Author: kannadanewsnow09

ಬೆಂಗಳೂರು: ರಾಜ್ಯದ ಸ್ಥಳೀಯ ಯೋಜನಾ ಪ್ರದೇಶವನ್ನು ಹೊರತುಪಡಿಸಿದ ಪ್ರದೇಶದಲ್ಲಿ ಭೂಪರಿವರ್ತಿತ ಜಮೀನುಗಳಲ್ಲಿ ವಿನ್ಯಾಸ ಅನುಮೋದನೆಯ ಕುರಿತಂತೆ ಮಹತ್ವದ ಆದೇಶವನ್ನು ಸರ್ಕಾರ ಮಾಡಿದೆ. ಈ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ, 2025 ರ ಪ್ರಕರಣ 199(ಬಿ) ರಲ್ಲಿ ಕಟ್ಟಡ ನಿರ್ಮಾಣ ಉದ್ದೇಶಗಳಿಗಾಗಿ ಇರುವ ಕಟ್ಟಡ ನಿವೇಶನಗಳಿಗಾಗಿ ಹೊಸ ಖಾತಾ ಅಥವಾ ಪಿ.ಐ.ಡಿ-ಯನ್ನು ನೀಡಲು, ಗ್ರಾಮ ಪಂಚಾಯಿತಿ ಅಥವಾ ಸರ್ಕಾರವು ಅಧಿಸೂಚನೆಯ ಮೂಲಕ ಗೊತ್ತುಪಡಿಸಲಾದ ಪ್ರಾಧಿಕಾರಗಳು, ಅಧಿಕಾರ ವ್ಯಾಪ್ತಿಯ ಯೋಜನಾ ಪ್ರಾಧಿಕಾರದ ಮೂಲಕ ಲೇಔಟ್ ಪ್ಲಾನಿಗಾಗಿ ಪೂರ್ವಾನುಮೋದನೆಯನ್ನು ಪಡೆದುಕೊಳ್ಳತಕ್ಕದ್ದು ಎಂದು ತಿಳಿಸಲಾಗಿರುತ್ತದೆ ಎಂದಿದ್ದಾರೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 64 (5-ಎ) ರಲ್ಲಿ ಗ್ರಾಮ ಪಂಚಾಯತ್‌ಗಳು, ಕಟ್ಟಡ ಲೆಸೆನ್ಸ್ ಅಥವಾ ವಸತಿ ಅಥವಾ ವಾಸ ಸ್ಥಳಗಳ ಲೇಔಟ್‌ಗಳ ಅನುಮೋದನೆಗಳನ್ನು ನೀಡುವ ವಿಷಯದಲ್ಲಿ ನಗರ ಮತ್ತು…

Read More

ಬೆಂಗಳೂರು: ರಾಜ್ಯದಲ್ಲಿನ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 1200 ಚದುರ ಅಡಿ ವಿಸ್ತರೀಣದವರೆಗಿನ ನಿವೇಶನಗಳಲ್ಲಿ ನಿರ್ಮಿಸಿರುವ ನೆಲ+ 2 ಅಂತಸ್ತು ಅಥವಾ Stilt + 3 ಅಂತಸ್ತಿನವರೆಗಿನ ವಾಸದ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ ( Occupancy Certificate-OC) ಪಡೆಯುವುದರಿಂದ ವಿನಾಯ್ತಿ ನೀಡಿ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯದ 2 ಅಂತಸ್ತಿನ ಕಟ್ಟಡಗಳಿಗೆ ಓಸಿ ವಿನಾಯಿತಿ ನೀಡಿ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಮಾನ್ಯ ಮುಖ್ಯ ಮಂತ್ರಿಯವರು ಅಧ್ಯಕ್ಷತೆ ಹಾಗೂ ಮಾನ್ಯ ಉಪ ಮುಖ್ಯಮಂತ್ರಿಯವರು ಮತ್ತು ಸಂಬಂಧಿಸಿದ ಇತರ ಮಾನ್ಯ ಸಚಿವರುಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ, ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ, ಅನ್ವಯವಾಗುವ ಎಲ್ಲಾ ಕಾಯ್ದೆಗಳಲ್ಲಿಯೂ ಕೆಲವೊಂದು ವರ್ಗದ ನಿವೇಶನಗಳಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ಸ್ವಾಧೀನಾನುಭವ ಪಮಾಣ ಪತ್ರ ಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ, ಸಮಾನ ಅವಕಾಶಗಳಿರುವುದು ಸೂಕ್ತವೆಂದು ಅಭಿಪ್ರಾಯಿಸಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ,…

Read More

ಅವಿನಾಶ್‌ ಆರ್‌ ಭೀಮಸಂದ್ರ ಜೊತೆಗೆ ವಸಂತ ಬಿ ಈಶ್ವರಗೆರೆ ಬೆಂಗಳೂರು: ರಾಜ್ಯದಲ್ಲಿ ಸಮಾದಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಉತ್ತಮ ಅಭಿಪ್ರಾಯವನ್ನು ಮೂಡಿಸಲು, ಪೊಲೀಸ್ ಅಧಿಕಾರಿ, ಸಿಬ್ಬಂದಿಯವರು ಕರ್ತವ್ಯ ನಿರ್ವಹಿಸುವಾಗ ಪಾರದರ್ಶಕತೆ, ಸೌಜನ್ಯದ ವರ್ತನೆ ಮತ್ತು ನಿಷ್ಠೆಯನ್ನು ಕಾಯ್ದುಕೊಳ್ಳಲು ಈ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರು ಖಡಕ್ ಆದೇಶ ಮಾಡಿದ್ದಾರೆ. ಈ ಕುರಿತಂತೆ ಸುತ್ತೋಲೆ ಹೊರಡಿಸಿರುವಂತ ಕರ್ನಾಟಕ DGP ಮತ್ತು IGP ಡಾ.ಎಂ.ಎ ಸಲೀಂ ಅವರು, ಪೊಲೀಸ್ ಅಧಿಕಾರಿಗಳು ಸಾರ್ವಜನಿಕರೊಂದಿಗೆ ವರ್ತಿಸುವ ರೀತಿಯು ಪರಿಣಾಮಕಾರಿ ಕಾನೂನು ಜಾರಿ ಮತ್ತು ಸಮುದಾಯದ ಜೊತೆಗಿನ ಉತ್ತಮ ಸಂಬಂಧವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅತ್ಯಂತ ಮುಖ್ಯವಾಗಿದೆ. ಪೊಲೀಸ್ ಅಧಿಕಾರಿಗಳು ತಮ್ಮ ಅಧಿಕಾರವನ್ನು ಚಲಾಯಿಸುವಾಗ ನಾಗರೀಕರೊಂದಿಗೆ ಸೌಜನ್ಯದಿಂದ ಮತ್ತು ಗೌರವದಿಂದ ವರ್ತಿಸಬೇಕು. ಪೊಲೀಸರ ನಡವಳಿಕೆಯಲ್ಲಿ ಸೌಜನ್ಯ ಮತ್ತು ಘನತೆ ಎದ್ದು ಕಾಣಬೇಕು ಎಂದು ತಿಳಿಸಿದ್ದಾರೆ. ಸಕಾರಾತ್ಮಕ ಮತ್ತು ವೃತ್ತಿಪರ ನಡವಳಿಕೆಯು ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಮೇಲಿನ ನಂಬಿಕೆ ಮತ್ತು ಸಹಕಾರವನ್ನು ಹೆಚ್ಚಿಸುತ್ತದೆ. ಪೊಲೀಸ್ ಅಧಿಕಾರಿಗಳ…

Read More

ಬೆಂಗಳೂರು: ರಾಜ್ಯದಲ್ಲಿನ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 1200 ಚದುರ ಅಡಿ ವಿಸ್ತರೀಣದವರೆಗಿನ ನಿವೇಶನಗಳಲ್ಲಿ ನಿರ್ಮಿಸಿರುವ ನೆಲ+ 2 ಅಂತಸ್ತು ಅಥವಾ Stilt + 3 ಅಂತಸ್ತಿನವರೆಗಿನ ವಾಸದ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ ( Occupancy Certificate-OC) ಪಡೆಯುವುದರಿಂದ ವಿನಾಯ್ತಿ ನೀಡಿ ಅಧಿಕೃತ ಆದೇಶ ಹೊರಡಿಸಿದೆ. ಈ ಕುರಿತಂತೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಮಾನ್ಯ ಮುಖ್ಯ ಮಂತ್ರಿಯವರು ಅಧ್ಯಕ್ಷತೆ ಹಾಗೂ ಮಾನ್ಯ ಉಪ ಮುಖ್ಯಮಂತ್ರಿಯವರು ಮತ್ತು ಸಂಬಂಧಿಸಿದ ಇತರ ಮಾನ್ಯ ಸಚಿವರುಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ, ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ, ಅನ್ವಯವಾಗುವ ಎಲ್ಲಾ ಕಾಯ್ದೆಗಳಲ್ಲಿಯೂ ಕೆಲವೊಂದು ವರ್ಗದ ನಿವೇಶನಗಳಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ಸ್ವಾಧೀನಾನುಭವ ಪಮಾಣ ಪತ್ರ ಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ, ಸಮಾನ ಅವಕಾಶಗಳಿರುವುದು ಸೂಕ್ತವೆಂದು ಅಭಿಪ್ರಾಯಿಸಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಸೂಚಿಸಲಾಗಿತ್ತು ಎಂದಿದ್ದಾರೆ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ…

Read More

ಬೆಂಗಳೂರು: ರಾಜ್ಯದ ಆರೋಗ್ಯ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ( National Health Mission-NHM) ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವಂತ ನೌಕರರಿಗೆ ಕಳೆದ ಮೂರು ತಿಂಗಳಿನಿಂದ ವೇತನ ಪಾವತಿ ಮಾಡಲಾಗಿರಲಿಲ್ಲ. ಇಂತಹ ನೌಕರರಿಗೆ ಗುಡ್ ನ್ಯೂಸ್ ಎನ್ನುವಂತೆ ವೇತನಕ್ಕಾಗಿ ಅನುದಾನ ಬಿಡುಗಡೆ ಮಾಡಿರೋದಲ್ಲದೇ, ಶೇ.5ರಷ್ಟು ವೇತನವನ್ನು ಹೆಚ್ಚಿಸಿ ಆದೇಶ ಮಾಡಿದೆ. ಈ ಕುರಿತಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಯೋಜನಾ ನಿರ್ದೇಶಕರು ಆದೇಶಿಸಿದ್ದು, ರಾಷ್ಟ್ರೀಯ ಆರೋಗ್ಯ ಅಭಿಯಾನದ ಜಿಲ್ಲಾ RoP ಯಡಿಯಲ್ಲಿ ಅನುಮೋದನೆಯಾಗಿರುವ ಕಾರ್ಯಕ್ರಮ ಚಟುವಟಿಕೆಗಳ ಅನುಷ್ಠಾನಕ್ಕಾಗಿ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮಾಹೆಯ ವೇತನ ಹಾಗೂ ಪ್ರೋತ್ಸಾಹಧನದ ಅನುದಾನವನ್ನು ಆದ್ಯತೆ ಮೇರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಗಳಿಗೆ K2 SNA SPARSHನಿಂದ ಒಟ್ಟು ರೂ.279,90,62,000 ರೂಪಾಯಿಗಳನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಅನುದಾನ ಬಿಡುಗಡೆ ಮಾಡಿದೆ. ಇನ್ನೂ ಜಿಲ್ಲಾ ಕ್ರಿಯಾ ಯೋಜನೆಯ ಪ್ರತಿ ಲೈನ್ ಐಟಂ ನಲ್ಲಿ ಅನುಮೋದಿಸಿರುವ ಮೊತ್ತಕ್ಕೆ ಮೀರದಂತೆ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು ಹಾಗೂ ನಿಗಧಿತ ಉದ್ದೇಶ…

Read More

ಬೆಂಗಳೂರು: ಅಕ್ಟೋಬರ್.30ರಂದು ರಾಜ್ಯದ ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಅನುದಾನ ಮಂಜೂರು ಸೇರಿದಂತೆ ಕೆಲ ಮಹತ್ವದ ನಿರ್ಧರಾಗಳನ್ನು ಕೈಗೊಳ್ಳಲು ಮಹತ್ವದ ರಾಜ್ಯ ಸಚಿವ ಸಂಪುಟ ಸಭೆಯನ್ನು ನಿಗದಿ ಪಡಿಸಲಾಗಿದೆ. ಈ ಕುರಿತು ಸಚಿವ ಸಂಪುಟದ ಸರ್ಕಾರದ ಅಪರ ಕಾರ್ಯದರ್ಶಿ ಮಾಹಿತಿ ನೀಡಿದ್ದು, ದಿನಾಂಕ 30-10-2025ರ ಗುರುವಾರ ಮಧ್ಯಾಹ್ನ 12.30ಕ್ಕೆ ಸಚಿವ ಸಂಪುಟದ 2025ನೇ ಸಾಲಿನ 24ನೇ ಸಭೆಯನ್ನು ವಿಧಾನಸೌಧದ ಸಚಿವ ಸಂಪುಟ ಸಭಾಮಂದಿರದಲ್ಲಿ ಕರೆಯಲಾಗಿದೆ ಎಂದಿದ್ದಾರೆ. https://kannadanewsnow.com/kannada/high-court-stays-fir-against-mahesh-shetty-timarodi-under-arms-act/

Read More

ಬೆಂಗಳೂರು: ಶಸ್ತ್ರಾಸ್ತ್ರ ಕಾಯ್ದೆಯಡಿ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ದಾಖಲಾಗಿದ್ದಂತ ಎಫ್ಐಆರ್ ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಈ ಮೂಲಕ ಮಹೇಶ್ ಶೆಟ್ಟಿ ತಿಮರೋಡಿಗೆ ಬಿಗ್ ರಿಲೀಫ್ ನೀಡಿದೆ. ಶಸ್ತ್ರಾಸ್ತ್ರ ಕಾಯ್ದೆಯಡಿ ದಾಖಲಾಗಿದ್ದಂತ ಎಫ್ಐಆರ್ ರದ್ದು ಕೋರಿ ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದಂತ ನ್ಯಾಯಪೀಠವು ಮಧ್ಯಂತರ ತಡೆಯನ್ನು ನೀಡಿ ಆದೇಶಿಸಿದೆ. ಅಂದಹಾಗೇ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ದಾಖಲಾಗಿದ್ದಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರ್ಟ್ ನಲ್ಲಿ ಇಂದು ಅದು ಏರ್ ಗನ್ ಆಗಿದೆ. ಅದಕ್ಕೆ ಲೈಸೆನ್ಸ್ ಅಗತ್ಯವಿಲ್ಲದಿದ್ದರೂ ಕೇಸ್ ದಾಖಲಿಸಿರುವುದಾಗಿ ಅವರ ಪರ ವಕೀಲರು ವಾದಿಸಿದ್ದರು. ಈ ಹಿನ್ನಲೆಯಲ್ಲಿ ಹೈಕೋರ್ಟ್ ಮಧ್ಯಂತರ ತಡೆ ನೀಡಿ, ವಿಚಾರಣೆಯನ್ನು ನವೆಂಬರ್.3ನೇ ವಾರಕ್ಕೆ ಮುಂದೂಡಿಕೆ ಮಾಡಿದೆ. https://kannadanewsnow.com/kannada/note-rescheduling-restriction-partial-cancellation-of-these-trains/ https://kannadanewsnow.com/kannada/government-issues-official-order-exempting-possession-certificate-for-buildings-up-to-1200-sq-ft-in-the-state/

Read More

ಮೈಸೂರು: ಮೈಸೂರು ನ್ಯೂ ಗೂಡ್ಸ್ ಟರ್ಮಿನಲ್ ಮತ್ತು ನಾಗನಹಳ್ಳಿ ನಡುವೆ ರಸ್ತೆ ಕೆಳಸೇತುವೆ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ, ಕೆಳಗಿನ ರೈಲುಗಳ ಸೇವೆಗಳನ್ನು ಮರುನಿಗದಿ, ನಿಯಂತ್ರಣ ಮತ್ತು ಭಾಗಶಃ ರದ್ದುಪಡಿಸಲಾಗುವುದು. ರೈಲುಗಳ ಮರುನಿಗದಿ 1. ರೈಲು ಸಂಖ್ಯೆ 16552 ಅಶೋಕಪುರಂ – ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್, ದಿನಾಂಕ 29, 31 ಅಕ್ಟೋಬರ್, 19, 21, 26, 28 ನವೆಂಬರ್ ಮತ್ತು 17, 19 ಡಿಸೆಂಬರ್ 2025 ರಂದು ಅಶೋಕಪುರಂನಿಂದ 40 ನಿಮಿಷ ತಡವಾಗಿ ಹೊರಡಲಿದೆ. 2. ರೈಲು ಸಂಖ್ಯೆ 66554 ಅಶೋಕಪುರಂ – ಕೆಎಸ್‌ಆರ್ ಬೆಂಗಳೂರು ಮೆಮೂ, ದಿನಾಂಕ 29, 31 ಅಕ್ಟೋಬರ್, 19, 21, 26, 28 ನವೆಂಬರ್ ಮತ್ತು 17, 19 ಡಿಸೆಂಬರ್ 2025 ರಂದು ಅಶೋಕಪುರಂನಿಂದ 45 ನಿಮಿಷ ತಡವಾಗಿ ಹೊರಡಲಿದೆ. ರೈಲುಗಳ ನಿಯಂತ್ರಣ 1. ರೈಲು ಸಂಖ್ಯೆ 16586 ಮುರ್ಡೇಶ್ವರ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್, ದಿನಾಂಕ 28, 30 ಅಕ್ಟೋಬರ್, 18, 20, 25, 27…

Read More

ನವದೆಹಲಿ : ಐಪಿಒ ಬಿಡುಗಡೆ ಮಾಡುವ ಹೊತ್ತಿಗೆ ಜಿಯೋ ಪ್ಲಾಟ್ ಫಾರ್ಮ್ಸ್ ‘ಪ್ರೀಮಿಯಂ ಮೌಲ್ಯಮಾಪನ” ಹೊಂದಿರಲಿದೆ ಎಂಬ ನಿರೀಕ್ಷೆಯನ್ನು ಐಸಿಐಸಿಐ ಸೆಕ್ಯೂರಿಟೀಸ್ ಹೊರಹಾಕಿದೆ. ಅಂದಹಾಗೆ ಇದು ಕೂಡ ಹಣಕಾಸು ವರ್ಷ 21ರ ಹೈ-ಪ್ರೊಫೈಲ್ ಈಕ್ವಿಟಿ ಏರಿಕೆಯಂತೆಯೇ 2027ರ ಸೆಪ್ಟೆಂಬರ್ ವೇಳೆಗೆ ಕಂಪನಿಯ ಈಕ್ವಿಟಿ ಮೌಲ್ಯವನ್ನು 14,800 ಕೋಟಿ ಅಮೆರಿಕನ್ ಡಾಲರ್ ಗೆ ನಿಗದಿಪಡಿಸಿದೆ. ಅಂದರೆ ಇವತ್ತಿಗೆ ಅಮೆರಿಕದ ಡಾಲರ್ ಮೌಲ್ಯವನ್ನು ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕಾದಲ್ಲಿ, 12,99,640 ಕೋಟಿ ರೂಪಾಯಿ (12.99 ಲಕ್ಷ ಕೋಟಿ ರೂಪಾಯಿ). ಈ ಭಾರತೀಯ ಟೆಲಿಕಾಂ ಆಪರೇಟರ್ ಮೌಲ್ಯಮಾಪನದ ಅಂದಾಜು ಹೆಚ್ಚು ಮಾಡಿರುವುದು ಏಕೆಂದರೆ, ಎಲ್ಲ ವಲಯಗಳಲ್ಲಿ ಬಲವಾದ ಹಣಕಾಸು ಮತ್ತು ವ್ಯವಹಾರದ ಮೂಲಭೂತ ಅಂಶಗಳು ಸೇರಿಕೊಂಡು ನವೀಕೃತಗೊಳಿಸಿದ ಆಶಾವಾದ ಕಾರಣವಾಗಿದೆ. ಜಿಯೋದಿಂದ ಸುಧಾರಿತ ದರ ರಚನೆ ಹಾಗೂ 5ಜಿ ಅಳವಡಿಕೆಗೆ ನವೀಕರಿಸಿದ ಪ್ರಯತ್ನಗಳು, ಅದರೊಂದಿಗೆ ಪ್ರೀಮಿಯಂ ಟ್ರೆಂಡ್ ವಿಸ್ತರಿಸುತ್ತದೆ. ಇದರ ಜೊತೆಗೆ ಜಿಯೋ ಪ್ಲಾಟ್ ಫಾರ್ಮ್ಸ್ ಪ್ರಸ್ತಾವಿತ ಲಿಸ್ಟಿಂಗ್, “ಮೌಲ್ಯಮಾಪನದ ಮೇಲೆ ಸಂಭವನೀಯ ಸಕಾರಾತ್ಮಕ ಪ್ರಭಾವ”…

Read More

ಹಾವೇರಿ: ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ಎನ್ನುವಂತೆ ಹಾವೇರಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿರುವಂತ ಘಟನೆ ನಡೆದಿದೆ. ಆ ಮೂಲಕ ಇನ್ಟಾಗ್ರಾಂನಲ್ಲಿ ಪರಿಚಿತವಾಗಿದ್ದಂತ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಗರ್ಭವತಿ ಮಾಡಿದಂತ ನಾಲ್ವರ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಹಾವೇರಿ ಜಿಲ್ಲೆಯ ಹಾನಗಲ್ ನ ಅಪ್ರಾಪ್ತ ಬಾಲಕಿಯನ್ನು ಇನ್ಟಾ ಗ್ರಾಂನಲ್ಲಿ ಪರಿಚಯಿಸಿಕೊಂಡಿದ್ದರು. ಆಕೆಯನ್ನು ಪುಸಲಾಯಿಸಿ ಕರೆದೊಯ್ದಂತ ಇಬ್ಬರು ಆರೋಪಿಗಳು, ತನ್ನ ಸ್ನೇಹಿತರ ಜೊತೆಗೂಡಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಘಟನೆಯ ನಂತ್ರ ಅಪ್ರಾಪ್ತೆ ಗರ್ಭವತಿಯಾದ ನಂತ್ರ ಕೃತ್ಯ ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಹಾನಗಲ್ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದರು. ಈ ದೂರು ಆಧರಿಸಿ ಉದಯ್ ಕರಿಯಣ್ಣನವರ್, ಕಿಶನ್ ವಡ್ಡರ್, ಆಕಾಶ್ ಮಂತಗಿ ಹಾಗೂ ಚಂದ್ರು ಗೊಲ್ಲರ ಎಂಬುವರ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಲಾಗಿದೆ. ಈ ಘಟನೆಯು ಕಳೆದ ಮಾರ್ಚ್ ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ…

Read More