Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹಾಗೂ ರಾಜ್ಯದ ಇತರೆ ಕಡೆಗಳಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಲ್ಪಿಸಲು ಇರುವ ಸಮಸ್ಯೆಗಳ ಕುರಿತಂತೆ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಆ ಸಭೆಯಲ್ಲಿ ಚರ್ಚಿಸಲಾದಂತ ವಿಷಯಗಳ ಪ್ರಮುಖ ಹೈಲೈಟ್ಸ್ ಮುಂದಿದೆ. ದಿನಾಂಕ: 17-12-2024ರ ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರ ಗ್ರೇಟರ್ ಬೆಂಗಳೂರು ಸೇರಿದಂತೆ ರಾಜ್ಯ ವ್ಯಾಪ್ತಿಯಲ್ಲಿ ಸಿಸಿ ಮತ್ತು ಓಸಿ ಇಲ್ಲದೇ ನಿರ್ಮಿಸಿರುವ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಲು ಸಮಸ್ಯೆ ಉಂಟಾಗಿರುವ ಬಗ್ಗೆ ಚರ್ಚೆ ನಡೆಸಲಾಯಿತು. ಸುಪ್ರೀಂಕೋರ್ಟ್ ನ ಆದೇಶ ಭಾರತದ ಎಲ್ಲ ರಾಜ್ಯಗಳಿಗೂ ಅನ್ವಯವಾಗುತ್ತಿದ್ದೂ, ಎಲ್ಲ ರಾಜ್ಯಗಳೂ ಆದೇಶವನ್ನು ಅನುಷ್ಠಾನಗೊಳಿಸುತ್ತಿವೆಯೇ? ಪರಿಶೀಲಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಸೂಚಿಸಿದರು ನಿಯಮ ಉಲ್ಲಂಘಿಸಿ ನಿರ್ಮಾಣಗೊಂಡಿರುವ ಕಟ್ಟಡಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಅನುಮತಿ ನೀಡುವ ಸಾಧ್ಯತೆ ಬಗ್ಗೆ ಚರ್ಚೆ ನಡೆಸಲಾಗಿ, ನಿರ್ಮಾಣಗೊಂಡಿರುವ ಕಟ್ಟಡಗಳನ್ನು ನೆಲಸಮಗೊಳಿಸಲು ಸಾಧ್ಯವಿಲ್ಲ.ಸರ್ಕಾರದ ನಿರ್ಧಾರದಿಂದ ಜನರಿಗೆ ಅನುಕೂಲವಾಗಬೇಕು. ಸೂಕ್ತ ಅನುಮತಿಗಳಿಲ್ಲದೇ ಈಗಾಗಲೇ ಮನೆ ನಿರ್ಮಿಸಿ ವಾಸವಿದ್ದಾರೆ. ಅಂತಹವರಿಗೆ…
ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಬರದಿಂದ ನಡೆಯುತ್ತಿದೆ. ಈ ಸಮೀಕ್ಷೆಯ ಬಗ್ಗೆ ದಿನಕ್ಕೊಂದು ಹೇಳಿಕೆಯನ್ನು ಬಿಜೆಪಿಗರು ನೀಡುತ್ತಿದ್ದಾರೆ. ಇಂತಹ ಹೇಳಿಕೆ ನೀಡುತ್ತಿರುವಂತ ಬಿಜೆಪಿಗರಿಗೆ ಈ ಕೆಳಗಿನಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ. ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ನಮ್ಮ ಸರ್ಕಾರ ಸಾಮಾಜಿಕ,ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪ್ರಾರಂಭಿಸುತ್ತಿದ್ದಂತೆಯೇ ‘’ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಕೂಗು ಹಾಕುತ್ತಿರುವವರ ಆಂತರ್ಯದಲ್ಲಿರುವ ನಿಜ ಬಣ್ಣ ಬಯಲಾಗುತ್ತಿದೆ. ರಾಜ್ಯ ಬಿಜೆಪಿಯ ನಾಯಕರು ಒಬ್ಬೊಬ್ಬರಾಗಿ ಹೊರಗೆ ಬಂದು ನಮ್ಮ ಸಮೀಕ್ಷೆಯನ್ನು ಬಹಿಷ್ಕರಿಸುವಂತೆ ಕರೆನೀಡುವ ಮೂಲಕ ಸಾರ್ವಜನಿಕರ ಎದುರು ಬತ್ತಲಾಗುತ್ತಿದ್ದಾರೆ ಎಂದಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸುತ್ತಿರುವ ಸಮೀಕ್ಷೆ ಯಾವುದೇ ಒಂದು ಜಾತಿ-ಧರ್ಮಗಳಿಗೆ ಸೀಮಿತವಾದುದಲ್ಲ. ಇದು ರಾಜ್ಯದ ಏಳು ಕೋಟಿ ಜನರ ಸಾಮಾಜಿಕ”,ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ. ಇದು ಯಾರ ವಿರುದ್ದವೂ ಅಲ್ಲ, ಇದು ಎಲ್ಲರ ಪರವಾಗಿರುವ ಸಮೀಕ್ಷೆ. ಇದರ ಮುಖ್ಯ ಉದ್ದೇಶ ಸಾಮಾಜಿಕ, ಆರ್ಥಿಕ ಮತ್ತು…
ಬಳ್ಳಾರಿ: ಯಾವುದೇ ಕ್ಷಣದಲ್ಲಿ ಆದರೂ ಸಚಿವ ಸಂಪುಟ ವಿಸ್ತರಣೆಯಾಗಲಿದೆ. 10 ದಿನಗಳಲ್ಲಿ ಬಿ.ನಾಗೇಂದ್ರ ಮತ್ತೆ ಸಚಿವರಾಗಲಿದ್ದಾರೆ ಎಂಬುದಾಗಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಯಾವುದೇ ಕ್ಷಣದಲ್ಲಾದರೂ ಸಚಿವ ಸಂಪುಟ ವಿಸ್ತರಣೆ ಆಗಬಹುದು. ನಮ್ಮ ಕೈಯಲ್ಲಿ ನಿರ್ಧಾರ ಇಲ್ಲ. ಹೈಕಮಾಂಡ್ ನೋಡಿಕೊಳ್ಳಲಿದೆ ಎಂದರು. ಬಿ.ನಾಗೇಂದ್ರ ಮತ್ತೆ ಸಚಿವರಾಗುತ್ತಾರೆ. 10 ದಿನಗಳಲ್ಲಿ ಬಿ.ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ ಸಿಗಲಿದೆ. ಸಿದ್ಧರಾಮಯ್ಯನವರೇ ಐದು ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆ ಎಂದರು. ಬಳ್ಳಾರಿ ಜಿಲ್ಲೆಯಲ್ಲಿ ಯಾವ ಕೆಲಸಗಳು ಪೆಂಡಿಂಗ್ ಉಳಿದಿಲ್ಲ. ಎಲ್ಲಾ ಕೆಲಸ ಕಾರ್ಯಗಳು ನಡೆಯುತ್ತಿವೆ. ನಾಗೇಂದ್ರ ಮೂಲಕ ಸಮಸ್ಯೆಗಳ ಬಗ್ಗೆ ನನಗೆ ಮಾಹಿತಿ ಬರ್ತಿದೆ. ಸಾಹಿತ್ಯ ಸಮ್ಮೇಳನ ನಡೆಸಲು ನಾಲ್ಕು ಸ್ಥಳ ಗುರುತಿಸಲಾಗಿದೆ. ಬಳ್ಳಾರಿ ಶಾಸಕರೊಂದಿಗೆ ಸೇರಿ ಸ್ಥಳ ಪರಿಶೀಲನೆ ಮಾಡುತ್ತೇನೆ. ಬಳ್ಳಾರಿಯಲ್ಲಿ ಅದ್ಧೂರಿಯಾಗಿ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದರು. https://kannadanewsnow.com/kannada/attention-to-the-states-government-employees-instructions-to-submit-this-information-immediately-in-the-hrms-software/ https://kannadanewsnow.com/kannada/shock-for-passengers-going-to-mysore-to-see-dasara-ksrtc-bus-ticket-prices-hiked/
ಬೆಂಗಳೂರು: ದಸರಾ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಕೆ ಎಸ್ ಆರ್ ಟಿ ಸಿಯು ಮೈಸೂರು ದಸರಾ ವಿಶೇಷ ಬಸ್ಸುಗಳಿಗೆ ಟಿಕೆಟ್ ದರವನ್ನು ಏರಿಕೆ ಮಾಡಿದೆ. ಈ ಬಾರಿ ರೂ.20 ಟಿಕೆಟ್ ದರವನ್ನು ಹೆಚ್ಚಿಸಿದೆ. ಈ ಮೂಲಕ ದಸರಾ ನೋಡಲು ಹೊರಟವರಿಗೆ ಕೆ ಎಸ್ ಆರ್ ಟಿ ಸಿ ಟಿಕೆಟ್ ದರ ಏರಿಕೆಯ ಶಾಕ್ ನೀಡಲಾಗಿದೆ. ಈ ಕುರಿತಂತೆ ಆದೇಶ ಹೊರಡಿಸಿರುವಂತ ಕೆ ಎಸ್ ಆರ್ ಟಿ ಸಿಯು, ದಸರಾ ಪ್ರಯುಕ್ತ ಪ್ರತಿ ವರ್ಷದಂತೆ ದಸರಾ ವಿಶೇಷ ಬಸ್ಸುಗಳ ಟಿಕೆಟ್ ದರವನ್ನು ರೂ.20 ಹೆಚ್ಚಳ ಮಾಡಿರುವುದಾಗಿ ತಿಳಿಸಿದೆ. ಹೀಗಾಗಿ ಕೆ ಎಸ್ ಆರ್ ಟಿ ಸಿ ವೇಗದೂತ, ತಡೆರಹಿತ, ರಾಜಹಂಸ, ಐರಾವತ ಸೇರಿದಂತೆ ಮೈಸೂರು ದಸರಾ ಪ್ರಯುಕ್ತ ಸಂಚರಿಸುವಂತ ಕೆ ಎಸ್ ಆರ್ ಟಿ ಸಿ ಬಸ್ಸುಗಳ ಟಿಕೆಟ್ ದರ ಹೆಚ್ಚಳವಾದಂತೆ ಆಗಿದೆ. ಯಾವ್ಯಾವ ಬಸ್ ಟಿಕೆಟ್ ದರ ಎಷ್ಟು ಏರಿಕೆ.? ಇಲ್ಲಿದೆ ಮಾಹಿತಿ ಕರ್ನಾಟಕ ಸಾರಿಗೆ ವೇಗದೂತ- ರೂ.170ರಿಂದ…
ಬೆಂಗಳೂರು: ಕನ್ನಡದ ಖ್ಯಾತ ಕಲಾವಿದ, ರಂಗಕರ್ಮಿ ಯಶವಂತ ಸರದಶಪಾಂಡೆ ಅವರ ನಿಧನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ರಂಗಭೂಮಿಯ ಜೊತೆ ಸಿನಿಮಾ ಮತ್ತು ಟಿವಿ ಧಾರವಾಹಿಗಳಲ್ಲಿಯ ನಟನೆಯಿಂದ ಅಪಾರ ಹೆಸರು ಮಾಡಿರುವ ಯಶವಂತ ಸರದೇಶಪಾಂಡೆ ಸಮಕಾಲೀನ ಹಾಸ್ಯ ಕಲಾವಿದರ ಪಾಲಿನಲ್ಲಿ ತಮ್ಮ ವಿಶಿಷ್ಟ ಭಾಷೆ, ,ಆಂಗಿಕ ಅಭಿನಯದಿಂದ ಅಪಾರ ಜನಪ್ರಿಯತೆ ಪಡೆದಿದ್ದರು. ರಂಗ ವರ್ತುಲ ತಂಡವನ್ನು ಕಟ್ಟಿ, ಆ ಮೂಲಕ ಅಸಂಖ್ಯಾತ ನಾಟಕಗಳನ್ನ ಪ್ರದರ್ಶಿಸಿದ ಯಶವಂತ ಸರದೇಶಪಾಂಡೆ ಅವರ ಆಲ್ ದಿ ಬೆಸ್ಟ್ ನಾಟಕ ದಾಖಲೆಯ ಪ್ರದರ್ಶನಗಳನ್ನ ಕಂಡಿದೆ. ಕಮಲ ಹಾಸನ್ ಅಭಿನಯದ ರಾಮ ಶಾಮ ಭಾಮ ಜನಪ್ರಿಯ ಚಲನಚಿತ್ರದ ಸಂಭಾಷಣಕಾರರಾಗಿ,ಜೊತೆಗೆ ನಟಿಸಿ ,ಅಪಾರ ಜನಪ್ರೀತಿ ಗಳಿಸಿದ್ದರು. ದಾವಣಗೆರೆಯ ವೃತ್ತಿರಂಗಭೂಮಿ ರಂಗಾಯಣದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದ ಯಶವಂತ ಸರದೇಶಪಾಂಡೆ ಅವರ ಸಾಂಸ್ಕೃತಿಕ ಕೊಡುಗೆಗಾಗಿ ಅವರಿಗೆ ನನ್ನ ಗೌರವ ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಸಂತಾಪ…
ನವದೆಹಲಿ: ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 87A ತೆರಿಗೆ ವಿಧಿಸಬಹುದಾದ ಆದಾಯವು 7 ಲಕ್ಷ ರೂ. ಮೀರದ ಸಣ್ಣ ತೆರಿಗೆದಾರರಿಗೆ ರಿಯಾಯಿತಿಯನ್ನು ಒದಗಿಸುತ್ತದೆ (ಪ್ರಸ್ತುತ ನಿಯಮಗಳ ಪ್ರಕಾರ). ಈ ರಿಯಾಯಿತಿಯು ಅವರ ತೆರಿಗೆ ಹೊಣೆಗಾರಿಕೆಯನ್ನು ಶೂನ್ಯಕ್ಕೆ ಇಳಿಸಬಹುದು. ಆದರೆ ಇಲ್ಲಿ ಕ್ಯಾಚ್ ಇಲ್ಲಿದೆ: ರಿಯಾಯಿತಿ ಸಾಮಾನ್ಯ ಸ್ಲ್ಯಾಬ್ ದರಗಳಲ್ಲಿ ತೆರಿಗೆ ವಿಧಿಸುವ ಆದಾಯಕ್ಕೆ ಮಾತ್ರ ಅನ್ವಯಿಸುತ್ತದೆ. ಇದು ವಿಶೇಷ ದರದ ಆದಾಯಗಳಿಗೆ ಅನ್ವಯಿಸುವುದಿಲ್ಲ, ಉದಾಹರಣೆಗೆ: ಅಲ್ಪಾವಧಿಯ ಅಥವಾ ದೀರ್ಘಾವಧಿಯ ಬಂಡವಾಳ ಲಾಭಗಳು, ಲಾಟರಿ ಗೆಲುವುಗಳು, ಕೆಲವು ಇತರ ನಿರ್ದಿಷ್ಟ ಆದಾಯಗಳು. ಸಿಸ್ಟಮ್ ದೋಷಗಳು ಅಥವಾ ತಪ್ಪಾದ ಪ್ರಕ್ರಿಯೆಯಿಂದಾಗಿ, ಕೆಲವು ತೆರಿಗೆದಾರರಿಗೆ ವಿಶೇಷ ದರದ ಆದಾಯದ ಮೇಲೂ ರಿಯಾಯಿತಿಯನ್ನು ತಪ್ಪಾಗಿ ಅನುಮತಿಸಲಾಗಿದೆ. ಈ ತಪ್ಪುಗಳನ್ನು ಸರಿಪಡಿಸಿದಾಗ, ಹೊಸ ತೆರಿಗೆ ಬೇಡಿಕೆಗಳು ಸೃಷ್ಟಿಯಾದವು, ಇದು ಅನೇಕ ತೆರಿಗೆದಾರರನ್ನು ಆಶ್ಚರ್ಯ ಮತ್ತು ಚಿಂತೆಗೀಡು ಮಾಡಿತು. CBDT ಯ ಪರಿಹಾರ ಕ್ರಮ CBDT ಉಂಟಾದ ತೊಂದರೆಯನ್ನು ಒಪ್ಪಿಕೊಂಡಿತು ಮತ್ತು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 119 ರ…
ನವದೆಹಲಿ: ಕೇಂದ್ರ ಸರ್ಕಾರವು ಶಿರೀಶ್ ಚಂದ್ರ ಮುರ್ಮು ( Shirish Chandra Murmu ) ಅವರನ್ನು ಭಾರತೀಯ ರಿಸರ್ವ್ ಬ್ಯಾಂಕಿನ ಉಪ ಗವರ್ನರ್ ಆಗಿ ಮೂರು ವರ್ಷಗಳ ಅವಧಿಗೆ ನೇಮಿಸಿದೆ. ಅಕ್ಟೋಬರ್ 8 ರಂದು ವಿಸ್ತೃತ ಅಧಿಕಾರಾವಧಿ ಕೊನೆಗೊಳ್ಳಲಿರುವ ಎಂ ರಾಜೇಶ್ವರ್ ರಾವ್ ಅವರ ಸ್ಥಾನವನ್ನು ಮುರ್ಮು ವಹಿಸಲಿದ್ದಾರೆ. ಅಕ್ಟೋಬರ್ 9 ರಂದು ಅಥವಾ ನಂತರ ಈ ಹುದ್ದೆಗೆ ಸೇರಿದ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಅವರ ನೇಮಕಾತಿಯನ್ನು ಸಂಪುಟದ ನೇಮಕಾತಿ ಸಮಿತಿ ಅನುಮೋದಿಸಿದೆ ಎಂದು ಸೋಮವಾರ ಮೂಲಗಳು ತಿಳಿಸಿವೆ. ಮುರ್ಮು ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India -RBI) ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದು, ಮೇಲ್ವಿಚಾರಣಾ ಇಲಾಖೆಯ ಮೇಲ್ವಿಚಾರಣೆಯನ್ನು ನಿರ್ವಹಿಸುತ್ತಿದ್ದಾರೆ. 1934 ರ ಆರ್‌ಬಿಐ ಕಾಯ್ದೆಯ ಪ್ರಕಾರ, ಕೇಂದ್ರ ಬ್ಯಾಂಕ್ ನಾಲ್ಕು ಉಪ ಗವರ್ನರ್‌ಗಳನ್ನು ಹೊಂದಿರಬೇಕು – ಇಬ್ಬರು ಶ್ರೇಣಿಯೊಳಗಿನವರು, ಒಬ್ಬರು ವಾಣಿಜ್ಯ ಬ್ಯಾಂಕಿಂಗ್ ವಲಯದಿಂದ ಮತ್ತು ಹಣಕಾಸು ನೀತಿ ವಿಭಾಗದ ಮುಖ್ಯಸ್ಥರಾಗಲು ಅರ್ಥಶಾಸ್ತ್ರಜ್ಞ. ಇತರ ಮೂವರು…
ಶಿವಮೊಗ್ಗ: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ನೂತನ ಸಾಗರ ತಾಲೂಕು ಘಟಕದ ಅಧ್ಯಕ್ಷರನ್ನಾಗಿ ಜನಾರ್ಧನ್ ಪೂಜಾರಿ ಹಾಗೂ ಉಪ ಅದ್ಯಕ್ಷರನ್ನಾಗಿ ಅರುಣ್ ಕುಮಾರ್ ಪಾಳೆಗಾರ್ ಅವರನ್ನು ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಸರ್ವಾನು ಮತದಿಂದ ಜಿಲ್ಲಾ ಘಟಕ ಆಯ್ಕೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ನಾಡು ನುಡಿ ನೆಲ ಜಲ ಭಾಷೆ ರೈತ ಪರ ವಿದ್ಯಾರ್ಥಿಪರ ಶೋಷಿತರ ಪರ ಧನಿಯಾಗಿರುವಂತೆ ಜನಾರ್ಧನ ಪೂಜಾರಿ ಅವರನ್ನು ಅಧ್ಯಕ್ಷರಾಗಿ, ಅರುಣ್ ಕುಮಾರ್ ಪಾಳೆಗಾರ್ ಅವರನ್ನು ಉಪಾಧ್ಯಕ್ಷರಾಗಿ ನೇಮಿಸಿ ಆದೇಶ ನೀಡಲಾಗಿದೆ. ತಮ್ಮ ಅಧೀನ ಪದಾಧಿಕಾರಿಗಳ ಆಯ್ಕೆ ಅಧಿಕಾರ ಹೊಂದಿದ್ದು ಸಂಘಟನೆಗೆ ಯಾವುದೇ ಧಕ್ಕೆ ಬರದಂತೆ ಕಾರ್ಯ ನಿರ್ವಹಿಸಬೇಕೆಂದು ಸಂಘಟನೆ ಸೂಚಿಸಿದೆ. ಈ ಸಂದರ್ಭದಲ್ಲಿ ನೂತನ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ನಡೆಯಿತು ಜಿಲ್ಲಾ ಕಾರ್ಯಾಧ್ಯಕ್ಷ ರಾಗಿ ಉಮೇಶ್ ಗದ್ದೆಮನೆ ಹಾಗೂ ಜಿಲ್ಲಾ ಉಪಾಧ್ಯಕ್ಷರಾಗಿ ಗಂಗಾಧರ್ ಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಸಂತೋಷ್ ಫ್ರಾಂಕ್ಲಿನ್…
ಶಿವಮೊಗ್ಗ: ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರವಾಗುವ ನಿಟ್ಟಿನಲ್ಲಿ ಸೊರಬದ ಶ್ರೀ ಧನಲಕ್ಷ್ಮಿ ಮಹಿಳಾ ಪತ್ತಿನ ಸಹಕಾರ ಸಂಘ ಕಾರ್ಯ ನಿರ್ವಹಿಸುತ್ತಿದೆ ಎಂದು ಸಂಘದ ಅಧ್ಯಕ್ಷೆ ಕೆ.ಜಿ.ಲೋಲಾಕ್ಷಮ್ಮ ಹೇಳಿದರು. ಇಂದು ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದ ಮುರುಘಾ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ರೀಧನಲಕ್ಷ್ಮಿ ಮಹಿಳಾ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೌಟುಂಬಿಕ ವ್ಯವಸ್ಥೆಯಲ್ಲಿ ಪ್ರತಿ ಮಹಿಳೆಯರು ತಮ್ಮ ಹಿರಿದಾದ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಈ ನಡುವೆಯೂ ಕೆಲವು ಹೆಣ್ಣು ಮಕ್ಕಳಿಗೆ ನೂರಾರು ರೀತಿಯಲ್ಲಿ ಸಂಕಷ್ಟಗಳು ಎದುರಾಗಿ ಕುಟುಂಬ ಮತ್ತು ಮಕ್ಕಳ ವಿದ್ಯಾಭ್ಯಾಸ ಪರದಾಡುತ್ತಿರುವುದನ್ನು ಮನಗಂಡು ಮಹಿಳೆಯರಿಗೆ ಆರ್ಥಿಕ ಸಹಕಾರ ಒದಗಿಸುವ ಹಿನ್ನೆಲೆಯಲ್ಲಿ ಸಂಘ ಸ್ಥಾಪಿಸಲಾಗಿದೆ ಎಂದರು. ಷೇರುದಾರರ ಸಹಕಾರದಿಂದ ನಮ್ಮ ಸಂಘವು ಪ್ರತಿ ವರ್ಷದಂತೆ 2024-25ನೇ ಸಾಲಿನಲ್ಲಿಯೂ ಸಹ ಹೆಚ್ಚಿನ ಲಾಭ ಗಳಿಸಿದೆ. ನಮ್ಮ ಸಂಘದಿಂದ ಬಡ ಮಹಿಳರಿಗೆ ಹಾಗೂ ನೊಂದ ಮಹಿಳೆಯರಿಗೆ ಎಲ್ಲಾ ಜಾತಿ ಜನಾಂಗದವರಿಗೂ ಸಾಲವನ್ನು ನೀಡಿ ಅವರ…
ಶಿವಮೊಗ್ಗ: ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ನಾಲ್ಕು ಬಾರಿ ಶಾಸಕರಾಗಿ ಎರಡು ಬಾರಿ ಸಚಿವರಾಗಿ ಕ್ಷೇತ್ರದ ಅಭಿವೃದ್ಧಿಗೆ ಹಲವು ಕೊಡುಗೆ ನೀಡಿದ್ದಾರೆ. ತಾಲ್ಲೂಕಿನ ಜನರು ಅಭಿವೃದ್ಧಿಗಾಗಿ ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಆಯ್ಕೆ ಮಾಡಲಿದ್ದಾರೆ ಎಂದು ಕುಮಾರ್ ಬಂಗಾರಪ್ಪ ಅಭಿಮಾನಿ ಬಳಗದ ಅಧ್ಯಕ್ಷ ಎಂ.ಡಿ.ಉಮೇಶ್ ವಿಶ್ವಾಸ ವ್ಯಕ್ತಪಡಿಸಿದರು. ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಹುಟ್ಟು ಹಬ್ಬದ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಳೆದ ಅವಧಿಯಲ್ಲಿ ಶಾಸಕರಾಗಿದ್ದಾಗ 2,500 ಕೋಟಿ ರೂಪಾಯಿ ವೆಚ್ಚದಲ್ಲಿ ಮೂಡಿ, ಮೂಗೂರು ಹಾಗೂ ಕಚವಿ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ವರದಾ ನದಿಗೆ ಅಡ್ಡಲಾಗಿ ಜೋಳದಗುಡ್ಡೆ ಸಮೀಪ ಬ್ಯಾರೇಜ್ ನಿರ್ಮಾಣಕ್ಕೆ ಹಣ ಮೀಸಲಿಡಲಾಗಿದೆ. ಹಲವು ದಶಕಗಳ ಕಾಲ ನನೆಗುದಿಗೆ ಬಿದ್ದಿದ್ದ ಪಟ್ಟಣದ ಮುಖ್ಯ ರಸ್ತೆ ವಿಸ್ತರಣೆ ಮಾಡುವಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಿದ ಧೀಮಂತ ನಾಯಕನ ಜನ್ಮದಿನವನ್ನು ಸಂಭ್ರಮದಿಂದ ಆಚರಿಸುತ್ತಿರುವುದು ಹೆಮ್ಮೆ ತಂದಿದೆ ಎಂದು ತಿಳಿಸಿದರು. ತಾಲ್ಲೂಕಿನ…







