Author: kannadanewsnow09

ಬೆಂಗಳೂರು: ಬಿಬಿಎಂಪಿ ಶಾಲೆ ಮತ್ತು ಕಾಲೇಜುಗಳಿಗೆ ಎಸ್ ಡಿ ಎಂ ಸಿಯಿಂದ ಅತಿಥಿ ಶಿಕ್ಷಕರ ನೇಮಕವನ್ನು ಜೂನ್.16ರೊಳೆಗೆ ನಿಯೋಜನಿಸಿಕೊಳ್ಳುವಂತೆ ಬಿಬಿಎಂಪಿ ಆಯುಕ್ತರು ಸುತ್ತೋಲೆ ಹೊರಡಿಸಿ, ಸೂಚಿಸಿದ್ದಾರೆ. ಬಿಬಿಎಂಪಿ ಶಾಲೆ ಮತ್ತು ಕಾಲೇಜುಗಳಿಗೆ ಎಸ್‌ಡಿಎಂಸಿ ಮತ್ತು ಸಿಡಿಸಿ ಮೂಲಕ ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ಜೂನ್‌ 16ರೊಳಗೆ ನಿಯೋಜಿಸಿಕೊಳ್ಳಲು ಸೂಚಿಸಲಾಗಿದೆ. ಶಿಕ್ಷಣ ಇಲಾಖೆಯಿಂದ ಬೋಧಕ ಹುದ್ದೆಗಳಿಗೆ ಖಾಯಂ ಶಿಕ್ಷಕ, ಉಪನ್ಯಾಸಕರನ್ನು ನೇಮಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಈ ನೇಮಕವಾಗುವವರೆಗೆ ಅಥವಾ 2024-25ನೇ ಶೈಕ್ಷಣಿಕ ಸಾಲಿಗೆ ಬಿಬಿಎಂಪಿ ಶಾಲೆ ಮತ್ತು ಕಾಲೇಜುಗಳಲ್ಲಿರುವ ಎಸ್‌ಡಿಎಂಸಿ ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿಯಿಂದ ಅತಿಥಿ ಶಿಕ್ಷಕರು, ಉಪನ್ಯಾಸಕರನ್ನು ನಿಯೋಜಿಸಿಕೊಳ್ಳಬೇಕು ಎಂದು ಬಿಬಿಎಂಪಿ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. https://kannadanewsnow.com/kannada/the-secret-to-jioairfibers-lightning-speed-is-its-independent-5g-technology-open-signal/ https://kannadanewsnow.com/kannada/kea-has-released-the-revised-mark-sheet-of-the-written-examination-held-for-the-recruitment-of-vacancies-in-various-corporations/

Read More

ನವದೆಹಲಿ : ಜಗತ್ತಿನ ಖ್ಯಾತ ಮೊಬೈಲ್ ನೆಟ್‌ವರ್ಕ್ ಅನಲಿಟಿಕ್ಸ್ ಕಂಪನಿ ‘ಓಪನ್‌ಸಿಗ್ನಲ್’ ವರದಿಯೊಂದನ್ನು ನೀಡಿದ್ದು, ಜಿಯೋದ ಸ್ವತಂತ್ರ 5ಜಿ ನೆಟ್‌ವರ್ಕ್‌ನಿಂದಾಗಿ ಜಿಯೋ ಏರ್ ಫೈಬರ್ ತನ್ನ ಗ್ರಾಹಕರಿಗೆ ಅತ್ಯುತ್ತಮ ವೇಗದಲ್ಲಿ ಡೇಟಾವನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದೆ. ಜಿಯೋದ ಸ್ಥಿರ ವೈರ್‌ಲೆಸ್ ಸೇವೆಯ ಗ್ರಾಹಕರು, ಅಂದರೆ ಜಿಯೋ ಏರ್ ಫೈಬರ್ ಗ್ರಾಹಕರು ತಿಂಗಳಿಗೆ ಸರಾಸರಿ 400 ಜಿಬಿ ಡೇಟಾವನ್ನು ಬಳಸುತ್ತಾರೆ ಎಂದು ಓಪನ್ ಸಿಗ್ನಲ್ ಅಭಿಪ್ರಾಯ ಪಟ್ಟಿದೆ. ಅಂದ ಹಾಗೆ ಈ ಬಳಕೆ ಪ್ರಮಾಣ ಮೊಬೈಲ್ ಗ್ರಾಹಕರಿಗಿಂತ ಹೆಚ್ಚು. ಇದರ ಹೊರತಾಗಿಯೂ ಜಿಯೋ ಏರ್ ಫೈಬರ್‌ನ ವೇಗ ಮತ್ತು ಗುಣಮಟ್ಟದ ಸ್ಕೋರ್ 5ಜಿ ಮೊಬೈಲ್ ನೆಟ್‌ವರ್ಕ್‌ನಂತೆಯೇ ಉಳಿದಿದೆ. ಜಿಯೋದ 5ಜಿ ನೆಟ್‌ವರ್ಕ್‌ನ ವೇಗವು ದೇಶದಲ್ಲಿಯೇ ಅತ್ಯಧಿಕವಾಗಿದೆ ಎಂದು ತಿಳಿಸಲಾಗಿದೆ. ಭಾರತದ ‘ಸ್ಥಿರ ವೈರ್‌ಲೆಸ್ ಸೇವೆಗಳಲ್ಲಿ’ ರಿಲಯನ್ಸ್ ಜಿಯೋ ಮಾತ್ರ ಸದ್ಯಕ್ಕೆ ಸ್ವತಂತ್ರ 5ಜಿ ನೆಟ್‌ವರ್ಕ್ ಅನ್ನು ಬಳಸುತ್ತಿದೆ. ಓಪನ್ ಸಿಗ್ನಲ್ ಪ್ರಕಾರ, ಸ್ವತಂತ್ರ 5ಜಿ ಜೊತೆಗೆ ನೆಟ್‌ವರ್ಕ್ ಸ್ಲೈಸಿಂಗ್ ತಂತ್ರಜ್ಞಾನವು ಜಿಯೋ…

Read More

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕಿಯೋನಿಕ್ಸ್ ಸೇರಿದಂತೆ ವಿವಿಧ ನಿಗಮಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ನಡೆದಂತ ಲಿಖಿತ ಪರೀಕ್ಷೆಯ ಪರಿಷ್ಕೃತ ಅಂಕಪಟ್ಟಿಯನ್ನು ಪ್ರಕಟಿಸಲಾಗಿದೆ. ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ (ಕಿಯೊನಿಕ್ಸ್‌) ಸೇರಿದಂತೆ ವಿವಿಧ ನಿಗಮಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ನಡೆಸಿದ್ದ ಲಿಖಿತ ಪರೀಕ್ಷೆಯ ಪರಿಷ್ಕೃತ ಅಂಕಗಳ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತನ್ನ ವೆಬ್ ಸೈಟ್ https://kea.kar.nic.in ನಲ್ಲಿ ಪ್ರಕಟಿಸಿದೆ. ಆರು ನಿಗಮ ಮಂಡಳಿಗಳ ವಿವಿಧ ವೃಂದದ ಹುದ್ದೆಗಳ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ 6,18,148 ಅಭ್ಯರ್ಥಿಗಳು ಪಡೆದ ಅಂಕಗಳ ಹುದ್ದೆವಾರು ಪರಿಷ್ಕೃತ ಅಂಕಗಳನ್ನು ಪಟ್ಟಿ ಒಳಗೊಂಡಿದೆ. ಪರಿಷ್ಕೃತ ಅಂಕಪಟ್ಟಿಗೆ ಆಕ್ಷೇಪಣೆಗಳನ್ನು ಜೂನ್‌ 14ರ ಒಳಗೆ ಇ-ಮೇಲ್‌ kea2023exam@gmail.com ಸಲ್ಲಿಸಬಹುದಾಗಿದೆ. https://kannadanewsnow.com/kannada/valmiki-development-corporation-irregularities-kannadigas-write-to-telangana-cm-revanth-reddy/ https://kannadanewsnow.com/kannada/after-ndas-victory-bhupa-cut-off-his-finger-and-offered-it-to-god/

Read More

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅವ್ಯವಹಾರ ಅಕ್ರಮ ಪ್ರಕರಣ ಸಂಬಂಧ ತೆಲಂಗಾಣ ಮುಖ್ಯಮಂತ್ರಿಯ ಹೆಸರು ತಳುಕು ಹಾಕಿತ್ತು. ಹೀಗಾಗಿ ಈ ಪ್ರಕರಣ ಕನ್ನಡಿಗರು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಜೆಡಿಎಸ್ ಪಕ್ಷವು, ಗುಂಡಿಗೆ ಹೋದ ಹೆಣ, ಕಾಂಗ್ರೆಸ್ ಪಕ್ಷ ನುಂಗಿದ ಹಣ ಎಂದಿಗೂ ವಾಪಸ್ ಬರುವುದಿಲ್ಲ ಎಂಬುದು ತಿಳಿದಿದ್ದರೂ, ಕೊನೆ ಪ್ರಯತ್ನವಾಗಿ ತೆಲಂಗಾಣದ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರಿಗೆ ಕನ್ನಡಿಗರು ಪತ್ರ ಬರೆದಿದ್ದಾರೆ ಅಂತ ತಿಳಿಸಿದೆ. https://twitter.com/JanataDal_S/status/1799386632732414268 ಕನ್ನಡಿಗರು ಬರೆದ ಪತ್ರದಲ್ಲಿ ಏನಿದೆ.? ಕರ್ನಾಟಕದ ವಾಲ್ಮೀಕಿ ಸಮುದಾಯಕ್ಕೆ ಸೇರಬೇಕಾಗಿದ್ದ ಸುಮಾರು 7187 ಕೋಟಿ ಹಣವನ್ನು ನಿಮ್ಮ ನಾಯಕ ರಾಹುಲ್ ಗಾಂಧಿ ಅವರ ಅಣತಿಯಂತೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ, ಸಚಿವ ನಾಗೇಂದ್ರ ಅವರ ಮೂಲಕ ತೆಲಂಗಾಣದ ಕಾಂಗ್ರೆಸ್ ಚುನಾವಣಾ ಖರ್ಚಿಗೆ ಸಾಗಿಸಿದ್ದಾರೆ. ನಿಮ್ಮಲ್ಲಿ ಕನ್ನಡಿಗರು ಕೇಳಿಕೊಳ್ಳುವುದೇನೆಂದರೆ ನಮ್ಮ ರಾಜ್ಯಕ್ಕೆ ಸೇರಬೇಕಾಗಿದ್ದ ಹಣವನ್ನು ದಯಮಾಡಿ ಹಿಂತಿರುಗಿಸಿ ಕೊಡಿ.…

Read More

ಬೆಂಗಳೂರು: ಹಾಸನ ಅಶ್ಲೀಲ ಪೆನ್ ಡ್ರೈವ್ ಹಂಚಿಕೆ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ಕಾರ್ತಿಕ್ ಗೌಡ ಎಂಬಾತನನ್ನು ಎಸ್ಐಟಿ ಬಂಧಿಸಿದೆ. ಹಾಸನ ಅಶ್ಲೀಲ ಪೆನ್ ಡ್ರೈವ್ ಹಂಚಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ವಹಿಸಿತ್ತು. ಈ ಪ್ರಕರಣದಲ್ಲಿ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕೂಡ ಬಂಧನಕ್ಕೊಳಾಗಿ ಎಸ್ಐಟಿ ಕಸ್ಟಡಿಯಲ್ಲಿದ್ದಾರೆ. ಇದೀಗ ಬಂಧಿತ ಆರೋಪಿ ವಕೀಲ ದೇವರಾಜೇಗೌಡ ಅವರು ನೀಡಿದಂತ ಸುಳಿವಿನ ಮೇರೆಗೆ ಹಾಸನ ಪೆನ್ ಡ್ರೈವ್ ವೈರಲ್ ಪ್ರಕರಣದಲ್ಲಿ ಆರೋಪಿ ಕಾರ್ತಿಕ್ ಗೌಡ ಎಂಬಾತನನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ. https://kannadanewsnow.com/kannada/chandan-shetty-and-nivedita-can-come-together-if-actor-dhruva-sarja-intervenes-pratham/ https://kannadanewsnow.com/kannada/after-ndas-victory-bhupa-cut-off-his-finger-and-offered-it-to-god/

Read More

ಮಂಡ್ಯ: ಸ್ಯಾಂಡಲ್ ವುಡ್ ರ್ಯಾಪ್ ಹಾಡುಗಾರ ಚಂದನ್ ಶೆಟ್ಟಿ ಹಾಗೂ ನಿವೇದಿತಾ ವಿವಾಹ ವಿಚ್ಛೇದನ ಪಡೆದಿದ್ದಾರೆ. ದಾಂಪತ್ಯ ಜೀವನದಲ್ಲಿ ಕೇವಲ 4 ವರ್ಷಗಳಲ್ಲೇ ಬಿರುಕುಗೊಂಡಿದೆ. ಆದ್ರೇ ಅವರಿಬ್ಬರನ್ನು ನಟ ಧ್ರುವ ಸರ್ಜಾ ಮಧ್ಯಸ್ಥಿಕೆ ವಹಿಸಿದ್ರೇ ಒಂದಾಗಿಸಬಹುದು ಅಂತ ಬಿಗ್ ಬಾಸ್ ವಿನ್ನರ್ ಪ್ರಥಮ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಡಿವೋರ್ಸ್ ಆದ ಮಾತ್ರಕ್ಕೆ ಅವರೇನು ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಆಗಲ್ಲ. ಒಂದು ಶೋ ಮುಖ್ಯವಲ್ಲ. ಜೀವನ ಮುಖ್ಯ. ಚೆನ್ನಾಗಿ ಬದುಕಬೇಕು. ಕೇರಿಯರ್ ಬಗ್ಗೆ ಯೋಚಿಸಿ ಯಾರೂ ಮದುವೆ ಆಗಲ್ಲ. ಎಲ್ಲವನ್ನು ಯೋಚಿಸೇ ಮದುವೆ ಆಗ್ತಾರೆ. ಚೆಂದನ್ ಶೆಟ್ಟಿ-ನಿವೇದಿತಾದು ಸುಂದರವಾದ ಬದುಕು. ಇಬ್ಬರು ಚೆನ್ನಾಗಿ ಬದುಕಬೇಕು ಅಂತ ಹೇಳಿದ್ರು. ನಟ ಧ್ರುವ ಸರ್ಜಾ ಮಾತನ್ನು ಚಂದನ್ ಶೆಟ್ಟಿ ಕೇಳುತ್ತಾರೆ. ಚಂದನ್ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್ ವಿಚಾರದಲ್ಲಿ ಧ್ರುವ ಸರ್ಜಾ ಮಧ್ಯಸ್ಥಿಕೆ ವಹಿಸಬೇಕು. ಅವರ ದಾಂಪತ್ಯವನ್ನು ಮತ್ತೆ ಒಂದಾಗಿಸೋ ಕೆಲಸವನ್ನು ಮಾಡಬೇಕು. ಧ್ರುವ ಸರ್ಜಾ ಚಂದನ್ ಗೆ ಒಳ್ಳೇದಾಗಲಿ ಅಂತ ಪೊಗರು…

Read More

ಬೆಂಗಳೂರು: ಒಂದು ವೇಳೆ ನನ್ನ ಕಚೇರಿಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಯ ಸಾಕ್ಷ್ಯಾ ನಾಶಗಳ ಕುರಿತಾಗಿ ನಾನು ಯಾವುದಾದರೂ ವ್ಯಕ್ತಿಗಳ ಜೊತೆ ಸಭೆ ನಡೆಸಿದ್ದರೆ ಮುಕ್ತ ಮತ್ತು ನ್ಯಾಯಸಮ್ಮತ ತನಿಖೆಗೆ ಸಿದ್ಧನಿದ್ದೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಬಹಿರಂಗ ಸವಾಲು ಹಾಕಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣ ಕುರಿತಾಗಿ ತನಿಖೆ ನಡೆಸುತ್ತಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿದರು. ಮೇ 24ರಂದು ಬೆಂಗಳೂರಿನ ವಿಕಾಸಸೌಧದ ನನ್ನ ಕಚೇರಿಯಲ್ಲಿ ನಾನು, ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷ ಬಸವರಾಜ್ ದದ್ದಲ್ ಸೇರಿದಂತೆ ಕೆಲವರು ಸಭೆ ನಡೆಸಿ ಸಾಕ್ಷ್ಯಾ ನಾಶ ಮಾಡಿದ್ದೇನೆ ಆರೋಪ ಕೇಳಿಬಂದಿದೆ. ವಾಸ್ತವವಾಗಿ ಮೇ 24ರಂದು ಲೋಕಸಭಾ ಕ್ಷೇತ್ರದ ಹಿನ್ನೆಲೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಕಚೇರಿಗೆ ಭೇಟಿ ನೀಡಿರಲಿಲ್ಲ. ಆದರೂ ನಾನು ಕಚೇರಿಯಲ್ಲಿ ಇದ್ದರೆ ಎಂದರೆ, ಇದಕ್ಕಿಂತ ಅಪಹಾಸ್ಯ ಇನ್ನೇನಿದೆ ಎಂದು ತಮ್ಮ ಮೇಲಿನ ಆರೋಪಗಳನ್ನು ಸಾರಸಗಟಾಗಿ ತಳ್ಳಿ ಹಾಕಿದರು. ಯಾವುದೇ…

Read More

ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (Congress Working Committee -CWC) ಶನಿವಾರ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ( Rahul Gandhi ) ಅವರನ್ನು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನನ್ನಾಗಿ ಮಾಡುವ ನಿರ್ಣಯವನ್ನು ಅಂಗೀಕರಿಸಿದೆ. ಇತ್ತೀಚೆಗೆ ಮುಕ್ತಾಯಗೊಂಡ ಸಾರ್ವತ್ರಿಕ ಚುನಾವಣೆಯಲ್ಲಿ ರಾಹುಲ್ ಗಾಂಧಿ ಕೇರಳದ ವಯನಾಡ್ ಮತ್ತು ಉತ್ತರ ಪ್ರದೇಶದ ರಾಯ್ ಬರೇಲಿ ಸ್ಥಾನವನ್ನು ಗೆದ್ದಿದ್ದಾರೆ. ಹಳೆಯ ಪಕ್ಷವು ತನ್ನ ಪ್ರಮುಖ ಕಾರ್ಯಕಾರಿ ಸಮಿತಿ ಸಭೆಯನ್ನು ಶನಿವಾರ ನಡೆಸಿತು. ನಂತರ ಸಂಜೆ, ಕಾಂಗ್ರೆಸ್ ಪಕ್ಷವು ಹೊಸದಾಗಿ ಆಯ್ಕೆಯಾದ ಲೋಕಸಭಾ ಸಂಸದರು ಮತ್ತು ರಾಜ್ಯಸಭಾ ಸಂಸದರ ಸಭೆಯನ್ನು ಕರೆಯಲಿದೆ. ಸಿಡಬ್ಲ್ಯುಸಿ ಸಭೆಯ ನಂತರ ಎಎನ್ಐಗೆ ಮಾತನಾಡಿದ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರ್ರಿಂಗ್, “ನಾವೆಲ್ಲರೂ ರಾಹುಲ್ ಗಾಂಧಿಗೆ ವಿರೋಧ ಪಕ್ಷದ ನಾಯಕನಾಗಲು ಮನವಿ ಮಾಡಿದ್ದೇವೆ. ಪ್ರಧಾನಿಯನ್ನು ಎದುರಿಸಬಲ್ಲ ಏಕೈಕ ವ್ಯಕ್ತಿ ಅವರು. ರಾಹುಲ್ ಗಾಂಧಿ ಎದ್ದು ನಿಂತಾಗ, ದೇಶದ ಯುವಕರು ಸುರಕ್ಷಿತವಾಗಿರುತ್ತಾರೆ… ಪಂಜಾಬ್ನಲ್ಲಿ ಎಎಪಿಯೊಂದಿಗೆ ಮೈತ್ರಿಯನ್ನು ನಾವು ಎಂದಿಗೂ…

Read More

ಹಾವೇರಿ: ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯಿಂದಾಗಿ ಐದು ಅಂಗಡಿಗಳು ಸುಟ್ಟು ಭಸ್ಮವಾಗಿರುವಂತ ಘಟನೆ ಹಾವೇರಿಯ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ, ಐದಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಹೋಗಿದ್ದಾವೆ. ಚಿಕ್ಕೇರೂರು ಗ್ರಾಮದಲ್ಲಿನ ಎಲೆಕ್ಟ್ರಿಕ್ ಅಂಗಡಿ, ಬೇಕರಿ, ಬೊಂಬೆ ಅಂಗಡಿ, ಪೂಟ್ ವೇರ್ ಹಾಗೂ ಹೋಟೆಲ್ ಆಕಸ್ಮಿಕ ಬೆಂಕಿಯಿಂದಾಗಿ ಸುಟ್ಟು ಭಸ್ಮವಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸೋ ಕಾರ್ಯದಲ್ಲಿ ತೊಡಗಿದ್ದಾರೆ. ಈ ಆಕಸ್ಮಿಕ ಅಗ್ನಿ ಅವಗಢದಲ್ಲಿ ಸುಮಾರು 30 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದ್ದಾವೆ. ಬೆಂಕಿ ಅವಘಡಕ್ಕೆ ಕಾರಣ ಏನು ಅಂತ ತನಿಖೆಯ ನಂತ್ರ ಸ್ಪಷ್ಟವಾಗಿ ತಿಳಿಯಲಿದೆ. https://kannadanewsnow.com/kannada/neet-ug-2024-govt-sets-panel-to-re-examine-results-of-over-1500-students-awarded-grace-marks-says-nta/ https://kannadanewsnow.com/kannada/rahul-gandhi-elected-leader-of-opposition-in-lok-sabha-congress-passes-resolution-at-cwc-meeting/

Read More

ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್-ಯುಜಿ 2024 ರಲ್ಲಿ ಗ್ರೇಸ್ ಅಂಕಗಳನ್ನು ಪಡೆದ 1,500 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಫಲಿತಾಂಶಗಳನ್ನು ಮರುಪರಿಶೀಲಿಸಲು ಶಿಕ್ಷಣ ಸಚಿವಾಲಯವು ಸಮಿತಿಯನ್ನು ರಚಿಸಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಶನಿವಾರ ತಿಳಿಸಿದೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎನ್ಟಿಎ ಡಿಜಿ ಸುಬೋಧ್ ಸಿಂಗ್, ನೀಟ್-ಯುಜಿ ಗ್ರೇಸ್ ಅಂಕಗಳ ವಿಷಯವನ್ನು ಪರಿಶೀಲಿಸುವ ಸಮಿತಿಯು ಒಂದು ವಾರದೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಮಾಹಿತಿ ನೀಡಿದರು. ನೀಟ್-ಯುಜಿಯಲ್ಲಿ ಗ್ರೇಸ್ ಅಂಕಗಳೊಂದಿಗೆ ಪರಿಹಾರವು ಅರ್ಹತಾ ಮಾನದಂಡಗಳ ಮೇಲೆ ಪರಿಣಾಮ ಬೀರಿಲ್ಲ ಎಂದು ಅಂಕಗಳ ಹಣದುಬ್ಬರ ವಿವಾದದ ಬಗ್ಗೆ ಎನ್ಟಿಎ ಡಿಜಿ ಸುಬೋಧ್ ಸಿಂಗ್ ಹೇಳಿದರು. ಗ್ರೇಸ್ ಅಂಕಗಳನ್ನು ಪಡೆದ ನೀಟ್ ಅಭ್ಯರ್ಥಿಗಳ ಫಲಿತಾಂಶವನ್ನು ಪರಿಷ್ಕರಿಸಬಹುದು. ಪ್ರವೇಶ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು. “ನಾವು ಎಲ್ಲಾ ವಿಷಯಗಳನ್ನು ಪಾರದರ್ಶಕವಾಗಿ ವಿಶ್ಲೇಷಿಸಿದ್ದೇವೆ ಮತ್ತು ಫಲಿತಾಂಶಗಳನ್ನು ಘೋಷಿಸಿದ್ದೇವೆ. 4,750 ಕೇಂದ್ರಗಳ ಪೈಕಿ 6 ಕೇಂದ್ರಗಳಿಗೆ ಮಾತ್ರ ಸಮಸ್ಯೆ ಸೀಮಿತವಾಗಿದ್ದು, 24 ಲಕ್ಷ ಅಭ್ಯರ್ಥಿಗಳಲ್ಲಿ ಕೇವಲ…

Read More