Subscribe to Updates
Get the latest creative news from FooBar about art, design and business.
Author: kannadanewsnow09
ಮಂಗಳೂರು: ರೌಡಿ ಶೀಟರ್ ಹಾಗೂ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಮಂಗಳೂರಿನ ಬಜ್ಪೆ ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ರೌಡಿ ಶೀಟರ್ ಮತ್ತು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ನಡು ರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಮಂಗಳೂರಿನ ಬಜ್ಪೆ ಠಾಣೆಯ ಪೊಲೀಸರು ಕಳವಾರಿನ ಅಜರುದ್ದೀನ್ ಆಲಿಯಾಸ್ ಅಜರ್ ಆಲಿಯಾಸ್ ಅಜ್ಜು(29), ಬಜ್ಪೆ ನಿವಾಸಿ ಅಬ್ದುಲ್ ಖಾದರ್ ಆಲಿಯಾಸ್ ನೌಫಲ್(24), ವಾಮಂಜೂರಿನ ನೌಷದ್ ಆಲಿಯಾಸ್ ಚೊಟ್ಟೆ ನೌಷದ್(39) ಬಂಧಿಸಿದ್ದಾರೆ. ಅಜರುದ್ದೀನ್ ವಿರುದ್ಧ ಈ ಹಿಂದೆಯೂ ಮೂರು ಪ್ರಕರಣಗಳು ದಾಖಲಾಗಿದ್ದವು. ಪಣಂಬೂರು, ಸುರತ್ಕಲ್, ಮುಲ್ಕಿ ಪೊಲೀಸರು ಠಾಣೆಯಲ್ಲಿ ಕೇಸ್ ಗಳಿವೆ. ಸುಹಾಸ್ ಶೆಟ್ಟಿ ಚಲನವಲನದ ಬಗ್ಗೆ ಮಾಹಿತಿ ನೀಡಿ ಹತ್ಯೆಗೆ ಈ ಆರೋಪಿಗಳು ಸಹಕರಿಸಿದ್ದರು. ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಆರೋಪಿಗಳು ಕಾರಿನಲ್ಲಿ ಪಾರಿಯಾಗಲು ಅಬ್ದುಲ್ ಖಾದರ್ ಸಹಕರಿಸಿದ್ದನು. ಸುಹಾಸ್ ಹತ್ಯೆಗೆ ಉಳಿದ ಆರೋಪಿಗಳ ಜೊತೆಗೆ ನೌಷದ್ ಸಂಚು ರೂಪಿಸಿದ್ದನು. ನೌಷದ್ ವಿರುದ್ಧ ಕೊಲೆ, ಕೊಲೆ…
ಇಸ್ಲಮಾಬಾದ್: ಬಲೂಚ್ ಪ್ರತಿನಿಧಿ ಮೀರ್ ಯಾರ್ ಬಲೂಚ್ ಬುಧವಾರ ಪಾಕಿಸ್ತಾನದಿಂದ ಸ್ವಾತಂತ್ರ್ಯ ಘೋಷಿಸಿದರು. ಈ ಪ್ರದೇಶದಲ್ಲಿ ದಶಕಗಳ ಹಿಂಸಾಚಾರ, ಬಲವಂತದ ಕಣ್ಮರೆಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯನ್ನು ಉಲ್ಲೇಖಿಸಿದರು. X ನಲ್ಲಿ ಪೋಸ್ಟ್‌ನಲ್ಲಿ, ಬಲೂಚಿಸ್ತಾನದ ಜನರು ತಮ್ಮ “ರಾಷ್ಟ್ರೀಯ ತೀರ್ಪು” ನೀಡಿದ್ದಾರೆ ಮತ್ತು ಜಗತ್ತು ಇನ್ನು ಮುಂದೆ ಮೌನವಾಗಿರಬಾರದು ಎಂದು ಅವರು ಹೇಳಿದರು. “ತುಮ್ ಮರೋಗೆ ಹಮ್ ನೆಕ್ಲೆಂಗಿ, ಹಮ್ ನಸಲ್ ಬಚಾನಿ ನೆಕ್ಲಿ ಹೈ, ಆವೋ ಹಮಾರಾ ಸಾಥ್ ದೋ. ಪಾಕಿಸ್ತಾನ ಆಕ್ರಮಿತ ಬಲೂಚಿಸ್ತಾನದಾದ್ಯಂತ ಬಲೂಚ್ ಜನರು ಬೀದಿಗಿಳಿದಿದ್ದಾರೆ. ಇದು ಬಲೂಚಿಸ್ತಾನ್ ಪಾಕಿಸ್ತಾನವಲ್ಲ ಮತ್ತು ಜಗತ್ತು ಇನ್ನು ಮುಂದೆ ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ ಎಂಬ ಅವರ ರಾಷ್ಟ್ರೀಯ ತೀರ್ಪು ಎಂದು ಅವರು ಹೇಳಿದರು. ಅವರು ಭಾರತೀಯ ನಾಗರಿಕರು, ವಿಶೇಷವಾಗಿ ಮಾಧ್ಯಮಗಳು, ಯೂಟ್ಯೂಬರ್‌ಗಳು ಮತ್ತು ಬುದ್ಧಿಜೀವಿಗಳು ಬಲೂಚ್‌ಗಳನ್ನು “ಪಾಕಿಸ್ತಾನದ ಸ್ವಂತ ಜನರು” ಎಂದು ಕರೆಯುವುದನ್ನು ತಪ್ಪಿಸುವಂತೆ ಒತ್ತಾಯಿಸಿದರು. ಪ್ರಿಯ ಭಾರತೀಯರ ದೇಶಭಕ್ತ ಮಾಧ್ಯಮಗಳು, ಯೂಟ್ಯೂಬ್ ಒಡನಾಡಿಗಳು, ಭಾರತವನ್ನು ರಕ್ಷಿಸಲು ಹೋರಾಡುವ ಬುದ್ಧಿಜೀವಿಗಳು…
ನವದೆಹಲಿ: ಭಾರತದ ಮಿಲಿಟರಿ ಪರಾಕ್ರಮದಲ್ಲಿ ಆಪರೇಷನ್ ಸಿಂಧೂರ್ ಗಮನಾರ್ಹ ವಿಕಸನವನ್ನು ಗುರುತಿಸಿದೆ, ಏಕೆಂದರೆ ಇದು ವಿಕಸನಗೊಳ್ಳುತ್ತಿರುವ ಅಸಮಪಾರ್ಶ್ವದ ಯುದ್ಧದ ಮಾದರಿಗೆ ಮಾಪನಾಂಕ ನಿರ್ಣಯ ಎಂಬುದಾಗಿ ಭಾರತೀಯ ಸೇನೆ ತಿಳಿಸಿದೆ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಗೆ ಭಾರತದ ಪ್ರತಿಕ್ರಿಯೆಯು ಉದ್ದೇಶಪೂರ್ವಕ, ನಿಖರ ಮತ್ತು ಕಾರ್ಯತಂತ್ರದ್ದಾಗಿತ್ತು. ಭಾರತೀಯ ಪಡೆಗಳು, ನಿಯಂತ್ರಣ ರೇಖೆ ಅಥವಾ ಅಂತರರಾಷ್ಟ್ರೀಯ ಗಡಿಯನ್ನು ದಾಟದೆ, ಭಯೋತ್ಪಾದಕ ಮೂಲಸೌಕರ್ಯವನ್ನು ಹೊಡೆದುರುಳಿಸಿ ಬಹು ಬೆದರಿಕೆಗಳನ್ನು ನಿವಾರಿಸಿದವು. ಯುದ್ಧತಂತ್ರದ ಪ್ರತಿಭೆಯನ್ನು ಮೀರಿ, ಭಾರತಕ್ಕೆ ಎದ್ದು ಕಾಣುವ ಅಂಶವೆಂದರೆ ರಾಷ್ಟ್ರೀಯ ರಕ್ಷಣೆಯಲ್ಲಿ ಸ್ಥಳೀಯ ಹೈಟೆಕ್ ವ್ಯವಸ್ಥೆ ನೆರವಾಗಿದ್ದು. ಡ್ರೋನ್ ಯುದ್ಧ, ಲೇಯರ್ಡ್ ವಾಯು ರಕ್ಷಣಾ ಅಥವಾ ಎಲೆಕ್ಟ್ರಾನಿಕ್ ಯುದ್ಧದಲ್ಲಿ ಭಾರತವು ತನ್ನ ಗಣನೀಯ ಅಂಚನ್ನು ಸಾಬೀತುಪಡಿಸಿತು. ಮಿಲಿಟರಿ ಕಾರ್ಯಾಚರಣೆಗಳಲ್ಲಿ ತಾಂತ್ರಿಕ ಸ್ವಾವಲಂಬನೆಯತ್ತ ಭಾರತದ ಪ್ರಯಾಣದಲ್ಲಿ ಆಪರೇಷನ್ ಸಿಂಡೂರ್ ಒಂದು ಮೈಲಿಗಲ್ಲನ್ನು ಗುರುತಿಸುತ್ತದೆ. ಪತ್ರಿಕಾ ಮಾಹಿತಿ ಬ್ಯೂರೋ (PIB) ಒಂದು ಪತ್ರಿಕಾ ಪ್ರಕಟಣೆಯಲ್ಲಿ, “ಮೇ 07-08, 2025 ರ ರಾತ್ರಿ, ಪಾಕಿಸ್ತಾನವು ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ತಲಾ,…
ಬೆಂಗಳೂರು : ಬಾಯಲ್ಲಿ ಸಾಮಾಜಿಕ ನ್ಯಾಯ ಹೇಳೋದು, ಸಾಮಾಜಿಕ ನ್ಯಾಯದ ವಿರೋಧಿಗಳ ಜೊತೆ ಹೋಗಿ ಸೇರೋದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು. ಕಾವೇರಿ ನಿವಾಸದಲ್ಲಿ ಹಿರಿಯ ಪತ್ರಕರ್ತ ಡಾ.ಎಂ.ಎಸ್.ಮಣಿ ಅವರ “ಒಳಕೋವೆ” ಕೃತಿ ಬಿಡುಗಡೆಗೊಳಿಸಿ, ಐದು ಮಂದಿ ಸಾಧಕರಿಗೆ ವಿ.ಪಿ.ಸಿಂಗ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಸಾಮಾಜಿಕ ನ್ಯಾಯದ ಬಗ್ಗೆ ಬದ್ಧತೆ ಇರಬೇಕು. ತೋರಿಕೆ ಇರಬಾರದು. ಇವತ್ತಿನ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಮಾಡುವವರು, ಮಾತಾಡುವವರು ಬಹಳ ಮಂದಿ ಸಿಗ್ತಾರೆ. ಆದರೆ ಬದ್ಧತೆ ಇರುವವರು ಕಡಿಮೆ ಎಂದರು. ಇವತ್ತಿನ ವ್ಯವಸ್ಥೆ ಸುಧಾರಣೆಗೆ ವಿರುದ್ಧವಾದದ್ದು. ವ್ಯವಸ್ಥೆ ಜೊತೆ ರಾಜಿ ಮಾಡಿಕೊಂಡರೆ ಏನಾಗತ್ತೆ, ರಾಜಿ ಮಾಡಿಕೊಳ್ಳದಿದ್ದರೆ ಏನಾಗುತ್ತದೆ ಎನ್ನುವ ಅರಿವು ನನಗೆ ಇದೆ ಎಂದರು. ಈ ಅರಿವು ಎಲ್ಲರಿಗೂ ಇರಬೇಕು. ಜಾತಿ ವ್ಯವಸ್ಥೆಗೆ ಚಲನೆ ಇಲ್ಲ, ವರ್ಗ ವ್ಯವಸ್ಥೆಗೆ ಚಲನೆ ಇದೆ. ಅದಕ್ಕೇ ಬುದ್ದ, ಬಸವ ಅಂಬೇಡ್ಕರ್ ಎಷ್ಟು ಹೋರಾಡಿದರೂ ಜಾತಿ ಹೋಗಿಲ್ಲ. ಜಾತಿ ಎನ್ನುವುದು ಸಾಮಾಜಿಕ ವಾಸ್ತವ. ಸಾಮಾಜಿಕ…
ಹುಬ್ಬಳ್ಳಿ: ಉತ್ತರ ಕರ್ನಾಟಕದ ರೈಲು ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆಯು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ಮತ್ತು ಕುಷ್ಟಗಿ ನಿಲ್ದಾಣಗಳ ನಡುವೆ ಹೊಸ ದೈನಂದಿನ ಎಕ್ಸ್‌ಪ್ರೆಸ್ ರೈಲು ಸೇವೆಗಳನ್ನು ಪ್ರಾರಂಭಿಸಲು ಸಂತಸ ವ್ಯಕ್ತಪಡಿಸಿದೆ. ಉದ್ಘಾಟನಾ ವಿಶೇಷ ರೈಲು: ಗದಗ-ಕುಷ್ಟಗಿ ಹೊಸ ರೈಲು ಮಾರ್ಗದ ಉದ್ಘಾಟನೆಯೊಂದಿಗೆ, ರೈಲು ಸಂಖ್ಯೆ 07353 ಕುಷ್ಟಗಿ – ಎಸ್ಎಸ್ಎಸ್ ಹುಬ್ಬಳ್ಳಿ ಉದ್ಘಾಟನಾ ವಿಶೇಷ ಎಕ್ಸ್‌ಪ್ರೆಸ್ (ಒನ್ ವೇ) ರೈಲಿಗೆ ಮಾನ್ಯ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರು ಮೇ 15, 2024 ರಂದು ಕುಷ್ಟಗಿ ರೈಲು ನಿಲ್ದಾಣದಿಂದ ಹಸಿರು ನಿಶಾನೆ ತೋರಲಿದ್ದಾರೆ. ಈ ಉದ್ಘಾಟನಾ ವಿಶೇಷ ರೈಲು 2 ಎಸ್ಎಲ್ಆರ್/ಡಿ ಮತ್ತು 6 ಸಾಮಾನ್ಯ ದ್ವಿತೀಯ ದರ್ಜೆ/ಸ್ಲೀಪರ್ ದರ್ಜೆಯ ಬೋಗಿಗಳೊಂದಿಗೆ ಕುಷ್ಟಗಿಯಿಂದ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿಗೆ ಚಲಿಸಲಿದ್ದು, ಮಾರ್ಗಮಧ್ಯ, ಈ ರೈಲು ಲಿಂಗನಬಂಡಿ, ಹನಮಾಪೂರ, ಯಲಬುರ್ಗಾ, ಸಂಗನಾಳ, ಕುಕನೂರು, ತಳಕಲ್, ಬನ್ನಿಕೊಪ್ಪ, ಸೋಂಪುರ ರೋಡ್, ಹಳ್ಳಿಗುಡಿ ಹಾಲ್ಟ್, ಹರ್ಲಾಪುರ, ಕಣಗಿನಹಾಳ,…
ಬೆಂಗಳೂರು: ಸಾಮ್ಯಾನವಾಗಿ ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನಲ್ಲಿ ಗುಡುಗು-ಸಿಡಿಲು ಕಾಣಿಸಿಕೊಳ್ಳುತ್ತದೆ. ಸಿಡಿಲು ಸಾಮ್ಯಾನವಾಗಿ ಮಧ್ಯಾಹ್ನ ಅಥವಾ ಸಂಜೆಯಲ್ಲಿ ಸಂಭವಿಸುವ ಸಾಧ್ಯತೆ ಹಚ್ಚಾಗಿರುತ್ತದೆ. ಗುಡುಗು-ಸಿಡಿಲಿನಿಂದಾಗುವ ಅಪಾಯಗಳನ್ನು ತಗ್ಗಿಸಲು ಈ ಕೆಳಕಂಡ ಕ್ರಮಗಳನ್ನು ಕೈಕೊಳ್ಳುವ ಮೂಲಕ ಸಿಡಿಲಿನಿಂದ ರಕ್ಷಿಸಿಕೊಳ್ಳಬಹುದಾಗಿದೆ. ಗುಡುಗು-ಸಿಡಿಲಿ ಸಂದರ್ಭದಲ್ಲಿ ಪಾಲಿಸಬೇಕಾದ ಸಲಹೆ ಸೂಚನೆಗಳು: * ಹೊರಗೆ ಹೋಗುವ ಅನಿವಾರ್ಯವಿದ್ದಲ್ಲಿ ಹವಾಮಾನ ಮುನ್ಸೂಚನೆ ಹಾಗೂ Common Alerting protocol (CAP) ಮುಖಾಂತರ ಬರುವ ಸಂದೇಶಗಳನ್ನು ಮೊಬೈಲ್ ನಲ್ಲಿ ಗಮನಿಸುವುದು. * ಪ್ರತಿಕೂಲ ಹವಾÀಮಾನ ಸಮಯದಲ್ಲಿ ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು, ಜಾನುವಾರುಗಳನ್ನು ಮೇಯಿಸಲು, ಮೀನುಗಾರಿಕೆ ಮತ್ತು ದೋಣಿಗಳನ್ನು ಓಡಿಸಲು ಅಥವಾ ಸಾಮ್ಯಾನ ಪ್ರಯಾಣಕ್ಕಾಗಿ ಹೊರಗೆ ಹೋಗದಿರುವುದು. * ಗುಡುಗು-ಸಿಡಿಲಿ ಸಂದರ್ಭದಲ್ಲಿ ಲೋಹದ ತಗಡನ್ನು ಹೊದಿಸಿರುವ ಮನೆಗಳು ಸುರಕ್ಷಿತವಲ್ಲ,ಸುರಕ್ಷಿತವಾದ ಕಟ್ಟಡಗಳಲ್ಲಿ ಆಶ್ರಯ ಪಡೆಯುವುದು. * ಬೆಟ್ಟಗಳು,ಪರ್ವತ ಶ್ರೇಣಿಗಳು ಅಥವಾ ಶಿಖರಗಳಂತಹ ಎತ್ತರ ಪ್ರದೇಶಗಳಿಂದ ಕೆಳಗೆ ಇಳಿದು ಪ್ರವಾಹ ಬರದಂತಹ ತಗ್ಗು ಪ್ರದೇಶವನ್ನು ಖಚಿತಪಡಿಸಿ ಆಶ್ರಯ ಪಡೆಯುವುದು. * ನೀರಿನ ಮೂಲಗಳಾದ ಕೆರೆ ಮತ್ತು ನದಿಗಳಿಂದ…
ಬೆಂಗಳೂರು: ಅಕ್ಟೋಬರ್ 2 ರಿಂದ 1 ತಿಂಗಳ ಕಾಲ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ನಡೆಸಲು ತೀರ್ಮಾನಿಸಿದ್ದೇವೆ. ಇದಕ್ಕಾಗಿ ₹92 ಕೋಟಿ ಮೀಸಲಿರಿಸಲಾಗಿದೆ. ನಿತ್ಯ ಸುಮಾರು 8 ಸಾವಿರ ಮಂದಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು. ವಿಶೇಷ ಆಕರ್ಷಣೆಗಾಗಿ ದೀಪಾಲಂಕಾರ ಇರಲಿದೆ. ಪಾರ್ಕಿಂಗ್ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಿದ್ದೇವೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ.ರಾಮ್‌ಪ್ರಸಾತ್ ಮನೋಹರ್ ತಿಳಿಸಿದ್ದಾರೆ. https://twitter.com/KarnatakaVarthe/status/1922652777739956471 ಡಿಸಿಎಂ ಡಿಕೆ ಶಿವಕುಮಾರ್ ಅವರ ನಿರ್ದೇಶನದಂತೆ ಕಾಶಿಯಲ್ಲಿ ನಡೆಯುವ ಗಂಗಾ ಆರತಿಯಂತೆ ಮಂಡ್ಯ ಜಿಲ್ಲೆಯ KRS ನಲ್ಲಿ ಕಾವೇರಿ ಆರತಿಯನ್ನು ಶಾಶ್ವತವಾಗಿ ಮುಂದುವರಿಸುವುದರ ಜತೆಗೆ ಅದನ್ನು ಧಾರ್ಮಿಕ, ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಕಾರ್ಯಕ್ರಮವಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಇನ್ನು ಕೇವಲ ನೂರು ದಿನಗಳು ಬಾಕಿಯಿದ್ದು ಸಮರೋಪಾದಿಯಲ್ಲಿ ಸಂಬಂಧಪಟ್ಟ ಇಲಾಖೆಗಳು ಹಾಗೂ ಅಧಿಕಾರಿಗಳು ಕಾರ್ಯನಿರ್ವಹಿಸಬೇಕಾಗಿದೆ. ಕಾವೇರಿ ಆರತಿ ಕುರಿತಂತೆ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿ ಬುಧವಾರ ನಡೆಸಿದ ಮೊದಲ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆಸಲಾಗಿದೆ. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿಯ ಅಧ್ಯಕ್ಷರೂ…
ನೇಪಾಳ : ಬುಧವಾರ ಸಂಜೆ 5:56 ಕ್ಕೆ (IST) ನೇಪಾಳದಲ್ಲಿ ರಿಕ್ಟರ್ ಮಾಪಕದಲ್ಲಿ 3.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ವರದಿ ಮಾಡಿದೆ. NCS ಪ್ರಕಾರ, ಭೂಕಂಪವು 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಭೂಕಂಪವು 27.82 N ಅಕ್ಷಾಂಶ ಮತ್ತು 87.02 E ರೇಖಾಂಶದಲ್ಲಿ ದಾಖಲಾಗಿದೆ ಎಂದು NCS ತಿಳಿಸಿದೆ. https://twitter.com/ncs_earthquake/status/1922633273571996022 X ನಲ್ಲಿನ ಪೋಸ್ಟ್‌ನಲ್ಲಿ, NCS ಹೀಗೆ ಹೇಳಿದೆ, “EQ of M: 3.8, On: 14/05/2025 17:56:01 IST, Lat: 27.82 N, Long: 87.02 E, ಆಳ: 10 Km, ಸ್ಥಳ: ನೇಪಾಳ.” ಸಾವುನೋವುಗಳು ಅಥವಾ ಪ್ರಮುಖ ಹಾನಿಯ ಬಗ್ಗೆ ತಕ್ಷಣದ ವರದಿಗಳಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. https://kannadanewsnow.com/kannada/turkeys-support-for-pakistan-boycott-of-turkish-goods-by-indian-fruit-traders/ https://kannadanewsnow.com/kannada/there-is-big-sweet-news-for-the-doctors-and-staff-nurses-who-will-be-appointed-under-the-nhm-scheme-in-the-state/
ನವದೆಹಲಿ: ಪಾಕಿಸ್ತಾನಕ್ಕೆ ಟರ್ಕಿಯು ಡ್ರೋನ್ ನೀಡುವ ಮೂಲಕ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆಯಲ್ಲಿ ಬೆಂಬಲ ನೀಡಿತ್ತು. ಈ ಹಿನ್ನಲೆಯಲ್ಲಿ ಟರ್ಕಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ಬಾಯ್ ಕಾಟ್ ಟರ್ಕಿ ಅಭಿಯಾನ ಶುರುವಾಗಿದೆ. ಈ ಹಿನ್ನಲೆಯಲ್ಲಿ ಭಾರತದ ಹಣ್ಣು ವ್ಯಾಪಾರಿಗಳು ಟರ್ಕಿಶ್ ಸರಕುಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಪ್ರಾದೇಶಿಕ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ ಪಾಕಿಸ್ತಾನಕ್ಕೆ ಟರ್ಕಿ ಬೆಂಬಲ ವ್ಯಕ್ತಪಡಿಸಿದ ನಂತರ ಭಾರತೀಯ ಹಣ್ಣಿನ ವ್ಯಾಪಾರಿಗಳು ಟರ್ಕಿಶ್ ಸರಕುಗಳನ್ನು, ವಿಶೇಷವಾಗಿ ಸೇಬುಗಳನ್ನು ಬಹಿಷ್ಕರಿಸಲು ಪ್ರಾರಂಭಿಸಿದ್ದಾರೆ. ಹಲವಾರು ನಗರಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ಭಾರತದಲ್ಲಿ ಗಮನಾರ್ಹ ಮಾರುಕಟ್ಟೆಯನ್ನು ಹೊಂದಿರುವ ಟರ್ಕಿಶ್ ಉತ್ಪನ್ನಗಳನ್ನು ಇನ್ನು ಮುಂದೆ ಮಾರಾಟ ಮಾಡುವುದಿಲ್ಲ ಎಂದು ವ್ಯಾಪಾರಿಗಳು ಘೋಷಿಸಿದ್ದಾರೆ. ಭಾರತದ ವಿರುದ್ಧದ ದಾಳಿಗಳಲ್ಲಿ ಬಳಸಲಾದ ಡ್ರೋನ್‌ಗಳನ್ನು ಟರ್ಕಿ ಪಾಕಿಸ್ತಾನಕ್ಕೆ ಪೂರೈಸಿದೆ. ಅದಕ್ಕಾಗಿಯೇ ನಾವು ಟರ್ಕಿಶ್ ಹಣ್ಣುಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ ಎಂದು ಸ್ಥಳೀಯ ಹಣ್ಣಿನ ವ್ಯಾಪಾರಿ ಶಾದಾಬ್ ಖಾನ್ ಹೇಳಿದರು. https://twitter.com/ANI/status/1922586670106280269 ಭಾರತವು ಟರ್ಕಿಯಿಂದ ವಾರ್ಷಿಕವಾಗಿ 1,200 ಕೋಟಿ ರೂ.ಗೂ ಹೆಚ್ಚು ಮೌಲ್ಯದ…
ಕೊಪ್ಪಳ: ನರೇಗಾ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದಂತ ಟಾಟಾ ಏಸ್ ವಾಹನ ಪಲ್ಟಿಯಾದ ಪರಿಣಾಮ, 31 ಜನರು ಗಾಯಗೊಂಡಿರುವಂತ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಬರಗೂರು ಕ್ರಾಸ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ನರೇಗಾ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದಂತ ಟಾಟಾ ಏಸ್ ವಾಹನ ಪಲ್ಟಿಯಾಗಿದೆ. ಈ ಅಪಘಾತದಲ್ಲಿ 31 ಜನ ಗಾಯಗೊಂಡಿದ್ದಾರೆ. ಮುಸ್ಟೂರು ಗ್ರಾಮ ಪಂಚಾಯ್ತಿಯ ನರೇಗಾ ಕಾರ್ಮಿಕರು ಕೆಲಸಕ್ಕಾಗಿ ಟಾಟಾ ಏಸ್ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಬರಗೂರು ಕ್ರಾಸ್ ನಲ್ಲಿ ಟಾಟಾ ಏಸ್ ವಾಹನ ಪಲ್ಟಿಯಾಗಿದೆ. ಈ ಅಪಘಾತದಲ್ಲಿ 31 ಜನರು ಗಾಯಗೊಂಡಿದ್ದಾರೆ. ಇವರಲ್ಲಿ ಮೂವರ ಸ್ಥಿತಿ ಗಂಭೀರ ಎಂಬುದಾಗಿ ತಿಳಿದು ಬಂದಿದೆ. https://kannadanewsnow.com/kannada/jnu-has-suspended-the-agreement-with-turkeys-inonu-university/ https://kannadanewsnow.com/kannada/there-is-big-sweet-news-for-the-doctors-and-staff-nurses-who-will-be-appointed-under-the-nhm-scheme-in-the-state/













