Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಮೀನುಗಾರಿಕಾ ವಿಶ್ವ ವಿದ್ಯಾಲಯ ಸ್ಥಾಪಿಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದರು. ಮೀನುಗಾರಿಕೆ ಇಲಾಖೆ ಆಯೋಜಿಸಿದ್ದ “ವಿಶ್ವ ಮೀನುಗಾರಿಕಾ ದಿನಾಚರಣೆ ಮತ್ತು 2025ರ ಮತ್ಸ್ಯ ಮೇಳ” ವನ್ನು ಉದ್ಘಾಟಿಸಿ ಮಾತನಾಡಿದರು. ಇಲಾಖೆಯನ್ನು ಮತ್ತು ಮೀನುಗಾರ ಕುಟುಂಬಗಳನ್ನು ಅಭಿವೃದ್ಧಿಪಡಿಸಲು ಕರಾವಳಿಯವರೇ ಆದ ಮಂಕಾಳ ವೈದ್ಯ ಅವರನ್ನೇ ಮಂತ್ರಿ ಮಾಡಿದ್ದೇವೆ. ಇವರು ಉತ್ತಮವಾಗಿ ಇಲಾಖೆಯನ್ನು ನಿರ್ವಹಿಸುತ್ತಿದ್ದಾರೆ. ಮೀನುಗಾರ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದಲ್ಲಿ 320 ಕಿಮೀ ಕರಾವಳಿ ಪ್ರದೇಶ ಇದೆ. 5.5ಲಕ್ಷ ಹೆಕ್ಟೇರ್ ಒಳನಾಡು ಜಲಪ್ರದೇಶ ಇದೆ. ಮೀನು ರಫ್ತಿನಲ್ಲಿ ರಾಜ್ಯ ನಾಲ್ಕನೇ ಸ್ಥಾನದಲ್ಲಿದೆ. ದೇಶದ ಮೀನು ಉತ್ಪಾದನೆಯಲ್ಲಿ ರಾಜ್ಯ 3ನೇ ಸ್ಥಾನದಲ್ಲಿದೆ. ಒಟ್ಟಾರೆ ಮೀನುಗಾರಿಕೆ 10 ಲಕ್ಷ ಜನರ ಜೀವನ ಆಸರೆಯಾಗಿದೆ ಎಂದರು. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಯಾಂತ್ರೀಕೃತ ದೋಣಿಗಳ ಡೀಸೆಲ್ ವಾರ್ಷಿಕ ಮಿತಿಯನ್ನು 1.5 ಲಕ್ಷ ಕಿ.ಲೋ ಲೀಟರ್ ನಿಂದ 2 ಲಕ್ಷ ಕಿ.ಲೋ ಲೀಟರ್ ಗೆ ಹೆಚ್ಚಿಸಲಾಗಿದೆ.…
ನವದೆಹಲಿ: ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಪ್ರಕಟಣೆಯಲ್ಲಿ, ಭಾರತ ಸರ್ಕಾರವು ನವೆಂಬರ್ 21 ರಿಂದ ಜಾರಿಗೆ ಬರುವಂತೆ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ ಮತ್ತು ಅಸ್ತಿತ್ವದಲ್ಲಿರುವ 29 ಕಾರ್ಮಿಕ ಕಾನೂನುಗಳನ್ನು ತರ್ಕಬದ್ಧಗೊಳಿಸಿದೆ ಎಂದು ತಿಳಿಸಿದೆ. ಹೊಸ ಸಂಹಿತೆಗಳು – ವೇತನ ಸಂಹಿತೆ, 2019, ಕೈಗಾರಿಕಾ ಸಂಬಂಧ ಸಂಹಿತೆ, 2020, ಸಾಮಾಜಿಕ ಭದ್ರತೆ ಸಂಹಿತೆ, 2020, ಮತ್ತು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ, 2020. ವಿವಿಧ ವರ್ಗಗಳಲ್ಲಿ ಕಾರ್ಯಪಡೆಯಲ್ಲಿರುವ ಮಹಿಳಾ ಉದ್ಯೋಗಿಗಳಿಗೆ ವಿಶೇಷವಾಗಿ ಕೈಗೊಂಡ ಕ್ರಮಗಳನ್ನು ನವೀಕರಣಗಳು ಒಳಗೊಂಡಿವೆ. ಮಹಿಳಾ ಕಾರ್ಯಪಡೆಗೆ ಹೊಸ ಕಾರ್ಮಿಕ ಸಂಹಿತೆಗಳು ಏನೆಲ್ಲ ಪ್ರಯೋಜನ ಗೊತ್ತಾ? ಇತರ ವಿಷಯಗಳ ಜೊತೆಗೆ, ಮಹಿಳಾ ಕಾರ್ಮಿಕರಿಗೆ ಅವರ ಒಪ್ಪಿಗೆ ಮತ್ತು ಅಗತ್ಯವಿರುವ ಸುರಕ್ಷತಾ ಕ್ರಮಗಳಿಗೆ ಒಳಪಟ್ಟು ಎಲ್ಲಾ ಸಂಸ್ಥೆಗಳಲ್ಲಿ (ಭೂಗತ ಗಣಿಗಾರಿಕೆ ಮತ್ತು ಭಾರೀ ಯಂತ್ರೋಪಕರಣಗಳು ಸೇರಿದಂತೆ) ಎಲ್ಲಾ ರೀತಿಯ ಕೆಲಸಗಳಲ್ಲಿ ರಾತ್ರಿಯಲ್ಲಿ ಕೆಲಸ ಮಾಡಲು ಅನುಮತಿ ಇದೆ. ಮಹಿಳಾ ಉದ್ಯೋಗಿಗಳು ಹೆಚ್ಚಿನ ಆದಾಯವನ್ನು…
ಶಿವಮೊಗ್ಗ: ಸಾಗರದ ಕಲ್ಮನೆ ಒಂದಿಲ್ಲೊಂದು ವಿಚಾರದಲ್ಲಿ ಸದಾ ಸುದ್ದಿಯಲ್ಲಿದೆ. ಕೆಲ ವರ್ಷಗಳ ಹಿಂದೆ ಕಲ್ಮನೆ ಸಹಕಾರ ಸಂಘದ ಹಗರಣದಿಂದ ಸುದ್ದಿಯಾಗಿತ್ತು. ಆ ಬಳಿಕ ಗ್ರಾಮ ಪಂಚಾಯ್ತಿ ನರೇಗಾ ಯೋಜನೆಗೆ ಹಗರಣದಿಂದ ಸದ್ದು ಮಾಡಿತ್ತು. ಇದೀಗ ರಾಜಕೀಯ ಜಿದ್ದಿಗೆ ಗೂಡು ಅಂಗಡಿ ಧ್ವಂಸದ ಮೂಲಕ ಮತ್ತೆ ಮುನ್ನೆಲೆಗೆ ಬಂದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ನಗರದಿಂದ ಕೆಲವೇ ದೂರದಲ್ಲಿ ಕಲ್ಮನೆ ಗ್ರಾಮವಿದೆ. ಈ ಗ್ರಾಮವನ್ನು ಹಾದು ಸಿಗಂದೂರು ರಸ್ತೆ ಹೋಗುತ್ತದೆ. ಈ ರಸ್ತೆಯ ಒಂದು ಬದಿಯಲ್ಲಿ ಸುರೇಂದ್ರ ಶೆಟ್ಟಿ ಎಂಬುವರು ಗೂಡು ಅಂಗಡಿ ಇಟ್ಟುಕೊಂಡು ಅದರಲ್ಲಿ ಬಂದಂತ ಆದಾಯದಲ್ಲಿ ಜೀವನ, ಸಂಸಾರ ನಡೆಸುತ್ತಿದ್ದರು. ಅಂಗಡಿ ಅಂದಮೇಲೆ ಎಲ್ಲಾ ವರ್ಗದ ಜನರು ಬಂದು ಸೇರೋದು, ವಸ್ತು ಖರೀದಿಸೋದು ಮಾಮೂಲಿ. ಆದರೇ ಸುರೇಂದ್ರ ಶೆಟ್ಟಿ ಅಂಗಡಿಯಲ್ಲಿ ಹೆಚ್ಚು ಹೊತ್ತು ಕಳೆಯುತ್ತಿದ್ದದ್ದು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಎನ್ನಲಾಗುತ್ತಿದೆ. ಈ ಕಾರಣಕ್ಕೆ ಸುರೇಂದ್ರ ಶೆಟ್ಟಿ ಕಿರಾಣಿ ಅಂಗಡಿಯ ಮೇಲೆ ಬಿಜೆಪಿಗರ ಕಣ್ಣು ಬಿದ್ದಿದೆ ಎನ್ನಲಾಗುತ್ತಿದೆ. ಮದ್ಯ ಮಾರಾಟವೆಂದು ನೆಪದಲ್ಲಿ ಗೂಡು…
ಬೆಂಗಳೂರು: ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ಹಾಗೂ ರಾಜ್ಯಾಧ್ಯಕ್ಷರಾಗಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಅವಿರೋಧವಾಗಿ ಪುನರಾಯ್ಕೆ ಆಗಿದ್ದಾರೆ. ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಈ ಇಬ್ಬರು ನಾಯಕರ ಪುನರಾಯ್ಕೆ ಬಗ್ಗೆ ರಾಷ್ಟ್ರೀಯ ಪ್ರತಿನಿಧಿಗಳು ಒಮ್ಮತ ನಿರ್ಧಾರ ಕೈಗೊಂಡರು. ರಾಷ್ಟ್ರ ಮಟ್ಟದಲ್ಲಿ ಪಕ್ಷ ಸಂಘಟನೆಗೆ ವಿಫುಲ ಅವಕಾಶಗಳಿವೆ. ಅದೇ ರೀತಿಯಲ್ಲಿ ಕರ್ನಾಟಕದಲ್ಲಿ ಪಕ್ಷ ಸಂಘಟನೆಯನ್ನು ಬಲಿಷ್ಠವಾಗಿ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ನೇತೃತ್ವದಲ್ಲಿಯೇ ಪಕ್ಷವನ್ನು ಸಂಘಟಿಸುವ ನಿರ್ಧಾರಕ್ಕೆ ರಾಷ್ಟ್ರೀಯ ಮಂಡಳಿ ಬಂದಿತು. ಸಭೆಯ ಬಳಿಕ ಮಾಧ್ಯಮಗಳಿಗೆ ಈ ಬಗ್ಗೆ ವಿವರಗಳನ್ನು ನೀಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ಅವರು; ರಾಜ್ಯದ ಏಕೈಕ ಪ್ರಾದೇಶಿಕ ಪಕ್ಷ ಜೆಡಿಎಸ್ ಆಗಿದ್ದು, ಪಕ್ಷಕ್ಕೆ ಈಗ 25 ವರ್ಷ ತುಂಬಿದೆ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಅವಿರತ ಶ್ರಮದಿಂದ ಪಕ್ಷ ಇವತ್ತಿಗೂ ಗಟ್ಟಿಯಾಗಿ ಉಳಿದಿದೆ.…
ಶಿವಮೊಗ್ಗ: ಸಾಗರದ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ನವೆಂಬರ್.30ರಂದು ಚುನಾವಣೆ ನಿಗದಿಯಾಗಿದೆ. ಈ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು, ಇಂದು ಸರದಿ ಸಾಲಿನಲ್ಲಿ ನಿಂತು ಆಕಾಂಕ್ಷಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆಗೆ ಸಂಬಂಧಿಸಿದಂತೆ ಚುನಾವಣೆ ಘೋಷಣೆಯಾಗಿದೆ. ನವೆಂಬರ್.19ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು, ನವೆಂಬರ್.24 ಕೊನೆಯ ದಿನವಾಗಿದೆ. ನಾಮಪತ್ರ ಸಲ್ಲಿಸಿದ ಪುರುಷೋತ್ತಮ್(ಪುಚಿ) ಇಂದು ಆಕಾಂಕ್ಷಿಗಳಾದಂತ ಪುರುಷೋತ್ತಮ್(ಪುಚಿ), ಜಯರಾಂ, ನಾಗರಾಜ್ ಪವಿತ್ರ, ಮಂಜುನಾಥ್(ಕುರಿ), ಶಂಕರ್ ಅಳವೇ ಕೋಡಿ, ಸುಧೀಂದ್ರ ಗುಡಿಗಾರ್ ಡಿಎಸ್ ಸೇರಿದಂತೆ ಇತರರು ಸಾಲುಗಟ್ಟಿ ನಿಂತು ಅವರು ಸಾಮಾನ್ಯ ಅಭ್ಯರ್ಥಿಗಳ ಸ್ಥಾನಕ್ಕೆ ನಾಮಪತ್ರವನ್ನು ಸಲ್ಲಿಸಿದರು. ಮೊದಲ ದಿನ 7, ನಿನ್ನೆ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ದಿನಾಂಕ 19-11-2025ರಂದು ನಾಮಪತ್ರ ಸಲ್ಲಿಕೆ ಆರಂಭದ ಮೊದಲ ದಿನವೇ ಸಾಮಾನ್ಯ ಸ್ಥಾನಕ್ಕೆ ನಾರಾಯಣ ಎನ್, ಶಶಿಕಾಂತ್ ಎಂಎಸ್, ಅಶೋಕ.ಎಸ್, ಗಂಗಾಧರ ಜಂಬಿಗೆ, ಎಸ್ ವಿ ಕೃಷ್ಣಮೂರ್ತಿ, ಸುಂದರ್ ಸಿಂಗ್…
ಬೆಂಗಳೂರು: ರಾಜ್ಯ ಸರ್ಕಾರವು ಸೂಪರಿಡೆಂಟ್ ಆಫ್ ಪೊಲೀಸ್ ಹಾಗೂ ಮೇಲ್ಪಟ್ಟ ಶ್ರೇಣಿಯ ಅಧಿಕಾರಿಗಳಿಗೆ ಮ್ಯಾಜಿಸ್ಟ್ರೇಟ್ ಅಧಿಕಾರವನ್ನು ನೀಡಿ ಆದೇಶ ಹೊರಡಿಸಿದೆ. ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಎಸ್ ಪಿ ಹಾಗೂ ಮೇಲ್ಪಟ್ಟ ಶ್ರೇಣಿಯ ಅಧಿಕಾರಿಗಳಿಗೆ ಕಾರ್ಯ ನಿರ್ವಾಹಕ ಮ್ಯಾಜಿಸ್ಟ್ರೇಟ್ ಅಧಿಕಾರ ನೀಡಿರುವುದಾಗಿ ತಿಳಿಸಿದೆ. ವಿಶೇಷ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಧಿಕಾರವನ್ನು ಬಳಕೆ ಮಾಡುವಂತೆಯೂ ಆದೇಶದಲ್ಲಿ ರಾಜ್ಯ ಸರ್ಕಾರ ಸೂಚಿಸಿದೆ. ನಿಷೇಧಾಜ್ಞೆ, ಆರೋಪಿಗಳಿಗೆ ಬಾಂಡ್ ಸೇರಿ ವಿಶೇಷ ಸಂದರ್ಭದಲ್ಲಿ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಧಿಕಾರವನ್ನು ಬಳಸಿಕೊಳ್ಳುವುದಕ್ಕೆ ಅನುಕೂಲವಾಗಲಿದೆ. https://kannadanewsnow.com/kannada/kuwj-state-level-office-bearers-to-take-charge-on-nov-24/ https://kannadanewsnow.com/kannada/new-labor-codes-to-be-implemented-across-the-country-from-today-what-are-the-benefits-heres-the-information/
ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (Karnataka Union of Working Journalists -KUWJ) ನೂತನ ಸಾಲಿನ ಪದಾಧಿಕಾರಿಗಳ ರಾಜ್ಯ ಮಟ್ಟದ ಅಧಿಕಾರ ಸ್ವೀಕಾರ ಸಮಾರಂಭ ನ.24ರಂದು ಬೆಳಿಗ್ಗೆ 11 ಗಂಟೆಗೆ ಗಾಂಧಿ ಭವನದಲ್ಲಿ ಆಯೋಜಿಸಲಾಗಿದೆ. ಕಾನೂನು ಮತ್ತು ಸಂಸದೀಯ ಸಚಿವರಾದ ಎಚ್.ಕೆ.ಪಾಟೀಲ್ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು, ಪ್ರಮಾಣ ವಚನ ಬೋಧನೆ ಮಾಡುವರು. ಹಿರಿಯ ಪತ್ರಕರ್ತೆ ನಾಗಮಣಿ ಎಸ್ ರಾವ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಮತ್ತು ಗಾಂಧಿ ಭವನದ ಅಧ್ಯಕ್ಷರಾದ ವೂಡೆ ಪಿ ಕೃಷ್ಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಲಿದ್ದಾರೆ. ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಎಲ್ಲಾ ಜಿಲ್ಲಾ ಘಟಕಗಳ ನೂತನ ಸಾಲಿನ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. https://kannadanewsnow.com/kannada/priority-given-to-those-with-a-cooperative-degree-in-cooperative-society-recruitments-cm-siddaramaiah/ https://kannadanewsnow.com/kannada/railway-safety-work-behind-the-scenes-the-movement-of-these-trains-in-mysore-division-has-been-cancelled-and-restricted/
ಮೈಸೂರು: ದಕ್ಷಿಣ ರೈಲ್ವೆಯು ತಿರುನಿನ್ರವೂರ್ ಯಾರ್ಡ್ನಲ್ಲಿ ನಡೆಯುತ್ತಿರುವ ಸಿಗ್ನಲ್ ಮತ್ತು ಸುರಕ್ಷತಾ ಸಂಬಂಧಿತ ಕೆಲಸದ ಹಿನ್ನೆಲೆಯಲ್ಲಿ 23.11.2025ರಂದು ಕೆಳಗಿನ ರೈಲು ಸೇವೆಗಳು ಭಾಗಶಃ ರದ್ದುಗೊಳ್ಳುವುದು ಹಾಗೂ ನಿಯಂತ್ರಿಸಲ್ಪಡುವುದು ಎಂದು ತಿಳಿಸಿದೆ. 23.11.2025ರಂದು ರೈಲುಗಳ ಭಾಗಶಃ ರದ್ದು ಹಾಗೂ ನಿಯಂತ್ರಣ ರೈಲು ಸಂಖ್ಯೆ 16551 — ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ – ಅಶೋಕಪುರಂ ಎಕ್ಸ್ಪ್ರೆಸ್ ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ಮತ್ತು ಕಟ್ಪಾಡಿ ಜಂಕ್ಷನ್ ನಡುವೆ ಭಾಗಶಃ ರದ್ದಾಗಿದ್ದು, ಈ ರೈಲು ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ನ ಬದಲಿಗೆ ಕಟ್ಪಾಡಿ ಜಂಕ್ಷನ್ನಿಂದ ಪ್ರಾರಂಭವಾಗುತ್ತದೆ. ರೈಲು ಸಂಖ್ಯೆ 12607 — ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ – ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ಮತ್ತು ಕಟ್ಪಾಡಿ ಜಂಕ್ಷನ್ ನಡುವೆ ಭಾಗಶಃ ರದ್ದಾಗಿದ್ದು, ಈ ರೈಲು ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ನ ಬದಲಿಗೆ ಕಟ್ಪಾಡಿ ಜಂಕ್ಷನ್ನಿಂದ ಪ್ರಾರಂಭವಾಗುತ್ತದೆ. ರೈಲು ಸಂಖ್ಯೆ 12608 — ಕೆಎಸ್ಆರ್ ಬೆಂಗಳೂರು – ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ಎಕ್ಸ್ಪ್ರೆಸ್ ಕಟ್ಪಾಡಿ ಜಂಕ್ಷನ್ ಮತ್ತು ಎಂ.ಜಿ.ಆರ್.…
ಬೆಂಗಳೂರು: ವಾರಾಂತ್ಯಗಳಲ್ಲಿ ಪ್ರಯಾಣಿಕರ ನಿರೀಕ್ಷಿತ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು, ನೈಋತ್ಯ ರೈಲ್ವೆಯು ಬೆಂಗಳೂರು ಕಂಟೋನ್ಮೆಂಟ್ ಮತ್ತು ಕಲಬುರಗಿ ನಡುವೆ ಆರು ಟ್ರಿಪ್ಗಳ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ನಿರ್ವಹಿಸಲು ನಿರ್ಧರಿಸಿದೆ. ರೈಲು ಸಂಖ್ಯೆ 06207 ಬೆಂಗಳೂರು ಕಂಟೋನ್ಮೆಂಟ್ – ಕಲಬುರಗಿ ವಿಶೇಷ ಎಕ್ಸ್ಪ್ರೆಸ್ ರೈಲು ನವೆಂಬರ್ 22, 2025 ರಿಂದ ಡಿಸೆಂಬರ್ 27, 2025 ರವರೆಗೆ ಪ್ರತಿ ಶನಿವಾರದಂದು ರಾತ್ರಿ 07:20 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ನಿಂದ ಹೊರಡಲಿದೆ ಮತ್ತು ಮರುದಿನ ಬೆಳಿಗ್ಗೆ 07:30 ಗಂಟೆಗೆ ಕಲಬುರಗಿಯನ್ನು ತಲುಪಲಿದೆ. ಮತ್ತೆ, ರೈಲು ಸಂಖ್ಯೆ 06208 ಕಲಬುರಗಿ – ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್ಪ್ರೆಸ್ ರೈಲು ನವೆಂಬರ್ 23, 2025 ರಿಂದ ಡಿಸೆಂಬರ್ 28, 2025 ರವರೆಗೆ ಪ್ರತಿ ಭಾನುವಾರದಂದು ಬೆಳಿಗ್ಗೆ 09:35 ಗಂಟೆಗೆ ಕಲಬುರಗಿಯಿಂದ ಹೊರಟು, ಅದೇ ದಿನ ರಾತ್ರಿ 08:30 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ. ಮಾರ್ಗದಲ್ಲಿ, ಈ ರೈಲು ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣ,…
ಚಾಮರಾಜನಗರ: ಗ್ರಾಮೀಣ ಭಾರತದ ಆರ್ಥಿಕ ಅಭಿವೃದ್ಧಿಗೆ ಪ್ರತೀ ಗ್ರಾಮದಲ್ಲಿ ಒಂದು ಶಾಲೆ, ಒಂದು ಗ್ರಾಮ ಪಂಚಾಯ್ತಿ, ಒಂದು ಸಹಕಾರ ಸಂಘ ಅತ್ಯಗತ್ಯ ಎನ್ನುವುದು ನೆಹರೂ ಅವರ ದೃಷ್ಟಿಯಾಗಿತ್ತು. ಇವರ ಈ ದೂರದೃಷ್ಟಿಯ ಕಾರಣಕ್ಕೆ ದೇಶದಲ್ಲಿ ಸಹಕಾರ ಚಳವಳಿ ಗಟ್ಟಿಯಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು. ಗುರುವಾರದಂದು 72ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ, ಸಮಾರೋಪ ಮಾತುಗಳನ್ನಾಡಿದ ಅವರು, ನೆಹರೂ ಅವರ ಈ ದೂರದೃಷ್ಟಿ ಕಾರಣಕ್ಕೆ ಅವರ ಜನ್ಮ ದಿನದಂದೇ ಪ್ರತೀ ವರ್ಷ ಸಹಕಾರ ಸಪ್ತಾಹ ಉದ್ಘಾಟನೆಯಾಗುತ್ತದೆ ಎಂದರು. ಇಂದು ರಾಜ್ಯದಲ್ಲಿ ಕೃಷಿ, ಹೈನುಗಾರಿಕೆ, ಕೈಗಾರಿಕೆ, ಬ್ಯಾಂಕಿಂಗ್ ಸೇರಿ ಹಲವಾರು ಕ್ಷೇತ್ರಗಳಲ್ಲಿ ಸಹಕಾರಿ ಚಳವಳಿ, ಸಹಕಾರಿ ಸಂಘಗಳು ಬೆಳೆಯುತ್ತಲೇ ಇವೆ. ಇದು ಆರೋಗ್ಯಕಾರಿ ಬೆಳವಣಿಗೆ ಎಂದರು. ನಾನು ಪಶು ಸಂಗೋಪನಾ ಸಚಿವನಾಗಿದ್ದಾಗ ಹಾಲು ಉತ್ಪಾದಕರ ಸಹಕಾರ ಸಂಘಗಳ ಸ್ವಾಯತ್ತತೆ ಮತ್ತು ಸ್ವಾವಲಂಭನೆಗೆ ಪೂರ್ಣ ಸಹಕಾರ ನೀಡಿದ್ದೆ. ಈಗ ಒಂದು ದಿನಕ್ಕೆ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ನಾನು ಹಾಲು ಉತ್ಪಾದಕರ…














