Subscribe to Updates
Get the latest creative news from FooBar about art, design and business.
Author: kannadanewsnow09
ಹುಬ್ಬಳ್ಳಿ: ನಗರದಲ್ಲಿ ಡಿ.22ರಂದು ನಡೆದಿದ್ದಂತ ಸಿಲಿಂಡರ್ ಸ್ಪೋಟ ಘಟನೆಯಲ್ಲಿ 9 ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಇವರಲ್ಲಿ ಈಗಾಗಲೇ ಇಬ್ಬರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಶುಕ್ರವಾರದಂದು ಮತ್ತಿಬ್ಬರು ಅಯ್ಯಪ್ಪ ಮಾಲಾಧಾರಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಹುಬ್ಬಳ್ಳಿಯ ಸಾಯಿ ನಗರದ ಈಶ್ವರದೇವಸ್ಥಾನದಲ್ಲಿ ಅಡುಗೆ ಮಾಡುತ್ತಿದ್ದಂತ ಸಂದರ್ಭದಲ್ಲಿ ಡಿಸೆಂಬರ್.22ರಂದು ಸಿಲಿಂಡರ್ ಸ್ಪೋಟಗೊಂಡು 9 ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದರು. ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಇವರಲ್ಲಿ ಈಗಾಗಲೇ ಇಬ್ಬರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಶುಕ್ರವಾರದಂದು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಅಯ್ಯಪ್ಪ ಮಾಲಾಧಾರಿ ರಾಜು ಅರ್ಲಾಪೂರ ಹಾಗೂ ಲಿಂಗರಾಜು ಬೀರನೂರು(19) ಎಂಬುವರು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಹೀಗಾಗಿ ಮೃತರ ಸಂಖ್ಯೆ 4ಕ್ಕೆ ಏರಿಕೆಯಾದಂತೆ ಆಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಇನ್ನೂ ಐವರು ಗಾಯಾಳು ಮಾಲಾಧಾರಿಗಳಿಗೆ ಚಿಕಿತ್ಸೆ ಮುಂದುವರೆದಿದೆ. ಅಂದಹಾಗೇ ಈಗಾಗಲೇ ಮೃತ ಅಯ್ಯಪ್ಪ ಮಾಲಾಧಾರಿಗಳ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ಪರಿಹಾರವನ್ನು…
ಕಲಬುರ್ಗಿ: ಅತ್ತೆ ಸೊಸೆಯರು ತಾಯಿ ಮಗಳಿದ್ದಂತೆ ಇರಬೇಕು. ಹಾಗೆ ಇದ್ದಾಗ ಮಾತ್ರ ಸಂಸಾರ ಚೆಂದವಾಗಿರುತ್ತದೆ ಅಂತ ಹಿರಿಯರು ಬುದ್ಧಿ ಹೇಳುತ್ತಾರೆ. ಆದರೇ ಇಲ್ಲೊಬ್ಬ ಸೊಸೆ ಮಾತ್ರ ನಮ್ಮ ಅತ್ತೆ ಬೇಗ ಸಾಯಬೇಕು ಅಂತ ದೇವಿಗೆ ನೋಟಿನಲ್ಲಿ ಹರಕೆ ಬರೆದು, ತೀರಿಸುವಂತೆ ಕೋರಿರೋದು ವೈರಲ್ ಆಗಿದೆ. ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಘತ್ತರಗಿ ಗ್ರಾಮದಲ್ಲಿರುವಂತ ಭಾಗ್ಯವಂತಿ ದೇವಿ ತುಂಬಾನೇ ಪ್ರಸಿದ್ಧ ದೇವಸ್ಥಾನ. ಈ ದೇವಾಲಯಕ್ಕೆ ಹಲವೆಡೆಯಿಂದ ಭಕ್ತರು ಆಗಮಿಸಿ ತಮ್ಮ ಹರಕೆಯನ್ನು ತೀರಿಸುವಂತೆ ಭಾಗ್ಯವಂತಿ ದೇವಿಯನ್ನು ಕೋರೋದು ರೂಢಿ. ಈ ದೇವಸ್ಥಾನಕ್ಕೆ ಬಂದಿರುವಂತ ಸೊಸೆಯೊಬ್ಬರು 20 ರೂಪಾಯಿಯ ನೋಟಿನ ಮೇಲೆ ತಾಯಿ ನಮ್ಮ ಅತ್ತೆ ಬೇಗ ಸಾಯಲಿ ತಾಯಿ ಅಂತ ಹರಕೆ ಬರೆದು ಹಾಕಿರೋದು ದೇವಸ್ಥಾನದ ಹುಂಡಿಯನ್ನು ತೆರೆದು ಕಾಣಿಕೆ ಏಣಿಸುವಂತ ಸಂದರ್ಭದಲ್ಲಿ ಪತ್ತೆಯಾಗಿದೆ. 20 ರೂಪಾಯಿ ನೋಟಿನ ಮೇಲೆ ಅತ್ತೆಯ ಬಗ್ಗೆ ಸೊಸೆ ಬರೆದಿರುವಂತ ಬರಹ ಕಂಡಂತ ದೇವಸ್ಥಾನದವರು ಅಚ್ಚರಿ ಪಟ್ಟಿದ್ದಾರೆ. ಈಗ ಈ ಪೋಟೋ ಎಲ್ಲೆಡೆ ವೈರಲ್ ಆಗಿದೆ. ಹೀಗೆ…
ನವದೆಹಲಿ: ನಮ್ಮನ್ನು ಅಗಲಿದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಅಂತಿಮ ನಮನ ಸಲ್ಲಿಸಿದರು. ಸಂಸತ್ ಅಧಿವೇಶನ ಮುಗಿದ ನಂತರ ತಮ್ಮ ಲೋಕಸಭೆ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಸಚಿವರು; ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಶುಕ್ರವಾರ ಬೆಳ ಬೆಳಗ್ಗೆಯೇ ನವದೆಹಲಿಗೆ ವಾಪಸ್ಸಾದರು. ವಿಮಾನ ನಿಲ್ದಾಣದಿಂದ ನೇರವಾಗಿ ಮನಮೋಹನ್ ಸಿಂಗ್ ಅವರ ನಿವಾಸಕ್ಕೆ ಆಗಮಿಸಿದ ಸಚಿವರು; ಅಗಲಿದ ಮಾಜಿ ಪ್ರಧಾನಿಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು ಹಾಗೂ ದೇಶಕ್ಕೆ ಅವರು ನೀಡಿರುವ ಕೊಡುಗೆಯನ್ನು ಸ್ಮರಿಸಿದರು. ದೇಶದ ಅಭಿವೃದ್ಧಿಗೆ ಮನಮೋಹನ್ ಸಿಂಗ್ ಅವರು ಮಹಾನ್ ಕೊಡುಗೆ ನೀಡಿದ್ದಾರೆ. ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದ ದೇಶವನ್ನು ಆರ್ಥಿಕ ಅಪಾಯದಿಂದ ಪಾರು ಮಾಡಿದ್ದರು. ಆರ್ಥಿಕ ಸಚಿವರಾಗಿ, ಪ್ರಧಾನಿಯಾಗಿ ಹಾಗೂ ಹಣಕಾಸು ತಜ್ಞರಾಗಿ ಅವರು ದೇಶಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಕೇಂದ್ರ ಸಚಿವರು ಸ್ಮರಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರು ಮನಮೋಹನ್ ಸಿಂಗ್ ಅವರ ಕುಟುಂಬ ಸದಸ್ಯರಿಗೆ…
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಜನತೆ ಹೊಸ ವರ್ಷಾಚರಣೆಗೆ ಸಿದ್ದರಾಗಿದ್ದಾರೆ. ಇವರ ಅನುಕೂಲಕ್ಕಾಗಿ ಬಿ ಎರ್ ಆರ್ ಸಿ ಎಲ್ ಡಿಸೆಂಬರ್.31ರಂದು ತಡರಾತ್ರಿ 2.40ರವರೆಗೆ ನಮ್ಮ ಮೆಟ್ರೋ ರೈಲು ಸಂಚಾರವನ್ನು ವಿಸ್ತರಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಜನತೆ ಹೊಸ ವರ್ಷಾಚರಣೆಗೆ ಸಿದ್ದರಾಗಿದ್ದಾರೆ. ಇವರ ಅನುಕೂಲಕ್ಕಾಗಿ ಬಿ ಎರ್ ಆರ್ ಸಿ ಎಲ್ ಡಿಸೆಂಬರ್.31ರಂದು ತಡರಾತ್ರಿ 2.40ರವರೆಗೆ ನಮ್ಮ ಮೆಟ್ರೋ ರೈಲು ಸಂಚಾರವನ್ನು ವಿಸ್ತರಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನಲೆಯಲ್ಲಿ ನಮ್ಮ ಮೆಟ್ರೋ ರೈಲು ಸಂಚಾರದ ಅವಧಿಯನ್ನು ಜನವರಿ.1ರ ಮುಂಜಾನೆ 2.40ರವರೆಗೆ ವಿಸ್ತರಿಸಲಾಗಿದೆ. ಎಲ್ಲಾ ಟರ್ಮಿನಲ್ ಗಳಿಂದ ಮಧ್ಯರಾತ್ರಿ 2 ಗಂಟೆಗೆ ಹಾಗೂ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ 2.40ಕ್ಕೆ ಕೊನೆಯ ರೈಲು ಸಂಚರಿಸಲಿದೆ ಅಂತ ತಿಳಿಸಿದೆ. ಡಿಸೆಂಬರ್.31ರಂದು ರಾತ್ರಿ 11 ಗಂಟೆಯಿಂದ ಪ್ರತಿ 10 ನಿಮಿಷಕ್ಕೊಂದು ಮೆಟ್ರೋ ರೈಲು ಸಂಚರಿಸಲಿದ್ದಾವೆ. ಹೊಸ ವರ್ಷಾಚರಣೆಗಾಗಿ ಎಂ.ಜಿ ರಸ್ತೆಗೆ…
ಬೆಂಗಳೂರು: ಬಿಜೆಪಿ ಶಾಸಕ ಹೆಚ್ಐವಿ ಪೀಡಿತರ ಬಳಸಿ ವಿರೋಧಿಗಳಿಗೆ ಏಡ್ಸ್ ಹರಡಲು ಯತ್ನಿಸಿದ್ದು ನಿಜ. ನಿರಂತರ ಅತ್ಯಾಚಾರ, ಅಪಾಯಕಾರಿ ರೋಗ ಹರಡುವಿಕೆ ಸೆಕ್ಷನ್ ಅಡಿ ಕೇಸ್ ದಾಖಲಿಸಿರುವಂತ ಎಸ್ಐಟಿ, ಜನಪ್ರತಿನಿಧಿಗಳ ನ್ಯಾಯಾಲಕ್ಕೆ ಚಾರ್ಜ್ ಶೀಟ್ ಕೂಡ ಸಲ್ಲಿಸಿದೆ. ಹೀಗಾಗಿ ಶಾಸಕ ಮುನಿರತ್ನಗೆ ಮತ್ತೊಂದು ಸಂಕಷ್ಟ ಎದುರಾದಂತೆ ಆಗಿದೆ. ಈ ಸಂಬಂಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿರುವಂತ ಎಸ್ಐಟಿ ಅಧಿಕಾರಿಗಳು, ಅದರಲ್ಲಿ ಐಪಿಸಿ 270ರ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಇನ್ನೂ ಐಪಿಸಿ 354ಎ ಲೈಂಕಿಕ ಕಿರುಕುಳ, 354ಸಿ ಅನುಮತಿ ಇಲ್ಲದೇ ಮಹಿಳೆಯ ಅಶ್ಲೀಲ ದೃಶ್ಯಾವಳಿ ಚಿತ್ರೀಕರಣ, 376(2) ಎನ್ ನಿರಂತರ ಅತ್ಯಾಚಾರ, 308 ಸಂತ್ರಸ್ತೆಯ ಕೊಲ್ಲುವ ಉದ್ದೇಶ, 120ಬಿ ಅಪರಾಧಿಕ ಸಂಚು, 504 ಉದ್ದೇಶ ಪೂರ್ವಕ ಅವಮಾನ, 506 ಜೀವ ಬೆದರಿಕೆ, 270 ಅಪಾಯಕಾರಿ ರೋಗ ಹರಡುವಿಕೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಸೇರಿದಂತೆ ಇತರೆ ಕಾಯ್ದೆಗಳ ಅಡಿಯಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಿದೆ. ಅಂದಹಾಗೇ ಸೆಪ್ಟೆಂಬರ್ ನಲ್ಲಿ ಬಿಜೆಪಿ…
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಶುಕ್ರವಾರದಂದು ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಸಿ.ಎಸ್ ಷಡಕ್ಷರಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಕುರಿತಂತೆ ರಾಜ್ಯ ಚುನಾವಣಾಧಿಕಾರಿ ಎ.ಹನುಮನರಸಯ್ಯ ಅವರು ಅಧಿಕೃತ ಘೋಷಣೆ ಮಾಡಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರದಂದು ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಬಿ.ಪಿ ಕೃಷ್ಣೇಗೌಡ ಹಾಗೂ ಸಿ.ಎಸ್ ಷಡಕ್ಷರಿ ಅವರು ಕಣದಲ್ಲಿದ್ದರು ಅಂತ ತಿಳಿಸಿದ್ದಾರೆ. ಶುಕ್ರವಾರದಂದು ನಡೆದಂತ ಸಂಘದ ರಾಜ್ಯಾಧ್ಯಕ್ಷ ಸ್ಥಾನದ 2024-2029ನೇ ಅವಧಿಯ ಚುನಾವಣೆಯಲ್ಲಿ ಸಿಎಸ್ ಷಡಕ್ಷರಿಯವರು 507 ಮತಗಳನ್ನು ಗಳಿಸಿ ಪ್ರತಿ ಸ್ಪರ್ಧಿ ಬಿ.ಪಿ ಕೃಷ್ಣೇಗೌಡ ವಿರುದ್ಧ ಗೆಲುವು ಸಾಧಿಸಿರುವುದಾಗಿ ಘೋಷಿಸಿದ್ದಾರೆ. ಇನ್ನೂ ರಾಜ್ಯ ಖಜಾಂಚಿ ಸ್ಥಾನಕ್ಕೆ ನಡೆದಂತ ಚುನಾವಣೆಯಲ್ಲಿ ಶಿವರುದ್ರಯ್ಯ ವಿ.ವಿ ಅವರು 485 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ನಾಗರಾಜ ಆರ್ ಜುಮ್ಮನ್ನವರ 467 ಮತಗಳಿಂದ ಸೋಲು ಕಂಡಿರುವುದಾಗಿ ತಿಳಿಸಿದ್ದಾರೆ.
ನವದೆಹಲಿ: ಪೈಲಟ್ಗಳ ತರಬೇತಿಯಲ್ಲಿ ಲೋಪ ಎಸಗಿದ ಆರೋಪದ ಮೇಲೆ ಅಕಾಸಾ ಏರ್ನ ಕಾರ್ಯಾಚರಣೆ ನಿರ್ದೇಶಕರು ಮತ್ತು ತರಬೇತಿ ನಿರ್ದೇಶಕರನ್ನು ಆರು ತಿಂಗಳ ಕಾಲ ಅಮಾನತುಗೊಳಿಸುವಂತೆ ವಾಯುಯಾನ ಸುರಕ್ಷತಾ ನಿಯಂತ್ರಕ ಡಿಜಿಸಿಎ ಶುಕ್ರವಾರ ಆದೇಶಿಸಿದೆ. ರಾಕೇಶ್ ಜುಂಜುನ್ವಾಲಾ ಕುಟುಂಬವು ಪಾಲನ್ನು ಹೊಂದಿರುವ ವಿಮಾನಯಾನದ ಇಬ್ಬರು ಹಿರಿಯ ಕಾರ್ಯನಿರ್ವಾಹಕರು ನಾಗರಿಕ ವಿಮಾನಯಾನ ಅವಶ್ಯಕತೆಗಳಿಗೆ “ಅನುಸರಣೆಯನ್ನು” ಖಚಿತಪಡಿಸಿಕೊಳ್ಳಲು ವಿಫಲರಾಗಿದ್ದಾರೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಡಿಸೆಂಬರ್ 27 ರ ಎರಡು ಪ್ರತ್ಯೇಕ ಆದೇಶಗಳಲ್ಲಿ ತಿಳಿಸಿದೆ. ಅಕ್ಟೋಬರ್ 15 ಮತ್ತು ಅಕ್ಟೋಬರ್ 30 ರಂದು ಕ್ರಮವಾಗಿ ಶೋಕಾಸ್ ನೋಟಿಸ್ಗಳಿಗೆ ನೀಡಿದ ಉತ್ತರಗಳು “ಅತೃಪ್ತಿಕರ” ಎಂದು ಡಿಜಿಸಿಎ ಕಂಡುಕೊಂಡ ನಂತರ ಅಕಾಸಾ ಏರ್ ಕಾರ್ಯಾಚರಣೆಗಳ ನಿರ್ದೇಶಕರು ಮತ್ತು ತರಬೇತಿ ನಿರ್ದೇಶಕರನ್ನು ಅಮಾನತುಗೊಳಿಸಲಾಗಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯವು ತನ್ನ ಆದೇಶದಲ್ಲಿ, ಎರಡು ಹುದ್ದೆಗಳಿಗೆ “ಸೂಕ್ತ” ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡುವಂತೆ ವಿಮಾನಯಾನ ಸಂಸ್ಥೆಗೆ ಸಲಹೆ ನೀಡಿದೆ. ಅಕಾಸಾ ಏರ್ ಹೇಳಿಕೆಯಲ್ಲಿ, “ಅಕಾಸಾ ಏರ್ 2024 ರ ಡಿಸೆಂಬರ್ 27 ರಂದು…
ಬೆಂಗಳೂರು: ನಗರದಲ್ಲಿ ಡಿಸೆಂಬರ್.31ರಂದು ಮುಂಜಾನೆ 2.40ರವರೆಗೆ ನಮ್ಮ ಮೆಟ್ರೋ ಸಂಚಾರದ ( Namma Metro Train Service ) ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಮೂಲಕ ಹೊಸ ವರ್ಷಾಚರಣೆಯಲ್ಲಿ ತೊಡಗೋರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ( Bangalore Metro Rail Corporation Limited-BMRCL ) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 2025ರ ಹೊಸ ವರ್ಷದ ಮುನ್ನಾದಿನದಂದು ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ವಿಸ್ತರಿಸುತ್ತಿದೆ. ಕೊನೆಯ ರೈಲು ಜನವರಿ 1, 2025 ರಂದು ಮುಂಜಾನೆ 02:00 ಗಂಟೆಗೆ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಹೊರಡಲಿದ್ದು, ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ (ಮೆಜೆಸ್ಟಿಕ್)ನಿಂದ ಕೊನೆಯ ರೈಲು ಎಲ್ಲಾ ನಾಲ್ಕು ದಿಕ್ಕುಗಳಿಗೆ ಮುಂಜಾನೆ 2:40 ಗಂಟೆಗೆ ಹೊರಡುತ್ತವೆ ಎಂದಿದೆ. ರೈಲುಗಳು 31 ಡಿಸೆಂಬರ್ 2024ರ ರಾತ್ರಿ 11.00 ರಿಂದ ದಿನದ ವಿಸ್ತೃತ ಸೇವಾ ಅವಧಿಯವರೆಗೆ 10 ನಿಮಿಷಗಳ ಮಧ್ಯಂತರದಲ್ಲಿ ಕಾರ್ಯನಿರ್ವಹಿಸುತ್ತವೆ. ಆದಾಗ್ಯೂ, ಎಂ.ಜಿ ರಸ್ತೆಯಲ್ಲಿ…
ನವದೆಹಲಿ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನಕ್ಕೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ಸಂತಾಪ ಸೂಚಿಸಿದ್ದು, ಅವರನ್ನು ಶ್ರೇಷ್ಠ ರಾಜನೀತಿಜ್ಞ, ಪ್ರಸಿದ್ಧ ಅರ್ಥಶಾಸ್ತ್ರಜ್ಞ ಮತ್ತು ಭಾರತದ ರಾಷ್ಟ್ರೀಯ ಜೀವನವನ್ನು ಆಳವಾಗಿ ರೂಪಿಸಿದ ಕೊಡುಗೆಗಳನ್ನು ನೀಡಿದ ಪ್ರಖ್ಯಾತ ನಾಯಕ ಎಂದು ಬಣ್ಣಿಸಿದೆ. ಅಲ್ಲದೇ ಇಂದು ಕೇಂದ್ರ ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆಯನ್ನು ಘೋಷಣೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ಯಾಬಿನೆಟ್ ಡಾ.ಸಿಂಗ್ ಅವರನ್ನು ಗೌರವಿಸಲು ಎರಡು ನಿಮಿಷಗಳ ಮೌನ ಆಚರಿಸಿತು ಮತ್ತು ಅವರ ಸ್ಮರಣಾರ್ಥ ಸಂತಾಪ ನಿರ್ಣಯವನ್ನು ಅಂಗೀಕರಿಸಿತು ಎಂದು ಪಿಟಿಐ ವರದಿ ಮಾಡಿದೆ. ಡಾ.ಮನಮೋಹನ್ ಸಿಂಗ್ ಅವರು ನಮ್ಮ ರಾಷ್ಟ್ರೀಯ ಜೀವನದ ಮೇಲೆ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಅವರ ನಿಧನದಿಂದ ರಾಷ್ಟ್ರವು ದೂರದೃಷ್ಟಿಯ ನಾಯಕನನ್ನು ಕಳೆದುಕೊಂಡಿದೆ ಎಂದು ನಿರ್ಣಯವು ತೀವ್ರ ದುಃಖವನ್ನು ವ್ಯಕ್ತಪಡಿಸಿದೆ ಮತ್ತು ಸರ್ಕಾರ ಮತ್ತು ರಾಷ್ಟ್ರದ ಪರವಾಗಿ ಅವರ ದುಃಖಿತ ಕುಟುಂಬಕ್ಕೆ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸಿದೆ. ಗೌರವದ ಸಂಕೇತವಾಗಿ, ಸರ್ಕಾರವು…
ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ಡಿಸೆಂಬರ್ 28ರ ಇಂದು ಬೆಳಿಗ್ಗೆ 11:45 ಕ್ಕೆ ದೆಹಲಿಯ ನಿಗಮ್ಬೋಧ್ ಘಾಟ್ ಚಿತಾಗಾರದಲ್ಲಿ ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಮನಮೋಹನ್ ಸಿಂಗ್ ಅವರ ಅಂತ್ಯಸಂಸ್ಕಾರವನ್ನು ಸರ್ಕಾರಿ ಮಟ್ಟದಲ್ಲಿ ನಡೆಸಲು ಸರ್ಕಾರ ನಿರ್ಧರಿಸಿದೆ. ಅಂತ್ಯಕ್ರಿಯೆಯು ಡಿಸೆಂಬರ್ 28, 2024 ರಂದು ಬೆಳಿಗ್ಗೆ 11:45 ಕ್ಕೆ ನವದೆಹಲಿಯ ನಿಗಮ್ಬೋಧ್ ಘಾಟ್ನಲ್ಲಿ ನಡೆಯಲಿದೆ ಎಂದು ಗೃಹ ಸಚಿವಾಲಯ (ಎಂಎಚ್ಎ) ಹೇಳಿಕೆಯಲ್ಲಿ ತಿಳಿಸಿದೆ. ಸಿಂಗ್ ಡಿಸೆಂಬರ್ 26 ರಂದು ತಮ್ಮ 92 ನೇ ವಯಸ್ಸಿನಲ್ಲಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಲ್ಲಿ ನಿಧನರಾದರು. ಸಂಪೂರ್ಣ ಮಿಲಿಟರಿ ಗೌರವಗಳೊಂದಿಗೆ ಮಾಜಿ ಪ್ರಧಾನಿ ರಾಜ್ಯ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡುವಂತೆ ರಕ್ಷಣಾ ಸಚಿವಾಲಯವನ್ನು ಕೋರಲಾಗಿದೆ ಎಂದು ಎಂಎಚ್ಎ ತಿಳಿಸಿದೆ. https://twitter.com/ANI/status/1872650677467697286 ಹೀಗಿದೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜೀವನ ಚಿತ್ರಣ ಅವಿಭಜಿತ ಭಾರತದ ಪಶ್ಚಿಮ ಪಂಜಾಬ್ನ ಗಾಹ್ ಗ್ರಾಮದಲ್ಲಿ ಸೆಪ್ಟೆಂಬರ್ 26, 1932 ರಂದು ಜನಿಸಿದ…