Author: kannadanewsnow09

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಮಾಡಿರುವ ಬಸ್‌ ಟಿಕೆಟ್‌ ದರ ಏರಿಕೆಯನ್ನು ಖಂಡಿಸಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ ಮೆಜೆಸ್ಟಿಕ್‌ನಲ್ಲಿ ವಿಭಿನ್ನವಾಗಿ ಪ್ರತಿಭಟಿಸಿದರು. ಬಸ್‌ ಪ್ರಯಾಣಿಕರ ಕೈಗೆ ಹೂ ನೀಡಿದ ಅವರು, ಸಿಎಂ ಸಿದ್ದರಾಮಯ್ಯನವರ ಪರವಾಗಿ ಕ್ಷಮೆ ಯಾಚಿಸಿದರು. ಬಸ್‌ನಲ್ಲಿ ಕುಳಿತಿದ್ದ ಪ್ರಯಾಣಿಕರ ಬಳಿ ಹೋದ ಆರ್‌.ಅಶೋಕ ಹಾಗೂ ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, “ಕಾಂಗ್ರೆಸ್‌ ಸರ್ಕಾರ ಬೆಲೆ ಏರಿಕೆ ಮಾಡುವುದಿಲ್ಲವೆಂದು ನೀವು ಮತ ನೀಡಿದ್ದೀರಿ. ಆದರೆ ಮಾತಿಗೆ ತಪ್ಪಿದ ಸರ್ಕಾರ ಹೊಸ ವರ್ಷದಂದೇ ಟಿಕೆಟ್‌ ದರ ಏರಿಕೆ ಮಾಡಿದೆ. ಆದ್ದರಿಂದ ಸಿಎಂ ಸಿದ್ದರಾಮಯ್ಯನವರ ಪರವಾಗಿ ನಾನು ಕ್ಷಮೆ ಕೇಳುತ್ತಿದ್ದೇನೆ” ಎಂದು ಪ್ರಯಾಣಿಕರಿಗೆ ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಕಾಲಿಗೆ ಬೀಳುತ್ತೇವೆ, ಕೈ ಮುಗಿಯುತ್ತೇವೆ ಕ್ಷಮಿಸಿ ಬಿಡಿ ಎಂಬುದು ಸಿಎಂ ಸಿದ್ದರಾಮಯ್ಯನವರ ಹೊಸ ಸ್ಲೋಗನ್. ಟಿಕೆಟ್ ದರ 200-300 ರೂಪಾಯಿ ಜಾಸ್ತಿಯಾಗಿದೆ. ಬಸ್‌ಗಳ ಟಿಕೆಟ್ ದರ ಮಾತ್ರ ಅಲ್ಲ, ಮುಂದೆ ಹಾಲಿನ ದರವನ್ನೂ ಏರಿಕೆ ಮಾಡುತ್ತೇವೆ. ನೀರಿನ ದರವನ್ನು ಏರಿಕೆ…

Read More

ಶಿವಮೊಗ್ಗ: ಜಿಲ್ಲೆಯಲ್ಲಿ ಹೆಚ್ಚು ಸಾಗುವಾನಿ ಮರಗಳಿರುವಂತ ಅರಣ್ಯ ಪ್ರದೇಶವೆಂದರೇ ಸಾಗರ ತಾಲ್ಲೂಕಿನ ಉಳ್ಳೂರು ವ್ಯಾಪ್ತಿಯಲ್ಲಿ ಆಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವಂತ ಮರಗಳ್ಳರು, ಮರಗಳ ಮಾರಣಹೋಮವನ್ನೇ ನಡೆಸಿ, ಕಳ್ಳಸಾಗಾಣಿಕೆ ಮಾಡುತ್ತಿರುವುದಾಗಿ ಹೇಳಲಾಗುತ್ತಿದೆ. ದಿನೇ ದಿನೇ ಉಳ್ಳೂರು ವ್ಯಾಪ್ತಿಯಲ್ಲಿ ಸಾಗುವಾನಿ ಮರಗಳ ಕಳ್ಳಸಾಗಾಟ ಹೆಚ್ಚಾಗುತ್ತಿದ್ದರೂ, ಉಪ ವಲಯ ಅರಣ್ಯಾಧಿಕಾರಿ ಮಾತ್ರ ಕಣ್ಮುಚ್ಚಿ ಕುಳಿತಿರೋ ಆರೋಪ ಕೇಳಿ ಬಂದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಉಳ್ಳೂರು ವ್ಯಾಪ್ತಿಯ ಅರಣ್ಯದಲ್ಲಿ ಸಾಗುವಾನಿ ಮರಗಳು ತಿಂಗಳಿಗೆ ಒಂದೆರಡು ಮರಗಳೇ ಕಣ್ಮರೆಯಾಗುತ್ತಿವೆ. ಮರಗಳ್ಳರು ಅಕ್ರಮವಾಗಿ ಮರಗಳನ್ನು ರಾತ್ರೋ ರಾತ್ರಿ ಕದ್ದು ಸಾಗಾಟ ಮಾಡುತ್ತಿದ್ದರೂ ಉಪ ವಲಯ ಅರಣ್ಯಾಧಿಕಾರಿ ಮಾತ್ರ ತನಗೇ ಸಂಬಂಧವೇ ಇಲ್ಲದ ರೀತಿಯಲ್ಲಿ ಇದ್ದಾರೆ ಎಂಬುದಾಗಿ ಅಲ್ಲಿನ ಗ್ರಾಮಸ್ಥರ ಆರೋಪವಾಗಿದೆ. ಸಾಗುವಾನಿ ಮರಗಳ ಮಾರಣಹೋಮ, ಕಳ್ಳ ಸಾಗಾಟ ಹೇಗೆ.? ಉಳ್ಳೂರು ವ್ಯಾಪ್ತಿಯ ಅರಣ್ಯದಲ್ಲಿ ಸಾಗುವಾನಿ ಮರಗಳೇ ಹೆಚ್ಚಾಗಿರುವ ಕಾರಣ, ಕಳ್ಳರ ಮೇಲೆ ಕಣ್ಣಿಡಬೇಕಾಗಿದ್ದು ಅರಣ್ಯ ಇಲಾಖೆಯ ಕರ್ತವ್ಯ. ಫೀಲ್ಡ್ ಬಿಟ್ಟು ಸದಾ ಸಾಗರದ ಇಲಾಖೆ ಕಚೇರಿಯಲ್ಲೇ ಉಪ ವಲಯ…

Read More

ಹುಬ್ಬಳ್ಳಿ: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ರೈಲು ಸಂಖ್ಯೆ 07363/07364 ಎಸ್ಎಸ್ಎಸ್ ಹುಬ್ಬಳ್ಳಿ-ಯೋಗ ನಗರಿ ರಿಷಿಕೇಶ್-ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭಿಸಲಾಗುತ್ತಿದೆ. ಈ ಬಗ್ಗೆ ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ರೈಲು ಸಂಖ್ಯೆ 07363 ಎಸ್ಎಸ್ಎಸ್ ಹುಬ್ಬಳ್ಳಿ-ಯೋಗ ನಗರಿ ರಿಷಿಕೇಶ್ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ಜನವರಿ 06 ರಿಂದ ಮುಂದಿನ ಆದೇಶದ ವರೆಗೆ ಪ್ರತಿ ಸೋಮವಾರ 20:30 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಟು ಜನವರಿ 13 & 27, ಮತ್ತು ಫೆಬ್ರವರಿ 03,10 & 24, 2025 ರಂದು ಹೊರತುಪಡಿಸಿ ಬುಧವಾರ 23:30 ಗಂಟೆಗೆ ಯೋಗ ನಗರಿ ರಿಷಿಕೇಶ್ ತಲುಪಲಿದೆ ಎಂದಿದೆ. ರೈಲು ಸಂಖ್ಯೆ 07364 ಯೋಗ ನಗರಿ ರಿಷಿಕೇಶ್-ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ಜನವರಿ 09 ರಿಂದ ಮುಂದಿನ ಆದೇಶದ ವರೆಗೆ ಪ್ರತಿ ಗುರುವಾರ 06:15 ಗಂಟೆಗೆ ಯೋಗ ನಗರಿ ಹೃಷಿಕೇಶದಿಂದ ಹೊರಟು ಜನವರಿ 16 & 30…

Read More

ಬೆಂಗಳೂರು: ಸಾರಿಗೆ ಬಸ್ ಟಿಕೆಟ್ ದರವನ್ನು ಶೇ.15ರಷ್ಟು ಹೆಚ್ಚಳಕ್ಕೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಈ ಬೆನ್ನಲ್ಲೇ ಬೆಂಗಳೂರಿಗರಿಗೆ ಮತ್ತೊಂದು ಶಾಕ್ ಎನ್ನುವಂತೆ ಮೆಟ್ರೋ ಟಿಕೆಟ್ ದರ, ನೀರಿನ ದರ ಏರಿಕೆಯ ಸುಳುವು ಹೊರ ಬಿದ್ದಿದೆ. ಬೆಂಗಳೂರಿನ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ಬಿಎಂಆರ್ ಸಿಎಲ್ ಮುಂದಾಗಿದೆ. ಈ ಸಂಬಂಧ ಜನವರಿ 2ನೇ ವಾರ ಅಥವಾ 3ನೇ ವಾರದಲ್ಲಿ ಬೋರ್ಡ್ ಮೀಟಿಂಗ್ ನಡೆಯಲಿದೆ. ಈ ಸಭೆಯಲ್ಲಿ ಮೆಟ್ರೋ ಟಿಕೆಟ್ ದರ ಏರಿಕೆ ಸಂಬಂಧ ಚರ್ಚೆ ನಡೆಸಲಾಗುತ್ತದೆ. ಈಗಾಗಲೇ ಮೆಟ್ರೋ ಟಿಕೆಟ್ ದರ ಹೆಚ್ಚಳಕ್ಕೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಬಿಎಂಆರ್ ಸಿಎಲ್ ಆಹ್ವಾನಿಸಿತ್ತು ಎನ್ನಲಾಗಿದೆ. ಈ ಆಕ್ಷೇಪಣೆಗಳ ನಡುವೆಯೂ ಶೀಘ್ರವೇ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಲಾಗುವಂತ ಸುಳಿವನ್ನು ಬಿಎಂಆರ್ ಸಿಎಲ್ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಕಾವೇರಿ ನೀರಿನ ದರವೂ ಪರಿಷ್ಕರಣೆ ಇನ್ನೂ ನಮ್ಮ ಮೆಟ್ರೋ ಟಿಕೆಟ್ ದರ ಅಷ್ಟೇ ಅಲ್ಲದೇ ಬೆಂಗಳೂರು ಜನತೆಗೆ ಬಿಗ್ ಶಾಕ್…

Read More

ಬೆಂಗಳೂರು: ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ನಿನ್ನೆಯಷ್ಟೇ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಾರಿಗೆ ಬಸ್ಸುಗಳ ಪ್ರಯಾಣ ದರ ಏರಿಕೆಗೂ ಅನುಮತಿ ನೀಡಲಾಗಿದೆ. ಈ ಬೆನ್ನಲ್ಲೇ ಬೆಂಗಳೂರಲ್ಲಿ ಕಾವೇರಿ ನೀರಿನ ದರ ಪರಿಷ್ಕರಣೆ ಮುಂದಾಗಿದೆ. ಈ ಮೂಲಕ ಶೀಘ್ರವೇ ನೀರಿನ ದರ ಹೆಚ್ಚಳದ ಶಾಕ್ ನೀಡಲು ಸರ್ಕಾರ ಮುಂದಾಗಿರುವ ಸುಳಿವನ್ನು ಜಲಮಂಡಳಿ ನೀಡಿದೆ. ಬೆಂಗಳೂರಲ್ಲಿ ಕಾವೇರಿ ನೀರಿನ ದರ ಪರಿಷ್ಕರಣೆಗೆ ಸರ್ಕಾರ ಮುಂದಾಗಿ ಎನ್ನಲಾಗುತ್ತಿದೆ. ಈ ಸಂಬಂಧ ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಬಿಡಬ್ಲ್ಯೂ ಎಸ್ ಎಸ್ ಬಿ ಸಭೆ ನಡೆಯೋ ಸಾಧ್ಯತೆ ಇದೆ. ಡಿಸಿಎಂ ನೇತೃತ್ವದ ಜಲಮಂಡಳಿ ಸಭೆಯಲ್ಲಿ ಕಾವೇರಿ ನೀರಿನದ ದರ ಹೆಚ್ಚಳದ ಕುರಿತಂತೆ ಚರ್ಚಿಸಲಾಗುತ್ತಿದೆ. ಆ ಬಳಿಕ ಬೆಂಗಳೂರಲ್ಲಿ ನೀರಿನ ದರ ಪರಿಷ್ಕರಣೆ ಅಧಿಕೃತ ಆದೇಶ ಹೊರ ಬೀಳೋ ಸಾಧ್ಯತೆ ಇದೆ. ಅಂದಹಾಗೆ ನೀರು ಸರಬರಾಜು ವೆಚ್ಚ, ವಿದ್ಯುತ್ ಬಳಕೆ ವೆಚ್ಚ ಸೇರಿದಂತೆ…

Read More

ಬೆಂಗಳೂರು : ತನಿಖಾ ತಂಡಕ್ಕೆ ಘಟನೆಯ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದೇನೆ. ಕಾನೂನು ಚೌಕಟ್ಟಿನಲ್ಲಿ ಕ್ರಮ ಆಗಲಿದೆ ಎನ್ನುವ ವಿಶ್ವಾಸವಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಪ್ರತಿಕ್ರಿಯಿಸಿದ್ದಾರೆ. ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ಕಲಾಪದ ವೇಳೆ ಸಚಿವರ ವಿರುದ್ಧ ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ ಅಶ್ಲೀಲ ಪದ ಬಳಿಸಿದ್ದರು. ಈ ಕುರಿತು ಸಿಒಡಿ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿತ್ತು‌. ಇದರ ಭಾಗವಾಗಿ ಸಿಒಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಅಧಿಕಾರಿಗಳ ಎದುರು ಘಟನೆ ಬಗ್ಗೆ ವಿವರಣೆ ನೀಡಿರುವೆ ಎಂದರು‌. ಪ್ರಕರಣದ ಬಗ್ಗೆ ಕಾನೂನು ಚೌಕಟ್ಟಿನಲ್ಲಿ ಏನಾಗಬೇಕು ಅದು ಆಗುತ್ತೆ. ನನಗೆ ಅನ್ಯಾಯ ಆಗಿದೆ, ಇದು ಇಡೀ ಮನುಕುಲಕ್ಕೆ ಆಗಿರುವ ಅನ್ಯಾಯ. ನನ್ನ ಜೊತೆ ಎಲ್ಲರೂ ನಿಂತುಕೊಳ್ಳಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಪ್ರಕರಣವನ್ನು ಪ್ರತಿಷ್ಠೆಯಾಗಿ, ರಾಜಕೀಯವಾಗಿ ತೆಗೆದುಕೊಂಡಿಲ್ಲ. ನನಗೆ ಅನ್ಯಾಯ ಆಗಿದೆ. ಇದು ನನ್ನ ಸ್ವಾಭಿಮಾನದ ಪ್ರಶ್ನೆ.…

Read More

ಕ್ಯಾಲಿಫೋರ್ನಿಯಾ: ದಕ್ಷಿಣ ಕ್ಯಾಲಿಫೋರ್ನಿಯಾದ ಪೀಠೋಪಕರಣ ತಯಾರಿಕಾ ಘಟಕದ ಮೇಲ್ಛಾವಣಿಯ ಮೂಲಕ ಸಣ್ಣ ವಿಮಾನವೊಂದು ಗುರುವಾರ ಅಪಘಾತಕ್ಕೀಡಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 19 ಮಂದಿ ಗಾಯಗೊಂಡಿದ್ದಾರೆ. ಕಟ್ಟಡದಲ್ಲಿ ಕನಿಷ್ಠ 200 ಉದ್ಯೋಗಿಗಳು ಇದ್ದಾಗ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಮೃತ ಇಬ್ಬರು ವ್ಯಕ್ತಿಗಳು ವಿಮಾನದಲ್ಲಿದ್ದರು ಎಂದು ಅಧಿಕಾರಿಗಳು ನಂಬಿದ್ದರೆ, ಗಾಯಗೊಂಡವರು ಪೀಠೋಪಕರಣಗಳ ಅಪ್ಹೋಲ್ಸ್ಟರಿ ತಯಾರಕ ಮೈಕೆಲ್ ನಿಕೋಲಸ್ ಡಿಸೈನ್ಸ್ ಕಟ್ಟಡದೊಳಗೆ ಇದ್ದರು. ಹತ್ತಿರದ ಸಂಬಂಧಿಕರಿಗೆ ಸೂಚನೆ ನೀಡಿದ ನಂತರ ಮೃತರ ಗುರುತುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಫುಲ್ಲರ್ಟನ್ ಪೊಲೀಸ್ ಇಲಾಖೆ ಹೇಳಿದೆ. ಗಾಯಗೊಂಡ 19 ಜನರಲ್ಲಿ 11 ಜನರನ್ನು ಸ್ಥಳೀಯ ಆಸ್ಪತ್ರೆಗಳಿಗೆ ಸಾಗಿಸಲಾಗಿದ್ದು, ಎಂಟು ಜನರಿಗೆ ಘಟನಾ ಸ್ಥಳದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಫುಲ್ಲರ್ಟನ್ ನ ಅಗ್ನಿಶಾಮಕ ಕಾರ್ಯಾಚರಣೆಗಳ ಉಪ ಮುಖ್ಯಸ್ಥ ಮೈಕೆಲ್ ಮೀಚಾಮ್ ವರದಿ ಮಾಡಿದಂತೆ, ಗಾಯಗಳ ವ್ಯಾಪ್ತಿಯನ್ನು ಸಣ್ಣದರಿಂದ ಅತ್ಯಂತ ಗಂಭೀರವಾದ ವ್ಯಾಪ್ತಿಯವರೆಗೆ ವಿವರಿಸಲಾಗಿದೆ. https://twitter.com/ResistanceWar1/status/1875016750108139887 ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ (ಎನ್ ಟಿಎಸ್ ಬಿ) ತನಿಖಾಧಿಕಾರಿ…

Read More

ಬೆಂಗಳೂರು: ಸುಪ್ರೀಂ ಕೋರ್ಟ್ ಗೆ ಶೃಂಗೇರಿ ಶಾಸಕ ಸಲ್ಲಿಸಿದ್ದಂತ ಗೆಲುವು ಪ್ರಶ್ನಿಸಿ ಜೀವರಾಜ್ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆಗೆ ನಕಾರ ವ್ಯಕ್ತಪಡಿಸಿದೆ. ಈ ಮೂಲಕ ಸುಪ್ರೀಂ ಕೋರ್ಟ್ ನಲ್ಲಿ ಶೃಂಗೇರಿ ಶಾಸಕ ಡಿ.ಟಿ ರಾಜೇಗೌಡಗೆ ಹಿನ್ನಡೆಯುಂಟಾಗಿದೆ. ಶೃಂಗೇರಿ ಶಾಸಕ ಡಿ.ಟಿ ರಾಜೇಗೌಡ ಅವರು ಗೆಲುವು ಪ್ರಶ್ನಿಸಿ ಜೀವರಾಜ್ ಸಲ್ಲಿಸಿದ್ದಂತ ಅರ್ಜಿಯ ಮೇಲ್ಮನವಿಯ ಕುರಿತಂತೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಗೆಲುವು ಪ್ರಶ್ನಿಸಿ ಜೀವ ರಾಜ್ ಅರ್ಜಿಯಲ್ಲಿ ಅಸ್ಪಷ್ಟ ಆರೋಪ ಕೂಡ ಮಾಡಲಾಗಿತ್ತು. ಮತದಾನದ ವೇಳೆ ಕಪ್ಪು ಹಣ ಬಳಕೆ ಬಗ್ಗೆ ಅಸ್ಪಷ್ಟತೆ ಆರೋಪವನ್ನು ಮಾಡಿ ಅರ್ಜಿ ವಜಾಗೆ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಲಾಗಿತ್ತು. ಆದರೇ ಯಾವುದೇ ಸಾಕ್ಷ್ಯಗಳಿಲ್ಲದೇ ಗೆರುವು ಪ್ರಶ್ನಿಸಿದ್ದಾರೆಂದು ಸಲ್ಲಿಸಿದ್ದಂತ ಶೃಂಗೇರಿ ಶಾಸಕ ಡಿ.ಟಿ ರಾಜೇಗೌಡ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲು ನಕಾರ ವ್ಯಕ್ತ ಪಡಿಸಿದೆ. ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ಪೀಠದಿಂದ ನಕಾರ ವ್ಯಕ್ತ ಪಡಿಸಲಾಗಿದೆ.…

Read More

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು, ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನೂತನ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲು ಕೆ ಎಸ್ ಆರ್ ಟಿಸಿ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಮೂಲಕ ಕೆ ಎಸ್ ಆರ್ ಟಿಸಿ ಅಧಿಕಾರಿ, ಸಿಬ್ಬಂದಿಗಳಿಗೆ ಸಿಹಿಸುದ್ದಿ ನೀಡಲಾಗಿದೆ. ಈ ಕುರಿತಂತೆ ಕೆ ಎಸ್ ಆರ್ ಟಿಸಿಯ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ಅದರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು/ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ವೈದ್ಯಕೀಯ ಚಿಕಿತ್ಸೆಯ ನಿಬಂಧನೆಗಳು -1970 ರನ್ವಯ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ವಯ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ನಿಗಮದ ಅಧಿಕಾರಿಗಳು/ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಸರ್ಕಾರದ ಮಾನ್ಯತೆ ಹೊಂದಿರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿ/ಹೊರ ರೋಗಿಯಾಗಿ ಪಡೆದ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು CGHS 2014 ರ…

Read More

ಗದಗ: ಜಿಲ್ಲೆಯಲ್ಲಿ ನಿರ್ಮಿತಿ ಕೇಂದ್ರದ ಇಂಜಿನಿಯರ್ ಒಬ್ಬರು ಲಾಡ್ಜ್ ನಲ್ಲೇ ಆತ್ಮಹತ್ಯೆಗೆ ಶರಣಾಗಿರುವಂತ ಘಟನೆ ನಡೆದಿದೆ. ಈ ಮೂಲಕ ನೇಣುಬಿಗಿದುಕೊಂಡು ನಿರ್ಮಿತಿ ಕೇಂದ್ರದ ಇಂಜಿನಿಯರ್ ಸಾವಿಗೆ ಶರಣಾಗಿದ್ದಾರೆ. ಗದಗ ನಗರದ ಪಲ್ಲವಿ ಲಾಡ್ಜ್ ಗೆ ತೆರಳಿದ್ದಂತ ನಿರ್ಮಿತಿ ಕೇಂದ್ರದ ಶಂಕರಗೌಡ ಪಾಟೀಲ್ ಎಂಬುವರೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತ ಇಂಜಿನಿಯರ್ ಆಗಿದ್ದಾರೆ. ಇಂದು ಬೆಳಿಗ್ಗೆ 7.30ಕ್ಕೆ ಮನೆಯಿಂದ ಹೊರ ಬಂದಿದ್ದಂತ ನಿರ್ಮಿತಿ ಕೇಂದ್ರದ ಇಂಜಿನಿಯರ್ ಶಂಕರಗೌಡ ಪಾಟೀಲ್ ಅವರು ಲಾಡ್ಜ್ ನಲ್ಲಿ ರೂಂ ಪಡೆದು ಉಳಿದುಕೊಂಡಿದ್ದರು. ಲಾಡ್ಜ್ ನ ಸರ್ವಿಸ್ ಬಾಯ್ ಗಳು ರೂಂ ಬಾಗಿಲು ಬಡಿದಾಗ ಪ್ರತ್ಯುತ್ತರ ನೀಡಿಲ್ಲ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ, ಲಾಡ್ಜ್ ನ ರೂಂ ಬಾಗಿಲು ತೆರೆದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. https://kannadanewsnow.com/kannada/the-bjp-has-spent-rs-5900-crore-had-the-loan-not-been-waived-there-would-have-been-no-need-to-increase-ticket-prices-ramalinga-reddy/ https://kannadanewsnow.com/kannada/breaking-ramanagara-man-killed-thrown-into-well-during-new-year-party/

Read More