Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವಂತ NHM ಸಿಬ್ಬಂದಿಗಳಿಗೆ 15% ವೇತನ ಹೆಚ್ಚಳದ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮಾಜಿ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಪತ್ರ ಬರೆದು ಆಗ್ರಹಿಸಿದ್ದಾರೆ. ಈ ಸಂಬಂಧ ಸಿಎಂ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದು, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳ ವೇತನ ಕಡಿಮೆ ಇರುವ ಬಗ್ಗೆ ಪರಿಶೀಲಿಸಿ ವೇತನ ಹೆಚ್ಚಳ ಮಾಡಲು ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಚಾರಿ ಅವರ ಅಧ್ಯಕ್ಷತೆಯ ಸಮಿತಿಯು 15% ವೇತನ ಹೆಚ್ಚಳ ಮಾಡಲು ಶಿಫಾರಸ್ಸು ಮಾಡಿತ್ತು ಎಂದಿದ್ದಾರೆ. ಅದರಂತೆ ಏಪ್ರಿಲ್ 2023 ರಿಂದ ಅನ್ವಯ ಆಗುವಂತೆ ವೇತನ ಹೆಚ್ಚಿಸಿ ಆದೇಶ ಹೊರಡಿಸಲಾಗಿರುತ್ತದೆ ಅದರಂತೆ 2023-24 ರಲ್ಲಿ ತಮ್ಮ ಸರಕಾರ ಬಂದ ನಂತರ 17055 ಸಿಬ್ಬಂದಿಗಳಿಗೆ ಅನ್ವಯ ಆಗುವಂತೆ ಅನುದಾನವನ್ನು ಜಿಲ್ಲೆಗಳಿಗೆ ಬಿಡುಗಡೆ ಮಾಡಿದ್ದೂ ಸ್ವಾಗತಾರ್ಹ ಎಂಬುದಾಗಿ ಹೇಳಿದ್ದಾರೆ. 2024-25 ನೆಯ ಸಾಲಿಗೆ ಈಗಾಗಲೇ ಹೆಚ್ಚಳವಾದ ಅನುದಾನವನ್ನು ಜಿಲ್ಲೆಗಳಿಗೆ…
ಬೆಂಗಳೂರು: ಮಾರ್ಚ್.22ರ ನಾಳೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅಖಂಡ ಕರ್ನಾಟಕ ಬಂದ್ ಮಾಡುವುದು ಖಚಿತ. ಇದರಲ್ಲಿ ಬದಲಾವಣೆಯೇ ಇಲ್ಲ ಎಂಬುದಾಗಿ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಘೋಷಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಅವರು, ಮರಾಠಿಗರ ಪುಂಡಾಟಿಕೆ, ಮರಾಠಿಗರ ಅಟ್ಟಹಾಸ, ಎಂಇಎಸ್ ನಿಷೇಧ ಸೇರಿದಂತೆ ವಿವಿಧ ವಿಚಾರಗಳ ಕುರಿತು ಮಾರ್ಚ್.22ರಂದು ಅಖಂಡ ಕರ್ನಾಟಕ ಬಂದ್ ಖಚಿತವೆಂಬುದಾಗಿ ತಿಳಿಸಿದ್ದಾರೆ. ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅಖಂಡ ಕರ್ನಾಟಕ ಬಂದ್ ಮಾಡಲಾಗುತ್ತಿದೆ. ನಾಳೆ ಬೆಳಗ್ಗೆ 11.30 ಗಂಟೆಗೆ ಬೆಂಗಳೂರಿನ ಟೌನ್ ಹಾಲ್ ನಿಂದ ಭಾರೀ ಮೆರವಣಿಗೆಯಿಂದ ಫ್ರೀಡಂ ಪಾರ್ಕ್ ಗೆ ತೆರಳಲಾಗುತ್ತದೆ ಎಂದಿದ್ದಾರೆ. ನಾಳಿನ ಮೆರವಣಿಗೆಯಲ್ಲಿ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ ಗೋವಿಂದು, ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್ ಕುಮಾರ್, ಕನ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಶಿವರಾಮೇಗೌಡ, ಪ್ರವೀಣ್ ಶೆಟ್ಟಿ, ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ್ ದೇವ್,…
ಬೆಂಗಳೂರು: ವಿಧಾನಸಭೆಯಲ್ಲಿ ಬಿಜೆಪಿ ತೀವ್ರ ವಿರೋಧ, ಗದ್ದಲದ ನಡುವೆ ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲೀಮರಿಗೆ ಶೇ.4ರಷ್ಟು ಮೀಸಲಾತಿಯ ಮಸೂಧೆಯನ್ನು ಅಂಗೀಕಾರ ನೀಡಲಾಯಿತು. ಮುಸ್ಲಿಂ ಗುತ್ತಿಗೆದಾರರಿಗೆ ಟೆಂಡರ್ ಗಳಲ್ಲಿ ಶೇ 4ರಷ್ಟು ಮೀಸಲಾತಿ ನೀಡುವ ಉದ್ದೇಶದಿಂದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಈ ಮಸೂದೆಯನ್ನು ಇಂದು ವಿಧಾನಸಭೆಯಲ್ಲಿ ರಾಜ್ಯ ಸರ್ಕಾರ ಮಂಡಿಸಿತ್ತು. ಈ ಮಸೂದೆಯಲ್ಲಿ ಒಂದು ಕೋಟಿಯವರೆಗಿನ ಕಾಮಗಾರಿಗಳಲ್ಲಿ ಮುಸ್ಲೀಮರಿಗೆ ಮೀಸಲಾತಿ, ಹಿಂದುಳಿದ, ಇತರೇ ಹಿಂದುಳಿದ ವರ್ಗಗಳಿಗೆ ಮಾತ್ರ ಇದ್ದ ಕಾಮಗಾರಿ ಮೀಸಲಾತಿ, ಮುಸ್ಲೀಂ ಸಮುದಾಯಕ್ಕೂ ಮೀಸಲಾತಿ ವಿಸ್ತರಿಸಿ ಗುತ್ತಿಗೆ ನೀಡಲು ಅವಕಾಶ ನೀಡಲಾಗಿತ್ತು. ಎಸ್.ಸಿ ಎಸ್.ಟಿ ಸಮುದಾಯಕ್ಕೆ ಈ ಹಿಂದೆ ಇದ್ದ 1 ಕೋಟಿಯವರೆಗಿನ ಮೊತ್ತ ವಿಸ್ತರಿಸಿ 2 ಕೋಟಿಯವರೆಗೆ ಮೀಸಲಾತಿ ಅವಕಾಶ ನೀಡಲಾಗಿದೆ. ವಿಧೇಯಕವನ್ನು ಇದೇ ಅಧಿವೇಶನದಲ್ಲಿ ಮಂಡಿಸಲು ಸಿಎಂ ಸಿದ್ಧರಾಮಯ್ಯ ಅವರ ನೇತೃತ್ವದ ರಾಜ್ಯ ಸಂಪುಟ ಅನುಮೋದನೆ ನೀಡಿತ್ತು. ಇಂದು ವಿಧಾನಸಭೆಯಲ್ಲಿ ಮಂಡಿಸಿ, ಸರ್ಕಾರಿ ಕಾಮಗಾರಿಗಳ…
ನವದೆಹಲಿ: ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಪುರುಷ ಬ್ಯಾಂಕ್ ಉದ್ಯೋಗಿಯ ವಿರುದ್ಧದ ಆಂತರಿಕ ದೂರು ಸಮಿತಿ (ಐಸಿಸಿ) ವರದಿ ಮತ್ತು ಪುಣೆ ಕೈಗಾರಿಕಾ ನ್ಯಾಯಾಲಯದ ತೀರ್ಪನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿ, ಸಂಶೋಧನೆಗಳು ಅಸ್ಪಷ್ಟ ಮತ್ತು ಆಧಾರರಹಿತವೆಂದು ಹೇಳಿದೆ. ನ್ಯಾಯಮೂರ್ತಿ ಸಂದೀಪ್ ಮಾರ್ನೆ, ಐಸಿಸಿಯ ಸೆಪ್ಟೆಂಬರ್ 30, 2022 ರ ವರದಿಯನ್ನು ವಕೀಲ ಸನಾ ರಯೀಸ್ ಖಾನ್ ಮೂಲಕ ಪ್ರಶ್ನಿಸಿದ್ದ ಉದ್ಯೋಗಿಯ ಪರವಾಗಿ ತೀರ್ಪು ನೀಡಿದರು. ಸಮಿತಿಯು ಅವರನ್ನು ಕೆಲಸದ ಸ್ಥಳದಲ್ಲಿನ ದುಷ್ಕೃತ್ಯದ ಆರೋಪದಲ್ಲಿ ತಪ್ಪಿತಸ್ಥರೆಂದು ಕಂಡುಕೊಂಡಿತ್ತು, ಜುಲೈ 2024 ರಲ್ಲಿ ಕೈಗಾರಿಕಾ ನ್ಯಾಯಾಲಯವು ಈ ನಿರ್ಧಾರವನ್ನು ಎತ್ತಿಹಿಡಿದಿದೆ. ಒಂದು ಪ್ರಮುಖ ಆರೋಪವೆಂದರೆ, ಸಭೆಯ ಸಮಯದಲ್ಲಿ ಉದ್ಯೋಗಿ ಮಹಿಳಾ ಸಹೋದ್ಯೋಗಿಯ ಉದ್ದನೆಯ ಕೂದಲಿನ ಬಗ್ಗೆ ತಮಾಷೆ ಮಾಡಿ, ಅದನ್ನು ಕಟ್ಟಲು ಜೆಸಿಬಿ ಬೇಕೇ ಎಂದು ಕೇಳಿದ್ದರು. ‘ಯೇ ರೇಷ್ಮಿ ಜುಲ್ಫೀನ್’ ಹಾಡಿನ ಸಾಲನ್ನು ಹಾಡಿದರು. ದೂರುದಾರರು ಆರಂಭದಲ್ಲಿ ಈ ಲೈಂಗಿಕ ಕಿರುಕುಳವನ್ನು ಪರಿಗಣಿಸಿರಲಿಲ್ಲ ಎಂದು ನ್ಯಾಯಾಲಯ ಗಮನಿಸಿದೆ. ಮಹಿಳೆಯರ ಸಮ್ಮುಖದಲ್ಲಿ ಪುರುಷ…
ಬೆಂಗಳೂರು: ಬಿಜೆಪಿಯ 18 ಶಾಸಕರನ್ನು ವಿಧಾನಸಭೆಯಿಂದ 6 ತಿಂಗಳುಗಳ ಕಾಲ ಸ್ಪೀಕರ್ ಅಮಾನತುಗೊಳಿಸಿ ಆದೇಶಿಸಿದ್ದರಿಂದ ಸದನದ ಭಾವಿಗೆ ಇಳಿದು ಬಿಜೆಪಿ-ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದರು. ಈ ಹಿನ್ನಲೆಯಲ್ಲಿ ಕರ್ನಾಟಕ ವಿಧಾನಸಭೆಯ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಮಾಡಿ ಸ್ಪೀಕರ್ ಆದೇಶಿಸಿದರು. ಬಿಜೆಪಿಯ ಸದಸ್ಯರ ತೀವ್ರ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಮಧ್ಯಾಹ್ನದ ಕಲಾಪದ ನಂತ್ರ ಕೆಲ ವಿಧೇಯಕಗಳನ್ನು ಮಂಡಿಸೋದಕ್ಕೆ ಮುಂದಾಗಲಾಗಿತ್ತು. ಆದರೇ ಸಚಿವರಿಗೆ ಹನಿಟ್ರ್ಯಾಪ್ ವಿಚಾರ ಪ್ರತಿಧ್ವನಿಸಿತು. ಬಿಜೆಪಿ, ಜೆಡಿಎಸ್ ಸದಸ್ಯರು ತನಿಖೆಗೆ ಆಗ್ರಹಿಸಿ ಪ್ರತಿಭಟನೆಯನ್ನು ತೀವ್ರಗೊಳಿಸಿದರು. ಹೀಗಾಗಿ ಸದನದ ಗೌರವಕ್ಕೆ, ಸ್ಪೀಕರ್ ಪೀಠಕ್ಕೆ ಅಗೌರವ ತೋರಿದಂತ 18 ಬಿಜೆಪಿ ಶಾಸಕರನ್ನು ಸ್ಪೀಕರ್ ಯು.ಟಿ ಖಾದರ್ ಅಮಾನತುಗೊಳಿಸಿ ಆದೇಶಿಸಿದರು. ಈ ಬೆನ್ನಲ್ಲೇ ಸಚಿವ ಹೆಚ್.ಕೆ ಪಾಟೀಲ್ ಅವರು ಅರಮನೆ ಭೂ ಬಳಕೆ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು. ಸ್ಪೀಕರ್ ಈ ವಿಧೇಯಕವನ್ನು ಸದನದ ಮತಕ್ಕೆ ಹಾಕಿದರು. ಆದರೇ ಬಿಜೆಪಿ ತೀವ್ರ ವಿರೋಧ, ಗದ್ದಲವನ್ನು ಏಳಿಸಲಾಯಿತು. ಈ ವಿರೋಧ, ಗದ್ದಲದ ನಡುವೆ ಅಂಗೀಕಾರ ನೀಡಲಾಯಿತು. ಸದನದ ಬಾವಿಗೆ…
ಬೆಂಗಳೂರು: ಇಂದು ರಾಜ್ಯ ಸರ್ಕಾರದಿಂದ ವಿಧಾನಸಭೆಯಲ್ಲಿ ಬೆಂಗಳೂರು ಅರಮನೆ ಮೈದಾನದ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವ ಉದ್ದೇಶದ ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ 2025ವನ್ನು ಮಂಡಿಸಲಾಯಿತು. ಈ ವಿಧೇಯಕಕ್ಕೆ ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಅಂಗೀಕಾರ ದೊರೆತಿದೆ. ಇಂದು ರಾಜ್ಯ ವಿಧಾನಸಭೆಯಲ್ಲಿ ಅರಮನೆ ಮೈದಾನದ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವ ಉದ್ದೇಶದ ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ 2025 ವಿಧೇಯಕವನ್ನು ಸಚಿವ ಹೆಚ್.ಕೆ ಪಾಟೀಲ್ ಅವರು ಮಂಡಿಸಲಾಯಿತು. ಈ ವಿಧೇಯಕ ಕುರಿತಾಗಿ ಆಡಳಿತ ವಿಪಕ್ಷಗಳ ನಡುವೆ ಜಟಾವಟಿ ನಡೆಯಿತು. ಬಿಜೆಪಿ ಸದಸ್ಯರ ತೀವ್ರ ವಿರೋಧದ ನಡುವೆ ಅರಮನೆ ಭೂ ಬಳಕೆ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಗಿದೆ. https://kannadanewsnow.com/kannada/suspension-of-mlas-in-raj-bhavan-premises-meet-soon-after-house-adjourns/ https://kannadanewsnow.com/kannada/kas-mains-exam-scheduled-to-begin-from-march-28-postponed-kpsc/
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಿಂದ ಕೆಎಎಸ್ ಮುಖ್ಯ ಪರೀಕ್ಷೆಯನ್ನು ಮಾರ್ಚ್.28ರಿಂದ ನಡೆಸಲು ನಿರ್ಧರಿಸಲಾಗಿತ್ತು. ಈಗ ಈ ಪರೀಕ್ಷೆಯನ್ನು ಮುಂದೂಡಿಕೆ ಮಾಡಿ ಕೆಪಿಎಸ್ಸಿ ಆದೇಶಿಸಿದೆ. ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಮಾಹಿತಿ ನೀಡಿದ್ದು, 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ – ಎ ಮತ್ತು ಗ್ರೂಪ್ – ಬಿ ವೃಂದದ 384 ಹುದ್ದೆಗಳಿಗೆ ಮುಖ್ಯ ಪರೀಕ್ಷೆಯ ಅಧಿಸೂಚನೆಯನ್ನು ದಿನಾಂಕ:13-02-2025ರಂದು ಪ್ರಕಟಿಸಲಾಗಿತ್ತು ಎಂದಿದೆ. ಮುಖ್ಯಪರೀಕ್ಷೆಯನ್ನು ದಿನಾಂಕ:28-03-2025, 29-03-2025, 01-04-2025 ಮತ್ತು. 02-04-2025ರಂದು ನಡೆಸಲು ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಕಾರಣಾಂತರಗಳಿಂದ ಸದರಿ ಪರೀಕ್ಷೆಯ ದಿನಾಂಕವನ್ನು ಮುಂದೂಡಲಾಗಿದ್ದು, ಆಯೋಗದ ಅಂತರ್ಜಾಲದಲ್ಲಿ, ಶೀಘ್ರವಾಗಿ ದಿನಾಂಕವನ್ನು ಪ್ರಕಟಿಸಲಾಗುವುದು ಎಂಬುದಾಗಿ ತಿಳಿಸಿದೆ. https://kannadanewsnow.com/kannada/here-is-the-list-of-18-bjp-mlas-suspended-from-the-state-assembly/ https://kannadanewsnow.com/kannada/suspension-of-mlas-in-raj-bhavan-premises-meet-soon-after-house-adjourns/
ಬೆಂಗಳೂರು: ಸ್ಪೀಕರ್ ಪೀಠಕ್ಕೆ ಅಗೌರವ ತೋರಿದಂತ ಬಿಜೆಪಿ 18 ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್ ಯು.ಟಿ ಖಾದರ್ ಆದೇಶಿಸಿದ್ದರು. ಇಂತಹ ಶಾಸಕರ ಅಮಾನತು ವಿಚಾರ ಈಗ ರಾಜಭವನದ ಅಂಗಳಕ್ಕೆ ತಲುಪಿದೆ. ಸದನ ಮುಂದೂಡಲ್ಪಟ್ಟ ಕೂಡಲೇ ರಾಜ್ಯಪಾಲರನ್ನು ಬಿಜೆಪಿ ಶಾಸಕರು ಭೇಟಿಯಾಗೋದಾಗಿ ತಿಳಿದು ಬಂದಿದೆ. ಇಂದು ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರಿಂದ ಗದ್ದಲ, ಕೋಲಾಹಲ ಉಂಟು ಮಾಡಿದರು. ಅಲ್ಲದೇ ಸ್ಪೀಕರ್ ಪೀಠಕ್ಕೆ ಅಗೌರವ ತೋರುವಂತ ನಡೆಯನ್ನು ತೋರಲಾಯಿತು. ಈ ಹಿನ್ನಲೆಯಲ್ಲಿ ಸ್ಪೀಕರ್ ಯು.ಟಿ ಖಾದರ್ ಅವರು ಬಿಜೆಪಿಯ 18 ಶಾಸಕರಾದಂತ ದೊಡ್ಡನಗೌಡ ಪಾಟೀಲ್, ಅಶ್ವಥನಾರಾಯಣ, ಎಸ್ ಆರ್ ವಿಶ್ವನಾಥ್, ಬೈರತಿ ಬಸವರಾಜು, ಎಮ್ ಆರ್ ಪಟೇಲ್, ಚನ್ನಬಸಪ್ಪ, ಉಮಾನಾಥ್ ಕೋಟ್ಯನ್, ಸುರೇಶ್ ಗೌಡ, ಶೈಲೇಂದ್ರ ಬೆಲ್ದಾಳೆ, ಶರಣು ಸಲಗಾರ್, ಸಿಕೆ ರಾಮಮೂರ್ತಿ, ಯಶ್ಪಾಲ್ ಸುವರ್ಣ, ಹರಿಶ್ ಬಿ ಪಿ, ಭರತ್ ಶೆಟ್ಟಿ, ಬಸವರಾಜ ಮತ್ತಿಮೂಡ್, ಧೀರಜ್ ಮುನಿರಾಜು, ಮುನಿರತ್ನ, ಚಂದ್ರು ಲಮಾಣಿ ಅವರನ್ನು ಅಮಾನತುಗೊಳಿಸಿ ಆದೇಶಿಸಿದರು. ಈ ಬೆನ್ನಲ್ಲೇ ಬಿಜೆಪಿ ಶಾಸಕರು ರಾಜ್ಯಪಾಲ ಥಾವರ್ ಚಂದ್…
ಬೆಂಗಳೂರು: ಕರ್ನಾಟಕ ವಿಧಾನಸಭೆಯ ಸ್ಪೀಕರ್ ಪೀಠಕ್ಕೆ ಅಗೌರವ ತಂದಂತ ಆರೋಪದ ಹಿನ್ನಲೆಯಲ್ಲಿ ವಿಧಾನಸಭೆಯಲ್ಲಿ ಆರು ತಿಂಗಳುಗಳ ಕಾಲ ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್ ಯು.ಟಿ ಖಾದರ್ ಆದೇಶಿಸಿದ್ದರು. ಇಂದು ವಿಧಾನಸಭೆಯ ಕಲಾಪ ಮಧ್ಯಾಹ್ನ ಆರಂಭಗೊಳ್ಳುತ್ತಿದ್ದಂತೆ ಬಿಜೆಪಿ ಶಾಸಕರಿಂದ ಗಲಾಟೆ, ಕೋಲಾಹಲ ಏಳಿಸಲಾಯಿತು. ಸ್ಪೀಕರ್ ಪೀಠಕ್ಕೆ ಅಗೌರವ ತೋರುವಂತ ನಡೆಯನ್ನು ಬಿಜೆಪಿಯ ಶಾಸಕರು ನಡೆದುಕೊಂಡಿದ್ದಾಗಿ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ವಿಧಾನಸಭೆಯ ಕಲಾಪದಿಂದ 6 ತಿಂಗಳವರೆಗೆ ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್ ಯುಟಿ ಖಾದರ್ ಆದೇಶ ಮಾಡಿದ್ದಾರೆ. ಹೀಗಿದೆ ವಿಧಾನಸಭೆ ಕಲಾಪದಿಂದ 6 ತಿಂಗಳುಗಳ ಕಾಲ ಅಮಾನತುಗೊಂಡ 18 ಬಿಜೆಪಿ ಶಾಸಕರ ಪಟ್ಟಿ ದೊಡ್ಡನಗೌಡ ಪಾಟೀಲ್ ಅಶ್ವಥನಾರಾಯಣ ಎಸ್ ಆರ್ ವಿಶ್ವನಾಥ್ ಬೈರತಿ ಬಸವರಾಜು ಎಮ್ ಆರ್ ಪಟೇಲ್ ಚನ್ನಬಸಪ್ಪ ಉಮಾನಾಥ್ ಕೋಟ್ಯನ್ ಸುರೇಶ್ ಗೌಡ ಶೈಲೇಂದ್ರ ಬೆಲ್ದಾಳೆ ಶರಣು ಸಲಗಾರ್ ಸಿಕೆ ರಾಮಮೂರ್ತಿ ಯಶ್ಪಾಲ್ ಸುವರ್ಣ ಹರಿಶ್ ಬಿ ಪಿ ಭರತ್ ಶೆಟ್ಟಿ ಬಸವರಾಜ ಮತ್ತಿಮೂಡ್ ಧೀರಜ್ ಮುನಿರಾಜು…
ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಮಾನಹಾನಿಕರ ವೀಡಿಯೋ ಹರಿಬಿಟ್ಟಿದ್ದ ಯೂಟ್ಯೂಬರ್ ಸಮೀರ್ ಎಂಡಿ ವಿರುದ್ಧ ಕೋರ್ಟ್ ಆದೇಶ ನೀಡಿದ್ದು, ಸಮೀರ್ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಹರಿಬಿಟ್ಟಿದ್ದ ವೀಡಿಯೋ ಮಾನ್ಯ ಪ್ರಧಾನ ಸಿಟಿ ಸಿವಿಲ್ ಕೋರ್ಟ್ ಆದೇಶದನ್ವಯ ಡಿಲೀಟ್ ಆಗಿದೆ. ಈ ಹಿಂದೆ ಕರ್ನಾಟಕ ಹೈಕೋರ್ಟ್ ನ್ಯಾ ಆರ್ ದೇವದಾಸ್ ಅವರಿದ್ದ ಏಕಸದಸ್ಯ ಪೀಠ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಅವರ ಹಿಂಬಾಲಕರು ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿಗಳು, ಕುಟುಂಬ ಸದಸ್ಯರು ಹಾಗೂ ಧರ್ಮಸ್ಥಳಕ್ಕೆ ಸಂಭಂಧಿಸಿದ ಯಾವುದೇ ಸಂಸ್ಥೆಗಳ ಬಗ್ಗೆ ಮಾನಹಾನಿ ಹೇಳಿಕೆಗಳನ್ನ ನೀಡಬಾರದು ಎಂದು ಆದೇಶ ನೀಡಿತ್ತು. ಯೂಟ್ಯೂಬರ್ ಸಮೀರ್ ವಿರುದ್ಧ ಪ್ರಧಾನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಈಗಾಗಲೇ ಕಡ್ಡಾಯ ತಡೆಯಾಜ್ಞೆ ಇದ್ದು ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿಗಳು, ಅವರ ಕುಟುಂಬ ಸದಸ್ಯರು ಹಾಗೂ ಧರ್ಮಸ್ಥಳಕ್ಕೆ ಸಂಭಂಧಿಸಿದ ಯಾವುದೇ ಸಂಸ್ಥೆಗಳ ವಿರುದ್ಧ ಮಾನಹಾನಿ ಹೇಳಿಕೆಗಳು…