Subscribe to Updates
Get the latest creative news from FooBar about art, design and business.
Author: kannadanewsnow09
ದೆಹಲಿ : “ನಿಮ್ಮ ಮನೆಗೆ ನಾವು, ನಮ್ಮ ಮನೆಗೆ ನೀವು ಬರುವುದು ರಾಜಕೀಯದಲ್ಲಿ ಸಾಮಾನ್ಯ. ನಾನೂ ಸಹ ಆಗಾಗ್ಗೆ ಔತಣಕೂಟ, ಸಭೆ ಕರೆಯುತ್ತಿರುತ್ತೇನೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು. ನಿಮ್ಮ ವಿದೇಶಿ ಪ್ರವಾಸದ ವೇಳೆಯಲ್ಲೇ ರಾಜ್ಯದಲ್ಲಿ ಡಿನ್ನರ್ ರಾಜಕೀಯ ನಡೆದಿದೆಯೇ ಎಂದು ಕೇಳಿದಾಗ, “ಮಾಧ್ಯಮದವರು ಔತಣಕೂಟಕ್ಕೆ ಏಕೆ ರಾಜಕಾರಣ ಬೆರೆಸುತ್ತೀರಿ? ಇದಕ್ಕೆ ಇಲ್ಲಸಲ್ಲದ ಅರ್ಥವನ್ನು ಏಕೆ ಕಲ್ಪಿಸುತ್ತೀರಿ? ನಾನು ಕಳೆದ ನಾಲ್ಕೈದು ವರ್ಷಗಳಿಂದ ಕುಟುಂಬದವರ ಜೊತೆ ಎಲ್ಲಿಯೂ ಹೋಗಿರಲಿಲ್ಲ. ಆದ ಕಾರಣಕ್ಕೆ ವಿದೇಶಿ ಪ್ರವಾಸಕ್ಕೆ ತೆರಳಿದ್ದೆ” ಎಂದರು. ಡಿಸಿಎಂ ಅವರ ಅನುಪಸ್ಥಿತಿಯಲ್ಲಿ ಔತಣಕೂಟ ಸಭೆ ನಡೆದಿದೆ ಎಂದು ಕೇಳಿದಾಗ, “ಅನೇಕ ಮಂತ್ರಿಗಳು ಸಹ ಕುಟುಂಬದವರ ಜೊತೆ ವಿದೇಶಿ ಪ್ರವಾಸ ಹೋಗಿದ್ದರು. ಬೆಂಗಳೂರಿನಲ್ಲಿ ಇದ್ದವರು ಒಂದು ಸಂಜೆ ಒಟ್ಟಿಗೆ ಸೇರಿದ್ದಾರೆ. ಇದರಲ್ಲಿ ತಪ್ಪೇನಿದೆ?” ಎಂದರು. ಕ್ಯಾಬಿನೆಟ್ ಪುನರ್ ರಚನೆಯಾಗಬೇಕು ಎಂದು ಎಚ್.ಕೆ.ಪಾಟೀಲ್ ಅವರು ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ…
ಬೆಂಗಳೂರು: ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಫೆಬ್ರವರಿ 10 ರಿಂದ 14ವರೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದ್ದು, ಈ ಬಾರಿಯ ವೈಮಾನಿಕ ಪ್ರದರ್ಶನ ‘ಕೋಟಿ ಅವಕಾಶಗಳ ಪಥ’ ಎನ್ನುವ ಧ್ಯೇಯವನ್ನು ಹೊಂದಿದೆ. ಈ ಕುರಿತಂತೆ ಎಕ್ಸ್ ನಲ್ಲಿ ಏರೋ ಇಂಡಿಯಾ ಮಾಹಿತಿ ಹಂಚಿಕೊಂಡಿದ್ದು, ಏರೋ ಇಂಡಿಯಾ 2025 – ವಾಯು ಶಕ್ತಿಯ ಮಹಾ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಗಿದೆ. ಬೆಂಗಳೂರಲ್ಲಿ ಮುಂಬರುವ ಫೆಬ್ರವರಿ 10ರಿಂದ 14ರವರೆಗೆ ಏರೋ ಇಂಡಿಯಾ ಏರ್ ಶೋ ನಡೆಯಲಿದೆ ಎಂದಿದೆ. ಭಾರತದ ಅತ್ಯಾಧುನಿಕ ತಂತ್ರಜ್ಞಾನ, ವಾಯುಪಡೆಯ ಶಕ್ತಿ ಮತ್ತು ನಮ್ಮ ರಾಷ್ಟ್ರದ ಭದ್ರತೆಗೆ ಸಮರ್ಪಿತವಾದ ಶಕ್ತಿಯನ್ನು ಪ್ರದರ್ಶಿಸುವ ವಿಸ್ಮಯಕಾರಿ ಮತ್ತು ಜಾಗತಿಕವಾಗಿ ಆಕರ್ಷಿಸುವ ಏರ್ ಶೋಗೆ ಸಾಕ್ಷಿಯಾಗಿ! ಈ ಕಾರ್ಯಕ್ರಮವು ತಂತ್ರಜ್ಞಾನ ಮತ್ತು ರಕ್ಷಣೆಯಲ್ಲಿ ಭಾರತ ಎಷ್ಟು ಮುಂದುವರಿದಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ವಿಜ್ಞಾನ ಮತ್ತು ಶಾಂತಿಯ ಈ ಭವ್ಯ ಪ್ರದರ್ಶನವನ್ನು ತಪ್ಪಿಸಿಕೊಳ್ಳಬೇಡಿ ಎಂಬುದಾಗಿ ಮನವಿ ಮಾಡಿದೆ. ಇನ್ನೂ ಈ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರು https://www.aeroindia.gov.in/visitor-registration ಲಿಂಕ್ ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು…
ಬೆಂಗಳೂರು: ರಾಜ್ಯದ ಕೆ ಎಸ್ ಆರ್ ಟಿಸಿ ನೌಕರರಿಗೆ ಗುಡ್ ನ್ಯೂಸ್ ಎನ್ನುವಂತೆ ನಗದು ರಹಿತ ಚಿಕಿತ್ಸಾ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇಂದು ಅಧಿಕೃತವಾಗಿ ಸಿಎಂ ಸಿದ್ಧರಾಮಯ್ಯ ಅವರು ಈ ಯೋಜನೆಯನ್ನು ಲೋಕಾರ್ಪಣೆಗೊಳಿಸಿದರು. ಈ ಕುರಿತಂತೆ ಕೆ ಎಸ್ ಆರ್ ಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಇಂದು, (06.01.2025) ವಿಧಾನಸೌಧದ, ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು “ಕೆ.ಎಸ್.ಆರ್.ಟಿ.ಸಿ ಆರೋಗ್ಯ” ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದರು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದಂತ ಅವರು, ಈ ಯೋಜನೆಯು ಉತ್ತಮವಾಗಿದ್ದು, ನೌಕರರು ಮತ್ತು ಅವರ ಅವಲಂಬಿತ ಕುಟಂಬದ ಸದಸ್ಯರುಗಳು ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು. ನಮ್ಮ ಸರ್ಕಾರವು ಕೆ.ಎಸ್.ಆರ್.ಟಿ.ಸಿ ನೌಕರರಿಗೆ ಒಳ್ಳೆಯ ಕಾರ್ಯ ಮಾಡುತ್ತಿದೆ. ಶಕ್ತಿ ಯೋಜನೆಯು ಜಾರಿಯಾದ ನಂತರ ಲಿಂಗ ತಾರತಮ್ಮ ಹೋಗಲಾಡಿಸಿ, ಆರ್ಥಿಕವಾಗಿ ಮಹಿಳೆಯರನ್ನು ಸಬಲೀಕರಣಗೊಳಿಸಿದೆ. ವೈದ್ಯರನ್ನು ಉದ್ದೇಶಿಸಿ ಮಾತನಾಡಿದ ಮಾನ್ಯರು, ಈ ಯೋಜನೆಯ ಫಲನಾಭವಿಗಳನ್ನು ಯಾವುದೇ ಕಾರಣಕ್ಕೂ ತಿರಸ್ಕಾರ ಮನೋಭಾವದಿಂದ ನೋಡಬಾರದು, ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳಂತೆ ಪರಿಗಣಿಸುವಂತೆ ಸೂಚಿಸಿದರು.…
ಶಿವಮೊಗ್ಗ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಶಿವಮೊಗ್ಗ ಇವರ ಅಧೀನದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ನೇರ ಸಂದರ್ಶನ ಏರ್ಪಡಿಸಲಾಗಿದೆ. ಫಿಜಿಷಿಯನ್-02, ಶಸ್ತ್ರಚಿಕಿತ್ಸ ತಜ್ಞರು-01, ಸ್ತ್ರೀರೋಗ ತಜ್ಞ-03, ಅರಿವಳಿಕೆ-09, ಇಎನ್ಟಿ-02, ನೇತ್ರ ತಜ್ಞರು-02, ಮಕ್ಕಳ ತಜ್ಞರು-2, ಕೀಲು ಮತ್ತು ಮೂಳೆ ತಜ್ಞರು-01, ರೇಡಿಯಾಲಜಿಸ್ಟ್ -01, ನೆಫ್ರೊಲಜಿಸ್ಟ್-01 ಒಟ್ಟು 24 ತಜ್ಞ ವೈದ್ಯಾಧಿಕಾರಿಗಳ ಹುದ್ದೆಗಳಿಗೆ ಒಂದು ವರ್ಷ ಅವಧಿಗೆ ರೋಸ್ಟರ್ ಮತ್ತು ಮೆರಿಟ್ ಆಧಾರದಲ್ಲಿ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುವುದು . ಆಸಕ್ತ ಅಭ್ಯರ್ಥಿಗಳು ದಿ: 15-01-2025 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಬಿ.ಹೆಚ್.ರಸ್ತೆ, ಶಿವಮೊಗ್ಗ ಇಲ್ಲಿ ತಮ್ಮ ವಿದ್ಯಾರ್ಹತೆ, ಹುಟ್ಟಿದ ದಿನಾಂಕ ಮತ್ತು ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳ ಒಂದು ಸೆಟ್ ನಕಲು…
ಬೆಂಗಳೂರು: ಚಿನ್ನಾಭರಣ ಪಡೆದು ಹಣ ನೀಡದೇ ವಂಚಿಸಿದಂತ ಆರೋಪದಲ್ಲಿ ಈಗಾಗಲೇ ಐಶ್ವರ್ಯಾಗೌಡ ಹಾಗೂ ಅವರ ಪತಿಯನ್ನು ಬಂಧಿಸಲಾಗಿತ್ತು. ಆ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈಗ ಶಿಲ್ವಾಗೌಡ ಎಂಬುವರಿಗೆ ವಂಚಿಸಿದಂತ ಸಂಬಂಧ ದಾಖಲಾಗಿದ್ದಂತ ದೂರು ಹಿನ್ನಲೆಯಲ್ಲಿ ಮತ್ತೆ ಬಂಧಿಸಲಾಗಿದೆ. ಬೆಂಗಳೂರಿನ ಶಿಲ್ಪಾಗೌಡ ಎಂಬುವರಿಂದ 430 ಗ್ರಾಂ ಚಿನ್ನ ಪಡೆದಿದ್ದಂತ ಐಶ್ವರ್ಯಾಗೌಡ ಅದರ ಹಣವನ್ನು ನೀಡದೇ ವಂಚಿಸಿದ್ದರು. 430 ಗ್ರಾಂ ಚಿನ್ನದ ಬೆಲೆ 3.50 ಕೋಟಿಯಾಗಿತ್ತು. ಈ ಸಂಬಂಧ ಶಿಲ್ಪಾಗೌಡ ರಾಜರಾಜೇಶ್ವರಿ ನಗರ ಠಾಣೆಗೆ ದೂರು ನೀಡಿದ್ದರು. ಐಶ್ವರ್ಯಾಗೌಡ ಅವರು ಚಿನ್ನಪಡೆದು ಹಣ ವಂಚಿಸಿದ ಸಂಬಂಧ ಶಿಲ್ಪಾಗೌಡ ನೀಡಿದ್ದಂತ ದೂರಿನ ಹಿನ್ನಲೆಯಲ್ಲಿ ಆರ್ ಆರ್ ನಗರ ಠಾಣೆಯ ಪೊಲೀಸರು ಐಶ್ವರ್ಯಾಗೌಡ ಹಾಗೂ ಪತಿಯನ್ನು ಮತ್ತೆ ಬಂಧಿಸಿದ್ದಾರೆ. https://kannadanewsnow.com/kannada/actor-darshan-moves-sc-seeking-cancellation-of-bail/ https://kannadanewsnow.com/kannada/big-update-2-hmpv-confirmed-in-karnataka-icmr-hmpv-virus/
ನವದೆಹಲಿ: ಹ್ಯೂಮನ್ ಮೆಟಾಪ್ನ್ಯುಮೋವೈರಸ್ (ಎಚ್ಎಂಪಿವಿ) ಜಾಗತಿಕವಾಗಿ ಗುರುತಿಸಲ್ಪಟ್ಟ ಉಸಿರಾಟದ ವೈರಸ್ ಆಗಿದ್ದು, ಚೀನಾದಲ್ಲಿ ಏಕಾಏಕಿ ವರದಿಯಾದ ನಂತರ ಇತ್ತೀಚೆಗೆ ಗಮನ ಸೆಳೆಯಿತು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ವಾಡಿಕೆಯ ಕಣ್ಗಾವಲಿನ ಭಾಗವಾಗಿ ಕರ್ನಾಟಕದಲ್ಲಿ ಇತ್ತೀಚೆಗೆ ಎರಡು ಎಚ್ಎಂಪಿವಿ ಪ್ರಕರಣಗಳು ವರದಿಯಾಗಿವೆ. HMPV ಎಂದರೇನು? ಎಚ್ಎಂಪಿವಿ ಒಂದು ವೈರಲ್ ರೋಗಕಾರಕವಾಗಿದ್ದು, ಇದು ಎಲ್ಲಾ ವಯಸ್ಸಿನ ಜನರಲ್ಲಿ ಉಸಿರಾಟದ ಸೋಂಕುಗಳನ್ನು ಉಂಟುಮಾಡುತ್ತದೆ. 2001 ರಲ್ಲಿ ಮೊದಲ ಬಾರಿಗೆ ಕಂಡುಹಿಡಿಯಲಾದ ಇದು ಪ್ಯಾರಾಮೈಕ್ಸೊವಿರಿಡೇ ಕುಟುಂಬಕ್ಕೆ ಸೇರಿದೆ ಮತ್ತು ಉಸಿರಾಟದ ಸಿನ್ಸಿಟಿಯಲ್ ವೈರಸ್ (ಆರ್ಎಸ್ವಿ) ಗೆ ನಿಕಟ ಸಂಬಂಧ ಹೊಂದಿದೆ. ಕೆಮ್ಮು ಅಥವಾ ಸೀನುವಿಕೆಯಿಂದ ಉಸಿರಾಟದ ಹನಿಗಳ ಮೂಲಕ ಎಚ್ಎಂಪಿವಿ ಹರಡುತ್ತದೆ, ಜೊತೆಗೆ ಕಲುಷಿತ ಮೇಲ್ಮೈಗಳನ್ನು ಸ್ಪರ್ಶಿಸುವ ಮೂಲಕ ಅಥವಾ ಸೋಂಕಿತ ವ್ಯಕ್ತಿಗಳೊಂದಿಗೆ ನೇರ ಸಂಪರ್ಕಕ್ಕೆ ಬರುವ ಮೂಲಕವಾಗಿದೆ. ಈ ವೈರಸ್ ಸೌಮ್ಯ ಉಸಿರಾಟದ ಅಸ್ವಸ್ಥತೆಯಿಂದ ಹಿಡಿದು ತೀವ್ರವಾದ ತೊಡಕುಗಳವರೆಗೆ ಕಾಯಿಲೆಗಳನ್ನು ಉಂಟುಮಾಡುತ್ತದೆ, ವಿಶೇಷವಾಗಿ ಶಿಶುಗಳು, ವಯಸ್ಸಾದ ವಯಸ್ಕರು ಮತ್ತು ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿರುವ…
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಗೆ ಹೈಕೋರ್ಟ್ ಜಾಮೀನು ನೀಡಿತ್ತು. ಈ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿತ್ತು. ಇದೀಗ ಅದರಂತೆ ಸುಪ್ರೀಂ ಕೋರ್ಟ್ ಗೆ ನಟ ದರ್ಶನ್ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸಲಾಗಿದೆ. ಹೀಗಾಗಿ ನಟ ದರ್ಶನ್ ಗೆ ಮತ್ತೊಂದು ಬಿಗ್ ಶಾಕ್ ನೀಡಿದಂತೆ ಆಗಿದೆ. ಇಂದು ನಟ ದರ್ಶನ್ ಅವರಿಗೆ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಹೈಕೋರ್ಟ್ ನೀಡಿರುವಂತ ಜಾಮೀನು ರದ್ದು ಕೋರಿಗೆ ರಾಜ್ಯ ಸರ್ಕಾರದ ಪರವಾಗಿ ಪೊಲೀಸರು ಸುಪ್ರೀಂ ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಇಂತಹ ಅರ್ಜಿಯನ್ನು ಮುಂದಿನ ವಾರ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಅಂದಹಾಗೇ ಪೊಲೀಸ್ ಇಲಾಖೆಯಿಂದ ನಟ ದರ್ಶನ್ ಸೇರಿದಂತೆ 7 ಆರೋಪಿಗಳ ಜಾಮೀನು ರದ್ದುಗೊಳಿಸುವಂತೆ ಅರ್ಜಿಯಲ್ಲಿ ಕೋರಿರುವುದಾಗಿ ತಿಳಿದು ಬಂದಿದೆ. ಮುಂದಿನ ವಾರ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆದು, ಯಾವ ತೀರ್ಪು…
ಕೋಲ್ಕತ್ತಾ : ಚೀನಾದಲ್ಲಿ ಕಾಣಿಸಿಕೊಂಡಿದ್ದಂತ ಹೆಚ್ ಎಂ ಪಿ ವಿ ವೈರಸ್ ಭಾರತಕ್ಕೂ ಕಾಲಿಟ್ಟಿದೆ. ಕರ್ನಾಟಕದಲ್ಲಿ ಎರಡು ಸೇರಿದಂತೆ ದೇಶದ ಇತರೆಡೆ ಒಂದು ಕೇಸ್ ಪತ್ತೆಯಾಗಿದ್ದವು. ಇದೀಗ ಕೋಲ್ಕತ್ತಾದಲ್ಲಿ 5 ತಿಂಗಳ ಹಸುಗೂಸಿಗೆ ಹೆಚ್ ಎಂ ಪಿ ವಿ ವೈರಸ್ ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ನವೆಂಬರ್.12ರಂದು ಕೋಲ್ಕತ್ತಾದ ಆಸ್ಪತ್ರೆಯೊಂದರಲ್ಲಿ ನ್ಯೂಮೋನಿಯಾದಿಂದ ಬಳಲುತ್ತಿದ್ದಂತ 5 ತಿಂಗಳ ಹಸುಳೆ ಚಿಕಿತ್ಸೆ ಕೊಡಿಸಿಕೊಂಡು ಮನೆಗೆ ಕರೆದೊಯ್ಯಲಾಗಿತ್ತು. ಈ ಮಗುವಿಗೂ ಹೆಚ್ ಎಂ ಪಿ ವಿ ವೈರಸ್ ದೃಢಪಟ್ಟಿರುವುದಾಗಿ ವರದಿಯಿಂದ ತಿಳಿದು ಬಂದಿದೆ. ಹೀಗಾಗಿ ಭಾರತದಲ್ಲಿ ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಅಂದಹಾಗೇ ಬೆಂಗಳೂರಲ್ಲಿ ಇಬ್ಬರಿಗೆ ಹೆಚ್ ಎಂ ಪಿ ವಿ ವೈರಸ್ ದೃಢಪಟ್ಟಿತ್ತು. ಆ ನಂತ್ರ ಗುಜರಾತ್ ನ ಅಹಮಾದಾಬಾದ್ ನಲ್ಲಿನ ಮಗುವೊಂದಕ್ಕೂ ಹೆಚ್ ಎಂ ಪಿ ವಿ ಪತ್ತೆಯಾಗಿತ್ತು. ಈಗ ಕೋಲ್ಕತ್ತಾದಲ್ಲಿ 5 ತಿಂಗಳ ಹಸುಳೆಗೆ ಸೋಂಕು ಇರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 4ಕ್ಕೆ ಏರಿಕೆಯಾದಂತೆ ಆಗಿದೆ. https://kannadanewsnow.com/kannada/big-update-2-hmpv-confirmed-in-karnataka-icmr-hmpv-virus/ https://kannadanewsnow.com/kannada/what-is-hmpv-virus-what-are-its-symptoms-heres-the-information/
ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅಂತಿಮ ಮತದಾರರ ಪಟ್ಟಿಯಲ್ಲಿ 1,02,64,714 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಅವರು ತಿಳಿಸಿದರು. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2025ರ ಅಂತಿಮ ಮತದಾರರ ಪಟ್ಟಿಯನ್ನು ಇಂದು ಪಾಲಿಕೆ ಕೇಂದ್ರ ಕಛೇರಿ ಸಭಾಂಗಣ-01ರಲ್ಲಿ ಪ್ರಕಟಿಸಿದ ಬಳಿಕ ಮಾತನಾಡಿದ ಅವರು, ಅಂತಿಮ ಮತದಾರರ ಪಟ್ಟಿಯಲ್ಲಿ 1,02,64,714 ಮತದಾರರಿದ್ದು, ಈ ಪೈಕಿ 52,80,287 ಪುರುಷರು, 49,82,589 ಮಹಿಳೆಯರು ಹಾಗೂ 1,838 ಇತರೆ(ತೃತೀಯ ಲಿಂಗಿಗಳು) ಮತದಾರರಿದ್ದಾರೆ ಎಂದು ಹೇಳಿದರು. ಮತದಾರರ ಅಂತಿಮ ಪ್ರತಿಯನ್ನು ನಗರದ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳ ಮತದಾರರ ನೊಂದಣಾಧಿಕಾರಿಗಳ ಕಛೇರಿ, ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಛೇರಿ ಹಾಗೂ ವಾರ್ಡ್ ಕಛೇರಿಗಳಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರಿಗೆ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. ಅಂತಿಮ ಮತದಾರರ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ ಅವರ ವೆಬ್ಸೈಟ್ www.ceokarnataka.kar.nic.inಮತ್ತು ಬಿಬಿಎಂಪಿ ವೆಬ್ಸೈಟ್ www.bbmp.gov.in ನಲ್ಲಿ ಪರಿಶೀಲಿಸುವ ಮೂಲಕ ಖಾತರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ…
ಬೆಂಗಳೂರು: ರಾಜ್ಯದಲ್ಲಿ ದೇಗುಲಗಳ ಆಸ್ತಿ ರಕ್ಷಣೆಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಕ್ರಮ ವಹಿಸಿದ್ದರು. ಈ ಪರಿಣಾಮ ದೇಗುಲಗಳಿಗೆ 11,499 ಎಕರೆ ಮರು ಸೇರ್ಪಡೆಯಾದಂತೆ ಆಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಜರಾಯಿ ಇಲಾಖೆ ವತಿಯಿಂದ ದೇವಸ್ಥಾನಗಳ ಆಸ್ತಿಗಳ ದಾಖಲೆ ಮಾಹಿತಿ ಪರಿಶೀಲಿಸಲಾಯಿತು. ಈ ಸಂದರ್ಭ ನಿರ್ವಹಣೆ ಸಮರ್ಪಕವಾಗಿಲ್ಲ ಎಂಬುದು ಗಮನಕ್ಕೆ ಬಂತು. ಕೂಡಲೇ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ, ಪಹಣಿ ಇಂಡೀಕರಣ ಪ್ರಕ್ರಿಯೆ ಆರಂಭಿಸಲು ಸೂಚಿಸಿದ್ದೆ. ಪರಿಣಾಮ ಎರಡು ವರ್ಷಗಳಲ್ಲಿ 11,499 ಎಕರೆ ವಿಸ್ತೀರ್ಣದ ದಾಖಲೆಗಳನ್ನು ಸರಿಪಡಿಸಲಾಗಿದೆ ಎಂದು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಪ್ರತಿ ತಿಂಗಳೂ ಮುಜರಾಯಿ ಆಸ್ತಿಗಳ ಭೂಮಾಪನ, ದಾಖಲೆ ಪರಿಶೀಲನೆ, ತಿದ್ದುಪಡಿ, ಇಂಡೀಕರಣಕ್ಕೆ ಗುರಿ ನಿಗದಿಪಡಿಸಲಾಗಿದೆ. ಎಲ್ಲ ದೇವಾಲಯಗಳ ಆಸ್ತಿಗಳ ದಾಖಲೆಗಳನ್ನು ಸರಿಪಡಿಸಿ, ದೇವಸ್ಥಾನಗಳ ಹೆಸರಿಗೆ ಸರಿಯಾದ ಕ್ರಮದಲ್ಲಿ ದಾಖಲಿಸಲು ಇನ್ನೂ ಎರಡು ವರ್ಷ ಬೇಕಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. https://twitter.com/KarnatakaVarthe/status/1876219309959393716 https://kannadanewsnow.com/kannada/pyaari-didi-yojana-on-the-lines-of-grihalakshmi-dk-shivakumar-announces-congress-first-guarantee-for-delhi-polls/ https://kannadanewsnow.com/kannada/bjp-fact-finding-committee-visits-victims-house-in-koppal-district-objects-to-poor-supply-of-medicines/