Author: kannadanewsnow09

ಕಲಬುರಗಿ: ಜಿಲ್ಲೆಯಲ್ಲಿ ಇಂದು ಘೋರ ದುರಂತವೊಂದು ಸಂಭವಿಸಿದೆ. ರಥೋತ್ಸವದ ವೇಳೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಹೋಂ ಗಾರ್ಡ್ ಸಾವನ್ನಪ್ಪಿದ್ರೇ, ಮತ್ತೋರ್ವ ವ್ಯಕ್ತಿ ಗಾಯಗೊಂಡಿರೋ ಘಟನೆ ನಡೆದಿದೆ. ಕಲಬುರ್ಗಿಯ ಜಿಲ್ಲೆಯ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ, ಜನರನ್ನು ನಿಯಂತ್ರಿಸೋದಕ್ಕಾಗಿ ಪೊಲೀಸರು ಸೇರಿದಂತೆ ಹೋಂ ಗಾರ್ಡ್ ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಹೋಂ ಗಾರ್ಡ್ ರಾಮು ಸಿದ್ದಪ್ಪ(28) ಎಂಬುವರು ರಥದ ಚಕ್ರಕ್ಕೆ ಸಿಲುಕಿ ಮೃತ ಪಟ್ಟಿದ್ದಾರೆ. ಮೃತ ರಾಮು ಸಿದ್ದಪ್ಪ ಬೀದರ್ ಜಿಲ್ಲೆಯ ಇಟಗಾ ಗ್ರಾಮದವರಾಗಿದ್ದಾರೆ. ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿನ ರಥೋತ್ಸವದ ಭದ್ರತೆಗಾಗಿ ಅವರನ್ನು ನಿಯೋಜಿಸಲಾಗಿತ್ತು. ಇನ್ನೂ ಇದೇ ಘಟನೆಯಲ್ಲಿ ಮತ್ತೋರ್ವ ಸಿಬ್ಬಂದಿ ಅಶೋಕರೆಡ್ಡಿ ಎಂಬುವರು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶರಣಬಸವೇಶ್ವರ ರಥವನ್ನು ಎಳೆಯುವಾಗ ನೂಕು ನುಗ್ಗಲು ಉಂಟಾಗಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಉನ್ನತ ನಾಯಕರ ಸಮ್ಮುಖದಲ್ಲಿ ಏಪ್ರಿಲ್ 5 ರಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ. ಖರ್ಗೆ ಮತ್ತು ಗಾಂಧಿ ಕುಟುಂಬವು ಏಪ್ರಿಲ್ 6 ರಂದು ಜೈಪುರ ಮತ್ತು ಹೈದರಾಬಾದ್ನಲ್ಲಿ ಸಾರ್ವಜನಿಕ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆಯಿದೆ, ಅಲ್ಲಿ ಅವರು ಕಾಂಗ್ರೆಸ್ ಪ್ರಣಾಳಿಕೆಯ ಪ್ರಮುಖ ಅಂಶಗಳನ್ನು ಎತ್ತಿ ತೋರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಿಟಿಐ ಮೂಲಗಳ ಪ್ರಕಾರ, ಪಕ್ಷದ ನಾಯಕತ್ವವು ಏಪ್ರಿಲ್ 5 ರಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಚೇರಿಯಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದೆ. ಕಾಂಗ್ರೆಸ್ ಪ್ರಣಾಳಿಕೆಯು ‘ಪಾಂಚ್ ನ್ಯಾಯ್’ ಅಥವಾ ನ್ಯಾಯದ ಐದು ಸ್ತಂಭಗಳಿಗೆ ಒತ್ತು ನೀಡಲಿದೆ. ಇದರಲ್ಲಿ ‘ಯುವ ನ್ಯಾಯ್’, ‘ನಾರಿ ನ್ಯಾಯ್’, ‘ಕಿಸಾನ್ ನ್ಯಾಯ್’, ‘ಶ್ರಮಿಕ್ ನ್ಯಾಯ್’ ಮತ್ತು ‘ಹಿಸ್ಸೆದಾರಿ ನ್ಯಾಯ್’ ಮತ್ತು 2024 ರ…

Read More

ಬೆಂಗಳೂರು: ಜೆಡಿಎಸ್ ಪಕ್ಷ ಅಸ್ತಿತ್ವದಲ್ಲಿಲ್ಲ ಎಂಬುದನ್ನು ಅವರೇ ತೋರಿಸಿಕೊಟ್ಟಿದ್ದಾರೆ. ಆ ಪಕ್ಷ ಅಸ್ತಿತ್ವದಲ್ಲಿದ್ದರೆ ದೇವೇಗೌಡರ ಅಳಿಯನನ್ನು ಜೆಡಿಎಸ್ ಅಭ್ಯರ್ಥಿ ಮಾಡುತ್ತಿದ್ದರು” ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು. ಕುಮಾರಪಾರ್ಕ್ ನಲ್ಲಿನ ತಮ್ಮ ಸರ್ಕಾರಿ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಉತ್ತರಿಸಿದರು. ಜೆಡಿಎಸ್ ಎಲ್ಲಿದೆ ಎಂದು ಕಾಂಗ್ರೆಸ್ ನಾಯಕರಿಗೆ ತೋರಿಸುತ್ತೇವೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಶಿವಕುಮಾರ್ ಅವರು ಉತ್ತರಿಸಿದ್ದು ಹೀಗೆ; “ಯಾರಾದರೂ ತಮ್ಮದೇ ಪಕ್ಷ ಇಟ್ಟುಕೊಂಡು ತಮ್ಮ ಕುಟುಂಬದವರನ್ನು ಬೇರೆ ಪಕ್ಷದಿಂದ ಕಣಕ್ಕಿಳಿಸುತ್ತಾರಾ? ಆ ಪಕ್ಷ ಇರಬೇಕು, ಪ್ರಬಲ ವಿರೋಧ ಪಕ್ಷವಾಗಬೇಕು ಎಂಬುದು ನಮ್ಮ ಆಸೆ. ಆದರೆ ಅವರೇ ತಮ್ಮ ಪಕ್ಷವನ್ನು ಬಿಜೆಪಿ ಜತೆ ವಿಲೀನ ಮಾಡಿಕೊಳ್ಳುತ್ತಿದ್ದಾರೆ. ದೇಶದ ಪ್ರಧಾನಿಯಾದವರು, ಎರಡು ಬಾರಿ ಮುಖ್ಯಮಂತ್ರಿಯಾದವರು ಇರುವ ಪಕ್ಷವನ್ನು ವಿಲೀನ ಮಾಡುತ್ತಿರುವುದನ್ನು ನೋಡಿ ಬೇಸರವಾಗುತ್ತಿದೆ.” ಐಟಿ ಇಲಾಖೆ ನೋಟೀಸ್ ಬಗ್ಗೆ ದೇವೇಗೌಡರ ಆರೋಪದ ಬಗ್ಗೆ ಕೇಳಿದಾಗ, “1823 ಕೋಟಿ ಕಟ್ಟಬೇಕು ಎಂದು ದೇಶದ ಐಟಿ ಇಲಾಖೆ…

Read More

ಚಿತ್ರದುರ್ಗ: ವಿರೋಧದ ನಡುವೆಯೂ ಕೋಟೆನಾಡು ಚಿತ್ರದುರ್ಗಕ್ಕೆ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು ಎಂಟ್ರಿಕೊಟ್ಟಿದ್ದಾರೆ. ಮೊದಲ ಎಂಟ್ರಿಯಲ್ಲೇ ಅವರಿಗೆ ಬಂಡಾಯದ ಬಿಸಿ ತಟ್ಟಿದೆ. ಅಲ್ಲದೇ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರ ಕಾರಿಗೆ ಮುತ್ತಿಗೆ ಹಾಕಿ ಗೋ ಬ್ಯಾಕ್ ಗೋ ಬ್ಯಾಕ್ ಘೋಷಣೆ ಕೂಗಲಾಗಿದೆ. ಹೌದು.. ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳಗೆ ಬಂಡಾಯದ ಬಿಸಿ ತಟ್ಟಿದೆ. ಟಿಕೆಟ್ ವಂಚಿತ ನಾಯಕನ ಕಾರ್ಯಕರ್ತರು ಗೋ ಬ್ಯಾಕ್ ಗೋವಿಂದ ಕಾರಜೋಳ ಗೋ ಬ್ಯಾಕ್ ಗೋವಿಂದ ಕಾರಜೋಳ ಎಂದು ಭಿತ್ತಿ ಚಿತ್ರ ಹಿಡಿದು ಅಭ್ಯರ್ಥಿ ಕಾರಿಗೆ ಮುತ್ತಿಗೆ ಹಾಕಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಚಿತ್ರದುರ್ಗದ ಚಳ್ಳಕೆರೆ ಗೇಟ್ ನಲ್ಲಿ ಅವರ ಕಾರು ಅಡ್ಡಗಟ್ಟಿದಂತ ರಘುಚಂದನ್ ಅವರ ಬೆಂಬಲಿಗರು, ಅವರ ವಿರುದ್ಧ ಘೋಷಣೆ ಕೂಗಿದರು. ಗೋ ಬ್ಯಾಕ್ ಗೋವಿಂದ ಕಾರಗೋಜ್, ಗೋ ಬ್ಯಾಕ್ ಗೋವಿಂದ ಕಾರಜೋಳ್ ಎಂಬುದಾಗಿ ಘೋಷಣೆ ಕೂಗಿದರು. ಗೋವಿಂದ ಕಾರಜೋಳ ಅವರ ವಿರುದ್ಧ ಪ್ರತಿಭಟನೆ ನಡೆಸಿದಂತ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಕೂಡ…

Read More

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಜೆಡಿಎಸ್ ಪಾಲಾಗುತ್ತಿದ್ದಂತೆ, ಸಂಸದೆ ಸುಮಲತಾ ಅಂಬರೀಶ್ ಸಿಡಿದೇಳೋ ಸಾಧ್ಯತೆ ಇದೆ. ಅವರು ಬಂಡಾಯ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕಾಗಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಜೆಪಿ ನಗರದ ಸುಮಲತಾ ನಿವಾಸಕ್ಕೆ ದಿಢೀರ್ ಭೇಟಿ ನೀಡಿ, ಚರ್ಚೆ ನಡೆಸಿದ್ದಾರೆ. ದೆಹಲಿಗೆ ತೆರಳಿದ್ದಂತ ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ವಿವಿಧ ನಾಯಕರನ್ನು ಭೇಟಿಯಾಗಿದ್ದರು. ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾಗಿ ಬೆಂಗಳೂರಿಗೆ ಹಿಂದಿರುಗಿದಂತ ಅವರನ್ನು ಬಿವೈ ವಿಜಯೇಂದ್ರ ಅವರು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದರು. ಮಂಡ್ಯದಲ್ಲಿ ಜೆಡಿಎಸ್- ಬಿಜೆಪಿ ಬೆಂಬಲಿತ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿಗೆ ಸಪೋರ್ಟ್ ಮಾಡೋದಕ್ಕೆ ಮನವೊಲಿಗೆ ಮಾಡಿದ್ದಾರೆ ಎನ್ನಲಾಗುತ್ತಿದೆ. https://kannadanewsnow.com/kannada/big-news-complaint-filed-against-ct-ravi-for-allegedly-abusing-minister-shivaraj-thangadagi-with-obscene-words/ https://kannadanewsnow.com/kannada/big-news-psi-recruitment-re-exam-final-mark-sheet-released/

Read More

೧] ಸುಮಂಗಲಿಯರು ಬೈತಲೆಯಲ್ಲಿ ಯಾವಾಗಲೂ ಕುಂಕುಮ ಇರದೇ ಇರಬಾರದು. ೨] ಎರಡು ಕೈಗಳಿಂದಲೂ ತಲೆಯನ್ನು ಕೆರೆದುಕೊಳ್ಳಬಾರದು, ೩] ಯಾವುದೇ ಕಾರಣಕ್ಕೂ ಸಂಧ್ಯಾ ಕಾಲದಲ್ಲಿ ಕಣ್ಣಲ್ಲಿ ನೀರು ಹಾಕಬಾರದು. ೪] ಮನೆಗೆ ಬಂದ ಹೆಂಗಸರಿಗೆ ಹರಿಶಿನ, ಕುಂಕುಮ, ಹೂಗಳನ್ನು ಕೊಟ್ಟೆ ಕಳಿಸಬೇಕು. ದೈವಜ್ಞ ಪಂಡಿತ್ ಶ್ರೀ ವಿದ್ಯಾಧರ್ ನಕ್ಷತ್ರಿ ಪ್ರಧಾನ್ ತಾಂತ್ರಿಕ್ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ವಿದ್ಯಾಧರ್ ನಕ್ಷತ್ರಿ ಪ್ರಧಾನ ತಾಂತ್ರಿಕ ತಪ್ಪದೆ ಕರೆ ಮಾಡಿ 9686268564 ೫] ಗರ್ಭಿಣಿ ಸ್ತ್ರೀಯರು ತೆಂಗಿನ ಕಾಯಿ ಮತ್ತು ಕುಂಬಳ ಕಾಯಿ ಹೊಡೆಯಕೂಡದು ಮತ್ತು ಹೊಡೆವ ಜಾಗದಲ್ಲೂ ಇರಕೂಡದು. ೬] ಗರ್ಭಿಣಿ ಸ್ತ್ರೀಯರು ನಿಂಬೆಹಣ್ಣನ್ನು ಕೊಯ್ದು ಬಾರದು…

Read More

ಬೆಂಗಳೂರು: ಈ ಸರಕಾರ ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ಬಿಜೆಪಿ ಮತ್ತು ಜೆಡಿಎಸ್ ಆಹ್ವಾನಿತ ಪ್ರಮುಖರ ಉಪಸ್ಥಿತಿಯಲ್ಲಿ ನಗರದ ರ್ಯಾಡಿಸನ್ ಬ್ಲೂ ಹೋಟೆಲ್‍ನಲ್ಲಿ ಇಂದು ನಡೆದ ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಸರಕಾರದ ಖಜಾನೆ ಖಾಲಿಯಾಗಿದ್ದು, ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರದ 6 ಸಾವಿರ ಜೊತೆಗೆ ನಾನು ಮುಖ್ಯಮಂತ್ರಿ ಆಗಿದ್ದಾಗ 4 ಸಾವಿರ ಹೆಚ್ಚುವರಿಯಾಗಿ ಕೊಡುತ್ತಿದ್ದೆ. ಆ 4 ಸಾವಿರ ನಿಂತು ಹೋಗಿದೆ ಎಂದು ಟೀಕಿಸಿದರು. ಸರಕಾರ ದಿವಾಳಿ ಆಗಿರುವುದಕ್ಕೆ ಬೇರೆ ಉದಾಹರಣೆ ಬೇಕೇ ಎಂದು ಪ್ರಶ್ನಿಸಿದರು. ಬಿಜೆಪಿ- ಜೆಡಿಎಸ್ ಬೇರೆ ಅಲ್ಲ. ನಾವೆಲ್ಲ ಒಂದೇ ತಾಯಿ ಮಕ್ಕಳಂತೆ. ಬಿಜೆಪಿ- ಜೆಡಿಎಸ್ ಅಭ್ಯರ್ಥಿ ಯಾರೇ ಇರಲಿ; ಅವರನ್ನು ಗೆಲ್ಲಿಸಲು ಪ್ರಾಮಾಣಿಕವಾಗಿ ಪಣ ತೊಡಿ. ಆಗ ರಾಜ್ಯದ ಎಲ್ಲ ಲೋಕಸಭಾ…

Read More

ನವದೆಹಲಿ: ಬೆಂಗಳೂರು ರಾಮೇಶ್ವರಂ ಕೆಫೆ ಸ್ಪೋಟದ ಶಂಕಿತರ ಬಂಧನಕ್ಕೆ ಕಾರಣವಾಗುವ ಮಾಹಿತಿ ನೀಡುವ ವ್ಯಕ್ತಿಗಳಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತಲಾ 10 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಿದೆ. ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1 ರಂದು ನಡೆದ ದುರಂತ ಘಟನೆಯಲ್ಲಿ ಅಬ್ದುಲ್ ಮತೀನ್ ಅಹ್ಮದ್ ತಾಹಾ ಮತ್ತು ಮುಸ್ಸವ್ವೀರ್ ಹುಸೇನ್ ಶಾಜಿಬ್ ಎಂದು ಗುರುತಿಸಲಾಗಿದೆ. ಬಹುಮಾನ ಘೋಷಣೆಯೊಂದಿಗೆ, ಎನ್ಐಎ ಇಬ್ಬರು ಶಂಕಿತರ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಯಾವುದೇ ಸಂಬಂಧಿತ ಮಾಹಿತಿಯೊಂದಿಗೆ ಮುಂದೆ ಬರುವಂತೆ ಸಾರ್ವಜನಿಕರನ್ನು ಒತ್ತಾಯಿಸಿದೆ. ಚಿತ್ರಗಳ ಜೊತೆಗೆ, ಏಜೆನ್ಸಿಯು ಶಂಕಿತರ ನೋಟದ ಬಗ್ಗೆ ವಿವರಗಳನ್ನು ಒದಗಿಸಿತು, ಗುರುತಿಸುವ ಉದ್ದೇಶಗಳಿಗಾಗಿ ಮೂರು ಸಂಭಾವ್ಯ ಮಾದರಿಗಳನ್ನು ಪ್ರಸ್ತುತಪಡಿಸಿತು. ಎನ್ಐಎ ಮೂಲಗಳ ಪ್ರಕಾರ, ಶಂಕಿತರು ಎಲ್ಲಿದ್ದಾರೆ ಎಂಬುದರ ಬಗ್ಗೆ ನಿರ್ಣಾಯಕ ಸುಳಿವುಗಳು ಹೊರಬಂದಿದ್ದು, ಅವರನ್ನು ಪತ್ತೆಹಚ್ಚುವ ಮತ್ತು ಬಂಧಿಸುವ ತುರ್ತು ಅಗತ್ಯವನ್ನು ಹೆಚ್ಚಿಸಿದೆ. ಇದಲ್ಲದೆ, ಏಜೆನ್ಸಿ ಬಿಡುಗಡೆ ಮಾಡಿದ ವಾಂಟೆಡ್ ಪಟ್ಟಿಯಿಂದ ಅನಿರೀಕ್ಷಿತ ಬಹಿರಂಗಪಡಿಸುವಿಕೆ ಹೊರಬಂದಿದೆ, ಶಂಕಿತರಲ್ಲಿ ಒಬ್ಬನಾದ ಅಬ್ದುಲ್ ಮತೀನ್…

Read More

ಬೆಂಗಳೂರು: ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಈಗಾಗಲೇ ಎನ್ಐಎ ಅಧಿಕಾರಿಗಳು ಓರ್ವ ಸಂಚುಕೋರನನ್ನು ಬಂಧಿಸಿದ್ದಾರೆ. ಈ ಬೆನ್ನಲ್ಲೇ ಇಬ್ಬರು ಆರೋಪಿಗಳ ಪೋಟೋ ಬಿಡುಗಡೆ ಮಾಡಿದ್ದು, ಅವರ ಸುಳಿವು ನೀಡಿದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಎನ್ಐಎ ಘೋಷಣೆ ಮಾಡಿದೆ. ಈ ಕುರಿತಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ರಾಷ್ಟ್ರೀಯ ತನಿಖಾ ದಳವು, ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದ ಪ್ರಮುಖ ಆರೋಪಿಗಳಾದಂತ ಅಬ್ದುಲ್ ಮತೀನ್ ಅಹ್ಮದ್ ತಾಹಾ ಹಾಗೂ ಮುಸಾವೀರ್ ಹುಸೇನ್ ಶಾಜಿಬ್ ಎಂಬುವರ ಪೋಟೋ ಬಿಡುಗಡೆ ಮಾಡಿದೆ. ಈ ಇಬ್ಬರು ಆರೋಪಿಗಳು ಬೆಂಗಳೂರಿನ ಕೆಫೆ ಸ್ಪೋಟದ ಪ್ರಮುಖ ಆರೋಪಿಗಳಾಗಿದ್ದಾರೆ. ಇವರ ಸುಳಿವು ನೀಡಿದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ. https://twitter.com/NIA_India/status/1773674283576807770 https://kannadanewsnow.com/kannada/siddaramaiah-should-be-proud-of-himself-former-pm-hd-deve-gowda/ https://kannadanewsnow.com/kannada/big-news-complaint-filed-against-ct-ravi-for-allegedly-abusing-minister-shivaraj-thangadagi-with-obscene-words/

Read More

ಬೆಂಗಳೂರು: ನರೇಂದ್ರ ಮೋದಿ ಅವರು ದುರ್ಬಲ ಪ್ರಧಾನಮಂತ್ರಿ, ನಾನು ಪ್ರಬಲ ಸಿಎಂ ಎಂದು ಕೊಚ್ಚಿಕೊಂಡ ಸಿದ್ದರಾಮಯ್ಯ ಅವರ ಗರ್ವಭಂಗ ಈ ಲೋಕಸಭೆ ಚುನಾವಣೆಯಲ್ಲಿ ಆಗಬೇಕು ಎಂದು ಮಾಜಿ ಪ್ರಧಾನಿಗಳು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ಗುಡುಗಿದರು. ಬೆಂಗಳೂರಿನಲ್ಲಿ ನಡೆದ ಜೆಡಿಎಸ್ – ಬಿಜೆಪಿ ಸಮನ್ವಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು; ನರೇಂದ್ರ ಮೋದಿಯಂತಹ ಜಗಮೆಚ್ಚಿದ ನಾಯಕರ ಬಗ್ಗೆ ಲಘುವಾಗಿ ಮಾತನಾಡಿರುವ ಸಿದ್ದರಾಮಯ್ಯ ಅವರಿಗೆ ಈ ಚುನಾವಣೆಯಲ್ಲಿ ಪಾಠ ಕಲಿಸಬೇಕು. ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲಿಸಿ, ಸಿದ್ದರಾಮಯ್ಯ ಗರ್ವಭಂಗ ಮಾಡಿ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕರು, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಜಿಟಿ ದೇವೇಗೌಡರಿಗೆ ನಿರ್ದೇಶನ ನೀಡಿದರು. ಮೈಸೂರು ಚಾಮರಾಜನಗರ ಕ್ಷೇತ್ರ ಗೆಲ್ಲುವ ಶಕ್ತಿ ಜಿ.ಟಿ.ದೇವೇಗೌಡರಿಗೆ ಇದೆ. ಸಿದ್ದರಾಮಯ್ಯ ಅವರ ಗರ್ವಭಂಗ ಆಗಲೇಬೇಕು. ಅವರ ಗರ್ವಭಂಗ ಆಗಬೇಕಾದರೆ ನಾವೆಲ್ಲರೂ ಛಲದಿಂದ ಒಟ್ಟಾಗಿ ಹೋಗಬೇಕು ಎಂದು ವೇದಿಕೆಯಲ್ಲೇ ಜಿ.ಟಿ.ದೇವೇಗೌಡರಿಗೆ ಹೇಳಿದರು ಮಾಜಿ ಪ್ರಧಾನಿಗಳು. ಮೈತ್ರಿಯಲ್ಲಿ ಎಲ್ಲಿಯೂ ಒಂದು ಸಣ್ಣ ಸಮಸ್ಯೆಯೂ ಕಾಣಿಸಿಕೊಳ್ಳಬಾರದು. ಒಬ್ಬ ಸಾಮಾನ್ಯ…

Read More