Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಜಾತಿಗಣತಿಯ ವೇಳೆಯಲ್ಲಿ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಇಬ್ಬರು ಗಣತಿದಾರರನ್ನು ಅಮಾನತುಗೊಳಿಸಿ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ರಾಜ್ಯಾಧ್ಯಂತ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸಲಾಗುತ್ತಿದೆ. ಈ ವೇಳೆ ಕರ್ತವ್ಯಲೋಪ ಎಸಗಿದಂತ ಇಬ್ಬರು ಗಣತಿದಾರರನ್ನು ಅಮಾನತುಗೊಳಿಸಿ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಅಮೃತ್ ಭಟ್, ಉಮೇಶ್ ಎಂಬುವವರೇ ಅಮಾನತುಗೊಂಡ ಸಿಬ್ಬಂದಿಯಾಗಿದ್ದಾರೆ. ಈ ಇಬ್ಬರು ಜಾತಿಗಣತಿ ವೇಳೆಯಲ್ಲಿ ಗಣತಿಕಾರ್ಯದ ಸಂದರ್ಭದಲ್ಲಿ ಕರ್ತವ್ಯ ಲೋಪವೆಸಗಿದ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಸಸ್ಪೆಂಡ್ ಮಾಡಿ ಡಿಸಿ ಆದೇಶಿಸಿದ್ದಾರೆ. https://kannadanewsnow.com/kannada/asi-on-duty-at-minister-zameer-ahmeds-janata-darshan-dies/ https://kannadanewsnow.com/kannada/shocking-a-sinful-mother-beat-her-own-son-to-death-with-a-stick-for-asking-for-chicken/
ಬಳ್ಳಾರಿ: ಇಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಡಿಸಿ ಕಚೇರಿ ಮುಂಭಾಗದಲ್ಲಿ ನಡೆಯುತ್ತಿದ್ದಂತ ಜನತಾ ದರ್ಶನದಲ್ಲಿ ಬಂದೋಬಸ್ತ್ ನಲ್ಲಿ ಎಎಸ್ಐ ತೊಡಗಿದ್ದರು. ಇಂತಹ ಎಎಸ್ಐ ಒಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಬಳ್ಳಾರಿಯ ಹೊಸ ಡಿಸಿ ಕಚೇರಿ ಮುಂಭಾಗದಲ್ಲಿ ಸಚಿವ ಜಮೀರ್ ಅಹ್ಮದ್ ಜನತಾ ದರ್ಶನವನ್ನು ನಡೆಸುತ್ತಿದ್ದಾರೆ. ಈ ಜನತಾ ದರ್ಶನದ ಬಂದೋಬಸ್ತ್ ಕಾರ್ಯಕ್ಕೆ ಬಳ್ಳಾರಿಯ ಎಪಿಎಂಸಿ ಠಾಣೆಯ ಎಎಸ್ಐ ಶ್ರೀನಿವಾಸ ರಾವ್(54) ನಿಯೋಜಿಸಲಾಗಿತ್ತು. ಕರ್ತವ್ಯದ ವೇಳೆಯಲ್ಲಿ ಲೋ ಬಿಪಿಯಿಂದ ಎಎಸ್ಐ ಶ್ರೀನಿವಾಸ ರಾವ್ ಕುಸಿದು ಬಿದ್ದಿದ್ದರು. ಅವರನ್ನು ಕೂಡಲೇ ಬಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ಶ್ರೀನಿವಾಸ ರಾವ್ ಅವರು ಮೃತಪಟ್ಟಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. https://kannadanewsnow.com/kannada/indias-indigenous-messaging-app-arattai-reaches-no-1-spot-on-play-store/ https://kannadanewsnow.com/kannada/shocking-a-sinful-mother-beat-her-own-son-to-death-with-a-stick-for-asking-for-chicken/
ನಾಳೆ ಮಂಗಳವಾರ ಬರುವ ಶಕ್ತಿಶಾಲಿ ದುರ್ಗಾಷ್ಟಮಿ. ನಾಳೆ ನೀವು ಈ ರೀತಿ ದುರ್ಗಾ ದೇವಿಯನ್ನು ಪೂಜಿಸಿದರೆ, ಮುಂದಿನ 3 ದಿನಗಳಲ್ಲಿ ನಿಮ್ಮ ಎಲ್ಲಾ ಕಷ್ಟಗಳು ಧೂಳಿಪಟವಾಗುತ್ತವೆ. ನಾಳೆ, ಮಂಗಳವಾರ, 30-09-2025, ದುರ್ಗಾಷ್ಟಮಿ ಪೂಜೆ ಇರುತ್ತದೆ. ಜೀವನದಲ್ಲಿ ಬರುವ ಅಂತ್ಯವಿಲ್ಲದ ದುಃಖ ಮತ್ತು ಸಂಕಟಗಳಿಂದ ಮುಕ್ತಿ ಪಡೆಯಲು ನೀವು ದುರ್ಗಾ ದೇವಿಯನ್ನು ಪೂಜಿಸಬೇಕು. ಯಾವುದೇ ಸಂಭಾವ್ಯ ಹಾನಿಯನ್ನು ತೆಗೆದುಹಾಕಲು ದುರ್ಗಾ ದೇವಿಯು ಅವತರಿಸಿದಳು. ಅಷ್ಟೇ ಅಲ್ಲ, ದುರ್ಗಾ ದೇವಿಯು ವಿಜಯದ ದೇವತೆಯೂ ಆಗಿದ್ದಾಳೆ. ದುರ್ಗಾ ದೇವಿಯನ್ನು ಪೂಜಿಸುವವರು ಎಂದಿಗೂ ಸೋಲನ್ನು ಎದುರಿಸುವುದಿಲ್ಲ. ಹಿಂದೆಂದಿಗಿಂತಲೂ ಹೆಚ್ಚಾಗಿ, ಈ ವರ್ಷ ಅಷ್ಟಮಿ ತಿಥಿ ಮಂಗಳವಾರ ಬಂದಿದೆ. ಈ ದಿನವನ್ನು ದುರ್ಗಾ ಅಷ್ಟಮಿ ಎಂದು ಆಚರಿಸಲಾಗುತ್ತದೆ. ಈ ದಿನವನ್ನು ನಾವು ತಪ್ಪಿಸಿಕೊಳ್ಳಬಹುದೇ? ದುರ್ಗಾ ದೇವಿಯನ್ನು ಪೂಜಿಸಲು ಮಂಗಳವಾರಕ್ಕಿಂತ ಉತ್ತಮವಾದ ದಿನ ಇನ್ನೊಂದಿಲ್ಲ. ವಿಶೇಷವಾಗಿ ಮಂಗಳವಾರದಂದು, ರಾಹು ಕಾಲದಲ್ಲಿ ದುರ್ಗಾ ದೇವಿಯನ್ನು ಪೂಜಿಸುವವರಿಗೆ ಯಾವುದೇ ವೈಫಲ್ಯಗಳು ಎದುರಾಗುವುದಿಲ್ಲ. ಈ ಶಕ್ತಿಶಾಲಿ ದಿನದಂದು ದುರ್ಗಾ ದೇವಿಯನ್ನು ಹೇಗೆ ಪೂಜಿಸಬೇಕು. ಆಧ್ಯಾತ್ಮಿಕ ಮಾಹಿತಿಯು…
ನವದೆಹಲಿ: ಭಾರತದ ಸ್ವದೇಶಿ ಮೆಸೇಜಿಂಗ್ ಅಪ್ಲಿಕೇಶನ್ ಅರಟ್ಟೈ, ಆಪ್ ಸ್ಟೋರ್ ಶ್ರೇಯಾಂಕದಲ್ಲಿ ಪ್ರಮುಖ ಜಾಗತಿಕ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದಿದೆ. ಇದು ಅದರ ಬೆಳೆಯುತ್ತಿರುವ ಆಕರ್ಷಣೆ ಮತ್ತು ಅದರೊಂದಿಗೆ ಬರುವ ಒತ್ತಡ ಎರಡನ್ನೂ ಎತ್ತಿ ತೋರಿಸುವ ಒಂದು ಮೈಲಿಗಲ್ಲು. ಮೂಲತಃ 2021 ರಲ್ಲಿ ಜೊಹೊ ಅವರಿಂದ ಪ್ರಾರಂಭಿಸಲ್ಪಟ್ಟ ಅರಟ್ಟೈ (“ಚಾಟ್” ಅಥವಾ “ಚಿಟ್-ಚಾಟ್” ಗಾಗಿ ತಮಿಳು ಪದ) ಇತ್ತೀಚಿನವರೆಗೂ ಪ್ರಾಯೋಗಿಕ ಯೋಜನೆಯಾಗಿ ಪರಿಗಣಿಸಲ್ಪಟ್ಟಿತ್ತು. ಆದರೆ ಡೇಟಾ ಗೌಪ್ಯತೆ, ಜಾಗತಿಕ ಕಣ್ಗಾವಲು ಮತ್ತು “ತಂತ್ರಜ್ಞಾನ ಸಾರ್ವಭೌಮತ್ವ”ದ ಬಗ್ಗೆ ಹೆಚ್ಚುತ್ತಿರುವ ಕಾಳಜಿಗಳೊಂದಿಗೆ ಪ್ರಸ್ತುತ ವಾತಾವರಣದಲ್ಲಿ. “ಸ್ಪೈವೇರ್-ಮುಕ್ತ, ಭಾರತದಲ್ಲಿ ತಯಾರಿಸಿದ” ಮೆಸೆಂಜರ್ ಆಗಿ ಅರಟ್ಟೈನ ಸ್ಥಾನೀಕರಣವು ಭಾರತೀಯರಲ್ಲಿ ಪ್ರತಿಧ್ವನಿಸಿದೆ. ಭಾರತದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಶಿಫಾರಸು ಮಾಡಿದ ಅಪ್ಲಿಕೇಶನ್ಗಳಲ್ಲಿ ಅರಟ್ಟೈ ಅನ್ನು ಉಲ್ಲೇಖಿಸಿ, ಸ್ಥಳೀಯ ಡಿಜಿಟಲ್ ಪ್ಲಾಟ್ಫಾರ್ಮ್ಗಳಿಗೆ ಒಲವು ತೋರುವಂತೆ ನಾಗರಿಕರನ್ನು ಸಾರ್ವಜನಿಕವಾಗಿ ಒತ್ತಾಯಿಸಿದಾಗ ಈ ಆವೇಗವು ಹೆಚ್ಚಾಯಿತು. ಅದೇ ಸಮಯದಲ್ಲಿ, ವಿವೇಕ್ ವಾಧ್ವಾ ಅವರಂತಹ ಉನ್ನತ-ಪ್ರೊಫೈಲ್ ತಂತ್ರಜ್ಞಾನದ ಧ್ವನಿಗಳು ಇದನ್ನು ಪ್ರಯತ್ನಿಸಿದವು…
ಬೆಂಗಳೂರು: ಥಣಿಸಂದ್ರದ ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ಮಾನ್ಯತೆಯನ್ನು ಶಾಲಾ ಶಿಕ್ಷಣ ಇಲಾಖೆ ರದ್ದುಪಡಿಸಿದ್ದು, ಶಾಲೆ ನಡೆಸುತ್ತಿರುವ ಮದರಸಾಗೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ನೀಡಿರುವ ಐದು ಲಕ್ಷ ರೂಪಾಯಿ ಅನುದಾನ ವಾಪಸ್ ಪಡೆಯುವುದು ಸೇರಿದಂತೆ ಎಲ್ಲಾ ಅಂಶಗಳನ್ನು ಕಾನೂನಿನನ್ವಯ ಪರಿಶೀಲಿಸುವಂತೆ ರಾಜ್ಯ ಹೈಕೋರ್ಟ್ ಆದೇಶಿಸಿದೆ. ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ವಿಭು ಭಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ನೇತೃತ್ವದ ವಿಭಾಗೀಯಪೀಠ ಈ ಕುರಿತಾದ ಅರ್ಜಿ ವಿಚಾರಣೆ ನಡೆಸಿ ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆ ನಡೆಸುತ್ತಿರುವ ಮದರಸಾಗೆ ನೀಡಿರುವ ಹಣದ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಆದೇಶಿಸಿದೆ. ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಈ ಪ್ರಕರಣದಲ್ಲಿ ಅರ್ಜಿದಾರರ ಆರೋಪಗಳ ಸತ್ಯಾಸತ್ಯತೆ ಕುರಿತು ನ್ಯಾಯಾಲಯ ಯಾವುದೇ ಅಭಿಪ್ರಾಯ ನೀಡುವುದಿಲ್ಲ. 5 ಲಕ್ಷ ರೂ ವಾಪಸು ಪಡೆಯುವ ವಿಷಯ ಸೇರಿದಂತೆ ಎಲ್ಲಾ ಅಂಶಗಳನ್ನು ಕಾನೂನಿನ ಪ್ರಕಾರ ಪರಿಶೀಲಿಸಬೇಕು, ಅನಗತ್ಯವಾಗಿ ವಿಳಂಬವಿಲ್ಲದೆ ಕ್ರಮ ಕೈಗೊಳ್ಳಬೇಕು…
ಬೆಂಗಳೂರು: ಚಿತ್ರವೊಂದನ್ನು ಡಬ್ಬಿಂಗ್ ಮಾಡುವುದಾಗಿ ನಂಬಿಸಿದಂತ ಆನ್ ಲೈನ್ ವಂಚಕರು ಖ್ಯಾತ ಸ್ಯಾಂಡಲ್ ವುಡ್ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬುಗೆ 4.25 ಲಕ್ಷ ಪಡೆದು ವಂಚಿಸಿದ್ದಾರೆ. ಸೈಬರ್ ವಂಚಕರ ಕರಾಮತ್ತು ದಿನದಿಂದ ದಿನಕ್ಕೆ ಹೆಚ್ಚಿದೆ. ಇದೀಗ ಕನ್ನಡದ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಬಳಿಯಲ್ಲಿಯೂ ಬರೋಬ್ಬರಿ 4.25 ಲಕ್ಷವನ್ನು ಸೈಬರ್ ವಂಚಕರು ದೋಚಿದ್ದಾರೆ. ನಟ ಉಪೇಂದ್ರ, ಪತ್ನಿ ಪ್ರಿಯಾಂಕಾಗೆ ವಂಚಿಸಿದ್ದ ಬೆನ್ನಲ್ಲೇ ರಾಜೇಂದ್ರ ಸಿಂಗ್ ಬಾಬು ಅವರಿಗೆ ರಕ್ತ ಕಾಶ್ಮೀರ ಸಿನಿಮಾ ಡಬ್ಬಿಂಗ್ ನೆಪದಲ್ಲಿ ಆಧಾರ್ ಸಂಖ್ಯೆ, ಪಾನ್ ಕಾರ್ಡ್ ದಾಖಲೆ ಪಡೆದು ಸೈಬರ್ ವಂಚಕರು 4.25 ಲಕ್ಷ ರೂಪಾಯಿಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರಿಗೆ ರಕ್ತ ಕಾಶ್ಮೀರ ಸಿನಿಮಾವನ್ನು ತೆಲುಗು ಭಾಷೆಗೆ ಡಬ್ಬಿಂಗ್ ಮಾಡುವಂತ ಆಮಿಷವೊಡ್ಡಿ ಸೈಬರ್ ವಂಚಕರು ವಂಚಿಸಿದ್ದಾರೆ. ಈ ಸಂಬಂಧ ಸೈಬರ್ ಕ್ರೈ ಪೊಲೀಸರಿಗೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ದೂರು ನೀಡಿದ್ದಾರೆ.
ಚಿತ್ರದುರ್ಗ : ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಸೆ. 22 ರಿಂದ ಪ್ರಾರಂಭಿಸಿದ್ದು, ಗಣತಿ ಕಾರ್ಯಕ್ಕೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಆದರೆ ಚಿತ್ರದುರ್ಗ ತಾಲ್ಲೂಕಿನಲ್ಲಿ ಇದುವರೆಗೂ ಗಣತಿ ಕಾರ್ಯಕ್ಕೆ ವರದಿ ಮಾಡಿಕೊಳ್ಳದಿರುವ 68 ಗಣತಿದಾರರಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ಶಿಸ್ತು ಕ್ರಮಕ್ಕೂ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ಕೂಡ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು, ಗೈರು ಮತ್ತು ನಿರ್ಲಕ್ಷö್ಯ ತೋರುವ ಸಿಬ್ಬಂದಿಗಳ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಕುರಿತಂತೆ ಸಮೀಕ್ಷಾ ಕರ್ತವ್ಯಕ್ಕೆ ಗೈರಾದ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದಾಗ್ಯೂ ಚಿತ್ರದುರ್ಗ ತಾಲ್ಲೂಕಿನಲ್ಲಿಯೇ ಸುಮಾರು 68 ಗಣತಿದಾರರು, ಸಮೀಕ್ಷಾ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹೀಗಾಗಿ ಈ ಎಲ್ಲ 68 ಗಣತಿದಾರರಿಗೂ ನೋಟಿಸ್ ಜಾರಿಗೊಳಿಸಲಾಗಿದ್ದು, ಶಿಸ್ತು ಕ್ರಮಕ್ಕೂ ಪ್ರಕ್ರಿಯೆ ಆರಂಭಿಸಲಾಗಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ಇಲ್ಲಸಲ್ಲದ ನೆಪವೊಡ್ಡಿ,…
ಬೆಂಗಳೂರು: ರಾಜ್ಯ ಬಿಜೆಪಿಯ ನಾಯಕರು ಒಬ್ಬೊಬ್ಬರಾಗಿ ಹೊರಗೆ ಬಂದು ನಮ್ಮ ಸಮೀಕ್ಷೆಯನ್ನು ಬಹಿಷ್ಕರಿಸುವಂತೆ ಕರೆನೀಡುವ ಮೂಲಕ ಸಾರ್ವಜನಿಕರ ಎದುರು ಬೆತ್ತಲಾಗುತ್ತಿದ್ದಾರೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ. ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ನಮ್ಮ ಸರ್ಕಾರ ಸಾಮಾಜಿಕ,ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪ್ರಾರಂಭಿಸುತ್ತಿದ್ದಂತೆಯೇ ‘’ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಕೂಗು ಹಾಕುತ್ತಿರುವವರ ಆಂತರ್ಯದಲ್ಲಿರುವ ನಿಜ ಬಣ್ಣ ಬಯಲಾಗುತ್ತಿದೆ. ರಾಜ್ಯ ಬಿಜೆಪಿಯ ನಾಯಕರು ಒಬ್ಬೊಬ್ಬರಾಗಿ ಹೊರಗೆ ಬಂದು ನಮ್ಮ ಸಮೀಕ್ಷೆಯನ್ನು ಬಹಿಷ್ಕರಿಸುವಂತೆ ಕರೆನೀಡುವ ಮೂಲಕ ಸಾರ್ವಜನಿಕರ ಎದುರು ಬೆತ್ತಲಾಗುತ್ತಿದ್ದಾರೆ ಎಂದು ಗುಡುಗಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸುತ್ತಿರುವ ಸಮೀಕ್ಷೆ ಯಾವುದೇ ಒಂದು ಜಾತಿ-ಧರ್ಮಗಳಿಗೆ ಸೀಮಿತವಾದುದಲ್ಲ. ಇದು ರಾಜ್ಯದ ಏಳು ಕೋಟಿ ಜನರ ಸಾಮಾಜಿಕ”,ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ. ಇದು ಯಾರ ವಿರುದ್ದವೂ ಅಲ್ಲ, ಇದು ಎಲ್ಲರ ಪರವಾಗಿರುವ ಸಮೀಕ್ಷೆ. ಇದರ ಮುಖ್ಯ ಉದ್ದೇಶ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮಾನತೆಯನ್ನು ಸಾಧಿಸಿ ಸರ್ವರಿಗೂ ಸಮಪಾಲು, ಸಮಬಾಳು…
ನವದೆಹಲಿ: ಏಷ್ಯಾ ಕಪ್ ಟೂರ್ನಿಯ ಎಲ್ಲಾ ಪಂದ್ಯಗಳ ಸಂಭಾವನೆಯನ್ನು ಭಾರತೀಯ ಸೇನೆಗೆ ನೀಡುವುದಾಗಿ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಘೋಷಣೆ ಮಾಡಿದ್ದಾರೆ. ಇಂದು ಮಾಹಿತಿ ಹಂಚಿಕೊಂಡಿರುವಂತ ಅವರು, ಏಷ್ಯಾ ಕಪ್ ಟೂರ್ನಿಯ ಎಲ್ಲಾ ಪಂದ್ಯಗಳ ಸಂಭಾವನೆಯನ್ನು ಪಹಲ್ಗಾಮ್ ದಾಳಿಯ ಸಂತ್ರಸ್ತರು, ಭಾರತೀಯ ಸೇನೆಗೆ ನೀಡುವುದಾಗಿ ಘೋಷಿಸಿದರು. ನಾನು ಆಡಿರುವ ಎಲ್ಲಾ ಪಂದ್ಯಗಳ ಸಂಭಾವನೆಯನ್ನು ಮೀಸಲಿಡುತ್ತೇನೆ. ಪಹಲ್ಗಾಮ್ ದಾಳಿಯ ಸಂತ್ರಸ್ತರು, ಭಾರತೀಯ ಸೇನೆಗೆ ಹಣ ಮೀಸಲಿಡುತ್ತೇನೆ ಎಂಬುದಾಗಿ ಏಷ್ಯಾ ಕಪ್ ಗೆಲುವಿನ ಬಳಿಕ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಘೋಷಿಸಿದ್ದಾರೆ. https://kannadanewsnow.com/kannada/another-good-news-for-householders-from-the-state-government-cooperative-society-to-be-established-soon/ https://kannadanewsnow.com/kannada/a-shameful-incident-has-come-to-light-in-the-state-rs-20-lakh-demanded-for-sexual-intercourse-with-a-minor/
ಶಿವಮೊಗ್ಗ: ರಾಜ್ಯದಲ್ಲಿ ಹಿಂದಿ ಹೇರಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದಂತ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವಂತೆ ಸರ್ಕಾರವನ್ನು ಆಗ್ರಹಿಸಿ ಶಿವಮೊಗ್ಗದ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ ಶಿವಮೊಗ್ಗ ಜಿಲ್ಲಾಧ್ಯಕ್ಷ ಕೇಬಲ್ ಮಂಜು.ಆರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರವನ್ನು ಆಗ್ರಹಿಸಲಾಯಿತು. ಈ ವೇಳೆ ಮಾತನಾಡಿದಂತ ಶಿವಮೊಗ್ಗ ಕರವೇ ಜಿಲ್ಲಾಧ್ಯಕ್ಷ ಕೇಬಲ್ ಮಂಜು.ಆರ್ ಅವರು ನಿನ್ನೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಪಂಚತಾರಾ ಹೋಟೇಲ್ ನಲ್ಲಿ ಸಂಸದೀಯ ರಾಜಭಾಷಾ ಸಮಿತಿ ನಡೆಸುತ್ತಿದ್ದ ಹಿಂದಿ ಹೇರಿಕೆ ಕುತಂತ್ರಗಳ ಸಮಾಲೋಚನಾ ಕಾರ್ಯಗಾರಕ್ಕೆ ಕರವೇ ಮುಖಂಡರು, ಕಾರ್ಯಕರ್ತರು ತೆರಳಿ ಪ್ರತಿಭಟನೆ ನಡೆಸಿದ್ದಾರೆ. ಆ ಮೂಲಕ ಹಿಂದಿ ಸಾಮ್ರಾಜ್ಯ ಶಾಹಿಗಳಿಗೆ ಬಹುದೊಡ್ಡ ಎಚ್ಚರಿಕೆ ನೀಡಲಾಗಿದೆ ಎಂದರು. ಸ್ವಾತಂತ್ರ್ಯ ನಂತ್ರ ಇದೇ ರಾಜ ಭಾಷಾ ಆಯೋಗ, ಸಮಿತಿ ಹಿಂದಿಯೇತರ ರಾಜ್ಯಗಳ ಮೇಲೆ ಬಲವಂತವಾಗಿ ಹೇರುವ ವ್ಯವಸ್ಥಿತ ಕುತಂತ್ರವನ್ನು ನಡೆಸುತ್ತಾ ಬಂದಿದೆ. ಮೊಟ್ಟ ಮೊದಲ ಬಾರಿಗೆ ಈ ರಾಜ…