Subscribe to Updates
Get the latest creative news from FooBar about art, design and business.
Author: kannadanewsnow09
ಕೆಎನ್ಎನ್ ಸ್ಪೋರ್ಟ್ಸ್: ಮೆಲ್ಬೋರ್ನ್ನಲ್ಲಿ ಭಾನುವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಚೆಂಡಿನೊಂದಿಗೆ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದರು. ಎಂಸಿಜಿಯಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ನ ನಾಲ್ಕನೇ ದಿನದಂದು ಬುಮ್ರಾ ತಮ್ಮ 200 ಟೆಸ್ಟ್ ವಿಕೆಟ್ಗಳನ್ನು ಪೂರೈಸುವ ಮೂಲಕ ಇತಿಹಾಸ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 20 ಕ್ಕಿಂತ ಕಡಿಮೆ ಸರಾಸರಿಯಲ್ಲಿ 200 ಕ್ಕೂ ಹೆಚ್ಚು ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್ನಲ್ಲಿ ಟ್ರಾವಿಸ್ ಹೆಡ್ ಅವರನ್ನು 1 ರನ್ಗೆ ಔಟ್ ಮಾಡಿದ ನಂತರ ಅವರು ಈ ಮೈಲಿಗಲ್ಲನ್ನು ತಲುಪಿದರು. ಮೆಲ್ಬೋರ್ನ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 44ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಬುಮ್ರಾ 19.38ರ ಸರಾಸರಿಯಲ್ಲಿ 202 ವಿಕೆಟ್ಗಳನ್ನು ಪಡೆದಿದ್ದಾರೆ. ವೆಸ್ಟ್ ಇಂಡೀಸ್ನ ಮಾಲ್ಕಮ್ ಮಾರ್ಷಲ್ (376 ವಿಕೆಟ್, 20.94 ಸರಾಸರಿ), ಜೋಯಲ್ ಗಾರ್ನರ್ (259 ವಿಕೆಟ್, 20.97 ಸರಾಸರಿ) ಮತ್ತು ಕರ್ಟ್ಲಿ ಆಂಬ್ರೋಸ್ (405 ವಿಕೆಟ್, 20.99 ಸರಾಸರಿ) ನಂತರದ ಸ್ಥಾನದಲ್ಲಿದ್ದಾರೆ. ಟೆಸ್ಟ್ನಲ್ಲಿ…
ಬೆಂಗಳೂರು: ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆಗೆ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಕಾರಣ. ಊರಿಗೆಲ್ಲಾ ಉಪದೇಶ ಮಾಡುವ ಪ್ರಿಯಾಂಕ್ ಖರ್ಗೆ ಮೊದಲು ರಾಜೀನಾಮೆ ಕೊಟ್ಟು ನೈತಿಕತೆ ಪ್ರದರ್ಶನ ಮಾಡಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ. ಈ ಕುರಿತು ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಖರ್ಗೆ ಕುಟುಂಬಕ್ಕೆ ಅಂಬೇಡ್ಕರ್ ಸಂವಿಧಾನ ಅನ್ವಯ ಆಗುವುದಿಲ್ಲವೇ? ಊರಿಗೆಲ್ಲಾ ಉಪದೇಶ ಮಾಡುವ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ಕೊಟ್ಟು ನೈತಿಕತೆ ಪ್ರದರ್ಶನ ಮಾಡಲಿ. ಪ್ರಿಯಾಂಕ್ ಖರ್ಗೆ ಕಲಬುರ್ಗಿ ನಿಜಾಮನೂ ಅಲ್ಲ, ಅವರ ಅನುಯಾಯಿಗಳು ರಜಾಕಾರರೂ ಅಲ್ಲ. ಗುತ್ತಿಗೆದಾರ ಸಚಿನ್ ಸಾವಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆಯವರ ಆಪ್ತರ ಪಾತ್ರವಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಅವರು ಕೂಡಲೇ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದ್ದಾರೆ. ಈ ಹಿಂದೆ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಾಗ, ಸಚಿವ ಈಶ್ವರಪ್ಪನವರ ರಾಜೀನಾಮೆ ಕೇಳಲಾಗಿತ್ತು. ಈಗ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲಿ. ಸಚಿನ್ ಪಾಂಚಾಳ ಅವರು ಡೆತ್ನೋಟ್ನಲ್ಲಿ ರಾಜು ಕಪನೂರು ಹೆಸರು ಬರೆದಿಟ್ಟು, ಬಳಿಕ ರೈಲಿಗೆ…
ನವದೆಹಲಿ: ಭಾರತದ ಯುವ ವೇಗದ ಬೌಲರ್ ಅರ್ಷ್ದೀಪ್ ಸಿಂಗ್ ಅವರನ್ನು ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ವರ್ಷದ ಪುರುಷರ ಟಿ 20 ಐ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ. ಅರ್ಷ್ದೀಪ್ 2024 ರ ಟಿ 20 ವಿಶ್ವಕಪ್ನಲ್ಲಿ ಎಂಟು ಪಂದ್ಯಗಳಿಂದ 12.64 ಸರಾಸರಿ ಮತ್ತು 7.16 ಎಕಾನಮಿಯೊಂದಿಗೆ 17 ವಿಕೆಟ್ಗಳನ್ನು ಪಡೆಯುವ ಮೂಲಕ ಜಂಟಿಯಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಎಡಗೈ ವೇಗಿ ಟೆಸ್ಟ್ ಆಡುವ ರಾಷ್ಟ್ರಗಳಲ್ಲಿ 18 ಪಂದ್ಯಗಳಿಂದ 13.50 ಸರಾಸರಿಯಲ್ಲಿ 36 ವಿಕೆಟ್ಗಳನ್ನು ಮತ್ತು 7.49 ಎಕಾನಮಿಯೊಂದಿಗೆ ವರ್ಷದ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. 2024ರ ಟಿ20 ವಿಶ್ವಕಪ್ನಲ್ಲಿ ( T20 World Cup 2024 ) ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಟೂರ್ನಿಯ ಶ್ರೇಷ್ಠ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಬುಮ್ರಾ ವಿಶ್ವಕಪ್ನಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದು, ಎಂಟು ಪಂದ್ಯಗಳಿಂದ 8.26…
ಶಿವಮೊಗ್ಗ: ಜಿಲ್ಲೆಯ ಜನರು ಎಲ್ಲೆಲ್ಲೋ ಹೋಗಿ ಹೊಸ ವರ್ಷವನ್ನು ಡಿಸೆಂಬರ್.31ರಂದು ಆಚರಿಸೋದು ಯಾಕೆ.? ನೀವು, ನಿಮ್ಮ ಕುಟುಂಬಸ್ಥರು ಜೊತೆಗೂಡಿ ಹೊಸ ವರ್ಷವನ್ನು ಆಚರಿಸೋದಕ್ಕೆ ಸದ್ಗುರು ಗ್ರೂಪ್ಸ್ ಸಿದ್ಧವಾಗಿದೆ. ಅದೆಲ್ಲಿ ಅಂತ ಮುಂದೆ ಓದಿ. ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಸದ್ಗುರು ಗ್ರೂಪ್ಸ್ ನಿಂದ ಇದೇ ಮೊದಲ ಬಾರಿಗೆ ಹೊಸ ವರ್ಷಾಚರಣೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಲೈವ್ ಡಿಜೆ ಜೊತೆಗೆ ಹಾಡು, ಕುಣಿತದ ರಸದೌತಣವನ್ನು ನೀಡಲು ವೇದಿಕೆಯನ್ನು ಸಜ್ಜುಗೊಳಿಸಿದೆ. ಸಾಗರದ ಕೂಗಳತೆ ದೂರದಲ್ಲಿರುವಂತ ತ್ಯಾಗರ್ತಿ ಕ್ರಾಸ್ ಬಳಿಯಲ್ಲಿ ಬಹುದೊಡ್ಡ ಹೊಸ ವರ್ಷಾಚರಣೆಯ ಮಲ್ನಾಡ್ ಕಾರ್ನಿವಲ್ ಕಾರ್ಯಕ್ರಮವನ್ನು ಸಾರ್ವಜನಿಕರಿಗಾಗಿ ಆಯೋಜಿಸಲಾಗಿದೆ. ವೆಜ್ ಅಂಡ್ ನಾನ್ ವೆಜ್ ಊಟದ ಜೊತೆಗೆ ಲೈವ್ ಸಂಗೀತವನ್ನು ಖ್ಯಾತ, ಪ್ರಸಿದ್ಧ ಗಾಯಕರಿಂದ ಕೇಳಿ, ಕುಣಿದು ಸಂಭ್ರಮಿಸಬಹುದಾಗಿದೆ. 0-9 ವರ್ಷದೊಳಗಿನವರಿಗೆ ಪ್ರವೇಶ ಉಚಿತವಾಗಿದೆ. 18 ವರ್ಷದ ಒಳಗಿನವರಿಗೂ ರೂ.499 ಹಾಗೂ 19 ವರ್ಷ ಮೇಲ್ಪಟ್ಟವರಿಗೆ ರೂ.699 ಟಿಕೆಟ್ ಶುಲ್ಕವನ್ನು ನಿಗದಿಪಡಿಸಲಾಗಿದೆ. ಟಿಕೆಟ್ ಆನ್ ಲೈನ್ ನಲ್ಲಿ ಖರೀದಿಸುವುದಾದರೇ ಇಂದೇ https://hotelsadguruandtours.com/malnad_carnival/booking/ ಲಿಂಕ್ ಕ್ಲಿಕ್…
ನವದೆಹಲಿ: ಖ್ಯಾತ ಮಲಯಾಳಂ ಚಲನಚಿತ್ರ ಮತ್ತು ಟಿವಿ ನಟ ದಿಲೀಪ್ ಶಂಕರ್ ತಿರುವನಂತಪುರಂನ ವ್ಯಾನ್ರೋಸ್ ಜಂಕ್ಷನ್ನ ಖಾಸಗಿ ಹೋಟೆಲ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಸಾವಿಗೆ ನಿಖರವಾದ ಕಾರಣವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಅಮ್ಮಾ ಅರಿಯತೆ, ಸುಂದರಿ ಮತ್ತು ಪಂಚಾಗ್ನಿಯಂತಹ ಹಿಟ್ ಧಾರಾವಾಹಿಗಳಲ್ಲಿನ ಅಭಿನಯಕ್ಕಾಗಿ ಹೆಸರುವಾಸಿಯಾದ ದಿಲೀಪ್ ಶಂಕರ್ ಮಲಯಾಳಂ ಮನರಂಜನೆಯಲ್ಲಿ ಪರಿಚಿತ ಮುಖವಾಗಿದ್ದರು. ದೂರದರ್ಶನ ಧಾರಾವಾಹಿಗೆ ಸಂಬಂಧಿಸಿದ ಕೆಲಸಕ್ಕಾಗಿ ಅವರು ನಾಲ್ಕು ದಿನಗಳ ಹಿಂದೆ ಹೋಟೆಲ್ ಗೆ ಚೆಕ್ ಇನ್ ಮಾಡಿದ್ದರು ಎಂದು ವರದಿಗಳು ಸೂಚಿಸುತ್ತವೆ. ಕೆಲ ದಿನಗಳಿಂದ ಹೋಟೆಲ್ ಕೋಣೆಯಿಂದ ಹೊರಗೆ ಬಾರದ ಕಾರಣ ಹೋಟೆಲ್ ಸಿಬ್ಬಂದಿ ನೋಡಿದಾಗ ನಟ ದಿಲೀಪ್ ಶಂಕರ್ ಶವ ಪತ್ತೆಯಾಗಿದೆ. ಈ ಮಾಹಿತಿಯನ್ನು ಪೊಲೀಸರಿಗೆ ಹೋಟೆಲ್ ಸಿಬ್ಬಂದಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಬಾಗಿಲು ತೆರೆದು ಪರಿಶೀಲಿಸಿ, ಪ್ರಕರಣ ದಾಖಲಿಸಿ ತನಿಖೆಗೆ ಕೈಗೊಂಡಿದ್ದಾರೆ. https://kannadanewsnow.com/kannada/kpsc-kas-exam-2024-omr-sheet-registration-number-changed/ https://kannadanewsnow.com/kannada/pakistani-soldier-killed-11-injured-in-afghan-taliban-firing/
ವಿಜಯಪುರ: ಈ ಹಿಂದೆ ಕೆಪಿಎಸ್ಸಿ ಕೆಎಎಸ್ ಪರೀಕ್ಷೆಯಲ್ಲಿ ಎಡವಟ್ಟು ಮಾಡಿದ್ದ ಕಾರಣ ಪರೀಕ್ಷೆ ರದ್ದುಗೊಳಿಸಿ ಮರು ಪರೀಕ್ಷೆ ನಡೆಸಲಾಗಿತ್ತು. ಈಗ ಮತ್ತೊಂದು ಎಡವಟ್ಟು ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ನೀಡಲಾದ ಓಎಂಆರ್ ಪತ್ರಿಕೆಯ ನೋಂದಣಿ ಸಂಖ್ಯೆಯೇ ಬದಲಾಗಿದ್ದು, ಅಭ್ಯರ್ಥಿಗಳು ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದಂತ ಘಟನೆ ನಡೆದಿದೆ. ರಾಜ್ಯಾಧ್ಯಂತ ಇಂದು ಕೆಪಿಎಸ್ಸಿಯ ಕೆಎಎಸ್ 384 ಹುದ್ದೆಗಳಿಗೆ ಪೂರ್ವಭಾವಿ ಮರು ಪರೀಕ್ಷೆ ನಡೆಸಲಾಯಿತು. ವಿಜಯಪುರದ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಮಹಾ ಎಡವಟ್ಟು ಮಾಡಿರುವುದು ತಿಳಿದು ಬಂದಿದೆ. ಅಭ್ಯರ್ಥಿಗಳಿಗೆ ನೀಡಲಾಗಿದ್ದಂತ ಓಎಂಆರ್ ಶೀಟ್ ನೋಂದಣಿ ಸಂಖ್ಯೆಯನ್ನೇ ಅದಲು ಬದಲು ಮಾಡಲಾಗಿದೆ. ಇದನ್ನು ಗಮನಿಸಿದಂತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇನ್ನೂ ಸಿಕ್ಯಾಬ್ ಸಂಸ್ಥೆಯ ಎರಡು ಕೇಂದ್ರಗಳು, ಮರಾಠಿ ಮಹಾವಿದ್ಯಾಲಯ, ವಿಕಾಸ ವಿದ್ಯಾಲಯದಲ್ಲಿ ನಾಲ್ಕು ಕೇಂದ್ರಗಳಲ್ಲಿ ಓಎಂಆರ್ ನಂಬರ್ ಹಾಗೂ ನೋಂದಣಿ ಸಂಖ್ಯೆ ಬದಲಾವಣೆ ಆಗಿರೋದು ಕಂಡು ಬಂದಿದೆ. ಇದರ ವಿರುದ್ಧ ಅಭ್ಯರ್ಥಿಗಳು ಎರಡು ಗಂಟೆಗಳ ಕಾಲ ಪರೀಕ್ಷಾ ಕೇಂದ್ರದ ಹೊರಗೆ ಪ್ರತಿಭಟನೆ ನಡೆಸಿದರು. https://kannadanewsnow.com/kannada/sachin-suicide-case-minister-ishwar-khandre-announces-rs-10-lakh-compensation-from-state-govt/…
ಬೀದರ್: ಗುತ್ತಿಗೆದಾರ ಸಚಿನ್ ಪಾಂಚಾಳ್ ಅವರು ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ಕೊಲೆ ಬೆದರಿಕೆ ಹಾಕಿದ್ದಾರೆ ಅಂತ ಆರೋಪಿಸಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂತಹ ಗುತ್ತಿಗೆದಾರ ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರ 10 ಲಕ್ಷ ಪರಿಹಾರ ನೀಡುವುದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಘೋಷಿಸಿದ್ದಾರೆ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಚಿನ್ ಪಾಂಚಾಳ್ ಆತ್ಮಹತ್ಯೆಗೆ ಸಂತಾಪವಿದೆ. ಈ ಘಟನೆಯಲ್ಲಿ ಕರ್ತವ್ಯ ಲೋಪ ಎಸಗಿದಂತ ಪೊಲೀಸರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಈ ಪ್ರಕರಣವನ್ನು ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದರು. ಇನ್ನೂ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಕಟ್ಟಿತೊಗಾಂವ್ ಗ್ರಾಮದ ಸಚಿನ್ ಪಾಂಚಾಳ್ ಅವರ ಮನೆಗೆ ಭೇಟಿ ನೀಡಿದಂತ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಅಲ್ಲದೇ ಸಚಿನ್ ಕುಟುಂಬಸ್ಥರಿಗೆ ಸರ್ಕಾರದಿಂದ 10 ಲಕ್ಷ ಪರಿಹಾರವನ್ನು ನೀಡುವುದಾಗಿ ಇದೇ ಸಂದರ್ಭದಲ್ಲಿ ಘೋಷಿಸಿದರು. https://kannadanewsnow.com/kannada/it-is-mandatory-to-upload-these-five-documents-to-get-e-khata/ https://kannadanewsnow.com/kannada/pakistani-soldier-killed-11-injured-in-afghan-taliban-firing/
ಬೆಂಗಳೂರು: ನಗರದಲ್ಲಿ ಆಸ್ತಿ ಮಾಲೀಕರಿಗೆ ಇ-ಖಾತಾ ಪಡೆಯಲು ಬಿಬಿಎಂಪಿ ಮಹತ್ವದ ಮಾಹಿತಿ ಹಂಚಿಕೊಂಡಿದೆ. ಆಸ್ತಿ ಮಾಲೀಕರು ಈ ಐದು ದಾಖಲೆಗಳನ್ನು ಕಡ್ಡಾಯವಾಗಿ ಅಪ್ ಲೋಡ್ ಮಾಡಬೇಕಿದೆ. ಆ ಬಗ್ಗೆ ಮುಂದೆ ಓದಿ. ಬಿಬಿಎಂಪಿ ಇ-ಖಾತಾ 22 ಲಕ್ಷ ಆಸ್ತಿಗಳು https://bbmpeaasthi.karnataka.gov.in ನಲ್ಲಿ ಲಭ್ಯವಿದೆ. ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ದೂರದೃಷ್ಟಿ ಮತ್ತು ನಾಯಕತ್ವದಲ್ಲಿ ಬಿಬಿಎಂಪಿಯು ಎಲ್ಲಾ ಬೆಂಗಳೂರಿಗರಿಗೆ ತಮ್ಮ ಸ್ವತ್ತುಗಳ ಬಿಬಿಎಂಪಿ ಇ-ಖಾತಾಗಳನ್ನು ನೀಡಲು ಸುಮಾರು 22-ಲಕ್ಷ ಕರಡು ಇ-ಖಾತಾಗಳನ್ನು ಆನ್ಲೈನ್ನಲ್ಲಿ ಇರಿಸಲಾಗಿರುತ್ತದೆ. ಎಲ್ಲಾ ನಾಗರೀಕರು ತಮ್ಮ ಬಿಬಿಎಂಪಿ ಇ-ಖಾತಾ ಪಡೆಯಲು ವಿನಂತಿಸಲಾಗಿದೆ. ಬಿಬಿಎಂಪಿಯ ಇ-ಖಾತಾ ಈಗ ನಾಗರೀಕರ ನಿಯಂತ್ರಣದಲ್ಲಿದೆ ಹಾಗೂ ಪ್ರತಿಯೊಬ್ಬರಿಗೂ ಬಿಬಿಎಂಪಿಯ ಇ-ಖಾತಾವನ್ನು ಪಾಲಿಕೆ ಜಾಲತಾಣ https://bbmpeaasthi.karnataka.gov.in ರಲ್ಲಿ ಪಡೆಯಲು ಪಾಲಿಕೆಯಲ್ಲಿ ಸಂಪರ್ಕರಹಿತ, ಫೇಸ್ಲೆಸ್, ಆನ್ಲೈನ್ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ನಿಮ್ಮ ಆಸ್ತಿ ಇ-ಖಾತಾ ಆನ್ಲೈನ್ನಲ್ಲಿದೆ ಮತ್ತು ಅದನ್ನು ಸರಾಗವಾಗಿ ಈ ಕೆಳಗಿನಂತೆ ಪಡೆಯಿರಿ: 1. ನಿಮ್ಮ ಕರಡು ಇ-ಖಾತಾವನ್ನು ವಾರ್ಡ್ ವಾರು ಪಟ್ಟಿಯಲ್ಲಿ ಹುಡುಕಿ. (ನಿಮ್ಮ…
ಬೆಂಗಳೂರು: ರಾಜ್ಯದಲ್ಲಿ ಸಾವಿರಾರು ಜನರು ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸೋದಕ್ಕೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಅವರಿಗೆ ಗುಡ್ ನ್ಯೂಸ್ ಎನ್ನುವಂತೆ ಶೀಘ್ರವೇ ಸರ್ಕಾರದಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸೋದಕ್ಕೆ ಆರಂಭ ಮಾಡಲಿದೆ. ಹೀಗಾಗಿ ನೀವು ಹೊಸದಾಗಿ BPL, APL ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸೋ ನಿರೀಕ್ಷೆಯಲ್ಲಿದ್ದರೇ ಈ ಕೆಳಗಿನ ದಾಖಲೆಗಳನ್ನು ರೆಡಿ ಇಟ್ಕೊಳ್ಳಿ. ಕರ್ನಾಟಕ ರಾಜ್ಯ ಸರ್ಕಾರವು ಹೊಸ ಪಡಿತರ ಚೀಟಿಗಾಗಿ ಅರ್ಜಿಯನ್ನು ಶೀಘ್ರವೇ ಪ್ರಾರಂಭಿಸಲಿದೆ. ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಬಯಸುವ ಕರ್ನಾಟಕ ರಾಜ್ಯದ ಎಲ್ಲಾ ಖಾಯಂ ನಿವಾಸಿಗಳು ಈಗ ಅಧಿಕೃತ ahara.kar.nic.in ವೆಬ್ಸೈಟ್ಗೆ ಭೇಟಿ ನೀಡಬಹುದು. ಕರ್ನಾಟಕ ರಾಜ್ಯದಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು. ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಆನ್ ಲೈನ್ ವ್ಯವಸ್ಥೆಯ ಸಹಾಯದಿಂದ ಅರ್ಜಿದಾರರು ಮತ್ತು ಸರ್ಕಾರ ಇಬ್ಬರೂ ಸಾಕಷ್ಟು ಸಮಯ ಮತ್ತು ಶ್ರಮವನ್ನು ಉಳಿಸಬಹುದು. ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳು ಮಾತ್ರ…
ಬೆಂಗಳೂರು: ಮಾಜಿ ಸಂಸದ ಡಿ.ಕೆ ಸುರೇಶ್ ಅವರ ಸಹೋದರಿ ಅಂತ ಹೇಳಿಕೊಂಡು ಜ್ಯೂವೆಲ್ಲರಿ ಅಂಗಡಿಗೆ ಶ್ವೇತಾಗೌಡ ಎಂಬುವರು ಮೋಸ ಮಾಡಿದ್ದಾರೆ ಎಂಬುದಾಗಿ ಆರೋಪಿಸಲಾಗಿತ್ತು. ಈ ಬಗ್ಗೆ ಡಿಕೆ ಸುರೇಶ್ ಏನು ಹೇಳಿದ್ರು ಅಂತ ಮುಂದೆ ಓದಿ. ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ನನ್ನ ಹೆಸರನ್ನು ಬಳಸಿಕೊಂಡು ಶ್ವೇತಗೌಡ ಎಂಬಾಕೆ ಚಿನ್ನದ ಅಂಗಡಿ ಮಾಲೀಕರಿಗೆ ವಂಚಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ನನ್ನ ಹೆಸರು ದುರುಪಯೋಗ ಮಾಡಿಕೊಂಡು ಹೀಗೆ ಮಾಡಲಾಗಿದೆ. ಪೊಲೀಸರಿಂದ ಮಾಹಿತಿ ಪಡೆದು, ಇನ್ನೊಂದು ಎರಡು ಮೂರು ದಿನಗಳಲ್ಲೇ ಪೊಲೀಸ್ ಕಮೀಷನರಿಗೆ ದೂರು ನೀಡುತ್ತೇನೆ ಎಂದರು. ಈ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕ್ರಮ ಕೈಗೊಳ್ಳಲಿದೆ. ಈ ಸಂಬಂಧ ಸಮಗ್ರ ತನಿಖೆ ನಡೆಯಲಿ ಅಂತ ತಾನು ಗೃಹ ಸಚಿವರಿಗೆ ಪತ್ರ ಬರೆಯುವುದಾಗಿಯೂ ತಿಳಿಸಿದರು. ನನಗೂ ಶ್ವೇತಾಗೌಡಗೂ ಯಾವುದೇ ಸಂಬಂಧವಿಲ್ಲ. ಒಂದೆರಡು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಆಗ ನಾನು ಹೋಗಿದ್ದೆ. ಅದು ಬಿಟ್ಟರೆ ಆಕೆ ನನಗೆ ಪರಿಚಯವಿಲ್ಲ. ನನಗೆ ಇರೋದು ಒಬ್ಬಳೇ ತಂಗಿ ಎಂಬುದಾಗಿ ಸ್ಪಷ್ಟ…