Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಮುಡಾ ಮಾಜಿ ಆಯುಕ್ತ ಜಿ.ಟಿ ದಿನೇಶ್ ಕುಮಾರ್ ಗೆ ಜನಪ್ರತಿನಿಧಿಗಳ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಆ ಮೂಲಕ ಮುಡಾ ಹಗರಣದಲ್ಲಿ ಮಾಜಿ ಆಯುಕ್ತ ಜಿ.ಟಿ ದಿನೇಶ್ ಕುಮಾರ್ ಗೆ ಬಿಗ್ ರಿಲೀಫ್ ನೀಡಿದೆ. ಮುಡಾ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸಲು ಲೋಕಾಯುಕ್ತ ಪೊಲೀಸರು ವಿಳಂಬ ಧೋರಣೆಯನ್ನು ತೋರಿದ್ದರು. ಈ ಹಿನ್ನಲೆಯಲ್ಲಿ ಮುಡಾ ಮಾಜಿ ಆಯುಕ್ತ ಜಿ.ಟಿ ದಿನೇಶ್ ಕುಮಾರ್ ಗೆ ಜಾಮೀನು ಮಂಜೂರು ಮಾಡಲಾಗಿದೆ. ನಿಗದಿತ ಅವಧಿಯಲ್ಲಿ ಆರೋಪಪಟ್ಟಿ ಸಲ್ಲಿಸದ ಕಾರಣಕ್ಕೆ ಜಾಮೀನು ನೀಡಲಾಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಆದೇಶ ಹೊರಡಿಸಿದ್ದಾರೆ. ಬಂಧನವಾಗಿ 90 ದಿನ ಕಳೆದರೂ ಆರೋಪಪಟ್ಟಿಯನ್ನು ಲೋಕಾಯುಕ್ತ ಪೊಲೀಸರು ಸಲ್ಲಿಸಿರಲಿಲ್ಲ. ಹೀಗಾಗಿ ಜಿ.ಟಿ ದಿನೇಶ್ ಕುಮಾರ್ ಗೆ ಡಿಫಾಲ್ಟ್ ಜಾಮೀನು ನೀಡಿ ಕೋರ್ಟ್ ಆದೇಶಿಸಿದೆ. https://kannadanewsnow.com/kannada/these-are-the-amazing-health-benefits-of-consuming-grapes/ https://kannadanewsnow.com/kannada/bjp-releases-first-list-of-144-candidates-for-west-bengal-assembly-elections/
ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯು 2025ನೇ ಸಾಲಿನ ವಾರ್ಷಿಕ ಸಾಹಿತ್ಯ ಪ್ರಶಸ್ತಿಗಳನ್ನು ಇಂದು ಪ್ರಕಟಿಸಿದೆ. ಒಟ್ಟು 24 ಭಾರತೀಯ ಭಾಷೆಗಳ ಸಾಹಿತ್ಯ ಕೃತಿಗಳಿಗೆ ಈ ಬಾರಿ ಪ್ರಶಸ್ತಿ ಘೋಷಣೆಯಾಗಿದ್ದು, ಕನ್ನಡದ ಖ್ಯಾತ ಸಾಹಿತಿ ಅಮರೇಶ ನುಗಡೋಣಿ ಅವರ ‘ದಡ ಸೇರಿಸು ತಂದೆ’ ಕಥಾ ಸಂಕಲನಕ್ಕೆ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಗಳ ವಿವರ: ಈ ವರ್ಷದ ಪ್ರಶಸ್ತಿ ಪಟ್ಟಿಯಲ್ಲಿ 8 ಕವನ ಸಂಕಲನಗಳು, 4 ಕಾದಂಬರಿಗಳು, 6 ಸಣ್ಣಕಥೆಗಳ ಸಂಕಲನಗಳು, 2 ಪ್ರಬಂಧಗಳು, ತಲಾ 1 ಸಾಹಿತ್ಯ ವಿಮರ್ಶೆ, ಆತ್ಮಕಥೆ ಮತ್ತು 2 ಸ್ಮರಣ ಲೇಖನಗಳು (Memoirs) ಸ್ಥಾನ ಪಡೆದಿವೆ. ಕನ್ನಡದ ಹೆಮ್ಮೆ: ಕನ್ನಡ ವಿಭಾಗದಲ್ಲಿ ಅಮರೇಶ ನುಗಡೋಣಿ ಅವರ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ತೀರ್ಪುಗಾರರಾಗಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ. ಜಯಲಲಿತ ಮತ್ತು ಸಹನಾ ಕಾಂತಬೈಲು ಅವರು ಕಾರ್ಯನಿರ್ವಹಿಸಿದ್ದರು. ಪ್ರಮುಖ ವಿಜೇತರ ಪಟ್ಟಿ: ಭಾಷೆ ಕೃತಿಯ ಹೆಸರು (ಪ್ರಕಾರ) ಲೇಖಕರ ಹೆಸರು…
ನವದೆಹಲಿ: ಭಾರತೀಯ ಜನತಾ ಪಾರ್ಟಿಯಿಂದ ಪಶ್ಚಿಮ ಬಂಗಾಳ ಹಾಗೂ ಕೇರಳ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ 144 ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡಿದ್ದರೇ, ಕೇರಳ ವಿಧಾನಸಭಾ ಚುನಾವಣೆಗೆ 47 ಅಭ್ಯರ್ಥಿಗಳನ್ನು ಬಿಜೆಪಿ ಘೋಷಣೆ ಮಾಡಿದೆ. ಬಿಜೆಪಿಯಿಂದ ಕೇರಳ ವಿಧಾನಸಭಾ ಚುನಾವಣೆಗೆ 47 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನವದೆಹಲಿ: ಮುಂಬರುವ ಕೇರಳ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ ಸೋಮವಾರ 47 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಂಜೇಶ್ವರ ಸ್ಥಾನದಿಂದ ಪಕ್ಷವು ಕೆ. ಸುರೇಂದ್ರನ್ ಅವರನ್ನು ಕಣಕ್ಕಿಳಿಸಿದೆ. ಕೋಜಿಕೋಡ್ ಉತ್ತರದಿಂದ ನವ್ಯ ಹರಿದಾಸ್. ಕಾಂಜಿರಪ್ಪಳ್ಳಿಯಿಂದ ಅಡ್ವೊಕೇಟ್ ಜಾರ್ಜ್ ಕುರಿಯನ್, ಕಜಕೂಟಂನಿಂದ ವಿ. ಮುರಳೀಧರನ್ ಮತ್ತು ನೇಮಮ್ ನಿಂದ ರಾಜ್ಯ ಅಧ್ಯಕ್ಷ ರಾಜೀವ್ ಚಂದ್ರಶೇಖರ್. ರಾಜ್ಯವು ಏಪ್ರಿಲ್ 9 ರಂದು ಎಲ್ಲಾ 140 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಸಲಿದ್ದು, ಮೇ 4 ರಂದು ಮತ ಎಣಿಕೆ ನಡೆಯಲಿದೆ. https://twitter.com/ANI/status/2033498351837077658 ಭಾನುವಾರದಂದು,…
ನವದೆಹಲಿ: ಮುಂಬರುವ ಕೇರಳ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ ಸೋಮವಾರ 47 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಂಜೇಶ್ವರ ಸ್ಥಾನದಿಂದ ಪಕ್ಷವು ಕೆ. ಸುರೇಂದ್ರನ್ ಅವರನ್ನು ಕಣಕ್ಕಿಳಿಸಿದೆ. ಕೋಜಿಕೋಡ್ ಉತ್ತರದಿಂದ ನವ್ಯ ಹರಿದಾಸ್. ಕಾಂಜಿರಪ್ಪಳ್ಳಿಯಿಂದ ಅಡ್ವೊಕೇಟ್ ಜಾರ್ಜ್ ಕುರಿಯನ್, ಕಜಕೂಟಂನಿಂದ ವಿ. ಮುರಳೀಧರನ್ ಮತ್ತು ನೇಮಮ್ ನಿಂದ ರಾಜ್ಯ ಅಧ್ಯಕ್ಷ ರಾಜೀವ್ ಚಂದ್ರಶೇಖರ್. ರಾಜ್ಯವು ಏಪ್ರಿಲ್ 9 ರಂದು ಎಲ್ಲಾ 140 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಸಲಿದ್ದು, ಮೇ 4 ರಂದು ಮತ ಎಣಿಕೆ ನಡೆಯಲಿದೆ. https://twitter.com/ANI/status/2033498351837077658 ಭಾನುವಾರದಂದು, ಭಾರತ ಚುನಾವಣಾ ಆಯೋಗವು ಚುನಾವಣಾ ದಿನಾಂಕಗಳನ್ನು ಘೋಷಿಸಿದ ಕೂಡಲೇ, ಕಮ್ಯುನಿಸ್ಟ್ ಪಕ್ಷ-ಮಾರ್ಕ್ಸ್ವಾದಿ ಕೇರಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಸಂಪುಟದ ಒಂಬತ್ತು ಸದಸ್ಯರು ಸೇರಿದಂತೆ 75 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಚುನಾವಣಾ ವೇಳಾಪಟ್ಟಿ ಪ್ರಕಟವಾದ ಸ್ವಲ್ಪ ಸಮಯದ ನಂತರ ಪಟ್ಟಿಯನ್ನು ಪ್ರಕಟಿಸಿದ ಪಕ್ಷದ ರಾಜ್ಯ…
ಶಿವಮೊಗ್ಗ: ಜಿಲ್ಲೆಯ ಸಾಗರ ಪಟ್ಟಣದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಪೊಲೀಸ್ ಇಲಾಖೆ ಸಜ್ಜಾಗಿದೆ. ಇತ್ತೀಚೆಗೆ ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುವುದು ಮತ್ತು ಅಪ್ರಾಪ್ತರು ವಾಹನ ಚಾಲನೆ ಮಾಡುತ್ತಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾಗರ ಉಪ ವಿಭಾಗದ ಪೊಲೀಸರು ‘ಐಟಿಎಂಎಸ್’ (Intelligent Traffic Management System) ತಂತ್ರಜ್ಞಾನವನ್ನು ಜಾರಿಗೆ ತಂದಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಸಾಗರದ ಎಎಸ್ಪಿ ಡಾ.ಬೆನಕ ಪ್ರಸಾದ್ ಮಾಹಿತಿ ನೀಡಿದು, ಸಂಚಾರ ನಿಯಮಗಳನ್ನು ಪಾಲಿಸದ ವಾಹನ ಸವಾರರ ವಿರುದ್ಧ ಕ್ರಮಕ್ಕಾಗಿ ಸರ್ಕಾರದ ಉಪಕ್ರಮವನ್ನು, ಸಾಗರ ವ್ಯಾಪ್ತಿಯಲ್ಲೂ ಜಾರಿಗೊಳಿಸಲಾಗುತ್ತಿದೆ. ಆ ಮೂಲಕ ಸಂಚಾರ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸೋ ಕ್ರಮ ವಹಿಸಲಾಗುತ್ತಿದ ಎಂದು ತಿಳಿಸಿದರು.. ಎಎಸ್ಪಿ ಡಾ.ಬೆನಕ ಪ್ರಸಾದ್ ಸುದ್ದಿಗೋಷ್ಠಿಯ ಪ್ರಮುಖ ಹೈಲೈಟ್ಸ್ ಹೀಗಿದೆ.. ಏನಿದು ಐಟಿಎಂಎಸ್?: ಇದು ಸ್ಮಾರ್ಟ್ ಸಿಟಿ ಯೋಜನೆಯಡಿ ಜಾರಿಗೆ ಬಂದಿರುವ ತಂತ್ರಜ್ಞಾನವಾಗಿದೆ. ಇನ್ಮುಂದೆ ಪೊಲೀಸರು ವಾಹನಗಳನ್ನು ಅಡ್ಡಗಟ್ಟಿ ದಂಡ ವಸೂಲಿ ಮಾಡುವ ಬದಲಿಗೆ, ನಿಯಮ ಉಲ್ಲಂಘಿಸುವವರ ಫೋಟೋ ತೆಗೆದು…
ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿ ಸೋಮವಾರ 144 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಉತ್ತರ ಮತ್ತು ದಕ್ಷಿಣ ಬಂಗಾಳದ ಕ್ಷೇತ್ರಗಳಾದ್ಯಂತ ಅಭ್ಯರ್ಥಿಗಳನ್ನು ಹೆಸರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಸಭೆಯಲ್ಲಿ ಈ ಪಟ್ಟಿಯನ್ನು ಅಂತಿಮಗೊಳಿಸಲಾಯಿತು, ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಸೇರಿದಂತೆ ಹಿರಿಯ ನಾಯಕರು ಉಪಸ್ಥಿತರಿದ್ದರು. ಈ ಘೋಷಣೆಯು ರಾಜ್ಯ ಚುನಾವಣೆಗೆ ಪಕ್ಷದ ಮೊದಲ ಅಭ್ಯರ್ಥಿಗಳನ್ನು ಗುರುತಿಸುತ್ತದೆ. ಪಟ್ಟಿಯಲ್ಲಿ ಪ್ರಮುಖ ಹೆಸರುಗಳು ಬಂಗಾಳ ರಾಜಕೀಯದಲ್ಲಿ ಬಿಜೆಪಿಯ ದೊಡ್ಡ ಮುಖಗಳಲ್ಲಿ ಒಬ್ಬರಾದ ನಂದಿಗ್ರಾಮದಿಂದ ಸುವೇಂದು ಅಧಿಕಾರಿ ಸ್ಪರ್ಧಿಸಿದ್ದಾರೆ. ಅಸನ್ಸೋಲ್ ದಕ್ಷಿಣದಿಂದ ಅಗ್ನಿಮಿತ್ರ ಪಾಲ್ ಅವರನ್ನು ಹೆಸರಿಸಲಾಗಿದೆ, ಬಿಜೆಪಿ ಶಾಸಕ ಮತ್ತು ಪಕ್ಷದ ಪ್ರಮುಖ ನಾಯಕ. ನಟ-ರಾಜಕಾರಣಿಯಾಗಿ ಬದಲಾದ ರುದ್ರನೀಲ್ ಘೋಷ್ ಅವರನ್ನು ಶಿಬ್‌ಪುರದಿಂದ ಕಣಕ್ಕಿಳಿಸಲಾಗಿದೆ. ಸ್ವಾಮಿ ಮಂಗಳಾನಂದ ಪುರಿ ಮಹಾರಾಜ್ ಅವರನ್ನು ಉಲುಬೇರಿಯಾ ದಕ್ಷಿಣದಿಂದ ಕಣಕ್ಕಿಳಿಸಲಾಗಿದೆ, ಪ್ರಸಿದ್ಧ ಧಾರ್ಮಿಕ ವ್ಯಕ್ತಿ. ಚಕ್ದಾಹದಿಂದ ಬಂಕಿಮ್ ಚಂದ್ರ ಘೋಷ್, ಪ್ರಸಿದ್ಧ ಸಂಘಟನಾ ನಾಯಕ.…
ಬೆಂಗಳೂರು: ಬಾಸ್ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಬಾಸ್ ಸಿನಿಮಾಗೆ ನಟ ದರ್ಶನ್ ಪರ ವಕೀಲರಿಂದ ನೋಟಿಸ್ ನೀಡಲಾಗಿದೆ. ಅದರಲ್ಲಿ ಬಾಸ್ ಸಿನಿಮಾಗೆ ಸೆನ್ಸಾರ್ ಮಾಡಬಾರದೆಂದು ವಕೀಲರು ಸೂಚಿಸಿದ್ದಾರೆ. ಬಾಸ್ ಸಿನಿಮಾಗೆ ಸೆನ್ಸಾರ್ ಮಾಡದಂತೆ ಸೆನ್ಸಾರ್ ಮಂಡಳಿಗೆ ನಟ ದರ್ಶನ್ ಪರ ವಕೀಲರಿಂದ ನೋಟಿಸ್ ನೀಡಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಎನ್ನಲಾಗುತ್ತಿರುವ ಕಾರಣ, ಈ ನೋಟಿಸ್ ನೀಡಲಾಗಿದೆ. ಇತ್ತೀಚೆಗಷ್ಟೇ ಬಾಸ್ ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಲಾಯರ್ ನೋಟಿಸ್ ಬಗ್ಗೆ ಬಾಸ್ ಚಿತ್ರದ ನಿರ್ದೇಶಕ ಲವ ಹಾಗೂ ನಟ ತನುಷ್ ಶಿವಣ್ಣ ಮಾತನಾಡಿ, ಸಿನಿಮಾವನ್ನ ಈಗಾಗಲೇ ಸೆನ್ಸಾರ್ ಮಂಡಳಿ ನೋಡಿದೆ. ಚಿತ್ರದಲ್ಲಿನ 12 ರಿಂದ 15 ಸೀನ್ ಕತ್ತರಿಗೆ ಸೂಚಿಸಿದೆ. ಯುಎ ಸರ್ಟಿಫಿಕೇಟ್ ನೀಡಲು ಸೈನ್ ಹಾಕಿಸಿಕೊಂಡಿದ್ದಾರೆ. ನೋಟಿಸ್ ಬಂದಿದ್ದು, ಮತ್ತೆ ಪರಿಶೀಲಿಸ್ತೀವಿ ಎಂದಿದ್ದಾರೆ ಅಂತ ತಿಳಿಸಿದ್ದಾರೆ. ಲಾಯರ್ ನೋಟಿಸ್, ಬೆದರಿಕೆ ನನಗೆ ಹೊಸದೇನೂ ಅಲ್ಲ. ನಾವು ಸಹ ಕಾನೂನು ಹೋರಾಟ ಮಾಡ್ತಿವಿ ಎಂಬುದಾಗಿ ಬಾಸ್ ಚಿತ್ರ ತಂಡವು…
ಸತ್ತ ಕಾಗೆಯ ಸುತ್ತ ಇದ್ದಕ್ಕಿದ್ದಂತೆ ಕಾಗೆಗಳ ಹಿಂಡು ಜಮಾಯಿಸುವುದನ್ನು ನೋಡಿದ ಯಾರಿಗಾದರೂ, ಅದು ಯಾವುದೋ ಭಾವನಾತ್ಮಕ ಕ್ಷಣ ಅಥವಾ ಮನುಷ್ಯರ ಅಂತ್ಯಸಂಸ್ಕಾರದಂತೆ ಭಾಸವಾಗುವುದು ಸಹಜ. ಕಾಗೆಗಳು ಶವದ ಸುತ್ತ ಸುತ್ತುತ್ತವೆ, ಜೋರಾಗಿ ಕೂಗುತ್ತವೆ ಮತ್ತು ಕೆಲವೊಮ್ಮೆ ಬಹಳ ಹೊತ್ತು ಅಲ್ಲಿಯೇ ಇರುತ್ತವೆ. ನೋಡುಗರಿಗೆ ಇದು ಶೋಕದಂತೆ ಕಂಡರೂ, ವಿಜ್ಞಾನಿಗಳು ಇದರ ಹಿಂದಿನ ಸತ್ಯ ಬಹಳ ಕುತೂಹಲಕಾರಿ ಎಂದು ಹೇಳುತ್ತಾರೆ. ಸಂಶೋಧನೆಗಳ ಪ್ರಕಾರ, ಕಾಗೆಗಳ ಈ “ಅಂತ್ಯಸಂಸ್ಕಾರ”ವು ವಾಸ್ತವವಾಗಿ ಒಂದು ಅತ್ಯಂತ ಬುದ್ಧಿವಂತಿಕೆಯ ಬದುಕುಳಿಯುವ ತಂತ್ರ (Survival Strategy). ಕಾಗೆಗಳು ಅಲ್ಲಿ ದುಃಖ ಪಡುವ ಬದಲು, ಸಾವು ಹೇಗೆ ಸಂಭವಿಸಿತು ಮತ್ತು ಆ ಪ್ರದೇಶ ತಮಗೆ ಅಪಾಯಕಾರಿಯೇ ಎಂಬುದನ್ನು ಅರ್ಥಮಾಡಿಕೊಳ್ಳಲು ಅಲ್ಲಿ ಸೇರುತ್ತವೆ. ವಿಜ್ಞಾನದ ಈ ವಿಭಾಗವನ್ನು ‘ಕ್ರೋ ಥಾನಟಾಲಜಿ’ (Crow Thanatology) ಎನ್ನಲಾಗುತ್ತದೆ. ಸಂಶೋಧನೆ ಏನು ಹೇಳುತ್ತದೆ? ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಸಂಶೋಧಕಿ ಕಾಯ್ಲಿ ಸ್ವಿಫ್ಟ್ ಮತ್ತು ಅವರ ತಂಡವು ಈ ಬಗ್ಗೆ ಮಹತ್ವದ ಪ್ರಯೋಗಗಳನ್ನು ನಡೆಸಿತು. ಅವರು ಕಾಡು ಕಾಗೆಗಳ ಮುಂದೆ…
ನವದೆಹಲಿ: ಸಂಸತ್ ಅಧಿವೇಶನದಲ್ಲಿ ವಿಪಕ್ಷಗಳಿಂದ, ಅದರಲ್ಲಿಯೂ ಕಾಂಗ್ರೆಸ್ ಸದಸ್ಯರಿಂದ ಕಲಾಪಕ್ಕೆ ತೀವ್ರ ಅಡ್ಡಿ ಉಂಟಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ರಾಜ್ಯಸಭೆ ಸದಸ್ಯರೂ ಆಗಿರುವ ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೆಗೌಡರು; ಈ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ. ಸಂಸತ್ತಿನ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ವಿರೋಧ ಪಕ್ಷಗಳು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಸದಸ್ಯರು ತೋರಿಸುತ್ತಿರುವ ಅತಿರೇಕದ ವರ್ತನೆ, ಅಶಿಸ್ತಿನ ನಡವಳಿಕೆ ಬಗ್ಗೆ ಮಾಜಿ ಪ್ರಧಾನಿಗಳು ತೀವ್ರ ಆತಂಕ, ಕಳವಳ ವ್ಯಕ್ತಪಡಿಸಿದ್ದಾರೆ. ಬಜೆಟ್ ಅಧಿವೇಶನದ ವೇಳೆ ಪ್ರತಿಪಕ್ಷಗಳ ಸದಸ್ಯರು ನಿರಂತರವಾಗಿ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದು, ಅದರಲ್ಲಿಯೂ ಕಾಂಗ್ರೆಸ್ ಸಂಸದರು ಸಂಸತ್ತಿನ ಒಳಗೆ ಹಾಗೂ ಸಂಸತ್ತಿನ ಆವರಣದಲ್ಲಿ ಘೋಷಣೆ ಕೂಗುವುದು, ಫಲಕ ಪ್ರದರ್ಶನ ಮಾಡುವುದು, ನಿರ್ದಿಷ್ಟವಾಗಿ ಹೆಸರು ಕೂಗುವುದು, ಧರಣಿ ಮತ್ತು ಕಲಾಪ ಸ್ಥಗಿತ ಆಗುವಂತೆ ಮಾಡುವುದು ಮಾಡುತ್ತಿದ್ದಾರೆ. ಇದು ಸಂಸತ್ತಿನ ಘನತೆಯನ್ನು ಕುಗ್ಗಿಸುತ್ತಿದೆ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಧಕ್ಕೆ ಉಂಟು ಮಾಡುತ್ತದೆ ಎಂದು…
ಶಿವಮೊಗ್ಗ: ಸಾಗರದ ಅಧಿದೇವತೆ ಎಂದೇ ಪ್ರಸಿದ್ಧವಾಗಿರುವ ಶ್ರೀ ಮಹಾಗಣಪತಿ ದೇವರ ಜಾತ್ರಾ ಮಹೋತ್ಸವವು ಈ ವರ್ಷ ಮಾರ್ಚ್ 22ರಿಂದ ಮಾರ್ಚ್ 27ರವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಮಿಳಾ ಕುಮಾರಿ ಅವರು ತಿಳಿಸಿದ್ದಾರೆ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡಂತ ಅವರು, ಸಾಗರದ ಮಹಾಗಣಪತಿ ದೇವರ ಜಾತ್ರಾ ಮಹೋತ್ಸವವು ಮಾರ್ಚ್ 22 ರಿಂದ 27 ರವರೆಗೆ ನಡೆಯಲಿದ್ದು, ಮಾರ್ಚ್ 19 ರಂದು ಯುಗಾದಿ ಹಬ್ಬದ ದಿನದಂದೇ ಕಂಕಣ ಸ್ಥಾಪನೆಯೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ ಎಂದರು. ಸಾಗರದ ಮಹಾಗಣಪತಿ ಮಹಾರಥೋತ್ಸವ ಯಾವಾಗ? ಈ ಜಾತ್ರೆಯ ಪ್ರಮುಖ ಆಕರ್ಷಣೆಯಾದ ಮಹಾರಥೋತ್ಸವವು ಮಾರ್ಚ್.22ರಂದು ನಡೆಯಲಿದೆ. ಈ ಪುಣ್ಯ ಕಾರ್ಯಕ್ರಮಕ್ಕೆ ಜಿಲ್ಲೆ, ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದೆ ಎಂದರು. ವ್ಯವಸ್ಥಿತ ತಯಾರಿ ಜಾತ್ರೆಯನ್ನು ಅಚ್ಚುಕಟ್ಟಾಗಿ ನಡೆಸಲು ಈಗಾಗಲೇ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವ್ಯವಸ್ಥಾಪನಾ ಸಮಿತಿ ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದೆ. ಜಾತ್ರೆಯ ಸುಗಮ ನಿರ್ವಹಣೆಗಾಗಿ ವಿವಿಧ ಸಮಿತಿಗಳನ್ನು…














