Author: kannadanewsnow09

ಬೆಂಗಳೂರು: ರಾಜ್ಯದಲ್ಲಿ ಪ್ರತಿಯೊಂದು ಗ್ರಾಮದಲ್ಲಿ ಜಾನುವಾರುಗಳ ಮೇವಿಗಾಗಿ ಗೋಮಾಳ ಮೀಸಲಿಡುವುದು ಕಡ್ಡಾಯ. ಹಾಗಾದ್ರೇ ರಾಜ್ಯ ಸರ್ಕಾರದ ನಿಯಮಗಳಂತೆ ಉಚಿತ ಗೋಮಾಳವನ್ನು ಒದಗಿಸುವ ರೀತಿ ಹೇಗೆ ಎನ್ನುವ ಮಹತ್ವದ ಮಾಹಿತಿಯನ್ನು ಮುಂದೆ ಓದಿ. ಈ ಕುರಿತಂತೆ ಕರ್ನಾಟಕ ಭೂ ಕಂದಾಯ ನಿಯಮಗಳು 19666, 1974ರ ಮಾರ್ಚ್ 7ರ ವರೆಗೆ ತಿದ್ದುಪಾಟಾದ ರೀತ್ಯಾ ನಿಯಮಗಳ ಅಳವಡಿಕೆ ಅನುಸಾರ ಪ್ರತಿ ನೂರು ಜಾನುವಾರಗಳಿಗೆ ಹನ್ನೆರಡು ಹೆಕ್ಟೇರುಗಳಂತೆ ಪ್ರತಿಯೊಂದು ಗ್ರಾಮದ ಜಾನುವಾರಿಗೂ ಸರ್ಕಾರಿ ಭೂಮಿಯನ್ನು ಉಚಿತ ಗೋಮಾಳವಾಗಿ ಪ್ರತ್ಯೇಕವಾಗಿ ಇಡತಕ್ಕದ್ದು ಎಂದಿದೆ. ಜಾನುವಾರುಗಳನ್ನು ಲೆಕ್ಕ ಹಾಕುವಾಗ ಆಡು, ಕುರಿ ಅಥವಾ ಕರು ಅಥವಾ ಹಸು ಅಥವಾ ಎಮ್ಮೆ ಇವುಗಳೊಂದನ್ನೂ ಒಂದೊಂದು ಜಾನುವಾರೆಂದು ಪರಿಗಣಿಸಬೇಕು ಎಂಬುದಾಗಿ ತಿಳಿಸಿದೆ. ಸಂಬಂಧ ಪಟ್ಟ ಗ್ರಾಮದಲ್ಲಿ ಅಥವಾ ಪಕ್ಷದ ಗ್ರಾಮದಲ್ಲಿ ಗ್ರಾಮದ ಜಾನುವಾರು ಮೇಯುವುದಕ್ಕೆ ಅನುಕೂಲವಾಗುವಂತೆ ಸಾಕಷ್ಟು ಅರಣ್ಯ ಪ್ರದೇಶವಿದ್ದರೇ, ಅದರ ವಿಸ್ತೀರ್ಣಕ್ಕನುಗುಣವಾಗಿ ಉಚಿತ ಗೋಮಾಳವಾಗಿ ಪ್ರತ್ಯೇಕವಾಗಿ ಇದೆಯೆಂದು ಪ್ರದೇಶದ ವಿಸ್ತೀರಣವನ್ನು ಕಡಿಮೆ ಮಾಡಬಹುದಾಗಿದೆ. ಗ್ರಾಮದಲ್ಲಿ ಯಾವ ಗೋಮಾಳವೂ ಇಲ್ಲದಿದ್ದರೇ ಅಥವಾ ಇರುವ ಭೂಮಿಯನ್ನು (1)ನೇ…

Read More

ಕೇರಳ: ಭಗವಾನ್ ಅಯ್ಯಪ್ಪನಿಗೆ ಸಮರ್ಪಿತವಾಗಿರುವ ಶಬರಿಮಲೆ ದೇವಸ್ಥಾನವು ಭಾರತದ ಅತ್ಯಂತ ಪೂಜ್ಯ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಇದು ವಾರ್ಷಿಕವಾಗಿ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಇದು ಕೇರಳದ ಪಥನಂತಿಟ್ಟ ಜಿಲ್ಲೆಯಲ್ಲಿ ಸಮುದ್ರ ಮಟ್ಟದಿಂದ ಸುಮಾರು 3000 ಅಡಿ ಎತ್ತರದಲ್ಲಿರುವ ಬೆಟ್ಟದ ತುದಿಯಲ್ಲಿರುವ ಕೇರಳದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಈ ವಿಶಿಷ್ಟ ದೇವಾಲಯವು ಎಲ್ಲಾ ಧರ್ಮದ ಜನರಿಗೆ ತೆರೆದಿರುತ್ತದೆ, ಧಾರ್ಮಿಕ ಸಾಮರಸ್ಯವನ್ನು ಉತ್ತೇಜಿಸುತ್ತದೆ. ಈ ಸನ್ನಿಧಿಗೆ ತೆರಳುವಂತ ಅಯ್ಯಪ್ಪ ಮಾಲಾಧಾರಿಗಳಿಗೆ ಮಹತ್ವದ ಮಾಹಿತಿ ಮುಂದಿದೆ ಓದಿ. ಈ ದೇವಾಲಯವು ವರ್ಷಪೂರ್ತಿ ತೆರೆದಿರುವುದಿಲ್ಲ. ಇದನ್ನು ‘ಮಂಡಲಪೂಜೆ’, ‘ಮಕರವಿಳಕ್ಕು’, ‘ವಿಷು’ ಮತ್ತು ಪ್ರತಿ ಮಲಯಾಳಂ ತಿಂಗಳ ಮೊದಲ ದಿನದಂದು ಪೂಜೆಗೆ ಪ್ರವೇಶಿಸಬಹುದು. ಮಕರ ಸಂಕ್ರಾಂತಿಯ ಸಮಯದಲ್ಲಿ ಶಬರಿಮಲೆಯಲ್ಲಿ ಪ್ರತಿವರ್ಷ ನಡೆಯುವ ‘ಮಕರವಿಳಕ್ಕು’ ಉತ್ಸವವು ಪವಿತ್ರ ಮಕರ ಜ್ಯೋತಿ ದರ್ಶನದಿಂದ ಗುರುತಿಸಲ್ಪಟ್ಟ ಮಹತ್ವದ ಘಟನೆಯಾಗಿದೆ. ಈ ವರ್ಷ, ಮಂಡಲ ಪೂಜೆಯ ನಂತರ ಡಿಸೆಂಬರ್ 26 ರಂದು ಮುಚ್ಚಲ್ಪಟ್ಟ ನಂತರ ಡಿಸೆಂಬರ್ 30 ರಂದು ದೇವಾಲಯವನ್ನು ಮತ್ತೆ ತೆರೆಯಲಾಯಿತು.…

Read More

ಬೆಂಗಳೂರು: ನಗರದಲ್ಲಿ ಸೆಂಟ್ರಿಂಗ್ ಪೋಲ್ ಬಿದ್ದು ಬಾಲಕಿ ಸಾವನ್ನಪ್ಪಿದ್ದರು. ಈ ಘಟನೆಯ ಸಂಬಂಧ ಗುತ್ತಿಗೆದಾರನನ್ನು ಪೊಲೀಸರು ಬಂಧಿಸಿದ್ದಾರೆ.  ಬೆಂಗಳೂರಿನ ವಿವಿ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆಂಟ್ರಿಂಗ್ ಪೋಲ್ ಬಿದ್ದು ಬಾಲಕಿಯೊಬ್ಬಳು ಸಾವನ್ನಪ್ಪಿದ್ದಳು. ಈ ಘಟನೆ ನಂತ್ರ ಕಂಟ್ರ್ಯಾಕ್ಟರ್ ಚಂದ್ರಶೇಖರ್ ಎಂಬಾತ ನಾಪತ್ತೆಯಾಗಿದ್ದರು. ಇಂದು ಪ್ರಕರಣ ತನಿಖೆಯನ್ನು ನಡೆಸುತ್ತಿದ್ದಂತ ವಿವಿ ಪುರಂ ಠಾಣೆಯ ಪೊಲೀಸರು ಬಾಲಕಿ ಸಾವಿಗೆ ಕಾರಣವಾಗಿದ್ದಂತ ಕಂಟ್ರ್ಯಾಕ್ಟರ್ ಚಂದ್ರಶೇಖರ್ ಎಂಬಾತನನ್ನು ಬಂಧಿಸಿದ್ದಾರೆ. https://kannadanewsnow.com/kannada/is-your-aadhaar-card-being-misused-find-out-this-way-keep-it-safe/ https://kannadanewsnow.com/kannada/good-news-for-the-workers-of-the-state-you-will-get-all-these-facilities-from-the-government/

Read More

“ವೈಕುಂಠ” ಎಂದರೆ ವಿಷ್ಣುಲೋಕ. ವಿಷ್ಣುವಿಗೆ ವೈಕುಂಠ ಎಂಬ ಹೆಸರಿದೆ ಎಂದು ತಿಳಿದುಬರುತ್ತದೆ, ಕಾರಣ ಒಂದು ಮನ್ವಂತರದಲ್ಲಿ ವಿಷ್ಣುವು ವಿಕುಂಠೆಯೆಂಬ “ಸ್ತ್ರೀ”ಯಲ್ಲಿ ಅವತರಿಸಿದನು, ಇದರಿಂದ ನಾರಾಯಣನಿಗೆ ವೈಕುಂಠನೆಂಬ ಹೆಸರು ಬಂತು ಎಂದು ಮಹಾಭಾರತದ ಶಾಂತಿಪರ್ವದಿಂದ ತಿಳಿದುಬರುತ್ತದೆ. ಇನ್ನು “ಏಕಾದಶಿ” ಎಂದರೆ ಚಾಂದ್ರಮಾನದ ಹನ್ನೊಂದನೆಯ ತಿಥಿ ಎಂದೂ ಸ್ಥೂಲವಾಗಿ ಹೇಳಬಹುದು. “ಏಕಾದಶಿ” ಒಂದು ವ್ರತ. ಏಕಾದಶಿ ದಿನದಂದು ಉಪವಾಸವಿದ್ದು, ದ್ವಾದಶಿಯ ದಿನ, ಆ ತಿಥಿಯಲ್ಲಿಯೇ ನಿತ್ಯಕರ್ಮ ಮುಗಿಸಿ ಭೋಜನ ಮಾಡಬೇಕು. ದಶಮಿಯಂದು ಅಂದರೆ ಏಕಾದಶಿಯ ಹಿಂದಿನ ದಿನ ಒಂದು ಹೊತ್ತು ಮಧ್ಯಾಹ್ನ ಊಟಮಾಡಿ, ಭೋಗಗಳನ್ನು ತ್ಯಜಿಸಿ, ಮರುದಿನ ಏಕಾದಶಿ ಉಪವಾಸಮಾಡಬೇಕು. ಇಲ್ಲಿ ಉಪವಾಸ ಎಂದರೆ ಆಹಾರ ಸೇವಿಸದಿರುವುದು ಎಂಬುದೊಂದು ಅರ್ಥವಾದರೆ ಇನ್ನೊಂದು ಅರ್ಥ ಭಗವಂತನ ಸಮೀಪದಲ್ಲಿರುವುದು.ಅಂದರೆ ಶುಚಿಯಾಗಿ ಎಡಬಿಡದೆ ಭಗವಂತನ ಸ್ಮರಣೆಮಾಡುತ್ತಿರುವುದು ಎಂದರ್ಥ. ಇದರಿಂದ ಏಕಕಾಲಕ್ಕೆ ದೇಹಕ್ಕೆ ವಿಶ್ರಾಂತಿ, ಮನಸ್ಸಿಗೆ ಭಗವನ್ನಾಮ ಸ್ಮರಣೆಯಿಂದ ಶಾಂತಿ ದೊರೆಯುತ್ತದೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564…

Read More

ನವದೆಹಲಿ: ಆಧಾರ್ ಕಾರ್ಡ್ ಭಾರತೀಯ ನಿವಾಸಿಗಳಿಗೆ ನಿರ್ಣಾಯಕ ದಾಖಲೆಯಾಗಿದೆ. ಇದು ಗುರುತು ಮತ್ತು ವಿಳಾಸದ ಅನನ್ಯ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಇದರ 12 ಅಂಕಿಗಳ ಸಂಖ್ಯೆಯು ಸರ್ಕಾರಿ ಯೋಜನೆಗಳು, ಬ್ಯಾಂಕಿಂಗ್ ಮತ್ತು ದೂರಸಂಪರ್ಕದಂತಹ ಅಗತ್ಯ ಸೇವೆಗಳಿಗೆ ಪ್ರವೇಶವನ್ನು ನೀಡುತ್ತದೆ. ಆಧಾರ್ ಕಾರ್ಡ್ನಲ್ಲಿ ಸೂಕ್ಷ್ಮ ವೈಯಕ್ತಿಕ ಮತ್ತು ಬಯೋಮೆಟ್ರಿಕ್ ಮಾಹಿತಿ ಸಂಗ್ರಹವಾಗಿರುವುದರಿಂದ ಅದನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಅದು ಹೇಗೆ ಅಂತ ಮುಂದೆ ಓದಿ. ಕಳೆದುಹೋದರೆ ಅಥವಾ ದುರುಪಯೋಗವಾದರೆ, ಇದು ವಿಶೇಷವಾಗಿ ಹಣಕಾಸು ಖಾತೆಗಳು ಮತ್ತು ಸರ್ಕಾರಿ ಪ್ರಯೋಜನಗಳಿಗೆ ಲಿಂಕ್ ಮಾಡಿದಾಗ ಗಂಭೀರ ಅಪಾಯಗಳನ್ನು ಉಂಟುಮಾಡಬಹುದು. ಇದು ನಿಮ್ಮ ಆಧಾರ್ ವಿವರಗಳನ್ನು ರಕ್ಷಿಸುವುದು ಮತ್ತು ಸಂಭಾವ್ಯ ದುರುಪಯೋಗದ ವಿರುದ್ಧ ಜಾಗರೂಕರಾಗಿರುವುದು ಅತ್ಯಗತ್ಯ. ಈ ಕೆಳಗಿನ ವಿಧಾನ ಅನುಸರಿಸಿ, ನಿಮ್ಮ ಆಧಾರ್ ಕಾರ್ಡ್ ದುರುಪಯೋಗ ಪತ್ತೆ ಹಚ್ಚಿ. ಆನ್ ಲೈನ್ ನಲ್ಲಿ ಆಧಾರ್ ದುರುಪಯೋಗವನ್ನು ಪರಿಶೀಲಿಸಲು ಹಂತಗಳು – ಮೈಆಧಾರ್ ಪೋರ್ಟಲ್ಗೆ ಭೇಟಿ ನೀಡಿ ಅಧಿಕೃತ ಮೈಆಧಾರ್ ವೆಬ್ಸೈಟ್ಗೆ myAadhaar – Unique Identification Authority of…

Read More

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ರಜೆ ಮೇಲೆ ತೆರಳುವ ಮುನ್ನ ಕಡ್ಡಾಯವಾಗಿ ಮೇಲಾಧಿಕಾರಿಗಳ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಒಂದು ವೇಳೆ ತಪ್ಪಿದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ. ಈ ಕುರಿತಂತೆ ಸುತ್ತೋಲೆ ಹೊರಡಿಸಲಾಗಿದ್ದು, ಗೌರವಾನ್ವಿತ ಮಾನ್ಯ ಉಚ್ಚ ನ್ಯಾಯಾಲಯವು ಸರ್ಕಾರಿ ನೌಕರರು ರಜೆ ಪಡೆಯದೆ ಅನಧಿಕೃತವಾಗಿ ಕೆಲಸಕ್ಕೆ ಗೈರಾಗುವುದು ದುರ್ನಡತೆ ತೋರಿದಂತೆ, ಹಾಗಾಗಿ ಅಂತಹ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬಹುದು ಮತ್ತು ಉದ್ಯೋಗಕ್ಕೆ ಹಾಜರಾಗಬೇಕಾದ ಸಮಯದಲ್ಲಿ ಸಕಾರಣವಿಲ್ಲದೆ ಗೈರಾಗಬಾರದು ಎಂಬ ಹೊಣೆಗಾರಿಕೆ ಉದ್ಯೋಗಿ ಮೇಅರುತ್ತದೆ. ರಜೆ ಮಂಜೂರಾಗದೆ ಗೈರಾಗುವುದನ್ನು ಹಕ್ಕು ಎಂದು ಉದ್ಯೋಗಿಗಳು ಪರಿಗಣಿಸಬಾರದು. ಕಚೇರಿಗೆ ಅನಧಿಕೃತವಾಗಿ ಗೈರುಹಾಜರಾಗುವ ತಪ್ಪಿತಸ್ಥ ಉದ್ಯೋಗಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದು ಸಮರ್ಥನೀಯವಾಗಿದೆ ಎಂದು ಅಭಿಪ್ರಾಯ ಪಟ್ಟಿರುತ್ತದೆ ಎಂದಿದೆ. ಆದುದರಿಂದ, ಈ ಸಚಿವಾಲಯದ ಎಲ್ಲಾ ಅಧಿಕಾರಿ/ನೌಕರರುಗಳು ರಜೆ ಮೇಲೆ ತೆರಳುವ ಮುನ್ನ ಕಡ್ಡಾಯವಾಗಿ ಮೇಲಾಧಿಕಾರಿಗಳ ಪೂರ್ವಾನುಮತಿಯನ್ನು ಪಡೆದು ರಜೆ ಮೇಲೆ ತೆರಳಬೇಕೆಂದು, ಒಂದು ವೇಳೆ ಕಚೇರಿಗೆ ಅನಧಿಕೃತವಾಗಿ ಅಧಿಕಾರಿ/ನೌಕರರುಗಳು ಗೈರುಹಾಜರಾದಲ್ಲಿ…

Read More

ಬೆಂಗಳೂರು: ಕರ್ನಾಟಕದಲ್ಲಿ ಅಧಿಕಾರದುದ್ದಕ್ಕೂ BJP ಮಾಡಿದ್ದು ಕೇವಲ ರಾಜ್ಯದ ಲೂಟಿಯಾಗಿದೆ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಬಿಜೆಪಿ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಕಿಡಿಕಾರಿದೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಕಾಂಗ್ರೆಸ್ ಪಕ್ಷವು, ಅಧಿಕಾರದುದ್ದಕ್ಕೂ ಬಿಜೆಪಿ ಮಾಡಿದ್ದು ಕೇವಲ ರಾಜ್ಯದ ಲೂಟಿ, ಈಗ ಜನಪರ ಕಾಂಗ್ರೆಸ್ ಸರ್ಕಾರದ ಬಗ್ಗೆ ಟೀಕಿಸಲು ವಿಷಯಗಳೇ ಇಲ್ಲದೆ, ತಮ್ಮ ಅವಧಿಯ ಅಕ್ರಮ, ಅನಾಚಾರಗಳು ಬೆತ್ತಲಾಗುತ್ತವೆ ಎಂಬ ಆತಂಕದಲ್ಲಿ ವೈಯಕ್ತಿಕವಾಗಿ ಕಾಂಗ್ರೆಸ್ ನಾಯಕರ, ಸಚಿವರ ತೇಜೋವಧೆಗೆ ಇಳಿದು ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ, ಗ್ಯಾರಂಟಿ ಯೋಜನೆಗಳ ವಿರುದ್ಧ ವಿಷ ಕಾರುತ್ತಿದೆ ಎಂದು ಗುಡುಗಿದೆ. ಭ್ರಷ್ಟಾಚಾರದ ಪಿತಾಮಹರಾದ ಬಿಜೆಪಿ ನಾಯಕರು ಅವರ ಘನ ಕಾರ್ಯಗಳ ಬಗ್ಗೆ ಕೇಳಿದರೆ ಮಾತ್ರ ಬೆನ್ನು ತಿರುಗಿಸಿ ಓಡುತ್ತಾರೆ ಎಂದು ಹೇಳಿದೆ. ಹೆಣದ ಮೇಲೆ ಹಣ ಲೂಟಿ ಮಾಡಿದ ಸಾವಿರಾರು ಕೋಟಿ ಕೋವಿಡ್ ಹಗರಣ ನೂರಾರು ಕೋಟಿ ಕೊಳ್ಳೆ ಹೊಡೆದ ಪಿಎಸ್‌ಐ ನೇಮಕಾತಿ ಅಕ್ರಮ ಬೋವಿ ನಿಗಮದಲ್ಲಿ ₹87 ಕೋಟಿ ಹಗರಣ  ದೇವರಾಜ್ ಅರಸ್ ಟ್ರಕ್ ಟರ್ಮಿನಲ್…

Read More

ವಿಜಯಪುರ: ಕರ್ನಾಟಕದಲ್ಲಿ ಗಂಡಸರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬಾರದು ಎಂಬುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯದಲ್ಲಿ ಸಾರಿಗೆ ಬಸ್ ಟಿಕೆಟ್ ದರ ಶೇ.15ರಷ್ಟು ಏರಿಕೆ ಮಾಡಿದ್ದಾರೆ. ಮಹಿಳೆಯರಿಗೆ ಉಚಿತವಾಗಿ ಕೊಟ್ಟು ಗಂಡಸರಿಂದ ಹೆಚ್ಚಿನ ದುಡ್ಡು ವಸೂಲಿ ಮಾಡುತ್ತಿದದಾರೆ. ಕರ್ನಾಟಕದಲ್ಲಿ ಗಂಡಸರು ಏನು ಪಾಪ ಮಾಡಿದ್ದರು ಅಂತ ಪ್ರಶ್ನಿಸಿದರು. ಕಾಂಗ್ರೆಸ್ ಸರ್ಕಾರ ಗಂಡಸರಿಗೆ ಅನ್ಯಾಯ ಮಾಡುತ್ತಿದೆ. ಇವರ ರಕ್ಷಣೆಗೆ ಹೆಣ್ಣುಮಕ್ಕಳು ಕೂಡ ನಿಲ್ಲಬೇಕು. ಕರ್ನಾಟಕದ ಗಂಡಸರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬಾರದು. ಹೆಣ್ಣಮಕ್ಕಳು ಕೂಡ ಕಾಂಗ್ರೆಸ್ ಮತ ಹಾಕಬಾರದು ಅಂತ ಹೇಳಿದರು. https://kannadanewsnow.com/kannada/sincere-efforts-to-implement-kantharaja-report-cm-siddaramaiah/ https://kannadanewsnow.com/kannada/good-news-for-the-workers-of-the-state-you-will-get-all-these-facilities-from-the-government/

Read More

ದಾವಣಗೆರೆ : ಕನಕದಾಸರು ಆಕಸ್ಮಿಕವಾಗಿ ಕುರುಬ ಜಾತಿಯಲ್ಲಿ ಹುಟ್ಟಿದ ಜಾತ್ಯತೀತ ದಾರ್ಶನಿಕ ಸಂತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು. 537 ನೇ ಕನಕ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ಕುರುಬ ಜಾತಿಯಲ್ಲಿ ಹುಟ್ಟಿ ಜಾತಿ ರಹಿತ ಸಮ‌ಸಮಾಜಕ್ಕಾಗಿ ಹೋರಾಡಿದ, ಜಾತ್ಯತೀತ ಸಂತ. ಮನುಕುಲದ ಏಳೆಗೆಗಾಗಿ ಶ್ರಮಿಸಿ ದಾಸ ಶ್ರೇಷ್ಠರಾದರು ಎಂದರು. ಶರಣ ಸಾಹಿತ್ಯದಲ್ಲಿ ಅಣ್ಣ ಬಸವಣ್ಣ, ದಾಸ ಸಾಹಿತ್ಯದಲ್ಲಿ ಕನಕದಾಸರು ಅತ್ಯಂತ ಪ್ರಮುಖರು. ಬುದ್ದನಿಂದ ಕನಕದಾಸರವರೆಗೂ, ಆ ನಂತರವೂ ಬಹಳ ಪುಣ್ಯಾತ್ಮರು ಜಾತಿರಹಿತ ಸಮಾಜಕ್ಕಾಗಿ ಶ್ರಮಿಸಿದ್ದಾರೆ. ಅಂಬೇಡ್ಕರ್, ನಾರಾಯಣಗುರು ಮತ್ತು ಕನಕದಾಸರು ಕೂಡ ಜಾತಿ ವ್ಯವಸ್ಥೆ, ವರ್ಣ ವ್ಯವಸ್ಥೆಯ ಕಾರಣಕ್ಕೆ ಅವಮಾನಿತರಾಗಿದ್ದರು. ಯಾರೂ ಜನ್ಮತಃ ದಡ್ಡರಾಗಿರಲು ಸಾಧ್ಯವಿಲ್ಲ. ಕಾಳಿದಾಸರು ಶಾಕುಂತಲಾ ಬರೆದದ್ದು, ವ್ಯಾಸರು ಮಹಾಭಾರತ ಬರೆದದ್ದು, ವಾಲ್ಮೀಕಿ ರಾಮಾಯಣ ಬರೆದದ್ದೇ ಹುಟ್ಟಿನಿಂದ ಯಾರೂ ದಡ್ಡರಲ್ಲ ಎನ್ನುವುದಕ್ಕೆ ಉದಾಹರಣೆಯಾಗಿದೆ ಎಂದರು. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಕಾರಣದಿಂದ ನನಗೆ ಮುಖ್ಯಮಂತ್ರಿ ಅಗುವ ಅವಕಾಶ ಸಿಕ್ಕಿತು ಎಂದರು. ಒಬ್ಬರಿಗೆ ಒಂದೇ ಮತ. ಎಲ್ಲಾ ಜಾತಿ,…

Read More

ಮಂಡ್ಯ: ಬೆಂಗಳೂರಿನ ನವರತ್ನ ಜ್ಯೂವೆಲ್ಲರಿ ಮಾಲೀಕರಿಗೆ, ಶಿವಮೊಗ್ಗದ ಸಾಗರದ ಪ್ರಗತಿ ಜ್ಯೂವೆಲ್ಲರಿ ಮಾಲೀಕರಿಗೆ ಐಶ್ವರ್ಯ ಗೌಡ ಲಕ್ಷ, ಕೋಟಿ ಬೆಲೆ ಬಾಳುವ ಚಿನ್ನಾಭರಣ ಪಡೆದು, ವಂಚಿಸಿತ್ತದ್ದರು. ಈ ಬಳಿಕ ಮಂಡ್ಯದ ಚಿನ್ನದ ವ್ಯಾಪಾರಿಗೂ 55 ಲಕ್ಷ ವಂಚನೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರೇ, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಹಣ ವಾಪಾಸ್ಸು ಕೊಡಿಸುವಂತೆ ಮನವಿ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಪೂರ್ವ ಠಾಣೆಯ ಪೊಲೀಸರಿಗೆ ಈ ಸಂಬಂಧ ಮಾಲೀಕರಾದಂತ ರವಿಕುಮಾರ್ ಹಾಗೂ ಪೂರ್ಣಿಮಾ ಎಂಬುವರು ಕಳೆದ 8 ವರ್ಷಗಳ ಹಿಂದೆ 55 ಲಕ್ಷ ಮೌಲ್ಯದ ಚಿನ್ನಾಭರಣ ಪಡೆದು ಐಶ್ವರ್ಯ ಗೌಡ ಹಣ ನೀಡದೇ ವಂಚಿಸಿರೋದಾಗಿ ದೂರು ನೀಡಲಾಗಿದೆ. ಇನ್ನೂ ಮಂಡ್ಯದ ಕೆ ಎಂ ದೊಡ್ಡಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾದಂತ ಜ್ಯೂವೆಲ್ಲರಿ ಮಾಲೀಕರು ನಮ್ಮ ಹಣವನ್ನು ವಾಪಾಸ್ಸು ಕೊಡಿಸುವಂತೆ ಮನವಿ ಮಾಡಿದರು. ಈ ಮನವಿಯನ್ನು ಆಲಿಸಿದಂತ ಹೆಚ್ ಡಿಕೆ, ಅಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ,…

Read More