Author: kannadanewsnow09

ನವದೆಹಲಿ: ಅಮೆರಿಕದ ವಾಹನ ತಯಾರಕ ಕಂಪನಿ ಫೋರ್ಡ್ ತನ್ನ ಚೆನ್ನೈ ಉತ್ಪಾದನಾ ಘಟಕವನ್ನು ವಾಹನ ರಫ್ತಿಗೆ ಬಳಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ ಎಂದು ಶುಕ್ರವಾರ ಪ್ರಕಟಿಸಿದೆ. ಕಂಪನಿಯು ಈ ನಿರ್ಧಾರವನ್ನು ಲೆಟರ್ ಆಫ್ ಇಂಟೆಂಟ್ (ಎಲ್ಒಐ) ಮೂಲಕ ತಮಿಳುನಾಡು ಸರ್ಕಾರಕ್ಕೆ ಔಪಚಾರಿಕವಾಗಿ ತಿಳಿಸಿದೆ. ಫೋರ್ಡ್ ನಾಯಕತ್ವ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಸಭೆಯ ನಂತರ ಈ ಬೆಳವಣಿಗೆ ನಡೆದಿದೆ. ಫೋರ್ಡ್ನ ಇಂಟರ್ನ್ಯಾಷನಲ್ ಮಾರ್ಕೆಟ್ಸ್ ಗ್ರೂಪ್ ಅಧ್ಯಕ್ಷ ಕೇ ಹಾರ್ಟ್, ಈ ಕ್ರಮವು ಭಾರತಕ್ಕೆ ಫೋರ್ಡ್ನ ನಿರಂತರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ, ಹೊಸ ಜಾಗತಿಕ ಮಾರುಕಟ್ಟೆಗಳನ್ನು ಪೂರೈಸಲು ಪ್ರದೇಶದ ಉತ್ಪಾದನಾ ಪರಿಣತಿಯನ್ನು ಬಳಸಿಕೊಳ್ಳುತ್ತದೆ ಎಂದು ಹೇಳಿದರು. ಸ್ಟಾಲಿನ್ ಮಂಗಳವಾರ ಮಿಚಿಗನ್ ನಲ್ಲಿರುವ ಫೋರ್ಡ್ ನ ಪ್ರಧಾನ ಕಚೇರಿಗೆ ಭೇಟಿ ನೀಡಿದರು, ಅಲ್ಲಿ ಅವರು ಉತ್ಪಾದನೆಯ ಪುನರುಜ್ಜೀವನಕ್ಕಾಗಿ ವಾದಿಸಲು ಹಿರಿಯ ಆಡಳಿತ ಮಂಡಳಿಯನ್ನು ಭೇಟಿಯಾದರು. ಎಕ್ಸ್ ನಲ್ಲಿ (ಹಿಂದೆ ಟ್ವಿಟರ್), ಅವರು ಹೇಳಿದರು, “ಫೋರ್ಡ್ ಮೋಟಾರ್ಸ್…

Read More

ಬೆಂಗಳೂರು: ನಾಗಮಂಗಲದಲ್ಲಿ ಕೋಮು ಗಲಭೆಗೆ ಸಂಬಂಧಿಸಿದಂತೆ ಕರ್ನಾಟಕ ಬಿಜೆಪಿಯಿಂದ ಸತ್ಯ ಶೋಧನ ತಂಡವನ್ನು ರಚಿಸಲಾಗಿದೆ. ಈ ಮೂಲಕ ಗಲಭೆಗೆ ಕಾರಣ ತಿಳಿಯುವಂತ ನಡೆಯನ್ನು ಬಿಜೆಪಿ ಅನುಸರಿಸಿದೆ. ಕರ್ನಾಟಕ ಬಿಜೆಪಿಯಿಂದ ನಾಗಮಂಗಲ ಗಲಭೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ಸತ್ಯ ಶೋಧನ ತಂಡವನ್ನು ರಚನೆ ಮಾಡಲಾಗಿದೆ. ಶಾಸಕ ಭೈರತಿ ಬಸವರಾಜು, ಮಾಜಿ ಸಚಿವ ಕೆಸಿ ನಾರಾಯಣಸ್ವಾಮಿ, ಲಕ್ಷ್ಮೀ ಅಶ್ವಿನ್ ಗೌಡ, ಭಾಸ್ಕರ್ ರಾವ್ ಒಳಗೊಂಡ ರಾಜ್ಯ ಬಿಜೆಪಿ ಸತ್ಯ ಶೋಧನಾ ತಂಡವನ್ನು ರಚಿಸಿರುವುದಾಗಿ ವಿಪಕ್ಷ ನಾಯಕ ಆರ್ ಅಶೋಕ್ ತಿಳಿಸಿದ್ದಾರೆ. https://kannadanewsnow.com/kannada/big-news-sc-granted-bail-to-kejriwal-a-travesty-to-centre-siddaramaiah/ https://kannadanewsnow.com/kannada/cm-siddaramaiah-announces-hike-in-nandini-milk-prices-soon/

Read More

ರಾಮನಗರ: ರಾಜ್ಯದ ಜನರಿಗೆ ಮತ್ತೆ ಶಾಕ್ ಎನ್ನುವಂತೆ ಶೀಘ್ರವೇ ನಂದಿನಿ ಹಾಲಿನ ದರ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದಾರೆ. ಈ ಮೂಲಕ ಜನಸಾಮಾನ್ಯರಿಗೆ ಬಿಗ್ ಶಾಕ್ ನೀಡಿದ್ದಾರೆ. ಇಂದು ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರೈತರಿಗೆ ಅನುಕೂಲವಾಗಲೆಂದು ನಂದಿನ ಹಾಲಿನ ದರವನ್ನು ಹೆಚ್ಚಳ ಮಾಡಲಾಗುತ್ತದೆ. ಇದು ನಿಮಗಾಗಿ ಸರ್ಕಾರ ಮಾಡುತ್ತಿರುವಂತ ಏರಿಕೆಯಾಗಿದೆ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ತಿಳಿಸಿದರು. ನಂದಿನಿ ಹಾಲಿನ ದರ ಹೆಚ್ಚಳದ ಬಗ್ಗೆ ಕೆಎಂಎಫ್ ಜೊತೆಗೆ ಸಭೆ ನಡೆಸಲಾಗುತ್ತದೆ. ಆ ಸಭೆಯ ಬಳಿಕ ಹಾಲಿನ ದರ ಹೆಚ್ಚಳ ಮಾಡುವಂತ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ. ನೀವೆಲ್ಲ ನಮ್ಮ ಪರವಾಗಿದ್ದರೇ ಹಾಲಿನ ದರ ಹೆಚ್ಚಳ ಮಾಡಲಾಗುತ್ತದೆ ಎಂದರು. https://kannadanewsnow.com/kannada/incident-in-nagamangala-on-the-lines-of-dj-halli-riots-it-was-a-congress-sponsored-conspiracy-hdk/ https://kannadanewsnow.com/kannada/big-news-sc-granted-bail-to-kejriwal-a-travesty-to-centre-siddaramaiah/

Read More

ನಾಗಮಂಗಲ: ಗಣೇಶ ಮೆರವಣಿಗೆ ವೇಳೆ ಪಟ್ಟಣದಲ್ಲಿ ನಡೆದ ಗಲಭೆ ಪೂರ್ವಯೋಜಿತ ಕೃತ್ಯ, ವ್ಯವಸ್ಥಿತ ಪಿತೂರಿ. ಅಷ್ಟೇ ಅಲ್ಲ; ಇದು ಕಾಂಗ್ರೆಸ್ ಪ್ರಾಯೋಜಿತ ಗಲಭೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು. ನಾಗಮಂಗಲದ ಗಲಭೆ ಪೀಡಿತ ಪ್ರದೇಶಗಳಿಗೆ ಶುಕ್ರವಾರ ಬೆಳಗ್ಗೆ ಭೇಟಿ ನೀಡಿ ದುಷ್ಕರ್ಮಿಗಳ ದಾಳಿಗೆ ತುತ್ತಾದ ಅಂಗಡಿ, ಮಳಿಗೆಗಳನ್ನು ವೀಕ್ಷಿಸಿದ ನಂತರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು. ವ್ಯವಸ್ಥಿತವಾಗಿ ಗಲಭೆಗಳನ್ನು ಸೃಷ್ಟಿ ಮಾಡುವುದು ಕಾಂಗ್ರೆಸ್ ಗೆ ಕರತಲಾಮಲಕ. ಹಿಂದಿನಿಂದಲೂ ಅದನ್ನು ಮಾಡಿಕೊಂಡು ಬಂದಿದೆ. 1990ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ರಾಮನಗರ, ಚನ್ನಪ್ಪಟ್ಟಣದಲ್ಲಿ ಕೋಮುಗಲಭೆ ಸೃಷ್ಟಿಸಿ ಬೆಂಕಿ ಹಾಕಲಾಯಿತು. ಅವಳಿ ಪಟ್ಟಣಗಳು ಹೊತ್ತಿ ಉರಿದವು. ಅದೇ ಮಾದರಿಯಲ್ಲಿ ನಾಗಮಂಗಲದಲ್ಲಿ ಗಲಭೆ ಎಬ್ಬಿಸಲಾಗಿದೆ. ಡಿಜಿ ಹಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಇಟ್ಟು ಸುಟ್ಟು ಹಾಕಲಾಯಿತು. ಅದಕ್ಕೂ ಕಾಂಗ್ರೆಸ್ ನಾಯಕರೇ ಕಾರಣ. ಆ ಪ್ರಕರಣದಲ್ಲಿ ಜೈಲಿಗೆ ಹೋದವರು ಏನಾಗಿದ್ದಾರೋ ಗೊತ್ತಿಲ್ಲ. ನಾಗಮಂಗಲದಲ್ಲಿ ಈಗ ಯಾವ ದುರುದ್ದೇಶ…

Read More

ನಾಗಮಂಗಲ: ಮಳವಳ್ಳಿ, ನಾಗಮಂಗಲ ಸೇರಿ ವಿವಿಧ ಭಾಗಗಳ ಕೆರೆ ತುಂಬಿಸದಿದ್ದರೆ, ಕೊನೆಯ ಭಾಗದ ಪ್ರದೇಶಗಳ ನಾಲೆಗೆ ನೀರು ಹರಿಸದಿದ್ದರೆ ನಾನೇ ಬಂದು ಕೃಷ್ಣರಾಜ ಸಾಗರ ಸಾಗರದ ಗೇಟ್ ಗಳನ್ನು ಎತ್ತಿ ನೀರು ಬಿಡಬೇಕಾಗುತ್ತದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು. ಗಲಭೆಪೀಡಿತ ನಾಗಮಂಗಲಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮಗಳ ಜತೆ ಕೇಂದ್ರ ಸಚಿವರು ಮಾತನಾಡಿದರು. ಮಳವಳ್ಳಿ ‌ಭಾಗಕ್ಕೆ ಇದುವರೆಗೂ ನೀರು ಕೊಟ್ಟಿಲ್ಲ. ಕುಮಾರಸ್ವಾಮಿಗೆ ವೋಟು ಹಾಕಿದ್ದೀರಿ, ನೀರು ಬೇಕಾದರೆ ಕುಮಾರಸ್ವಾಮಿಯನ್ನೇ ಹೋಗಿ ಕೇಳಿ ಎಂದು ಒಬ್ಬ ಶಾಸಕ ಹೇಳುತ್ತಿದ್ದಾನೆ. ಅಣೆಕಟ್ಟೆ ಇವರ ಅಪ್ಪನ ಮನೆಯ ಆಸ್ತಿಯೇ. ರೈತರಿಗೆ ನೀರು ಕೊಡಲು ಯೋಗ್ಯತೆ ಇಲ್ಲ. ಜಲಪಾತೋತ್ಸವ ಬೇರೆ ಮಾಡುತ್ತಿದ್ದಾರೆ. ನಾಚಿಕೆ ಆಗಬೇಕು ಇವರಿಗೆ ಎಂದು ಸಚಿವರು ಕಿಡಿಕಾರಿದರು. ಕೆರೆಕಟ್ಟೆಗಳಲ್ಲಿ ನೀರು ಇಲ್ಲ. ಮೆಟ್ಟೂರು ಜಲಾಶಯ ತುಂಬಿ ತುಳುಕುತ್ತಿದೆ. ನನ್ನನ್ನು ಭೇಟಿಯಾಗಿದ್ದ ತಮಿಳುನಾಡಿನ ಕೆಲ ನಾಯಕರು ಜಲಾಶಯದಿಂದ ಲಕ್ಷಾಂತರ ಕ್ಯೂಸೆಕ್ ನೀರು ಸಮುದ್ರಕ್ಕೆ ಹರಿದು ಹೋಗುತ್ತಿದೆ ಎಂದು…

Read More

ಬೆಂಗಳೂರು: 2024-25ನೇ ಸಾಲಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಯುವಜನರ ಸ್ವಾವಲಂಬನೆಯನ್ನು ಉತ್ತೇಜಿಸಲು, ಪರಿಶಿಷ್ಟ ಜಾತಿ ಉಪಯೋಜನೆಯಡಿಯಲ್ಲಿ ಪರಿಶಿಷ್ಟ ಯುವಜನರಿಗೆ ಪೂರಕವಾದ ಉದ್ಯೋಗಗಳನ್ನು ಒದಗಿಸುವ ಸಲುವಾಗಿ ತರಬೇತಿಗೆ 18 ರಿಂದ 40 ವರ್ಷ ಒಳಗಿನ ಎಸ್.ಎಸ್.ಎಲ್.ಸಿ. ಪಾಸ್/ಫೇಲ್ ಆಗಿರುವವರಿಂದ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿಯು ಬೆಂಗಳೂರಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಸೆ. 19 ರಿಂದ ಅ. 03 ರವರೆಗೆ ಜೆಮ್/ಫಿಟೈಸ್ ತರಬೇತಿ ಹಾಗೂ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಸೆ. 21 ರಿಂದ ಅ.03 ರವರೆಗೆ ಮಹಿಳೆಯರಿಗೆ ಬ್ಯೂಟಿಷಿಯನ್ ತರಬೇತಿ ಶಿಬಿರ ಮತ್ತು ಅ. 04 ರಿಂದ ಅ. 09 ವರೆಗೆ ಚಾಟ್ಸ್ ತಯಾರಿಕೆ ತರಬೇತಿ ಶಿಬಿರ ಆಯೋಜಿಸಲಾಗಿದೆ. ಆಸಕ್ತರು ನಿಗಧಿತ ನಮೂನೆ ಅರ್ಜಿಯನ್ನು ಶಿವಮೊಗ್ಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಸೆ. 18ರೊಳಗಾಗಿ ಸಲ್ಲಿಸುವಂತೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆ ತಿಳಿಸಿದ್ದಾರೆ. ಹೆಚ್ಚಿನ…

Read More

ನವದೆಹಲಿ : ಸರ್ಕಾರದ ಸವಲತ್ತುಗಳಿಂದ ಹಲವು ಪ್ರಮುಖ ದಾಖಲೆಗಳನ್ನು ಪಡೆಯಲು ಆಧಾರ್ ಸಂಖ್ಯೆ ಪ್ರಮುಖ ಅವಶ್ಯಕತೆಯಾಗಿದೆ. ಪ್ರಸ್ತುತ ದೇಶಾದ್ಯಂತ 140 ಕೋಟಿ ಆಧಾರ್ ಕಾರ್ಡ್‌ಗಳಿವೆ. ಇವರಲ್ಲಿ 100 ಕೋಟಿ 50 ಲಕ್ಷ ಜನರು ಮಾತ್ರ ತಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಿದ್ದಾರೆ. ಅದಕ್ಕಾಗಿಯೇ ಕೇಂದ್ರ ಸರ್ಕಾರ ಆಧಾರ್ ಗುರುತಿನ ಚೀಟಿಯನ್ನು ನವೀಕರಿಸಲು ಆದೇಶಿಸಿದೆ. ಇದಕ್ಕಾಗಿ ಸೆಪ್ಟೆಂಬರ್ 14ರ ಗಡುವು ಕೂಡ ನಿಗದಿಪಡಿಸಲಾಗಿತ್ತು. ಆದರೆ ಇದೀಗ ಗಡುವು ದಿನಾಂಕ ವಿಸ್ತರಿಸಿದೆ. ಡಿಸೆಂಬರ್ 14ರೊಳಗೆ ಯಾವುದೇ ಶುಲ್ಕವಿಲ್ಲದೆ ಆಧಾರ್ ಅಪ್ ಡೇಟ್ ಮಾಡುವ ಸೌಲಭ್ಯ ಕಲ್ಪಿಸಿದೆ. ಭಾರತದಲ್ಲಿ ಯಾವುದೇ ವ್ಯಕ್ತಿ, ವಯಸ್ಸು ಅಥವಾ ಲಿಂಗವನ್ನು ಲೆಕ್ಕಿಸದೆ, ಆಧಾರ್ ಸಂಖ್ಯೆಯನ್ನು ಪಡೆಯಲು ಸ್ವಯಂಪ್ರೇರಣೆಯಿಂದ ನೋಂದಾಯಿಸಿಕೊಳ್ಳಬಹುದು. ನವಜಾತ ಶಿಶುವಿನಿಂದ ಹಿಡಿದು ಪ್ರತಿಯೊಬ್ಬರಿಗೂ ಆಧಾರ್ ಸಂಖ್ಯೆ ಅತ್ಯಗತ್ಯವಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಹೆಸರಿನಲ್ಲಿ ವಿಶಿಷ್ಟವಾದ ಆಧಾರ್ ಸಂಖ್ಯೆಯನ್ನು ನೀಡಲಾಗುತ್ತದೆ. ಅದರ ಮೂಲಕ ಆ ವ್ಯಕ್ತಿಯ ಬಗ್ಗೆ ಎಲ್ಲ ಮಾಹಿತಿ ಪಡೆಯಬಹುದು. ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಕೇವಲ ಒಂದು ಆಧಾರ್ ಸಂಖ್ಯೆಯನ್ನು…

Read More

ಗುರುವಾರದಂದು ಗುರು ಭಗವಾನರಿಗೆ ಇದು ದಿನ. ಇವರನ್ನು ದಕ್ಷಿಣಾಮೂರ್ತಿ ಎಂದೂ ಕರೆಯುತ್ತಾರೆ. ಗುರುವನ್ನು ಇಂಗ್ಲಿಷಿನಲ್ಲಿ ಜುಪಿಟರ್ ಎನ್ನುತ್ತಾರೆ. ಇದು ಗುರುಗ್ರಹಕ್ಕೆ ಸೇರಿದ ಚಿಹ್ನೆ. ಇದು ಗುರುವಿಗೆ ಸೇರಿದ ಚಿಹ್ನೆ. ಗುರುವಾರದಂದು ಗುರು ಭಗವಾನರನ್ನು ಪ್ರಾರ್ಥಿಸಿ ಮತ್ತು ಈ ಚಿಹ್ನೆಯನ್ನು ನಿಮ್ಮ ಕೈಯಲ್ಲಿ ಈ ಕೆಳಗಿನ ರೀತಿಯಲ್ಲಿ ಬಿಡಿಸಿ. ಬರದ ಹಣವೂ ಕೈ ಹಿಡಿಯುತ್ತದೆ. ಹಣ ಕೊಟ್ಟು ಬಹಳಷ್ಟು ಜನರಿಗೆ ಮೋಸ ಮಾಡುತ್ತೀರಿ. ಸಾಲ ಕೊಟ್ಟು ಮೋಸ ಹೋಗುತ್ತೀರಿ. ಚಿನ್ನಾಭರಣ ಕೊಟ್ಟು ಮೋಸ ಹೋಗುತ್ತೀರಿ. ಆಸ್ತಿ ವಿಚಾರದಲ್ಲಿ ಕೆಲವರಿಗೆ ನಿರಾಸೆ ಉಂಟಾಗುವುದು. ನೀವು ವಂಚಿಸಿದ ಯಾವುದೇ ಹಣಕಾಸಿನ ವಿಷಯವನ್ನು ನೀವು ಮರುಪಡೆಯಬೇಕಾದರೆ ಈ ಪರಿಹಾರವು ಖಂಡಿತವಾಗಿಯೂ ನಿಮಗೆ ಸಹಾಯ ಮಾಡುತ್ತದೆ. ಗುರುವಾರದಂದು ಈ ಪರಿಹಾರವನ್ನು ಯಾವುದೇ ಸಮಯದಲ್ಲಿ ಮಾಡಬಹುದು. ತಪ್ಪಿಲ್ಲ. ನೀವು ವಿಶೇಷವಾಗಿ ಗುರು ಹೊರೈಯಲ್ಲಿ ಈ ಪರಿಹಾರವನ್ನು ಮಾಡಿದರೆ ನೀವು ಶೀಘ್ರದಲ್ಲೇ ಫಲಿತಾಂಶಗಳನ್ನು ಪಡೆಯುತ್ತೀರಿ. ಸ್ವಲ್ಪ ಶುದ್ಧ ಅರಿಶಿನ ಪುಡಿಯನ್ನು ತೆಗೆದುಕೊಂಡು, ಅದಕ್ಕೆ ಪನೀರ್ ಸೇರಿಸಿ ಮತ್ತು ಪೇಸ್ಟ್ ಮಾಡಲು ಮಿಶ್ರಣ…

Read More

ಪ್ರಮಾಣೀಕೃತ ಆಯುರ್ವೇದ ಡ್ರಾಪ್ಸ್ (ಸ್ವರ್ಣ ಪ್ರಾಶನ) ನಿಮ್ಮ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಹಾಯಕಾರಿಯೇ? !!!Certified Ayurveda Drops(Golden Drops)Suvarna Bindu Prashana.! सुवर्णप्राशनं हयेतन्मेधान्गिबलवर्धनम् । आयुष्यं मंगलं पुण्यं वृष्यं गदापहम् ।। <ಕಾಶ್ಯಪ ಸಂಹಿತ> ಸುವರ್ಣ ಪ್ರಾಶನ(ಸ್ವರ್ಣ ಬಿಂದು ಪ್ರಾಶನ) ಎಂದರೇನು? ಸ್ವರ್ಣ(Gold) ಭಸ್ಮವನ್ನು (ಚಿನ್ನದ ಬೂದಿ) ಇತರ ಗಿಡಮೂಲಿಕೆಗಳ ಸಾರಗಳೊಂದಿಗೆ (Essence of Herbal medicines) ಸಂಸ್ಕರಿಸಿ, ಮಕ್ಕಳಿಗೆ ಅವರ ಬಾಯಿಯ ಮೂಲಕ ನೀಡುವ ಪ್ರಕ್ರಿಯೆಯನ್ನು ಸ್ವರ್ಣ ಪ್ರಶಾನ ಎಂದು ಕರೆಯಲಾಗುತ್ತದೆ, ಇದನ್ನು ಸುವರ್ಣ ಪ್ರಾಶನ, ಸ್ವರ್ಣಮೃತ ಪ್ರಾಶನ ಅಥವಾ ಸ್ವರ್ಣ ಬಿಂದು ಪ್ರಾಶನ ಎಂದೂ ಕರೆಯಲಾಗುತ್ತದೆ. ಸುವರ್ಣ ಪ್ರಶಾನವು ಒಂದು ವಿಶಿಷ್ಟವಾದ ರೋಗನಿರೋಧಕ (Immune booster) ವಿಧಾನವಾಗಿದೆ, ಇದು ಮಕ್ಕಳ ಬೌದ್ಧಿಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸಾಮಾನ್ಯ ಅಸ್ವಸ್ಥತೆಗಳ (Cold/fever/cough/allergy) ವಿರುದ್ಧ ಹೋರಾಡಲು ದೇಹದಲ್ಲಿ ನಿರ್ದಿಷ್ಟವಾದ ಪ್ರತಿರಕ್ಷೆಯನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. (Learning Difficulties ) ಕಲಿಕೆಯ ತೊಂದರೆಗಳು, ಗಮನ ಕೊರತೆ(Attention Deficit) ಮತ್ತು ವಿಳಂಬವಾದ…

Read More

ಶಿವಮೊಗ್ಗ: ಮುಂದಿನ ಅವಧಿಯವರೆಗೆ ಸಿದ್ಧರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಇರಲಿದ್ದಾರೆ. ಅದರಲ್ಲೇ ಯಾವುದೇ ಡೌಟೇ ಬೇಡ. ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ನಾನು ಸಿಎಂ ಆಕಾಂಕ್ಷಿ ಎನ್ನುವ ಹೇಳಿಕೆಗಳಿಗೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕಬೇಕು ಎಂಬುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ನಗರ ತಾಲ್ಲೂಕು ಆಡಳಿತ ಸೌಧದಲ್ಲಿನ ಗ್ಯಾರಂಟಿ ಅನುಷ್ಠಾನ ಸಮಿತಿಯ ಕಚೇರಿ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಗ್ಯಾರಂಟಿ ಯೋಜನೆಗೆ ಅನುದಾನ ಕೊರತೆಯಿಲ್ಲ. ಸಿಎಂ ಸಿದ್ಧರಾಮಯ್ಯ ಅವರು ಬಜೆಟ್ ನಲ್ಲಿ ಇದಕ್ಕಾಗಿಯೇ 3 ಲಕ್ಷದ 74 ಕೋಟಿ ಮೀಸಲಿಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಐದು ವರ್ಷ ಗ್ಯಾರಂಟಿ ಯೋಜನೆ ನಿಲ್ಲಲ್ಲ. ಮುಂದುವರೆಯಲಿದೆ ಎಂದರು. ಜನರಿಗೆ ಗ್ಯಾರಂಟಿ ತಲುಪಿಸಲು ಅನುಷ್ಠಾನ ಸಮಿತಿ ರಚನೆ ರಾಜ್ಯ ಸರ್ಕಾರದಿಂದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಯಾರು ಯಾರಿಗೆ ಗ್ಯಾರಂಟಿ ಯೋಜನೆಗಳು ತಲುಪಿಲ್ಲವೇ, ಸಮಸ್ಯೆಯಾಗಿದೆಯೋ ಅದನ್ನು ಸರಿ ಪಡಿಸಲು ಗ್ಯಾರಂಟಿ ಅನುಷ್ಠಾನ ಸಮಿತಿಯನ್ನು ರಾಜ್ಯ ಸರ್ಕಾರದಿಂದ ಹೆಚ್.ಎಂ ರೇವಣ್ಣ ಅವರ…

Read More