Subscribe to Updates
Get the latest creative news from FooBar about art, design and business.
Author: kannadanewsnow09
ಚಿತ್ರದುರ್ಗ: ಜಿಲ್ಲೆಯಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಇಬ್ಬರು ಅಕ್ರಮವಾಗಿ ನೆಲೆಸಿದ್ದಂತ ಬಾಂಗ್ಲಾದೇಶಿಗರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಡಿವೈಎಸ್ಪಿ ನೇತೃತ್ವದಲ್ಲಿ ನಗರದಲ್ಲಿ ಗಾರ್ಮೆಂಟ್ಸ್ ಒಂದರ ಮೇಲೆ ದಾಳಿಯನ್ನು ನಡೆಸಲಾಗಿದೆ. ಈ ದಾಳಿಯಲ್ಲಿ 15 ಶಂಕಿತ ಬಾಂಗ್ಲಾ ನುಸುಳು ಕೋರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಚಿತ್ರದುರ್ಗ ಕೋಟೆ, ಗ್ರಾಮಾಂತರ ಠಾಣೆಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತ ಬಹುತೇಕರ ಬಳಿಯಲ್ಲಿ ಪಶ್ಚಿಮ ಬಂಗಾಳದ ವಿಳಾಸ ಹೊಂದಿರುವಂತ ಆಧಾರ್ ಕಾರ್ಡ್ ಪತ್ತೆಯಾಗಿದೆ. ಚಿತ್ರದುರ್ಗ ಎಸ್ಪಿ ರಂಜಿತ್ ಬಂಡಗಾರು ನೇತೃತ್ವದಲ್ಲಿ ವಿಚಾರಣೆ ನಡೆಸುತ್ತಿದ್ದು, ಇಬ್ಬರು ಅಕ್ರಮ ಬಾಂಗ್ಲಾದೇಶಿಗರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. BREAKING : ಕೊಪ್ಪಳದಲ್ಲಿ ಜಿಲ್ಲಾಸ್ಪತ್ರೆಯ ಬಳಿಯೆ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ನರ್ಸಿಂಗ್ ಆಫೀಸರ್! – Kannada News | India News | Breaking news | Live news | Kannada | Kannada News | Karnataka News |…
ಮಂಡ್ಯ: ಮೂವತ್ತು ವರ್ಷಗಳ ಬಳಿಕ ಮಂಡ್ಯದಲ್ಲಿ ಡಿಸೆಂಬರ್ 20, 21, 22 ರಂದು ಮೂರು ದಿನಗಳ ಕಾಲ ಜರುಗಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಲು ಎಲ್ಲರ ಸಹಕಾರ, ಬೆಂಬಲ ಅತ್ಯವಶ್ಯಕ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಚಲುವರಾಯಸ್ವಾಮಿ ಅವರು ಹೇಳಿದರು. ನಗರದ ಹೊರವಲಯದಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ ಮಂಡ್ಯ ಜಿಲ್ಲೆಯ ಸಾಹಿತಿಗಳ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಮಂಡ್ಯದ ಆತಿಥ್ಯ, ಸತ್ಕಾರವನ್ನು ಎಲ್ಲರೂ ನೆನೆಯಬೇಕು. ಆ ನಿಟ್ಟಿನಲ್ಲಿ ಸಮ್ಮೇಳನ ಯಶಸ್ವಿಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಮಂಡ್ಯಕ್ಕೆ ತನ್ನದೇ ಆದ ಸೊಗಡಿದೆ. ವೈಶಿಷ್ಟ್ಯ ಇದೆ. ನೂರಕ್ಕೆ ನೂರು ಈ ಸಮ್ಮೇಳನ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಚಿವರು, ಎಲ್ಲರ ಸಲಹೆ, ಮಾರ್ಗದರ್ಶನ, ಅಭಿಪ್ರಾಯ ಪಡೆಯಲಾಗುತ್ತಿದೆ. ಜನಸಾಮಾನ್ಯರಾದಿಯಾಗಿ ಎಲ್ಲರ ಸಲಹೆಗಳನ್ನು ಸ್ವೀಕರಿಸಿ, ಸಮಿತಿಯೊಂದಿಗೆ ಚರ್ಚಿಸಿ ಕಾರ್ಯರೂಪಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು…
ಯಾವುದೇ ಕೈಯಲ್ಲಿರುವ ಬೆರಳುಗಳು ಒಂದೇ ರೀತಿ ಇಲ್ಲ, ಅದೇ ರೀತಿ ಜೀವನದಲ್ಲೂ ಏರುಪೇರು ಆಗುತ್ತಲೇ ಇರುತ್ತದೆ. ಒಂದು ವೇಳೆ ತಂತ್ರ ಶಕ್ತಿಯಿಂದ ತೊಂದರೆ ಅನುಭವಿಸುತ್ತಿದ್ದರೆ ಅಥವಾ ಹಣದ ಸಮಸ್ಯೆಯನ್ನು ಎದುರಿಸುತ್ತಿದ್ದರೆ ,ಶತ್ರುಗಳಿಂದ ನಿಮಗೆ ತೊಂದರೆಯಾಗುತ್ತಿದ್ದರೆ ,ಗಂಡ-ಹೆಂಡತಿ ನಡುವೆ ಯಾವುದಾದರೂ ವಿಚಾರಕ್ಕೆ ಯಾವಾಗಲೂ ಕಲಹ ಆಗುತ್ತಿದ್ದರೆ ನಾವು ಇಂದು ತಿಳಿಸಿಕೊಡುವ ಈ ಉಪಾಯವನ್ನು ಮಾಡಿದರೆ ಜೀವನವಿಡಿ ಸುಖ ಶಾಂತಿ ಹಾಗೂ ನೆಮ್ಮದಿಯಿಂದ ಜೀವನವನ್ನು ನಡೆಸಬಹುದು. ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ,…
ಬೆಂಗಳೂರು: ನಗರದಲ್ಲಿನ ಆಟೋ ಚಾಲಕರೊಬ್ಬರು ತಮ್ಮ ಸ್ಟಾರ್ಟ್ಅಪ್ಗೆ ಧನಸಹಾಯ ನೀಡಲು ಮಾಡಿದ ನವೀನ ವಿಧಾನವು ಸಾಮಾಜಿಕ ಮಾಧ್ಯಮದಲ್ಲಿ ಸಂಭಾಷಣೆಯನ್ನು ಹುಟ್ಟುಹಾಕಿದೆ. ಪದವೀಧರ ಮತ್ತು ಆಟೋ ಚಾಲಕ ಸ್ಯಾಮ್ಯುಯೆಲ್ ಕ್ರಿಸ್ಟಿ ತನ್ನ ಸೀಟಿನ ಹಿಂದೆ ತನ್ನ ವ್ಯವಹಾರದ ಕಲ್ಪನೆಯನ್ನು ಚರ್ಚಿಸಲು ಪ್ರಯಾಣಿಕರನ್ನು ಆಹ್ವಾನಿಸುವ ಪೋಸ್ಟರ್ ಅನ್ನು ಇರಿಸಿದನು. “ಹಾಯ್ ಪ್ರಯಾಣಿಕರೇ, ನನ್ನ ಹೆಸರು ಸ್ಯಾಮ್ಯುಯೆಲ್ ಕ್ರಿಸ್ಟಿ. ನಾನು ನನ್ನ ಸ್ಟಾರ್ಟ್ಅಪ್ ವ್ಯವಹಾರ ಕಲ್ಪನೆಗಾಗಿ ಹಣವನ್ನು ಸಂಗ್ರಹಿಸಲು ನೋಡುತ್ತಿರುವ ಪದವೀಧರ. ನಿಮಗೆ ಆಸಕ್ತಿ ಇದ್ದರೆ, ದಯವಿಟ್ಟು ನನ್ನೊಂದಿಗೆ ಮಾತನಾಡಿ” ಎಂದು ಪೋಸ್ಟರ್ನಲ್ಲಿ ಬರೆಯಲಾಗಿದೆ. ಪೋಸ್ಟರ್ ನಲ್ಲಿನ ಫೋಟೋವನ್ನು ರೆಡ್ಡಿಟ್ನಲ್ಲಿ “ಮತ್ತೊಂದು ಪೀಕ್ ಬೆಂಗಳೂರು ಕ್ಷಣ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದ್ದು, ಇದು ಅವರ ಉದ್ಯಮಶೀಲತಾ ಮನೋಭಾವಕ್ಕೆ ಮೆಚ್ಚುಗೆಯನ್ನು ಹುಟ್ಟುಹಾಕಿದೆ. ಪೋಸ್ಟ್ನ ಕಾಮೆಂಟ್ ವಿಭಾಗದಲ್ಲಿ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಕ್ರಿಸ್ಟಿಯ ಪ್ರಯತ್ನಗಳನ್ನು ಶ್ಲಾಘಿಸಿದರು ಮತ್ತು ಅವರಿಗೆ ಶುಭ ಹಾರೈಸಿದರು. “ಇದು ಉತ್ತಮ ಪ್ರಯತ್ನ ಎಂದು ನಾನು ಭಾವಿಸುತ್ತೇನೆ. ಅವರು ಏನಾದರೂ ಒಳ್ಳೆಯದನ್ನು ಮಾಡುತ್ತಿದ್ದಾರೆ ಎಂದು ಭಾವಿಸುತ್ತೇನೆ…
ಮೈಸೂರು: ಮುಡಾ ಹಗರಣ ಸಂಬಂಧ ಇಡಿ ವಿಚಾರಣೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರು ಹಾಜರಾದರು. ಮುಡಾ ಕೇಸ್ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯದಿಂದ ನೋಟಿಸ್ ನೀಡಲಾಗಿತ್ತು. ಈ ನೋಟಿಸ್ ಕಾರಣದಿಂದಾಗಿ ಇಂದು ಇಡಿ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗದರು. ಇಡಿ ಅಧಿಕಾರಿಗಳು ಕೇಳಿದಂತ ಪ್ರಶ್ನೆಗಳಿಗೆ ಸಿಎಂ ಬಾಮೈದ ಮಲ್ಲಿಕಾರ್ಜುನ ಉತ್ತರಿಸಿದ್ದಾರೆ ಎನ್ನಲಾಗುತ್ತಿದೆ. ಅಂದಹಾಗೇ ದೇವರಾಜು ಎಂಬುವರ ಬಳಿಯಲ್ಲಿ ಭೂಮಿಯನ್ನು ಸಿಎಂ ಬಾಮೈದ ಮಲ್ಲಿಕಾರ್ಜುನ ಖರೀದಿಸಿದ್ದರು. ಇದರ ಬಳಿಕ ಮುಡಾದಿಂದ ಪ್ರತಿಯಾಗಿ ಸಿಎಂ ಪತ್ನಿಗೆ 14 ಸೈಟ್ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. BREAKING: ಚಿರತೆ ದಾಳಿಯಲ್ಲಿ ಮಹಿಳೆ ಸಾವು ಕೇಸ್: ಮೃತರ ಕುಟುಂಬಕ್ಕೆ 15 ಲಕ್ಷ ಪರಿಹಾರ – ACF ಘೋಷಣೆ – Kannada News | India News | Breaking news | Live news | Kannada | Kannada News | Karnataka News | Karnataka News BREAKING :…
ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಸಂಸದ ಸುಧಾಕರ್ ಅವರಿಗೆ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಈ ಕೆಳಕಂಡಂತೆ ಪ್ರಶ್ನೆಗಳನ್ನು ಮುಂದಿಡ್ಡಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರಿಸ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಅಶೋಕ್ ರವರು ಕರ್ನಾಟಕದ ರಾಜ್ಯ ಸರ್ಕಾರದ ವಿರುದ್ಧ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯರಾದ ಸುಧಾಕರ್ ಅವರ ಜೊತೆಯಲ್ಲಿ ಈ ದಿನ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ಭಲೇ ಜೋಡಿಯ ರೂಪದಲ್ಲಿ ಇಬ್ಬರು ಪ್ರತಿಭಟನೆಯ ನಾಯಕತ್ವವನ್ನು ವಹಿಸಿಕೊಂಡು ರಾಜ್ಯದ ಜನತೆಗೆ ಮನರಂಜನೆಯನ್ನು ನೀಡುತ್ತಿದ್ದಾರೆ. ಕರ್ನಾಟಕದ ಭಾರತೀಯ ಜನತಾ ಪಕ್ಷದಲ್ಲಿ ಇರುವಂತಹ ಗುಂಪುಗಾರಿಕೆಯ ಲಾಭವನ್ನು ಪಡೆದುಕೊಂಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಬಾಚಿಕೊಂಡಿರುವ ಅಶೋಕ್ ರವರು, ವಿರೋಧ ಪಕ್ಷದ ನಾಯಕನಾಗಿ ವಿಫಲವಾಗಿರುತ್ತಾರೆ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಪದೇಪದೇ ಅನವಶ್ಯಕವಾಗಿ ಕಾಂಗ್ರೆಸ್ ಸರ್ಕಾರದ ಮೇಲೆ ಆರೋಪ ಮಾಡುವ ಇವರು ತಮ್ಮ ಮೇಲಿರುವಂತಹ ಗುರುತರವಾದ ಆರೋಪಗಳಿಗೆ ಸಾರ್ವಜನಿಕವಾಗಿ ಇದುವರೆಗೆ…
ಬೆಳಗಾವಿ: ಜಿಲ್ಲೆಯಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ರುದ್ರೇಶ್ ಆತ್ಮಹತ್ಯೆ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದೀಗ ಪ್ರಕರಣ ಸಂಬಂಧ ಅನಾಮಧೇಯ ಪತ್ರವೊಂದು ಪತ್ತೆಯಾಗಿದೆ. ಅದರಲ್ಲಿ ಇದು ಆತ್ಮಹತ್ಯೆ ಅಲ್ಲ. ಇದು ಕೊಲೆ. ಈ ಕೇಸ್ ಮುಚ್ಚಿಹಾಕಬಾರದು. ಸತ್ತವರಿಗೆ ನ್ಯಾಯ ಸಿಗಬೇಕು ಎಂಬುದಾಗಿ ಆಗ್ರಹಿಸಲಾಗಿದೆ. ಈ ಸಂಬಂಧ ಬೆಳಗಾವಿಯ ಪೊಲೀಸ್ ಕಮೀಷನರ್, ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರಿಗೆ, ರಾಜ್ಯಪಾಲರಿಗೂ ಪತ್ರವನ್ನು ಅಡ್ರೆಸ್ ಮಾಡಲಾಗಿದೆ. ಅದರಲ್ಲಿ ಬೆಳಗಾವಿ ತಹಶೀಲ್ದಾರ ಕಚೇರಿಯ ಕ್ಲಾರ್ಕ್ ರುದ್ರಣ್ಣ ಯಡವಣ್ಣನವರ ಇವರ ಕೊಲೆಗೆ ತಹಶೀಲ್ದಾರ ಜೀಪ ಗಾಡಿ ಡ್ರೈವರನಾದ ಯಲ್ಲಪ್ಪ ಬಡಸದ ಇವನೇ ಮೂಲ ಸೂತ್ರದಾರ. ಅದು ಸೂಸೈಡ ಅಲ್ಲ. ಯಲ್ಲಪ್ಪನಿಗೆ ವಿಚಾರಣೆ ಮಾಡಿದರೇ ಕೊಲೆ ರಹಸ್ಯ ಹೊರ ಬರುತ್ತದೆ ಎಂದಿದ್ದಾರೆ. ಇನ್ನೂ ಯಲ್ಲಪ್ಪನ ಹೆಂಡತಿಯು ಅನೈತಿಕ ಸಂಬಂಧ ಇಟ್ಟುಕೊಂಡು ಅವನ ಎಲ್ಲಾ ದುಡ್ಡು ಹೊಡದಿರುತ್ತಾಳೆ. ಸತ್ತವನಿಗೆ ನ್ಯಾಯ ಸಿಗಬೇಕು. ಕೇಸ್ ಮುಚ್ಚಿ ಹಾಕಬಾರದು ಎಂಬುದಾಗಿ ಆಗ್ರಹಿಸಿದ್ದಾರೆ. https://kannadanewsnow.com/kannada/woman-killed-in-leopard-attack-acf-announces-rs-15-lakh-ex-gratia-for-kin-of-deceased/ https://kannadanewsnow.com/kannada/5-lakh-citizens-travelled-in-a-single-day-indian-aviation-creates-history/
ಬೆಂಗಳೂರು: ಇಲ್ಲಿನ ಕಂಬಾಳು ಗೊಲ್ಲರಹಟ್ಟಿಯಲ್ಲಿ ಮಹಿಳೆಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿತ್ತು. ಸ್ಥಳಕ್ಕೆ ಎಸಿಎಫ್ ನಿಜಾಮುದ್ದೀನ್ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೇ ಮೃತ ಮಹಿಳೆಯ ಕುಟುಂಬಕ್ಕೆ 15 ಲಕ್ಷ ಪರಿಹಾರವನ್ನು ಅರಣ್ಯ ಇಲಾಖೆಯಿಂದ ನೀಡುವುದಾಗಿ ಘೋಷಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿಯ ಕಂಬಾಳು ಗೊಲ್ಲರಹಟ್ಟಿಯ ಬಳಿಯಲ್ಲಿ ಚಿರತೆ ದಾಳಿಯಿಂದಾಗಿ ಕರಿಯಮ್ಮ(55) ಎಂಬ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಕೂಡಲೇ ನರಭಕ್ಷಕ ಚಿರತೆಯನ್ನು ಹಿಡಿಯುವಂತೆ ಆಗ್ರಹ ಹೆಚ್ಚಾಗಿತ್ತು. ಇಂದು ಸ್ಥಳಕ್ಕೆ ಎಸಿಎಫ್ ನಿಜಾಮುದ್ದೀನ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಲ್ಲದೇ ಚಿರತೆಯನ್ನು ಬಂಧಿಸಲು ಬೋನ್ ಇರಿಸಲಾಗುತ್ತದೆ ಎಂಬುದಾಗಿ ಘೋಷಿಸಿದರು. ಇನ್ನೂ ಚಿರತೆ ದಾಳಿಯಲ್ಲಿ ಮೃತ ಮಹಿಳೆಯ ಕುಟುಂಬಕ್ಕೆ 15 ಲಕ್ಷ ಪರಿಹಾರವನ್ನು ನೀಡುವುದಾಗಿ ಘೋಷಿಸಿದರು. ಕೂಡಲೇ ಮೃತ ಮಹಿಳೆಯ ಕುಟುಂಬಕ್ಕೆ ನೀಡುವುದಾಗಿ ತಿಳಿಸಿದರು. https://kannadanewsnow.com/kannada/kangana-ranauts-emergency-to-release-on-january-17/ https://kannadanewsnow.com/kannada/5-lakh-citizens-travelled-in-a-single-day-indian-aviation-creates-history/
ಕೆಎನ್ಎನ್ ಸಿನಿಮಾ ಡೆಸ್ಕ್: ಹೆಚ್ಚಿನ ನಿರೀಕ್ಷೆಯ ನಂತರ, ಕಂಗನಾ ರನೌತ್ ಅವರ ರಾಜಕೀಯ ನಾಟಕ ತುರ್ತು ಪರಿಸ್ಥಿತಿ ಸೆನ್ಸಾರ್ ಅನುಮತಿಯನ್ನು ಪಡೆದಿದೆ ಮತ್ತು ಈಗ ಜನವರಿ 17, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 1970 ರ ದಶಕದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಚಿತ್ರೀಕರಿಸಲಾದ ಈ ಚಿತ್ರವು ಭಾರತೀಯ ಪ್ರಜಾಪ್ರಭುತ್ವದ ಅತ್ಯಂತ ನಿರ್ಣಾಯಕ ಮತ್ತು ಹೆಚ್ಚು ಮಾತನಾಡುವ ಅಧ್ಯಾಯಗಳಲ್ಲಿ ಒಂದರ ಅನ್ವೇಷಣೆಯನ್ನು ನೀಡುವ ಭರವಸೆ ನೀಡುತ್ತದೆ. ಕಂಗನಾ ರನೌತ್ ಬರೆದು, ನಿರ್ದೇಶಿಸಿದ ಮತ್ತು ಶೀರ್ಷಿಕೆ ಹೊಂದಿರುವ ತುರ್ತು ಪರಿಸ್ಥಿತಿ ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರ ಜೀವನ ಮತ್ತು ಸಮಯವನ್ನು ಚಿತ್ರಿಸುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ನವೀಕರಣವನ್ನು ಹಂಚಿಕೊಂಡ ಕಂಗನಾ, “ಜನವರಿ 17, 2025 – ರಾಷ್ಟ್ರದ ಅತ್ಯಂತ ಶಕ್ತಿಶಾಲಿ ಮಹಿಳೆಯ ಮಹಾಕಾವ್ಯ ಕಥೆ ಮತ್ತು ಭಾರತದ ಹಣೆಬರಹವನ್ನು ಬದಲಾಯಿಸಿದ ಕ್ಷಣ. #Emergency – 17.01.2025 ರಂದು ಚಿತ್ರಮಂದಿರಗಳಲ್ಲಿ ಮಾತ್ರ ಅನಾವರಣಗೊಳ್ಳುತ್ತದೆ! ಈ ಚಿತ್ರವು ಆರಂಭದಲ್ಲಿ ಈ ವರ್ಷದ ಸೆಪ್ಟೆಂಬರ್…
ಬೆಂಗಳೂರು: ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರ ಕುರಿತು ವಸತಿ ಸಚಿವ ಜಮೀರ್ ಅಹಮದ್ ಅವರು ನೀಡಿರುವ ಹೇಳಿಕೆ ನಾಗರೀಕ ಸಮಾಜ ಒಪ್ಪುವಂಥದ್ದಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ಒಂದು ಗೌರವ ಇದ್ದೇ ಇರುತ್ತದೆ. ಶ್ರೀಮಂತ ಇರಲಿ, ಬಡವ ಇರಲಿ, ಎಲ್ಲರಿಗೂ ಅವರದ್ದೇ ಆದ ಗೌರವ ಇರುತ್ತದೆ. ಹಾಗಾಗಿ ಯಾರೂ ಯಾರನ್ನೂ ಕೊಂಡುಕಳ್ಳಲು ಆಗುವುದಿಲ್ಲ. ಇದರ ಅರಿವು ಇರುವವರು ಯಾರೂ ಹೀಗೆ ಮಾತನಾಡುವುದಿಲ್ಲ ಎಂದು ಹೇಳಿದರು. ಹಿಂದಿನ ಬಿಜೆಪಿ ಸರ್ಕಾರದ ವಿರುದ್ದ ಕಾಂಗ್ರೆಸ್ ಮಾಡಿದ್ದ 40% ಆರೋಪ ಸುಳ್ಳು ಎಂದು ಲೋಕಾಯುಕ್ತ ವರದಿಯಲಿ ಉಲ್ಲೇಖ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ವಿಚಾರದ ಬಗ್ಗೆ ಈಗ ಮಾತನಾಡುವುದಿಲ್ಲ. ಈಗಾಗಲೇ ನಮ್ಮ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಮಾತನಾಡಿದ್ದಾರೆ. ಉಪಚುನಾವಣೆ ಫಲಿತಾಂಶ ಬಂದ ನಂತರ ನಾನು ಮಾತನಾಡುತ್ತೇನೆ, ಅಲ್ಲೀವರೆಗೂ ನಾನು ಮಾತನಾಡುವುದಿಲ್ಲ. 40% ಆರೋಪದ ಬಗ್ಗೆ…