Author: kannadanewsnow09

ಹುಬ್ಬಳ್ಳಿ: ಹಾಡ ಹಗಲೇ ಕಣ್ಣಿಗೆ ಕಾರದಪುಡಿಯನ್ನು ಎರಚಿರುವಂತ ದುಷ್ಕರ್ಮಿಗಳು, ಹಂದಿ ವ್ಯಾಪಾರಿಯನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವಂತ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿ ಹೊರವಲಯದಲ್ಲಿ ಸ್ಯಾಮುಯೆಲ್(38) ಎಂಬಾತನ ಮೇಲೆ ಹಾಡ ಹಗಲೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಕಣ್ಣಿಗೆ ಕಾರದಪುಡಿ ಎರಚಿರುವಂತ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ. ಮಂಟೂರು ನಿವಾಸಿ ಸ್ಯಾಮುಯೆಲ್ ಎಂಬಾತನನ್ನು ಕೊಲೆಗೈದು ಪರಾರಿಯಾಗಿದ್ದಾರೆ. ಕೊಲೆಯ ಹಿಂದಿನ ಕಾರಣ ಹಳೇ ದ್ವೇಷದಿಂದ ಎನ್ನಲಾಗುತ್ತಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿ, ಪರಿಶೀಲಿಸಿದರು. ಈ ಸಂಬಂಧ ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/my-mother-in-law-should-die-soon-daughter-in-law-writes-vow-on-note-photo-goes-viral/ https://kannadanewsnow.com/kannada/world-human-day-celebrations-scheduled-to-be-held-in-kuppally-on-december-29-postponed/

Read More

ಶಿವಮೊಗ್ಗ: ಡಿಸೆಂಬರ್.29ರಂದು ಕುಪ್ಪಳ್ಳಿಯಲ್ಲಿ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ಹಿನ್ನಲೆಯಲ್ಲಿ ಮುಂದೂಡಿಕೆ ಮಾಡಲಾಗಿದೆ. ಈ ಬಗ್ಗೆ ಕುಪ್ಪಳ್ಳಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಡಾಕ್ಟರ್ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಶೋಕಾಚರಣೆ ಇರುವುದರಿಂದ 29- 12 -2024 ರಂದು ಕುಪ್ಪಳಿಯಲ್ಲಿ ನಡೆಯಬೇಕಾಗಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದಿದ್ದಾರೆ. ಆ ದಿನ ಸಮಾರಂಭ ಕುಪ್ಪಳಿಯಲ್ಲಿ ನಡೆಯುವುದಿಲ್ಲ. ಬೆಳಗ್ಗೆ 10 ರಿಂದ 11 ರವರೆಗೆ ಕವಿಶೈಲದಲ್ಲಿ ಕವಿ ನಮನ ಮಾತ್ರ ಇರುತ್ತದೆ. ಅದೇ ದಿನ ತೀರ್ಥಹಳ್ಳಿಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ. https://kannadanewsnow.com/kannada/former-suzuki-motor-chairman-osamu-suzuki-who-led-company-for-40-years-dies-at-94-death/ https://kannadanewsnow.com/kannada/my-mother-in-law-should-die-soon-daughter-in-law-writes-vow-on-note-photo-goes-viral/

Read More

ಕಲಬುರ್ಗಿ: ಅತ್ತೆ ಸೊಸೆಯರು ತಾಯಿ ಮಗಳಿದ್ದಂತೆ ಇರಬೇಕು. ಹಾಗೆ ಇದ್ದಾಗ ಮಾತ್ರ ಸಂಸಾರ ಚೆಂದವಾಗಿರುತ್ತದೆ ಅಂತ ಹಿರಿಯರು ಬುದ್ಧಿ ಹೇಳುತ್ತಾರೆ. ಆದರೇ ಇಲ್ಲೊಬ್ಬ ಸೊಸೆ ಮಾತ್ರ ನಮ್ಮ ಅತ್ತೆ ಬೇಗ ಸಾಯಬೇಕು ಅಂತ ದೇವಿಗೆ ನೋಟಿನಲ್ಲಿ ಹರಕೆ ಬರೆದು, ತೀರಿಸುವಂತೆ ಕೋರಿರೋದು ವೈರಲ್ ಆಗಿದೆ. ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಘತ್ತರಗಿ ಗ್ರಾಮದಲ್ಲಿರುವಂತ ಭಾಗ್ಯವಂತಿ ದೇವಿ ತುಂಬಾನೇ ಪ್ರಸಿದ್ಧ ದೇವಸ್ಥಾನ. ಈ ದೇವಾಲಯಕ್ಕೆ ಹಲವೆಡೆಯಿಂದ ಭಕ್ತರು ಆಗಮಿಸಿ ತಮ್ಮ ಹರಕೆಯನ್ನು ತೀರಿಸುವಂತೆ ಭಾಗ್ಯವಂತಿ ದೇವಿಯನ್ನು ಕೋರೋದು ರೂಢಿ. ಈ ದೇವಸ್ಥಾನಕ್ಕೆ ಬಂದಿರುವಂತ ಸೊಸೆಯೊಬ್ಬರು 20 ರೂಪಾಯಿಯ ನೋಟಿನ ಮೇಲೆ ತಾಯಿ ನಮ್ಮ ಅತ್ತೆ ಬೇಗ ಸಾಯಲಿ ತಾಯಿ ಅಂತ ಹರಕೆ ಬರೆದು ಹಾಕಿರೋದು ದೇವಸ್ಥಾನದ ಹುಂಡಿಯನ್ನು ತೆರೆದು ಕಾಣಿಕೆ ಏಣಿಸುವಂತ ಸಂದರ್ಭದಲ್ಲಿ ಪತ್ತೆಯಾಗಿದೆ. 20 ರೂಪಾಯಿ ನೋಟಿನ ಮೇಲೆ ಅತ್ತೆಯ ಬಗ್ಗೆ ಸೊಸೆ ಬರೆದಿರುವಂತ ಬರಹ ಕಂಡಂತ ದೇವಸ್ಥಾನದವರು ಅಚ್ಚರಿ ಪಟ್ಟಿದ್ದಾರೆ. ಈಗ ಈ ಪೋಟೋ ಎಲ್ಲೆಡೆ ವೈರಲ್ ಆಗಿದೆ. ಹೀಗೆ…

Read More

ಮೈಸೂರು: ಹೊಸ ವರ್ಷಾಚರಣೆಗೆ ಜನರು ಎಲ್ಲಿಲ್ಲದ ತಯಾರಿಯಲ್ಲಿ ತೊಡಗಿದ್ದಾರೆ. ಆದರೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲಾಗಿದೆ. ಇದಷ್ಟೇ ಅಲ್ಲದೇ ಅರಮನೆ ಆಡಳಿತ ಮಂಡಳಿಯ ಉಪ ನಿರ್ದೇಶಕ ಸುಬ್ರಹ್ಮಣ್ಯ ಅವರು ಆದೇಶ ಮಾಡಿದ್ದು, ಇಂದು, ನಾಳೆ ಅರಮನೆ ವಿದ್ಯುತ್ ದೀಪಾಲಂಕಾರವನ್ನು ಸ್ಥಗಿತಗೊಳಿಸುತ್ತಿರುವುದಾಗಿ ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಈ ಬಾರಿ ಹೊಸ ವರ್ಷಾಚರಣೆಗೆ ಬ್ರೇಕ್ ಬಿದ್ದಂತೆ ಆಗಿದೆ. ಜೊತೆಗೆ ಪ್ರವಾಸಿಗರು ರಾತ್ರಿ ಹೊತ್ತಲ್ಲಿ ಮೈಸೂರು ಅರಮನೆಯನ್ನು ವಿದ್ಯುತ್ ದೀಪಾಲಂಕಾರಗಳಿಂದಲೂ ಈ ಬಾರಿ ವೀಕ್ಷಿಸೋದಕ್ಕೆ ಸಾಧ್ಯವಾಗುವುದಿಲ್ಲ. https://kannadanewsnow.com/kannada/breaking-president-draupadi-murmu-pays-last-respects-to-dr-manmohan-singh/ https://kannadanewsnow.com/kannada/former-suzuki-motor-chairman-osamu-suzuki-who-led-company-for-40-years-dies-at-94-death/

Read More

ಬೆಂಗಳೂರು: ಡಿಸೆಂಬರ್.29ರಂದು ಕೆಪಿಎಸ್ಸಿಯಿಂದ 384 ಕೆಎಎಸ್ ಹುದ್ದೆಗಳ ಪೂರ್ವಭಾವಿ ಮರು ಪರೀಕ್ಷೆ ನಡೆಸಲಾಗುತ್ತಿದೆ. ಈ ಪರೀಕ್ಷೆಗೆ ಹಾಜರಾಗುವಂತ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ಹೆಚ್ಚುವರಿ ಕೆ ಎಸ್ ಆರ್ ಟಿಸಿ ಬಸ್ ಸಂಚಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ 29.12.2024 ರಂದು ಕರ್ನಾಟಕ ಲೋಕಸೇವಾ ಆಯೋಗದ 2023-24ನೇ ಸಾಲಿನ ಗೆಜೆಟೆಡ್ ಪ್ರೋಬೆಷನರ್ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಪೂರ್ವಭಾವಿ ಪರೀಕ್ಷೆ ನಡೆಸಲಿದ್ದು, ಬೆಂಗಳೂರಿನಲ್ಲಿ ವಾಸಿಸುತ್ತಿರುವಂತಹ ಸುಮಾರು ಅಭ್ಯರ್ಥಿಗಳಿಗೆ ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲಾಗಳಾದ ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಹಾಗೂ ಇನ್ನಿತರ ಜಿಲ್ಲೆಗಳಿಗೆ ಪರೀಕ್ಷೆ ಕೇಂದ್ರಗಳನ್ನು ಗುರುತಿಸಿದ್ದು, ನಿಗದಿತ ಸಮಯದೊಳಗೆ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಿಗೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆಯನ್ನು ಕಲ್ಪಿಸುವಂತೆ ಎಕ್ಸ್ ಖಾತೆ ಮೂಲಕ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಸುಮಾರು ಅಭ್ಯರ್ಥಿಗಳು ಮನವಿ ಸಲ್ಲಿಸಿದ್ದು ತ್ವರಿತಗತಿಯಲ್ಲಿ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ…

Read More

ಬೆಂಗಳೂರು: ನಗರದ ಆಸ್ತಿ ಮಾಲೀಕರು ಇ-ಖಾತಾ ಪಡೆಯುವುದು ಕಡ್ಡಾಯ. ಹಲವಾರು ಗೊಂದಲಗಳ ನಡುವೆ ಈಗಾಗಲೇ ಕೆಲವರು ಪಡೆದಿದ್ದರೇ, ಮತ್ತೆ ಕೆಲವರು ಪಡೆಯೋ ಪ್ರಯತ್ನದಲ್ಲಿ ಇದ್ದಾರೆ. ಬೆಂಗಳೂರಿನ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ ಎನ್ನುವಂತೆ ಜಸ್ಟ್ ಐದು ದಾಖಲೆಗಳನ್ನು ಅಪ್ ಲೋಡ್ ಮಾಡಿದ್ರೆ, ಅಂತಿಮ ಇ-ಖಾತಾವನ್ನು ಪಡೆಯಬಹುದಾಗಿದೆ. ಈ ಬಗ್ಗೆ ಬಿಬಿಎಂಪಿ ಮಾಹಿತಿ ಹಂಚಿಕೊಂಡಿದ್ದು, ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಮಾಲೀಕರು ಇ – ಖಾತಾ ಪಡೆಯಲು ಐದು ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕು. ಮಾಲೀಕರ ಆಧಾರ್‌ ಕಾರ್ಡ್‌, ಆಸ್ತಿ ತೆರಿಗೆ ಐಡಿ, ಮಾರಾಟ / ರಿಜಿಸ್ಟರ್‌ ಡೀಡ್‌ ಸಂಖ್ಯೆ, ಬೆಸ್ಕಾಂ ಖಾತೆಯ ಸಂಖ್ಯೆ (ಖಾಲಿ ನಿವೇಶನವಿದ್ದರೆ ಅಗತ್ಯವಿಲ್ಲ), ಆಸ್ತಿ ಫೋಟೋ ಈ ಎಲ್ಲಾ ದಾಖಲೆಗಳು ಬಿಬಿಎಂಪಿಯಲ್ಲಿರುವ ದಾಖಲೆಗಳೊಂದಿಗೆ ಹೊಂದಾಣಿಕೆಯಾದರೆ ಕೂಡಲೇ ಅಂತಿಮ ಇ – ಖಾತಾವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದಿದೆ. ಈ ಕುರಿತಂತೆ ಸಂಶಯವಿದ್ದಲ್ಲಿ ಇ – ಖಾತಾ ಸಹಾಯವಾಣಿ 94806 83695 ಗೆ ಕರೆ ಮಾಡಿ ಸಲಹೆ ಪಡೆಯುವಂತೆ ತಿಳಿಸಿದೆ. https://twitter.com/KarnatakaVarthe/status/1872262419860591082 ಬಿಬಿಎಂಪಿ ಇ-ಖಾತಾ…

Read More

ಬೆಂಗಳೂರು: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾದ ಹಿನ್ನೆಲೆಯಲ್ಲಿ ಇಂದಿನಿಂದ 7 ದಿನ ರಾಜ್ಯಾದ್ಯಂತ ಶೋಕಾಚರಣೆಯನ್ನು ಘೋಷಣೆ ಮಾಡಲಾಗಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾದ ಹಿನ್ನೆಲೆಯಲ್ಲಿ 7 ದಿನ ರಾಜ್ಯಾದ್ಯಂತ ಶೋಕಾಚರಣೆಯನ್ನು ಘೋಷಣೆ ಮಾಡಲಾಗಿದೆ ಅಂತ ತಿಳಿಸಿದ್ದಾರೆ. ಇನ್ನೂ ಸರ್ಕಾರಿ ಸಭೆ, ಸಮಾರಂಭಗಳನ್ನು ಶೋಕಾಚರಣೆ ಸಂದರ್ಭದಲ್ಲಿ ನಡೆಸುವಂತಿಲ್ಲ ಎಂಬುದಾಗಿ ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿದೆ.

Read More

ಬೆಂಗಳೂರು: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾದ ಹಿನ್ನಲೆಯಲ್ಲಿ ಇಂದು ರಾಜ್ಯಾದ್ಯಂತ ಸರ್ಕಾರಿ ರಜೆಯನ್ನು ಘೋಷಣೆ ಮಾಡಿ, ರಾಜ್ಯ ಸರ್ಕಾರ ಆದೇಶ ಮಾಡಿದೆ. ಈ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾದ ಹಿನ್ನೆಲೆಯಲ್ಲಿ ಇಂದು ಸರ್ಕಾರಿ ರಜೆಯನ್ನು ಘೋಷಣೆ ಮಾಡಲಾಗಿದೆ. ಇಂದು ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಿಗೆ ರಜೆ ಇರಲಿದೆ. ಅಲ್ಲದೇ ಶಾಲಾ ಕಾಲೇಜುಗಳಿಗೆ ರಜೆಯನ್ನು ನೀಡಲಾಗಿದೆ.

Read More

ಬೆಂಗಳೂರು: ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರ ನಿಧನದ ಗೌರವಾರ್ಥ ರಾಜ್ಯದಲ್ಲಿ ಏಳು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಅಲ್ಲದೇ ನಾಳೆ ರಾಜ್ಯಾದ್ಯಂತ ದಿನಾಂಕ 27.12.2024ರ ನಾಳೆ ಸರ್ಕಾರಿ ರಜೆ ಘೋಷಿಸಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದಾರೆ. ನಾಳೆಯಿಂದ 7 ದಿನ ಶೋಕಾಚರಣೆ ಘೋಷಿಸಲಾಗಿದೆ. ನಾಳೆ ಸರ್ಕಾರಿ ರಜೆಯನ್ನು ನೀಡಿರುವುದಾಗಿ ತಿಳಿಸಿದ್ದಾರೆ.

Read More

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (92) ಗುರುವಾರ ದೆಹಲಿಯಲ್ಲಿ ನಿಧನರಾದರು. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಅವರು ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ, “ಪ್ರಧಾನಿ ಮನಮೋಹನ್ ಸಿಂಗ್ ಜಿ ಅವರ ನಿಧನದ ಸುದ್ದಿ ತಿಳಿದು ನನಗೆ ತೀವ್ರ ದುಃಖವಾಗಿದೆ ಎಂದಿದ್ದಾರೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಆಳವಾದ ಸಂತಾಪಗಳು. ನಮ್ಮ ರಾಷ್ಟ್ರಕ್ಕೆ ನಿಮ್ಮ ಸೇವೆಗಾಗಿ ಧನ್ಯವಾದಗಳು. ನಿಮ್ಮ ಆರ್ಥಿಕ ಕ್ರಾಂತಿ ಮತ್ತು ನೀವು ದೇಶಕ್ಕೆ ತಂದ ಪ್ರಗತಿಪರ ಬದಲಾವಣೆಗಳಿಗಾಗಿ ನಿಮ್ಮನ್ನು ಯಾವಾಗಲೂ ನೆನಪಿಸಿಕೊಳ್ಳಲಾಗುತ್ತದೆ ಎಂದು ವಾದ್ರಾ ಹೇಳಿದರು. ಸಿಂಗ್ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಗುರುವಾರ ಸಂಜೆ ದೆಹಲಿಯ ಏಮ್ಸ್ ಗೆ ದಾಖಲಾದ ನಂತರ ಈ ಬೆಳವಣಿಗೆ ನಡೆದಿದೆ. ಮಾಜಿ ಪ್ರಧಾನಿಯನ್ನು ಆಸ್ಪತ್ರೆಯ ತುರ್ತು ವಿಭಾಗಕ್ಕೆ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ. https://kannadanewsnow.com/kannada/bjp-demands-resignation-of-priyank-kharge-for-contractor-sachins-suicide/ https://kannadanewsnow.com/kannada/bengaluru-power-outages-in-these-areas-from-10-am-to-3-pm-tomorrow/

Read More