Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: “ದ್ವೇಷ ರಾಜಕಾರಣ ಎಂಬುದು ಅವರ (ಕೇಂದ್ರ ಸಚಿವ ಕುಮಾರಸ್ವಾಮಿ) ಡಿಎನ್ ಎ ಯಲ್ಲಿದೆ. ಕೇತಗಾನಹಳ್ಳಿ ಜಮೀನು ವಿಚಾರವಾಗಿ ಕೇಸ್ ದಾಖಲಿಸಿರುವುದು ಎಸ್.ಆರ್ ಹಿರೇಮಠ್ ಅವರು. ಕೋರ್ಟ್ ಆದೇಶದಂತೆ ಅಧಿಕಾರಿಗಳು ಕೆಲಸ ಮಾಡಿದ್ದು, ನಾವು ಹೇಗೆ ದ್ವೇಷ ರಾಜಕಾರಣ ಮಾಡಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು. ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯಿಸಿದರು. ಕೇಂದ್ರ ಸಚಿವ ಕುಮಾರಸ್ವಾಮಿ ಕೇತಗಾನಹಳ್ಳಿ ಜಮೀನು ಒತ್ತುವರಿ ತೆರವು ದ್ವೇಷದ ರಾಜಕಾರಣ ಎಂಬ ಆರೋಪದ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ನಾವು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇವಾ? ಈ ವಿಚಾರವಾಗಿ ಎಸ್.ಆರ್ ಹಿರೇಮಠ್ ಅವರು ಪ್ರಕರಣ ದಾಖಲಿಸಿದ್ದಾರೆ. ನನ್ನ ಮೇಲೂ ಹಿರೇಮಠ್ ಅವರು ಅನೇಕ ಕೇಸ್ ದಾಖಲಿಸಿದ್ದರು. ಅವರ ಅರ್ಜಿ ಮೇರೆಗೆ ನ್ಯಾಯಾಲಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಅಧಿಕಾರಿಗಳು ಕೋರ್ಟ್ ಆದೇಶದಂತೆ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ದ್ವೇಷದ ರಾಜಕಾರಣ ಏನಿದೆ?” ಎಂದು ತಿಳಿಸಿದರು. ಕುಮಾರಸ್ವಾಮಿ ಮರ್ಯಾದೆಯಾಗಿ ಇದ್ದರೆ ಕ್ಷೇಮ “ನನ್ನ ವಿರುದ್ಧ ಮೈಸೂರಿನಲ್ಲಿ ಅವರು…
ಬೆಂಗಳೂರು: “ಬೇಸಿಗೆ ಸಮಯದಲ್ಲಿ ನೀರಿನ ಸಂರಕ್ಷಣೆ ಅಭಿಯಾನದ ಜತೆಗೆ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ ಮಾಡಲು ಸರ್ಕಾರ ತೀರ್ಮಾನಿಸಿದೆ. ಇದು ಸರ್ಕಾರದ ಕಾರ್ಯಕ್ರಮವೇ ಹೊರತು ರಾಜಕೀಯ ಕಾರ್ಯಕ್ರಮವಲ್ಲ. ನ್ಯಾಯಾಲಯದಲ್ಲಿ ಆಕ್ಷೇಪ ಸಲ್ಲಿಸಲಾಗಿದ್ದು ನಮ್ಮ ವಿಚಾರವನ್ನು ನ್ಯಾಯಾಲಯದ ಮುಂದೆ ಪ್ರಸ್ತಾಪಿಸುತ್ತೇವೆ” ಎಂದು ತಿಳಿಸಿದರು. ವಿಧಾನಸೌಧದ ಆವರಣದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಗುರುವಾರ ಈ ವಿಚಾರ ತಿಳಿಸಿದರು. “ಮಾ.22ರಂದು ವಿಶ್ವ ಜಲ ದಿನ. ನಾವು ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿದ್ದೇವೆ. ಬೆಂಗಳೂರಿಗೆ ಕುಡಿಯುವ ನೀರು ಒದಗಿಸಲು 6ನೇ ಹಂತದ ಯೋಜನೆಗೆ ಡಿಪಿಆರ್ ಸಿದ್ಧಪಡಿಸಲಾಗಿದೆ. ನೀರಿನ ಸದ್ಬಳಕೆ ಹಾಗೂ ಸಂರಕ್ಷಣೆಗೆ ಜನರಲ್ಲಿ ಜಾಗೃತಿ ಮೂಡಿಸಲು ಒಂದು ತಿಂಗಳ ಕಾಲ ಅಭಿಯಾನ ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು. “ಅನೇಕರು ಕಾರು, ವಾಹನ ತೊಳೆಯಲು, ಗಿಡಗಳಿಗೆ ಕುಡಿಯುವ ನೀರನ್ನು ಬಳಸುತ್ತಿದ್ದಾರೆ. ಹೀಗೆ ಸುಮಾರು 20% ಕುಡಿಯುವ ನೀರು ವ್ಯರ್ಥವಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ರತಿಜ್ಞಾ ಸ್ವೀಕಾರ ಮಾಡಿಸಲಾಗುವುದು. ಇನ್ನು ಕೆಆರ್ ಎಸ್ ನಲ್ಲಿ…
ನವದೆಹಲಿ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಚೆಂಡಿನ ಮೇಲೆ ಲಾಲಾರಸವನ್ನು ಬಳಸುವುದರ ಮೇಲಿನ ನಿಷೇಧವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ತೆಗೆದುಹಾಕಿದೆ. ಮುಂಬೈನಲ್ಲಿ ನಡೆದ ನಾಯಕರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಲಾಲಾರಸ ನಿಷೇಧವನ್ನು ತೆಗೆದುಹಾಕಲಾಗಿದೆ. ಹೆಚ್ಚಿನ ನಾಯಕರು ಈ ಕ್ರಮದ ಪರವಾಗಿದ್ದರು ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಚೆಂಡನ್ನು ಹೊಳೆಯಿಸಲು ಲಾಲಾರಸವನ್ನು ಹಚ್ಚುವ ಹಳೆಯ ಅಭ್ಯಾಸವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಷೇಧಿಸಿತ್ತು. 2022 ರಲ್ಲಿ, ವಿಶ್ವ ಸಂಸ್ಥೆ ನಿಷೇಧವನ್ನು ಶಾಶ್ವತಗೊಳಿಸಿತು. ಸಾಂಕ್ರಾಮಿಕ ರೋಗದ ನಂತರ ಐಪಿಎಲ್ ಕೂಡ ತನ್ನ ಆಟದ ಪರಿಸ್ಥಿತಿಗಳಲ್ಲಿ ಐಸಿಸಿ ನಿಷೇಧವನ್ನು ಸೇರಿಸಿದೆ. ಆದರೆ ಅದರ ಮಾರ್ಗಸೂಚಿಗಳು ಕ್ರೀಡಾ ಆಡಳಿತ ಮಂಡಳಿಯ ವ್ಯಾಪ್ತಿಯಿಂದ ಹೊರಗಿವೆ. ಗುರುವಾರದ ಬೆಳವಣಿಗೆಯೊಂದಿಗೆ, ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ಲಾಲಾರಸ ಬಳಕೆಯನ್ನು ಮತ್ತೆ ಪರಿಚಯಿಸಿದ ಮೊದಲ ಪ್ರಮುಖ ಕ್ರಿಕೆಟ್ ಪಂದ್ಯಾವಳಿ ಐಪಿಎಲ್ ಆಗಿದೆ.…
ಬೆಂಗಳೂರು: ಬೆಳಗಾವಿಯಲ್ಲಿನ ಎಂಇಎಸ್ ಪುಂಡಾಟ ಖಂಡಿಸಿ ಮಾರ್ಚ್.22ರಂದು ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಅಂದು ರಾಜ್ಯಾಧ್ಯಂತ ಸಿನಿಮಾ ಪ್ರದರ್ಶನ್ ಬಂದ್ ಮಾಡಲಾಗುತ್ತಿದೆ ಎಂಬುದಾಗಿ ಸಿನಿಮಾ ಪ್ರದರ್ಶಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ಬೆಳಗಾವಿಯಲ್ಲಿ ಕನ್ನಡಿಗರ ಮೇಲಿನ ಹಲ್ಲೆ, ಮರಾಠಿಗರ ಪುಂಡಾಟ ಖಂಡಿಸಿ ಕನ್ನಡಪರ ಸಂಘಟನೆಗಳಿಂದ ಮಾರ್ಚ್.22ರಂದು ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಇಂತಹ ಬಂದ್ ಗೆ ಸಿನಿಮಾ ಪ್ರದರ್ಶಕರ ಸಂಘವು ಬೆಂಬಲ ನೀಡುತ್ತಿದೆ ಎಂದರು. ಮಾರ್ಚ್.22ರಂದು ಅಖಂಡ ಕರ್ನಾಟಕ ಬಂದ್ ಬೆಂಬಲಿಸಿ ರಾಜ್ಯಾಧ್ಯಂತ ಒಂದು ದಿನ ಸಿನಿಮಾ ಪ್ರದರ್ಶನ ಸ್ಥಗಿತಕ್ಕೆ ನಿರ್ಧರಿಸಲಾಗಿದೆ. ಮಾರ್ಚ್.22ರಂದು ರಾಜ್ಯಾಧ್ಯಂತ ಸಿನಿಮಾ ಪ್ರದರ್ಶ ಬಂದ್ ಆಗಲಿದೆ ಎಂಬುದಾಗಿ ತಿಳಿಸಿದರು. https://kannadanewsnow.com/kannada/big-news-what-did-deputy-cm-dk-shivakumar-say-about-akhand-karnataka-bandh-on-march-22/ https://kannadanewsnow.com/kannada/breaking-encounter-between-security-forces-in-bijapur-chhattisgarh-22-naxals-killed-naxal-encounter/
ಶಿವಮೊಗ್ಗ: ಜಿಲ್ಲೆಯ ಸಾಗರ-ಸೊರಬ ರಸ್ತೆಯ ಹೊಳೆಕೊಪ್ಪ ಸಮೀಪದಲ್ಲಿ ಒಣ ಮರ ಕಡಿತಲೆ ಮಾಡಿಲ್ಲ. ವಾಹನ ಸವಾರರ ಬಲಿಗಾಗಿ ಕಾದಿವೆ ಅಂತ ನಿಮ್ಮ ಕನ್ನಡ ನ್ಯೂಸ್ ನೌ ಸುದ್ದಿ ಪ್ರಕಟಿಸಿತ್ತು. ಈ ಬೆನ್ನಲ್ಲೇ ಕನ್ನಡ ನ್ಯೂಸ್ ನೌ ಫಲಶೃತಿ ಎನ್ನುವಂತೆ ಒಣಗಿದ ಮರಗಳನ್ನು ಸೊರಬ ಅರಣ್ಯಾಧಿಕಾರಿಗಳು ಕಡಿತಲೆ ಮಾಡಿದ್ದಾರೆ. ಕಳೆದ ಐದು ದಿನಗಳ ಹಿಂದೆ ನಿಮ್ಮ ಕನ್ನಡ ನ್ಯೂಸ್ ನೌ ‘ವಾಹನ ಸವಾರ’ರ ಬಲಿಗಾಗಿ ಕಾದಿವೆ ‘ಒಣ ಮರ’: ಕಡಿತಲೆಗೆ ‘ಸೊರಬ ಅರಣ್ಯಾಧಿಕಾರಿ’ಗಳ ನಿರ್ಲಕ್ಷ್ಯ ಎಂಬುದಾಗಿ ಸುದ್ದಿ ಪ್ರಕಟಿಸಿತ್ತು. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಭದ್ರಾಪುರದ ನಂತ್ರ ರಾಮಕೃಷ್ಣ ಎಂಬುವರ ಮನೆಯಿಂದ ಹಿಡಿದು ಅಮಚಿ ಸಮೀಪದ ಸೇತುವೆಯವರೆಗೆ ಸುಮಾರು 22 ಅಕೇಶಿಯಾ ಮರಗಳ ಸಾಲು ಜೊತೆಗೆ ಒಂದೆರೆಡು ಹುನಾಲು ಮರಗಳಿದ್ದಾವೆ. ದಾರಿಯುದ್ಧಕ್ಕೂ ಸಾಲು ಗಟ್ಟಿರುವಂತ 24 ಮರಗಳಲ್ಲಿ ಬರೋಬ್ಬರಿ 10ಕ್ಕೂ ಹೆಚ್ಚು ಮರಗಳು ಒಣಗಿ ಹೋಗಿದ್ದಾವೆ. ದಾರಿ ಹೋಕರ ಮೇಲೆ ಈಗಲೋ ಆಗಲೋ ಬೀಳೋ ಸ್ಥಿತಿಯಲ್ಲಿದ್ದಾವೆ ಎಂಬುದಾಗಿ ವರದಿ ಮಾಡಲಾಗಿತ್ತು. ಈ ವರದಿಯ…
ಬೆಂಗಳೂರು: ರಾಜ್ಯದ ತೊಗರಿ ಬೆಳೆಗಾರರಿಗೆ ಗುಡ್ ನ್ಯೂಸ್ ಎನ್ನುವಂತೆ, ಕನಿಷ್ಠ ಬೆಂಬಲ ಯೋಜನೆಯಡಿ ತೊಗರಿ ಖರೀದಿಯ ನೋಂದಣಿ ಅವಧಿ ಮಾರ್ಚ್ ತಿಂಗಳಾಂತ್ಯದವರೆಗೂ ವಿಸ್ತರಿಸಿ, ರಾಜ್ಯ ಸರ್ಕಾರ ಆದೇಶಿಸಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ತೊಗರಿ ಖರೀದಿಯ ನೋಂದಣಿ ಅವಧಿಯನ್ನು ಮಾರ್ಚ್ 31ರ ವರೆಗೆ ವಿಸ್ತರಣೆ ಮಾಡಲಾಗಿದೆ. ಇದುವರೆಗೆ ನೋಂದಣಿ ಮಾಡಿಕೊಳ್ಳದ ರೈತರು ತಕ್ಷಣ ಸಮೀಪದ ಪ್ರಾಥಮಿಕ ಪತ್ತಿನ ಸಹಕಾರ ಸಂಘ, ರೈತ ಉತ್ಪಾದಕರ ಕಂಪನಿ, ತಾಲೂಕು ಹುಟ್ಟುವಳಿ ಸಹಕಾರ ಸಂಘಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ್ ಅವರು ತಿಳಿಸಿದ್ದಾರೆ. https://twitter.com/KarnatakaVarthe/status/1902342437831622880
ಚೆನ್ನೈ: ಮಕ್ಕಳು, ಹತ್ತಿರದ ಸಂಬಂಧಿಕರು ಹಿರಿಯ ನಾಗರೀಕರ ಆರೈಕೆ ಮಾಡದೇ ಇದ್ದರೇ, ಅವರು ದಾನಪತ್ರದ ಮೂಲಕ ಇತ್ಯರ್ಥ ಕರಾರಿನ ಮೂಲಕ ಮಾಡಿಕೊಟ್ಟಂತ ಅವರ ಹೆಸಿನ ಆಸ್ತಿ ವರ್ಗಾವಣೆ ರದ್ದು ಮಾಡಲು ಹಿರಿಯ ನಾಗರೀಕರಿಗೆ ಅವಕಾಶ ಇದೆ ಎಂಬುದಾಗಿ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ತಮಿಳುನಾಡಿನ ನಾಗಪಟ್ಟಣಂ ವ್ಯಾಪ್ತಿಯ ನಾಗಲಕ್ಷ್ಮೀ ಎಂಬುವರ ಪತಿ ತೀರಿಕೊಂಡ ನಂತ್ರ, ತನ್ನ ಮಗ ಕೇಶವನ್ ಜೊತೆಗೆ ವಾಸಿಸುತ್ತಿದ್ದರು. ತನ್ನ ಇನ್ನೂ ಇಬ್ಬರು ಮಕ್ಕಳಿದ್ದರೂ, ಅವರನ್ನು ಬಿಟ್ಟು, ಕೇಶವನ್ ಗೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದಂತ ಕಾರಣ ತನ್ನ ಆಸ್ತಿಯನ್ನು ದಾನವಾಗಿ ನೀಡಿದ್ದರು. ಕೇಶವನ್ ಗೆ ತಾಯಿ ನಾಗಲಕ್ಷ್ಮೀ ತನ್ನ ಆಸ್ತಿಯನ್ನು ದಾನಪತ್ರದಲ್ಲಿ ಮಾಡಿಸಿಕೊಟ್ಟಿದ್ದರು. ಕೇಶವನ್ ಅಕಾಲಿಕ ನಿಧನದ ಬಳಿಕ ಅವರ ಪತ್ನಿ ಮಾಲಾ ಎಂಬುವರು, ಅತ್ತೆ ನಾಗಲಕ್ಷ್ಮಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಊಟ, ಆರೈಕೆಯನ್ನು ಮಾಡುತ್ತಿರಲಿಲ್ಲ. ಹೀಗಾಗಿ ಕಾನೂನಿನ ಮೊರೆ ಹೋಗಿದ್ದಂತ ನಾಗಲಕ್ಷ್ಮೀ ಅವರು ನಾಗಪಟ್ಟಣಂ ವ್ಯಾಪ್ತಿಯ ಕಂದಾಯ ಉಪ ವಿಭಾಗಾಧಿಕಾರಿಗಳಿಗೆ ತಾನು ತನ್ನ ಪುತ್ರ ಕೇಶವನ್ ಗೆ ಮಾಡಿಕೊಟ್ಟಿದ್ದಂತ…
ಬೆಂಗಳೂರು: ಕೆಯುಡಬ್ಲೂಜೆ ಹೊರನಾಡಿನ ಘಟಕವಾಗಿರುವ ಕಾಸರಗೋಡು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ನಿಧಿಗೆ 25 ಲಕ್ಷ ರೂ ಮಂಜೂರು ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಿಎಂ ಗೃಹ ಕಚೇರಿ ಕಾವೇರಿಯಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಕಾಸರಗೋಡು ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಅವರ ನೇತೃತ್ವದಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಕೇರಳ ರಾಜ್ಯದ ಕಾಸರಗೋಡು ಭಾಗದಲ್ಲಿ ಕನ್ನಡ ಪತ್ರಿಕೆಗಳು ಈಗಲೂ ಹೆಚ್ಚಿನ ಪ್ರಸಾರ ಹೊಂದಿದ್ದು, ಕನ್ನಡ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅವರ ಹಿತ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಪತ್ರಕರ್ತರ ಸಂಘಕ್ಕೆ ಆರ್ಥಿಕ ನೆರವು ನೀಡಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಮತ್ತು ಕಾಸರಗೋಡು ಘಕದ ಮಾಡಿದ ಮನವಿಯನ್ನು ಪರಿಗಣಿಸಿರುವ ಮುಖ್ಯಮಂತ್ರಿಗಳು 25 ಲಕ್ಷ ರೂ ಮಂಜೂರು ಮಾಡಿರುವುದನ್ನು ಈ ಸಂದರ್ಭದಲ್ಲಿ ಶ್ಲಾಸಲಾಯಿತು. ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ನಿಮಗೆಲ್ಲ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು. ಪ್ರಭಾಕರ್ಗೂ ಸನ್ಮಾನ: ಕ್ಷೇಮಾಭಿವೃದ್ಧಿ…
ಜಪಾನ್: ಜಪಾನಿನ ಖ್ಯಾತ ಆನಿಮೇಟರ್ ಮತ್ತು ನಿರ್ದೇಶಕ ಶಿಗೆಕಿ ಅವೈ ಅವರು 71 ನೇ ವಯಸ್ಸಿನಲ್ಲಿ ನಿಧನರಾದರು. ಅನಿಮೇಷನ್ ಜಗತ್ತಿಗೆ ಅವರ ಕೊಡುಗೆಗಳು ತುಂಬಾ ದುಃಖಕರವಾಗಿರುತ್ತದೆ. ಅವರನ್ನು ಶಿಗೆನೋರಿ ಅವೈ ಎಂದೂ ಕರೆಯಲಾಗುತ್ತಿತ್ತು. ಅನುಭವಿ ಆನಿಮೇಟರ್ ಮತ್ತು ನಿರ್ದೇಶಕಿ ಶಿಗೆಕಿ ಅವೈ ಅವರ ನಷ್ಟಕ್ಕೆ ಅನಿಮೆ ಸಮುದಾಯವು ಶೋಕಿಸುತ್ತಿದೆ. ವಿಶ್ವಾಸಾರ್ಹ ಮೂಲಗಳು ಅವರ ನಿಧನದ ಸುದ್ದಿಯನ್ನು ಹಂಚಿಕೊಂಡ ನಂತರ ಶ್ರದ್ಧಾಂಜಲಿಗಳು ಹರಿದು ಬರುತ್ತಿವೆ. ಅನಿಮೆ ನ್ಯೂಸ್ ಸೆಂಟರ್ ಪ್ರಕಾರ, 1980 ರ ದಶಕದಿಂದಲೂ ಅವೈ ಉದ್ಯಮದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದು, ಮರೆಯಲಾಗದ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಅನಿಮೆ ಉದ್ಯಮದಲ್ಲಿ ಶಿಗೆಕಿ ಅವೈ ಅವರ ಪರಂಪರೆ ಗಮನಾರ್ಹವಾದುದು. ದಶಕಗಳಲ್ಲಿ, ಅವರು 200 ಕ್ಕೂ ಹೆಚ್ಚು ಸಂಚಿಕೆಗಳನ್ನು ನಿರ್ದೇಶಿಸಿದರು ಮತ್ತು ಸುಮಾರು 500 ಕ್ಕೂ ಹೆಚ್ಚು ಸಂಚಿಕೆಗಳಿಗೆ ಪ್ರಮುಖ ಅನಿಮೇಷನ್ ಅನ್ನು ಕೊಡುಗೆ ನೀಡಿದರು. ಅವರ ಕೆಲಸವು ಮೈ ಹೀರೋ ಅಕಾಡೆಮಿಯಾ, ಬ್ಲ್ಯಾಕ್ ಕ್ಲೋವರ್, ಒನ್ ಪಂಚ್ ಮ್ಯಾನ್, ಅಟ್ಯಾಕ್ ಆನ್ ಟೈಟಾನ್, ಬಂಗೋ ಸ್ಟ್ರೇ ಡಾಗ್ಸ್,…
ನವದೆಹಲಿ: “ರಾಹುಲ್ ಗಾಂಧಿ ಅವರನ್ನು ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ನೂತನ ಕಾಂಗ್ರೆಸ್ ಭವನದ ಭೂಮಿ ಪೂಜೆಗೆ ಸಮಯ ನೀಡಿ ಎಂದು ಹೇಳಿದ್ದೇನೆ. 100 ಕಾಂಗ್ರೆಸ್ ಕಚೇರಿಗಳನ್ನು ಕಟ್ಟಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅವರು ಸಮಯ ನೀಡಿದಾಗ ಭೂಮಿಪೂಜೆ ನಡೆಸಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ದೆಹಲಿಯಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಉತ್ತರಿಸಿದರು. ರಾಜ್ಯದಲ್ಲಿ ಪಕ್ಷದ ಬೆಳವಣಿಗೆ ವಿಚಾರವಾಗಿ ಹೈಕಮಾಂಡ್ ಬಳಿ ಚರ್ಚೆ ನಡೆಸಿದ್ದೀರಾ ಎಂದು ಕೇಳಿದಾಗ, “ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ನಡೆಸಬೇಕು ಎಂದು ಸೂಚನೆ ನೀಡಲಾಗಿದ್ದು, ವಿಧಾನಸಭೆ ಅಧಿವೇಶನ ಮುಗಿದ ನಂತರ ಎಲ್ಲಾ ಕ್ಷೇತ್ರಗಳಲ್ಲಿ ಸಭೆ ನಡೆಸಲಾಗುವುದು” ಎಂದರು. “ರಾಜ್ಯದ ಎಲ್ಲಾ ಬೆಳವಣಿಗೆಗಳು ಹೈಕಮಾಂಡಿನ ಗಮನದಲ್ಲಿವೆ. ಕಾರ್ಯಕರ್ತರ ಸಭೆ ವಿಚಾರವನ್ನು ತಿಳಿಸಲಾಗಿದೆ. ಸಭೆಯ ವರದಿಯನ್ನು ನೀಡಬೇಕು ಎಂದು ಸೂಚನೆ ನೀಡಿದ್ದಾರೆ” ಎಂದರು. ಅಧಿಕಾರ ಹಸ್ತಾಂತರ ವಿಚಾರವಾಗಿ ಚರ್ಚೆ ನಡೆಸಲಾಯಿತೇ ಎಂದು ಕೇಳಿದಾಗ, “ಈ ರೀತಿಯ ಯಾವ ಸುದ್ದಿಯೂ ಇಲ್ಲ, ಏನೂ ಇಲ್ಲ. ನಾವು…













