Subscribe to Updates
Get the latest creative news from FooBar about art, design and business.
Author: kannadanewsnow09
ಮಡಿಕೇರಿ : 2024-25 ನೇ ಸಾಲಿನಲ್ಲಿ ಕೃಷಿ ಇಲಾಖೆಯ ಮುಖಾಂತರ ಸ್ಪ್ರಿಂಕ್ಲರ್‍ಗೆ ಶೇ.90ರಷ್ಟು ಸಹಾಯಧನವನ್ನು ನೀಡಲಾಗುತ್ತಿದೆ. ಈ ಸೌಲಭ್ಯವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದವರಿಗೂ ಸಹ ಶೇ.90 ರಷ್ಟು ಸಹಾಯಧನವನ್ನು ನೀಡಲಾಗುತ್ತಿದೆ. ರೈತ ಬಾಂಧವರು ತಮ್ಮ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ರೈತ ಸಂಪರ್ಕ ಕೇಂದ್ರಗಳಲ್ಲಿ ಉಚಿತವಾಗಿ ನೀಡುವ ಅರ್ಜಿಯೊಂದಿಗೆ ತಮ್ಮ ಆಧಾರ್ ಕಾರ್ಡ್ ಜೆರಾಕ್ಸ್, ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್, ಹಾಗೂ ಎರಡು ಸ್ಟ್ಯಾಂಪ್ ಅಳತೆಯ ಫೋಟೋಗಳನ್ನು ಸಲ್ಲಿಸುವುದರ ಮುಖಾಂತರ ಈ ಯೋಜನೆಯ ಫಲಾನುಭವಿಗಳಾಗಬಹುದು. ಈ ಯೋಜನೆ ಅಡಿ ಒಂದು ಎಕರೆ ಜಮೀನಿಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿರುವ ರೈತರು ರೂ.4667 ಹಣವನ್ನು ಪಾವತಿಸುವ ಮೂಲಕ ಒಟ್ಟು 30 ಪೈಪುಗಳು ಹಾಗೂ 5 ಸ್ಪ್ರಿಂಕ್ಲರ್ ಜೆಟ್‍ಗಳು ಹಾಗೂ ಇತರೆ ಜೋಡಣಾ ಸಾಮಗ್ರಿಗಳನ್ನು ಪಡೆಯಬಹುದು. ಒಂದು ಎಕರೆಗಿಂತ ಕಡಿಮೆ ವಿಸ್ತೀರ್ಣ ಹಾಗೂ ಅರ್ಧ ಎಕರೆಗಿಂತ ಹೆಚ್ಚು ವಿಸ್ತೀರ್ಣ ಜಮೀನು ಹೊಂದಿರುವ ರೈತರು ರೂ.2496…
ಧಾರವಾಡ : ಧಾರವಾಡ ಜಿಲ್ಲೆಯ ಧಾರವಾಡ, ಅಳ್ಳಾವರ, ಹುಬ್ಬಳ್ಳಿ, ಕುಂದಗೋಳ ಅಣ್ಣಿಗೇರಿ ಮತ್ತು ನವಲಗುಂದ ಘಟಕಗಳಲ್ಲಿ ಖಾಲಿ ಇರುವ ಗೃಹರಕ್ಷಕರ ಸ್ವಯಂ ಸೇವಕ ಸದಸ್ಯರ ಹುದ್ದೆಗಳ ನೊಂದಣಿಗಾಗಿ ಅರ್ಹ ಪುರುಷ, ಮಹಿಳಾ ಸ್ಥಳೀಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಖುದ್ದಾಗಿ ಅರ್ಜಿಯನ್ನು ಧಾರವಾಡ ಡಿ.ಎ.ಆರ್. ಪೊಲೀಸ್ ಹೆಡ್ ಕ್ವಾರ್ಟಸ್ಟ್ ಆವರಣದಲ್ಲಿರುವ ಗೃಹರಕ್ಷಕದಳ ಕಛೇರಿಯ ಜಿಲ್ಲಾ ಸಮಾದೇಷ್ಟರಿಂದ ಉಚಿತವಾಗಿ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಮಾರ್ಚ 5, 2025 ರೊಳಗಾಗಿ ಸಲ್ಲಿಸಬಹುದು. ಅರ್ಜಿಯನ್ನು ಫೆಬ್ರವರಿ 05, 2025 ರಿಂದ ವಿತರಿಸಲಾಗುವುದು. 296 ಗೃಹರಕ್ಷಕರ ಸ್ವಯಂ ಸೇವಕ ಹುದ್ದೆಗಳ ವಿವರ: ಧಾರವಾಡ ಪುರಷ-95, ಮಹಿಳಾ- 14, ಅಳ್ಳಾವರ ಪುರಷ-95, ಹುಬ್ಬಳ್ಳಿ ಪುರಷ-97, ಮಹಿಳಾ- 1, ಕುಂದಗೋಳ ಪುರಷ-24, ನವಲಗುಂದ ಪುರಷ-8, ಅಣ್ಣಿಗೇರಿ ಪುರಷ-14, ಕಲಘಟಗಿ ಪುರಷ-02, ಒಟ್ಟು ಪುರಷ-254, ಮಹಿಳಾ-15. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 0836-2442496 ಹಾಗೂ ಸಹಾಯಕ ಆಡಳಿತಾಧಿಕಾರಿಗಳು, ಪೊಲೀಸ್ ಅಧೀಕ್ಷಕರ ಕಛೇರಿಯ ದೂರವಾಣಿ…
ಧಾರವಾಡ: ವಕೀಲರ ಆರೋಗ್ಯ ವಿಮೆ ಕೊಡದ ಆದಿತ್ಯಾ ಬಿರ್ಲಾ ವಿಮಾ ಕಂಪನಿಗೆ ದಂಡ ವಿಧಿಸಿ ಮತ್ತು ಪರಿಹಾರ ನೀಡಲು ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ. ಧಾರವಾಡದ ಮುರಗಾಮಠದ ಹತ್ತಿರದ ನಿವಾಸಿ ಸ್ಥಳೀಯ ವಕೀಲರಾದ ಚೇತನಕುಮಾರ ಈಟಿರವರು ರೂ.23,999 ಹಣಕೊಟ್ಟು ಹೊಸ ಮೊಬೈಲನ್ನು ಬಜಾಜ್ ಫೈನಾನ್ಸ್ ಕಂಪನಿಯಲ್ಲಿ ಲೋನ್ ಮಾಡಿ ಖರೀದಿಸಿದ್ದರು. ಆ ಮೊಬೈಲನ್ನು ಆದಿತ್ಯಾ ಬಿರ್ಲಾ ವಿಮಾ ಕಂಪನಿಯಲ್ಲಿ ರೂ.1 ಲಕ್ಷಕ್ಕೆ ಗ್ರೂಪ್ ಹೆಲ್ತ್ ವಿಮೆಯನ್ನು ಮಾಡಿಸಿದ್ದರು. ದಿ:23/02/2023 ರಂದು ದೂರುದಾರರು ತಮ್ಮ ಮನೆಯಲ್ಲಿ ಅಕಸ್ಮಾತಾಗಿ ಬಿದ್ದು ಕಾಲು ನೋವಿನಿಂದ ಧಾರವಾಡದ ಮಾಳವ್ಮಡ್ಡಿಯ ಚಿರಾಯು ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅದಕ್ಕಾಗಿ ಅವರು ರೂ.1,25,000 ಆಸ್ಪತ್ರೆಯ ಖರ್ಚನ್ನು ಭರಿಸಿದ್ದರು. ಚಿಕಿತ್ಸೆಯ ನಂತ್ರ ವಿಮಾ ಪಾಲಸಿಯ ಕರಾರಿನಂತೆ ತಮ್ಮ ಆಸ್ಪತ್ರೆಯ ಖರ್ಚನ್ನು ಕೊಡುವಂತೆ ಆದಿತ್ಯಾ ಬಿರ್ಲಾ ಆರೋಗ್ಯ ವಿಮಾ ಕಂಪನಿಗೆ ಎಲ್ಲ ದಾಖಲೆಗಳೊಂದಿಗೆ ಕ್ಲೇಮು ಹಾಕಿದ್ದರು. ಯಾವುದೇ ಸಕಾರಾಣ ನೀಡದೇ ಎದುರುದಾರ ವಿಮಾ ಕಂಪನಿಯವರು ದೂರುದಾರರ ಕ್ಲೇಮನ್ನು ನಿರಾಕರಿಸಿದ್ದರು. ಅಂತಹ ವಿಮಾ ಕಂಪನಿಯವರ…
ಬೆಂಗಳೂರು: ಅಪಘಾತದಲ್ಲಿ ಮೃತಪಟ್ಟ ಬಿಎಂಟಿಸಿಯ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ವಿಮೆಯನ್ನು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ವಿತರಿಸಿದರು. ಅಪಘಾತ ವಿಮೆ ₹1.5 ಕೋಟಿ ನೀಡುವ ಯೋಜನೆಗೆ ಸಂಬಂಧಿಸಿದಂತೆ ಬಿಎಂಟಿಸಿ ಮತ್ತು ಕೆನರಾ ಬ್ಯಾಂಕ್ ಮಧ್ಯೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅಪಘಾತದಲ್ಲಿ ನೌಕರರು ಮೃತಪಟ್ಟ ಪ್ರಕರಣಗಳಲ್ಲಿ ಅವರ ಕುಟುಂಬಕ್ಕೆ ವಿಮೆ ಭದ್ರತೆ ₹1 ಕೋಟಿ, ಸಂಸ್ಥೆಯಿಂದ ₹50 ಲಕ್ಷ ಪರಿಹಾರ ದೊರೆಯಲಿದೆ. ಅಪಘಾತ ಹೊರತುಪಡಿಸಿ ಅನಾರೋಗ್ಯ, ಇನ್ನಿತರ ಕಾರಣದಿಂದ ಮೃತಪಟ್ಟ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಲಾಗಿದೆ. ಬಿಎಂಟಿಸಿಯಲ್ಲಿ ಜಾರಿಯಲ್ಲಿದ್ದ ಗುಂಪು ವಿಮಾ ಯೋಜನೆಯನ್ನು ಪರಿಷ್ಕರಿಸಿ 2024ರ ಫೆ.19ರಂದು ಜಾರಿ ಮಾಡಲಾಗಿತ್ತು. ಆ ನಂತರದ ಅವಧಿಯಲ್ಲಿ ಈವರೆಗೆ 86 ನೌಕರರು ಮೃತಪಟ್ಟಿದ್ದಾರೆ. ಪರಿಶೀಲನೆ ಹಂತದಲ್ಲಿ 31 ಪ್ರಕರಣಗಳಿದ್ದು, ಉಳಿದವರಿಗೆ ಪರಿಹಾರ ವಿಮೆ ನೀಡಲಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. https://twitter.com/KarnatakaVarthe/status/1886320313912398005 https://kannadanewsnow.com/kannada/cm-approves-ordinance-to-prevent-microfinance-harassment-whats-in-the-draft-heres-the-information/ https://kannadanewsnow.com/kannada/big-news-minister-ishwar-khandre-asks-hd-kumaraswamy-whether-hmt-should-be-allowed-to-sell-forest-land-for-real-estate/ https://kannadanewsnow.com/kannada/breaking-car-parked-on-road-in-bengaluru-catches-fire/
ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಬ್ರೇಕ್ ಹಾಕುವ ಸಂಬಂಧ ಹೊಸ ಮಸೂದೆಯನ್ನು ಸರ್ಕಾರ ಜಾರಿಗೆ ತರುತ್ತಿದೆ. ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತರುವಂತ ಮಸೂದೆಯನ್ನು ಸಿಎಂ ಸಿದ್ಧರಾಮಯ್ಯಗೆ ಸಮಿತಿ ಸಲ್ಲಿಸಿದೆ. ಈ ವರದಿಗೆ ಸಿಎಂ ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಹಾಗಾದ್ರೇ ಸುಗ್ರೀವಾಜ್ಞೆಯ ಕರಡಿನಲ್ಲಿ ಏನಿದೆ ಅಂತ ಮುಂದೆ ಓದಿ. ಮೈಕ್ರೋ ಫೈನಾನ್ಸ್ ಕಿರುಕುಳ ತಡೆಯ ಸಂಬಂಧ ಸುಗ್ರೀವಾಜ್ಞೆ ರಚನೆಗಾಗಿ ಅಧಿಕಾರಿಗಳ ವಿಶೇಷ ತಂಡವನ್ನು ರಾಜ್ಯ ಸರ್ಕಾರ ರಚಿಸಿತ್ತು. ಇದೀಗ ಅಧ್ಯಯನ ಮಾಡಿರುವಂತ ತಂಡವು ಸಿಎಂ ಸಿದ್ಧರಾಮಯ್ಯ ಅವರಿಗೆ 10 ಪುಟಗಳ ಕರಡನ್ನ ಸಲ್ಲಿಸಿದೆ. ಅಧಿಕಾರಿಗಳ ವರದಿ ಪರಿಶೀಲಿಸಿದ ನಂತರ ರವಾನೆ ಮಾಡಲಾಗಿದೆ. ಆ ಬಳಿಕ ರಾಜ್ಯಪಾಲರಿಗೆ ಸುಗ್ರೀವಾಜ್ಞೆಯನ್ನು ಸಿಎಂ ಸಿದ್ಧರಾಮಯ್ಯ ರವಾನಿಸಲಿದ್ದಾರೆ. ವರದಿಯಂತೆ ಕಿರುಕುಳ ಕೊಟ್ಟರೆ ಮೈಕ್ರೋ ಫೈನಾನ್ಸ್ ಪರವಾನಗಿ ರದ್ದತಿ. ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಸಾಲಗಾರರಿಗೆ ಕಿರುಕುಳ ನೀಡಿದರೆ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ. 5 ಲಕ್ಷ ರೂ ವರೆಗೆ ದಂಡ. ಲೈಸೆನ್ಸ್ ರದ್ದುಗೊಳಿಸುವುದು. ಸಾಲ ನೀಡುವಾಗ ಅಡಮಾನ ಪಡೆಯಬಾರದು. ಕಿರುಕುಳ ನೀಡಿದರೆ ಜಾಮೀನುರಹಿತ ಪ್ರಕರಣ ಎಂದು…
ಬೆಂಗಳೂರು: ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು ಹಾಸ್ಟೆಲ್ಗಳಿಗೆ ಭೇಟಿ ನೀಡದಿರುವುದು ನನ್ನ ಗಮನಕ್ಕೆ ಬಂದಿದೆ. ಕೇವಲ ಕಚೇರಿಯಲ್ಲಿ ಕುಳಿತು ಕಾಲಹರಣ ಮಾಡುವುದನ್ನು ನಾನು ಸಹಿಸುವುದಿಲ್ಲ. ಇನ್ನು ಮುಂದೆ ಕಡ್ಡಾಯವಾಗಿ ಆಯಾ ಜಿಲ್ಲೆಯ ಪ್ರತಿಯೊಂದು ಹಾಸ್ಟೆಲ್ಗಳಿಗೆ ಭೇಟಿ ನೀಡಿ, ಆಹಾರ ಗುಣಮಟ್ಟ ಹಾಗೂ ಶುಚಿತ್ವಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಈ ಕೆಲಸ ನಿರಂತರವಾಗಿ ನಡೆಯಬೇಕು. ಜಿಲ್ಲಾ ಕಲ್ಯಾಣಾಧಿಕಾರಿಗಳು ಹಾಸ್ಟೆಲ್ಗಳಿಗೆ ಭೇಟಿ ನೀಡಿದ ವೇಳೆ ಅಲ್ಲಿಯೇ ಊಟ ಸೇವಿಸಬೇಕು. ಇದರಿಂದ ಅಲ್ಲಿನ ಆಹಾರದ ಗುಣಮಟ್ಟ ಸೇರಿದಂತೆ ಇನ್ನಿತರ ವಿಚಾರಗಳು ಗಮನಕ್ಕೆ ಬರಲಿವೆ ಎಂಬುದಾಗಿ ಸಚಿವ ಶಿವರಾಜ್ ತಂಡರಗಿ ಹೇಳಿದರು. ಸೋಮವಾರ ದೇವರಾಜ ಅರಸು ಭವನದಲ್ಲಿ ಒಕ್ಕಲಿಗರ ಅಭಿವೃದ್ಧಿ ನಿಗಮ, ದೇವರಾಜ ಅರಸು ಅಭಿವೃದ್ಧಿ ನಿಗಮ, ವೀರಶೈವ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿದ ಅವರು, ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನಿಗಮಗಳಿಗೆ ಈಗಾಗಲೇ ಆರ್ಥಿಕ ಇಲಾಖೆ, 1600 ಕೋಟಿ ಅನುದಾನವನ್ನು ಒದಗಿಸಿದೆ. ಕೂಡಲೇ ಎಲ್ಲಾ ನಿಗಮಗಳ ವ್ಯವಸ್ಥಾಪಕ…
ಬೆಂಗಳೂರು: ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಯುವ ಕಾರ್ಯ ವಿಳಂಬವಾಗುತ್ತಿರುವುದಕ್ಕೆ ಕನ್ನಡ ಮತ್ತು ಸಂಸ್ಕೃತಿ ಹಾಗು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸೋಮವಾರ ದೇವರಾಜ ಅರಸು ಭವನದಲ್ಲಿ ಒಕ್ಕಲಿಗರ ಅಭಿವೃದ್ಧಿ ನಿಗಮ, ದೇವರಾಜ ಅರಸು ಅಭಿವೃದ್ಧಿ ನಿಗಮ, ವೀರಶೈವ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿದ ಸಚಿವರು, ಆರ್ಥಿಕ ವರ್ಷ ಪೂರ್ಣಗೊಳ್ಳುವಷ್ಟರಲ್ಲಿ ನಿಗದಿತ ಗುರಿ ಮುಟ್ಟದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ದೇವರಾಜ ಅರಸು ಅಭಿವೃದ್ಧಿ ನಿಗಮದಲ್ಲಿ ಶೇಕಡ 85ರಷ್ಟು ಹಣ ಖರ್ಚು ಮಾಡಲಾಗಿದ್ದು, ಉಳಿದ ಕೊಳವೆಬಾವಿ ಕೊರೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇನ್ನು ಒಂದು ತಿಂಗಳಲ್ಲಿ ಬಾಕಿ ಕೊಳವೆ ಬಾವಿ, ಸ್ವಾವಲಂಬಿ ಸಾರಥಿ, ಅರಿವು ಶೈಕ್ಷಣಿಕ ಸಾಲ ಹಾಗೂ ಸ್ವಯಂ ಉದ್ಯೋಗ ಸಾಲ ಯೋಜನೆಗಳನ್ನ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ನಿರ್ದೇಶನ…
ಪ್ರತಿದಿನ ಹಣದ ಹರಿವು ಎಷ್ಟು ಮುಖ್ಯ ಎಂದು ಎಲ್ಲರಿಗೂ ತಿಳಿದಿದೆ. ಆ ಹಣದ ಹರಿವನ್ನು ಹೆಚ್ಚಿಸಲು ನಾವು ಹಗಲಿರುಳು ಶ್ರಮಿಸುತ್ತಿದ್ದೇವೆ. ಆದರೆ ಹಲವರಿಗೆ ಹಣ ಕೈಗೆ ಬರುವ ಮುನ್ನವೇ ಖರ್ಚು ಬರುತ್ತದೆ. ಕೆಲವು ಜನರು ಆದಾಯದ ಅವಕಾಶವಿಲ್ಲದೆ ಉಳಿದಿದ್ದಾರೆ. ಈ ಆಧ್ಯಾತ್ಮಿಕ ಪೋಸ್ಟ್‌ನಲ್ಲಿ ನೀವು ಹಣದ ಅಡೆತಡೆಗಳನ್ನು ಸರಿಪಡಿಸುವ ಮತ್ತು ನಗದು ಹರಿವನ್ನು ಹೆಚ್ಚಿಸುವ ಅದ್ಭುತ ಪರಿಹಾರವನ್ನು ಕಾಣಬಹುದು. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ…
ಸ್ಮಾರ್ಟ್ಫೋನ್ ಬಳಕೆದಾರರಿಗೆ ದೊಡ್ಡ ಸಮಸ್ಯೆಯೆಂದರೆ ಬ್ಯಾಟರಿ ಬೇಗನೆ ಖಾಲಿಯಾಗುವುದು. ಆದಾಗ್ಯೂ, ದುರ್ಬಲ ಬ್ಯಾಟರಿ ಯಾವಾಗಲೂ ಅಪರಾಧಿಯಲ್ಲ. ಫಿಟ್ನೆಸ್ ಟ್ರ್ಯಾಕಿಂಗ್, ಸಾಮಾಜಿಕ ಮಾಧ್ಯಮ ಅಥವಾ ಡೇಟಿಂಗ್ಗಾಗಿ ಹೆಚ್ಚಾಗಿ ಬಳಸಲಾಗುವ ಅಸಂಖ್ಯಾತ ಅಪ್ಲಿಕೇಶನ್ಗಳು ಗಮನಾರ್ಹ ಶಕ್ತಿಯನ್ನು ಬಳಸುತ್ತವೆ. ಸ್ವೀಡಿಷ್ ಆನ್ಲೈನ್ ಪತ್ರಿಕೆ ನೈಹೆಡರ್ 24 ಸಂಗ್ರಹಿಸಿದ ಪಟ್ಟಿಯ ಪ್ರಕಾರ, ಫಿಟ್ಬಿಟ್ ಮತ್ತು ಉಬರ್ ಅಂತಹ ಬ್ಯಾಟರಿ ಒಣಗಿಸುವ ಅಪ್ಲಿಕೇಶನ್ಗಳಲ್ಲಿ ಸೇರಿವೆ. ವರದಿಯ ಪ್ರಕಾರ, ಫಿಟ್ಬಿಟ್ ಅತ್ಯಂತ ಶಕ್ತಿ-ಕೇಂದ್ರಿತವಾಗಿದೆ, ನಂತರ ಉಬರ್ ಮತ್ತು ಅಂತಹುದೇ ಅಪ್ಲಿಕೇಶನ್ಗಳು. ಆಶ್ಚರ್ಯಕರವಾಗಿ, ಈ ಅಪ್ಲಿಕೇಶನ್ಗಳು ಸಕ್ರಿಯವಾಗಿ ಬಳಕೆಯಲ್ಲಿಲ್ಲದಿದ್ದರೂ ಸಹ ನಿಮ್ಮ ಬ್ಯಾಟರಿಯನ್ನು ಖಾಲಿ ಮಾಡಬಹುದು. ಟಾಪ್ 10 ಬ್ಯಾಟರಿ ಬಳಕೆ ಅಪ್ಲಿಗಳು: ಫಿಟ್ಬಿಟ್ ಉಬರ್ Skype ಫೇಸ್ ಬುಕ್ Airbnb Instagram Tinder ಬಂಬಲ್ SnapChat WhatsApp ಬ್ಯಾಟರಿಯನ್ನು ಹೇಗೆ ನಿರ್ವಹಿಸುವುದು? ನಿಮ್ಮ ಬ್ಯಾಟರಿಯನ್ನು ಉಳಿಸಲು, ನೀವು ಈ ಅಪ್ಲಿಕೇಶನ್ ಗಳನ್ನು ಹಸ್ತಚಾಲಿತವಾಗಿ ಮುಚ್ಚಬಹುದು ಅಥವಾ ಅವುಗಳ ವಿದ್ಯುತ್ ಬಳಕೆಯನ್ನು ಉತ್ತಮಗೊಳಿಸಬಹುದು. ಆಂಡ್ರಾಯ್ಡ್ ಸಾಧನಗಳಲ್ಲಿ ಇದು ವಿಶೇಷವಾಗಿ ಸುಲಭ: ನಿಮ್ಮ…
ಬೆಂಗಳೂರು: ಇಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ಈ ಸಭೆಯ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ. ಇಂದು ಬೆಂಗಳೂರಿನ “ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ” (D.S.E.R.T) ಕಚೇರಿಯಲ್ಲಿ “ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ಫಲಿತಾಂಶ ಸುಧಾರಣೆ ಕುರಿತು ಸಂವಾದ ಕಾರ್ಯಕ್ರಮ ನಡೆಸಲಾಯಿತು. ♦️ವಿವಿಧ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಜಿಲ್ಲಾ ಉಪನಿರ್ದೇಶಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಶೈಕ್ಷಣಿಕ ಕಾರ್ಯಕ್ರಮಗಳ ಪ್ರಗತಿ ಕುರಿತು ಮಾಹಿತಿ ಪಡೆದು ಸಮಗ್ರವಾಗಿ ಚರ್ಚಿಸಲಾಯಿತು. ♦️ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯದಂತೆ ಅವರಿಗೆ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು, ಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಅನೇಕ ವಿನೂತನ ಪ್ರಯತ್ನಗಳನ್ನು ನಮ್ಮ ಶಿಕ್ಷಣ ಇಲಾಖೆ ಹಾಗೂ ಸರ್ಕಾರ ಮಾಡುತ್ತಿದೆ. ♦️SSLC ಮತ್ತು PUC ಫಲಿತಾಂಶ ವೃದ್ಧಿಗೆ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲೆಂದು 20 ಅಂಶಗಳ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಪರೀಕ್ಷಾ…