Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಮಂಗಳವಾರ ನಡೆದ ಎಐಸಿಸಿಯ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಸಭೆ ಬಳಿಕ ನಡೆದ ಮಾಧ್ಯಮಗೋಷ್ಠಿಯ ಮುಖ್ಯಾಂಶಗಳನ್ನು ಮುಂದೆ ಓದಿ. ಎಐಸಿಸಿ ಒಬಿಸಿ ಅಧ್ಯಕ್ಷರಾದ ಅನಿಲ್ ಜೈಹಿಂದ್: ಇಂದು ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಆರಂಭಿಕ ಸಭೆಯನ್ನು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯಿತು. ಈ ಸಮಿತಿಯನ್ನು ಇತ್ತೀಚೆಗೆ ಆಯೋಜಿಸಲಾಗಿದ್ದು, ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷನಾಗಿರುವ ನಾನು ಈ ಸಮಿತಿಯ ಸಂಚಾಲಕನಾಗಿದ್ದೇನೆ. ಇಂದಿನ ಸಭೆಯಲ್ಲಿ ಕೆಲ ವಿಚಾರಗಳನ್ನು ಚರ್ಚೆ ಮಾಡಲಾಗಿದ್ದು, ಪಕ್ಷದ ಎಲ್ಲಾ ಹಿಂದುಳಿದ ವರ್ಗಗಳ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆ ಬುಧವಾರವೂ ಮುಂದುವರಿಯುವುದರಿಂದ ಇಂದಿನ ಸಭೆಯಲ್ಲಿ ಚರ್ಚೆಯಾದ ವಿಚಾರಗಳ ಬಗ್ಗೆ ನಾನು ಯಾವುದೇ ಅಂಶ ಬಹಿರಂಗಪಡಿಸುವುದಿಲ್ಲ. ಬುಧವಾರ ಸಭೆ ಬಳಿಕ ಈ ಸಭೆಯಲ್ಲಿ ಚರ್ಚಿಸಲಾದ ಅಂಶಗಳು ಹಾಗೂ ಕೈಗೊಂಡ ನಿರ್ಣಯಗಳ ಬಗ್ಗೆ ಮಾಹಿತಿ ನೀಡಲಾಗುವುದು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ…
ಬೆಂಗಳೂರು: ನಗರದಲ್ಲಿ ರೌಡಿ ಶೀಟರ್ ಶಿವಕುಮಾರ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಬೆಂಗಳೂರಿನ ಹಲಸೂರು ಕೆರೆ ಬಳಿಯ ಮನೆಯ ಮುಂದೆ ರೌಡಿ ಶೀಟರ್ ಶಿವಕುಮಾರ್ ಆಲಿಯಾಸ್ ಬಿಕ್ಲು ಶಿವ ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಗೈದಿದ್ದಾರೆ. ಮನೆ ಮುಂದೆ ನಿಂತಿದ್ದಾಗಲೇ ನಾಲ್ಕೈದು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಬರ್ಬರವಾಗಿ ಕೊಚ್ಚಿ ಕೊಲೆ ಗೈದಿದ್ದಾರೆ. ಬಿಕ್ಲು ಶಿವನನ್ನು ಕೊಚ್ಚಿ ಕೊಲೆಗೈದು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಡಿಸಿಪಿ ಡಿ.ದೇವರಾಜ, ಜಂಟಿ ಪೊಲೀಸ್ ಆಯುಕ್ತ ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. https://kannadanewsnow.com/kannada/good-news-for-those-waiting-for-mds-admission-opportunity-to-pay-fees-until-july-17/ https://kannadanewsnow.com/kannada/illegal-order-for-government-land-fir-registered-against-ias-officer-vasanti-amar/
ಬೆಂಗಳೂರು: 2025ನೇ ಸಾಲಿನ ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದಂತೆ ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದ್ದು, ಆಸಕ್ತರಿಗೆ ತಮಗೆ ಸೂಕ್ತ ಎನಿಸುವ ಛಾಯ್ಸ್ ದಾಖಲಿಸಿ, ಶುಲ್ಕ ಪಾವತಿಸಲು ಜುಲೈ 17 ಕೊನೆ ದಿನವಾಗಿದೆ. ಛಾಯ್ಸ್-1 ಮತ್ತು 2 ಆಯ್ಕೆ ಮಾಡಿದ ಅಭ್ಯರ್ಥಿಗಳು ಮಾತ್ರ ಶುಲ್ಕ ಪಾವತಿಸಬೇಕು. ಛಾಯ್ಸ್- 1 ಆಯ್ಕೆ ಮಾಡಿದವರು ಜು.16 ಮತ್ತು 17 ರಂದು ಮೂಲ ದಾಖಲೆಗಳ ಸಮೇತ ಕೆಇಎ ಕಚೆರಿಗೆ ಬಂದು ಸಲ್ಲಿಸಿ, ಪ್ರವೇಶ ಪತ್ರಗಳನ್ನು ಪಡೆಯಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. ಅಭ್ಯರ್ಥಿಗಳು ಜು.18ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದೂ ಅವರು ವಿವರಿಸಿದ್ದಾರೆ. ಎನ್ ಆರ್ ಐ ವಾರ್ಡ್ ಕ್ಯಾಟಗರಿಯಡಿ ಸೀಟು ಪಡೆದವರ ಶುಲ್ಕವನ್ನು ಪ್ರಾಯೋಜಿಸಿದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದಲೇ ಕೆಇಎ ಖಾತೆಗೆ ಹಣ ಸಂದಾಯ ಮಾಡಬೇಕು. ಒಂದು ವೇಳೆ ಸದ್ಯಕ್ಕೆ ಆ ರೀತಿ ಹಣ ವರ್ಗಾವಣೆ ಮಾಡಿಸಲು ಸಾಧ್ಯವಾಗದಿದ್ದರೆ ಕೆಇಎಗೆ ಡಿ.ಡಿ ಸಲ್ಲಿಸಿ, ಪ್ರವೇಶ…
ಉಕ್ರೇನ್: ಉಕ್ರೇನಿಯನ್ ಪ್ರಧಾನಿ ಡೆನಿಸ್ ಶ್ಮಿಹಾಲ್ ಮಂಗಳವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದು ಈ ವಾರದ ಕೊನೆಯಲ್ಲಿ ನಡೆಯಲಿರುವ ಪ್ರಮುಖ ಸರ್ಕಾರಿ ಪುನರ್ರಚನೆಗೆ ನಾಂದಿ ಹಾಡಿದೆ. ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಉಕ್ರೇನ್ನ ನಾಯಕತ್ವ ತಂಡದಲ್ಲಿ ವ್ಯಾಪಕವಾದ ಕೂಲಂಕಷ ಪರೀಕ್ಷೆಯನ್ನು ಪ್ರಸ್ತಾಪಿಸಿದ ಒಂದು ದಿನದ ನಂತರ ಈ ಘೋಷಣೆ ಹೊರಬಿದ್ದಿದ್ದು, ಶ್ಮಿಹಾಲ್ ಅವರ ನಂತರ ಪ್ರಧಾನಿಯಾಗಿ ಮೊದಲ ಉಪ ಪ್ರಧಾನ ಮಂತ್ರಿ ಮತ್ತು ಆರ್ಥಿಕ ಸಚಿವೆ ಯೂಲಿಯಾ ಸ್ವೈರಿಡೆಂಕೊ ಅವರನ್ನು ನಾಮನಿರ್ದೇಶನ ಮಾಡಿದ್ದಾರೆ. ಮಾರ್ಚ್ 2020 ರಿಂದ ಈ ಹುದ್ದೆಯನ್ನು ಅಲಂಕರಿಸಿರುವ ಶ್ಮಿಹಾಲ್, 1991 ರಲ್ಲಿ ದೇಶದ ಸ್ವಾತಂತ್ರ್ಯದ ನಂತರ ಉಕ್ರೇನ್ನಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ಅವರು ಈಗ ರಕ್ಷಣಾ ಸಚಿವ ರುಸ್ಟೆಮ್ ಉಮೆರೋವ್ ಅವರನ್ನು ಬದಲಿಸುವ ನಿರೀಕ್ಷೆಯಿದೆ. ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು “ಬಹಳ ಮುಖ್ಯವಾದ ಕೆಲಸ” ಕ್ಕೆ ಸರಿಯಾದ ಅರ್ಹತೆಗಳನ್ನು ಹೊಂದಿದ್ದಾರೆ ಎಂದು ಬಣ್ಣಿಸಿದ್ದಾರೆ. ಶ್ಮಿಹಾಲ್ ಅವರ “ಅಗಾಧ ಅನುಭವ” ವನ್ನು ಝೆಲೆನ್ಸ್ಕಿ…
ವಿಜಯಪುರ: ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಮಲಗಿದ್ದಲ್ಲೇ ಹೃದಯಾಘಾತದಿಂದ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ವಿಜಯಪುರ ತಾಲ್ಲೂಕಿನ ಶಿವಣಗಿ ಗ್ರಾಮದಲ್ಲಿ ಹೃದಯಾಘಾತಕ್ಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿ ಬಲಿಯಾಗಿದ್ದಾನೆ. ಹೃದಯಾಘಾತದಿಂದ ಸಿದ್ಧಾರ್ಥ ಬಡಿಗೇರ(18) ಸಾವನ್ನಪ್ಪಿದ್ದಾನೆ. ಮನೆಯಲ್ಲಿ ಮಲಗಿದ್ದಾಗಲೇ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಿದ್ಧಾರ್ಥಗೆ ಹೃದಯಾಘಾತ ಉಂಟಾಗಿದೆ. ಹೀಗಾಗಿ ಮಲಗಿದ್ದಲ್ಲೇ ಸಾವನ್ನಪ್ಪಿದ್ದಾನೆ. https://kannadanewsnow.com/kannada/extend-the-media-sanjeevini-scheme-to-all-journalists-kuwj-president-shivananda-tagadurs-plea-to-the-cm/ https://kannadanewsnow.com/kannada/special-digi-locker-technology-for-registration-of-healthcare-providers-in-the-state-cm-siddaramaiah-inaugurates/
ಮಂಡ್ಯ : ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಗಬೋರನದೊಡ್ಡಿ ಗ್ರಾಮದ ತೆಂಗಿನ ಕಾಯಿ ವ್ಯಾಪಾರಿಯಾದ ರಾಜಣ್ಣ (ಲಿಂಗರಾಜು) ಅವರು ಸೋಮವಾರದಂದು ವೇಳೆಯಲ್ಲಿ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಅವರನ್ನು ಸ್ಥಳೀಯ ಶ್ರೀ ಚಾಮುಂಡೇಶ್ವರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾದಂತೆ ಆಗಿದೆ. https://kannadanewsnow.com/kannada/reliance-logo-brand-cannot-be-used-for-online-products-delhi-high-court-order/ https://kannadanewsnow.com/kannada/the-government-has-ordered-the-implementation-of-uniform-rates-in-all-multiplexes-and-cinema-halls-in-the-state/
ದೆಹಲಿ : ದೆಹಲಿ ಹೈ ಕೋರ್ಟ್ ನಿಂದ ಮಂಗಳವಾರದಂದು ರಿಲಯನ್ಸ್ ಪರವಾಗಿ ಮಹತ್ವದ ಆದೇಶವೊಂದು ಬಂದಿದೆ. ಇದರಿಂದಾಗಿ ಭಾರತದಲ್ಲಿ ಪ್ರಬಲವಾಗಿ ಬೆಳವಣಿಗೆ ಕಾಣುತ್ತಿರುವ ಎಫ್ಎಂಸಿಜಿ ಹಾಗೂ ಇ-ಕಾಮರ್ಸ್ ವಲಯಗಳಿಗೆ ಬ್ರ್ಯಾಂಡ್ ರಕ್ಷಣೆ ದೊರೆತಂತಾಗಿದೆ. ಆನ್ ಲೈನ್ ರೀಟೇಲ್ ಅಂತ ಬಂದರೆ ಅಲ್ಲಿ “ಲೋಗೋ”ಗಳು ಹಾಗೂ ಬ್ರ್ಯಾಂಡ್ ಹೆಸರೇ ಮೂಲಭೂತವಾಗಿ ಗ್ರಾಹಕರು ತಮಗೆ ಬೇಕಾದ ಉತ್ಪನ್ನಗಳನ್ನು ಗುರುತಿಸುವ ಸುಳುಹುಗಳಾಗಿರುತ್ತವೆ. ಇಲ್ಲದಿದ್ದರೆ ಇದರಿಂದ ಗೊಂದಲ ಆಗುವ ಸಾಧ್ಯತೆ ಬಹಳ ಹೆಚ್ಚಿರುತ್ತದೆ ಎಂದು ಹೇಳಲಾಗಿದೆ. ರಿಲಯನ್ಸ್ ಮತ್ತು ಜಿಯೋ ಟ್ರೇಡ್ ಮಾರ್ಕ್ ಗಳನ್ನು ಉಲ್ಲಂಘನೆ ಮಾಡಿರುವಂಥ ಉತ್ಪನ್ನಗಳನ್ನು ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಎಲ್ಲ ಪ್ರಮುಖ ಆನ್ ಲೈನ್ ಮಾರ್ಕೆಟ್ ಪ್ಲೇಸ್ ಗಳು “ಡೀಲಿಸ್ಟ್” ಮಾಡಬೇಕು, ಅಂದರೆ ಆ ಉತ್ಪನ್ನಗಳನ್ನು ಮಾರಾಟ ಮಾಡುವುದರಿಂದ ತೆಗೆಯಬೇಕು ಎಂದು ಆದೇಶಿಸಲಾಗಿದೆ. ನ್ಯಾಯಮೂರ್ತಿಗಳಾದ ಸೌರಭ್ ಬ್ಯಾನರ್ಜಿ ಅವರು ಈ ಸಂಬಂಧವಾಗಿ ಮಧ್ಯಂತರ ಆದೇಶವನ್ನು ಹೊರಡಿಸಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಟ್ರೇಡ್ ಮಾರ್ಕ್ಸ್ ತಪ್ಪಾಗಿ ಬಳಸಿಕೊಂಡು ಗ್ರಾಹಕ ಉತ್ಪನ್ನಗಳನ್ನು ಉತ್ಪಾದಿಸುವುದು, ಮಾರಾಟ…
ಬೆಂಗಳೂರು: ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆಯಲ್ಲಿನ ಕಠಿಣ ಷರತ್ತಗಳನ್ನು ಸರಳೀಕರಣ ಮಾಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ. ಮಾಧ್ಯಮ ಮಾನ್ಯತೆ ಪಡೆದ ಪತ್ರಕರ್ತರು ಮತ್ತು ಅವರ ಕುಟುಂಬಕ್ಕೆ ಈ ಯೋಜನೆಯನ್ನು ಸೀಮಿತ ಮಾಡಿರುವುದರಿಂದ ಬಹಳ ಜನ ಪತ್ರಕರ್ತರು ಯೋಜನೆಯಿಂದ ವಂಚಿತರಾಗುತ್ತಾರೆ. ಆದುದರಿಂದ ವಾರ್ತಾ ಇಲಾಖೆಯಲ್ಲಿ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳು ಮತ್ತು ಸುದ್ದಿಮಾಧ್ಯಮಗಳಲ್ಲಿ ಕೆಲಸ ಮಾಡುವ ಎಲ್ಲಾ ಪತ್ರಕರ್ತರಿಗೂ ಯೋಜನೆಯನ್ನು ವಿಸ್ತಾರ ಮಾಡಬೇಕು ಎಂದು ಕೆಯುಡಬ್ಲೂೃಜೆ ಆಗ್ರಹಿಸಿದೆ. ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆಯನ್ನು ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿಯೇ ಜಾರಿಗೆ ನೀಡಿರುವುದು ಸ್ವಾಗತಾರ್ಹವಾಗಿದ್ದು, ಅದಕ್ಕಾಗಿ ಅಭಿನಂದಿಸುವುದಾಗಿ ತಿಳಿಸಿರುವ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಯೋಜನೆ ಎಲ್ಲಾ ಪತ್ರಕರ್ತರಿಗೂ ಸಿಗುವಂತೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ವಿನಂತಿಸಿದ್ದಾರೆ. ತುಮಕೂರಿನಲ್ಲಿ ನಡೆದ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪತ್ರಕರ್ತರಿಗೆ ಉಚಿತ ಆರೋಗ್ಯ ಯೋಜನೆಯನ್ನು ಜಾರಿಗೆ ತರಬೇಕು ಎನ್ನುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) ಹಕ್ಕೊತ್ತಾಯಕ್ಕೆ ಸ್ಪಂಧಿಸಿದ್ದ…
ಬೆಂಗಳೂರು: ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಲ್ಲಿ ಏಕರೂಪದ ದರ ಜಾರಿಗೊಳಿಸಿ ಸರ್ಕಾರ ಆದೇಶಿಸಿದೆ. ಹೀಗಾಗಿ ರಾಜ್ಯದ ಎಲ್ಲಾ ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಗಳಲ್ಲಿ ಇನ್ಮುಂದೆ ಟಿಕೆಟ್ ದರ ಏಕರೂಪವಾಗಿ ಇರಲಿದೆ. ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಮಾಡಿದ್ದು, ರಾಜ್ಯದಲ್ಲಿರುವ ಎಲ್ಲಾ ಮಲ್ಟಿಫ್ಲೆಕ್ಸ್ ಗಳು ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೂಪದ ದರ ಜಾರಿಗೊಳಿಸಿ ಆದೇಶಿಸಿದೆ. ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೂಪದ ದರ ಜಾರಿಗೊಳಿಸಲಾಗಿದೆ. ರೂ.200 ಮೀರದಂತೆ ಆದೇಶ ಹೊರಡಿಸಿದೆ. ಎಲ್ಲಾ ಭಾಷೆಯ ಸಿನಿಮಾಗಳಿಗೂ ಏಕರೂಪದ ದರವನ್ನು ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿನ ಎಲ್ಲಾ ಭಾಷೆಯ ಸಿನಿಮಾಗಳಿಗೂ ಏಕರೂಪದ ದರವನ್ನು ಜಾರಿಗೊಳಿಸಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. https://kannadanewsnow.com/kannada/special-digi-locker-technology-for-registration-of-healthcare-providers-in-the-state-cm-siddaramaiah-inaugurates/ https://kannadanewsnow.com/kannada/dheeraj-kumar-death-news-veteran-bollywood-actor-and-filmmaker-dies-at-79-in-mumbai/
ಬೆಂಗಳೂರು: ಆಧಾರ್ ಆಧಾರಿತ ಡಿಜಿಲಾಕರ್ ಇ-ಕೆವೈಸಿ ಮೂಲಕ ನೋಂದಣಿ ಪ್ರಮಾಣಪತ್ರಗಳನ್ನು ನೀಡಲು ಅನುಕೂಲವಾಗುವ ಹೊಸ ತಂತ್ರಜ್ಞಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ದೊಡ್ಡ ವಿದ್ಯಾರ್ಥಿ ಸಮುದಾಯದ ಸಮ್ಮುಖದಲ್ಲಿ ಈ ತಂತ್ರಜ್ಞಾನವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿದರು. ಈ ತಂತ್ರಜ್ಞಾನವನ್ನು ದೇಶದಲ್ಲಿಯೇ ಮೊದಲ ಬಾರಿಗೆ ಇಲ್ಲಿ ಆರಂಭಿಸಲಾಗಿದೆ. ಈ ವ್ಯವಸ್ಥೆಯನ್ನು ಯುಐಡಿಎಐ, ಸಿ-ಇಜಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (ಆರ್ಜಿಯುಎಚ್ಎಸ್) ಮತ್ತು ಕರ್ನಾಟಕ ರಾಜ್ಯ ನರ್ಸಿಂಗ್ ಪರೀಕ್ಷಾ ಮಂಡಳಿಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈ ತಂತ್ರಜ್ಞಾನದೊಂದಿಗೆ, ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ಇ-ಕೆವೈಸಿ ಮೂಲಕ ಆಧಾರ್ ಸರ್ವರ್ನಿಂದ ದಾದಿಯರ ವೈಯಕ್ತಿಕ ಡೇಟಾ, ವಿಳಾಸ, ಫೋಟೋ ಮತ್ತು ಇತರ ವಿವರಗಳನ್ನು ನೇರವಾಗಿ ಪಡೆಯಬಹುದು. ಈ ಹಿಂದೆ ವಿವಿಧ ಜಿಲ್ಲೆಗಳ ನರ್ಸಿಂಗ್ ಅಭ್ಯರ್ಥಿಗಳು ನೋಂದಣಿಗಾಗಿ ಬೆಂಗಳೂರಿನಲ್ಲಿರುವ ಕೌನ್ಸಿಲ್ನ ಕೇಂದ್ರ ಕಚೇರಿಗೆ ಆಗಮಿಸಬೇಕಾಗಿತ್ತು. ಹೊಸ ಡಿಜಿಲಾಕರ್-ರಿಕ್ವೆಸ್ಟರ್ ತಂತ್ರಜ್ಞಾನವು ಕರ್ನಾಟಕ ನರ್ಸಿಂಗ್ ಕೌನ್ಸಿಲ್ಗೆ ಆಧಾರ್ ಕಾರ್ಡ್ಗಳು, ಎಸ್ಎಸ್ಎಲ್ಸಿ ಮತ್ತು ಪಿಯುಸಿ ಅಂಕಪಟ್ಟಿಗಳು ಮತ್ತು…














