Subscribe to Updates
Get the latest creative news from FooBar about art, design and business.
Author: kannadanewsnow09
ಧಾರವಾಡ: ಆ ಇಬ್ಬರು ದಂಪತಿಗಳು ರಾತ್ರಿ ಊಟ ಮಾಡಿ ಒಟ್ಟಿಗೆ ಮಲಗಿದ್ದಾರೆ. ಬೆಳಿಗ್ಗೆಯಾದರೂ ಏಳದೇ ಇದ್ದಾಗ ಕುಟುಂಬಸ್ಥರು ಎದ್ದೇಳಿಸೋದಕ್ಕೆ ನೋಡಿದ್ದಾರೆ. ಆದರೇ ಎದ್ದಿಲ್ಲ. ಆ ಮೂಲಕ ಸಾವಿನಲ್ಲೂ ರೈತ ದಂಪತಿಗಳು ಒಂದಾಗಿರುವಂತ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ತಾಲ್ಲೂಕಿನ ದೇವರಹುಬ್ಬಳ್ಳಿ ಗ್ರಾಮದಲ್ಲೇ ಇಂತಹ ಘಟನೆ ನಡೆದಿದೆ. ಈಶ್ವರ್ ಅರೇರ್(82) ಹಾಗೂ ಪಾರ್ವತಿ ಅರೇರ್ (73) ಎಂಬುವರೇ ಸಾವಿನಲ್ಲೂ ಒಂದಾದಂತ ರೈತ ದಂಪತಿಗಳಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದಂತ ಪತ್ನಿ ಪಾರ್ವತಿಯನ್ನು ಪತಿ ಈಶ್ವರ್ ಅರೇರ್ ಅವರೇ ಆರೈಕೆ ಮಾಡುತ್ತಿದ್ದರು. ನಿನ್ನೆ ರಾತ್ರಿ ಒಟ್ಟಿಗೆ ಊಟ ಮಾಡಿದಂತ ದಂಪತಿಗಳು ಮಲಗಿದ್ದಾರೆ. ಆದರೇ ಬೆಳಿಗ್ಗೆ ಎಬ್ಬಿಸಲು ಹೋದಾಗ ಎದ್ದಿಲ್ಲ. ಹೀಗೆ ರೈತ ದಂಪತಿಗಳು ಸಾವಿನಲ್ಲೂ ಒಂದಾಗಿದ್ದಾರೆ. ಅಂದಹಾಗೇ ಈಶ್ವರ್ ಹಾಗೂ ಪಾರ್ವತಿ ದಂಪತಿಗಳಿಗೆ ನಾಲ್ವರು ಪುತ್ರಿಯರು. 12 ಮಂದಿ ಮೊಮ್ಮಕ್ಕಳಿದ್ದಾರೆ. ಇಂತಹ ರೈತ ದಂಪತಿಗಳು ನಿನ್ನೆ ಮಲಗಿ, ಇಂದು ಬೆಳಿಗ್ಗೆ ಇನ್ನಿಲ್ಲವಾಗಿ ಸಾವಿನಲ್ಲೂ ಒಟ್ಟಾಗಿ ಪಯಣಿಸಿದ್ದಾರೆ. https://kannadanewsnow.com/kannada/top-3-supplements-to-be-taken-to-keep-the-heart-healthy/ https://kannadanewsnow.com/kannada/a-woman-suffering-from-leptospira-endometriosis-a-rare-disease-was-successfully-treated-at-fortis-hospital/
ಹೃದ್ರೋಗವು ವಿಶ್ವಾದ್ಯಂತ ಸಾವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ, ಮತ್ತು ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳುವುದು ಒಟ್ಟಾರೆ ಯೋಗಕ್ಷೇಮಕ್ಕೆ ನಿರ್ಣಾಯಕವಾಗಿದೆ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಜೀವನಶೈಲಿ ಬದಲಾವಣೆಗಳು ಹೃದಯದ ಆರೋಗ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತವೆ, ಕೆಲವು ಪೂರಕಗಳು ಹೆಚ್ಚುವರಿ ಬೆಂಬಲವನ್ನು ನೀಡಬಹುದು. ಇತ್ತೀಚೆಗೆ, ಹೃದಯ ಶಸ್ತ್ರಚಿಕಿತ್ಸಕ ಜೆರೆಮಿ ಲಂಡನ್, ಎಂಡಿ ಹೃದಯವನ್ನು ಆರೋಗ್ಯಕರವಾಗಿಡಲು ಸೇವಿಸಬೇಕಾದ ಟಾಪ್ 3 ಪೂರಕಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. “ಹೃದಯದ ಆರೋಗ್ಯಕ್ಕಾಗಿ ನನ್ನ ಟಾಪ್ 3 ಪೂರಕಗಳು: 1. ಕೋಕ್ಯೂ 10 2. ಒಮೆಗಾ 3 ಕೊಬ್ಬಿನಾಮ್ಲಗಳು 3. ಮೆಗ್ನೀಸಿಯಮ್” ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. “ನಾನು ನೋವಿನಿಂದ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ: ಪೂರಕಗಳು ನಿಮ್ಮ ಜೀವನಶೈಲಿಗೆ ಪೂರಕವಾಗಿರಬೇಕು, ಬದಲಿಯಾಗಬಾರದು. ಮಾರುಕಟ್ಟೆಯಲ್ಲಿ ಯಾವುದೇ ಪೂರಕವು ವ್ಯಾಯಾಮ, ಸರಿಯಾಗಿ ಪೋಷಕಾಂಶ ತುಂಬುವುದು ಮತ್ತು ಉತ್ತಮ ಗುಣಮಟ್ಟದ ನಿದ್ರೆಯನ್ನು ಬದಲಾಯಿಸುವುದಿಲ್ಲ. ಆದಾಗ್ಯೂ, ನೀವು ಪೂರಕಗಳನ್ನು ತೆಗೆದುಕೊಳ್ಳಲು ಹೊರಟಿದ್ದರೆ, ನೀವು ತೆಗೆದುಕೊಳ್ಳುತ್ತಿರುವ ಪೂರಕದ ಗುಣಮಟ್ಟದ ಬಗ್ಗೆ ಜಾಗೃತರಾಗಿರಲು ನಾನು ನಿಮ್ಮನ್ನು ಬಲವಾಗಿ…
ಬೆಂಗಳೂರು: ನಗರದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಬಿಬಿಎಂಪಿಯಿಂದ ಇನ್ಮುಂದೆ ಮನೆ ಬಾಗಿಲಿಗೆ ಇ-ಖಾತಾ ತಲುಪಿಸುವಂತ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಈ ಬಗ್ಗೆ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ಹಂಚಿಕೊಂಡಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಆಸ್ತಿ ಮಾಲೀಕರ ಮನೆ ಬಾಗಿಲಿಗೆ ಇ- ಖಾತಾ ತಲುಪಿಸುವ ಅಭಿಯಾನವನ್ನು ಮುಂದಿನ ವಾರದಿಂದ ಆರಂಭಿಸಲಾಗುವುದು ಎಂದಿದ್ದಾರೆ. ನಮ್ಮ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಕರಡು ಇ-ಖಾತಾದಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲದಿದ್ದರೆ, ನಮ್ಮ ಸಿಬ್ಬಂದಿ ಅವರ ಮನೆಗೆ ಹೋಗಿ ಅಗತ್ಯ ದಾಖಲೆಗಳನ್ನು ಪಡೆದು ಅಪ್‌ಲೋಡ್ ಮಾಡಿ ಅಂತಿಮ ಇ-ಖಾತಾ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ. https://twitter.com/KarnatakaVarthe/status/1890749482985554411
ಮಂಡ್ಯ : ಮದ್ದೂರು ತಾಲ್ಲೂಕು ಕಚೇರಿಯ ಭೂಮಿ ಶಾಖೆಯಲ್ಲಿ ಗ್ರಾಮ ಆಡಳಿತಾಧಿಕಾರಿಯಾಗಿರುವ ಲಕ್ಷ್ಮೀದೇವಿ ಅವರನ್ನು ಕರ್ತವ್ಯ ಲೋಪದಡಿ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಆದೇಶಿಸಿದ್ದಾರೆ. ಮದ್ದೂರು ತಾಲ್ಲೂಕಿನ ಕಸಬಾ ಹೋಬಳಿಯ ಭೀಮನಕೆರೆ ಗ್ರಾಮದ ಸರ್ವೆ ನಂಬರ್ 121/3ರ 2 ಎಕರೆ 4 ಗುಂಟೆ ಭೂಮಿಗೆ ಸಂಬಂಧಪಟ್ಟಂತೆ ಕಾಲಂ 11ರಲ್ಲಿದ್ದ ಋಣಭಾರವನ್ನು ತೆಗೆದು ಹಾಕಿ ಕರ್ತವ್ಯ ಲೋಪವೆಸಗಿದ್ದರು. ಈ ಬಗ್ಗೆ ಸಾರ್ವಜನಿಕರು ತಿಂಗಳ ಹಿಂದೆ ಮದ್ದೂರು ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಶಿಸ್ತುಕ್ರಮಕ್ಕೆ ಆಗ್ರಹಿಸಿದ್ದರು. ಈ ಬಗ್ಗೆ ಉಪ ವಿಭಾಗಾಧಿಕಾರಿ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಿದ್ದರಿಂದ ಜಿಲ್ಲಾಧಿಕಾರಿಯು ಲಕ್ಷ್ಮೀದೇವಿ ಅವರನ್ನು ಅಮಾನತುಗೊಳಿಸಿ ಆದ್ದೇಶಿಸಿದ್ದಾರೆ. ವರದಿ : ಗಿರೀಶ್ ರಾಜ್, ಮಂಡ್ಯ https://kannadanewsnow.com/kannada/3-year-old-boy-killed-in-firing-with-real-gun-as-game-pistol/ https://kannadanewsnow.com/kannada/bescom-urges-farmers-not-to-use-single-phase-farm-pump-sets-for-irrigation-at-night/
ಮಂಡ್ಯ: ಆಟದ ಪಿಸ್ತೂಲ್ ಎಂಬುದಾಗಿ ತಿಳಿದು ನಿಜವಾದ ಪಿಸ್ತೂಲ್ ನಿಂದ ಪುಟಾಣಿ ಮಗುವಿನ ಮೇಲೆ ಮಿಸ್ ಫೈರಿಂಗ್ ಮಾಡಿದ ಕಾರಣ, ಸ್ಥಳದಲ್ಲೇ ಸಾವನ್ನಪ್ಪಿರುವಂತ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ದೊಂದೆಮಾದಹಳ್ಳಿಯಲ್ಲಿ ಪಶ್ಚಿಮ ಬಂಗಾಳ ಮೂಲದ ಕುಟುಂಬವೊಂದು ಕೋಳಿ ಫಾರಂನಲ್ಲಿ ವಾಸವಾಗಿತ್ತು. ಈ ಫಾರಂ ಮಾಲೀಕ ನರಸಿಂಹಮೂರ್ತಿ ಎಂಬುವರು ಗನ್ ಲೈಸೆನ್ಸ್ ಪಡೆದಿದ್ದರು. ಈ ಕೋಳಿ ಫಾರಂಗೆ ಶಂಕರ್ ದಾಸ್ ಎಂಬುವರು ಆಗಾಗ ಆಗಮಿಸುತ್ತಿದ್ದರು. ಅವರ ಪುತ್ರ ಸುದೀಪ್ ದಾಸ್ ಕೂಡ ಇಂದು ಬಂದಿದ್ದರು. 13 ವರ್ಷದ ಸುದೀಪ್ ದಾಸ್ ಹಾಗೂ 3 ವರ್ಷದ ಅಭಿಷೇಕ್ ಆಟವಾಡುತ್ತಿದ್ದರು. ಸುದೀಪ್ ಕೈಗೆ ನಿಜವಾದ ಗನ್ ಸಿಕ್ಕಿದೆ. ಅದು ಅಸಲಿ ಎಂಬುದು ತಿಳಿಯದೇ ಆಟವಾಡುತ್ತಿದ್ದಾಗ ಆಟದ ಪಿಸ್ತೂಲ್ ಎಂಬುದಾಗಿ ಭಾವಿಸಿ ಅಭಿಷೇಕ್ ಮೇಲೆ ಮಿಸ್ ಫೈರಿಂಗ್ ಮಾಡಿದ್ದಾನೆ. ಗುಂಡು ತಗುಲಿ ಗಾಯಗೊಂಡಿದ್ದಂತ ಅಭಿಷೇಕ್(3) ಅನ್ನು ನಾಗಮಂಗಲದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಈ…
ಬೆಂಗಳೂರು: ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗಾಗಿ ನಡೆದಂತ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ವಿವೇಕ್ ರೆಡ್ಡಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಇಂದು ಬೆಂಗಳೂರು ವಕೀಲರ ಸಂಘದ ಚುನಾವಣೆ 2025-2028ಗೆ ಮತದಾನ ನಡೆಯಿತು. ಮತದಾನದ ಬಳಿಕ ನಡೆದಂತ ಮತಏಣಿಕೆ ಕಾರ್ಯದಲ್ಲಿ ಮೊದಲ ಸುತ್ತಿನಿಂದ ಅಂತಿಮ ಸುತ್ತಿನವರೆಗೆ ಅಧ್ಯಕ್ಷರ ಹುದ್ದೆಯ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿಯೇ ನಡೆಯಿತು. 9ನೇ ಸುತ್ತಿನಲ್ಲಿ ಒಟ್ಟು 13,403 ಮತಗಳು ಅಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ಚಲಾವಣೆಗೊಂಡಿದ್ದವು. ಇವುಗಳಲ್ಲಿ ಎಪಿ ರಂಗನಾಥ್ 4,518 ಮತಗಳನ್ನು ಪಡೆದಿದ್ದರೇ, ವಿವೇಕ್ ಸುಬ್ಬಾರೆಡ್ಡಿ ಅವರು 6,820 ಮತಗಳನ್ನು ಪಡೆದರು. ಅಂತಿಮವಾಗಿ ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಮತ್ತೊಮ್ಮೆ ಅಧ್ಯಕ್ಷರಾಗಿ ವಿವೇಕ್ ರೆಡ್ಡಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇನ್ನೂ ಜನರಲ್ ಸೆಕ್ರೇಟರಿ ಸ್ಥಾನಕ್ಕೆ ನಡೆದಂತ ಚುನಾವಣೆಯಲ್ಲಿ ಪ್ರವೀಣ್ ಗೌಡ ಹೆಚ್.ವಿ ಅವರು ಶಿವಮೂರ್ತಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಪ್ರವೀಣ್ ಗೌಡ ಅವರು 4854 ಮತಗಳನ್ನು ಪಡೆದರೇ, ಶಿವಮೂರ್ತಿ ಅವರು 2,321 ಮತಗಳನ್ನು ಪಡೆದು ಸೋಲು…
ಬೆಂಗಳೂರು: ನಗರದ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ದಿನಾಂಕ 22-02-2025ರಂದು ಬೆಂಗಳೂರಿನ ವಿದ್ಯಾಮಾನ್ಯನಗರದಲ್ಲಿ ಉಚಿತ ಆರೋಗ್ಯ ತಪಾಸಣೆ, ವೈದ್ಯಕೀಯ ಶಿಬಿರ ಮತ್ತು ಔಷಧ ವಿತರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಕುರಿತಂತೆ ಸಮೃದ್ಧಿ ಸೇವಾ ಚಾರಿಟೇಬಲ್ ಫೌಂಡೇಶನ್ (ರಿ.)ಯ ಲಕ್ಷ್ಮಿಕಾಂತ್ ಅವರು ಮಾಹಿತಿ ಹಂಚಿಕೊಂಡಿದ್ದು, ಫೆಬ್ರವರಿ 22ರಂದು ಉಚಿತ ಆರೋಗ್ಯ ತಪಾಸಣೆ ವೈದ್ಯಕೀಯ ಶಿಬಿರ & ಔಷದಗಳ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ. ಯಾವೆಲ್ಲ ಉಚಿತ ಆರೋಗ್ಯ ತಪಾಸಣೆ.? 1 ಕಣ್ಣಿನ ತಪಾಸಣೆ 2 ದಂತ ತಪಾಸಣೆ ಮತ್ತು ಚಿಕಿತ್ಸೆ 3 ಕನ್ಸಲ್ಟಿoಗ್ ಮತ್ತು ಮೂಲಭೂತ ದೇಹ ತಪಾಸಣೆ ಎಷ್ಟು ಹೊತ್ತಿಂದ ಎಷ್ಟು ಹೊತ್ತಿನವರೆಗೆ.? ಶನಿವಾರ 22 ಫ್ರೆಬ್ರವರಿ 2025 ಬೆಳಗ್ಗೆ 9.30 ರಿಂದ ಸಂಜೆ 5.00ರವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಬೆಂಗಳೂರಿನ ಎಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ.? 123 ಮಂಜುನಾಥ ದೇವಸ್ಥಾನ ಎದುರು ಅಂದ್ರಹಳ್ಳಿ ಮುಖ್ಯರಸ್ತೆ ಕಾಳಿಕಾ ನಗರ. ವಿದ್ಯಾಮಾನ್ಯನಗರ ಬೆಂಗಳೂರು 560058. ಈ ಬಗ್ಗೆ ಹೆಚ್ಚಿನ…
ಬೆಂಗಳೂರು: ರೈತರ ಪಂಪ್ ಸೆಟ್ ಗಳಿಗೆ ಹಗಲಿನ ವೇಳೆ 4 ಗಂಟೆಗಳ ಕಾಲ ಹಾಗೂ ರಾತ್ರಿ ವೇಳೆ 3 ಗಂಟೆಗಳ ಕಾಲ ಮೂರು ಫೇಸ್ ವಿದ್ಯುತ್ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿನ ಮನೆಗಳಿಗೆ ನಿರಂತರ ಜ್ಯೋತಿ ಫೀಡರ್ ಮೂಲಕ ದಿನದ 24 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ಇದನ್ನು ಹೊರತುಪಡಿಸಿ ನೀರಾವರಿ ಫೀಡರ್ ಗಳ ಮೂಲಕ ತೋಟದ ಮನೆಗಳಿಗೆ ಗೃಹೊಪಯೋಗಿ ಬಳಕೆಗೆ ಮಾತ್ರ ಹಾಗೂ ಅಲ್ಲಿ ವಾಸಿಸುವ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿ ಯನ್ನು ಗಮನದಲ್ಲಿರಿಸಿಕೊಂಡು ಸಿಂಗಲ್ ಫೇಸ್ ವಿದ್ಯುತ್ ಅನ್ನು ಸಂಜೆ 6 ರಿಂದ ಬೆಳಗ್ಗೆ 6ರವರೆಗೆ (ಮೂರು ಗಂಟೆಗಳ ಮೂರು ಫೇಸ್ ವಿದ್ಯುತ್ ಹೊರತಾಗಿ ) ಫೀಡರ್ ಗಳಿಗೆ ಓಪನ್ ಡೆಲ್ಟಾ ಮೂಲಕ ನೀಡಲಾಗುವುದು. ಆದರೆ ರಾತ್ರಿ ವೇಳೆ ಕೆಲವರು ಸಿಂಗಲ್ ಫೇಸ್ ಕೃಷಿ ಪಂಪ್ ಸೆಟ್ ಗಳನ್ನು ನೀರಾವರಿ ಫೀಡರ್ ಗಳ ಮೂಲಕ ಬಳಸುತ್ತಿರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಆದ್ದರಿಂದ ಈ ಸಮಯದಲ್ಲಿ…
ನವದೆಹಲಿ: ಆಡಳಿತಾರೂಡ ಎಎಪಿ ಮೂಲೆ ಕಚ್ಚಿ, ಬಿಜೆಪಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ದೆಹಲಿಯ ಮುಖ್ಯಮಂತ್ರಿ ಹೆಸರು ಘೋಷಣೆ ಸಂಬಂಧ ನಾಳೆ ಮಹತ್ವದ ಸಭೆ ನಡೆಯಲಿದೆ. ಆ ಬಳಿಕ ಫೆಬ್ರಬರಿ.18ರಂದು ದೆಹಲಿಯ ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದು ಬಂದಿದೆ. ಹೌದು. ನಾಳೆ ದೆಹಲಿ ಮುಖ್ಯಮಂತ್ರಿಯಾಗಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಬಗ್ಗೆ ಬಿಜೆಪಿಯ ಹಿರಿಯ ನಾಯಕರಿಂದ ಮಹತ್ವದ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ದೆಹಲಿಯ ಮುಖ್ಯಮಂತ್ರಿ ಹೆಸರು ಅಂತಿಮಗೊಳಿಸಲಾಗುತ್ತಿದೆ. ಆ ಬಳಿಕ ಘೋಷಣೆ ಕೂಡ ಮಾಡಲಾಗುತ್ತದೆ. ಇನ್ನೂ ಈ ಘೋಷಣೆಯ ಬಳಿಕ, ಫೆಬ್ರವರಿ 18 ರಂದು ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ನೂತನ ದೆಹಲಿ ಸಿಎಂ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. https://kannadanewsnow.com/kannada/delhi-stampede-no-platform-change-no-train-cancellation-says-indian-railways/ https://kannadanewsnow.com/kannada/another-diabolical-act-in-the-state-unidentified-woman-raped-brutally-murdered/
ಹಾಸನ: ನಗರದ ರೈಲ್ವೆ ನಿಲ್ದಾಣದ ಸಮೀಪದಲ್ಲಿ ನಿರ್ಮಾಣ ಹಂತದ ಕಟ್ಟದಲ್ಲೇ ಅಪರಿಚಿತ ಮಹಿಳ ಮೇಲೆ ಅತ್ಯಾಚಾರ ಎಸಗಿರುವಂತ ಕೀಚಕರು, ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಫೆ.13ರಂದು ನಡೆದಿರುವಂತ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಾಸನ ರೈಲು ನಿಲ್ದಾಣದ ಸಮೀಪದ ರೈಲ್ವೆ ಇಲಾಖೆಯ ನಿರ್ಮಾಣ ಹಂತದ ಕಟ್ಟಡದಲ್ಲೇ ಅಪರಿಚಿತ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಈ ವಿಷಯ ತಿಳಿದು ಸ್ಥಳಕ್ಕೆ ರೈಲ್ವೆ ಎಸ್ಪಿ ಸೌಮ್ಯಲತಾ ಅವರು, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಅತ್ಯಾಚಾರಕ್ಕೆ ಒಳಗಾದಂತ ಮಹಿಳೆಗೆ 40 ವರ್ಷವಿರಬಹುದು ಎಂಬುದಾಗಿ ಅಂದಾಜಿಸಲಾಗಿದೆ. ಕೊಲೆಯ ಆರೋಪಿಗಳ ಬಗ್ಗೆ ತನಿಖೆಯ ನಂತ್ರ ಮಾಹಿತಿ ಹೊರಬೀಳಬೇಕಿದೆ. https://kannadanewsnow.com/kannada/delhi-stampede-no-platform-change-no-train-cancellation-says-indian-railways/ https://kannadanewsnow.com/kannada/will-get-reply-on-karnataka-bjp-state-presidents-post-by-feb-20-by-vijayendra/