Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ತಮ್ಮ ಮತಗಳ್ಳತನ ಆರೋಪದ ಕುರಿತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗಕ್ಕೆ ಪ್ರಮಾಣಪತ್ರದ ಮೂಲಕ ದೂರು ಕೊಡುತ್ತಿಲ್ಲವೇಕೆ? ಹಿಟ್ ಆಂಡ್ ರನ್ ಮಾಡುವುದೇ ಇವರ ಉದ್ದೇಶವೇ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಪ್ರಶ್ನಿಸಿದ್ದಾರೆ. ಯಲಹಂಕದ ಸಿಂಗನಾಯಕನಹಳ್ಳಿಯ ರಮಡ ರೆಸಾರ್ಟ್ ನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಆಳಂದದಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆದ ಆರೋಪ ಕುರಿತ ಪ್ರಶ್ನೆಗೆ ಉತ್ತರಿಸಿದರು. ಚುನಾವಣಾ ಆಯೋಗ ಒಂದು ಸಾಂವಿಧಾನಿಕ ಸಂಸ್ಥೆ. ಯಾವುದಾದರೂ ದೂರಿದ್ದರೆ ಅಫಿಡವಿಟ್ ಮೂಲಕ ಸಲ್ಲಿಸಲು ತಿಳಿಸಿದ್ದರು ಎಂದು ಗಮನ ಸೆಳೆದರು. ರಾಹುಲ್ ಗಾಂಧಿ ಅವರು 100ಕ್ಕೂ ಹೆಚ್ಚು ಚುನಾವಣೆಯ ನೇತೃತ್ವ ವಹಿಸಿ 8-9 ಕಡೆ ಯಶಸ್ಸು ಕಂಡಿದ್ದಾರೆ. ಸುಮಾರು ಶೇ 92ರಷ್ಟು ವೈಫಲ್ಯ ಅವರದು. ತಮ್ಮ ಚುನಾವಣಾ ವೈಫಲ್ಯವನ್ನು ಅವರು ಚುನಾವಣಾ ಆಯೋಗದ ಹೆಗಲಿಗೆ ಕಟ್ಟಲು ಹೊರಟಿದ್ದಾರಾ ಎಂದು ಪ್ರಶ್ನೆ ಹಾಕಿದರು. ಅವರದು ಆಧಾರಸಹಿತ…
ಬೆಂಗಳೂರು: ಹಿಂದೆ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರ ಮತಗಳ್ಳತನ ಸಂಬಂಧ ಅಲಹಾಬಾದ್ ಹೈಕೋರ್ಟ್ ತೀರ್ಪು ಕೊಟ್ಟ ಬಳಿಕವೇ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಲಾಗಿತ್ತು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಗಮನ ಸೆಳೆದರು. ಯಲಹಂಕದ ಸಿಂಗನಾಯಕನಹಳ್ಳಿಯ ರಮಡ ರೆಸಾರ್ಟ್ ನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಳಂದದಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆದ ವಿಷಯದಲ್ಲಿ ರಾಹುಲ್ ಗಾಂಧಿ ಮತ್ತು ಬಿ.ಆರ್.ಪಾಟೀಲರ ಆರೋಪ ಕುರಿತ ಪ್ರಶ್ನೆಗೆ ಉತ್ತರಿಸಿದರು. 1975-76ರಲ್ಲಿ ಈ ದೇಶದಲ್ಲೇ ಒಂದು ದೊಡ್ಡ ಆಂದೋಲನ ಆಗಿತ್ತು. ಆಗಿನ ರಾಷ್ಟ್ರೀಯ ನಾಯಕ ಜಯಪ್ರಕಾಶ್ ನಾರಾಯಣ್ ಅವರು ಅದರ ನೇತೃತ್ವ ವಹಿಸಿದ್ದರು. ದೇಶದಲ್ಲಿ ಮತಚೋರಿ ವಿರುದ್ಧ ಅವರು ಆಕ್ಷೇಪಿಸಿ ಆಂದೋಲನ ಮಾಡಿದ್ದರು ಎಂದು ವಿವರಿಸಿದರು. ಆಗ ಇಂದಿರಾ ಗಾಂಧಿ ಹಠಾವೋ ಕಾರ್ಯಕ್ರಮ ನಡೆದಿತ್ತು ಎಂದರು. ಕಳ್ಳ ಮತ್ತೊಬ್ಬನನ್ನು ಕಳ್ಳ ಎನ್ನಲು ಶುರು ಮಾಡಿದ್ದಾನೆ. ಕಳ್ಳ ತಪ್ಪಿಸಿಕೊಳ್ಳಲು ಬೇರೆಯವರನ್ನು ಕಳ್ಳ ಮಾಡಲು ಹೊರಟಿದ್ದಾನೆ ಎಂದು ಟೀಕಿಸಿದರು. ಇದು ರಾಹುಲ್ ಗಾಂಧಿಯವರ ಕೆಲಸ…
ಬೆಂಗಳೂರು: ರಾಜ್ಯದಲ್ಲಿ ದೌರ್ಜನ್ಯಕ್ಕೆ ಒಳಗಾದಂತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಗುಡ್ ನ್ಯೂಸ್ ಎನ್ನುವಂತೆ, ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯ ಅವಲಂಬಿತರಿಗೆ ಸರ್ಕಾರಿ ಉದ್ಯೋಗ ನೀಡೋದಕ್ಕೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಚಿವ ಸಂಪುಟ ಸಭೆಯಲ್ಲಿ ದೌರ್ಜನ್ಯಕ್ಕೊಳಗಾದಂತ ಎಸ್ಸಿ, ಎಸ್ಟಿ ಸಮುದಾಯದ ವ್ಯಕ್ತಿಯ ಅವಲಂಬಿತರಿಗೆ ಸರ್ಕಾರಿ ನೌಕರಿ ನೀಡುವಂತ ನಿರ್ಧಾರಕ್ಕೆ ಸಮ್ಮತಿಸಿದೆ. ಗ್ರೂಪ್-ಸಿ, ಗ್ರೂಪ್-ಡಿ ವೃಂದದ ಹುದ್ದೆಗಳಿಗೆ ಅನುಕಂಪದ ಆಧಾರದಲ್ಲಿ ಎಸ್ಸಿ, ಎಸ್ಟಿ ವ್ಯಕ್ತಿಯ ದೌರ್ಜನ್ಯಕ್ಕೊಳಗಾದಂತ ಅವಲಂಬಿತರಿಗೆ ನೀಡಲು ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. https://kannadanewsnow.com/kannada/digitalization-of-transport-corporation-assets-minister-ramalinga-reddys-significant-announcement/ https://kannadanewsnow.com/kannada/the-bjp-core-committee-meeting-scheduled-for-tonight-has-been-canceled/
ಬೆಂಗಳೂರು: ಸಾರಿಗೆ ಸಂಸ್ಥೆಯ ಆಸ್ತಿ ಡಿಜಟಲೀಕರಣ ಮಾಡಲಾಗುತ್ತದೆ. ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಮೇಲ್ಪಂಕ್ತಿ ಹಾಕಿದೆ. 255 ಆಸ್ತಿಗಳ 683.20 ಎಕರೆ ಭೂಮಿ ಸರ್ವೆ ಮಾಡಲಾಗಿದೆ ಎಂಬುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಅವರು, ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಡಿಜಟಲೀಕರಣ ಮೂಲಕ ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿಗಳ ರಕ್ಷಣೆಗೆ ಮುಂದಾಗಿದೆ. ಸಾರಿಗೆ ಸಂಸ್ಥೆಯ ಆಸ್ತಿಗಳ ಒತ್ತುವರಿ ತಡೆಯುವುದು, ಒತ್ತುವರಿ ಆಗಿರುವುದನ್ನು ಗುರುತಿಸುವುದು, ಆಸ್ತಿಗಳ ವಾಸ್ತವತೆ ತಿಳಿದುಕೊಳ್ಳುವುದು, ಕೆಲವಡೆ ಸಮರ್ಪಕ ದಾಖಲೆ ನಿರ್ವಹಣೆ ಕೊರತೆ, ಅಧಿಕಾರಿಗಳ ವರ್ಗಾವಣೆಯಿಂದಾಗಿ ಆಸ್ತಿಗಳ ಮಾಹಿತಿ ಇಲ್ಲದಿರುವುದು. ಇತರೆ ಕಾರಣಗಳಿಂದಾಗಿ ಆಸ್ತಿಗಳು ಖಾಸಗಿಯವರ ಪಾಲಾಗುವ ಸಾಧ್ಯತೆಗಳೇ ಹೆಚ್ಚಾಗಿರುತ್ತದೆ ಎಂದಿದ್ದಾರೆ. ಕಂದಾಯ ಇಲಾಖೆಯ ಲ್ಯಾಂಡ್ ಬೀಟ್ ಆ್ಯಪ್ ಬಳಸಿ ಆಸ್ತಿಗಳ ನಕಾಶೆ, ದಾಖಲೆ ಜತೆ ಸರ್ವೆ ಮಾಡಲಾಗುತ್ತಿದೆ. ಸಂಸ್ಥೆಯ ಆರು ಜಿಲ್ಲೆಗಳಲ್ಲಿ 255 ಆಸ್ತಿಗಳ ಒಟ್ಟು 683.20 ಎಕರೆ ಭೂಮಿ ಹೊಂದಿದ್ದು ಮೌಲ್ಯ…
ಬೆಂಗಳೂರು: ಇಂದು ರಾತ್ರಿ ಕರ್ನಾಟಕ ಬಿಜೆಪಿ ಕೋರ್ ಕಮಿಟಿ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯನ್ನು ರದ್ದುಪಡಿಸಿರುವುದಾಗಿ ತಿಳಿದು ಬಂದಿದೆ. ಇಂದು ರಾತ್ರಿ ಬೆಂಗಳೂರಿನ ಖಾಸಗಿ ರೆಸಾರ್ಟ್ ನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆಯನ್ನು ಕರೆಯಲಾಗಿತ್ತು. ಇಂತಹ ಬಿಜೆಪಿ ಕೋರ್ ಕಮಿಟಿ ಸಭೆಯನ್ನು ರದ್ದುಪಡಿಸಿರುವುದಾಗಿ ತಿಳಿದು ಬಂದಿದೆ. https://kannadanewsnow.com/kannada/trump-may-withdraw-the-25-tariff-on-india-after-november-chief-economic-advisor/ https://kannadanewsnow.com/kannada/rahul-gandhi-is-a-person-without-general-knowledge-opposition-leader-r-ashok/
ಬೆಂಗಳೂರು: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸಾಮಾನ್ಯ ಜ್ಞಾನ ಇಲ್ಲದ ವ್ಯಕ್ತಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆರೋಪಿಸಿದ್ದಾರೆ. ಯಲಹಂಕದ ಸಿಂಗನಾಯಕನಹಳ್ಳಿಯ ರಮಡ ರೆಸಾರ್ಟ್‍ನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2023ರಲ್ಲಿ ಆಳಂದ ವಿಧಾನಸಭಾ ಚುನಾವಣೆಯಲ್ಲಿ 6 ಸಾವಿರಕ್ಕೂ ಹೆಚ್ಚು ಮತದಾರರ ಹೆಸರನ್ನು ತೆಗೆದುಹಾಕುವ ಪ್ರಯತ್ನ ನಡೆದಿತ್ತು ಎಂಬ ರಾಹುಲ್ ಗಾಂಧಿ ಅವರ ಆರೋಪ ಕುರಿತು ಪ್ರಶ್ನೆಗೆ ಅವರು ಉತ್ತರ ನೀಡಿದರು. ರಾಹುಲ್ ಅವರು ಯಾರೋ ಬರೆದುಕೊಟ್ಟಿದ್ದನ್ನು ಪದೇಪದೇ ಹೇಳಿ ಕಳೆದ 4-5 ವರ್ಷಗಳಿಂದ ದೇಶದಲ್ಲಿ ಅತಿ ಹೆಚ್ಚು ಅಪಹಾಸ್ಯಕ್ಕೆ ಒಳಗಾದ ವ್ಯಕ್ತಿ ಎಂದು ತಿಳಿಸಿದರು. ಮೊನ್ನೆ ಬಂದು ಬಾಂಬ್ ಹಾಕುವೆ, ಮಹದೇವನನ್ನು ಸೃಷ್ಟಿಸುವೆ ಎಂದು ಹೋಗಿದ್ದರು; ಮಹದೇವಪುರದ ಕುರಿತು ಆರೋಪ ಬೋಗಸ್ ಎಂದು ಗೊತ್ತಾಗಿತ್ತು. ಒಂದೇ ಮನೆಯಲ್ಲಿ ನೂರಾರು ಮತ ಎಂದಿದ್ದರು. ಅಲ್ಲಿದ್ದುದು 4 ಮತ; ಅಷ್ಟೇ ಮತ ಚಲಾವಣೆ ಆದುದು ಸಾಬೀತಾಗಿತ್ತು. ಈಗ ಮತ್ತೆ ಆಳಂದವನ್ನು ಹಿಡಿದುಕೊಂಡಿದ್ದಾರೆ ಎಂದು ಟೀಕಿಸಿದರು.…
ನವದೆಹಲಿ: ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ವಿ. ಅನಂತ ನಾಗೇಶ್ವರನ್ ಗುರುವಾರ ಅಮೆರಿಕ ಸರ್ಕಾರವು ಭಾರತೀಯ ಆಮದುಗಳ ಮೇಲೆ ವಿಧಿಸಿರುವ ದಂಡ ಸುಂಕವನ್ನು ನವೆಂಬರ್ 30 ರ ನಂತರ ಹಿಂಪಡೆಯಬಹುದು ಎಂದು ಹೇಳಿದ್ದಾರೆ. ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳಲ್ಲಿ ಗಮನಾರ್ಹ ಸುಧಾರಣೆಯ ಬಗ್ಗೆ ಅವರು ಆಶಾವಾದಿಯಾಗಿದ್ದಾರೆ ಎಂದು ಹೇಳಿದರು. ಭಾರತ ಮತ್ತು ಅಮೆರಿಕ ನಡುವಿನ ಸುಂಕದ ವಿವಾದದ ಕುರಿತು ಪ್ರತಿಕ್ರಿಯಿಸಿದ ಹಿರಿಯ ಅಧಿಕಾರಿ, ಪರಿಸ್ಥಿತಿಯನ್ನು ಸರಾಗಗೊಳಿಸುವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗಮನಿಸಿದರು. ನಾವೆಲ್ಲರೂ ಈಗಾಗಲೇ ಕೆಲಸದಲ್ಲಿದ್ದೇವೆ ಮತ್ತು ಇಲ್ಲಿ ಸುಂಕದ ಬಗ್ಗೆ ಮಾತನಾಡಲು ನಾನು ಸ್ವಲ್ಪ ಸಮಯ ತೆಗೆದುಕೊಳ್ಳುತ್ತೇನೆ. ಹೌದು, ಶೇಕಡಾ 25 ರ ಮೂಲ ಪರಸ್ಪರ ಸುಂಕ ಮತ್ತು ಶೇಕಡಾ 25 ರ ದಂಡ ಸುಂಕ ಎರಡನ್ನೂ ನಿರೀಕ್ಷಿಸಿರಲಿಲ್ಲ. ಭೌಗೋಳಿಕ ರಾಜಕೀಯ ಸಂದರ್ಭಗಳು ಎರಡನೇ ಶೇಕಡಾ 25 ರ ಸುಂಕಕ್ಕೆ ಕಾರಣವಾಗಿರಬಹುದು ಎಂದು ನಾನು ಇನ್ನೂ ನಂಬುತ್ತೇನೆ, ಆದರೆ ಕಳೆದ ಎರಡು ವಾರಗಳಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಮುಂತಾದವುಗಳನ್ನು…
ನವದೆಹಲಿ: ಕೇಂದ್ರ ಸರ್ಕಾರದ ಹೊಸ ಜಿಎಸ್‌ಟಿ ಸುಧಾರಣೆಗಳು ಆರ್ಥಿಕತೆಗೆ ಸುಮಾರು 2 ಲಕ್ಷ ಕೋಟಿ ರೂ.ಗಳನ್ನು ಮರಳಿ ಸೇರಿಸಲಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಘೋಷಿಸಿದರು. ಇದು ಮಧ್ಯಮ ವರ್ಗಕ್ಕೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ ಮತ್ತು ಹಬ್ಬದ ಋತುವಿನ ಬಳಕೆಯನ್ನು ಹೆಚ್ಚಿಸುತ್ತದೆ. ವಿಶಾಖಪಟ್ಟಣಂನಲ್ಲಿ ನಡೆದ ಜಿಎಸ್‌ಟಿ ಸಂಪರ್ಕ ಕಾರ್ಯಕ್ರಮದಲ್ಲಿ ಮಾತನಾಡಿದ ಸೀತಾರಾಮನ್, ಹೊಸ ಜಿಎಸ್‌ಟಿ ತರ್ಕಬದ್ಧಗೊಳಿಸುವಿಕೆಯ ನಂತರ ಹೀಗೆ ಹೇಳಿದರು: 12% ಸ್ಲ್ಯಾಬ್‌ನಲ್ಲಿರುವ 99% ಸರಕುಗಳು 5% ಕ್ಕೆ ಬದಲಾಗುತ್ತವೆ. 28% ಸ್ಲ್ಯಾಬ್‌ನಲ್ಲಿರುವ 90% ವಸ್ತುಗಳು ಈಗ 18% ವರ್ಗಕ್ಕೆ ಸೇರುತ್ತವೆ. ಎರಡು-ಸ್ಲ್ಯಾಬ್ ಜಿಎಸ್‌ಟಿ ವ್ಯವಸ್ಥೆ (5% ಮತ್ತು 18%) ಈಗ ಅನ್ವಯವಾಗಲಿದ್ದು, ಇದು ಸರಳ ಮತ್ತು ಹೆಚ್ಚು ಗ್ರಾಹಕ ಸ್ನೇಹಿಯಾಗಿರುತ್ತದೆ. ಮಧ್ಯಮ ವರ್ಗದವರಿಗೆ ಹೆಚ್ಚಿನ ನಗದು “ಈ ಹೊಸ ಪೀಳಿಗೆಯ ತೆರಿಗೆ ಪದ್ಧತಿಯೊಂದಿಗೆ, ಜನರಿಗೆ ಹೆಚ್ಚಿನ ಬಿಸಾಡಬಹುದಾದ ಆದಾಯ ದೊರೆಯಲಿದೆ, ಇದು ಬಳಕೆ ಮತ್ತು ಆರ್ಥಿಕ ಬೆಳವಣಿಗೆಗೆ ನೇರ ಚಾಲನೆ ನೀಡುತ್ತದೆ” ಎಂದು ಹಣಕಾಸು ಸಚಿವೆ ಹೇಳಿದರು. ಸೆಪ್ಟೆಂಬರ್…
ಬೆಂಗಳೂರು: ಅಕ್ರಮವಾಗಿ ಗಣಿ ಗುತ್ತಿಗೆ ಪರವಾನಿಗೆಗೆ ಸಂಬಂಧಿಸಿದಂತೆ ಸಿಎಂ ಸಿದ್ಧರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವಂತ ರಾಜ್ಯಪಾಲರ ನಿರ್ದೇಶನ ಕೋರಿ ಸಲ್ಲಿಸಲಾಗಿದ್ದಂತ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಸಿಎಂ ಸಿದ್ಧರಾಮಯ್ಯ ಅಕ್ರಮವಾಗಿ ಗಣಿ ಗುತ್ತಿಗೆ ಪರವಾನಿಗೆ ನೀಡಿದ್ದಾರೆ. ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ನೀಡುವಂತೆ ರಾಜ್ಯಪಾಲರಿಗೆ ನಿರ್ದೇಶನ ನೀಡಬೇಕು ಎಂಬುದಾಗಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಬೆಂಗಳೂರಿನ ಉದ್ಯಮಿ ಎಂ.ಪಿ ವೇಣುಗೋಪಾಲ ಎಂಬುವರು ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ನೇತೃತ್ವದ ವಿಭಾಗೀಯ ಪೀಠವು ವಜಾಗೊಳಿಸಿದೆ. ಈ ಮೂಲಕ ಸಿಎಂ ಸಿದ್ಧರಾಮಯ್ಯಗೆ ಬಿಗ್ ರಿಲೀಫ್ ನೀಡಿದೆ. https://kannadanewsnow.com/kannada/good-news-good-news-for-pensioners-nps-rules-changed-from-1st-january-many-benefits/ https://kannadanewsnow.com/kannada/dharmasthala-head-skull-case-two-more-skeletons-found-in-the-banglegudda-forest/
ಧರ್ಮಸ್ಥಳ: ಇಲ್ಲಿ ತಲೆಬುರುಡೆ ಕೇಸ್ ಸಂಬಂಧಿಸಿದಂತೆ ಬಂಗ್ಲೆಗುಡ್ಡ ಕಾಡಿನಲ್ಲಿ ಎಸ್ಐಟಿಯಿಂದ ಶೋಧ ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ವೇಳೆಯಲ್ಲಿ ಬಂಗ್ಲೆಗುಡ್ಡ ಕಾಡಿನಲ್ಲಿ ಮತ್ತೆರಡು ಕಳೇಬರಹ ಪತ್ತೆಯಾಗಿದ್ದಾವೆ. ಧರ್ಮಸ್ಥಳದ ಬಂಗ್ಲೆಗುಡ್ಡ ಕಾಡಿನಲ್ಲಿ ತಲೆಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿಯಿಂದ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಮತ್ತೆರಡು ಅಸ್ಥಿಪಂಜರಗಳು ಪತ್ತೆಯಾಗಿದ್ದಾವೆ. ಮನುಷ್ಯನ ಬುರುಡೆ, ಅಸ್ಥಿಪಂಜರದ ಅವಶೇಷ ಪತ್ತೆಯಾಗಿವೆ. ಈ ಹಿನ್ನಲೆಯಲ್ಲಿ ದೊರೆತಿರುವಂತ ಮೂಳೆಗಳನ್ನು ಪರಿಶೀಲನೆಯನ್ನು ಎಫ್ ಎಸ್ ಎಲ್ ತಂಡ ನಡೆಸಲಾಗುತ್ತಿದೆ. ಸ್ಥಳದಲ್ಲಿ ಎಸ್ ಐ ಟಿಯಿಂದ ಮಹಜರು ಮಾಡಲಾಗುತ್ತಿದೆ. https://kannadanewsnow.com/kannada/good-news-good-news-for-pensioners-nps-rules-changed-from-1st-january-many-benefits/










