Subscribe to Updates
Get the latest creative news from FooBar about art, design and business.
Author: kannadanewsnow09
ಹಾವೇರಿ : ಒಂದು ಕಡೆ ಗ್ಯಾರಂಟಿ ಕೊಡುತ್ತೇವೆ ಎಂದು ಜನರ ಕಣ್ಣೊರೆಸುವ ನಾಟಕ ಆಡುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರ; ಇನ್ನೊಂದು ಕಡೆ ಜನರಿಂದ ದರ ಏರಿಸಿ ಸುಲಿಗೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು. ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಪಟ್ಟಣದಲ್ಲಿ ಜಾತ್ಯತೀತ ಜನತಾದಳ ಕಚೇರಿಗೆ ಭೇಟಿ ನೀಡಿ ಅವರು ಮಾತನಾಡಿದರು. ಅಧಿಕಾರಕ್ಕೆ ಬಂದ ಮೇಲೆ ಒಂದಾದ ಮೇಲೆ ಒಂದರಂತೆ ಗ್ಯಾರಂಟಿಗಳನ್ನೇನೋ ರಾಜಯ ಸರಕಾರ ಕೊಟ್ಟಿದೆ. ಆದರೆ, ಗ್ಯಾರಂಟಿ ಹಣವನ್ನು ಜನರಿಂದಲೇ ವಸೂಲಿ ಮಾಡಿ ಖಜಾನೆ ತುಂಬಿಸಿಕೊಳ್ಳುತ್ತಿದೆ. ಮುದ್ರಾಂಕ ಶುಲ್ಕ, ಮಾರ್ಗದರ್ಶಿ ಮೌಲ್ಯ ಏರಿಕೆ, ಮದ್ಯದ ದರ ಏರಿಕೆ, ಬಸ್ ದರ ಏರಿಕೆ ಸೇರಿದಂತೆ ಸಿಕ್ಕ ಸಿಕ್ಕ ಕಡೆಯೆಲ್ಲಾ ಸರಕಾರ ದರ ಏರಿಕೆ ದಂಡ ಪ್ರಯೋಗ ಮಾಡುತ್ತಿದೆ. ಈಗ ಬೆಂಗಳೂರು ನಗರದ ಮೆಟ್ರೋ ರೈಲು ಪ್ರಯಾಣ ದರವನ್ನು ಜನರೇ ಬೆಚ್ಚಿ ಬೀಳುವಷ್ಟರ ಮಟ್ಟಿಗೆ ಶೇ.40ರಿಂದ 50ರಷ್ಟು ಏರಿಕೆ ಮಾಡಿದೆ ಎಂದು ಕೇಂದ್ರ ಸಚಿವರು ಕಟುವಾಗಿ ಟೀಕಿಸಿದರು. ಅಭಿವೃದ್ಧಿ ಎಂದರೆ…
ಬೆಂಗಳೂರು: ರಾಜ್ಯ ಸರಕಾರವು ಬೆಲೆ ಏರಿಕೆ, ದರ ಹೆಚ್ಚಳದ ಅಭಿಯಾನವನ್ನೇ ಕೈಗೊಂಡಿದೆ ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಟೀಕಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಹಿಂದೆ ಬಸ್ ಪ್ರಯಾಣದರ ಹೆಚ್ಚಿಸಿದ್ದರು. ಈಗ ಮೆಟ್ರೋ ಪ್ರಯಾಣ ದರ ಹೆಚ್ಚಿಸಿದ್ದಾರೆ. ಈ ರೀತಿ ಹೆಚ್ಚಳದಿಂದ ಮೆಟ್ರೋ, ಬಸ್ ಪ್ರಯಾಣ ಕೈಬಿಟ್ಟು ಸ್ವಂತ ವಾಹನದಲ್ಲಿ ಓಡಾಡಲು ಇನ್ನೂ ಹೆಚ್ಚು ಖರ್ಚಾಗಲಿದೆ ಎಂದು ವಿಶ್ಲೇಷಿಸಿದರು. ಜನರು ಅತಿ ಹೆಚ್ಚು ಅಸಹಾಯಕ ಪರಿಸ್ಥಿತಿಗೆ ಹೋಗುತ್ತಿದ್ದಾರೆ. ಈಗ ಮೆಟ್ರೋ ಪ್ರಯಾಣದರ ಎಷ್ಟು ಹೆಚ್ಚಿಸಿದ್ದಾರೆ ಎಂದರೆ, ಬೆಂಗಳೂರಿನಲ್ಲಿ 25- 30 ಕಿಮೀ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣ ಮಾಡಿದರೆ ಹಿಂದೆ 60 ರೂ. ಇತ್ತು. ಈಗ ಅದು 90 ರೂ. ಆಗಿದೆ ಎಂದು ಆಕ್ಷೇಪಿಸಿದರು. 100 ರೂ. ಇದ್ದರೆ ಈಗ 146 ರೂ. ಅಂದರೆ ಶೇ 46 ಏರಿಕೆ ಆಗಿದೆ ಎಂದು ಟೀಕಿಸಿದರು. ಟ್ರಾಫಿಕ್ ಕಡಿಮೆ ಮಾಡಲು…
ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಲು ಸುಗ್ರೀವಾಜ್ಞೆ ಜಾರಿಗೊಳಿಸುವಂತ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು. ಅದರಂತೆ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ಸಂಪುಟ ಒಪ್ಪಿಗೆ ಸೂಚಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ರಾಜ್ಯಪಾಲರು ಮಸೂದೆಯನ್ನು ವಾಪಾಸ್ ಕಳುಹಿಸಿದ್ದರು. ಹೀಗಾಗಿ ನಾಳೆ ರಾಜ್ಯ ಸರ್ಕಾರದಿಂದ ಮೈಕ್ರೋ ಫೈನಾನ್ಸ್ ಕಿರುಕುಳ ತಡೆ ಕಾಯ್ದೆಯನ್ನು ರಾಜ್ಯಪಾಲರ ಅಂಕಿತಕ್ಕೆ ಮರು ರವಾನೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದಿಂದ ರಾಜ್ಯಪಾಲರು ವಾಪಾಸ್ಸು ಕಳುಹಿಸಿದ್ದಂತ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಯ ಸುಗ್ರೀವಾಜ್ಞೆಗೆ ಎಲ್ಲಾ ಆಕ್ಷೇಪಣೆಗಳಿಗೆ ಕಾನೂನು ಇಲಾಖೆಯಿಂದ ಸೂಕ್ತ ಸ್ಪಷ್ಟೀಕರಣ ಸಿದ್ಧಪಡಿಸಲಾಗಿದೆ. ಈ ಸ್ಪಷ್ಟೀಕರಣದೊಂದಿಗೆ ನಾಳೆ ಕರ್ನಾಟಕ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಕರಡನ್ನು ಸಿಎಂ ಕಚೇರಿಯಿಂದ ರಾಜ್ಯಪಾಲರಿಗೆ ಮರು ರವಾನೆ ಮಾಡಲಾಗುತ್ತಿದೆ. ಈಗಾಗಲೇ ಸಿಎಂ ಕಚೇರಿಗೆ ಕಾನೂನು ಇಲಾಖೆಯು ಮೈಕ್ರೋ ಫೈನಾನ್ಸ್ ತಡೆ ಸುಗ್ರೀವಾಜ್ಞೆಗೆ ಸ್ಪಷ್ಟೀಕರಣ ಸಿದ್ಧಪಡಿಸಿ ಸಿದ್ಧರಾಮಯ್ಯ ಅವರ ಅವಗಾಹನೆಗೆ ಕಳುಹಿಸಲಾಗಿದೆ. ಈ ಕರಡನ್ನು ಸಿಎಂ ಕಚೇರಿಯಿಂದ ಅಂತಿಮಗೊಳಿಲಿ, ನಾಳೆ ರಾಜ್ಯಪಾಲರಿಗೆ ಕಳುಹಿಸಲಾಗುತ್ತದೆ. ಈ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕುತ್ತಾರೋ ಅಥವಾ ಮತ್ತೆ…
ಕೆಲವರು ಮಾಟ, ಮಂತ್ರ, ವಶೀಕರಣವನ್ನು ನಂಬೋದಿಲ್ಲ,ಇವತ್ತಿಗೂ ಪ್ರಪಂಚದ ಎಲ್ಲಾ ಭಾಗಗಳಲ್ಲಿ ವಾಮಾಚಾರದ ಬಗ್ಗೆ ಜನರಲ್ಲಿ ಭಯವಿದೆ,ಆದರೆ ಇನ್ನೂ ಕೆಲವರು ಇವುಗಳಲ್ಲಿ ನಂಬಿಕೆ ಇಟ್ಟಿರುತ್ತಾರೆ. ಎಲ್ಲವೂ ಅವರವರ ನಂಬಿಕೆಗೆ ಬಿಟ್ಟಿದ್ದುಮನೆ ಮುಂದೆ ನಿಂಬೆಕಾಯಿ, ಕುಂಕುಮ, ಕುಂಬಳಕಾಯಿ ಇದ್ರೆ ಇವೆಲ್ಲಾ ಮಾಟದ ಸಂಕೇತನಿಮ್ಮ ಮನೆ ಮುಂದೆ ನಿಂಬೆಕಾಯಿ, ಕುಂಕುಮ, ಕುಂಬಳಕಾಯಿ ಯಾರಾದ್ರೂ ಇಟ್ಟು ಹೋದ್ರೆ ನೋ ಡೌಟ್ ನಿಮ್ಮ ಹಾಗೂ ನಿಮ್ಮ ಮನೆ ಮೇಲೆ ಮಾಟ ಮಂತ್ರ ವಶೀಕರಣವಾಗಿದೆ ಎಂದರ್ಥ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ. ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಇಲ್ಲಿ ಪರಿಹಾರ ಶತಸಿದ್ಧ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ,…
ಮಣಿಪುರ: ಜನಾಂಗೀಯ ಹಿಂಸಾಚಾರ ಪ್ರಾರಂಭವಾದ ಸುಮಾರು ಎರಡು ವರ್ಷಗಳ ನಂತರ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಸುಮಾರು ಎರಡು ವರ್ಷಗಳ ನಂತರ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಭಾನುವಾರ ರಾಜೀನಾಮೆ ನೀಡಿದ್ದಾರೆ. ಗಲಭೆ ಪೀಡಿತ ಮಣಿಪುರದ ಪ್ರಸ್ತುತ ಬಿಜೆಪಿ ಸರ್ಕಾರವು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳಿಂದ ಅವಿಶ್ವಾಸ ನಿರ್ಣಯ ಮತ್ತು ವಿಶ್ವಾಸಮತ ಯಾಚನೆಯ ಸಾಧ್ಯತೆಯನ್ನು ಎದುರಿಸುತ್ತಿರುವ ಕಾರಣ ಮುಖ್ಯಮಂತ್ರಿ ತಮ್ಮ ರಾಜೀನಾಮೆಯನ್ನು ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರಿಗೆ ಹಸ್ತಾಂತರಿಸಿದರು. https://kannadanewsnow.com/kannada/kumbh-mela-to-begin-at-triveni-sangama-in-t-narasipur-from-tomorrow-1500-police-personnel-deployed-for-security/ https://kannadanewsnow.com/kannada/president-murmu-to-visit-prayagraj-maha-kumbh-mela-tomorrow-take-holy-dip/
ನವದೆಹಲಿ: ನಾಳೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವಂತ ಮಹಾ ಕುಂಭಮೇಳಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭೇಟಿ ನೀಡಲಿದ್ದಾರೆ. ಅಲ್ಲದೇ ಪುಣ್ಯ ಸ್ನಾನವನ್ನು ಮಾಡಲಿದ್ದಾರೆ. ಈ ಸಂಬಂಧ ರಾಷ್ಟ್ರಪತಿ ಭವನದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ 10-02-2025ರಂದು ಉತ್ತರ ಪ್ರದೇಶದ ಪ್ರಯಾಗ್ ರಾಜ್ ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭೇಟಿ ನೀಡಲಿದ್ದಾರೆ ಎಂಬುದಾಗಿ ತಿಳಿಸಿದೆ. ಮಹಾ ಕುಂಭಮೇಳದ ಪ್ರಯುಕ್ತ ಪ್ರಯಾಗ್ ರಾಜ್ ನಲ್ಲಿನ ಸಂಗಮ್ ಸ್ಥಳದಲ್ಲಿ ಪುಣ್ಯ ಸ್ನಾನ ಮಾಡಲಿದ್ದಾರೆ. ಅಕ್ಷಯವತ್, ಹನುಮ ಮಂದಿರ್ ಗೂ ಭೇಟಿ ನೀಡಲಿದ್ದಾರೆ. ಅಲ್ಲದೇ ಡಿಜಿಟಲ್ ಕುಂಭ ಅನುಭವ್ ಸೆಂಟರ್ ಗೂ ಭೇಟಿ ನೀಡಲಿದ್ದಾರೆ ಅಂತ ತಿಳಿಸಿದೆ. https://kannadanewsnow.com/kannada/kumbh-mela-to-begin-at-triveni-sangama-in-t-narasipur-from-tomorrow-1500-police-personnel-deployed-for-security/ https://kannadanewsnow.com/kannada/wife-attacked-with-jaku-by-angry-husband/
ಮೈಸೂರು: ನಾಳೆಯಿಂದ ಟಿ.ನರಸೀಪುರದ ತ್ರಿವೇಣಿ ಸಂಗಣದಲ್ಲಿ ಕುಂಭಮೇಳ ಆರಂಭಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಕುಂಭಮೇಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆಗಾಗಿ 1,500 ಪೊಲೀಸರನ್ನು ನಿಯೋಜಿಸಲಾಗಿದೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್ ಮಾದರಿಯಲ್ಲೇ ಕರ್ನಾಟಕದ ಟಿ.ನರಸೀಪುರದ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಕುಂಭಮೇಳ ನಡೆಯಲು ಅಂತಿಮ ಹಂತದ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ರಾಜ್ಯ, ಹೊರ ರಾಜ್ಯಗಳಿಂದ ಟಿ.ನರಸೀಪುರದ ಕುಂಭಮೇಳದಲ್ಲಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹೀಗಾಗಿ ಮೈಸೂರು ಜಿಲ್ಲಾಡಳಿತ, ಟಿ.ನರಸೀಪುರ ತಾಲ್ಲೂಕು ಹಾಗೂ ಪೊಲೀಸ್ ಇಲಾಖೆ ಈಗಾಗಲೇ ಎಲ್ಲಾ ಸಿದ್ಧತೆಯನ್ನು ಕೈಗೊಂಡಿದೆ. ನಾಳೆಯ ಟಿ.ನರಸೀಪುರದ ಕುಂಭಮೇಳಕ್ಕೆ ಭದ್ರತೆಗಾಗಿ ನಾಲ್ವರು ಹೆಚ್ಚುವರಿ ಎಸ್ಪಿ, ಹತ್ತು ಡಿವೈಎಸ್ಪಿ, 25 ಇನ್ಸ್ ಪೆಕ್ಟರ್, 80 ಸಬ್ ಇನ್ಸ್ ಪೆಕ್ಟರ್, 70 ಎಎಸ್ಐ, 600 ಮಂದಿ ಹೆಡ್ ಕಾನ್ ಸ್ಟೇಬಲ್, 9 ಡಿಎಆರ್ ತುಕಡಿ, 4 ಕೆ ಎಸ್ ಆರ್ ಪಿ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಅಂದಹಾಗೇ 6 ವರ್ಷಳ ಬಳಿಕ ಮೈಸೂರು ಜಿಲ್ಲೆಯ ಟಿ.ನರಸೀಪುರದ ತ್ರಿವೇಣಿ…
ಧಾರವಾಡ: ತವರು ಮನೆಗೆ ಹೋಗಿದ್ದಕ್ಕೆ ಸಿಟ್ಟಾದಂತ ಪತಿಯೊಬ್ಬ, ಆಕೆಯ ಊರಿಗೆ ತೆರಳಿ ಚಾಕುವಿನಿಂದ ಹಲ್ಲೆ ಮಾಡಿರುವಂತ ಘಟನೆ ಧಾರವಾಡದ ಗರಗದಲ್ಲಿ ನಡೆದಿದೆ. ಧಾರವಾಡದ ಬನಶ್ರೀ ನಗರದಲ್ಲಿ ರೂಪ ಹಾಗೂ ಬಸವರಾಜ ಅವ್ವಣ್ಣನವರ್ ವಾಸವಿದ್ದರು. ಪತ್ನಿಯ ಬಗ್ಗೆ ಸದಾ ಅನುಮಾನಗೊಳ್ಳುತ್ತಿದ್ದರಿಂದ ಮನೆಯನ್ನು ಬಿಟ್ಟು ಧಾರವಾಡ ತಾಲ್ಲೂಕಿನ ಗರಗ ಗ್ರಾಮದ ತವರು ಮನೆಗೆ ಪತ್ನಿ ರೂಪಾ ತೆರಳಿದ್ದರು. ಒಂದು ವಾರದಿಂದ ರೂಪ ತನ್ನ ತವರು ಮನೆಯಲ್ಲೇ ಇದ್ದಿದ್ದರಿಂದ ಸಿಟ್ಟಾದಂತ ಪತಿ ಬಸವರಾಜ ಇಂದು ಅವರ ತವರು ಮನೆಯಾದಂತ ಗರಗಕ್ಕೆ ತೆರಳಿದ್ದಾನೆ. ಪತ್ನಿ ರೂಪಾ ಜೊತೆಗೆ ಜಗಳಕ್ಕೆ ಇಳಿದಂತ ಜಗಳ ತೀವ್ರಗೊಂಡ ವೇಳೆಯಲ್ಲಿ ಪತ್ನಿಗೆ ಜಾಕುವಿನಿಂದ ಹಲ್ಲೆ ಮಾಡಿದ್ದಾನೆ. ಇದನ್ನು ಬಿಡಿಸೋದಕ್ಕೆ ಹೋದಂತ ಅತ್ತೆ ಯಲ್ಲವಮ್ಮ ಎಂಬುವರ ಮೇಲೂ ಹಲ್ಲೆ ಮಾಡಿದ್ದಾರೆ. ಬಸವರಾಜ್ ಚಾಕುವಿನಿಂದ ಮಾಡಿದಂತ ಹಲ್ಲೆಯಿಂದ ರೂಪಾ, ಯಲ್ಲವ್ವ ಗಾಯಗೊಂಡಿದ್ದಾರೆ. ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಧಾರವಾಡದ ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಕುವಿನಿಂದ ಹಲ್ಲೆ ಮಾಡಿದಂತ ಬಸವರಾಜನನ್ನು…
ಧಾರವಾಡ: ಪೋಕ್ಸೋ ಕೇಸಲ್ಲಿ ಅರೆಸ್ಟ್ ಆಗಿದ್ದಂತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕೋರ್ಟ್ ನೀಡಿತ್ತು. ಜೈಲಿಗೆ ಕರೆದೊಯ್ಯುತ್ತಿದ್ದಂತ ವೇಳೆ ಪೊಲೀಸರಿಂದ ತಪ್ಪಿಸಿಕೊಂಡ ಆರೋಪಿ ಮನೆ ಮೇಲೇರಿ ಆತ್ಮಹತ್ಯೆ ಮಾಡಿಕೊಳ್ಳೋ ಧಮ್ಕಿ ಹಾಕಿ ಹೈಡ್ರಾಮಾವನ್ನೇ ಮಾಡಿದ್ದನು. ಆದರೇ ಪೊಲೀಸರು ಮಾತ್ರ ಅಷ್ಟೇ ಜಾಣ್ಮೆ ಪ್ರದರ್ಶಿಸಿ ಆತನನ್ನು ಹಿಡಿದಿದ್ದಾರೆ. ಅದು ಹೇಗೆ ಅಂತ ಮುಂದೆ ಓದಿ. ಧಾರವಾಡದ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2021ರಲ್ಲಿ ವಿಜಯ್ ಉಣಕಲ್ ಎಂಬಾದ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು. ಆ ಬಳಿಕ ಜಾಮೀನು ಪಡೆದು ಹೊರಗಿದ್ದನು. ಆದರೇ ನಿರಂತರವಾಗಿ ಕೋರ್ಟ್ ಗೆ ಹಾಜರಾಗದ ಕಾರಣ ವಿಜಯ್ ಉಣಕಲ್ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿಗೊಳಿಸಲಾಗಿತ್ತು. ಕೋರ್ಟ್ ಆದೇಶದಿಂದಾಗಿ ವಿಜಯ್ ಉಣಕಲ್ ಅವರನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಈ ಪ್ರಕರಣದ ವಿಚಾರಣೆಯ ಬಳಿಕ ಕೋರ್ಟ್ ವಿಜಯ್ ಉಣಕಲ್ ಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಹೀಗಾಗಿ ಆರೋಪಿಯನ್ನು ಜೈಲಿಗೆ ಧಾರವಾಡ ಉಪನಗರ ಠಾಣೆಯ ಪೊಲೀಸರು ಕರೆದೊಯ್ಯುತ್ತಿದ್ದಾಗ ಕುಮಾರೇಶ್ವರ ಬಡಾವಣೆಯ ಬಳಿಯಲ್ಲಿ…
ಉತ್ತರ ಪ್ರದೇಶ: ಇಲ್ಲಿ ನಡೆಯುತ್ತಿರುವಂತ ಪ್ರಯಾಗ್ ರಾಜ್ ನಲ್ಲಿನ ಮಹಾ ಕುಂಭಮೇಳದಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಅವರ ಪತ್ನಿ ಉಷಾ ಪುಣ್ಯ ಸ್ನಾನ ಮಾಡಿದ್ದಾರೆ. ಇಂದು ಬೆಂಗಳೂರಿನಿಂದ ಕುಂಭಮೇಳಕ್ಕೆ ಆಗಮಿಸಿದ ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಅವರ ಪತ್ನಿ ಉಷಾ ಅವರನ್ನು ಉತ್ತರ ಪ್ರದೇಶ ಕೈಗಾರಿಕೆ ಸಚಿವ ನಂದಗೋಪಾಲ ಗುಪ್ತಾ ಅವರು ಪ್ರಯಾಗ್ ರಾಜ್ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಅಲ್ಲಿಂದ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ಕುಂಭಮೇಳಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಪತ್ನಿ ಉಷಾ ತೆರಳಿದರು. ಆ ಬಳಿಕ ಗಂಗಾ ನದಿಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಅವರ ಪತ್ನಿ ಉಷಾ ಪುಣ್ಯಸ್ನಾನ ಮಾಡಿದರು. https://kannadanewsnow.com/kannada/atishi-resigns-as-delhi-chief-minister/ https://kannadanewsnow.com/kannada/bengaluru-air-show-begins-cockroach-found-in-food-served-to-cops/