Subscribe to Updates
Get the latest creative news from FooBar about art, design and business.
Author: kannadanewsnow09
ಮುಂಬೈ : ರಿಲಯನ್ಸ್ ರೀಟೇಲ್ ನಿಂದ ಶುಕ್ರವಾರ ಘೋಷಣೆ ಮಾಡಿರುವಂತೆ, ಕೆಲ್ವಿನೇಟರ್ ಸ್ವಾಧೀನ ಮಾಡಿಕೊಳ್ಳಲಾಗಿದೆ. ಭಾರತದಲ್ಲಿ ಬಹಳ ವೇಗವಾಗಿ ಬೆಳೆಯುತ್ತಿರುವ ಎಫ್ಎಂಸಿಜಿ ವಲಯದಲ್ಲಿ ತನ್ನ ನಾಯಕತ್ವ ವ್ಯಾಪಿಸಿಕೊಳ್ಳುವುದಕ್ಕೆ ಸಿದ್ಧವಾಗಿರುವ ರಿಲಯನ್ಸ್ ರೀಟೇಲ್ ಗೆ ಇದು ಕಾರ್ಯತಂತ್ರ ಕ್ರಮವಾಗಿ, ಮಹತ್ವದ ಮೈಲುಗಲ್ಲಾಗಿದೆ. ಈ ಸ್ವಾಧೀನದ ಬೆಳವಣಿಗೆಯು ದೇಶದಾದ್ಯಂತ ಗ್ರಾಹಕರಿಗೆ ಸಾಟಿಯಿಲ್ಲದ ಮೌಲ್ಯ ಮತ್ತು ಆಯ್ಕೆಯನ್ನು ದೊರಕಿಸುವ ಮೂಲಕ ಭಾರತದಲ್ಲಿ ಎಫ್ಎಂಸಿಜಿ ವಲಯದ ಭವಿಷ್ಯವನ್ನು ರೂಪಿಸುವಲ್ಲಿ ಕಂಪನಿಯ ಬಲವಾದ ಬದ್ಧತೆಗೆ ಸಾಕ್ಷಿಯಾಗಿದೆ. ನೂರು ವರ್ಷಕ್ಕೂ ಹೆಚ್ಚು ಸಮಯದಿಂದ ನಂಬಿಕೆ ಮತ್ತು ನಾವೀನ್ಯತೆಗೆ ಸಮಾನಾರ್ಥಕ ಪದವಾದ ಬ್ರ್ಯಾಂಡ್ ಆಗಿರುವ ಕೆಲ್ವಿನೇಟರ್, ಮನೆ ಬಳಕೆಗಾಗಿ ವಿದ್ಯುತ್ ರೆಫ್ರಿಜರೇಟರ್ ಅನ್ನು ತಯಾರಿಸುವುದರಲ್ಲಿ ಜಾಗತಿಕವಾಗಿ ಮುಂಚೂಣಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಭಾರತದಲ್ಲಿ, ಇದು 1970 ಮತ್ತು 1980 ರ ದಶಕಗಳಲ್ಲಿ “ದಿ ಕೂಲೆಸ್ಟ್ ಒನ್” ಎಂಬ ತನ್ನ ಮನೆಮಾತಾದ ಟ್ಯಾಗ್ಲೈನ್ನೊಂದಿಗೆ ಐಕಾನಿಕ್ ಸ್ಥಾನವನ್ನು ಪಡೆಯಿತು ಮತ್ತು ಅದರ ಅತ್ಯಾಧುನಿಕ ತಂತ್ರಜ್ಞಾನ, ಉತ್ತಮ ಕಾರ್ಯಕ್ಷಮತೆ, ಶಾಶ್ವತ ಗುಣಮಟ್ಟ ಮತ್ತು ಅಸಾಧಾರಣ ಮೌಲ್ಯಕ್ಕಾಗಿ ಇಂದಿಗೂ…
ಬೆಂಗಳೂರು : ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ‘ಮನೆ-ಮನೆಗೆ ಪೊಲೀಸ್’ ವಿನೂತನ ಕಾರ್ಯಕ್ರಮಕ್ಕೆ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಬೆಂಗಳೂರಿನ ಗೋವಿಂದರಾಜನಗರದಲ್ಲಿ ಚಾಲನೆ ನೀಡಿದರು. ಪೊಲೀಸ್ ಇಲಾಖೆ ಹೊರತಂದಿರುವ ‘ಮನೆ ಮನೆಗೆ ಪೊಲೀಸ್’ ಕೈಪಿಡಿಯನ್ನು ಬಿಡುಗಡೆ ಮಾಡಿ, ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ದೇಶದಲ್ಲಿ ಪ್ರಥಮ ಬಾರಿಗೆ ಮನೆ ಮನೆಗೆ ಪೊಲೀಸ್ ವಿನೂತನ ಕಾರ್ಯಕ್ರಮ ಮಾಡಲಾಗುತ್ತಿದೆ. ಬೇರೆ ಯಾವ ರಾಜ್ಯದಲ್ಲಿಯೂ ಸಹ ಇಂತಹ ಕಾರ್ಯಕ್ರಮ ಮಾಡಿಲ್ಲ. ಇದರ ಯಶಸ್ವಿ ದೇಶವ್ಯಾಪ್ತಿ ಆಗುತ್ತದೆ ಎಂದು ಹೇಳಿದರು. ನಮ್ಮ ಪೊಲೀಸರು ಜನಸ್ನೇಹಿಯಾಗಬೇಕು. ಸಹೋದರತ್ವದ ಭಾವನೆಯಿಂದ ಪೊಲೀಸರನ್ನು ನೋಡಬೇಕು. ಈ ನಿಟ್ಟಿನಲ್ಲಿ ನಾವೇ ಜನರ ಮನೆ ಬಾಗಿಲಿಗೆ ಹೋಗೋಣ. ಅವರ ಕಷ್ಟಗಳನ್ನು ಆಲಿಸಿ, ಪರಿಹರಿಸಿದರೆ ಒಳ್ಳೆಯ ಅಭಿಪ್ರಾಯ ಮೂಡುತ್ತದೆ ಎಂದರು. ನಮ್ಮ ಪೊಲೀಸರು ದಿನನಿತ್ಯ ಬೀಟ್ ಹೋಗುತ್ತಾರೆ. ಯಾವ ಮನೆಗೆ ಯಾರು ಬಂದಿದ್ದಾರೆ, ಏನು ಕೆಲಸ ಮಾಡುತ್ತಾರೆ, ಯಾವ ಸಮಸ್ಯೆಗಳಿವೆ ಎಂಬ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಈ ಎಲ್ಲ ಡೇಟಾ ಬೆಂಗಳೂರು ಪೊಲಿಸಿರ…
ಬೆಂಗಳೂರು: ರಾಜ್ಯದ ರೈತರಿಗೆ ಮಹತ್ವದ ಮಾಹಿತಿ ಎನ್ನುವಂತೆ ಈಗ ಜಮೀನಿನ ದಾಖಲೆಗು ಕುಳಿತಲ್ಲೇ ಆನ್ ಲೈನ್ ನಲ್ಲೇ ಲಭ್ಯವಾಗುವಂತೆ ಸರ್ಕಾರ ವ್ಯವಸ್ಥೆ ಮಾಡಿದೆ. ಈ ಬಗ್ಗೆ ಕಂದಾಯ ಇಲಾಖೆಯಿಂದ ಮಾಹಿತಿ ನೀಡಿದ್ದು, ಈಗ ನಿಮ್ಮ ಮನೆಯಿಂದಲೇ ದಾಖಲೆಗಳನ್ನು ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ. ಎ ಮತ್ತು ಬಿ ವರ್ಗದ ಎಲ್ಲಾ ಪ್ರಮುಖ ಪ್ರಮಾಣೀಕೃತ ದಾಖಲೆಗಳು ಈಗ ನಮ್ಮ ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಲಭ್ಯವಿದೆ ಎಂದಿದೆ. ನಿಮ್ಮ ಜಮೀನಿನ ದಾಖಲೆ ಪಡೆಯಲು ಜಸ್ಟ್ ಹೀಗೆ ಮಾಡಿ ರಾಜ್ಯದ ರೈತರು ತಮ್ಮ ಎ, ಬಿ ವರ್ಗದ ಜಮೀನಿನ ದಾಖಲೆಯನ್ನು ಆನ್ ಲೈನ್ ಮೂಲಕ ಡೌನ್ ಲೋಡ್ ಮಾಡಲು https://recordroom.karnataka.gov.in/service4 ಲಿಂಕ್ ಕ್ಲಿಕ್ ಮಾಡಿ. ಇಲ್ಲಿ ಕೇಳುವಂತೆ ಮಾಹಿತಿ ದಾಖಲಿಸಿದರೇ, ನಿಮ್ಮ ಭೂಮಿಯ ದಾಖಲೆಗಳು ಕುಳಿತಲ್ಲೇ ಲಭ್ಯವಾಗಲಿದೆ. ಇನ್ನೂ ಇಂದಿನಿಂದ, ನೀವು ನಮ್ಮ ಯಾವುದೇ ನಾಡಕಚೇರಿ AJSK ಕೇಂದ್ರಗಳಲ್ಲಿ ಪ್ರಮಾಣೀಕೃತ ಪ್ರತಿಗಳಿಗಾಗಿ ಅರ್ಜಿ ಸಲ್ಲಿಸಬಹುದು. ನಿಮ್ಮ ಬೆರಳ ತುದಿಯಲ್ಲಿ ಅಗತ್ಯ ಸರ್ಕಾರಿ ಸೇವೆಗಳನ್ನು ಪ್ರವೇಶಿಸಿ – ಮಧ್ಯವರ್ತಿಗಳಿಗೆ…
ಬೆಂಗಳೂರು : ಇಡೀ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಘವನ್ನು ಕಡ್ಡಾಯವಾಗಿ ರಚನೆ ಮಾಡಲು ಆದೇಶ ಹೊರಡಿಸಿ. ಈ ಸಂಘಗಳಿಂದ ಸರ್ಕಾರಿ ಶಾಲೆಗಳಿಗೆ ಶಕ್ತಿ ತುಂಬುವ ಕೆಲಸ ಆಗುತ್ತದೆ. ಇದಕ್ಕೆ ಅಗತ್ಯ ಮಾರ್ಗದರ್ಶನ ನೀಡುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸಲಹೆ ನೀಡಿದರು. ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಹೊಂಗನೂರಿನಲ್ಲಿ ಡಾ. ವೆಂಕಟಪ್ಪ ಅವರು ತಮ್ಮ ಕಣ್ವ ಫೌಂಡೇಶನ್ ನಿಂದ ನಿರ್ಮಿಸಿರುವ ಶ್ರೀಮತಿ ಚನ್ನಮ್ಮ ಮಂಚೇಗೌಡ ಕರ್ನಾಟಕ ಪಬ್ಲಿಕ್ ಶಾಲೆ ನೂತನ ಕಟ್ಟಡವನ್ನು ಶಿವಕುಮಾರ್ ಅವರು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. “ಸರ್ಕಾರಿ ಶಾಲೆಯಲ್ಲಿ ಓದಿ ದೊಡ್ಡ ಮಟ್ಟಕ್ಕೆ ಬೆಳೆದಿರುವವರು ಆ ಶಾಲೆಯ ಕಲ್ಯಾಣಕ್ಕೆ ಅಗತ್ಯ ನೆರವು ನೀಡುತ್ತಾರೆ. ಇದಕ್ಕೆ ಅಗತ್ಯ ಸಂಘಟನೆ ಆಗಬೇಕು. ವೆಂಕಟಪ್ಪನವರು ಮಾಡಿರುವ ಸಾಹಸಕ್ಕೆ ಇನ್ನು ಹೆಚ್ಚಿನ ಜನ ಕೈ ಹಾಕಬೇಕು. ಇಂತಹ ಕೆಲಸಗಳು ಸಮಾಜದಲ್ಲಿ ಅವರ ಹೆಸರುಗಳನ್ನು ಶಾಶ್ವತವಾಗಿ ಉಳಿಸುತ್ತವೆ” ಎಂದು ತಿಳಿಸಿದರು. “ಮಕ್ಕಳ ಕೈಯಲ್ಲಿ…
ನವದೆಹಲಿ: ಭಾರತೀಯ ಸಶಸ್ತ್ರ ಪಡೆಗಳು AK-203 ಅಸಾಲ್ಟ್ ರೈಫಲ್ಗಳ ಹೊಸ ಬ್ಯಾಚ್ ಅನ್ನು ಪಡೆಯಲು ಸಜ್ಜಾಗಿವೆ. ಇದು ಕಲಾಶ್ನಿಕೋವ್ ಸರಣಿಯ ಆಧುನೀಕೃತ ಆವೃತ್ತಿಯಾಗಿದೆ. ಇದು ಒಂದು ನಿಮಿಷದಲ್ಲಿ 700 ಸುತ್ತುಗಳವರೆಗೆ ಗುಂಡು ಹಾರಿಸಬಲ್ಲದು ಮತ್ತು 800 ಮೀಟರ್ ವ್ಯಾಪ್ತಿಯನ್ನು ಹೊಂದಿದೆ. ಇಂಡೋ-ರಷ್ಯನ್ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ (IRRPL) ಉತ್ತರ ಪ್ರದೇಶದ ಅಮೇಥಿಯಲ್ಲಿ ಭಾರತದಲ್ಲಿ ‘ಶೇರ್’ ಎಂದು ಹೆಸರಿಸಲಾದ AK-203 ನ ಸ್ಥಳೀಯ ಉತ್ಪಾದನೆಗಾಗಿ ಸ್ಥಾಪಿಸಲಾದ ಜಂಟಿ ಉದ್ಯಮ ಕಂಪನಿಯಾಗಿದೆ. 5,200 ಕೋಟಿ ರೂ. ಒಪ್ಪಂದದಡಿಯಲ್ಲಿ ಕಂಪನಿಯು ಸಶಸ್ತ್ರ ಪಡೆಗಳಿಗೆ ಆರು ಲಕ್ಷಕ್ಕೂ ಹೆಚ್ಚು ರೈಫಲ್ಗಳನ್ನು ಪೂರೈಸಬೇಕಾಗಿದೆ. IRRPL ಮುಖ್ಯಸ್ಥ ಮೇಜರ್ ಜನರಲ್ SK ಶರ್ಮಾ ಗುರುವಾರ, ಡಿಸೆಂಬರ್ 2030 ರೊಳಗೆ ವಿತರಣೆಯನ್ನು ಪೂರ್ಣಗೊಳಿಸಲು ಯೋಜಿಸಿದ್ದಾರೆ ಎಂದು ಹೇಳಿದರು. “ಇಲ್ಲಿಯವರೆಗೆ ಸುಮಾರು 48,000 ರೈಫಲ್ಗಳನ್ನು ತಲುಪಿಸಲಾಗಿದೆ. ಮುಂದಿನ ಎರಡು ಮೂರು ವಾರಗಳಲ್ಲಿ ಇನ್ನೂ 7,000 ಹಸ್ತಾಂತರಿಸಲಾಗುವುದು ಮತ್ತು ಈ ವರ್ಷದ ಡಿಸೆಂಬರ್ ವೇಳೆಗೆ 15,000 ಹೆಚ್ಚುವರಿ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. AK-203…
ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಇಚ್ಛೆ/ಆಯ್ಕೆಗಳನ್ನು (ಆಪ್ಷನ್ಸ್ ) ದಾಖಲಿಸಲು ಇದ್ದ ಕೊನೆ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜುಲೈ 22ರವರೆಗೆ ವಿಸ್ತರಿಸಿದೆ. ಎಂಜಿನಿಯರಿಂಗ್, ದಂತ ವೈದ್ಯಕೀಯ, ಪಶು ವೈದ್ಯಕೀಯ, ಕೃಷಿ ವಿಜ್ಞಾನ, ಬಿಎಸ್ ಸಿ ನರ್ಸಿಂಗ್, ಬಿಪಿಟಿ, ಬಿಪಿಒ, ಎಎಚ್ಎಸ್ ಕೋರ್ಸ್ ಗಳ ಸೀಟ್ ಮ್ಯಾಟ್ರಿಕ್ಸ್ ಸರ್ಕಾರದಿಂದ ಬಂದಿದ್ದು ಜುಲೈ 8ರಿಂದಲೂ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. ವೈದ್ಯಕೀಯ, ಆಯುರ್ವೇದ, ಹೋಮಿಯೋಪತಿ ಮತ್ತು ಯುನಾನಿ, ಫಾರ್ಮಸಿ ಕೋರ್ಸ್ ಗಳ ಸೀಟ್ ಮ್ಯಾಟ್ರಿಕ್ಸ್ ಸರ್ಕಾರದಿಂದ ಬಂದ ನಂತರ ಅವುಗಳಿಗೂ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುವುದು. ಕೊನೆ ದಿನಾಂಕದವರೆಗೆ ಎಷ್ಟು ಬಾರಿಯಾದರೂ ಇಚ್ಛೆ/ಆಯ್ಕೆಗಳನ್ನು ಬದಲಿಸಿಕೊಳ್ಳಬಹುದು. ಆದರೆ ಅಂತಿಮವಾಗಿ ಬದಲಿಸಿದ್ದ ವಿವರಗಳನ್ನು ಮಾತ್ರ ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ. ಸರ್ಕಾರ ನಿಗದಿಪಡಿಸಿರುವ ವಿವಿಧ ಕೋರ್ಸ್ ಗಳ ಶುಲ್ಕದ ವಿವರಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಶುಲ್ಕ…
ಬೆಂಗಳೂರು: ರಾಜ್ಯದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ನಿಯಮ 2006ರ ತಿದ್ದುಪಡಿಯನ್ವಯ ಧನಸಹಾಯ, ಪರಿಹಾರದ ಮೊತ್ತವನ್ನು ಪರಿಷ್ಕರಿಸಿ ಸರ್ಕಾರ ಆದೇಶಿಸಿದೆ. ಈ ಸಂಬಂಧ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಸುತ್ತೋಲೆ ಹೊರಡಿಸಲಾಗಿತ್ತು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ನಿಯಮ 2006ರ ತಿದ್ದುಪಡಿ ಮಾಡಿ ಧನಸಹಾಯ, ಪರಿಹಾರದ ಮೊತ್ತವನ್ನು ಪರಿಷ್ಕರಿಸಿ ದಿನಾಂಕ 16-07-2025ರಂದು ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿದೆ ಎಂದಿದ್ದಾರೆ. ಈ ಹಿನ್ನಲೆಯಲ್ಲಿ ಸದರಿ ನಿಯಮಗಳನ್ನು ಅನುಷ್ಠಾನಗೊಳಿಸುವಾಗ ರಾಜ್ಯದಲ್ಲಿ ಏಕ ರೂಪತೆಯನ್ನು ಕಾಪಾಡುವ ದೃಷ್ಟಿಯಿಂದ ಈ ಕೆಳಕಂಡ ನಿರ್ದೇಶನಗಳನ್ನು ಎಲ್ಲಾ ಅನುಷ್ಠಾನ ಅಧಿಕಾರಿಗಳಿಗೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಹೀಗಿದೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಧನ ಸಹಾಯ, ಪರಿಹಾರದ ಪರಿಷ್ಕೃತ ಮೊತ್ತ ಅನುಗ್ರಹರಾಶಿ ವೆಚ್ಚವನ್ನು ರೂ.71,000ದಿಂದ ರೂ.1,46,000ಕ್ಕೆ ಹೆಚ್ಚಿಸಲಾಗಿದೆ. ದಿನಾಂಕ 16-07-2025ರಿಂದ ಚಾಲಿಗೆ ಬರುವಂತೆ ಅಂತಿಮ ಸಂಸ್ಕಾರ ವೆಚ್ಚ ರೂ.4000…
ಬೆಂಗಳೂರು: ದಿನೇ ದಿನೇ ಯುಪಿಐ ವಹಿವಾಟು ನಡೆಸಿದಂತ ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ಶಾಕ್ ನೀಡಲಾಗುತ್ತಿದೆ. ಬೆಂಗಳೂರಲ್ಲಿ ಹೂವಿನ ವ್ಯಾಪಾರಿಗೂ ತೆರಿಗೆ ಇಲಾಖೆಯಿಂದ ನೋಟಿಸ್ ನೀಡಲಾಗಿದೆ. ಬರೋಬ್ಬರಿ 52 ಲಕ್ಷ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಲಾಗಿದೆ. ಬೆಂಗಳೂರಿನ ಉಳ್ಳಾಲದಲ್ಲಿರೋ ಹೂವಿನ ವ್ಯಾಪಾರಿಯೊಬ್ಬರಿಗೂ ವಾಣಿಜ್ಯ ತೆರಿಗೆ ಇಲಾಖೆಯಿಂದ ತೆರಿಗೆ ಕಟ್ಟುವಂತೆ ನೋಟಿಸ್ ನೀಡಲಾಗಿದೆ. ಉಳ್ಳಾಲದಲ್ಲಿರುವಂತ ಹೂವಿನ ವ್ಯಾಪಾರಿ ಸೋಮೇಗೌಡ ಎಂಬುರಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ 52 ಲಕ್ಷ ತೆರಿಗೆ ಪಾವತಿಸುವಂತೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಬೆಂಗಳೂರಿನ ಉಳ್ಳಾಲದಲ್ಲಿ 10 ವರ್ಷಗಳಿಂದ ಸೋಮೇಗೌಡ ಹೂವಿನ ವ್ಯಾಪಾರ ಮಾಡುತ್ತಿದ್ದಾರೆ. ನನಗೆ ಒಂದು ತಿಂಗಳ ಹಿಂದೆ ಒಂದು ನೋಟಿಸ್ ಕೊಟ್ಟರು. 52 ಲಕ್ಷ ಎಲ್ಲಿಂದ ಹಣ ಕೊಟ್ಟೋದು ಎಂಬುದಾಗಿ ಸೋಮೇಗೌಡ ಅಲವತ್ತು ಕೊಂಡಿದ್ದಾರೆ. ಅಂದಹಾಗೇ ಈಗಾಗಲೇ ಬೆಂಗಳೂರಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ನೋಟಿಸ್ ನಿಂದ ಬೆಚ್ಚಿ ಬಿದ್ದಿರುವಂತ ವ್ಯಾಪಾರಿಗಳು ಯುಪಿಐ ಬಳಕೆಯನ್ನು ಸ್ಥಗಿತಗೊಳಿಸಿದ್ದಾರೆ. ಚಿಲ್ಲರೆ ಅಂಗಡಿಗಳಲ್ಲಿ ಯುಪಿಐ ಬಳಕೆಯಿಲ್ಲ. ಕ್ಯಾಶ್ ಓನ್ಲಿ, ದಯವಿಟ್ಟು ದುಡ್ಡು ಕೊಟ್ಟು…
ಶಿವಮೊಗ್ಗ: ಇಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಚಾಲನೆ ನೀಡಿದಂತ ಮನೆ ಮನೆಗೆ ಪೊಲೀಸ್ ಪರಿಕಲ್ಪನೆಯನ್ನು ಸಾಗರ ತಾಲ್ಲೂಕಿನಲ್ಲೂ ಜಾರಿಗೊಳಿಸುವುದಾಗಿ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್ ತಿಳಿಸಿದ್ದಾರೆ. ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ದಿಸೆಯಲ್ಲಿ ಸಾರ್ವಜನಿಕರೊಂದಿಗೆ ಪೊಲೀಸ್ ಇಲಾಖೆಯ ಉತ್ತಮ ಹಾಗೂ ಸ್ನೇಹಪರ ಸಂಬಂಧವನ್ನು ಬೆಸೆದು ಸೌಹಾರ್ದತೆಯ ಸಮಾಜವನ್ನು ನಿರ್ಮಿಸಲು, ಆಗಬಹುದಾದ ಅಪರಾಧಗಳನ್ನು ತಡೆದು, ಘಟಿಸಿದ ಅಪರಾಧಗಳನ್ನು ಪರಿಣಾಮಕಾರಿಯಾಗಿ ಪತ್ತೆ ಮಾಡಲು ಹಾಗೂ ಪೊಲೀಸ್ ವ್ಯವಸ್ಥೆಯಲ್ಲಿ ಸಾರ್ವಜನಿಕ ಸಹಭಾಗಿತ್ವವನ್ನು ಹೆಚ್ಚಿಸಲಿದೆ ಎಂದರು. https://youtu.be/Zu9xiuiP9pk ಪೊಲೀಸ್ ಇಲಾಖೆಯನ್ನು ಸಾರ್ವಜನಿಕ ಸ್ನೇಹಿಯಾಗಿಸಿ, ಸಮಾಜಕ್ಕೆ ಉತ್ತಮ ಸಕ್ರಿಯ ಪೊಲೀಸ್ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಮಹತ್ವಾಕಾಂಕ್ಷೆಯ ಯೋಜನೆಯಾದ “ಮನೆ-ಮನೆಗೆ ಪೊಲೀಸ್” ಪರಿಕಲ್ಪನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು. ಮನೆ ಮನೆಗೆ ಪೊಲೀಸ್ ಪರಿಕಲ್ಪನೆಯಡಿಯಲ್ಲಿ ಸಾರ್ವಜನಿಕರು ಮತ್ತು ಪೊಲೀಸರು ಒಂದಾಗಿ ಸಮಸ್ಯೆಗಳನ್ನು ಬಗೆಹರಿಸುವ ದೃಷ್ಠಿಯಿಂದ ಸಾರ್ವಜನಿಕರ ಕುಂದುಕೊರತೆಗಳು ಹಾಗೂ ಸಮಸ್ಯೆಗಳ ಬಗ್ಗೆ ವಿಚಾರಿಸಲು ಸ್ಥಳೀಯ ಪೊಲೀಸರು…
ಶಿವಮೊಗ್ಗ : ಮುಂದಿನ ದಿನಗಳಲ್ಲಿ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿಯನ್ನು ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನ ಎಂದು ಕರೆಯಲಾಗುತ್ತಿದ್ದು, ಸದಸ್ಯರು ನಮ್ಮ ಮೇಲೆ ವಿಶ್ವಾಸ ಇರಿಸಿ ನೀಡಿದ ಅಧಿಕಾರಕ್ಕೆ ತಕ್ಕಂತೆ ದೇವಸ್ಥಾನದ ಅಭಿವೃದ್ದಿ ಮತ್ತು ಲೋಪದೋಷದಿಂದ ಕೂಡಿದ ಲೆಕ್ಕಪತ್ರವನ್ನು ಸರಿಪಡಿಸಿ ಅವ್ಯವಸ್ಥೆಯನ್ನು ಸರಿದಾರಿಗೆ ತರಲಾಗಿದೆ. ನಮ್ಮ ಸಮಿತಿಯು ಇದರ ವಿರುದ್ದ ಕಾನೂನು ಹೋರಾಟ ನಡೆಸಿ ದೇವಸ್ಥಾನವನ್ನು ಸಾರ್ವಜನಿಕರ ಕೈನಲ್ಲಿಯೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಪ್ರತಿಷ್ಟಾನದ ಪ್ರಧಾನ ಕಾರ್ಯದರ್ಶಿ ಬಿ. ಗಿರಿಧರ ರಾವ್ ಎಂದು ಹೇಳಿದರು. ಇಂದು ಸಾಗರ ನಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2014ರ ಸರ್ವಸದಸ್ಯರ ಸಭೆಯಲ್ಲಿ ನಮಗೆ ಅಧಿಕಾರ ನೀಡಲಾಯಿತು. ಅಧಿಕಾರ ನೀಡುವ ಜೊತೆಗೆ ಲೆಕ್ಕಪತ್ರ ಸರಿಪಡಿಸುವ, ದೇವಸ್ಥಾನವನ್ನು ಕಾನೂನು ಚೌಕಟ್ಟಿನಲ್ಲಿ ತರಲು ಟ್ರಸ್ಟ್ ರಚಿಸುವ ಸೇರಿ ಹಲವು ಹೊಣೆಯನ್ನು ನೀಡಲಾಗಿತ್ತು. ಇದೀಗ ಟ್ರಸ್ಟ್ ರಚನೆಗೆ ನ್ಯಾಯಾಲಯ ಆದೇಶ ನೀಡಿದೆ ಎಂದರು. 2007 ರಿಂದ 2003 ರವರೆಗೆ ಆಡಳಿತ ನಡೆಸಿದ ಸಮಿತಿ ಲೆಕ್ಕಪತ್ರ…