Author: kannadanewsnow09

ವಿಜಯನಗರ: ಜಿಲ್ಲೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಹಸುಗೂಸು ಒಂದು ಮೃತಪಟ್ಟ ಆರೋಪ ಕೇಳಿ ಬಂದಿದೆ. ಹೀಗಾಗಿ ಆಸ್ಪತ್ರೆಯ ಮುಂದೆ ಕುಟುಂಬಸ್ಥರು, ಸಂಬಂಧಿಕರು ಸೂಕ್ತ ಕಾನೂನು ಕ್ರಮ, ನ್ಯಾಯಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇಂತಹ ಘಟನೆ ನಡೆದಿದೆ. ಆಗಸ್ಟ್.16ರಂದು ಅಂಕಲಮ್ಮ ಎಂಬುವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದ ವೇಳೆಯಲ್ಲಿ ಮಾರ್ಗ ಮಧ್ಯೆಯೇ ಹೆರಿಗೆ ಆಗಿತ್ತು. ದಾರಿಯ ಮಾರ್ಗ ಮಧ್ಯೆಯೇ ಹೆರಿಗೆಯಾಗಿದ್ದಂತ ಅಂಕಲಮ್ಮ ಹಾಗೂ ಹಸುಗೂಸನ್ನು ಹೊಸಪೇಟೆಯ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿತ್ತು. ಅಂಕಲಮ್ಮ ಮತ್ತು ತಾಯಪ್ಪ ಅವರ ದಂಪತಿಯ ಹಸುಗೂಸಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂಬುದಾಗಿ ಆರೋಪಿಸಿ ಕುಟುಂಬಸ್ಥರು ಆಸ್ಪತ್ರೆಯ ಬಳಿಯಲ್ಲಿ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. https://kannadanewsnow.com/kannada/breaking-fir-registered-against-accused-for-raping-woman-in-bengaluru-police-launch-massive-search/ https://kannadanewsnow.com/kannada/another-good-news-for-women-govt-to-provide-interest-free-loans-up-to-rs-5-lakh/

Read More

ಶಿವಮೊಗ್ಗ : ಪ್ರಸಕ್ತ ಸಾಲಿನಲ್ಲಿ ನಿರೀಕ್ಷೆಯಂತೆ ಸಕಾಲಿಕವಾಗಿ ಬಂದ ಮುಂಗಾರು ಮಳೆಯಿಂದ ಭದ್ರಾ ಜಲಾಶಯ ಭರ್ತಿಯಾಗಿದ್ದು ಭದ್ರ ಅಚ್ಚುಕಟ್ಟೆ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗಳು ಪಡುವ ಶಿವಮೊಗ್ಗ ಸೇರಿದಂತೆ ಚಿತ್ರದುರ್ಗ ದಾವಣಗೆರೆ ಬಳ್ಳಾರಿ ಮತ್ತಿತರ ಜಿಲ್ಲೆಗಳ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಎಂದು ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಇಲಾಖೆ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಅವರು ಹೇಳಿದರು. ಅವರು ಇಂದು ಬಿ ಆರ್ ಪಿ ಯಲ್ಲಿ ಭದ್ರಾ ಜಲಾಶಯಕ್ಕೆ ಬಾಗಿನ ಸಮರ್ಪಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಕಳೆದ ಸಾಲಿನಲ್ಲಿ ಸಕಾಲದಲ್ಲಿ ಮಳೆ ಆಗದಿದ್ದ ಪರಿಣಾಮವಾಗಿ ರೈತರ ಆತಂಕದ ಛಾಯೆ ಉಂಟಾಗಿತ್ತು ಪ್ರಸಕ್ತ ಸಾಲಿನಲ್ಲಿ ಬಿದ್ದ ಮಳೆಯಿಂದಾಗಿ ಕೃಷಿ, ಅದರಲ್ಲೂ ವಿಶೇಷವಾಗಿ ತೋಟಗಾರಿಕೆಯ ಎರಡು ಬೆಳೆಗಳಿಗೆ ಅನುಕೂಲವಾಗಲಿದೆ. ಅಲ್ಲದೆ ಈ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಸಹಾಯವಾಗಿದೆ ಎಂದವರು ನುಡಿದರು. ಈ ಜಲಾಶಯದ ವ್ಯಾಪ್ತಿಗಳು ಕೊಡುವ ಅಚ್ಚು ಪಟ್ಟು ಪ್ರದೇಶದ ರೈತರು ಇರುವ ನೀರನ್ನು ಮಿತ…

Read More

ನವದೆಹಲಿ: ರಾಖಿ ಹಬ್ಬದ ( Rakhi festival ) ಸಂದರ್ಭದಲ್ಲಿ ದೇಶಾದ್ಯಂತ 12,000 ಕೋಟಿ ರೂ.ಗಿಂತ ಹೆಚ್ಚಿನ ಹಬ್ಬದ ವ್ಯಾಪಾರವನ್ನು ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (Confederation of All India Traders – CAIT) ಭಾನುವಾರ ನಿರೀಕ್ಷಿಸಿದೆ. ರಾಖಿ ಶಾಪಿಂಗ್ಗಾಗಿ ಮಾರುಕಟ್ಟೆಗಳು ಭಾರಿ ನೂಕುನುಗ್ಗಲಿಗೆ ಸಾಕ್ಷಿಯಾಗುತ್ತಿವೆ. ಜನರು ಹಬ್ಬದ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ ಎಂದು ವ್ಯಾಪಾರ ಸಂಸ್ಥೆ ತಿಳಿಸಿದೆ. ಭಾರತೀಯ ಸರಕುಗಳೊಂದಿಗೆ ಹಬ್ಬವನ್ನು ಆಚರಿಸುವಂತೆ ಅದು ಗ್ರಾಹಕರನ್ನು ಒತ್ತಾಯಿಸಿತು. ದೇಶೀಯ ರಾಖಿಗಳ ಬೇಡಿಕೆಯನ್ನು ಗಮನಿಸಿದ ವ್ಯಾಪಾರ ಸಂಸ್ಥೆ, ಈ ವರ್ಷದ ಹಬ್ಬದ ಋತುವಿನಲ್ಲಿ ಗ್ರಾಹಕರು ಚೀನೀ ರಾಖಿಗಳಿಗಿಂತ ಸ್ಥಳೀಯ ರಾಖಿಗಳಿಗೆ ಆದ್ಯತೆ ನೀಡುತ್ತಾರೆ ಎಂದು ಹೇಳಿದೆ. ಈಗ ಹಲವಾರು ವರ್ಷಗಳಿಂದ, ದೇಶದಲ್ಲಿ ಸ್ಥಳೀಯ ರಾಖಿಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ. ಈ ವರ್ಷವೂ ಮಾರುಕಟ್ಟೆಯಲ್ಲಿ ಚೀನೀ ರಾಖಿಗಳಿಗೆ ಬೇಡಿಕೆ ಅಥವಾ ಉಪಸ್ಥಿತಿ ಇಲ್ಲ ಎಂದು ಸಿಎಐಟಿ ಟಿಪ್ಪಣಿಯಲ್ಲಿ ತಿಳಿಸಿದೆ. ಸಿಎಐಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಚಾಂದನಿ ಚೌಕ್ನ ಸಂಸತ್…

Read More

ಕೋಲ್ಕತಾ: ತೃಣಮೂಲ ಕಾಂಗ್ರೆಸ್ನ ಹಿರಿಯ ರಾಜ್ಯಸಭಾ ಸದಸ್ಯ ಸುಖೇಂದು ಶೇಖರ್ ರೇ ಅವರಿಗೆ ಕೋಲ್ಕತಾ ಪೊಲೀಸರು ವಿಚಾರಣೆಗೆ ಸಮನ್ಸ್ ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಬುಧವಾರ ಮಧ್ಯಾಹ್ನದ ವೇಳೆಗೆ ಕೇಂದ್ರ ಕೋಲ್ಕತಾದಲ್ಲಿರುವ ಕೋಲ್ಕತಾ ಪೊಲೀಸ್ ಪ್ರಧಾನ ಕಚೇರಿಗೆ ಹಾಜರಾಗಲು ಅವರಿಗೆ ಪೊಲೀಸರು ನೀಡಿರುವಂತ ಸಮನ್ಸ್ ನಲ್ಲಿ ಸೂಚಿಸಲಾಗಿದೆ. ಈ ತಿಂಗಳ ಆರಂಭದಲ್ಲಿ ಆಸ್ಪತ್ರೆಯ ಮಹಿಳಾ ಕಿರಿಯ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರ್.ಜಿ.ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಕೋಲ್ಕತಾ ಪೊಲೀಸ್ ಆಯುಕ್ತ ವಿನೀತ್ ಕುಮಾರ್ ಗೋಯಲ್ ಇಬ್ಬರನ್ನೂ ಸಿಬಿಐ ಕಸ್ಟಡಿ ವಿಚಾರಣೆಗೆ ಒಳಪಡಿಸಬೇಕೆಂದು ಕೋರಿ ರಾಯ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಹೊರಬಂದ ಕೆಲವೇ ಗಂಟೆಗಳ ನಂತರ ಅವರಿಗೆ ಸಮನ್ಸ್ ನೀಡಲಾಗಿದೆ. ರೇ ಅವರಿಗೆ ಸಮನ್ಸ್ ನೀಡಲು ನಿಖರವಾದ ಕಾರಣದ ಬಗ್ಗೆ ನಗರ ಪೊಲೀಸರ ಉನ್ನತ ಅಧಿಕಾರಿಗಳು ಬಿಗಿಯಾಗಿ ಬಾಯಿ ಬಿಟ್ಟಿದ್ದರೂ, ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ…

Read More

ಬೆಂಗಳೂರು: ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಅಭಿನಂದನಾ ಸಮಾರಂಭದಲ್ಲಿ ಮದ್ಯ ವಿತರಿಸಿದ ಆರೋಪದ ಮೇಲೆ ನೆಲಮಂಗಲದ ಬಿಜೆಪಿ ಅಧ್ಯಕ್ಷ ಜಗದೀಶ್ ಚೌಧರಿ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ. ಆದರೇ ಅವರ ಉಚ್ಚಾಟನೆಯನ್ನು ರದ್ದುಗೊಳಿಸಲಾಗಿದ್ದು, ಈಗ ನೆಲಮಂಗಲ ಬಿಜೆಪಿ ಅಧ್ಯಕ್ಷರಾಗಿ ಜಗದೀಶ್ ಚೌಧರಿ ಅವರನ್ನು ನೇಮಕ ಮಾಡಲಾಗಿದೆ. ಜುಲೈ 7 ರಂದು ನೆಲಮಂಗಲದಲ್ಲಿ ಆಯೋಜಿಸಲಾಗಿದ್ದ ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಸನ್ಮಾನ ಸಮಾರಂಭದಲ್ಲಿ ಘಟನೆ ನಡೆದಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ಮದ್ಯ ಹಂಚಿಕೆ ಮಾಡಲಾಗಿತ್ತು. ಅಲ್ಲದೇ, ಎಣ್ಣೆಗಾಗಿ ಸಾರ್ವಜನಿಕರು ಸಹ ಮುಗಿಬಿದ್ದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೂಚನೆ ಮೇರೆಗೆ ಜಗದೀಶ್ ಚೌಧರಿ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಆದರೇ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಸೂಚನೆಯ ಮೇರೆಗೆ ನೆಲಮಂಗಲ ಬಿಜೆಪಿ ಅಧ್ಯಕ್ಷರನ್ನಾಗಿ ಜಗದೀಶ್ ಚೌಧರಿ ಅವರನ್ನು ಮರು…

Read More

ಬೆಂಗಳೂರು: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರು ನೀಡಿರುವಂತ ಪ್ರಾಸಿಕ್ಯೂಷನ್ ಅನುಮತಿ ಆರ್ಟಿಕಲ್ 17ಎ ನಿಯಮ ಗಾಳಿಗೆ ತೂರಿದಂತೆ ಆಗಿದೆ. ಅವರು ಕಾನೂನಿನ ಕಗ್ಗೊಲೆ ಮಾಡಿದ್ದಾರೆ. ಬಿಜೆಪಿಯ ಕೈಗೊಂಬೆಯಂತೆ ವರ್ತಿಸಿದ್ದಾರೆ ಎಂಬುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಇಂದು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಮುಖ್ಯಮಂತ್ರಿಗಳ ವಿರುದ್ಧದ ಪ್ರಸಿಕ್ಯೂಷನ್ ಪ್ರಕರಣದಿಂದಾಗಿ ರಾಜ್ಯಪಾಲರ ನಡೆ ಹಾಗೂ ಅವರ ಕಾರ್ಯಗಳ ಮೇಲೆ ಬೆಳಕು ಚೆಲ್ಲಿದಂತಾಗಿದೆ. ರಾಜ್ಯಪಾಲರ ಕಾರ್ಯಭಾರಗಳ ಮೇಲೆ ಅನೇಕ ಬಾರಿ ಚರ್ಚೆಯಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಆರ್ಟಿಕಲ್ 163 ರ ಪ್ರಕಾರ ಹೀಗೆ ಹೇಳಿದ್ದಾರೆ. ರಾಜ್ಯಪಾಲರು ಮಂತ್ರಿಗಳ ಕೌನ್ಸಿಲ್ ಮೂಲಕ ಸಲಹೆಗಳನ್ನು ಪಡೆಯಬೇಕು ಎಂದರು. ವಿ.ಜಿ.ಖೇರ್ ಅವರು ಬಾಂಬೆಯ ಮೊದಲ ರಾಜ್ಯಪಾಲರು. ರಾಜ್ಯಪಾಲರು ತಮಗೆ ಇರುವ ಅಲ್ಪಶಕ್ತಿಯಲ್ಲಿ ಹೆಚ್ಚು ಕೆಲಸ ಮಾಡಬಹುದು. ಜೊತೆಗೆ ದುರಾಡಳಿತ ಮಾಡಬೇಕು ಎಂದು ಸಂವಿಧಾನವನ್ನು ತಿರುಚಿ ಕೆಲಸ ಮಾಡಲು ತೊಡಗಿದರೆ ಅದನ್ನು ಕೂಡ ಮಾಡಬಹುದು ಎಂದು ಹೀಗೆ ಹೇಳಿದ್ದರು. ಇದೇ ರೀತಿಯ ಘಟನೆ ಕರ್ನಾಟಕದಲ್ಲಿ…

Read More

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಮಂತ್ರಿಗಳು ನನ್ನ ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆಲ್ಲ ಜಗ್ಗುವ ಜಾಯಮಾನ ನನ್ನದಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು; ಯಾವುದೋ ಹಳೆಯ ಪ್ರಕರಣವನ್ನು ಕೆದಕಿ, ಸುಪ್ರೀಂ ಕೋರ್ಟ್ ನಲ್ಲಿರುವ ಪ್ರಕರಣ ಇಟ್ಟುಕೊಂಡು ರಾಜ್ಯಪಾಲರನ್ನು ಅಪಮಾನಿಸುವ, ನನ್ನನ್ನು ಬ್ಲಾಕ್ ಮೇಲ್ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದಕ್ಕೆಲ್ಲಾ ಕೇರ್ ಮಾಡುವ ಪೈಕಿ ನಾನಲ್ಲ, ಈ ಸರ್ಕಾರಕ್ಕೂ ಅದು ಗೊತ್ತಿದೆ ಎಂದು ಕಿಡಿಕಾರಿದರು. ರಾಜ್ಯಪಾಲರಿಗೆ ಸರ್ಕಾರದಿಂದ ಧಮ್ಕಿ ರಾಜ್ಯಪಾಲರು ಮೂಡಾ ಹಗರಣ ವಿಚಾರಣೆಗೆ ಅನುಮತಿ ನೀಡಿದಾಕ್ಷಣ ಇಡೀ ಸಚಿವರು, ಶಾಸಕರನ್ನು ಇಟ್ಟುಕೊಂಡು ರಾಜ್ಯಪಾಲರಿಗೆ ಧಮ್ಕಿ ಹಾಕುವ, ಜನರನ್ನು ಎತ್ತಿ ಕಟ್ಟುವ ಕೆಲಸವನ್ನು ಸಿದ್ದರಾಮಯ್ಯ ಅವರು ಮಾಡುತ್ತಿದ್ದಾರೆ. ನಾನು ಹೀಗೆಲ್ಲಾ ಮಾಡಿಲ್ಲ, ನನ್ನ ವಿರುದ್ಧ ಆರೋಪ ಕೇಳಿಬಂದಾಗ ಒಬ್ಬನೇ ಎದುರಿಸುತ್ತೇನೆ ಎಂದು ಹೇಳಿದ್ದೆ. ವಿಧಾನಸಭೆ ಕಲಾಪದಲ್ಲಿಯೂ ಹೇಳಿದ್ದೇನೆ. ಬೇಕಾದರೆ ಕಡತ ತೆಗೆದು ನೋಡಬಹುದು ಎಂದು ಹೇಳಿದರು ಕೇಂದ್ರ…

Read More

ನವದೆಹಲಿ: ನಟರಾದ ಜೂನಿಯರ್ ಎನ್ಟಿಆರ್ ( Actors Jr NTR ) ಮತ್ತು ಹೃತಿಕ್ ರೋಷನ್ ಬಹುನಿರೀಕ್ಷಿತ ವಾರ್ 2 ನಲ್ಲಿ ಒಟ್ಟಿಗೆ ದೊಡ್ಡ ಪರದೆಯನ್ನು ಬೆಳಗಿಸಲು ಸಜ್ಜಾಗಿದ್ದಾರೆ. ಆದಾಗ್ಯೂ, ಚಿತ್ರದ ನಿರ್ಮಾಣವು ಸ್ಥಗಿತಗೊಂಡಿದೆ. ಇತ್ತೀಚಿನ ವರದಿಗಳ ಪ್ರಕಾರ, ಸೆಟ್ನಲ್ಲಿ ತೀವ್ರವಾದ ಆಕ್ಷನ್ ದೃಶ್ಯಕ್ಕಾಗಿ ತಯಾರಿ ನಡೆಸುತ್ತಿರುವಾಗ ಜೂನಿಯರ್ ಎನ್ಟಿಆರ್ ಗಾಯಗೊಂಡರು, ಇದರಿಂದಾಗಿ ನಟ ಚೇತರಿಸಿಕೊಳ್ಳಲು ಎರಡು ತಿಂಗಳ ವಿರಾಮ ತೆಗೆದುಕೊಳ್ಳಬೇಕಾಯಿತು. ಈ ಅನಿರೀಕ್ಷಿತ ಘಟನೆಯು ಶೂಟಿಂಗ್ ವೇಳಾಪಟ್ಟಿಯಲ್ಲಿ ವಿಳಂಬಕ್ಕೆ ಕಾರಣವಾಗಿದೆ, ವಿಶೇಷವಾಗಿ ಅವರ ಬಹುನಿರೀಕ್ಷಿತ ಪ್ರವೇಶ ದೃಶ್ಯಕ್ಕಾಗಿ, ಇದನ್ನು ಈಗ ಅಕ್ಟೋಬರ್ ನಲ್ಲಿ ಚಿತ್ರೀಕರಿಸಲಾಗುವುದು. ‘ವಾರ್ 2’ ಚಿತ್ರೀಕರಣದ ವೇಳೆ ಜ್ಯೂನಿಯರ್ ಎನ್ಟಿಆರ್ ಗೆ ಗಾಯ ಡ್ಯಾನಿಕ್ ಭಾಸ್ಕರ್ ಅವರ ಪ್ರಕಾರ, ಆಕ್ಷನ್ ಸನ್ನಿವೇಶದ ಸಮಯದಲ್ಲಿ ಜೂನಿಯರ್ ಎನ್ಟಿಆರ್ ಅವರ ಕೈಗಳಿಗೆ ಗಾಯವಾಗಿದೆ. ಇದರಿಂದಾಗಿ ವೈದ್ಯರು ವಿಶ್ರಾಂತಿ ಪಡೆಯಲು ಮತ್ತು ಚೇತರಿಸಿಕೊಳ್ಳಲು ಸಲಹೆ ನೀಡಿದರು. ಗಾಯವು ಮುಂಬೈ ಶೂಟಿಂಗ್ ವೇಳಾಪಟ್ಟಿಯನ್ನು ಹಿಂದಕ್ಕೆ ತಳ್ಳಿದೆ. ಒಳ್ಳೆಯ ಸುದ್ದಿಯೆಂದರೆ, ನಟನ ಅಭಿಮಾನಿಗಳು ಅವರನ್ನು…

Read More

ನವದೆಹಲಿ: ಆನ್ ಲೈನ್ ವಂಚಕರು ಈಗ ಮತ್ತೊಂದು ದಾರಿಯನ್ನು ಹಿಡಿದಿದ್ದಾರೆ. ಬ್ಯಾಂಕ್ ಗ್ರಾಹಕರನ್ನು ವಂಚಿಸುವಂತ ಮಗದೊಂದು ದಾರಿಯೇ ಸಿಬಿಐ ಸಮನ್ಸ್, ವಾರೆಂಟ್ ಅನ್ನುವಂತ ಸಂದೇಶವಾಗಿದೆ. ಒಂದು ವೇಳೆ ನೀವು ಆ ಸಮನ್ಸ್, ವಾರೆಂಟ್ ಗೆ ಬೆಚ್ಚಿ ಬಿದ್ದು, ಅಲ್ಲಿನ ಲಿಂಕ್ ಓಪನ್ ಮಾಡಿದ್ದೇ ಆದ್ರೇ ನಿಮ್ಮ ಖಾತೆಯೇ ಖಾಲಿಯಾಗಿಬಿಡುತ್ತದೆ. ಹಾಗಾದ್ರೇ ಅಂತದ ಸ್ಕ್ಯಾಮ್ ಏನು ಎನ್ನುವ ಬಗ್ಗೆ ಮುಂದೆ ಓದಿ. ಈ ಕುರಿತು ಸ್ವತಹ ಸಿಬಿಐ ಫೇಕ್ ನೋಟಿಸ್, ವಾರೆಂಟ್ ಬಗ್ಗೆ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ( Central Bureau of Investigation- CBI) ಸಾರ್ವಜನಿಕರಿಗೆ ಎಚ್ಚರಿಕೆಯ ಮಾಹಿತಿಯೊಂದನ್ನು ಎಕ್ಸ್ ನಲ್ಲಿ ವೀಡಿಯೋ ಸಹಿತ ಮಾಹಿತಿಯನ್ನು ಹಂಚಿಕೊಂಡಿದೆ. ಅದರಲ್ಲಿ ಹಿರಿಯ ಸಿಬಿಐ ಅಧಿಕಾರಿಗಳ ಹೆಸರು ಮತ್ತು ಹುದ್ದೆಗಳನ್ನು ದುರುಪಯೋಗಪಡಿಸಿಕೊಳ್ಳುವ ಹಗರಣಗಳ ಬಗ್ಗೆ ದಯವಿಟ್ಟು ಜಾಗರೂಕರಾಗಿರಿ. ಸಿಬಿಐ ನಿರ್ದೇಶಕರು ಸೇರಿದಂತೆ ಸಿಬಿಐ ಅಧಿಕಾರಿಗಳ ಸಹಿಯನ್ನು ಹೊಂದಿರುವ ನಕಲಿ ದಾಖಲೆಗಳು ಮತ್ತು ನಕಲಿ ವಾರಂಟ್ಗಳು / ಸಮನ್ಸ್ಗಳನ್ನು ವಂಚನೆ ( CBI fake…

Read More

ಕೇರಳ: ತೀವ್ರ ಜ್ವರ, ಉಸಿರಾಟದ ತೊಂದರೆ ಮತ್ತು ಸ್ನಾಯು ನೋವು ಸೇರಿದಂತೆ ರೋಗಲಕ್ಷಣಗಳಿಂದಾಗಿ ಹಿರಿಯ ನಟ ಮೋಹನ್ ಲಾಲ್ ಅವರನ್ನು ಕೊಚ್ಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಧಿಕೃತ ವೈದ್ಯಕೀಯ ಹೇಳಿಕೆಯ ಪ್ರಕಾರ, ನಟನಿಗೆ ವೈರಲ್ ಉಸಿರಾಟದ ಸೋಂಕು ಇದೆ ಎಂದು ಶಂಕಿಸಲಾಗಿದೆ. ಹೆಚ್ಚುವರಿಯಾಗಿ, 64 ವರ್ಷದ ನಟನಿಗೆ ಐದು ದಿನಗಳವರೆಗೆ ಸಾರ್ವಜನಿಕ ಸಂವಹನಗಳನ್ನು ತಪ್ಪಿಸಲು ಮತ್ತು ಸೂಚಿಸಿದ ಔಷಧಿ ನಿಯಮವನ್ನು ಅನುಸರಿಸಲು ಸೂಚಿಸಲಾಗಿದೆ. ಆಸ್ಪತ್ರೆಯ ಅಧಿಕೃತ ಹೇಳಿಕೆಯನ್ನು ಉದ್ಯಮ ಟ್ರ್ಯಾಕರ್ ಶ್ರೀಧರ್ ಪಿಳ್ಳೈ ಹಂಚಿಕೊಂಡಿದ್ದಾರೆ. https://twitter.com/sri50/status/1825065861109194871 ‘ಎಲ್ 2: ಎಂಪುರಾನ್’ ಚಿತ್ರೀಕರಣ ಮತ್ತು ತಮ್ಮ ಚೊಚ್ಚಲ ನಿರ್ದೇಶನದ ‘ಬರೋಜ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಮುಗಿಸಿದ ನಂತರ, ಮೋಹನ್ ಲಾಲ್ ಗುಜರಾತ್ ನಿಂದ ಕೊಚ್ಚಿಗೆ ಮರಳಿದರು, ಅಲ್ಲಿ ಅವರ ಸ್ಥಿತಿ ಹದಗೆಟ್ಟಿತು. ಅದೃಷ್ಟವಶಾತ್, ಇತ್ತೀಚಿನ ವೈದ್ಯಕೀಯ ವರದಿಗಳು ಅವರು ಈಗ ವೀಕ್ಷಣೆಯಲ್ಲಿ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತೋರಿಸುತ್ತವೆ. ಈ ವರ್ಷದ ಒಂಬತ್ತು ದಿನಗಳ ನವರಾತ್ರಿ ಹಬ್ಬದ ಆರಂಭದಲ್ಲಿ ಅಕ್ಟೋಬರ್ 2 ರಂದು ‘ಬರೋಜ್’ ಚಿತ್ರ…

Read More