Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ನಗರದಲ್ಲಿ ಇಂದು ಸುರಿದಂತೆ ಜೋರು ಗಾಳಿ ಸಹಿತ ಮಳೆಯಿಂದಾಗಿ ಹಲವೆಡೆ ಮರಗಳು ಮುರಿದು ಬಿದ್ದಿವೆ. ಅಲ್ಲದೇ ಮರಗಳ ಕೆಳಗೆ ನಿಲ್ಲಿಸಲಾಗಿದ್ದಂತ ವಾಹನಗಳು ಜಖಂಗೊಂಡಿದ್ದಾವೆ. ಹಾಗಾದ್ರೇ ಇಂದು ಜೋರು ಗಾಳಿ, ಮಳೆಗೆ ಬಿದ್ದ ಮರಗಳು, ಜಖಂಗೊಂಡ ವಾಹನಗಳು ಎಷ್ಟು ಅಂತ ಮುಂದೆ ಓದಿ. ಬೆಂಗಳೂರು ನಗರದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ದಿನಾಂಕ: 27.07.2024ರಂದು ಗಾಳಿಯ ರಭಸಕ್ಕೆ ಈ ಕೆಳಕಂಡ ಸ್ಥಳಗಳಲ್ಲಿ ಮರ / ರೆಂಬೆ ಕೊಂಬೆಗಳು ರಸ್ತೆಗೆ ಮುರಿದು ಬಿದ್ದಿದ್ದು, ಅದರ ವಿವರ ಈ ಕೆಳಕಂಡಂತಿರುತ್ತದೆ. 1. ರೆಸಿಡೆನ್ಸಿ ರಸ್ತೆ ಬಳಿ ಮರ ಬಿದ್ದಿರುವ ಬಗ್ಗೆ: ಬೆಂಗಳೂರು ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ಮೆಹಕ್ ಪರ್ಫ್ಯೂಮ್ಸ್ ಅಂಡ್ ಅಕ್ಸೆಸರೀಸ್, ರಾಡೋ ಸರ್ವೀಸ್ ಸೆಂಟರ್, ನಂ. 101, ನಿವಾರಣಾ ಕಟ್ಟಡ, ರಿಚ್ಮಂಡ್ ರಸ್ತೆ, ರಿಚ್ಮಂಡ್ ವೃತ್ತ, ಬೆಂಗಳೂರು 560025 ಇಲ್ಲಿ ನಿವೇಶನದ ಒಳಭಾಗದಲ್ಲಿ ಬೆಳೆದಿದ್ದ ಗುಲ್ಮರ್ ಮರವು ದಿನಾಂಕ: 27.07.2024ರಂದು ಗಾಳಿಯ ರಭಸಕ್ಕೆ ರಸ್ತೆಯಲ್ಲಿ ಸಂಚರಿಸುತ್ತಿದ್ದು ಆಟೋ ರಿಕ್ಷಾ ಸಂಖ್ಯೆ: KA…
ಉಜಿರೆ : ನೀವು ಮಾಡುವ ಸ್ವ ಉದ್ಯೋಗದಿಂದ ಇತರಿಗೆ ಉದ್ಯೋಗ ನೀಡುವುದರ ಮೂಲಕ ನಿಮ್ಮ ಉದ್ಯಮಕ್ಕೆ ನೀವೇ ಬಾಸ್ ಆಗುತ್ತೀರಿ. ಸರಕಾರ ಮತ್ತು ಬ್ಯಾಂಕಿನಿಂದ ಆರ್ಥಿಕ ನೆರವು ಪಡೆದುಕೊಂಡ ಕೃಷಿಯನ್ನು ಒಂದು ಉದ್ಯಮವನ್ನಾಗಿ ಮಾಡಲು ತುಂಬಾ ಅವಕಾಶ ಇದೆ. ಕೃಷಿ ಚಟುವಟಿಕೆಗೆ ಬ್ಯಾಂಕ್ ಇವತ್ತು ಕಡಿಮೆ ಬಡ್ಡಿ ದರದಲ್ಲಿ ಬೇಕಾದಷ್ಟು ಸಾಲ ನೀಡುತ್ತದೆ. ಅದರ ಸದುಪಯೋಗ ಮಾಡಿಕೊಂಡು ನೀವು ಕೃಷಿ ಉದ್ಯಮಿಯಾಗಿ ಜೊತೆಗೆ ಇತರರನ್ನು ಸಹ ಬ್ಯಾಂಕಿನ ನೆರವು ಪಡೆದುಕೊಳ್ಳುವಂತೆ ಪ್ರೇರಣೆ ನೀಡಿ ಎಂದು ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಛೇರಿಯ ಮಾಹಾ ಪ್ರಬಂಧಕರಾದ ಸುಧಾಕರ ಕೊಟ್ಟಾರಿ ಅಭಿಪ್ರಾಯ ಪಟ್ಟರು. ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 13 ದಿನಗಳ ಕಾಲ ನಡೆದೆ ಕೃಷಿ ಉದ್ಯಮಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ಮತ್ತು ಕೆನರಾ ಬ್ಯಾಂಕಿನಲ್ಲಿ ಹೊಸತಾಗಿ ಆರಂಭಿಸಿದ ಜನಧನ್ ಖಾತೆ ಹಾಗೂ ಕೆನರಾ ಏಂಜಲ್ ಖಾತೆಯ ಪುಸ್ತಕ, ವಿತ್ತರಿಸಿ ಮಾತನಾಡಿದರು. ಸ್ವ ಉದ್ಯೋಗ ನಮ್ಮ ಹೆಮ್ಮೆಯ ವೃತ್ತಿ ಯಾಗಬೇಕು. ಪಡೆದ…
ಬೆಂಗಳೂರು: ದ್ವಿತೀಯ PU ಪರೀಕ್ಷೆ-3ರಲ್ಲಿ ಉತ್ತೀರ್ಣರಾದವರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. ಅದೇ ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಪರಿಗಣನೆಯಿಲ್ಲ ಎಂಬುದಾಗಿದೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮಾಹಿತಿ ಹಂಚಿಕೊಂಡಿದ್ದು, ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಏಕಕಾಲಕ್ಕೆ ಸೀಟು ಹಂಚಿಕೆ ಮಾಡಲಾಗುತ್ತದೆ ಅಂತ ತಿಳಿಸಿದೆ. ಇದಲ್ಲದೇ ದ್ವಿತೀಯ ಪಿಯುಸಿ ಪರೀಕ್ಷೆ-3ರಲ್ಲಿ ಉತ್ತೀರ್ಣರಾದವರಿಗೆ ಬಿಗ್ ಶಾಕ್ ಎನ್ನುವಂತೆ ಎಂಜಿನಯರಿಂದ್, ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸೀಟು ಹಂಚಿಕೆಯಲ್ಲಿ ಪರಿಗಣಿಸಲಾಗುವುದಿಲ್ಲ ಅಂತ ಸ್ಪಷಟ ಪಡಿಸಿದೆ. https://twitter.com/KarnatakaVarthe/status/1816817337552560401 https://kannadanewsnow.com/kannada/railway-passengers-these-trains-to-be-cancelled-tomorrow-tomorrow/ https://kannadanewsnow.com/kannada/ban-on-tourists-visiting-muttatti-tourist-spot/
ಬೆಂಗಳೂರು: ವಿವಿಧ ಕಾರಣಗಳಿಂದಾಗಿ ನಾಳೆ, ನಾಡಿದ್ದು ಕೆಲ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಜುಲೈ.28ರ ನಾಳೆ 13 ರೈಲು, ಜುಲೈ.29ರ ನಾಡಿದ್ದು 4 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಈ ಕುರಿತಂತೆ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದಿಂದ ಮಾಹಿತಿ ನೀಡಲಾಗಿದ್ದು, ದಿನಾಂಕ 28-07-2024ರಂದು 13 ರೈಲುಗಳು ಹಾಗೂ ದಿನಾಂಕ 29-07-2024ರಂದು 4 ರೈಲುಗಳ ಸಂಚಾರವನ್ನು ರದ್ದುಪಡಿಸಲಾಗುತ್ತಿದೆ ಅಂತ ತಿಳಿಸಿದೆ. ದಿನಾಂಕ 28-07-2024ರಂದು ಈ ರೈಲುಗಳ ಸಂಚಾರ ರದ್ದು ರೈಲು ಸಂಖ್ಯೆ 16540 – ಮಂಗಳೂರು ಜಂಕ್ಷನ್ ಟು ಯಶವಂತಪುರ ರೈಲು ಸಂಖ್ಯೆ 07377 – ವಿಜಯಪುರ – ಮಂಗಳೂರು ಸೆಂಟ್ರಲ್ ರೈಲು ಸಂಖ್ಯೆ 06567 – ಎಸ್ ಎಂ ವಿ ಟಿ ಬೆಂಗಳೂರು ಟು ಕಾರವಾರ ರೈಲು ಸಂಖ್ಯೆ 06568 – ಕಾರವಾರ ಟು ಎಸ್ ಎಂ ವಿ ಟಿ ಬೆಂಗಳೂರು ರೈಲು ಸಂಖ್ಯೆ 16585 – ಎಸ್ ಎಂ ವಿಟಿ ಬೆಂಗಳೂರು ಟು ಮುರುಡೇಶ್ವರ್ ರೈಲು ಸಂಖ್ಯೆ 16586 – ಮುರುಡೇಶ್ವರ ಟು…
ಬೆಂಗಳೂರು: ನಗರದ ಕೋರಮಂಗಲದಲ್ಲಿದ್ದಂತ ಪಿಜಿಯಲ್ಲಿ ಯುವತಿಯೊಬ್ಬಳನ್ನು ವಿಕೃತ ಪ್ರೇಮಿಯೊಬ್ಬ ಚಾಕುವಿನಿಂದ ಚುಚ್ಚಿ ಇರಿದು ಕೊಂದಿದ್ದನು. ಕೃತ್ಯವೆಸಗಿ ಮಧ್ಯಪ್ರದೇಶಕ್ಕೆ ಪರಾರಿಯಾಗಿದ್ದಂತ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಈ ಆರೋಪಿಗೆ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ. ಬೆಂಗಳೂರಿನ ಕೋರಮಂಗಲದಲ್ಲಿನ ಪಿಜಿಯಲ್ಲಿ ಕೃತಿ ಕುಮಾರಿ ಎಂಬ ಯುವತಿಯನ್ನು ಪ್ರಿಯಕರ ಅಭಿಷೇಕ್ ಎಂಬಾತ, ಪಿಜಿಗೆ ನುಗ್ಗಿ ಚಾಕುವಿನಿಂದ ಇರಿದು ಹತ್ಯೆಗೈದು ಪರಾರಿಯಾಗಿದ್ದರು. ಈ ಕೃತ್ಯ ಪಿಜಿಯಲ್ಲಿದ್ದಂತ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹತ್ಯೆಯ ಬಳಿಕ ಆರೋಪಿ ಅಭಿಷೇಕ್ ಮಧ್ಯಪ್ರದೇಶದ ರಾಯ್ ಸನ್ ಎಂಬಲ್ಲಿಗೆ ಪರಾರಿಯಾಗಿದ್ದನು. ಪ್ರಕರಣ ದಾಖಲಿಸಿಕೊಂಡಿದ್ದಂತ ಕೋರಮಂಗಲ ಠಾಣೆಯ ಪೊಲೀಸರು ಮಧ್ಯಪ್ರದೇಶಕ್ಕೆ ತೆರಳಿ, ಆರೋಪಿ ಅಭಿಷೇಕ್ ಎಂಬಾತನನ್ನು ಬಂಧಿಸಿದ್ದರು. ಬಂಧಿತ ಆರೋಪಿಯನ್ನು ಬೆಂಗಳೂರಿನ 41ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಿದ್ದರು. ಅಲ್ಲದೇ ಕೋರ್ಟ್ ಗೆ ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸೋದಕ್ಕೆ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿದಂತ ನ್ಯಾಯಾಲಯವು, ಆರೋಪಿ ಅಭಿಷೇಕ್ ನನ್ನು 10 ದಿನಗಳ ಕಾಲ ಪೊಲೀಸರ ಕಸ್ಟಡಿಗೆ…
ಬೆಂಗಳೂರಿನ ‘ಹೋಟೆಲ್, ಪಬ್, ಬಾರ್ & ರೆಸ್ಟೋರೆಂಟ್’ಗಳಿಗೆ BBMPಯಿಂದ ಹೊಸ ರೂಲ್ಸ್: ನಿಯಮ ಮೀರಿದ್ರೆ ಕೇಸ್ ಫಿಕ್ಸ್
ಬೆಂಗಳೂರು: ನಗರದಲ್ಲಿನ ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್ ಹಾಗೂ ಕಾಫಿ ಬಾರ್ ಗಳಿಗೆ ಬಿಬಿಎಂಪಿಯಿಂದ ಹೊಸ ನಿಯಮ ಜಾರಿಗೊಳಿಸಲಾಗಿದೆ. ಒಂದು ವೇಳೆ ನಿಯಮ ಮೀರಿದ್ರೆ ಅಂತ ಮಾಲೀಕರ ವಿರುದ್ಧ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ. ಬಿಬಿಎಂಪಿಯಿಂದ ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಬಿಬಿಎಂಪಿ ವ್ಯಾಪ್ತಿಯ ಬಾರ್, ಹೋಟೆಲ್, ಪಬ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಧೂಮಪಾನ ವಲಯ ಮಾಡದ ಕಾರಣ, ಸಾರ್ವಜನಿಕ ವಲಯದಲ್ಲಿ ಧೂಮಪಾನ ಮಾಡುತ್ತಿರುವುದು ಕಂಡು ಬಂದಿದೆ ಎಂದಿದೆ. ಸಾರ್ವಜನಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇಧಿಸಲಾಗಿದೆ. ಹೀಗಿದ್ದೂ ನಿಯಮ ಮೀರಿ ಧೂಮಪಾನ ಮಾಡುತ್ತಿರುವ ಬಗ್ಗೆ ದೂರುಗಳು ಕಂಡು ಬರುತ್ತಿದ್ದಾವೆ. ಈ ಹಿನ್ನಲೆಯಲ್ಲಿ ಈ ಕೆಳಕಂಡಂತೆ ಹೊಸ ನಿಯಮಗಳನ್ನು ಜಾರಿಗೊಳಿಸುತ್ತಿರುವುದಾಗಿ ಹೇಳಿದೆ. ಹೀಗಿದೆ ಹೊಸ ನಿಯಮಗಳು – ಬಾರ್, ರೆಸ್ಟೋರೆಂಟ್, ಪಬ್ ಗಳಲ್ಲಿ 30 ಕುರ್ಚಿ ಇದ್ದರೇ, 30 ಕೊಠಡಿಗಳಿಗಿಂತ ಮೇಲ್ಪಟ್ಟು ಇದ್ದರೇ ಅಂತಹ ಎಡೆಯಲ್ಲಿ ಧೂಮಪಾನ ವಲಯ ನಿಗದಿ ಕಡ್ಡಾಯ – ಧೂಮಪಾನ ವಲಯ ನಿರ್ಮಾಣ ಮಾಡಿ, ಆ ಸ್ಥಳದಲ್ಲಿ…
ಬೆಂಗಳೂರು: ಆಧುನಿಕ ಯುಗದಲ್ಲಿ ಮಾರ್ಡನ್ ಶಿಕ್ಷಣ ನೀಡುವುದು ನಮ್ಮ ಇಲಾಖೆ ಹಾಗೂ ಸರ್ಕಾರದ ಗುರಿಯಾಗಿದೆ. ಮುಂದಿನ ಹಂತದಲ್ಲಿ ರಾಜ್ಯದಲ್ಲಿ 18 ಸಾವಿರ ಅಂಗನವಾಡಿಯಲ್ಲಿ LKG ಮತ್ತು UKG ಆರಂಭ ಮಾಡಲಾಗುತ್ತದೆ ಎಂಬುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ವಿಧಾನ ಮಂಡಳದ ಇಡೀ ಸದನ ಮುಡಾ ಮತ್ತು ವಾಲ್ಮೀಕಿ ಹಗರಣದಲ್ಲಿ ಮುಳುಗಿದ ಸಂದರ್ಭದಲ್ಲಿ ಈ ರಾಜ್ಯದ ಬಡ ಮಕ್ಕಳಿಗೆ ಶೈಕ್ಷಣಿಕ ಶಕ್ತಿ ತುಂಬುವ, ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರುವ ಮಹತ್ಕಾರ್ಯವನ್ನು ತಮ್ಮ ಇಲಾಖೆಯ ಮೂಲಕ ಮಾಡಿದ್ದಾರೆ ಎಂದರು. ರಾಜಕೀಯ ಏನೇ ಇರಲಿ, ಇತ್ತೀಚಿನ ವರ್ಷಗಳಲ್ಲಿ ಸರಕಾರದಿಂದ ಸಮಾಜಕ್ಕೆ ಸಿಕ್ಕಿದ ಅತ್ಯಂತ ಉಪಯುಕ್ತವಾದ ಉಲ್ಲೇಖನೀಯ ಯೋಜನೆ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವ ನಿರ್ಣಯ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಉಸಿರಿಲ್ಲದ, ಹಸಿದ ಬಡ, ಮಧ್ಯಮ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣವೆಂಬುದು ಮರೀಚಿಕೆ ಎನ್ನುತ್ತಿರುವ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ತಾವು ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ. 1975ರಲ್ಲಿ, ಅಂದಿನ…
ಬೆಂಗಳೂರು: ನಗರದಲ್ಲಿ ಹಲವೆಡೆ ರಸ್ತೆ ಗುಂಡಿಗಳದ್ದೇ ದರ್ಬಾರ್. ವಾಹನ ಸವಾರರು ಸಂಚಾರಕ್ಕೂ ಸವಾಲು ಎದುರಿಸುವಂತೆ ಗುಂಡಿಗಳಿದ್ದಾವೆ. ಇದೀಗ ಬೆಂಗಳೂರಿನ ರಸ್ತೆ ಗುಂಡಿ ಗಮನಕ್ಕೆ ಮೊಬೈಲ್ ಅಪ್ಲಿಕೇಷನ್ ರಿಲೀಸ್ ಮಾಡಲಾಗಿದೆ. ಹೀಗಾಗಿ ಸಿಲಿಕಾನ್ ಸಿಟಿ ಶೀಘ್ರವೇ ಗುಂಡಿ ಮುಕ್ತವಾಗುವ ಸಾಧ್ಯತೆ ಇದೆ. “ಬ್ರ್ಯಾಂಡ್ ಬೆಂಗಳೂರು” ಪರಿಕಲ್ಪನೆ ಅಡಿ ಬೆಂಗಳೂರು ನಗರದ ಸರ್ವತೋಮುಖ ಅಭಿವೃದ್ಧಿ ಕುರಿತಂತೆ ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ ಶಿವಕುಮಾರ್ ರವರು ಇಂದು ವಿಧಾನಸೌಧದ ಕೊಠಡಿ ಸಂಖ್ಯೆ: 334 ಸಮ್ಮೇಳನ ಸಭಾಂಗಣದಲ್ಲಿ ಮಾನ್ಯ ಸಚಿವರು ಹಾಗೂ ಶಾಸಕರುಗಳೊಂದಿಗೆ ಸಭೆ ನಡೆಸಿದರು. ಇದೇ ವೇಳೆ “ಬ್ರ್ಯಾಂಡ್ ಬೆಂಗಳೂರು” ಕುರಿತ ಕಿರುಹೊತ್ತಿಗೆ ಹಾಗೂ ರಸ್ತೆ ಗುಂಡಿ ಗಮನ ಮೊಬೈಲ್ ಅಫ್ಲಿಕೇಷನ್ ಅನ್ನು ಅನಾವರಣಗೊಳಿಸಲಾಯಿತು. ಏನಿದು “ರಸ್ತೆ ಗುಂಡಿ ಗಮನ(Fix Pothole) – ಮೊಬೈಲ್ ಅಪ್ಲಿಕೇಷನ್? ನಗರದಲ್ಲಿ ರಸ್ತೆ ಗುಂಡಿಗಳನ್ನು ಪಾರದರ್ಶಕವಾಗಿ ಗುರುತಿಸಲು ಹಾಗೂ ನಿಗಧಿತ ಅವಧಿಯಲ್ಲಿ ದುರಸ್ಥಿಪಡಿಸಲು ಸುಲಲಿತ ತಂತ್ರಜ್ಞಾನವನ್ನು ಹೊಂದಿರುವ “ರಸ್ತೆ ಗುಂಡಿ ಗಮನ- ಮೊಬೈಲ್ ಅಪ್ಲಿಕೇಷನ್” ಅನ್ನು ಅನಾವರಣಗೊಳಿಸಲಾಗಿದೆ.…
ಜಮ್ಮು-ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ನಲ್ಲಿ ಕಾರು ಕಮರಿಗೆ ಬಿದ್ದ ಪರಿಣಾಮ 5 ಮಕ್ಕಳು ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಭೀಕರ ಅಪಘಾತವೊಂದು ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಸಿಮ್ಥಾನ್-ಕೊಕರ್ನಾಗ್ ರಸ್ತೆಯಲ್ಲಿ ವಾಹನವೊಂದು ಕಮರಿಗೆ ಬಿದ್ದ ಪರಿಣಾಮ ಐವರು ಮಕ್ಕಳು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದಾರೆ. ವಾಹನವು ಮಡ್ವಾ ಕಿಶ್ತ್ವಾರ್ ನಿಂದ ತೆರಳುತ್ತಿದ್ದಾಗ ಚಾಲಕ ತನ್ನ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾನೆ. ಈ ಪರಿಣಾಮ ಕಂದಕಕ್ಕೆ ಉರುಳಿ ಬಿದ್ದ ಕಾರಣ, ಭೀಕರ ಅಪಘಾತ ಸಂಭವಿಸಿ 8 ಮಂದಿ ದುರ್ಮರಣಹೊಂದಿದ್ದಾರೆ. https://kannadanewsnow.com/kannada/https-kannadanewsnow-com-kannada-14-year-old-girl-dies-of-dengue-in-kerala/ https://kannadanewsnow.com/kannada/ban-on-tourists-visiting-muttatti-tourist-spot/
ಶ್ರೀನಗರ : ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಕೊಕರ್ ನಾಗ್ ನ ದಕ್ಸುಮ್ ಪ್ರದೇಶದ ಬಳಿ ವಾಹನವೊಂದು ಉರುಳಿ ಬಿದ್ದ ಪರಿಣಾಮ ಇಬ್ಬರು ಅಪ್ರಾಪ್ತರು ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದಾರೆ. ಜೆಕೆ 03 ಎಚ್ 9017 ನೋಂದಣಿ ಸಂಖ್ಯೆಯನ್ನು ಹೊಂದಿರುವ ಸುಮೋ ವಾಹನವು ನಿಯಂತ್ರಣ ಕಳೆದುಕೊಂಡು ದಕ್ಷುಮ್ ಬಳಿ ರಸ್ತೆಗೆ ಉರುಳಿದೆ ಎಂದು ಅಧಿಕಾರಿಗಳು ಜಿಎನ್ಎಸ್ಗೆ ತಿಳಿಸಿದ್ದಾರೆ. ಈ ಘಟನೆಯಲ್ಲಿ 8 ಜನರು ಸಾವನ್ನಪ್ಪಿದ್ದಾರೆ. ವಾಹನವು 5 ಮಕ್ಕಳು, ಇಬ್ಬರು ಮಹಿಳೆಯರು ಮತ್ತು ಪುರುಷರೊಂದಿಗೆ ಕಿಶ್ತ್ವಾರ್ ನಿಂದ ಕೊಂಡೊಯ್ಯುತ್ತಿತ್ತು ಎಂಬುದಾಗಿ ತಿಳಿದು ಬಂದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. https://kannadanewsnow.com/kannada/14-year-old-girl-dies-of-dengue-in-kerala/ https://kannadanewsnow.com/kannada/https-kannadanewsnow-com-kannada-14-year-old-girl-dies-of-dengue-in-kerala/ https://kannadanewsnow.com/kannada/ban-on-tourists-visiting-muttatti-tourist-spot/