂಭವಿಸಲಿದೆ. ಚಂದ್ರಗ್ರಹಣ ಸೆಪ್ಟೆಂಬರ್ 7 ರಂದು ಮತ್ತು ಸೂರ್ಯಗ್ರಹಣ ಸೆಪ್ಟೆಂಬರ್ 21 ರಂದು. ಮತ್ತೊಂದು ವಿಶೇಷವೆನೆಂದರೆ ಎರಡೂ ಗ್ರಹಣಗಳೂ ಭಾರತದಲ್ಲಿ ಗೋಚರಿಸುತ್ತವೆ, ಆದ್ದರಿಂದ ಧಾರ್ಮಿಕ ಮತ್ತು ಜ್ಯೋತಿಷ್ಯ ದೃಷ್ಟಿಕೋನದಿಂದ ಅವುಗಳ ಪ್ರಾಮುಖ್ಯತೆ ಇನ್ನಷ್ಟು ಹೆಚ್ಚಾಗಲಿದೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ,…
ಶಿವಮೊಗ್ಗ: ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸೆ.5 ರಂದು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ 2025-26 ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಜಿಲ್ಲೆಯಿಂದ 40 ಶಿಕ್ಷಕ/ಶಿಕ್ಷಕಿಯರು ಆಯ್ಕೆಯಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಲ್ಲಾ ಅತ್ಯುತ್ತಮ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಿಕ್ಷಕಿ/ಶಿಕ್ಷಕ ಪ್ರಶಸ್ತಿಗೆ -07, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕಿ/ಶಿಕ್ಷಕ ಪ್ರಶಸ್ತಿಗೆ-07, ಪ್ರೌಢಶಾಲಾ ವಿಭಾಗದಲ್ಲಿ ಅತ್ಯುತ್ತಮ ಶಿಕ್ಷಕಿ/ಶಿಕ್ಷಕ ಪ್ರಶಸ್ತಿಗೆ-07 ಹಾಗೂ ವಿಶೇಷ ಶಿಕ್ಷಕ ಪ್ರಶಿಸ್ತಿಗೆ -19 ಶಿಕ್ಷಕರುಗಳು ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಹ ಶಿಕ್ಷಕರುಗಳಾದ ಶೀಲಾ ಪಿ.,- ಸಾಗರ, ಮಂಜಪ್ಪ ಡಿ.,-ಹೊಸನಗರ, ಜ್ಯೋತಿ ಹೆಚ್.ಎಂ., -ತೀರ್ಥಹಳ್ಳಿ, ಶಾರದಾ ಎಸ್.,-ಭದ್ರಾವತಿ, ಗಣೇಶ್ ನಾಯ್ಕ ಎನ್., -ಸೊರಬ, ಸುರೇಶ್ ಕೆ.,-ಶಿಕಾರಿಪುರ, ತಸ್ನಿಂ ಕೌಸರ್-ಶಿವಮೊಗ್ಗ ಇವರುಗಳು ಆಯ್ಕೆಯಾಗಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬಡ್ತಿ ಮುಖ್ಯ ಶಿಕ್ಷಕರಗಳಾಗಿ ಸುಮ ಹೆಚ್.ಎ,-ತೀರ್ಥಹಳ್ಳಿ, ರಾಧಾಬಾಯಿ-ಶಿವಮೊಗ್ಗ, ಕೃಷ್ಣಪ್ಪ…














